Discover millions of ebooks, audiobooks, and so much more with a free trial

Only $11.99/month after trial. Cancel anytime.

Ooru Suttaru Hanamappa Horaga
Ooru Suttaru Hanamappa Horaga
Ooru Suttaru Hanamappa Horaga
Ebook129 pages42 minutes

Ooru Suttaru Hanamappa Horaga

Rating: 0 out of 5 stars

()

Read preview

About this ebook

Born in Tulasigeri village of Bagalkot District in the year 1980, Hanamantha Haligeri has grown up amid unbearable poverty and casteism. He feels proud being educated himself despite several odds by sacrificing childhood pleasures.

Published 4 books till date including a novel "Kengulabi", a play "Ooru Suttaru Hanamappa Horaga" and two short story collections "Kattalagarbhada Minchu" and "Mathada Hori". He has been conferred with many awards including Kuvempu Award by Karnataka Sangha, Shimoga, Bendre Book Award from Rashtriya Bendre Pratisthana, Dharwad.

His stories have won altogether 18 prizes including First prize in Sinchana International Competition, Singapore, Third prize in International short story competition by Akka Sammelana, USA and First prize in National Story competition organised by Vidyadhara Kannada Sangha, Mumbai.

Presently, he is working as District Reporter for Vijaya Karnataka Daily for Uttara Kannada District.
LanguageKannada
Release dateAug 12, 2019
ISBN6580201300185
Ooru Suttaru Hanamappa Horaga

Read more from Hanumantha Haligeri

Related to Ooru Suttaru Hanamappa Horaga

Related ebooks

Reviews for Ooru Suttaru Hanamappa Horaga

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Ooru Suttaru Hanamappa Horaga - Hanumantha Haligeri

    http://www.pustaka.co.in

    ಊರು ಸುಟ್ಟರೂ ಹನುಮಪ್ಪ ಹೊರಗ...

    Uru suttaroo hanumappa horaga…

    Author :

    ಹನುಮಂತ ಹಾಲಿಗೇರಿ

    Hanumantha Haligeri

    For more books :

    http://www.pustaka.co.in/home/author/hanumantha-haligeri

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಊರು ಸುಟ್ಟರೂ ಹನುಮಪ್ಪ ಹೊರಗ...

    (ನಾಟಕ)

    ರ್ಪಣೆ

    ನಮ್ಮ ದಾರವಾಡ ನೆಲದಲ್ಲಿ ಹುಟ್ಟಿ ಕಳೆದ ಎಳೆಂಟು ವರ್ಷಗಳಿಂದ ಅಕ್ರಮ ಸಂತಾನ, ರಮಾಯಿ, ಕೈದಿಗಳ ಕಥನ, ಚಂದ್ರಗುಪ್ತ ಮೌರ್ಯದಂಥ ಗಂಭೀರ ವಸ್ತುಗಳನ್ನು ದೈರ್ಯದಿಂದ ರಂಗಕ್ಕೆ ಅಳವಡಿಸಿ, ನಾಡಿನ ಗ್ರಾಮ-ನಗರಗಳಲ್ಲಿ ಪ್ರತಿರೋಧದ ನೆಲೆಯ ಬೀಜ ಬಿತ್ತುತ್ತಿರುವ ಆಟಮಾಟ ತಂಡದ ಎಲ್ಲ ಕಲಾವಿದರಿಗೆ....

    (ಲೇಖಕರ ಪರಿಚಯ- ಲೇಖಕರ ಫೋಟೋ)

    1980ರಲ್ಲಿ ಬಾಗಲಕೋಟೆಯ ತುಳಸಿಗೇರಿಯಲ್ಲಿ ಜನನ. ಚಿಕ್ಕಂದಿನಲ್ಲಿ ಅಸಹನೀಯ ಬಡತನ ಮತ್ತು ಜಾತಿಯತೆಯಲ್ಲಿ ಕಮರಬೇಕಿದ್ದ ಮುಗುಳು ಅರಳಿದ್ದೆ ಹೆಚ್ಚು. ಬಾಲ್ಯದ ಸಂಜೆ ಮುಂಜಾವುಗಳನ್ನು ಬಲಿಗೊಟ್ಟು ದುಡಿದು ಅಕ್ಷರ ದಕ್ಕಿಸಿಕೊಂಡ ಹೆಮ್ಮೆ. ಬಾಗಲಕೋಟೆಯ ಬಸವೇಶ್ವರ ಕಾಲೇಜಿನಲ್ಲಿ ಕಲಿಯುತ್ತಿದ್ದ ಬಿ.ಎ. ಅರ್ಧಕ್ಕೇ ನಿಲ್ಲಿಸಿ ಸ್ವಲ್ಪ ದಿನ ಹೋರಾಟದ ಹುಚ್ಚು ಹಿಡಿಸಿಕೊಂಡು ಅಲೆದಾಟ. ಧಾರವಾಡದ ಕರ್ನಾಟಕ ವಿ.ವಿ.ಯಲ್ಲಿ ಗ್ರಾಮೀಣ ಅಭಿವೃದ್ಧಿ ಪದವಿ. ಅದೇ ಅವಧಿಯಲ್ಲಿ ಎಸ್‍ಎಸ್‍ವೈ ಟೀಚರ್ ಆಗಿ ಆಧ್ಯಾತ್ಮದ ಗೀಳಿನಿಂದಾಗಿ ಮೂರು ವರ್ಷಗಳವರೆಗೆ ಗ್ರಾಮೀಣ ಗುರುಕುಲಗಳನ್ನು ನಡೆಸುತ್ತಾ ಹಲವಾರು ಗ್ರಾಮೀಣ ಅಭಿವೃದ್ಧಿಯ ಪ್ರಯೋಗಗಳ ನಡೆ. ಆ ನಡೆಯಲ್ಲಿ ಕೆಲವೊಮ್ಮೆ ವೈಪಲ್ಯವೂ...

    ನಂತರ ‘ಭೈಫ್’ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸೇರಿ ಸತತ ಮೂರು ವರ್ಷಗಳ ಕಾಲ ಹಲವಾರು ಹಳ್ಳಿಗಳ ಅಲೆದಾಟ. ಇಲ್ಲೆಲ್ಲ ನನ್ನ ಹಳ್ಳಿಗಳ ಯುವಜನರಲ್ಲಿ ಜಾತಿಯತೆ ಕೋಮುವಾದದ ವಿರುದ್ದ ಸಮಾನತೆಯ ಆಶಯದ ಸಂಘಟನೆಗಳ ನಿರ್ವಹಣೆ. ಎಚ್‍ಐವಿ ಏಡ್ಸ್ ನಿಯಂತ್ರಣ ಎನ್‍ಜಿಓದಲ್ಲಿ ಹೊಟ್ಟೆಪಾಡಿಗಾಗಿ ಸೇರಿಕೊಂಡು ಲೈಂಗಿಕ ಕಾರ್ಯಕರ್ತರ ಕುರಿತು ಗಂಭೀರ ಅಧ್ಯಯನ.

    ಗ್ರಾಮೀಣ ಅಭಿವೃದ್ಧಿಯಲ್ಲಿ ಏನಾದರೂ ಸಾಧಿಸಲೇಬೇಕೆಂಬ ಛಲದಲ್ಲಿ ಸ್ವಂತದ್ದಾದ ನಿಸರ್ಗ ಮಿಲ್ಕ್ ಡೈರಿ ಸಂಸ್ಥೆ ಕಟ್ಟಿ ಕೊರಳಿಗೆ ಕುತ್ತಾಗುವಷ್ಟು ಕೈ ಸುಟ್ಟುಕೊಂಡ ಅನುಭವ! ಇದೆಲ್ಲವ ತೊರೆದು ಬೆಂಗಳೂರು ಸೇರಿ ಬೆಳಗ್ಗೆ ಪೇಪರ್ ಹಾಕುತ್ತಾ ಸಂಜೆ ನಾಟಕಗಳಲ್ಲಿ ಅಭಿನಯಿಸುತ್ತಾ ಸ್ವಲ್ಪ ದಿನ ಬೀದಿ ಬದುಕು. ಹೊಟ್ಟೆ ತುಂಬಲಾರದೆ ವಾರ್ತಾಭಾರತಿ ಸೇರಿ 5 ವರ್ಷ ಕೆಲಸ. ಬರವಣಿಗೆಯಲ್ಲಿ ಗಂಭೀರವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗಿದ್ದು ಇಲ್ಲಿಯೇ.

    2010ರಲ್ಲಿ ‘ಕತ್ತಲಗರ್ಭದ ಮಿಂಚು’ ಕಥಾ ಸಂಕಲನ ಪ್ರಕಟ. ಅದು ಕಸಾಪದ ಬಿಎಂಟಿಸಿ ಅರಳು ಪ್ರಶಸ್ತಿ ಮತ್ತು ಬೀಳಗಿ ದತ್ತಿ ಪ್ರಶಸ್ತಿಗೆ ಪಾತ್ರವಾಗಿದೆ. ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಬರೆಸಿಕೊಂಡ ಹಲವಾರು ಕಥೆಗಳು 13 ಹೆಚ್ಚು ಕಥಾಸ್ಪರ್ಧೆಗಳಲ್ಲಿ ಬಹುಮಾನ ಪಡೆದಿವೆ. ಇದಕ್ಕೂ ಮುನ್ನ ಅಂದರೆ ಎಂಟನೇ ತರಗತಿಯಲ್ಲೇ ‘ರೊಚ್ಚಿಗೆದ್ದ ನಾರಿ’ ಎಂಬ ನಾಟಕ ಬರೆದು, ಅದು ಊರೆಲ್ಲಾ ಸುದ್ಧಿಯಾಗಿ ಶಾಲೆಯಲ್ಲಿ ಪ್ರದರ್ಶನ ಕಂಡಿದೆ. 2010ರಲ್ಲಿ ‘ದೇವರ ಹೆಸರಿನಲ್ಲಿ’ ಎಂಬ 2ನೆ ನಾಟಕ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಪ್ರೋತ್ಸಾಹ ಧನ ಪಡೆದುಕೊಂಡು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡಿದೆ. ಅದೇ ವರ್ಷ ಬಿಜಾಪುರದ ಎ.ಎಸ್.ಹಿಪ್ಪರಗಿ ಪ್ರತಿಷ್ಠಾನದಿಂದ ನಾಟಕ ರಚನಾ ಸ್ಪರ್ಧೆಯಲ್ಲಿ ಅದಕ್ಕೆ ದ್ವಿತೀಯ ಬಹುಮಾನ.

    2011ರಲ್ಲಿ ಪ್ರಕಟಗೊಂಡ ‘ಕೆಂಗುಲಾಬಿ’. ಕಾದಂಬರಿಗೆ ಶಿವಮೊಗ್ಗ ಕರ್ನಾಟಕ ಸಂಘದಿಂದ ಕುವೆಂಪು ಕಾದಂಬರಿ ಪುರಸ್ಕಾರ ಮತ್ತು ಕಸಾಪದ ಸಮೀರವಾಡಿ ದತ್ತಿ ಪ್ರಶಸ್ತಿಗಳು ಸಿಕ್ಕಿವೆ. ಅದು ಕೆಂಗುಲಾಬಿ ಕೆಲವು ಪರಿಷ್ಕರಣೆಯೊಂದಿಗೆ ಎರಡನೇ ಮುದ್ರಣ ಕಂಡಿದೆ. ಇದೀಗ ಮಠದ ಹೋರಿ 2ನೇ ಕಥಾಸಂಕಲನ ಪ್ರಕಟಣೆ. ಸದ್ಯ ಉತ್ತರ ಕನ್ನಡ ಜಿಲ್ಲೆಯ ವಿಜಯ ಕರ್ನಾಟಕ ಪತ್ರಿಕೆಯ ಜಿಲ್ಲಾ ವರದಿಗಾರನಾಗಿ ಕಾರ್ಯನಿರ್ವಹಣೆ. ಎಲ್ಲಿಯೂ ವ್ಯವಸ್ಥೆಯ ವ್ಯವಸ್ಥೆಯ ಹುನ್ನಾರಗಳಿಗೆ ಬಲಿಯಾಗದೆ, ರಾಜಿಯಾಗದೆ ಬದುಕು ಕಟ್ಟಿಕೊಳ್ಳುತ್ತಿರುವ ಖುಷಿ.

    ಊರುಸುಟ್ಟರೂ ಸುಡಲಾರದ ದೈವದ ಸುತ್ತ...(ಮುನ್ನುಡಿ)

    ಹೊಸ ನಾಟಕಗಳು ಬರುತ್ತಿಲ್ಲವೆಂಬ ಅಳುಕನ್ನು ಅಳಿಸಬಲ್ಲ ಯುವ ಕತೆಗಾರರು ನಾಟಕ ರಚನೆಯತ್ತ ಮುಖ ಮಾಡಿರುವುದು ನಿಜಕ್ಕೂ ಸಂತಸದ ಸಂಗತಿ. ಈಗಾಗಲೇ ಕತೆಗಾರರು ಎಂದೆ ಹೆಸರಾಗಿರುವ ಗೆಳೆಯ ಹನಮಂತ ಹಾಲಿಗೇರಿಯವರ ಊರು ಸುಟ್ಟರೂ ಹನುಮಪ್ಪ ನಾಟಕವನ್ನು ಆಟಮಾಟ ತಂಡದ ಅಡ್ಯಾಟಕ್ಕೆ ಮಾಡಬೇಕೆಂದುಕೊಂಡಾಗ ತಂಡದ ಎಲ್ಲಾ ಸಾಧ್ಯತೆಗಳಿಗೆ ಹೊಂದಿಕೊಳ್ಳುವಂತೆ ನಾಟಕದ ವಿನ್ಯಾಸದಲ್ಲಿ ಬದಲಾವಣೆ ಮಾಡಿಕೊಟ್ಟರು. ದುರಂತ ಛಾಯೆಯುಳ್ಳ ಕತೆ ಯಾವತ್ತಿಗೂ ಕಟುವ್ಯಂಗ್ಯದ ವಿಡಂಬನೆಯಲ್ಲಿ ನಾಟಕವಾಗಿ ರಂಗಕ್ಕೆ ಅಳವಡಿಸುವಾಗ ತಿಳಿಹಾಸ್ಯದ ಧಾಟಿಯಲ್ಲಿ ಪ್ರಯೋಗಗೊಳ್ಳುತ್ತದೆ. ಅದೇ ಮಾದರಿಯಲ್ಲಿ ನಾಟಕ ಪ್ರದರ್ಶನಗೊಳ್ಳುವಾಗ ಗೆಳೆಯ ಹನಮಂತ ಆತಂಕಿತರಾಗಿದ್ದರು. ಆದರೆ ನಾಟಕ ಪ್ರದರ್ಶನ ನೋಡಿದ ಮೇಲೆ ನಮ್ಮ ತಂಡದವರೇ ಆಗಿಬಿಟ್ಟರು. ಅವರ ಈ ಮೊದಲ ನಾಟಕದಲ್ಲಿ ಸೆಟೈರ್ ಕಾಮಿಡಿಯ ಎಲ್ಲ ಗುಣಗಳು ಇವೆ. ಇದು ನಾಟಕ ಕೃತಿಯಷ್ಟೆಯಲ್ಲ ರಂಗಕೃತಿಯಾಗಿಯೂ ಅದ್ಭುತವಾಗಿ ಸ್ಟೇಜ್ ಆಗುತ್ತದೆ. ಈ ನಾಟಕ ಆಟಮಾಟ ತಂಡಕ್ಕೆ ಹೊಸ ಶಕ್ತಿಯನ್ನೇ ನೀಡಿತು. ಅಂಥ ನಾಟಕದ ಕುರಿತು ಸಣ್ಣದೊಂದು ಟಿಪ್ಪಣಿ ಬರೆಯಲು ಹೇಳಿದಾಗ ಕೊಂಚ ಅಧೈರ್ಯ ಕಾಡಿದರೂ ಕಥನ ನಿರೂಪಣೆಯ ಮಾದರಿಯನ್ನು ಮಾತ್ರ ಇಲ್ಲಿ ವಿವರಿಸಲು ಪ್ರಯತ್ನಿಸಿದ್ದೇನೆ.

    ಎರಡು ಊರುಗಳ ನಡುವಿನ ಜಗಳ ನಾಟಕೀಯವಾದ ಹತ್ತಾರು ಘಟಣೆಗಳನ್ನು ಕಥಾಹಂದರದಲ್ಲಿ ಎಳೆದುಕೊಂಡಿದೆ. ಆದರೆ ಜಗಳಕ್ಕೆ ಕಾರಣನಾದ ದೇವರು ಮಾತ್ರ ವಾಸ್ತವದ ಪ್ರತಿನಿಧಿಯಾಗಿದ್ದಾನೆ. ಎಲ್ಲಿ ಪ್ರೀತಿ ಇರುತ್ತದೋ ಅಲ್ಲಿ ದ್ವೇಷ ಹುಟ್ಟಿಕೊಳ್ಳುತ್ತದೆ. ನಮ್ಮದು ಎಂದು ಗೆರೆಹಾಕಿಕೊಂಡು ಗಡಿ ಗುರುತಿಸಿಕೊಂಡಲ್ಲಿ ಇನ್ನೊಬ್ಬರದು ಎಂಬ ದ್ವೇಷದ, ಅಸಡ್ಡೆಯ, ತಿರಸ್ಕಾರದ ನೋಟವೂ ಹುಟ್ಟಿಕೊಳ್ಳುತ್ತದೆ. ಪ್ರತಿಯೊಂದು ಸೀಮೆಯಲ್ಲೂ ಊರಿನ ಹಕ್ಕಿಗಾಗಿ ಎರಡೂರ ಸೀಮೆಗಳ ನಡುವೆ ಸಣ್ಣದೊಂದು ಜಗಳವಿದ್ದೆ ಇರುತ್ತದೆ. ಉಕ್ರೇನ್ ವಿಷಯವಾಗಿರಲಿ, ಕಾಶ್ಮೀರಾಗಲಿ ನಮ್ಮದೇ ಬೆಳಗಾವಿಯಾಗಿರಲಿ ಈ ಗಡಿಯೆಂಬುದು ಸಾಮಾನ್ಯವಾಗಿ ದ್ವಿಭಾಷಿಗಳನ್ನು ಒಳಗೊಂಡಂತೆ ವ್ಯಾಜ್ಯವನ್ನು ಹೊಂದಿರುತ್ತದೆ. ವ್ಯಾಜ್ಯವೆಂಬುದು ಅವರ ಮೂರನೆ ಭಾಷೆಯಾಗಿರುತ್ತದೆ. ಭಾಷೆ, ಆಸ್ತಿ, ಗಡಿ, ಸೀಮೆ, ನದಿನೀರು, ಹೆಣ್ಣು, ದೇವರು, ದೇವಸ್ತಾನ ಏನೆ ಆದರೂ ಅಲ್ಲೊಂದು ಪ್ರತಿಷ್ಠೆಯ ಗರ್ವ ಇರುತ್ತದೆ. ಇಬ್ಬರು ವ್ಯಕ್ತಿಗಳಿಂದ ಆರಂಭವಾಗಿ ಜಾತಿ, ಧರ್ಮ, ಗುಂಪು, ಸಮುದಾಯ, ಊರು, ಸೀಮೆ, ದೇಶ ಹೀಗೆ ಸಮೂಹದ ಭಾವನೆಗಳನ್ನು ಕೆದಕುತ್ತ ಹೋಗುತ್ತದೆ. ಒಟ್ಟಾರೆಯಾಗಿ ಕಾಳಗವೇ ನಡೆದುಹೋಗುತ್ತದೆ. ಆದರೆ ನ್ಯಾಯಾಲಯ ಎಂಬ ವ್ಯವಸ್ಥೆ ಆ ಎಲ್ಲಾ ಜಗಳ, ತುರುಸು, ಗೆಲವು ಉಮೇದು, ಉತ್ಸಾಹ, ರೊಚ್ಚುಗಳನ್ನು ನುಂಗಿ ಹಾಕುವ ಒಂದು ನೇರ ನಿರೂಪಣೆಯ ಕಥೆ "ಊರು ಸುಟ್ಟರೂ ಹನುಮಪ್ಪ

    Enjoying the preview?
    Page 1 of 1