Discover millions of ebooks, audiobooks, and so much more with a free trial

Only $11.99/month after trial. Cancel anytime.

Tamasoma Jyothirgamaya
Tamasoma Jyothirgamaya
Tamasoma Jyothirgamaya
Ebook238 pages2 hours

Tamasoma Jyothirgamaya

Rating: 0 out of 5 stars

()

Read preview

About this ebook

Geetha B.U. is one of the famous authors in Kannada. She has also written in serials. She currently lives in Bangalore.
LanguageKannada
Release dateAug 12, 2019
ISBN6580202700578
Tamasoma Jyothirgamaya

Read more from Geetha B.U.

Related to Tamasoma Jyothirgamaya

Related ebooks

Reviews for Tamasoma Jyothirgamaya

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Tamasoma Jyothirgamaya - Geetha B.U.

    http://www.pustaka.co.in

    ತಮಸೋಮ ಜ್ಯೋತಿರ್ಗಮಯ

    Tamasoma Jyothirgamaya

    Author :

    ಗೀತಾ ಬಿ.ಯು.

    Geetha.B.U

    For more books
    http://www.pustaka.co.in/home/author/geetha-bu

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಅಧ್ಯಾಯ-1

    ನನ್ನ ಕಥೆ ಬರೆಯಬೇಕೆಂಬುದು ನನ್ನ ಬಲು ದಿನದ ಬಯಕೆ. ಹೆಬ್ಬಯಕೆ ಎಂದೆ ಹೇಳಬೇಕು. ಇದು ನನ್ನ ಬಾಳಿನದೇ ಕಥನ. ಬರೆಯಲು ಉತ್ಸಾಹವಿದೆ. ಅಷ್ಟೇ ಹಿಂಜರಿಕೆಯೂ ಇದೆ.

    ಚೆನ್ನಾಗಿ ಓದಿ ಡಿಗ್ರಿ ಪಡೆದು, ಹಣ ಸಂಪಾದಿಸುತ್ತಿದ್ದರೂ ವರದಕ್ಷಿಣೆ ಪಿಡುಗಿಗೆ ಬಲಿಯಾಗುವ ಹೆಣ್ಣುಗಳ ಕಥೆ, ಗಂಡಿನ ದಬ್ಬಾಳಿಕೆಗೆ ಬಲಿಯಾಗುವ ಹೆಣ್ಣುಗಳ ಕಥೆಯೂ ಹಲವಾರು. ವಿದ್ಯೆ, ಹಣ ಎಲ್ಲಾ ಇದ್ದರೂ ಮಾನಸಿಕವಾಗಿ ದುರ್ಬಳಲಾದ ಹೆಣ್ಣು. ಅನುಕಂಪಕ್ಕಿಂತ ನನ್ನಲ್ಲಿ ಬೇಸರವನ್ನುಂಟು ಮಾಡುತ್ತಾಳೆ ಈಗ. ಆದರೆ ಮುಂಚೆ ಅಂಥವುಗಳನ್ನು ಪತ್ರಿಕೆಗಳಲ್ಲಿ ಓದಿದಾಗ, ನನ್ನನ್ನು ಆ ತರಹ ಶೋಷಣೆಗೆ ಒಳಗಾದ ಹೆಣ್ಣುಗಳೊಡನೆ ಹೋಲಿಸಿಕೊಂಡು ನನ್ನದೇ ಸ್ಥಿತಿಯಾಗಿದ್ದರೆ ಸೋದರ ಬಾಂಧವ್ಯ ಕಲ್ಪಸಿಕೊಳ್ಳುತ್ತಿದ್ದೆ. ನನಗಿಂಥ ಕಡೆಯಾಗಿದ್ದರೆ ಮರುಕಪಡುತ್ತಿದ್ದೆ. ತೀರಾ ಕಷ್ಟಪಟ್ಟು ಸಾವನ್ನಪ್ಪುವ ಹೆಣ್ಣುಗಳ ಕಥೆ ಕೇಳಿ, ‘ಸದ್ಯ ನನ್ನ ಪರಿಸ್ಥಿತಿ ಹಾಗಿಲ್ಲವಲ್ಲ. ಅವಳ ಗಂಡ ಬೆಂಕಿ ಇಟ್ಟು ಸುಟ್ಟು ಸಾಯಿಸಿದ. ನನ್ನ ಗಂಡ ಬರೀ ಆಗಾಗ ಬಂದು ಏಟು ಹಾಕುತ್ತಾನಷ್ಟೇ’ ಎಂದು ಇರುವ ಸ್ಥಿತಿಗೆ ಹೊಂದಿಸಿಕೊಳ್ಳುತ್ತಿದ್ದೆ. ಆದರೆ ದೇಹಕ್ಕೆ ಬೀಳುತ್ತಿದ್ದ ಆ ಒಂದೊಂದು ಏಟಿನಿಂದ ಮನಸ್ಸು ಎಷ್ಟು ಘಾಸಿಗೊಳ್ಳುತ್ತಿತ್ತು!

    ಸುಟ್ಟು ಸುಡಿಸಿಕೊಂಡು ಸತ್ತ ಮೇಲೆ, ಜೀವವೇ ಇಲ್ಲವಾಗುವಾಗ, ಮಾನಸಿಕ ಚಿತ್ರ ಹಿಂದೆ ಸಾವು ಬರುವ ಮುಂಚಿನ ಕೆಲವು ನಿಮಿಷಗಳು ಮಾತ್ರ.

    ಆದರೆ ಏಟು ತಿಂದು ಬದುಕಿರುವ ಹೆಣ್ಣಿನ ಮನಸ್ಸು, ಎಷ್ಟು ಘಾಸಿಗೊಳ್ಳುತ್ತದೆ ಎಂಬುದು ಅನುಭವಿಸುವವರಿಗೇ ಗೊತ್ತು.

    ನನ್ನ ದೇಹ, ಮನಸ್ಸು ಎರಡೂ ಕಲ್ಲು ಮಾಡಿಕೊಂಡಿದ್ದೇನೆ ಎಂದುಕೊಂಡಿದ್ದೆ ನಿಜ. ಮನಸ್ಸು ಕಲ್ಲೇ ಆಗಿತ್ತು. ಆದರೆ ಕಲ್ಲಾದರೂ ಎಷ್ಟು ಏಟು ಅಂತ ತಡೆಯುತ್ತದೆ, ಒಡೆದು ಚೂರಾಯಿತು.

    ಆದರೆ ನಾನು ಆ ಚೂರುಗಳನ್ನೆಲ್ಲಾ ಎಸೆದು ಮನಸ್ಸಿಲ್ಲದ ಹೆಂಗಸಾಗಿ ಉಳಿಯಲಿಲ್ಲ. ದೇಹವಿಲ್ಲದ ಹೆಣ್ಣಾಗಿ ಇತರರ ಮನಸ್ಸಲ್ಲಿ ಉಳಿಯುವಂತೆ ಆತ್ಮಹತ್ಯೆಯನ್ನು ಮಾಡಿಕೊಳ್ಳಲಿಲ್ಲ. ಒಡೆದ ಚೂರು ಕಲ್ಲಿನಲ್ಲಿ ಕಲಾಕೃತಿಯನ್ನು ನಿರ್ಮಿಸುವಂತೆ ನನ್ನನ್ನು ನಾನು ಹತೋಟಿಗೆ ತಂದುಕೊಂಡು, ಪರಿಸ್ಥಿತಿಯನ್ನು ಎದುರಿಸಿ, ನಾನೂ ಮನಷ್ಯಳು, ‘ಲಿವ್ ಫಾರ್ ಲೈಫ್ ಸೇಕ್ ಯುವರ್‍ಸೆಲ್ಫ್’ ಎಂದು ತೋರಿಸಿದೆ. ಜೀವನ ಒಂದು ಸುಂದರವಾದ ಕೊಡುಗೆ. ಅದನ್ನು ಉತ್ತಮವಾಗಿ, ಬೇರೆಯವರಾರಿಗೂ ಸಮಾಧಾನವಾಗದೇ ಹೋದರೆ ಹೋಗಲಿ, ತಮಗಾದರೂ ಸಮಾಧಾನವಾಗುವ ಹಾಗೇ ಜೀವಿಸಬೇಕು. ನಾಲ್ಕು ಜನಕ್ಕೆ ಮೆಚ್ಚುಗೆಯಾಗುವ ಹಾಗೆ ಜೀವಿಸಬೇಕು ಎಂಬುದು ಪೊಳ್ಳು ಮಾತು. ಹೇಗೆ ಜೀವಿಸಿದರೂ ನಾಲ್ಕು ಜನ ಮೆಚ್ಚಬಹುದು ಅಥವಾ ತೆಗಳಬಹುದು. ಆದರೆ ಈ ರೀತಿಯ ಜೀವನ ನಡೆಸುತ್ತಿರುವವನಿಗೆ ಸಮಾಧಾನವಿರಬೇಕು ಅದು ಮುಖ್ಯ. ರಾಮನನ್ನು ಮೆಚ್ಚಿದವರಿದ್ದಾರೆ. ಹಾಗೆಯೇ ರಾವಣನನ್ನೂ ಮೆಚ್ಚಿದವರಿದ್ದಾರೆ. ಕೃಷ್ಣನನ್ನು ದೇವರು, ನಾಯಕ ಎಂದು ಪೂಜಿಸುವವರಿರುವೆಡೆಯಲ್ಲೇ ಅವನನ್ನು ತಂತ್ರಗಾರ ಎಂದು ಹಳಿಯುವವರೂ ಇದ್ದಾರೆ. ಧರ್ಮರಾಯನನ್ನು ಒಪ್ಪುವವರಿರುವೆಡೆಯಲ್ಲೇ ದುರ್ಯೋಧನನ್ನು ಸುಯೋಧನ, ಗಂಡಸು, ಛಲವಂತ, ಚಾಣಾಕ್ಷ ಎಂದು ಹೊಗಳುವವರಿದ್ದಾರೆ. ನಾಲ್ಕು ಜನರನ್ನು ಎಂದಿಗೂ ಒಪ್ಪಿಸಲಾಗುವುದಿಲ್ಲ. ನಮಗೆ ಈ ತಿಳಿವಳಿಕೆ ಜೀವನದಲ್ಲಿ ನಿಧಾನವಾಗಿ ಬಂತು. ಆದರೆ ಸದ್ಯ ಬಂತು.

    ಆಶ್ಚರ್ಯವೆಂದರೆ ನಾನು ಬೇಕು ಬೇಕು ಎಂದು ಅವರಿಗಾಗಿ, ಮಕ್ಕಳಿಗಾಗಿ ನನ್ನದೆಲ್ಲವನ್ನು ಬಿಟ್ಟು ಮಾಡುತ್ತಿದ್ದಾಗ ದೂರವಾಗುತ್ತಿದ್ದೆ. ಎಟುಕಲು ಕಷ್ಟವಾಗುತ್ತಿದ್ದ ಇವರು, ಬದುಕಲು ಕಷ್ಟವಾಗುತ್ತಿದ್ದ ಬದುಕು; ಬೇಡ, ನನ್ನಿಷ್ಟ ಎಂದು ಬೆನ್ನು ತಿರುಗಿಸಿದ ಮೇಲೆ ಹತ್ತಿರವಾಗಿದ್ದು.

    ನಿಜ ಎಲ್ಲೋ ಓದಿದ್ದೆ. ಬಂಡಾಯವೇಳದೆ ವ್ಯಕ್ತಿತ್ವ ಬಲಿ ಕೊಡುವ ಹೆಣ್ಣು, ಕಥೆಗೆ ಆಹಾರವಾಗುರತ್ತಾಳೆ. ಬಂಡಾಯವೆಂದು ಸೋಲುವ ಹೆಣ್ಣು, ಕಥೆಗೆ ಸಿಹಿ ಊಟ ಆಗುತ್ತಾಳೆ. ಸ್ವೇಚ್ಛಾಚಾರದ ಹೆಣ್ಣು ಕಥೆಗೆ ರಸದೌತಣವಾಗುತ್ತಾಳೆ ಎಂದು. ಆದರೆ ಬಂಡಾಯವೆದ್ದು ತನ್ನನ್ನು ತಾನೇ ನಿರೂಪಿಸಿಕೊಂಡು ಗೆಲ್ಲುವ ಹೆಣ್ಣು ಏನೂ ಅಲ್ಲ! ಕಥೆಯ ವಸ್ತುವೇ ಅಲ್ಲ ಎಂದು. ಅದು ಸುಳ್ಳು. ನಮ್ಮಂಥವರ ಕಥೇ ಪ್ರತಿಯೊಬ್ಬ ಶೋಷಿತ ಹೆಣ್ಣಿನಲ್ಲಿ ಛಲ ಮೂಡಿಸಿ, ಅವಳು ಧರ್ಯವಾಗಿ ಎದ್ದು ನಿಂತು ಸಮಾಜವನ್ನು, ಶೋಷಿಸುವವರನ್ನು ಎದುರಿಸಲು ಪ್ರೇರೇಪಿಸಬೇಕು; ಪ್ರೇರೇಪಿಸುತ್ತದೆ. ಆಗ ಈ ಸಮಾಜನ ಸ್ವರೂಪ ಬದಲಾಗುತ್ತದೆ. ನನ್ನ ಮಟ್ಟಿಗಂತೂ ನಿಜವಾಗಿದೆ. ಆದರೆ ಹೆಚ್ಚಿನ ಸಹಾಯವಿಲ್ಲದೆ, ನಾನು ನನ್ನ ಕಾಲ ಮೇಲೆ ನಿಲ್ಲುವ ವೇಳೆಗೆ ನಲ್ಲವತ್ತನೆಯ ವಸಂತವನ್ನು ಸಮೀಪಿಸುತ್ತಿದ್ದೇನೆ. ಮೊದಲೇ ಈ ಬುದ್ಧಿ ಬಂದಿದ್ದರೆ ಎನ್ನಿಸುತ್ತದೆ.

    ನೀವೂ ಓದಿ, ಕಥೆಯ ಹಾಗೆ ಬರೆದಿದ್ದೇನೆ. ನನ್ನ ಬಾಲ್ಯ ನನಗೆ ಹೆಚ್ಚು ನೆನಪಿಲ್ಲ. ಕಥೆಯ ಓಟಕ್ಕೆ ಅಗತ್ಯವೂ ಇಲ್ಲ. ನೆನಪಿರುವ ಒಂದೆರಡು ತುಣುಕುಗಳನ್ನು ಸೇರಿಸಿದ್ದೇನೆ. ಕಥೆಯ ಓಟವಿರುವುದೇ ನನ್ನ ಮದುವೆಯಾಗಿ ಹದಿನಾಲ್ಕು ವರ್ಷದ ಅನಂತರ.

    ಎಲ್ಲಾ ಸರಿ. ಈಗ ಮುಂಚಿಗಿಂತ ನೆಮ್ಮದಿಯಾಗಿದ್ದೇನೆ. ಆದರೆ ನನ್ನ ವ್ಯಕ್ತಿತ್ವದಲ್ಲಿ ಒಂದು ಮಧುರವಾದ ಭಾಗ ಸತ್ತು ಹೋಗಿದೆ. ಒಂದು ಹೆಣ್ಣು, ಮನೆಯಲ್ಲಿ ಗೃಹಿಣಿಯಾಗಿರುವ ಒಂದು ಹೆಣ್ಣು, ಆ ಮನೆಯಲ್ಲಿ ಇರುವ ಗಂಡ, ಮಕ್ಕಳಿಗೆಲ್ಲಾ ಪೂರಕವಾಗಿ ಅವರ ಬೆಳವಣಿಗೆಗೆ ಕಾರಣಕರ್ತಳಾಗಿ ಸಮಾಜಕ್ಕೆ ನೀಡುತ್ತಿರುವ ಭದ್ರತೆಯನ್ನು ಯಾರೂ ಗುರುತಿಸಿದೆ, ಅವಳನ್ನೂ ಹೊರಗಿನ ಪ್ರಪಂಚಕ್ಕೆ ದೂಡಿ ಹಣ ಸಂಪಾದಿಸಲೇಬೇಕು ಎಂಬ ಅನಿವಾರ್ಯತೆಯನ್ನು ಉಂಟು ಮಾಡುತ್ತಿರುವುದು ನನಗೆ ಬಹಳ ಖೇದವನ್ನುಂಟು ಮಾಡುತ್ತಿರುವ ವಿಚಾರ.

    ಓದಿರುವ ಹೆಣ್ಣು ಮನೆಯಲ್ಲಿ ಗಂಡ-ಮಕ್ಕಳನ್ನು ನೋಡಿಕೊಂಡು ಇದ್ದರೆ, ಅವಳಲ್ಲಿ ಒಂದು ಬಗೆಯ ಕೀಳರಿಮೆಯನ್ನು ನಮ್ಮ ಸಮಾಜ ಉಂಟು ಮಾಡುತ್ತದೆ.

    ನಮ್ಮ ದೇಶದಲ್ಲಿ ಶೇಕಡಾ ಐವತ್ತರಷ್ಟು ವರ್ಕಿಂಗ್ ಫೋರ್ಸ್ ನಿರರ್ಥಕವಾಗಿ, ಅಪ್ರಯೋಜಕವಾಗಿ ಇದೆ ಎಂದು ಯಾರೋ ಬುದ್ಧಿವಂತ ಹೇಳಿದ್ದು ಓದಿದ್ದೆ. ಅದು ಅಪ್ರಯೋಜಕವಾಗಿಲ್ಲ. ಹೆಣ್ಣು, ಮಕ್ಕಳನ್ನು ಸತ್ಪ್ರಜೆಯಾಗಿ ನಿರೂಪಿಸುವ ಕಾರ್ಯದಲ್ಲಿ ನಿರತಳಾಗಿದ್ದಾಳೆ. ಗಂಡಸು ಶೇಕಡಾ ನೂರರಷ್ಟು ತನ್ನ ಕೆಲಸದಲ್ಲಿ ತೊಡಗಿಸಿಕೊಳ್ಳಲು, ತನ್ಮಯನಾಗಲು ಅವಕಾಶ ಕಲ್ಪಸಿಕೊಡುತ್ತಾಳೆ ಎಂದು ಆ ಬುದ್ಧಿವಂತನಿಗೆ ಹೇಳಬೇಕೆನ್ನಿಸುತ್ತದೆ. ಆದರೇನು? ಮನೆಯಲ್ಲಿ ಆ ಗಂಡ, ಮಕ್ಕಳೇ ಅವಳ ಕೊಡುಗೆಯನ್ನು ಗೌಣವಾಗಿ ಕಾಣುತ್ತಿರುವಾಗ ಮೂರನೆಯವರಲ್ಲಿ ಹೇಳಿಕೊಳ್ಳುವುದರಲ್ಲಿ ಏನು ಸಾರ್ಥಕವಿದೆ? ಗಂಡ ಎನ್ನಿಸಿಕೊಂಡವನು ಮನೆಯಲ್ಲಿ ಗೃಹಿಣಿಯಾಗಿರುವ ಅವಳ ಅಭಿಪ್ರಾಯಗಳಿಗೆ ಬೆಲೆ ಕೊಡುವುದಿಲ್ಲ, ಮನೆಯಲ್ಲಿರುವ ನಿನಗೇನು ತಿಳಿಯುತ್ತದೆ ಎಂಬ ಉಡಾಫೆ. ಆ ವಾತಾವರಣದಲ್ಲಿ ಬೆಳೆಯುವ ಮಕ್ಕಳು ಬಹಳ ಚುರುಕಾಗಿ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಾರೆ. ಸುಮ್ಮನೆ ಕೂಗಾಡುವ, ಬಯ್ಯುವ ಬಾಯಷ್ಟೇ ಇವಳು. ಕೀಲಿ ಕೈ ಇರುವುದು ದುಡ್ಡು ಸಂಪಾದಿಸುವ ಅಪ್ಪನಲ್ಲಿ ಎಂದು ಬಹಳ ಬೇಗ ಕಲಿತುಕೊಳ್ಳುತ್ತಾರೆ.

    ನೀವೂ ಎಷ್ಟೋ ಮನೆಗಳಲ್ಲಿ ನೋಡಿಬಹುದು. ಅಪ್ಪನನ್ನು ನೀನು ಅನ್ನುವ ಮಕ್ಕಳು, ಅಮ್ಮನನ್ನು ನೀನು ಅನ್ನುತ್ತಾರೆ. ಪ್ರೀತಿ, ಸಲುಗೆ, ಉಡಾಫೆ, ತಾತ್ಸಾರ ಏನು ಬೇಕಾದರೂ ಅನ್ನಿ ವ್ಯತ್ಯಾಸವಂತೂ ಇದ್ದೇ ಇದೆ.

    ಆಗ, ನನ್ನ ವಿದ್ಯೆ ದಂಡವಾಗುತ್ತಿದೆ. ನನಗೆ ಗೌರವವಿಲ್ಲ ಎಂದು ಆ ಹೆಣ್ಣು ಆಚೆ ದುಡಿಯಲು ಹೋಗುತ್ತಾಳೆ. ಅವಳಿಗೂ ಕಷ್ಟ, ಸಂಸಾರವೂ ನಲುಗುತ್ತದೆ. ಹೊರಗೆ ಹೋಗಿ ಸಂಪದಿಸಿದಾಕ್ಷಣ ಅವಳಿಗೆ ಸ್ವತಂತ್ರವಾಗಲೀ, ಗೌರವವಾಗಲೀ ಸಿಗುವುದೂ ಮರೀಚಿಕ್ಕೆಯೇ. ಸಂಪಾದಿಸಿದ ಹಣವನ್ನು ಗಂಡನ ಕೈಗಿತ್ತು ಹೊರಗೂ-ಒಳಗೂ ದುಡಿದ ಹಣ್ಣಾಗುತ್ತಾಳೆ. ಇಲ್ಲ, ನಿಮ್ಮ ಹಾಗೇ ನಾನೂ ಸಂಪಾದಿಸುತ್ತಿರುವಾಗ ನೀವು ಏನು ಮಹಾ ಎಂದು ಸಮಸಮಕ್ಕೆ ಪೈಪೋಟಿ ನಿಂತು ಮಕ್ಕಳನ್ನು ಕಡೆಗಾಣಿಸುತ್ತಾಳೆ. ಹೇಗೆ ನೋಡಿದರೂ ಮಾಡಿದರೂ ಕಷ್ಟವೇ! ಫೂನಲ್ ವಿನ್ನರ್, ದುಡ್ಡು ದುಡ್ಡ ದುಡ್ಡು ದುಡ್ಡೊಂದೇ!

    ಅಧ್ಯಾಯ-2

    ‘ಅನ್ನೋ!" ಚಿಕ್ಕಮ್ಮ ಬಂದು, ಬೇರೆ ಯಾರೋ ಎತ್ತಿಕೊಂಡಿದ್ದ ಮಗುವಿನ ಮುಷ್ಠಿಯಿಂದ ನನ್ನ ಮುಂದಲೇ ಬಿಡಿಸಿದ್ದರು. ಆ ಮಗುವನ್ನು ಎತ್ತಿಕೊಂಡಿದ್ದವರು ನನ್ನತ್ತ ನೋಡಿ ನಕ್ಕರು.

    ಮಗು ತಲೆಕೂದಲು ಹಿಡಿದಿದೆ ಎಂದು ಹೇಳಬಾರದಿತ್ತೇನೇ ಹುಡುಗೀ.... ತುಂಟು ಮುಂಡೇ ಗಂಡ! ಆಗಲೇ ಹುಡುಗೀರ ಕೂದಲಿಗೆ ಕೈ ಹಾಕ್ತಿಯೇನೋ.... ತಾವು ಎತ್ತಿಕೊಂಡಿದ್ದ ಮಗುವಿಗೆ ಮುದ್ದು ಮಾಡುತ್ತಾ ಹೋದರು ಅವರು.

    ನಾನು ಮೆಲ್ಲನೆ ಕೂದಲನ್ನು ಸವರಿಕೊಂಡೆ. ಚಿಕ್ಕಮ್ಮ ನನ್ನ ಕೆನ್ನೆ ಹಿಂಡಿದ್ದರು. ಆ ಪುಟ್ಟ ಮಗು ನಿನ್ನ ನೆತ್ತಿಯ ಮೇಲಿನ ಕೂದಲನ್ನು ಹಿಡಿದು ಜಗ್ಗುತ್ತಿದ್ದರೆ ಸುಮ್ಮನೆ ನಿಂತಿದದೀಯಲ್ಲ! ಬಿಡಿಸಿಕೊಳ್ಳಬಾರದಾ? ಇಲ್ಲಾ..... ಆ ಮಗುವನ್ನು ಎತ್ತಿಕೊಂಡಿದ್ದವರಿಗೆ ಹೇಳಬಾರದಾ? ನಾಚಿಕೆಯಿಂದ ಅರೆನಗೆ ನಕ್ಕು ಹಿಂದೆ ಸರಿಯುತ್ತಿದ್ದ ನನ್ನನ್ನು ಹಿಡಿದು ತಮ್ಮೆಡೆಗೆ ಎಳೆದುಕೊಂಡಿದ್ದರು ಚಿಕ್ಕಮ್ಮ. ಆಗ ನನ್ನ ವಯಸ್ಸು ಸುಮಾರು ಹತ್ತು ವರ್ಷವಿದ್ದಿರಬಹುದು.

    ಸುಮ್ಮನೆ ಹಾಗೇ ಹೋದರೆ ಬಿಡಲ್ಲ ನಾನು. ಯಾಕೆ ಸುಮ್ಮನಿದ್ದೆ ಹೇಳು.... ನನ್ನ ಕೈ ಹಿಡಿದುಕೊಂಡೇ ಅಲ್ಲೇ ಕುರ್ಚಿಯ ಮೇಲೆ ಕುಳಿತು, ನನ್ನನ್ನು ಪಕ್ಕ ಕುಳ್ಳಿರಿಸಿಕೊಂಡು, ನನ್ನ ಜುಟ್ಟು ಬಿಚ್ಚಿ ರಬ್ಬರ್ ಬ್ಯಾಂಡ್ ಕೈಗಿತ್ತರು. ಪರ್ಸ್‍ನಿಂದ ಬಾಚಣಿಗೆ ತೆಗೆದು ತಲೆ ಬಾಚಲಾರಂಭಿಸಿದರು.

    ನಾನು ಬಿಡಿಸಿಕೊಳ್ಳಲು ಪ್ರಯತ್ನಪಟ್ಟಾಗ ಆ ಪಾಪು ಬೆರಳುಗಳಿಗೆ ನೋವಾದರೆ... ತಡೆ ತಡೆದು ಹೇಳಿದೆ.

    ತಲೆ ಬಾಚುವುದನ್ನು ನಿಲ್ಲಿಸಿ, ನನ್ನ ಮುಖವನ್ನು ತಮ್ಮತ್ತ ತಿರುಗಿಸಿಕೊಂಡರು ಕಲಾವರಿ ಚಿಕ್ಕಮ್ಮ.

    ಆ ಮದುವೆ ಮನೆಯ ಗಲಾಟೆ ಜನಜಂಗುಳಿಯಿಂದಾಗಿ ಮೊದಲೇ ಮಂಕಾಗಿದ್ದ ನನ್ನ ಮುಖವನ್ನೇ ದಿಟ್ಟಿಸಿದರು.

    ನಿನ್ನ ಕಂಗಳು ಎಷ್ಟು ಸೌಮ್ಯವಾಗಿದೆಯೇ ಅನೂ! ಲೀಲಾವತಿಯ ಮಗಳೇ ನೀನು ಎಂದು ಆಶ್ಚರ್ಯವಾಗುತ್ತದೆ. ಕಲಾವತಿ ಚಿಕ್ಕಮ್ಮನ ಮಾತುಗಳು ಎದೆಗೆ ಚುಚ್ಚಿದಂತಾದವು. ಎಲ್ಲರೂ ನನ್ನ ನೋಡಿದವರೆಲ್ಲಾ ಆ್ಞಂ! ಲೀಲಾವತಿಯ ಮಗಳೇ’ ಎಂದು ಉದ್ಗರಿಸುವುದು ನನಗೆ ಅಭ್ಯಾಸವಾಗಿ ಹೋಗಿತ್ತು. ಆ ದನಿಗಳಲ್ಲಿ ಇರುತ್ತಿದ್ದ ಅಚ್ಚರಿ, ಬೇಸರವನ್ನುಂಟು ಮಾಡುತ್ತಿತ್ತು. ಅಮ್ಮನ ರೂಪು ಹಾಗಿತ್ತು. ಬಹಳ ಚೆಲುವೆ ನಮ್ಮಮ್ಮ. ಫಳ ಫಳ ಹೊಳೆಯುವ ದೊಡ್ಡ ಬಟ್ಟಲು ಗಂಗಳು. ಪುಟ್ಟ ಬಾಯಿ, ನೀಟಾದ ಮೂಗು, ಒಳ್ಳೆಯ ಬಿಳುಪು, ನೀಳ ಕೂದಲು ಅಮ್ಮನನ್ನು ಅತ್ಯಂತ ರೂಪವಂತೆಯರ ಸಾಲಿಗೆ ಸೇರಿಸಿತ್ತು. ಅಪ್ಪನನ್ನು ಹೊತ್ತಿದ್ದ ನನ್ನ ಮೈಬಣ್ಣ ಕಪ್ಪಲ್ಲದಿದ್ದರೂ ಬಿಳುಪಲ್ಲ. ಕೂದಲು ಶುದ್ಧ ಒರಟು, ಗುಂಗುರು ಕೂದಲು, ಕೊಂಚ ಮೊಂಡು ಮೂಗು, ದಪ್ಪ ತುಟಿಗಳು. ಹತ್ತು ವರ್ಷದ ನನಗೆ ನಾನು ಸುಂದರಿಯಲ್ಲ ಎಂದು ತಿಳಿದಿತ್ತು. ನಾಲ್ಕು ಜನ ಹೆಳಿಯೂ ಇದ್ದರು. ಆದರೆ ಕಲಾವತಿ ಚಿಕ್ಕಮ್ಮ ಕೂಡ ಹೀಗೆಯೇ ಮಾತಾಡಬಹುದೆಂದು ನಾನು ನಿರೀಕ್ಷಿಸಿರಲಿಲ್ಲ. ನನ್ನ ಮುಖ ಇನ್ನಷ್ಟು ಪೆಚ್ಚಾಗಿರಬೇಕು. ಕಲಾವತಿ ಚಿಕ್ಕಮ್ಮನನ್ನು ಕೆನ್ನೆ ಹಿಂಡಿದರು.

    ನಿನ್ನ ಕಣ್ಣುಗಳು ಎಷ್ಟು ಸೌಮ್ಯವಾಗಿ, ಶಾಂತವಾಗಿ ಇವೆ. ನಿನ್ನ ನೋಡುತ್ತಿದ್ದರೆ ಮನಸ್ಸಿಗೆ ಹಿತವೆನ್ನಿಸುತ್ತದೆ ಚಿಕ್ಕಮ್ಮ ಬಾಗಿ ನನ್ನ ಎರಡೂ ಕಂಗಳ ಮೇಲೆ ಹೂಮುತ್ತನಿತ್ತರು.

    ಇಷ್ಟು ಒಳ್ಳೆಯವಳಾದರೆ, ಮೆದುವಾದರೆ ತುಂಬಾ ಕಷ್ಟ, ಅನುಪಮಾ. ಸ್ವಲ್ಪ ಜೋರಾಗು.... ತಿರುಗು, ಜುಟ್ಟು ಕಟ್ತೀನಿ.... ಮೇಲಕ್ಕೆ ಕಟ್ಟಲೋ ಕೆಳಗೋ.....

    ಹೇಗಾದ್ರು ಸ್ಸರಿ ಸುಸ್ತಾದವಳಂತೆ ಕುಸಿದು ಕುಳಿತು ಹಣೆ ಚಚ್ಚಿಕೊಂಡಳು ಚಿಕ್ಕಮ್ಮ.

    ನಾನು ಹುಟ್ಟಿದಾಗ ಚಿಕ್ಕಮ್ಮನಿಗೆ ಇನ್ನೂ ಮದುವೆಯಾಗಿರಲಿಲ್ಲ. ಎಳೇ ಮಗುವನ್ನು ಎತ್ತಿ ಆಡಿಸಿದ್ದು ಚಿಕ್ಕಮ್ಮನೇ. ನಮ್ಮ ತಾಯಿಯ ತಾಯಿಗೆ ಇಬ್ಬರು ಹೆಣ್ಣು ಮಕ್ಕಳು. ನಮ್ಮಮ್ಮ ಲೀಲಾವತಿ, ಅನಂತರ ಕಲಾವತಿ.

    ಕಲಾವತಿಯ ಅನಂತರ ನಾನೇ ಎಳೇ ಮಗು. ಅನಂತರವೂ ಚಿಕ್ಕಮ್ಮನ ಒಡನಾಟ ಕೊಂಚ ಹೆಚ್ಚೇ. ಅಮ್ಮ, ಅಪ್ಪ ತುಂಬಾ ಬ್ಯುಸಿ. ಸಂಜೆ ಒಂದಿಲ್ಲೊಂದು ಪಾರ್ಟಿಗೆ ಹೋಗುತ್ತಲೇ ಇರುವವರು ನನ್ನನ್ನು ಅಜ್ಜಿಯ ಮನೆಯಲ್ಲಿ ಬಿಟ್ಟು ಹೋಗುತ್ತಿದ್ದರು. ಅಮ್ಮ ಬಿಟ್ಟು ಹೋದ ದುಃಖಕ್ಕಿಂತ, ಚಿಕ್ಕಮ್ಮನ ನೋಡಿ ಕೇಕೆ ಹಾಕುತ್ತಿದ್ದೆನಂತೆ. ನಂಗೆ ನಾಲ್ಕು ತಿಂಬಿದ ಮೇಲೆ ಕಲಾವತಿ ಚಿಕ್ಕಮ್ಮನ ಮದುವೆಯಾಯಿತು. ಈಗಲೂ ಆ ಫೋಟೋಗಳು ಅಮ್ಮನ ಬಳಿ ಇವೆ. ಹಸೆಮಣೆ ಮೇಲೆ ಚಿಕ್ಕಮ್ಮ, ಚಿಕ್ಕಪ್ಪ. ನಾನು ಪ್ರತಿಯೊಂದು ಫೋಟೋದಲ್ಲೂ ಚಿಕ್ಕಮ್ಮನ ಬಳಿ. ಚಿಕ್ಕಮ್ಮನ ಮದುವೆಯಾಗಿ ಚಿಕ್ಕಪ್ಪನೊಂದಿಗೆ ಅಮೆರಿಕಾಗೆ ತೆರಳಿದಾಗ ಎಲ್ಲರಿಗಿಂತ ಹೆಚ್ಚು ದುಃಖಿಸಿದವಳು ನಾನು.

    ಈಗ ಆರು ವರ್ಷದ ಅನಂತರ ಎರಡು ವರ್ಷದ ಪುಟ್ಟ ಅವಿನಾಶ್‍ನನ್ನು ಎತ್ತಿಕೊಂಡು ನಾಲ್ಕು ದಿನದ ಹಿಂದೆಯಷ್ಟೆ ಚಿಕ್ಕಮ್ಮ ಬಂದಿದ್ದಾರೆ. ಅವರನ್ನು ನೋಡಿದಾಕ್ಷಣ ನಾಚಿ ಅಮ್ಮನ ಹಿಂದೆ ಅವಿತುಕೊಂಡೆ. ಆದರೆ ಹಿಡಿದೆಳೆದು ಮುದ್ದು

    Enjoying the preview?
    Page 1 of 1