Discover millions of ebooks, audiobooks, and so much more with a free trial

Only $11.99/month after trial. Cancel anytime.

Kengulabi
Kengulabi
Kengulabi
Ebook306 pages1 hour

Kengulabi

Rating: 0 out of 5 stars

()

Read preview

About this ebook

Born in Tulasigeri village of Bagalkot District in the year 1980, Hanamantha Haligeri has grown up amid unbearable poverty and casteism. He feels proud being educated himself despite several odds by sacrificing childhood pleasures.

Published 4 books till date including a novel "Kengulabi", a play "Ooru Suttaru Hanamappa Horaga" and two short story collections "Kattalagarbhada Minchu" and "Mathada Hori". He has been conferred with many awards including Kuvempu Award by Karnataka Sangha, Shimoga, Bendre Book Award from Rashtriya Bendre Pratisthana, Dharwad.

His stories have won altogether 18 prizes including First prize in Sinchana International Competition, Singapore, Third prize in International short story competition by Akka Sammelana, USA and First prize in National Story competition organised by Vidyadhara Kannada Sangha, Mumbai.

Presently, he is working as District Reporter for Vijaya Karnataka Daily for Uttara Kannada District.
LanguageKannada
Release dateAug 12, 2019
ISBN6580201300184
Kengulabi

Read more from Hanumantha Haligeri

Related to Kengulabi

Related ebooks

Reviews for Kengulabi

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Kengulabi - Hanumantha Haligeri

    http://www.pustaka.co.in

    ಕೆಂಗುಲಾಬಿ

    Kengulabi

    Author :

    ಹನುಮಂತ ಹಾಲಿಗೇರಿ

    Hanumantha Haligeri

    For more books :

    http://www.pustaka.co.in/home/author/hanumantha-haligeri

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಕೆಂಗುಲಾಬಿ

    ವೇಶ್ಯಾ ಜಗತ್ತಿನ ಅನಾವರಣ

    ಹನುಮಂತ ಹಾಲಿಗೇರಿ

    ನುಮಂತ ಹಾಲಿಗೇರಿ

    1980ರಲ್ಲಿ ಬಾಗಲಕೋಟೆ ಸಮೀಪದ ತುಳಸಿಗೇರಿಯಲ್ಲಿ ಹುಟ್ಟಿದ್ದು. ಬಾಗಲಕೋಟೆಯ ಬಸವೇಶ್ವರ ಕಾಲೇಜಿನ ಕಲಿಯುತ್ತಿದ್ದ ಬಿ.ಎ.ಅರ್ಧಕ್ಕೆ ಬಿಟ್ಟು, ಆಧ್ಯಾತ್ಮದ ಹುಚ್ಚು ಮತ್ತು ಗ್ರಾಮೀಣ ಅಭಿವೃದ್ಧಿ ಕನಸು ನೆತ್ತಿಗೇರಿಸಿಕೊಂಡು ಧಾರವಾಡ ಕರ್ನಾಟಕ ವಿ.ವಿ.ಯ ಗ್ರಾಮೀಣ ಅಭಿವೃದ್ಧಿ ಪದವಿ ಪೂರ್ಣ. ಅದೆ ಅವಧಿಯಲ್ಲಿ ಎಸ್‍ಎಸ್‍ವಾಯ್ ಟೀಚರ್ ಆಗಿ ಮೂರು ವರ್ಷಗಳವರೆಗೆ ಗ್ರಾಮೀಣ ಗುರುಕುಲಗಳನ್ನು ನಡೆಸುತ್ತ ಹಲವಾರು ಗ್ರಾಮೀಣ ಅಭಿವೃದ್ಧಿಯ ಪ್ರಯೋಗಗಳನ್ನು ನಡೆಸಿ ಕೆಲವೊಮ್ಮೆ ವೈಫಲ್ಯ, ಹಲವೊಮ್ಮೆ ಸಾಫಲ್ಯ ಕಂಡದ್ದು ದೊಡ್ಡ ಪಾಠ ಕಲಿಸಿಕೊಟ್ಟಿತು. ಅಲ್ಲಿಂದ ಬಿಟ್ಟೆದ್ದು, `ಭೈಪ್' ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸೇರಿ ಸತತ ಮೂರು ವರ್ಷಗಳ ಹಲವಾರು ಹಳ್ಳಿಗಳ ಅಲೆದಾಟ. ಗ್ರಾಮೀಣ ಅಭಿವೃದ್ಧಿಯಲ್ಲಿ ಏನಾದರೂ ಸಾಧಿಸಬೇಕೆಂಬ ಹುಚ್ಚಿನಲ್ಲಿ ಸ್ವಂತದ್ದಾದ ನಿಸರ್ಗ ಮಿಲ್ಕ್ ಡೈರಿ ಸಂಸ್ಥೆ ಕಟ್ಟಿ ಕೊರಳಿಗೆ ಕುತ್ತಾಗುವಷ್ಟರಮಟ್ಟಿಗೆ ಕೈ ಸುಟ್ಟಿಕೊಂಡ ಅನುಭವ.

    2010ರಲ್ಲಿ ಪ್ರಕಟವಾದ ಮೊದಲ ಕಥಾ ಸಂಕಲನ ‘ಕತ್ತಲಗರ್ಭದ ಮಿಂಚು’ ಕೃತಿಗೆ ಕಸಾಪದ ಬಿಎಂಟಿಸಿ ಅರಳು ಪ್ರಶಸ್ತಿ, ಕಸಾಪ ಬಿಳಗಿ ದತ್ತಿ ಮತ್ತು ಅತ್ತಿಮಬ್ಬೆ ಪ್ರಶಸ್ತಿ ದಕ್ಕಿವೆ. ಇದಕ್ಕೂ ಮುನ್ನ ಎಂಟನೆ ತರಗತಿಯಲ್ಲಿ `ರೊಚ್ಚಿಗೆದ್ದ ನಾರಿ' ಎಂಬ ನಾಟಕ ಬರೆದದ್ದು, ಅದು ಊರೆಲ್ಲ ಸುದ್ದಿಯಾಗಿ ನಮ್ಮ ಶಾಲೆಯಲ್ಲಿ ಪ್ರದರ್ಶನ ಕಂಡದ್ದು ಮರೆಯದ ಅನುಭವ. `ದೇವರ ಹೆಸರಲ್ಲಿ' ಎಂಬ ಇನ್ನೊಂದು ನಾಟಕ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಪೆÇ್ರೀತ್ಸಾಹ ಧನ ಪಡೆದುಕೊಂಡು ರವೀಂದ್ರ ಕಲಾ ಕ್ಷೇತ್ರದಲ್ಲಿ 2008ರಲ್ಲಿ ಪ್ರದರ್ಶನ ಗೊಂಡಿದೆ. ಅದೆ ವರ್ಷ ಬಿಜಾಪುರದ ಎ.ಎಸ್.ಹಿಪ್ಪರಗಿ ಪ್ರತಿಷ್ಠಾನದ ನಾಟಕ ರಚನಾ ಸ್ಪರ್ಧೆಯಲ್ಲಿ ದ್ವೀತಿಯ ಬಹುಮಾನ ಪಡೆದುಕೊಂಡಿದೆ.

    ಇದಲ್ಲದೆ ಹಲವಾರು ಈವರೆಗಿನ 14 ಕಥಾಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದುಕೊಂಡಿವೆ.

    2011ರಲ್ಲಿ ಹೊರಬಂದ ಮೊದಲ ಕಾದಂಬರಿ ‘ಕೆಂಗುಲಾಬಿ’ಒಂದೆ ವರ್ಷದಲ್ಲಿ ಮರುಮುದ್ರಣ ಕಂಡಿದೆ. ಇದಕ್ಕೆ ಶಿವಮೊಗ್ಗ ಕರ್ನಾಟಕ ಸಂಘದಿಂದ ನೀಡಲಾಗುವ ಕುವೆಂಪು ಕಾದಂಬರಿ ಪುರಸ್ಕಾರ ಮತ್ತು ಕಸಾಪದ ಸಮೀರವಾಡಿ ದತ್ತಿ ಪ್ರಶಸ್ತಿಗಳು ದಕ್ಕಿವೆ. ಇದರ ಬಗ್ಗೆ ನಾಡಿನ 6 ಕಡೆ ಕಡೆ ಸಂವಾದಗಳು ನಡೆದಿವೆ.

    2013ರಲ್ಲಿ 2ನೆ ಕಥಾ ಸಂಕಲನ "ಮಠದ ಹೋರಿ’ ಪ್ರಕಟಗೊಂಡಿದೆ. ಸಧ್ಯ ಕಾರವಾರದಲ್ಲಿ ವಿಜಯ ಕರ್ನಾಟಕದಲ್ಲಿ ವರದಿಗಾರನಾಗಿ ಕಾರ್ಯನಿರ್ವಹಣೆ.

    ನನ್ನ ಮಾತು- ಮೊಳಕೆ ಹಣ್ಣಾದುದು...

    ಈ ಕೃತಿಯ ರಚನೆ ಬಗ್ಗೆ ತಿಳಿದುಕೊಂಡ ನನ್ನ ಕೆಲ ಮಿತ್ರರು 'ವೇಶ್ಯೆಯರ ಬದುಕಿನ ಬಗ್ಗೆ ಬರೆಯುವಷ್ಟು ಅನುಭವಗಳನ್ನು ಈ ವಯಸ್ಸಿನಲ್ಲಿಯೇ ದಕ್ಕಿಸಿಕೊಂಡಿದ್ದಿಯಾ' ಎಂದು ಹುಬ್ಬುಹಾರಿಸಿದರು. ಮಡಿವಂತಿಕೆಯಿಂದ ಮೂಗು ಮುರಿದವರು ಹಲವು ಜನ. ಅವರಿಗುತ್ತರವಾಗಿ ಈ ಬರಹ.

    ಅತ್ಯಂತ ಹೆಚ್ಚು ಲೈಂಗಿಕ ಕಾರ್ಯಕರ್ತರು, ದೇವದಾಸಿಯರನ್ನು ತನ್ನೆದೆಯ ಹುಣ್ಣಿನಲ್ಲಿ ತುಂಬಿಕೊಂಡಿರುವ ಬಾಗಲಕೋಟೆ ನನ್ನ ಜಿಲ್ಲೆ. ರಾಜ್ಯ ಮಹಿಳಾ ಆಯೋಗದ ಸಮೀಕ್ಷೆಯ ಪ್ರಕಾರ ನನ್ನ ಜಿಲ್ಲೆಯಲ್ಲಿ 17 ಸಾವಿರ ಎಚ್‍ಐವಿ ಮತ್ತು ಏಡ್ಸ್ ಪೀಡಿತರಿದ್ದಾರೆ. ತಮ್ಮ ಹರೆಯದ ಕಾಲದಲ್ಲಿ ತಮ್ಮ ಮನೆಯನ್ನು ಬಿಟ್ಟು ಮಾಯವಾಗುತ್ತಿದ್ದ ನನ್ನೂರು ಮತ್ತು ನೆರೆಯ ಹಳ್ಳಿಗಳ ದೇವದಾಸಿಯರು ಎಲ್ಲಿ ಹೋಗಿ ಕೊನೆಗೊಳ್ಳುತ್ತಿದ್ದರು ಎಂಬುದು ನನ್ನ ಬಾಲ್ಯದಲ್ಲಿ ಕಾಡಿಸುತ್ತಿದ್ದ ಬಹುಮುಖ್ಯ ಪ್ರಶ್ನೆಯಾಗಿತ್ತು.

    ಮುಂದೆ ಹೊಟ್ಟೆ ಹೊರೆಯಲು ಗ್ರಾಮೀಣ ಅಭಿವೃದ್ಧಿಗೆ ಸಂಬಂಧಪಟ್ಟ ಎನ್‍ಜಿಓ ಒಂದರಲ್ಲಿ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಗದಗ, ಕೊಪ್ಪಳ, ಧಾರವಾಡ ಮುಂತಾದ ಜಿಲ್ಲೆಗಳಲ್ಲಿ ಎಚ್‍ಐವಿ, ಏಡ್ಸ್ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಕ್ರಿಯಾಶೀಲವಾಗಿರುವ ಎನ್‍ಜಿಓಗಳ ಸಂಪರ್ಕದಿಂದಾಗಿ ಈ ಪ್ರಶ್ನೆಗೆ ಅಸ್ಪಷ್ಟವಾದ ಉತ್ತರ ಸಿಗುತ್ತಾ ಹೋಯಿತು. ಈ ಪ್ರಶ್ನೆಯ ಚುಂಗನ್ನು ಹಿಡಿದು ಎನ್‍ಜಿಓ ಸಹದ್ಯೋಗಿಗಳಿಗೆ ಅಂಗಲಾಚಿ, ಹುಬ್ಬಳ್ಳಿಯ ದಂಧೆ ಮನೆಗಳಿಗೆ, ಲೈಂಗಿಕ ಕಾರ್ಯಕರ್ತರ ಪ್ರತಿಭಟನಾ ಸ್ಥಳಗಳಿಗೆ ಅಲೆದಾಡಿದ್ದೂ ಇದೆ.

    ಬೆಂಗಳೂರಿನ ಸಂಗಮ ಕಚೇರಿಗೆ ಹೋಗಿ ಲೈಂಗಿಕ ಕಾರ್ಯಕರ್ತರೊಂದಿಗೆ ಸಂದರ್ಶನ ನಡಿಸಿದ್ದಿದೆ. ಹುಬ್ಬಳ್ಳಿಯ ಹಳೆ ಬಸ್ ನಿಲ್ದಾಣ ಮುಂಭಾಗದ ರಸ್ತೆ, ಬೆಂಗಳೂರಿನ ಮೆಜೆಸ್ಟಿಕ್, ಕೆ.ಆರ್.ಮಾರ್ಕೆಟ್ಗಳ ರಸ್ತೆಗಳಲ್ಲಿ ಸಂಕೋಚ ತೊರೆದು ಅಡ್ಡಾಡಿದ್ದೂ ಇದೆ.

    ಇಲ್ಲಿ ನಾನು ಲೈಂಗಿಕವೃತ್ತಿ ಸರಿ ಅಥವಾ ತಪ್ಪು ಎಂದು ವಾದಿಸಲು ಹೋಗಿಲ್ಲ. ಈ ಕೃತಿ ಓದಿದ ನಂತರ ನಿಮ್ಮೊಳಗಡೆ ಮೂರ್ತಗೊಳ್ಳುವ ತೀರ್ಮಾನಕ್ಕೆ ನೀವೇ ಜವಾಬ್ದಾರರು! ಲೈಂಗಿಕ ವೃತ್ತಿಯ ಜಗತ್ತಿನಲ್ಲಿ ತುತ್ತು ಅನ್ನಕ್ಕಾಗಿ ಕಾರ್ಯಕರ್ತೆಯರು ನಡೆಸುವ ನಿರಂತರ ಹೋರಾಟದ ಬದುಕನ್ನು ವಿವರಿಸುವ ಕೆಲಸವನ್ನಷ್ಟೆ ಮಾಡಿದ್ದೇನೆ. ಇದು ಗರ್ಭಗಟ್ಟುವ ಸಮಯದಲ್ಲಿ ನನಗನ್ನಿಸಿದ್ದೆಂದರೆ; ಪ್ರಕೃತಿಯ ಎಲ್ಲ ಜೀವಿಗಳಿಗೆ ಊಟ-ನೀರಡಿಕೆಯಷ್ಟೇ ಮೈಥುನವು ಪ್ರಾಥಮಿಕ ಅಗತ್ಯ ಮತ್ತು ನಿಸರ್ಗ ನಿಯಮ. ಅದನ್ನು ಬಂಧಿಸಲು ಹೋದಷ್ಟು ಅಪಾಯ ಹೆಚ್ಚು. ಬಂಧಿಸಿದ್ದರ ಪ್ರತಿರೋಧವಾಗಿ, ಈ ಅಮಾಯಕ ಹುಡುಗಿಯರು ಈ ವಿಷವರ್ತುಲದಲ್ಲಿ ಸಿಲುಕುತ್ತಿದ್ದಾರೆ. ಅವರು ನಮ್ಮಂಥವರ ತಾಯಿ, ಮಗಳು, ಹೆಂಡತಿ, ಅಕ್ಕ-ತಂಗಿಯರಾಗಬಹುದಿತ್ತು. ಇದೆಲ್ಲದಕ್ಕೂ ಅವಕಾಶವಾಗದೆ ಅವರು ಬೀದಿಗಿಳಿಯಬೇಕಾಗಿ ಬಂದದ್ದು ದುರಂತ ಸತ್ಯ.

    ಈ ವೃತ್ತಿಯ ಬಗ್ಗೆ ನನ್ನೊಳಗಿದ್ದ ತಹತಹಿಕೆಯನ್ನು 'ಕತ್ತಲಗರ್ಭದ ಮಿಂಚು' ಕಥೆಯಲ್ಲಿ ಹಿಡಿದಿಡುವ ಪ್ರಯತ್ನ ಮಾಡಿ ಆ ಕಥೆಯನ್ನು ಕರವೇ ನಲ್ನುಡಿ ಪತ್ರಿಕೆಯ ಕಥಾ ಸ್ಪರ್ಧೆಗೆ ಕಳುಹಿಸಿಕೊಟ್ಟಿದ್ದೆ. ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿ ಆ ಕಥೆ ಪ್ರಕಟವೂ ಆಯಿತು. ಆಗ ರಾಜ್ಯಾದ್ಯಂತ ಈ ಕಥೆಯ ಬಗ್ಗೆ ಬಂದ ಪ್ರತಿಕ್ರಿಯೆಗಳು ನನ್ನನ್ನು ದಿಗ್ಮೂಡಗೊಳಿಸಿದವು. ಲೈಂಗಿಕ ವೃತ್ತಿಯಲ್ಲಿರುವ ನಾಲ್ಕಾರು ಮಹಿಳೆಯರೇ ನನ್ನೊಂದಿಗೆ ಮಾತನಾಡಿ 'ಸತ್ಯ ಬರೆದಿದ್ದೀರಿ' ಎಂದು ಅತ್ತು ಕರೆದು ಮಾಡಿದರು.

    ಇದನ್ನು ವಿಸ್ತರಿಸಿ ಕಾದಂಬರಿಯ ಚೌಕಟ್ಟನ್ನು ತೊಡಿಸಬೇಕೆನಿಸಿತು. ಬರೆದು ಐದಾರು ತಿಂಗಳು ಗತಿಸಿದ್ದರೂ ಪ್ರಕಟಿಸಬೇಕೋ, ಬೇಡವೋ ಎಂಬ ಒಂದು ಬಗೆಯ ಕೀಳರಿಮೆಯ ಸಂಕೋಚದಲ್ಲಿ ಇದ್ದೆ. ಇದನ್ನು ಓದಿದ ಮಿತ್ರರು ಧೈರ್ಯ ತುಂಬಿದ್ದರಿಂದ ಈ ಕೃತಿ ಹೊರ ಬರುತ್ತಿದೆ.

    ವೇಶ್ಯಾವೃತ್ತಿಯ ಬಗ್ಗೆ ಕನ್ನಡದಲ್ಲಿ ಇದೇ ಮೊದಲ ಕೃತಿಯೇನಲ್ಲ. ಈ ಮೊದಲು ಬಸವರಾಜ ಕಟ್ಟಿಮನಿಯವರ 'ಬೀದಿಗೆ ಬಿದ್ದವಳು', ಎಂ.ಕೆ.ಇಂದಿರಾ ಅವರ 'ಗೆಜ್ಜೆಪೂಜೆ', ತರಾಸು ಅವರ 'ಮಸಣದ ಹೂವು' ಸೇರಿದಂತೆ ಇನ್ನೂ ಹಲವಾರು ಕೃತಿಗಳು ಬಂದಿವೆ. ತನ್ನೊಳಗೆ ಸಾವಿರಾರು ಕಥಾ ವಸ್ತುಗಳನ್ನು ಸದಾ ಹುಟ್ಟಿಸುವ ಫಲವಂತಿಕೆಯ ಭೂಮಿ ಈ ವೇಶ್ಯಾ ಜಗತ್ತು. ಈ ಜಗತ್ತಿನ ವರ್ತಮಾನದ ತಲ್ಲಣಗಳಿಗೆ ಇಲ್ಲಿ ಕನ್ನಡಿ ಹಿಡಿಯಲಾಗಿದೆ ಅಷ್ಟೇ.

    `ಕೆಂಗುಲಾಬಿ' ಪರಿಮಳ ಪಸರಿಸಿದವರ ನೆನಸ್ಕೊಂಡು

    ಕೆಂಗುಲಾಬಿ ಕಾದಂಬರಿ ಬಿಡುಗಡೆಯಾಗಿ ಇಷ್ಟು ಬೇಗ ಸಾವಿರಾರು ಓದುಗರನ್ನು ಮುಟ್ಟುತ್ತದೆ ಎಂದು ನನಗೆ ನಿರೀಕ್ಷೆ ಇರಲಿಲ್ಲ. ಜಾತಿಯತೆ ಮತ್ತು ಹಣದ ವಿಜೃಂಭನೆಯ ಈ ದಿನಗಳಲ್ಲಿ ಇವ್ಯಾವ ಪ್ರಭಾವಳಿಗಳಿಲ್ಲದ ದೂರದ ಬಾಗಲಕೋಟೆಯ, ಪರಿಚಯವೇ ಇಲ್ಲದ ಒಬ್ಬ ಹುಡುಗ ಬರೆದ ಕಾದಂಬರಿಯನ್ನು ಇಷ್ಟು ಬೇಗ ಸ್ವೀಕರಿಸಿದ್ದಾರೆ ಎಂದರೆ, ಅದು ಕನ್ನಡದ ಶುದ್ಧ ಓದುಗರ ಪ್ರೀತಿಯನ್ನು ಸೂಚಿಸುತ್ತದೆ.

    `ಕೆಂಗುಲಾಬಿ' ಕುರಿತು ಮೊದಲ ಮುದ್ರಣದಲ್ಲಿಯೇ ಹೇಳ ಬೇಕಾದುದನ್ನೆಲ್ಲ ಹೇಳಿz್ದÉೀನೆ. ಈಗ ಇದರ ಪರಿಮಳ ಹೊತ್ತೊಯ್ದು ಹರಡಿದ ಗೆಳೆಯರನ್ನು ಮನದುಂಬಿ ಸ್ಮರಿಸಿಕೊಳ್ಳದಿದ್ದರೆ ತಪ್ಪಾದೀತು. ಬಿಡುಗಡೆಯಾದ ಮೂರ್ನಾಲ್ಕು ತಿಂಗಳುಗಳಲ್ಲಿಯೇ ಮೊದಲ ಮುದ್ರಣದ ಪ್ರತಿಗಳು ಖರ್ಚಾದುದರಿಂದ ಆಗಲೇ ಎರಡನೆ ಮುದ್ರಣವನ್ನು ತರಬೇಕಿತ್ತು. ಆದರೆ, ಮೊದಲ ಮುದ್ರಣದ `ಕೆಂಗುಲಾಬಿ' ಹಲವೆಡೆ ಇನ್ನಿಲ್ಲದ ಚಲುವಿನಿಂದ, ಮತ್ತೇರಿದ ರಕ್ತಗೆಂಪಿನಿಂದ ಕಂಗೊಳಿಸಿದರೆ, ಕೆಲವೆಡೆ ಪತ್ರಿಕಾ ವರದಿಯಂತೆ ಸೊರಗಿ ಕಳೆಗೆಟ್ಟಿತ್ತು. ಪತ್ರಕರ್ತನಾಗಿ ದಿನದ ಒತ್ತಡದಲ್ಲಿ ಪ್ರತಿದಿನ ಸಿಗುವ ಒಂದೆರಡು ಗಂಟೆಯಲ್ಲಿ `ಕೆಂಗುಲಾಬಿ' ರಚಿಸಿದ್ದರಿಂದ ಅದರ ಇತಿಮಿತಿಗಳು ನನಗೆ ಮೊದಲೇ ಮನವರಿಕೆಯಾಗಿದ್ದವು. ಆ ಇತಿಮಿತಿಗಳ ಮಧ್ಯೆಯೂ ನಾಡಿನಾಧ್ಯಂತ ಕನ್ನಡದ ಓದುಗರು ಕೆಂಗುಲಾಬಿಯ ಪರಿಮಳವನ್ನು ಇಷ್ಟಪಟ್ಟಿದ್ದು ದೊಡ್ಡ ಸಂಭ್ರಮ.

    ಶಿವಮೊಗ್ಗದ ಕರ್ನಾಟಕ ಸಂಘವು ಈ ಕೃತಿಗೆ ನನ್ನ ನೆಚ್ಚಿನ ಸಾಹಿತ್ಯ ಕುವೆಂಪು ಹೆಸರಿನಲ್ಲಿ ಕಾದಂಬರಿ ಪ್ರಶಸ್ತಿ ಮತ್ತು ಬಾಗಲಕೋಟೆಯ ಜಿಲ್ಲಾ ಕಸಾಪ ‘ಸಮೀರವಾಡಿ ದತ್ತಿ ಪ್ರಶಸ್ತಿ’ ನೀಡಿ ಈ ಗುಲಾಬಿ ಪರಿಮಳದ ಕಂಪನ್ನು ಮತ್ತಷ್ಟು ಹೆಚ್ಚುವಂತೆ ಮಾಡಿವೆ. ಕನ್ನಡದ ಹಿರಿಯ ಅನುವಾದಕರಾದ ಡಾ.ಪ್ರಭಾಕರ್ ನಿಂಬರಗಿಯವರು ಇದನ್ನು ಆಂಗ್ಲಭಾಷೆಗೆ ಅನುವಾದ ಮಾಡುವ ಜವಾಬ್ದಾರಿ ಹೊತ್ತಿದ್ದು, ಇದರ ಕಂಪು ನಾಡಿನಾಚೆಗೂ ಪಸರಿಸುವ ನಿರೀಕ್ಷೆ ಬಿತ್ತಿದ್ದಾರೆ.

    ಬೆಂಗಳೂರಿನಲ್ಲಿ ಬಿಡುಗಡೆಯ ದಿನವೇ ಇನ್ನೂರಕ್ಕೂ ಹೆಚ್ಚು ಪ್ರತಿಗಳು ಮಾರಾಟವಾದವು. ನಮ್ಮ ಹಿರಿಯ ಮಿತ್ರ ಲಕ್ಷ್ಮಿ ನಾರಾಯಣ ನಾಗವಾರ್ ಅವರು ನನ್ನ ತವರು ಜಿಲ್ಲೆ ಬಗಾಲಕೋಟೆಯ ಬೀಳಗಿಯಲ್ಲಿ ಡಿಎಸ್‍ಎಸ್ನ ಕಾರ್ಯಾಗಾರದಲ್ಲಿ ಗದುಗಿನ ತೋಂಟದ ಶ್ರೀಗಳಿಂದ ಬಿಡುಗಡೆ ಮಾಡಿಸಿ ನೂರಕ್ಕೂ ಹೆಚ್ಚು ಪ್ರತಿಗಳು ಖರ್ಚು ಮಾಡಿಸಿದರು.

    ಸೂಕ್ಷ್ಮ ಸಂವೇದನೆಯ ಕಥೆಗಾರ ಗೆಳೆಯ ಬಿ.ಶ್ರೀನಿವಾಸ್ ಅಲ್ಲಿನ ಜಿಲ್ಲಾ ಕಸಾಪ ಮತ್ತು ಓದುಗರ ವೇದಿಕೆಯ ಆಶ್ರಯದಲ್ಲಿ ಹಾವೇರಿಯಲ್ಲಿ ಕೆಂಗುಲಾಬಿ ಕುರಿತು ದೊಡ್ಡಮಟ್ಟದ ವಿಚಾರಸಂಕಿರಣ ಹಮ್ಮಿಕೊಂಡರು. ಕರ್ನಾಟಕ ಜನಶಕ್ತಿಯ ಪುಸ್ತಕ ಮನೆಯ ಗೆಳೆಯರಾದ ಮಲ್ಲಿಗೆ, ಡಾ.ವಾಸು, ನಾಗಮಂಗಲ ಕೃಷ್ಣಮೂರ್ತಿ ಮುಂತಾದವರು ಮಂಡ್ಯ ಜಿಲ್ಲೆಯಲ್ಲಿ ಮತ್ತು ಹಿರಿಯ ಕವಿ ರಾಮಲಿಂಗಪ್ಪ ಟಿ.ಬೇಗೂರು ಅವರ ನೇತೃತ್ವದಲ್ಲಿ ಕ್ರೀಯಾಶೀಲವಾಗಿರುವ ಪರಸ್ಪರ ಬಳಗವು ಬೆಂಗಳೂರಿನಲ್ಲಿ ಮಹಾರಾಣಿ ಕಾಲೇಜಿನಲ್ಲಿ ಅರ್ಥಪೂರ್ಣ ಸಂವಾದ ಕಾರ್ಯಕ್ರಮ ನಡೆಸುವ ಮೂಲಕ ಕೆಂಗುಲಾಬಿ ಪರಿಮಳ ಪಸರಿಸುವುದಕ್ಕೆ ನೆರವಾದರು.

    ಹಿರಿಯರಾದ ಪೆÇ್ರ.ಶಿವರಾಮಯ್ಯ ರಚಿಸಿರುವ ವೇಶ್ಯಯರು ಮತ್ತು ಲೈಂಗಿಕ ಅಲ್ಪಸಂಖ್ಯಾತರು ನಡೆದ ಬಂದ ದಾರಿ' ಕೃತಿ ಕನ್ನಡದಲ್ಲಿಯೇ ವಿಭಿನ್ನ ನೆಲೆಯ ಸಂಗ್ರಹಯೋಗ್ಯ ಕೃತಿ. ಆ ಕೃತಿಯಲ್ಲಿ `ಕೆಂಗುಲಾಬಿ'ಯನ್ನೂ ವಿಶ್ಲೇಷಿಸಿ ಒಂದು ಅಧ್ಯಾಯ ಸೇರಿಸಿದ್ದಾರೆ. ಇನ್ನುಳಿದಂತೆ, ಉದಯವಾಣಿ, ವಿಜಯವಾಣಿ, ವಿಜಯ ಕರ್ನಾಟಕ, ಬೆಂಗಳೂರು ಮಿರರ್, ವಾರ್ತಾಭರತಿ, ಗೌರಿ ಲಂಕೇಶ್, ಅಗ್ನಿ, ಸಂವಾದ, ಹೊಸತು ಪತ್ರಿಕೆಗಳಲ್ಲಿ, ಅವಧಿ, ಕೆಂಡಸಂಪಿಗೆಯ ವೆಬ್ ಮ್ಯಾಗಜಿನ್‍ಗಳಲ್ಲಿ ‘ಕೆಂಗುಲಾಬಿ' ಪರಿಚಯಾತ್ಮಕ ಲೇಖನ ಹಾಗೂ ಕೃತಿಯ ಆಯ್ದ ಭಗ ಲೇಖನಗಳು ಪ್ರಕಟಗೊಂಡು ಓದುಗರಿಗೆ ತಲಪಿಸುವ ಜವಾಬ್ದಾರಿ ನಿರ್ವಹಿಸಿವೆ.

    ಚಂದನ ವಾಹಿನಿಯ `ಥಟ್ ಅಂತ ಹೇಳಿ' ಕಾರ್ಯಕ್ರಮದ ಪಾಲು ದೊಡ್ಡದು. ಕೆಂಗುಲಾಬಿ ಕೃತಿಯನ್ನು ಪರಿಚಯಿಸಿದ್ದಲ್ಲದೆ ನನ್ನನ್ನೆ ಕರೆಸಿ ಕೃತಿ ಬಗ್ಗೆ ಮಾತಾಡಲು ಅವಕಾಶ ಮಾಡಿಕೊಟ್ಟ ಕಾರ್ಯಕ್ರಮ ನಿರ್ಮಾಪಕಿ ಎಚ್.ಎನ್.ಆರತಿ ಮತ್ತು ನಿರೂಪಕ ಡಾ.ನಾ.ಸೋಮೇಶ್ವರ್ ಅವರ ಪ್ರೀತಿಗೆ ಋಣಿ.

    ಆ ಪ್ರಕಟವಾದ ವಾರದಿಂದಲೇ ನಾಡಿನಾದ್ಯಂತ ಓದುಗರು ಕೆಂಗುಲಾಬಿ ಓದಿ ನನ್ನೊಂದಿಗೆ ತಮ್ಮ ಪ್ರತಿಕ್ರಿಯೆ ಹಂಚಿಕೊಂಡಿದ್ದು ಅತ್ಯಂತ ಅವಿಸ್ಮರಣೀಯ. ಎಲ್ಲೋ ಇರುವ ಮುಖಪರಿಚಯವೂ ಇರದ ಓದುಗ ಗೆಳೆಯರೊಂದಿಗೆ ಮಾತಾಡುವ ಕ್ಷಣಗಳು ನನಗೆ ಅತ್ಯಂತ ಸಂಭ್ರಮದ ಗಳಿಗೆಗಳೆ ನಿಜ.

    ಮೊದಲಿನಂತೇಯೇ ಪ್ರೀತಿಯಿಟ್ಟು ಕವಿಮಿತ್ರ ವಿ.ಆರ್.ಕಾಂರ್ಪೇಂಟರ್ ಮತ್ತು ವಿ.ಎಂ.ಮಂಜುನಾಥ್ ಈ ಕೃತಿಯ ಪುಟ ವಿನ್ಯಾಸ ಹಾಗೂ ಮುಖಪುಟ ವಿನ್ಯಾಸ ಮಾಡಿಕೊಟ್ಟಿದ್ದಾರೆ.

    ನನ್ನ ಮೇಲಿನ ಮೊದಲಿನ ಪ್ರೀತಿಯನ್ನೆ ಇಟ್ಟುಕೊಂಡಿರುವ, ಎಸ್.ಜಿ.ಸಿದ್ದರಾಮಯ್ಯ, ಡಾ.ಬಂಜಗೆರೆ ಜಯಪ್ರಕಾಶ್, ಕೈ.ವೈ.ನಾರಾಯಣಸ್ವಾಮಿ, ಬರಗೂರು ರಾಮಚಂದ್ರಪ್ಪ, ಎಲ್.ಎನ್.ಮುಕುಂದರಾಜ್, ಸತೀಶ್ ಕುಲಕರ್ಣಿ, ಪೆÇ್ರ.ಮಲ್ಲಿಕಾ ಘಂಟಿ, ಸುಬ್ಬು ಹೊಲೆಯಾರ್. ಡಾ.ಚಂಪಾ, ಡಾ.ರಹಮತ್ ತರಿಕೇರಿ, ಡಾ.ನಟರಾಜ್ ಹುಳಿಯಾರ್, ಮಾವಳ್ಳಿ ಶಂಕರ್, ಎಚ್.ಎಸ್.ರಾಘವೇಂದ್ರರಾವ್, ಜಿ.ಎನ್.ಮೋಹನ್, ಸಿ.ಎಸ್.ಬಸಲಿಂಗಯ್ಯ, ಗುಡಿಹಳ್ಳಿ ನಾಗರಾಜ್, ಬಸವರಾಜ ಸೂಳಿಬಾವಿ, ಸನತ್‍ಕುಮಾರ್ ಬೆಳಗಲಿ, ರವಿಕೃಷ್ಣಾರೆಡ್ಡಿ, ಈರಪ್ಪ ಕಂಬಳಿ, ಸರ್ಜಾಶಂಕರ್ ಹರಳಿಮಠ, ಡಾ.ವಿರೇಶ್ ಬಳ್ಳಾರಿ, ಶಶಿಕಾಂತ ಯಡಹಳ್ಳಿ, ಕಂನಾಡಿಗ ನಾರಾಯಣ, ಕರವೇ ದಿನೇಶಕುಮಾರ್, ದಿಲವಾರ ರಾಮದುರ್ಗ, ನನ್ನ ಜಿಲ್ಲೆಯವರೇ ಆದ ಬಾಳಾಸಾಹೆಬ್ ಲೋಕಾಪುರ, ಸತ್ಯಾನಂದ ಪಾತ್ರೋಟ, ಅಬ್ಬಾಸ್ ಮೇಲಿನಮನಿ, ದೊಡ್ಡಣ್ಣ ಗದ್ದನಕೇರಿ, ವಾರಿಗೆಯ ಗೆಳೆಯರಾದ ಎಲ್.ಎಂ.ನಾಗರಾಜ್, ಅರುಣ ಜೋಳದ ಕೂಡ್ಲಗಿ, ವೀರಣ್ಣ ಮಡಿವಾಳರ, ಹುಲಿಕುಂಟೆ, ಮೂರ್ತಿ, ರವಿ ಭಾಗಿ, ಮಂಜುನಾಥ್ ಎಸ್, ರಂಗನಾಥ್ ಕಂಟನಕುಂಟೆ, ಎನ್.ಸಿ.ಮಹೇಶ್, ರಮೇಶ್ ಡಿ.ಕೆ., ವಿಠಲ ದಳವಾಯಿ, ಸಿರಾಜ್ ಬಿಸ್ಲಳ್ಳಿ, ಬಸವರಾಜ್ ರಕರಡ್ಡಿ, ರವಿ ಹೊಂಬಳ, ಚೇತನ ಹೊಸಕೋಟೆ ಶ್ರೀಧರ ಜಾವೂರ, ನಾನು ಬರೆಯುತ್ತಿರುವಾಗಲೆ ಓದಿ ಪ್ರೋತ್ಸಾಹಿಸುವ ನನ್ನ ವಾರ್ತಾಭಾರತಿ ಬಳಗದವರಾದ ಬಿ.ಎಂ.ಬಷೀರ್ ಸರ್, ಪ್ರಕಾಶ್ ರಾಮಜೋಗಿಹಳ್ಳಿ, ಇಕ್ಬಾಲ್ ಉಚ್ಚಿಲ, ಅಮ್ಜದ್‍ಖಾನ್, ರಮೇಶ್ ಬನ್ನಿಕೊಪ್ಪೆ, ಜಯಂತ ಗಂಗವಾಡಿ, ಅಕ್ಮಲ್‍ಸಾಧಿಕ್, ನನ್ನ ಹುಚ್ಚಾಟಗಳಿಗೆ ಅಡ್ಡಿಪಡಿಸಿದ ತಮ್ಮ ಕೃಷಿ ಕೈಂಕರ್ಯದಲ್ಲಿ ನಿರತರಾಗಿರುವ ಅಪ್ಪ ಅವ್ವ, ಅಣ್ಣ-ಅತ್ತಿಗೆಯರು, ಮೊದಲ ಓದುಗಳಾದ ಪ್ರೇಮ, ಮಕ್ಕಳು ನಿಶ್ಚಿತ್-ನಿರೀಕ್ಷಾಳಿಗೂ ಮತ್ತು ನಿಮ್ಮನ್ನು ಈ ಸಂಭ್ರಮದ ಸಂದರ್ಭದಲ್ಲಿ ಸ್ಮರಿಸಿಕೊಳ್ಳುತ್ತೇನೆ.

    ಒತ್ತೆಯ ಹಿಡಿದು ಮತೊತ್ತೆಯ ಹಿಡಿಯೆ

    ಹಿಡಿದೆಡೆ ಬತ್ತಲೇ ನಿಲಿಸಿಕೊಲುವರಯ್ಯ,

    ವೃತಹೀನನರಿದು ಬೆರೆದಡೆ

    ಕಾದಕತ್ತಿಯಲ್ಲಿ ಕೈ, ಕಿವಿ, ಮೂಗ ಕೊಯ್ವರಯ್ಯಾ

    ಒಲ್ಲೆನೊಲ್ಲೆ ಒಲ್ಲೆನಾಗಿ ನಿಮ್ಮಾಣೆ ನಿರ್ಲಜ್ಜೇಶ್ವರಾ

    -      ಸೂಳೆ ಸಂಕವ್ವೆ

    ಗಾಂಧೀಜಿ ಆಗಲೇ ಅರಿತಿದ್ದರು.

    1927ರಲ್ಲಿ ಗಾಂಧೀಜಿಯವರು ದಕ್ಷಿಣ ಭಾರತದ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಮಯಾವರಂನಲ್ಲಿ ತಂಗಿದ್ದರು. ಅವತ್ತು ದೇವದಾಸಿಯರ ಗುಂಪೊಂದರೊಂದಿಗೆ ಮುಕ್ತವಾಗಿ ಮಾತುಕತೆ ನಡೆಸಿದ ನಂತರ ಸಾರ್ವಜನಿಕ ಸಭೆಯಲ್ಲಿ ಈ ಬಗ್ಗೆ ಖೇದದಿಂದ ಮಾತನಾಡಿದರು.

    "ಈ ದಿನ ಮಧ್ಯಾಹ್ನ ನಾನು ಕೆಲವು ದೇವದಾಸಿಯರನ್ನು ಬೇಟಿಯಾಗಿದ್ದೆ. ಅವರ ಬಗ್ಗೆ ತಿಳಿದು ನನ್ನ ಆತ್ಮಕ್ಕೆ ಆಘಾತವಾಯಿತು. ಅವರನ್ನು ದೇವದಾಸಿಯರು ಎಂದು ಕರೆದು ನಾವು ಧರ್ಮದ ಹೆಸರಿನಲ್ಲಿ ದೇವರಿಗೆ ಅವಮಾನ ಮಾಡುತ್ತಿದ್ದೇವೆ. ಅವರನ್ನು ದೈಹಿಕ ತೃಷೆಗೆ ಬಳಸಿಕೊಳ್ಳುವುದು' ಎಲ್ಲವೂ ಮುಗಿದ ಮೇಲೆ ದೇವದಾಸಿಯರನ್ನು ತುಚ್ಚವಾಗಿ ಕಾಣುವುದು ಮತ್ತು ತಪ್ಪೆಲ್ಲವೂ ಅವರದೇ ಎನ್ನುವಂತೆ ವರ್ತಿಸುವುದು; ಅತ್ಯಂತ ಪಾಪದ ಕೆಲಸ. ಇಂತಹ ಅನೈತಿಕ ಕೆಲಸವನ್ನು ನಿರ್ವಹಿಸಲು ಒಂದು ವರ್ಗದ ಜನರಿರುವುದು, ಮತ್ತೊಂದು ವರ್ಗದ ಜನ ಅದನ್ನು ಬೆಂಬಲಿಸುವುದು ಇದನ್ನು ಯೋಚಿಸಿದರೆ ಜೀವನವೇ ಹೇಸಿಗೆ ಎನಿಸುತ್ತದೆ. ಅವರು ಪ್ರಪಂಚದ ಬೇರೆ ಯಾವುದೇ ಹೆಂಗಸರಷ್ಟೆ ಸನ್ನಡತೆಯುಳ್ಳವರಂತೆ ನನಗೆ ಕಂಡರು. ನಮ್ಮ ಅಕ್ಕ ತಂಗಿಯರಿಗೂ ಅವರಿಗೂ ಏನು ವ್ಯತ್ಯಾಸವಿದೆ? ನಮ್ಮ ಸಹೋದರಿಯರು ಅಂತಹ ಅನೈತಿಕ ವ್ಯವಹಾರಕ್ಕಿಳಿದರೆ ಹೌಹಾರುವ ನಾವು ಬೇರೆ ಹೆಂಗಸರನ್ನು ಅದೇ ಉದ್ದಿಶ್ಯಕ್ಕಾಗಿ ಉಪಯೋಗಿಸಿಕೊಳ್ಳುವುದರ ಉದ್ದಿಶ್ಯವಾದರೂ ಏನು? ಎಂದ ಸಭಿಕರ ಮುಖಗಳಿಗೆ ಹೊಡೆಯುವಂತೆ ಗಾಂಧೀಜಿ ಪ್ರಶ್ನಿಸಿದ್ದರು.

    -      ಕೃಪೆ: ಬಿ. ಎ, ಶ್ರೀಧರ್, ಬಾಪು ಚಿಂತನೆ ಕೃಪೆಯಿಂದ

    1.

    ಒಬ್ಬೊಬ್ಬರ ಬದುಕು ಒಂದೊಂಥರಾ. ಒಂದರೊಳಗ ಸಿಕ್ಕ ಹಾಕ್ಕೊಂಡವರು ಅದರಿಂದ ಬಿಡಿಸಿಕೊಳ್ಳಾಕ ಅವರ ಹಿಂದಿನ ಬದುಕಿನ ಅಧ್ಯಾಯಗಳು ಅಷ್ಟು ಸರಳ ಬಿಡುದಿಲ್ಲ. ಸುತ್ತಲಿನ ಪ್ರಪಂಚವನ್ನು ಕಣ್ಣರಳಿಸಿ ನೋಡುವ ಮುನ್ನವೇ, ಯಾರದೋ ಹುನ್ನಾರಕ್ಕೆ ಬಲಿಯಾಗಿ, ತಾವು ಮಾಡದ ತಪ್ಪಿಗಾಗಿ, ಎಷ್ಟೋ ಹೆಣ್ಮಕ್ಕಳು ಇಂದು ತಮ್ಮ ಮೈಯನ್ನೇ ಸಂತೆಯೊಳಗ ಬಿಕರಿಗಿಟ್ಟು ತುತ್ತಿನ ಚೀಲ ತುಂಬಿಸಿಕೊಳ್ಳಾಕ ಹತ್ಯಾರ. ಅಂಥ ಮೈ ಮಾರೊಳ ಹೊಟ್ಟಿಯೊಳಗಿಂದ ಭೂಮಿಗೆ ಇಳಿದು ಬಂದವ ನಾ. ಹಿಂದೆ, ಇಂದು, ಮುಂದೆಂದೂ ಈ ಬ್ಯಾನಿ ನನ್ನನ್ನು ಬಿಟ್ಟು ಬಿಡದ ಕಾಡಕೋತನ ಇರತೈತಿ. ಈ ಚಣದ ನೋವ ಹಂಚಿಕೊಳ್ಳಾಕ ನನಗ ನನ್ನೋರು ಅನ್ನೋರು ಯಾರು ಇಲ್ಲ. ಬಾಯಿಬಿಟ್ಟು ಹಂಚಿಕೊಳ್ಳೋ ನೋವು ನನ್ನವಲ್ಲ. ನನ್ನ ನೋವು ಕೇಳಿದವರಿಂದ, ಅಬ್ಬಬ್ಬಾ ಅಂದ್ರ ಸಹಾನುಭೂತಿಯ ಒಂದು ನೋಟ, ಇಲ್ಲಂದ್ರ ಅಸಹ್ಯದ ಮುಖಭಾವ; ಇವೆರಡೇ ಎದುರಾಗೋದು. ಆದರೆ ಹಂಚಿಕೊಳ್ಳದಿದ್ದರ ಒಳಗಡೆ ಕೊತ ಕೊತ ಕುದಿಯುವ, ಹೊಯ್ದಾಡುವ ಕುದಿತ. ಯಾರ ಮುಂದಾದ್ರೂ ಹಂಚಕೋಬೇಕು, ಬಿಡುಗಡೆಯಾಗಬೇಕು ಅಂತ ಜೀವ ತಳಮಳಸತೈತಿ.

    'ಅಕ್ಷರ ಬಿಡುಗಡೆಯ ಭಾಗ್ಯ' ಅಂತಾರ. ಅದು ಒಬ್ಬೊಬ್ಬರಿಗೆ ಒಂದೊಂದು ಥರಾ ದೈವ. ಆದ್ರ ಅದು ನನಗ ಖರೇನ ಅಂದ್ರ ನನ್ನ ನೋವುಗಳನ್ನು ಬಚ್ಚಿಟ್ಟುಕೊಳ್ಳುವ ಮೌನಬಾವಿ, ನನ್ನೆಲ್ಲ ನೋವುಗಳನ್ನು ಆತು ಕೇಳುವ ಜಿಗರಿದೋಸ್ತ. ನನಗೆ ಸ್ವತಃ ಅನುಭವಿಸಿ ನರಳಿದ್ದನ್ನು, ಕಂಡು ದಂಗಾದುದನ್ನು, ಕೇಳಿ ಕಣ್ಣೀರಿಟ್ಟಿದ್ದನ್ನು, ಕಣ್ಣೀರು ಒಸರುತ್ತಿದ್ದ ಕಣ್ಣುಗಳೊಳಗೆ ಕಣ್ಣಿಟ್ಟು ಕಂಡುಕೊಂಡದ್ದನ್ನು

    Enjoying the preview?
    Page 1 of 1