Discover millions of ebooks, audiobooks, and so much more with a free trial

Only $11.99/month after trial. Cancel anytime.

Jothe Jotheyali
Jothe Jotheyali
Jothe Jotheyali
Ebook316 pages2 hours

Jothe Jotheyali

Rating: 4 out of 5 stars

4/5

()

Read preview

About this ebook

Geetha B.U. is one of the famous authors in Kannada. She has also written in serials. She currently lives in Bangalore.
LanguageKannada
Release dateMar 5, 2016
ISBN6580202700385
Jothe Jotheyali

Read more from Geetha Bu

Related to Jothe Jotheyali

Related ebooks

Reviews for Jothe Jotheyali

Rating: 4 out of 5 stars
4/5

1 rating0 reviews

What did you think?

Tap to rate

Review must be at least 10 words

    Book preview

    Jothe Jotheyali - Geetha BU

    http://www.pustaka.co.in

    ಜೊತೆ ಜೊತೆಯಲಿ

    Jyothe Jyotheyalli

    Author :

    ಗೀತಾ ಬಿ.ಯು.

    Geetha.B.U

    For more books
    http://www.pustaka.co.in/home/author/geetha-bu

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    1

    ಅಮ್ಮ...ಅಮ್ಮ...... ನಿಂಗೆ ಗೋತ್ತಾ...ಅಮ್ಮಾ...

    ಕೇಳಿಸ್ತಾ ಇದೆ. ಅದೇನಮು ಹೇಳು.... ಹಾಗೆ ಕಿರುಚ್ತ್ಯಾ? ಇಲ್ಲೇ ಒಳಗೆ ಬಾ...

    ಅಡುಗೆ ಮನೆ ಬಾಗಿಲಲ್ಲಿ ನಿಂತು ಒಳಗೆ ನೊಡಿದಳು ಅವಂತಿ.

    ಯಾವಾಗ್ಲೂ ಅಡುಗೆ ಮನಹೇಲೇ ಇರ್ತ್ಯಾಲ್ಲ, ನಿಂಗೆ ಬೋರಾಗೋಲ್ವಾ...? ಕಾಫೀ ಮಾಡು, ತಿಂಡಿ ಮಾಡು, ಅಡುಗೆ ಮಾಡು, ಕ್ಲೀನ್ ಮಾಡು, ಸಾರಿನ ಪುಡಿ ಮಾಡು, ಸಂಡಿಗೆ ಮಾಡಿ... ಆವಂತಿ ಒಂದೇ ಉಸಿರನಲ್ಲಿ ಹೇಳುತ್ತಿದ್ದಾಗ ಒಲೆಯ ಮೇಲೆ ಉಕ್ಕುತ್ತಿದ್ದ ಹಾಲಿನತ್ತಲೇ ನೋಡುತ್ತಾ ಮುಗುಳ್ನಕ್ಕು ಒಲೆಯನ್ನು ಆಡಿಸಿ ಮಗಳತ್ತ ತಿರುಗಿದ ಗಾಯಿತ್ರಿ,

    "ಏನು? ಏನು ಸಮಾಚಾರ? ನಾನು ಮಾಡುವ ಕೆಲಸ ಲಿಸ್ಟ್ ಹಾಕ್ತಾ ಇದ್ಯ... ಏನು ಬೇಕು...?

    ತಾಯಿಯ ಬಳಿ ಸಾಗಿ, ಅವರ ಭುಜಕ್ಕೆ ಜೋತು ಬಿದ್ದಳು ಆವಂತಿ.

    "ನಂಗೆ ಬೇಕಾದ್ದು ಕೊಡ್ತ್ಯಾ...? ಮುದ್ದುಗರೆದಾಗ ಅವಳ ತಲೆ ಸವರಿದರು ಗಾಯತ್ರಿ.

    ಅದೇನು ಅನ್ನೊದರ ಮೇಲೆ ಡಿಪೆಂಡ್ ಆಗುತ್ತೆ ಏನನ್ನ ತಿಂಡಿ ಬೇಕಿದ್ರೆ ಕೇಳು, ಮಾಡಿಕೊಡ್ತೀನಿ...

    ಹೋಗಮ್ಮ ನೀನು...! ಬರೀ... ತಿನ್ನೊದರ ಬಗ್ಗೆಯೇ ಯೋಚಿದ್ತ್ಯಾ...ನಂಗೆ...ಸಾವಿರ ರೂಪಾಯಿ ಬೇಕು....

    ತಾಯಿಯನ್ನು ಬಿಟ್ಟು ಸಿಂಕ್‍ನಲ್ಲಿ ನೀರು ವೇಸ್ಟ್ ಮಾಡಬೇಡ. ಈಗ ಸಾವಿರ ರೂಪಾಯಿ ಯಾಕೆ ಬೇಕು..." ಕಣ್ಣರಳಿಸಿದರು ಗಾಯತ್ರಿ.

    ಬೇಕು. ಏನೂ ಪ್ರಶ್ನಿಸದೆ ಕೊಡಕ್ಕಾಗಲ್ವಾ... ಮೂತಿ ಊದಿಸಿದ ಮಗಳತ್ತ ನೋಡಿ ನಕ್ಕರು ಗಾಯತ್ರಿ.

    ಏನೋ ನೂರು ರೂಒಆಯಿ ಕೊಡಬಹುದು ಅಬ್ಬಬ್ಬ ಆಂದ್ರೆ ಇನ್ನೂರು ರೂಪಾಯಿ ಕೊಡಬಹುದು,. ಸಾವರ ರೂಪಾಯಿ ಅಂದ್ರೆ...?

    ಸ್ಸರಿ...ಸ್ಸರಿ... ಲೆಕ್ಚರ್ ಬೇಡ, ಇನ್ನೂರು ರೂಪಾಯಿನೇ ಕೊಡು... ಪ್ಲೀಸ್... ಪ್ಲೀಸ್...

    "ಯಾಕೆ ಅಂತ ಹೇಳು ನೋಡೋಣ ಫಿಲ್ಟರಿನಿಂದ ಡಿಕಾಕ್ಷನ್ ಬಗ್ಗಿಸಿ, ಅದಕ್ಕೆ ಹಾಲು, ಸಕ್ಕರೆ ಬೆರೆಸಲಾರಂಭಿಸಿದರು ಗಾಯತ್ರಿ.

    ಈಗ್ತಾನೆ ಇನ್ನೂರು ರೂಪಾಯಾದ್ರೆ ಕೊಡಬಹುದು ಅಂದೆ. ಈಗ ತಿರುಗಿ ಕಾರನ ಹೇಳು ಅಂತ ಕೇಳ್ತಾ ಇದ್ಯಾ...ಹೋಗಮ್ಮ ನೀನು...

    ಕಾಫಿ ಕುಡಿತೀಯಾ?

    ಬೆರೆಸಿದ ಬಿಸಿ ಕಾಫಿಯನ್ನು ಲೋಟಕ್ಕೆ ಬಗ್ಗಿಸುತ್ತಾ ಕೇಳಿದರು ಗಾಯತ್ರಿ.

    ಹೂಂ... ಬೇಕು. ಆದ್ರೆ ನೀನು ಇನ್ನೂರು ರೂಪಾಯಿ ಕೊಟ್ರೆ ಕುಡಿತೀನಿ...

    ತಾವೊಂದು ಲೋಟ ಕೈಯಲ್ಲಿ ಹಿಡಿದು ಮತ್ತೊಂದು ಲೋಟವನ್ನು ಆವಂತಿಗೆ ಕೊಟ್ಟರು ಗಾಯಿತ್ರಿ.

    ಕಾಫಿ ಕುಡಿ. ಇನ್ನೇನು ನಿಮ್ಮೊಪ್ಪ ಬರ್ತಾರಲ್ಲ. ಅವರ್ನ ಕೇಳಿ ಇಸ್ಕೊಕೊಂಡು ಕೊಡ್ತೀನಿ...

    ಲೋಟವನ್ನು ಕಟ್ಟೆಯ ಮೇಲೆ ಇಟ್ಟಳುಆವಂತಿ.

    "ಸ್ಸರಿ...ಯಾಕೆ. ಏನು, ಎತ್ತ ಅಂತ ಇನ್ನೂರು ರೂಪಾಯಿಗೆ ಇನ್ನೂರು ಪ್ರಶ್ನೆ ಕೇಳ್ತಾರೆ ಅಪ್ಪ, ನಿನ್ನ ಸಾಸಿವೆ ಡಬ್ಬದ ಲೆಕ್ಕದಲ್ಲಿ ಕೊಡುವ ಹಾಗಿದ್ರೆ ಕೊಡು. ಇಲ್ವಾ ಬೇಡ. ಒಂದು ಇನ್ನೂರು ರೂಪಾಯಿ ಅಷ್ಟೇ. ಅಷ್ಟಕ್ಕೆ ಎಷ್ಟೊಂದು ಪ್ಲೀಡ್ ಮಾಡಬೇಕು ನಿನ್ಹತ್ರ. ಇನ್ನೊಂದು ವರ್ಷ ಕಳೀಲಿ... ನಾನು ಗ್ರಜಕ್ಯಿಯೇಟ್ ಆಗ್ತೀನಿ... ಆಮೇಲೆ ಕೆಲಸ...ಕೆಲಸ ಅಂದರೆ ಸಂಬಳ... ನನ್ನ ಕೈ ತುಂಬಾ ದುಡ್ವಿದ್ದಗ... ನಿನ್ನ ಯಾರು ಕೇಳ್ತಾರೆ? ನಾನೇ ನಿಂಗೆ ವಾರಕ್ಕೆ ಇನ್ನೂರು ರೂಪಾಯಿ ಕೊಡ್ತೀನಿ...?

    ಕೊಡುವಂತಿ... ಮೊದ್ಲು ಆರಿ ಹೋಗೋಕ್ಕೆ ಮುಂಚೆ ಕಾಫಿ ಕುಡಿ. ನಂಗೂ ನೆಮ್ಮದಿಯಿಂದ ಕಾಫಿ ಕುಡಿಯೋಕ್ಕೆ ಬಿಡು... ಆಚೆ ನಡೆದ ಅಮ್ಮನ ಹಿಂದೆಯೇ ನಡೆದಳು ಆವಂತಿ ಕಾಫಿ ಗುಡುಕರಿಸುತ್ತಾ.

    ನಂಗೆ ಇನ್ನೂರು ರೂಪಾಯಿ... ನಿಜವಾಗಿ ಸಾವಿರ ಬೇಕು... ಇನ್ನೂರಕ್ಕೆ ಆಡ್ಹಸ್ಟ್ ಮಾಡಿಕೋತೀನಿ...ಪ್ಲೀಸ್ Pಕೂಡಮ್ಮ...

    ಅಬ್ಬ! ಅದೆಷ್ಟು ಗೋಲುಹೊಯ್ದಕೊಳ್ತ್ಯಾ... ಕೊಡ್ತೀನಿ... ನೆಮ್ಮದಿಯಾಗಿ ಕಾಫಿ ಕುಡಿಯೋಕ್ಕೆ ಬಿಡು... ಗಾಯತ್ರಿ ಹೇಳಿದಾಗ, ಲೋಟ ಅಲ್ಲೇ ಇಟ್ಟು ತಾಯಿಯನ್ನು ತಬ್ಬಿದಳು ಆವಂತಿ.

    ಥ್ಯಾಂಕ್ ಯೂ ಅಮ್ಮ...

    ಏ... ಏ..... ನನ್ನ ಕಾಫಿ ಚೆಲ್ಲುತ್ತೆ... ಬಿಡು ನನ್ನ... ಓ... ನೋಡ ಸ್ಕೂಟರ್ ಶಬ್ಧ ಅಯ್ತು ನಿಮ್ಮಪ್ಪ ಬಂದರೇನೋ... ಬಾಗಿಲು ತೆರಿ...

    ಅಬ್ಬ! ಅದೇನು ಲವ್ವು... ಅಪ್ಪನ ಸ್ಕೂಟರ್, ಸ್ಕೂಟರ್ ಶಬ್ದ ಹೆಜ್ಜೆಯ ಸದ್ದು ಎಲ್ಲಾ ನಿಂಗೆ...

    ಹುಶ್‍ಶ್... ಸುಮ್ನೆ ಹೋಗಿ ಬಾಗಿಲು ತೆರಿ...

    ಆವಂತಿ ಬಾಗಿಲ ಬಳಿ ಧಾವಿಸಿದಳು.

    ನೀನು ಹಾಯಾಗಿ ಕೂತ್ಕೋ, ಅಪ್ಪಂಗೆ ನಾನು ಕಾಫಿ ಬೆರೆಸಿಕೊಡ್ತೀನಿ...

    ಕುಣಿಯುತ್ತಾ ಅಡುಗೆ ಮನೆಯತ್ತ ಓಡಿದವಳನ್ನು ನೋಡಿ ಹೆಂಡತಿಯತ್ತ ಹುಬ್ಬೇರಿಸಿದರು ಶಿವಶಂಕರ್.

    ಇವತ್ತು ಯಾವ ಮುಗ್ಸುಲಲ್ಲಿ ಎದ್ದೆ...? ಯಾವ ಒಳ್ಳೆಯ ಕೆಲಸ ಮಾಡಿದ? ಮಗಳ ಕೈಯ ಕಾಫಿ ಕುಡಿಯುವುದಕ್ಕೆ...?

    ಗಾಯತ್ರಿ ನಕ್ಕು ಬ್ರೀಫ್ ಕೇಸ್ ಇಸಿದುಕೊಂಡು ಒಳನಡೆದರು

    ಸಕ್ಕರೆ ಕಮ್ಮಿ ಇರಲಿ ಆವಂತೀ...

    ನಂಗೆ ಗೊತ್ತು ಅಪ್ಪ ನಿಮ್ಮ ಕಾಫಿ ಬ್ರೇನಲ್ಲಿ ಕಪ್ ಆ್ಯಂಡ್ ಸಾಸೆನಲ್ಲಿ ಕಾಫಿ ತಂದಾಗ ನಕ್ಕು ಕಪ್ಪನ್ನು ಕೈಗೆ ಗೊಗೊಂಡ್ರು ಶಿವಶಂಕರ್.

    ಭ್ರೀಫ್ ಕೇಸ್ ಇಟ್ಟು ಹೊರಬಂದ ಗಾಯಿತ್ರಿ ಕಣ್ಣರಳಿಸಿದರು.

    ಕಪ್ ಆ್ಯಂಡ್ ಸಾಸರ್ ಯಾಖೆ ತೆಗ್ಸೆ...? ಸ್ಟೀಲ್ ಲೋಟ ಇರಲಿಲ್ಲವೇ...?

    ಅಮ್ಮ ನಿಂಗೆ ಗೊತ್ತಲ್ಲ.. ಏನು ಮಾಡಿದ್ರೂ ಸ್ಟೈಲಾಗಿ ಮಾಡಬೇಕು. ಸ್ಟೀಲ್ ಲೋಡಾನ ಮೇಲೆ ಹೀಗೆ ಕೈಯಲ್ಲಿ ಇಟ್ಕೊಂಡು ಬಂದ್ರೆ ಏನು ಚೆನ್ನಾಗಿರುತ್ತೆ? ಟ್ರೆನಲ್ಲಿ ಕಪ್ ಆ್ಯಂಡ್ ಸಾಸೆ ಇಟ್ಕೊಂಡು, ಅದರಲ್ಲಿ ಒಂದು ಕಪ್ ನಲ್ಲಿ ಸಕ್ರೆ ಇಟ್ಕೊಂಡು ತಂದುಕೊಟ್ಟು... ಎಷ್ಟು ಶುಗರ್ ಬೇಕು ಅಂತ ಹೇಳಿ, ಹಾಕಿ ಅವರ ಮುಂದೆಯೇ ಕಲಕಿ ಕೊಪ್ ಆ್ಯಂಡ್ ಸಾಸೆದ ಅಲ್ಲೊಂದು ಕಡೆ ಜೋಡಿಸಿ ಬಿಟ್ಟು ಬಿಟ್ಟಿದ್ಯ ಅಪ್ಪ! ಕಾಫೀ ಹೇಗಿದೆ?

    ತುಂಬಾ ಚೆನ್ನಾಗಿದೆ ಆವಂತೀ...

    ಸ್ಸರಿ... ನಿರ್ಯಾ ಕಾಫಿ ಕೊಡೋಳ್ನ ವಿಚಾರಿಸಬೇಡಿ... ಹೋಗಳಬೇಡಿ... ಏ ಆವಂತೀ ಕಪ್ ಆ್ಯಂಡ್ ಸಾಸೆದ ತೊಳಗದು ಕಾಫೀ ಹಾಕ್ಸೆ ತಾನೇ...

    ಆ್ಞಂ... ತೊಳೀಬೇಕಿತ್ತಾ? ಓ... ನಾನು ಹಾಗೇ...

    ಅದಕ್ಕೇ ಹೇಳೋದು… ಇಲ್ಲದ ಪ್ರತಿಷ್ಠೆ... ಗಾಯತ್ರಿಯ ಮಾತನ್ನು ಆರ್ಧಕ್ಕೆ ತಡೆದರು ಶಿವಶಂಕರ್.

    ಕಪ್ ಕ್ಲೀನಾಗೇ ಇದೆ. ನೀನು ಅವಳು ಮಾಡಿದ್ದರಲ್ಲೇಲ್ಲಾ ತಪ್ಪು ಹಾಡುಕ್ತಾ ಇದ್ರೆ ಅವ್ಳು ಕೆಲಸ ಕಲಿಯೋದು ಹೇಗೆ? ಒಳ್ಳೆ ಮಾತಿನಲ್ಲಿ ಹೇಳೋಕ್ಕೇ ಬರಲ್ಲ ನಿಂಗೆ... ತೋಗೋ ಆವಂತೀ ಈಗ ತೊಳೆದಯು ಇಟ್ಟುಬಿಡಮ್ಮ...

    ಓ.ಕೆ. ಅಪ್ಪ... ತಾಯಿಯತ್ತ ಮುಖ ತಿರುಗಿಸಿ, ಕಪ್ ಆ್ಯಂಡ್ ಸಾಸನ್ ತೆಗೆದುಕೊಂಡು ಒಳನಡೆದಳು ಆವಂತಿ.

    ನೋಡು, ಆ ಟ್ರೇ ಅನ್ನೂ ತೊಗೊಂಡು ಹೋಗು...ಗಾಯತ್ರಿ ಕೂಗು ಹಾಕಿದರು.

    ಇರೇ... ಅದು ಇಟ್ಟಿಬಂದು ತೊಗೊಂಡು ಹೋಗ್ತಾಳೆ. ನಿಂಗೆ ಎಲ್ಲಾದ್ದಕ್ಕೂ ಆತುರ...

    ನೀವು ಹೀಗೆ ಅವಳಿಗೆ ಎಲ್ಲಾದಕ್ಕೂ ಸಪೋರ್ಟ್ ಮಾಡ್ತಾ ಇರಿ. ತಲೆಮೇಲೆ ಕೂತ್ಕೋತಾಳೆ. ಅವಳಿಗೇನು ವಯಸ್ಸು ಕಮ್ಮಿನಾ...? ಬರೋ ತಿಂಗಳು ಇಪ್ಪತ್ತೆಂಟಕ್ಕೆ ಇಪ್ಪತ್ತು ವರ್ಷವಾಗುತ್ತೆ ನಾನು ನಿಮ್ಮನ್ನು ಮದುವೆಯಾದಾಗ ನಂಗೆ ಇಪ್ಪತ್ತು ವರ್ಷ ಆಗಿತ್ತು, ನಿಮ್ಮ ಮನೆಗೆ ಬಂದು ಸಂಸಾರ ನಡೆಸಲಿಲ್ಲವೇ... ಇವ್ಳು...

    ಓ ಗಾಯತ್ರಿ... ಇರು, ಇರು. ಇನ್ನೊಂದು ಸ್ವಲ್ಪ ಲೆಕ್ಕ ಹಾಕೋಣ ಮದುವೆಯಾದ ವರ್ಷಕ್ಕೇ ಆವಂತಿ ಹುಟ್ಟಿದ್ರು. ಅಂದ್ರೆ... ಈಗ ನಿಂಗೆ ನಲವತ್ತು ವರ್ಷ ಆಗ್ಹೋಯ್ತಲೇ... ಗಾಯತ್ರಿ ನಲವತ್ತು ವರ್ಷ ಆಂದ್ರೆ...

    ಅಯ್ಯೋ, ಸುಮ್ಮನಿರ್ರಿ... ನಂಗೆ ನಲವತ್ತು ಆಯ್ತು ಆಂಸ್ರೆ, ನಿಮ್ಗೆ ನಲುವತ್ತೆಂಟು ವರ್ಷ ಆಯ್ತು ಗೊತ್ಥಾ... ಇನ್ನೆರಡು ವರ್ಷ ಕಳೆದರೆ ಅರ್ಧ ಸೆಂಚುರಿ ಮುಗೀತು... ರೀ... ತುಂಬಾ ವಯಸ್ಸಾದ ಹಾಗೆ ಕಾಣ್ತೀನಾ? ನಿಜ ಹೇಳಿ... ಗಂಡನತ್ತ ತಿರುಗಿ ಸಣ್ಣಗೆ ನಕ್ಕು, ಅವರ ಉತ್ತರಕ್ಕಾಗಿ ಕಾತುರತೆಯಿಂದ ಅವರತ್ತಲೇ ದಿಟ್ಟಿಸಿದರು ಗಾಯತ್ರಿ.

    ಇಲ್ಲಿಂದಲೇ ಹೇಳಲಾ? ಅಥವಾ ಬಳಿ ಬಂದು ಹೇಳಲಾ? ಹೆಂಡತಿಯತ್ತಲೇ ನೋಡುತ್ತಾ ಮೇಲೆದ್ದು ಅವಳ ಬಳಿ ಸಾಗಿದರು ಶಿವಶಂಕರ್, ಕೈಹಿಡಿಯುವ ವೇಳೆಗೆ ಮುಂದಿನ ಬಾಗಿಲು ನೂಕಿಕೊಂಡು ಸಾಗರ್, ಅಡುಗೆ ಮನೆಯಿಂದ ಆವಂತಿ ಇಬ್ಬರೂ ಹಾಲ್‍ಗೆ ಬಂದರು, ಗಂಡನೆಡೆಗೆ ಬಿರುನೋಟ ಬೀರಿ ಹಿಂದೆ ಸರಿದರು ಗಾಯತ್ರಿ.

    ಕಾಲೇಜಿಲ್ಲ ಏನಿಲ್ಲ... ಮನೆಯಲ್ಲಿದ್ದುಜಕೊಂಡು ಓದದೆ ಎಲ್ಲಿಗೆ ಹೋಗಿದ್ದೆ...? ಶಿವಶಂಕರ್ ಮಗನನ್ನು ಪ್ರಶ್ನಿಸಿದರು.

    ಹೂಂ, ಸರಿಯಾಗಿ ಕೇಳಿ, ಬೇಗ ಬರ್ತೀನಿ ಅಂತ ಎರಡೂವರೆಗೆ ಹೋದೋನು... ಈಗ ಆರೂವರೆಗೆ ಬರ್ತಾಇದಾನೆ...ಗಾಯತ್ರಿ ಕೋಪದಿಂದ ಹೇಳಿದರು.

    ಆವಂತಿ... ಉದಗರ್ಗೂ ಕಾಫಿ ಮಾಡಿಕೊಡಮ್ಮ ಆಚೆ ಬಂದ ಆವಂತಿಗೆ ಹೇಳಿದರು ಅವಳು ಮುಖ ತಿರುಗಿಸಿದಳು.

    ನಿನ್ನ ಮುದ್ದು ಮಗಂಗೆ ನೀನೇ ಕಾಫಿ ಬರೆಸಿಕೊಡು. ನಂಗೆ ಬೇರೆ ಕೆಲಸವಿದೆ...

    ನೋಡ್ರಿ ಅವಳ್ನ...

    ಗಾಯತ್ರಿ, ಸ್ವಲ್ಪ ಸುಮ್ಮನಿರು. ಇಷ್ಟು ಹೊತ್ತು ಎಲ್ಲಿದ್ದ ಅಂತ ಅವನ್ನ ವಿಚಾರಿಸ್ತಾ ಇದ್ರೆ. ಕಾಫಿ ಮಾಡಿಕೊಂಡು ಅಂತ ಉಪಚಾರ ಮಾಡ್ತಾ ಇದ್ಯಲ್ಲ... ಮೊದ್ಲು ಅವ್ನು ಉತ್ತರಿಸಲು...

    ಏನಪ್ಪ ನೀವು! ನನ್ನ ಫ್ರೆಂಡÁ್ಸ್ಲ್ಲ ರಾತ್ರಿ ಹತ್ತು ಗಂಟೆಗೆ ಮನೆಗೆ ಹೋದ್ರೂ ಅವರಪ್ಪ, ಅಮ್ಮ ಏನೂ ಅನ್ನೊಲ್ಲ. ನೀವು ಆರೂವರೆಗೆ ಮನೆಗೆ ಬವಂದ್ರೂ ಒಳ್ಳೆ ಮಿಲಿಟ್ರೀಲಿ ಮಾಟೋ ಹಾಗೆ ಕೋರ್ಟ್ ಮಾರ್ಷಲ್ ಮಾಡ್ತಾ ಇದ್ದೀರಿ... ಸಾಗರ್ ಮೂತಿ ಊದಿಸಿದ.

    ಹಾಗಲ್ಲ ಸಾಗರ್... ಗಾಯಿತ್ರಿ ಸಮಜಾಯಿಷಿ ನೀಡಲು ಮುಂದಾದಾಗ ಶಿವಶಂಕರ್ ಅವರತ್ತ ಗಡಸು ನೋಟ ಬೀರಿದರು.

    ನಾನು ಮಾತಾಡ್ತೀನಿ ಅಂದೆನಲ್ಲ. ನೀನು ಸ್ವಲ್ಪ ಸುಮ್ಮನಿರು ಸಾಗರ್! ನಿನ್ನ ಫ್ರೆಂಡ್ಸ್ ಅಪ್ಪ-ಅಮ್ಮಂದಿರು ವಿಚಾರಿಸೋಲ್ಲ ಅಂದ್ರೆ, ನೀನು ಒಳ್ಳೆ ಫ್ಯಾಮಿಲಿಯಿಂದ ಬಂದಿರೋ ಹುಡುಗರನ್ನ ಫ್ರಂಡ್ಸ್ ಮಾಡಿಕೊಂಡಿಲ್ಲ ಅಂತ ಅರ್ಧ. ಈಗ ಎರಡನೆಯ ಪಿಯುಗೆ ಓದೋಕ್ಕೆ ಅಂತ ರಜಾ ಕೊಟ್ಟಿದ್ದಾರೆ. ನೀನು ಬೀದಿ ಬೀದಿ ಅಲೀತಾ ಇದ್ರೆ? ಮೊದ್ಲೇ ಬೇಸಿಗೆಯ ಬಿಸಿಲು, ಮಧ್ಯಾಹ್ನದ್ಹೊತ್ತು ಆಚೆ ಎಂಥ ಬಿಸಿಲಿರುತ್ತೇ ಮನೇಲಿ ಕೂತ್ಕೊಂಡು ಓದೋಕ್ಕೆ ಏನು ತಂದೆಯ ಉದ್ದನೆಯ ಭಾಷಣವನ್ನು ತಲೆ ತಗ್ಗಿಸಿ ಕೇಳಿಸಿಕೊಂಡ ಸಾಗರ್.

    ಉತ್ತರ ಕೊಡು. ಸುಮ್ನೆ ತಲೆತಗ್ಗಿಸಿ ನಿಂತು ಬಿಟ್ರೆ... ದನಿಯೆತ್ತರಿಸಿದರು ಶಿವಶಂಕರ್.

    ನಾನೇನು ಬೀದಿ ಆಲೀತಿರಲಿಲ್ಲ. ನನ್ನ ಫ್ರೆಂಡ್ ಸಂದೀಪನ ಮನೆಗೆ ನೋಟ್ಸ್ ತರಲು ಹೋಗಿದ್ದೆ... ಮೆಲ್ಲನೆ ಉತ್ತರಿಸಿದ ಸಾಗರ್.

    ಹಾಗಾದರೆ ನೋಟ್ಸ್ ಎಲ್ಲಿ? ಬರಿದಾಗಿದ್ದ ಅವನ ಕೈಗಳನ್ನು ನೋಡಿದರು ಶಿವ ಶಂಕರ್.

    ಇಲ್ಲೇ ಒಟ್ಟಿಗೆ ಓದ್ಕೊಳೋಣ ಕಣೋ... ನೀನು ನೋಟ್ಸ್ ತೂಗೊಂಡು ಹೋದ್ರೆ ನಾನೇನು ಮಾಡಲಿ ಅಂದ ಸಂದೀಪ. ಅದಕ್ಕೆ ಇಷ್ಟೊತ್ತು ಅವನ ಮನೇಲಿ ಓದ್ತಾ ಇದ್ದೆ.

    ಏನೋ ಒಂದು ಹೇಳ್ತ್ಯಾ... ಈಗ ಓದ್ಕೋ ಹೋಗು... ಸಿಡುಕಿದರು ಶಿವಶಂಕರ್ ಮುಖ ಮರೆಸಿಕೊಂಡು ಅಲ್ಲಿಂದ ಓಡಿದ ಸಾಗರ್, ರೂಮಿನ ಬಾಗಿಲಲ್ಲಿ ನಿಂತಿದ್ದ ಆವಂತಿ ಕಿಸಕ್ಕನೆ ನಕ್ಕಳು.

    ಇರೋ, ಕಾಫಿ ಕುಡಿದು ಹೋಗು... ಬಿಸಿ ಮಾಡಿ ತರ್ತೀನಿ... ಗಾಯತ್ರಿ ಕೂಗಿದಾಗ, ಸಾಗರ್ ರೂಮಿನಿಂದ ಉತ್ತರಿಸಿದ.

    ಬೇಡಮ್ಮ... ಸಂದೀಪನ ಮನೇಲಿ ಆಯ್ತು...

    ಇಷ್ಟು ಅನ್ನಿಸಿಕೊಂಡ ಮೇಲೆ ತಿರುಗಿ ಬರ್ತಾನಾ ಕಾಫಿಗೆ? ಕಾಫಿ ಇರ್ಲಿ ನೀನು ಐಸ್ ಕ್ರೀಮ್ ಕೊಡ್ತೀನಿ ಅಂದ್ರು ಆಚೆ ಬರಲ್ಲ ಅವ್ನು...ಆವಂತು ಕೇಳಿದಾಗ... ಶಿವಶಂಕರ್ ಹುಬ್ಬೇರಿಸಿದರು.

    ಏನಂದ್ರು ಆವನ್ಗೆ...? ಓದ್ಕೋ ಅಂತ ಕೂಡ ಹೇಳಬಾರದಾ? ಗಾಯತ್ರಿ ಶುರುಮಾಡಿದಾಗ ಆವಂತಿ ತಲೆಯಾಡಿಸಿದಳು.

    ಓ.ಕೆ.ಓ.ಕೆ, ಫರ್ ಗೆಟ್ ಇಟ್. ನಾಉ ಬರ್ತಾ ಇದ್ದ ಹಾಗೆ ನಿಂಗೆ ಏನೋ ಹೇಳಲು ಬಂದೆ. ಆದ್ರೆ... ಕಾಫೀ ಕುಡಿ ಅಂದಿ. ಅಪ್ಪ ಬಂದ್ರು... ಸಾಗರ್ ಬಂದ... ನಾನು ಹೇಳಬೇಕೆಂದಿದ್ದ ವಿಚಾರ ನೀನು ಕೇಳಲೇ ಇಲ್ಲ...

    ಏನೇ ಅದು ? ನಿಂಗೆ ಇನ್ನೂರು ರೂಪಾಯಿ ಕೊಡ್ತೀನಿ ಬಿಡು.

    ಥ್ಯಾಂಕ್! ಅಮ್ಮ! ನಮ್ಮ ಸಿತಾರ್ ಕ್ಲಾಸಿಗೆ ನಾಳೆಯಿಂದ ಒಬ್ಬ ಹೊಸ ಹುಡುಗ ಬರ್ತಾನಂತೆ... ತಾಯಿಯ ಭುಜದ ದುತ್ತಕ್ಕೆ ಬಳಸಿದಳು ಆವಂತಿ.

    ಅವ್ನು ಸೆಹಲಿಯಲ್ಲಿ ನಮ್ಮ ಗುರುಗಳ ಹತ್ತಿರ ಸಿತಾರ್ ಕಲಿತ್ತಿದ್ದಾನಂತೆ. ಇಲ್ಲಿ ಎಲ್ಲರಿಗಿಂತ ನಾನೇ ಚನ್ನಾಗಿ ನುಡಿಸೋದು. ಈಗ ಬ್ನು ಬಂದು, ನನಗಿಂತ ಚೆನ್ನಾಗಿ ನುಡಿಸಬಿಟ್ರೆ...?

    ನುಡಿಸಿದ್ರೆ ನುಡಿಸ್ಲಿ ಬಿಡು...

    ನಂಗೆ ಬ್ನು ಇಷ್ಟವಿಲ್ಲ ಅವ್ನು ದೆಹಲೀಲೇ ಇದ್ಕೊಂಡು ಹೋಗ್ಲಿ ಇಲ್ಲಿಗೆ ಬರೋದು ಬೇಡ. ಐ ಹೇಟ್ ಹಿಮ್...

    ಅಯ್ಯೋ ರಾಮ, ನೀನು ಅವನ್ನ ನೋಡೇ ಇಲ್ಲ... ಅವ್ನು ಸಿತಾರ್ ನುಡಿಸೋದು ಕೇಳೇ ಇಲ್ಲ... ಪಾಪಾ...

    ನೋಡು ನೋಡು... ನೀನು ಆಗ್ಲೇ ಅವನಿಗೆ ಪಾಪಾ ಅಂತ ಹೇಳ್ತಾ ಇದಾ... ಐ ಹೇಟ್ ಹಿಮ್... ಐ ರಿಯಲಿ ಹೇಟ್ ಹಿಮ್... ಮುಖ ಊದಿಸಿಕೊಂಡು ಒಳನಡೆದಳು ಆವಂತಿ.

    2

    ನಿಮಗೆ ಕುತೂಹಲ ಹುಟ್ಟಿರಬೇಕಲ್ಲವೇ? ಈ ಆವಂತಿ ಯಾರು? ಅವಳ ತಮ್ಮ ಸಾಗರ್ ಚೆನಾಗಿ ಓದ್ತಾನಾ? ನಾಳೆ ಆವಂತಿಯ ಕ್ಲಾಸಿಗೆ, ಅದೇ ಸಿತಾರ್ ಕ್ಲಿಸಿಗೆ ಬರೋ ಹುಡುಗ ಯಾರು, ಏನು ಅಂತ... ಅದೆಲ್ಲಾ ಹೇಳ್ತೀನಿ. ಮೊದಲು ಆವಂತಿಯ ತಂದೆ-ತಾಯಿಯ ಪರಿಚಯ ಮಾಡಿಕೊಂಡುಬಿಡಿ. ಇದೇನಿದು... ಕಥೆ ಸರಾಗವಾಗಿ ಓದ್ತಾ ಇದ್ರೆ...ಊಟದ ಮದ್ಯೆ ಕಲ್ಲು ಅನ್ನೋ ಹಾಗೆ ಈ ಲೇಖಕಿ ಯಾಕೆ ಬಾಯಿ ಹಾಕ್ತಾಳೆ ಅಂತೀರಾ? ಪ್ಲೀಸ್... ಹಾಗೆ ಅಂದ್ಕೋಬೇಡಿ. ಊಟದ ಜತೆಗಿನ ಉಪ್ಪಿನಕಾಯಿ ಅಂತ ಅಂದುಕೊಂಡು ನನ್ನ ಮಾತೂ ಕೇಳಸಿಕೊಳ್ಳಿ. ಆವಂತಿ ನಮ್ಮ ಪಕ್ಕದ ಮನೆ ಹುಡುಗಿ. ಶಿವಶಂರ್ ಹಾಗು ಗಾಯತ್ರಿಯವರ ಪುತ್ರಿ. ನಿಜಗುಣ ಕಾಲೇಜಿನಲ್ಲಿ ಕೊನೆಯ ವರ್ಷದ ಬಿ,ಕಾಂ ವಿದ್ಯಾರ್ಥಿನಿ. ಅಕೌಂಟೆನ್ಸಿ, ಕಾಮರ್ಸ್ ವಿಷಯಗಳನ್ನು ತೆಗೆದುಕೊಂಡಿರುವ ಆವಂತಿಗೆ ಮುಂದೆ ಚಾರ್ಟರ್ಡ್ ಅಕೌಂಟೆಂಟ್ ಆಗಿ ಕೆಲಸ ಮಾಡುವ ಆಸೆ ಇದೆ. ಸಾಹಿತ್ಯದಲ್ಲೂ ಆಸಕ್ತಿ ಇದೆ. ಒಂದೆರಡು ಕಥೆ ಬರೆದು ಪ್ರಕಟಿಸಿರುವ ನನ್ನ ಮೇಲೆ ಅಭಿಮಾನ ಅವಳಿಗೆ, ನನ್ನನ್ನು ಇಷ್ಟಪಡುವ ಅವಳನ್ನು ಕಂಡರೆ ನನಗೂ ಇಷ್ಟ. ದಿನಕ್ಕೆ ಒಂದು ಬಾಯಿಯಾದರೂ ಅಂಟೀ ಎಂದು ನಮ್ಮ ಮನೆಗೆ ಬಂದು... ಒಂದಿಷ್ಟು ಮಾತಾಡಿ.ಅಮ್ಮನ್ನ ದೂರಿ, ತಮ್ಮನ ಮೇಲೆ ಚಾಡಿ ಹೇಳಿ, ಸ್ನೇಹಿತರ ಬಗ್ಗೆಯೆಲ್ಲಾ ಬಿಚ್ ಮಾಡಿ ಹೋಗ್ತಾಳೆ.

    ಜಿಂಕೆ ಕಂಗಳ ಚಲುವೆ ಆವಂತಿ. ಕೆಂಪು ಮಿಶ್ರೀತ ಬಿಳುಪು ಮೈಬಣ್ಣ ಪುಟ್ಟ ಮೂಗು ತುಟಿ. ಸೊಂಟದವರೆಗೆ ಹರಡಿರುವ ಕಪ್ಪ ತಲೆಗೂದಲು, ಬಳಕುವ ಮೈ... ಆವಂತಿಯನ್ನು ಸೊಂಟದವರೆಗೆ ಸಾಲಿಗೆ ಸೇರಿಸಿದೆ. ಅವಳ ಸೌಂದರ್ಯದ ಅರಿವಿದರ ಮುಗ್ಧೆಯೇನಲ್ಲ ಅವಳು. ತನ್ನ ಸೌಂದರ್ಯದ ಅರಿವಿದೆ ಅವಳಿಗೆ. ಅದು ಎದ್ದು ಕಾಣುವಂತೆ ಶೃಂಗರಿಸಿಕೊಳ್ಳುವ ಕಲೆಯೋ ಗೊತ್ತಿದೆ ಅವಳಿಗೆ.. ಚೂಡಿದಾರ್, ಜೀನ್ಸ್ ಪ್ಯಾಂಟು, ಟೀಶರ್ಟ್... ಲಾಂಗ್ ಸ್ಕುರ್ಟ್... ದಿನಕ್ಕೆ ಒಂದೊಂದು ಬಗೆಯ ದಿರಿಸು... ಅಲಂಕಾರ ಅಮ್ಮನೊಂದಿಗೆ ಜಗಳ, ಗಲಾಟೆ, ಅವಳೊಬ್ಬ್ಳಿದ್ದರೆ ಎಂಟು ಜನ ಇದ್ದಂತೆ, ಅದೇ ಸಾಗರ್... ಗಂಭೀರಸ್ಥ ಹಾಗಾಗಿ ಅಷ್ಟು ಬಂದು ಹೋಗಿ ಮಾಡುವುದಿಲ್ಲ. ಆವಂತಿಯಿಂದಾಗ ಈ ರಸ್ತೆಯಲ್ಲಿರುವ ಮನೆಗಳ ಮಂದಿಯಲ್ಲೆಲ್ಲಾ ಏನೋ ಬಾಂಧವ್ಯ. ಎಲ್ಲರ ಮನೆಗಳಿಗೂ ಸಲೀಸಾಗಿ ಹೋಗುತ್ತಾಳೆ. ಬಾಯಿಗೆ ಬಂದದ್ದು ಮಾತಾಡುತ್ತಾಳೆ. ನನಗಂತೂ ಅವಳು ಬರದಿದ್ದರೆ ರಾತ್ರಿ ನಿದ್ರೆಯೇ ಬರುವುದಿಲ್ಲ. ನಾನೋ ಒಂಟಿ ಜೀವಿ ಆಫೀಸಿನಲ್ಲಿ ಆಫೀಸರ್. ಗಂಭೀರವಾಗಿಯೇ ಇರಬೇಕು ಮನೆಯಲ್ಲಿ... ಯಾರೂ ಇಲ್ಲ... ಅಡುಗೆಯವರು, ಕೆಲಸದವಳು... ಎಲ್ಲಾ ಅವರವರ ಕೆಲಸ ಮಾಡಿಕೊಂಡೇ ಇರಲ್ಲ. ಯಾರನ್ನೂ ಹಚ್ಚಿಕೊಂಡು ಇರಲ್ಲ, ಆದರೆ ಆವಂತಿ ಅದ್ಹೇಗೋಇ ನನ್ನ ಆವರಿಸಿಕೊಂಡಿದ್ದಾಳೆ. ಅವಳ ಚಟುವಟಿಕೆ, ಜೀವನೋತ್ಸಾ ಹದಿಂದ ನನಗೆ ವಯಸ್ಸಾಗಿದೆ ಎಂದು ಮನವರಿಗೆ ಮಾಡಿಕೊಟ್ಟಿದ್ದಾಳೆ… ಹಾಗೆಂದು ನಾನೆಂದೂ ಅವಳ ಹಾಗೆ ಇರಲಿಲ್ಲ. ಅವಳು ಒಂದು ಲೈವ್‍ವೈರ್ ಥರದ ಗಲಗಲ ಮಾತು, ಕಿಲಕುಲ ನಗು... ಝಣಝಣ ಓಡಾಟ. ಎಲ್ಲರೂ ಕೊಂಚ ಡಲ್ಲಾಗಿರುವ ಆವರ ಮನೆಯಲ್ಲೂ ಅವಳೇ ಕಾಮಲ ಬಿಲ್ಲು ಆ ಕಾಮನ ಬಿಲ್ಲಿನ ಬಣ್ಣಗಳ ಒನಪೇ ಈ ಕಥೆ. ಮಧ್ಯಮ ವರ್ಗದ ಕುಟುಂಬ. ಶಿವಶಮಕರ್ ಯಾವುದೋ ಪ್ರೈವೇಟ್ ಕಂಪೆನಿಯಲ್ಲಿ ಅಕೌಂಟೆಂಟ್. ಗಾಯತ್ರಿ ಗೃಹಿಣಿ. ನೆಮ್ಮದಿಯ ಸಂಸಾರ.

    3

    "ಕಾಲೇಜಿಗೆ ಹೊತ್ತಾಗಲಿಲ್ಲವೇನೇ ಆವಂತಿ... ಸಾಕು, ಸಿತಾರ್ ನುಡಿಸುದ್ದು... ನೋಡು, ಡಬ್ಬಿಗೆ ಚಪಾತಿ ಹಾಕಿದ್ದೇನೆ... ಹೊರಡು...: ಗಾಯತ್ರಿ ಅಡುಗೆ ಮನೆಯಿಂದಲೇ ಕೂಗು ಹಾಕಿದರು.

    "ನಾನು ಕಾಲೇಜಿಗೆ ಹೋಗ್ತಾ ಇಲ್ಲ. ಸಿತಾರ್ ಪ್ರ್ಯಾಕ್ಟೀಸ್ ಮಾಡಬೇಕು... ನಿಂಗೆ ನಿನ್ನೆನ್ನೇ ಹೇಳಿಲ್ಲವೇ? ಇವತ್ತು ಸಂಜೆ ನಮ್ಮ ಗುರುಗಳ, ಗುರುಗಳ ಬಳಿ ಕಲಿತ

    Enjoying the preview?
    Page 1 of 1