Discover millions of ebooks, audiobooks, and so much more with a free trial

Only $11.99/month after trial. Cancel anytime.

Mane
Mane
Mane
Ebook293 pages1 hour

Mane

Rating: 2 out of 5 stars

2/5

()

Read preview

About this ebook

Novelist, poet, short-story writer, essayist, playwright, educationist, linguist.... author of over 90 books in Kannada as well as English.

M. A. (English), B.Ed. from the University of Kerala; L.T.C.L. Diploma from Trinity College, London; A.C.P. Diploma from the College of Preceptors, Oxford; Taught English for 15 years in India and 9 years in Ethiopia; Published four books in the teachingof English language, grammar and Phonetics; Published in Kannada 45 novels, 3 anthologies of short stories, 4 anthologies of essays, 2 anthologies of poems, 18 plays, and a travelogue; Published in the Tulu language a novel and a collection of poems translated from English.
LanguageKannada
Release dateAug 12, 2019
ISBN6580200200210
Mane

Read more from K.T. Gatti

Related to Mane

Related ebooks

Reviews for Mane

Rating: 2 out of 5 stars
2/5

1 rating0 reviews

What did you think?

Tap to rate

Review must be at least 10 words

    Book preview

    Mane - K.T. Gatti

    http://www.pustaka.co.in

    ಮನೆ

    Mane

    Author :

    ಕೆ. ಟಿ. ಗಟ್ಟಿ

    K T Gatti

    For more books

    http://www.pustaka.co.in/home/author/kt-gatti

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಕೆ. ಟಿ. ಗಟ್ಟಿ

    ಮನೆ

    `ಮನೆ’ಯ ಹಿಂದೆ

    ತುಂಬಾ ಓದುವ ಅಭ್ಯಾಸವಿರುವ ಒಬ್ಬ ಓದುಗ ತನ್ನ ಇಪ್ಪತ್ತರಿಂದ ನಲ್ವತ್ತು ವರ್ಷ ಪ್ರಾಯದ ನಡುವೆ ಸುಮಾರು ಒಂದು ಸಾವಿರ ಪುಸ್ತಕಗಳನ್ನು ಓದುತ್ತಾನೆ ಎಂದು ಅಂದಾಜು ಮಾಡಬಹುದು. ಒಬ್ಬ ಲೇಖಕ ಕೂಡ ತನ್ನ ಅದೇ ವಯಸ್ಸಿನ ಅವಧಿಯಲ್ಲಿ ಹತ್ತಿರ ಹತ್ತಿರ ಅಷ್ಟೇ ಓದಿರುತ್ತಾನೆ ಎಂದು ಭಾವಿಸೋಣ. ಲೇಖಕ ಹೆಚ್ಚು ಬರೆಯುವವನಾದಾಗ ಕಡಿಮೆ ಓದುವವನಾಗುವುದು ಸ್ವಾಭಾವಿಕ. ಓದುಗ ಕ್ರಮೇಣ ಕಡಿಮೆ ಓದುವವನಾಗಲು ಕೂಡ ಕಾರಣಗಳು ಇರುತ್ತವೆ. ಅದನ್ನು ಬದುಕಿನ ಒತ್ತಡಗಳು, ಸಮಯದ ಅಭಾವ, ಓದಿನಲ್ಲೇ ಆಸಕ್ತಿ ಕಡಿಮೆಯಾಗಿರುವುದು ಎಂದಿತ್ಯಾದಿಯಾಗಿ ತಿಳಿಯಬಹುದು. ಓದಿನಲ್ಲಿ ಆಸಕ್ತಿ ಕಡಿಮೆಯಾಗಲು ಕಾರಣವೇನು ಎಂಬ ಪ್ರಶ್ನೆಗೆ `ಪುಸ್ತಕಗಳಲ್ಲಿ ಹೊಸತೇನೂ ಇಲ್ಲ’ ಎಂಬ ಭಾವವುಂಟಾಗುವಷ್ಟರ ಮಟ್ಟಿಗೆ ಓದುಗ ಪ್ರಬುದ್ಧನಾಗಿರುವುದು, ಓದಿನ ಆಸಕ್ತಿಯ ಕ್ಷೇತ್ರ ಬದಲಾಗಿರುವುದು, ಆಧ್ಯಾತ್ಮಿಕ ಪುಸ್ತಕಗಳ ಓದಿನ ಕಡೆಗೆ ಮನಸ್ಸು ಹೊರಳಿರುವುದು ಇತ್ಯಾದಿ ಕಾರಣವಾಗಿರಬಹುದು.

    ಲೇಖಕನ ಮೇಲೆ ಅವನು ಓದಿದ ಪುಸ್ತಕಗಳ ಪ್ರಭಾವ ಆಗುತ್ತದೆಯೆ? ಖಂಡಿತ ಆಗುತ್ತದೆ. ಲೇಖಕ `ಹುಟ್ಟಾ ಲೇಖಕ’ ಆಗಿರಲಿ, ಅಲ್ಲದಿರಲಿ, ಅವನು ಲೇಖಕನಾಗಿ ಬೆಳೆಯುವುದು ಓದಿನ ಮೂಲಕವೇ. ಅವನ ಮೇಲೆ ಆಗುವ ಪ್ರಭಾವ ಯಾವುದೇ ಒಬ್ಬ ಲೇಖಕನದ್ದಲ್ಲ, ಅವನ ಒಟ್ಟು ಓದಿನದ್ದು ಎಂದು ತಿಳಿಯಬೇಕು. ಇದನ್ನು `ಲೇಖಕನ ಆತ್ಮಶಿಕ್ಷಣ’ ಎಂದು ಕರೆಯಬಹುದು. ಈ `ಆತ್ಮಶಿಕ್ಷಣ’ ಇಲ್ಲದವನು ಲೇಖಕನಾಗಲಾರ. ಲೇಖಕ, ಸಾಮಾನ್ಯವಾಗಿ, ಜ್ಞಾನ ಪಿಪಾಸು ಓದುಗನಂತೆಯೇ ಯಾವುದೋ ಒಂದೆರಡು ನಿರ್ದಿಷ್ಟ ಪ್ರಕಾರದ ಪುಸ್ತಕಗಳಲ್ಲಿ ಮಾತ್ರ ಆಸಕ್ತನಾಗಿರುವವನಲ್ಲ. ಅವನು ಎಲ್ಲಾ ಪ್ರಕಾರದ ಪುಸ್ತಕಗಳಲ್ಲಿಯೂ ಆಸಕ್ತನಾಗಿರುತ್ತಾನೆ.

    ಒಬ್ಬ ಲೇಖಕ ಇನ್ನೊಬ್ಬ ಲೇಖಕನ ಪ್ರಭಾವಕ್ಕೊಳಗಾಗಿ, ಅವನ ಭಾಷೆ, ಶೈಲಿ ಮತ್ತು ನಿರೂಪಣಾ ವಿಧಾನವನ್ನು ಅನುಕರಿಸುವುದಾದರೆ, ಅವನನ್ನು ಲೇಖಕ ಎಂದು ಪರಿಭಾವಿಸಬೇಕಾಗಿಲ್ಲ. ಈ ಅನುಕರಣೆ ಪ್ರಜ್ಞಾಪೂರ್ವಕವಾಗಿ ಅಲ್ಲದಿದ್ದರೆ, ಯಾವತ್ತು ಆತ್ಮನಿರೀಕ್ಷಣೆಯ ಮೂಲಕ ಅವನು ಅದನ್ನು ಕಂಡುಕೊಳ್ಳುತ್ತಾನೋ ಅನಂತರವೇ ಅವನನ್ನು ಲೇಖಕ ಎಂದು ಪರಿಗಣಿಸಬಹುದು. ಯಾವುದೋ ಒಂದು ಪುಸ್ತಕದ ನೇರ ಪ್ರಭಾವಕ್ಕೊಳಗಾಗಿ ಅದನ್ನು ತನ್ನದೇ ರೀತಿಯಲ್ಲಿ ಭಟ್ಟಿ ಇಳಿಸಿದನಾದರೆ ಅವನನ್ನು ಅರೆ ಲೇಖಕನೆನ್ನಬಹುದೇನೋ, ಪೂರ್ಣ ಲೇಖಕನಂತೂ ಖಂಡಿತ ಅಲ್ಲ. ತನ್ನ ಬರೆಹಕ್ಕೆ ಪ್ರೇರಕವಾದ ಕೃತಿಯನ್ನು ಉಲ್ಲೇಖಿಸಿ, ಅದರ ಸ್ಫೂರ್ತಿ ಎಂದು ಹೇಳಿದರೆ, ಅಷ್ಟಕ್ಕೆ `ಅಷ್ಟು’ ಲೇಖಕ ಎನ್ನಬಹುದು. ಯಾಕೆಂದರೆ, ಮೂಲದ ಉಲ್ಲೇಖ ಇಲ್ಲದಿದ್ದರೆ, ಆತನ ಕೆಲಸ ಕೃತಿ ಚೌರ್ಯ ಎನಿಸಿಕೊಳ್ಳಬಹುದು. ಮೂಲ ಕೃತಿಯ `ಛಾಯೆ’ಯಷ್ಟೇ ಇದ್ದರೆ ಅದನ್ನು ಗುರುತಿಸಿದ ಓದುಗರು ಮತ್ತು ವಿಮರ್ಶಕರು ಹಾಗೆಂದು ಹೇಳುತ್ತಾ ಇರುತ್ತಾರೆ. ಅದನ್ನು ಕೇಳಿಸಿಕೊಳ್ಳುತ್ತಾ ಇರುವುದು ಲೇಖಕನಿಗೆ ಹಿತಕರವಾದ ಅನುಭವ ಆಗಿರಲಾರದು. ಒಬ್ಬ ಉತ್ತಮ ಲೇಖಕ ಯಾವುದೋ ಒಂದು ಕೃತಿಯ ಮೋಹಕ್ಕೆ ಒಳಗಾಗಿ ಒಂದು ಕೃತಿಯ ಭಾಷಾಂತರ ಮಾಡಿಕೊಟ್ಟಿರಬಹುದು. ಮೂಲಕೃತಿ ಪ್ರಸಿದ್ಧ ಕೃತಿಯಾಗಿದ್ದ ಕಾರಣದಿಂದ ಭಾವಾನುವಾದವೂ ಪ್ರಸಿದ್ಧವಾಗಬಹುದು. ಆದರೆ ಇದು ಇಂಥ ಕೃತಿಯ ಭಾವಾನುವಾದ ಎಂದು ಹೇಳದಿರುವುದು ಸಜ್ಜನಿಕೆಯಲ್ಲ. ಭಾವಾನುವಾದಕ್ಕಿಂತ ಪೂರ್ಣಾನುವಾದವೇ ಯಾವತ್ತೂ ಶ್ರೇಷ್ಟ. ಭಾವಾನುವಾದ ಮತ್ತು `ಅಧಿಕೃತ’ ಅನುಕರಣೆ `ಲೇಖಕನ ಆತ್ಮಶಿಕ್ಷಣ’ದ ಹಂತದಲ್ಲೇ ಕೊನೆಗೊಳ್ಳುವುದು ಶ್ರೇಯಸ್ಕರ. ತನ್ನ ಬರವಣಿಗೆಯ ಮೇಲೆ ಒಬ್ಬ ಲೇಖಕನ ಪ್ರಭಾವವುಂಟಾಗುತ್ತಿದೆ ಎಂದು ಗೊತ್ತಾದರೆ ಆ ಲೇಖಕನ ಕೃತಿಗಳನ್ನು ಓದುವುದನ್ನು ನಿಲ್ಲಿಸಿಬಿಡಬೇಕು. `ಈಗ ನಾನು ಸ್ವತಂತ್ರ’ ಎಂದು ತಿಳಿದುಕೊಳ್ಳುವಷ್ಟು ಬೆಳೆದಾದ ಬಳಿಕ ಓದಿದರೆ ತೊಂದರೆಯಾಗದು. ತಾನು ಬರೆಯಲು ಎತ್ತಿಕೊಂಡಿರುವ ಥೀಮಿನಲ್ಲಿರುವ ಇನ್ನೊಂದು ಕೃತಿಯನ್ನು ತನ್ನ ಬರವಣಿಗೆಗೆ ಮೊದಲು ಓದಲೇ ಬಾರದು. ಲೇಖಕನಾಗಿ ಬೆಳೆಯುವ ಹಂತದ ಓದು ಮತ್ತು ಬರವಣಿಗೆ ಬೇರೆ, ಅನಂತರದ ಓದು ಮತ್ತು ಬರವಣಿಗೆ ಬೇರೆ.

    ನನಗಿಲ್ಲಿ ಹೇಳಬೇಕೆನಿಸುವುದು, ಮುಖ್ಯವಾಗಿ, ಲೇಖಕರಿಗಾಗುವ ಅನುಭವ ಮತ್ತು ಅದರಿಂದ ಅವರು ಪ್ರಭಾವಿತರಾಗುವ ಬಗ್ಗೆ. ಪುಸ್ತಕದ ಓದಿನಿಂದ ಪ್ರಭಾವಿತರಾಗುವ ಬಗ್ಗೆ ಅಲ್ಲ. ಒಂದು ಆಕಸ್ಮಿಕ ಸಂಭವ, ಆ ಸಂಭವದ ಸ್ಥಳದಲ್ಲೇ ಇದ್ದು ಅದನ್ನು ಕಂಡವರಲ್ಲಿ ಇಬ್ಬರು ಪ್ರಸಿದ್ಧ ಲೇಖಕರು-ಅವರು ಆ ಮೇಲೆ ಬರೆದ ಕಾದಂಬರಿಗಳಲ್ಲಿ ಈ `ಅನುಭವದ ಪ್ರಭಾವ’ ಸಮಾನವಾಗಿ ಕಾಣಿಸಿದರೆ, ಏನು ಹೇಳೋಣ? `ಇಬ್ಬರೂ ಕಂಡಿರಬಹುದು’ ಎಂದು ಊಹಿಸುವುದು ಸರಿಯೆನಿಸಬಹುದು. ಮತ್ತೆ ಪ್ರಕಟವಾದದ್ದು ಮೊದಲು ಪ್ರಕಟವಾದುದರಿಂದ ಪ್ರಭಾವಿತ ಎಂದು ಗದ್ದಲ ಎಬ್ಬಿಸಬೇಕಾಗಿಲ್ಲ. ಕೆಲವು ಅನುಭವಗಳಂತೂ ಲೋಕದಲ್ಲೆಲ್ಲೆಡೆ ದಿನಾ ಸಾವಿರಾರು ಮಂದಿಗೆ ಆಗುವ ಅನುಭವಗಳು. ಇಂಥ ಒಂದು ನಿರ್ದಿಷ್ಟ ಅನುಭವ ಯಾರ ಮೇಲೆ ಏನು ಪ್ರಭಾವ ಬೀರಿತು ಎಂಬುದನ್ನು ಮಹಾತ್ಮಾ ಗಾಂಧಿ, ನೆಹರು, ಲಾಲ್ ಬಹದ್ದೂರ್ ಶಾಶ್ತ್ರಿ, ಅಂಬೇಡ್ಕರ್ ಮುಂತಾದವರ ಜೀವನ ಚರಿತ್ರೆಗಳಿಂದ ತಿಳಿಯಬಹುದು. ಅಂಥ ಅನುಭವಗಳನ್ನು ಅದೇ ರೀತಿಯಲ್ಲಿ ಕಾದಂಬರಿಗಳಲ್ಲಿ ಕಾಣಲಾಗದು. ಅನುಭವ ಅದರ ಮೇಲೆ ನಡೆದ ಚಿಂತನೆಯ ಮೂಲಕ, ವಿಶ್ಲೇಷಣೆ ಮತ್ತು ಪುನರ್ವಿಶ್ಲೇಷಣೆಯ ಮೂಲಕ ರೂಪಾಂತರಗೊಳ್ಳುವ ಕೆಲಸದ ಹಿಂದಿರುವ ಗುಣವನ್ನೇ `ಸೃಜನಶೀಲತೆ’ ಎನ್ನುವುದು. ಈ ಸೃಜನಶೀಲತೆಗೆ ನೂರಾರು ಮುಖಗಳು, ನೂರಾರು ಆಯಾಮಗಳು. ಅದು ಮುಗಿದಿರುವುದಿಲ್ಲ, ಹೊಸ ಮನಸ್ಸುಗಳಲ್ಲಿ ಹೊಸ ರೀತಿಯಲ್ಲಿ ಮುಂದರಿಯುತ್ತಾ ಇರಬಹುದು. ಲಾಲ್ ಬಹದ್ದೂರ್ ಶಾಸ್ತ್ರಿಗೆ ಬೇರೆ ಹುಡುಗರು ಮಾವಿನ ಹಣ್ಣು ಕದ್ದದ್ದಕ್ಕೆ ತಪ್ಪಾಗಿ ಅವರಿಗೆ ಪೆಟ್ಟು ಸಿಕ್ಕಿದ ಅನುಭವ ಎಷ್ಟೋ ಮಂದಿಗೆ ಆಗಿರಬಹುದು. ಅಂಥ ಅನುಭವ ಆದ ಹತ್ತು ಕವಿಗಳು ಕವಿತೆ ಬರೆದರೆ ಆ ಹತ್ತು ಕವಿತೆಗಳು ಒಂದೇ ರೀತಿ ಇರುವುದಿಲ್ಲ. ಹತ್ತು ಕತೆಗಾರರು ಬರೆದರೆ ಅದು ಒಂದೇ ರೀತಿ ಇರುವುದಿಲ್ಲ. ಮೂಲ ಅನುಭವದ ಪ್ರಸ್ತಾಪ ಸಹ ಇರುವುದಿಲ್ಲ. ಮೂಲ ಅನುಭವವನ್ನು ಅದು ನಡೆದಂತೆ ಚೆನ್ನಾಗಿ ಬರೆದರೆ, ಅದೊಂದು ವರದಿಯಾಗಬಹುದು. ಹೆಚ್ಚೆಂದರೆ, ಮಕ್ಕಳ ಪಠ್ಯ ಪುಸ್ತಕದಲ್ಲಿ ಒಂದು ನೀತಿ ಹೇಳುವ ಪಾಠವಾಗಬಹುದು.

    ಒಬ್ಬ ತಂದೆ ತನ್ನ ಮಗುವಿಗೆ ಪೆಟ್ಟು ಕೊಡುತ್ತಾನೆ. ತಾಯಿಯಿಲ್ಲದ ಮಗು. ಆ ಮಗು ಮಲಗಿ ನಿದ್ರಿಸುತ್ತಿರುವಾಗ ಆ ಮಗುವನ್ನು ನೋಡಿ ಅವನ ಹೃದಯ ದ್ರವಿಸುತ್ತದೆ. ಅವನು ಒಂದು ಕವಿತೆ ಬರೆಯುತ್ತಾನೆ. ಚಿಕ್ಕ ಕವಿತೆ. ಅದು ಇಂಗ್ಲಿಷ್ ಸಾಹಿತ್ಯದಲ್ಲಿ ಒಂದು ಸುಪ್ರಸಿದ್ಧ ಕವಿತೆ. ಮಗುವಿನ ತಂದೆಯೇ ಕವಿ ಎನ್ನುವುದಕ್ಕೆ ಆಧಾರ ಇಲ್ಲ. ಕವಿತೆಯನ್ನು ಓದುವ ನಾವು ಆ ಮಗುವಿನ ತಂದೆ ಆಗಿಬಿಡುತ್ತೇವೆ!

    `ಮನೆ’ಯ ಹಿಂದೆ ಇರುವುದು ಕೆಲವು ಸಾಮಾನ್ಯ ಅನುಭವಗಳು. ಈ ಕಾದಂಬರಿ 1975ರಲ್ಲಿ `ತುಷಾರ’ ಮಾಸಪತ್ರಿಕೆಯಲ್ಲಿ ಧಾರಾವಾಹಿಯಾಗಿ 1980ರಲ್ಲಿ ಪುಸ್ತಕ ರೂಪದಲ್ಲಿ ಪ್ರಕಟವಾಯಿತು.

    ಪ್ರತಿ ಪರೀಕ್ಷೆಗೆ ಕಟ್ಟುವಾಗಲೂ `ಈತ ಕೆಲಸದಲ್ಲಿರುವ ಅಧ್ಯಾಪಕ ಮತ್ತು ಈತನಿಗೆ ಮೂರು ವರ್ಷದ ಸರ್ವೀಸ್ ಆಗಿದೆ’ ಎನ್ನುವ ಸರ್ಟಿಫಿಕೇಟನ್ನು ವಿದ್ಯಾಧಿಕಾರಿಯಿಂದ ಪಡೆಯಬೇಕಾಗಿತ್ತು. 1959ರಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಿಂದಾರಂಭವಾಗಿ 1963ರಲ್ಲಿ ಬಿಏಗೆ ಕಟ್ಟುವ ವರೆಗೆ ಈ ಸರ್ಟಿಫಿಕೇಟು ಪಡೆಯಲು ಏನೂ ಕಷ್ಟವಾಗಲಿಲ್ಲ. ಸರ್ಟಿಫಿಕೇಟು ಕೊಡುವಾಗ ಸದಾಶಯ ವ್ಯಕ್ತಪಡಿಸಿದ ವಿದ್ಯಾಧಿಕಾರಿಗಳೂ ಇದ್ದರು.

    1987ರಲ್ಲಿ ಎಂಏಗೆ ಕಟ್ಟಲು ಆ ಸರ್ಟಿಫಿಕೇಟಿಗಾಗಿ ನಾನು ಕಾಸರಗೋಡಿನಲ್ಲಿ ಡಿಇಓ ಬಳಿ ಹೋದಾಗ ಆತ ಅಂಥ ಸರ್ಟಿಫಿಕೇಟು ಕೊಡಲು ಸಾಧ್ಯವಿಲ್ಲ ಎಂದ. ಆತ ಬಿಏಬೀಟಿಯಾಗಿ ಹೈಸ್ಕೂಲು ಅಧ್ಯಾಪಕನಾಗಿ ಸುಮಾರು ಇಪ್ಪತ್ತೈದು ವರ್ಷದ ಸರ್ವೀಸಿನ ನಂತರ ಡಿಇಓ ಆಗಿ ಭಡ್ತಿ ಹೊಂದಿದ್ದವನೇ ಹೊರತು, ದೇವಲೋಕದಿಂದ ಬಂದವನಲ್ಲ. ಕಟಕಟೆಯಲ್ಲಿ ನಿಂತ ಅಪರಾಧಿಯಂತೆ ನನ್ನನ್ನು ನಿಲ್ಲಿಸಿಕೊಂಡೇ ಮಾತಾಡಿಸಿದ. ಬಹುಮಟ್ಟಿಗೆ ನಾನು ಅವನ ಸಹೋದ್ಯೋಗಿಯೇ. ಆತನಿಗೆ ಹೆಚ್ಚು ವರ್ಷ ಸರ್ವೀಸು ಆಗಿದೆ, ಒಂದು ಅಧಿಕಾರದಲ್ಲಿದ್ದಾನೆ ಎನ್ನುವುದು ಮಾತ್ರ ವ್ಯತ್ಯಾಸ. ಆತ ಎರಡು ಬಾರಿ ನಾನು ಕೆಲಸದಲ್ಲಿದ್ದ ಶಾಲೆಗೆ ಸಂದರ್ಶನ ನೀಡಿದ್ದ. ನನ್ನ ತರಗತಿಗೂ ಭೇಟಿ ನೀಡಿದ್ದ.

    `ಕಳೆದ ಬಾರಿ ಏಇಓ ಅವರಿಂದ ನಾನು ಈ ಸರ್ಟಿಫಿಕೇಟು ಪಡೆದು ಪರೀಕ್ಷೆಗೆ ಕಟ್ಟಿದ್ದೇನೆ’ ನಾನೆಂದೆ. `ಹಾಗಾದರೆ ಅವರಿಂದಲೇ ಪಡೆದುಕೊ’ ಎಂದ ಒರಟಾಗಿ. `ಆಗ ನಾನು ಹೈಯರ್ ಎಲಿಮೆಂಟರಿ ಶಾಲೆಯಲ್ಲಿ ಅಧ್ಯಾಪಕನಾಗಿದ್ದೆ. ಈಗ ಹೈಸ್ಕೂಲು ಅಧ್ಯಾಪಕನಾಗಿರುವುದರಿಂದ ಡಿಇಓರಿಂದಲೇ ಸರ್ಟಿಫಿಕೇಟು ಬೇಕು’ ಎಂದೆ. `ನನ್ನಿಂದ ಕೊಡಲು ಸಾಧ್ಯವಿಲ್ಲ. ನಿನ್ನ ಹೆಡ್‍ಮಾಸ್ಟರಿಂದ ಪಡೆದುಕೊ’ ಎಂದ. `ಹೆಡ್ ಮಾಸ್ಟರದ್ದು ಸಾಕಾಗುವುದಿಲ್ಲ. ವಿದ್ಯಾಧಿಕಾರಿಯಿಂದಲೇ ಪಡೆದುಕೊಳ್ಳಬೇಕು ಅಂತ ಇದೆ’ ಎಂದೆ. `ನಾನು ಕೊಡಲಿಕ್ಕೆ ಆಗುವುದಿಲ್ಲ. ನನ್ನ ಸಮಯ ಹಾಳು ಮಾಡಬೇಡ’ ಎಂದ ಕಣಾರನ್ ಎಂಬ ಹೆಸರಿನ ಆ ಮನುಷ್ಯ.

    ಅವನ ಕೋಣೆಯಿಂದ ಹೊರಬಂದೆ. ವಾಸ್ತವದಲ್ಲಿ, ಆತ ಮಾಡದಿದ್ದುದು ತಾನು ಮಾಡಲೇ ಬೇಕಾದ ಕರ್ತವ್ಯವಾಗಿತ್ತು. ಸರ್ಟಿಫಿಕೇಟು ಪಡೆಯುವುದು ನನ್ನ ಹಕ್ಕು ಆಗಿತ್ತು. ಆದರೆ ದೂರಿಕೊಳ್ಳುವುದು ಯಾರಲ್ಲಿ? ಸ್ವಲ್ಪ ಹೊತ್ತು ಏನು ಮಾಡುವುದು ಎಂದು ತೋಚಲಿಲ್ಲ. ಡಿಇಓರ ಪರ್ಸನಲ್ ಅಸಿಸ್ಟಂಟಿಗೆ ಡಿಇಓನ ಗೈರುಹಾಜರಿಯಲ್ಲಿ ಡಿಇಓನ ಅಧಿಕಾರವಿದೆ. ಡಿಇಓನ ಪರ್ಸನಲ್ ಅಸಿಸ್ಟೆಂಟ್ ಎನ್ನುವುದು ಕೇರಳ ಸರಕಾರ ಸೃಷ್ಟಿಸಿದ ಹುದ್ದೆ. ಡಿಇಓನ ಗೈರುಹಾಜರಿಯಲ್ಲಿ ಉಪಯೋಗಿಸಲು ಆಗುವ ಅಧಿಕಾರವನ್ನು ಆತನ ಉಪಸ್ಥಿತಿಯಲ್ಲಿ ಪರ್ಸನಲ್ ಅಸಿಸ್ಟೆಂಟ್ ಉಪಯೋಗಿಸುತ್ತಾರೋ ಎಂದು ಪ್ರಯತ್ನಿಸಿ ನೋಡಲು ನಿರ್ಧರಿಸಿದೆ.

    1953ರಲ್ಲಿ ನಾನು ಶಿಕ್ಷಕ ತರಬೇತಿ ಶಾಲೆಯಿಂದ `ಈ ತರಬೇತಿ ನನಗೆ ಬೇಡ. ನಾನು ಹೈಸ್ಕೂಲಲ್ಲಿ ಓದಬೇಕು’ ಎಂದು ಓಡಿಹೋದ ನನ್ನನ್ನು ಮೂರು ದಿನಗಳ ಬಳಿಕ ನನ್ನ ತಂದೆಯವರು ಹೆಡ್‍ಮಾಸ್ಟರ್ ರಾಮಕೃಷ್ಣ ಶೆಟ್ಟರ ಮನೆಗೆ ಕರೆದುಕೊಂಡು ಹೋಗಿದ್ದರು. ನನ್ನ ಅಹವಾಲನ್ನು ಕೇಳಿದ ನಂತರ, ಗಾಂಧಿವಾದಿ ಮತ್ತು ಕಠಿಣ ಶಿಸ್ತಿನ ವ್ಯಕ್ತಿಯಾಗಿದ್ದ ಆತ ಬಹಳ ವಾತ್ಸಲ್ಯದಿಂದ ನನ್ನ ಜೊತೆ ಮಾತನಾಡಿ, `ಹೈಸ್ಕೂಲು ಓದಲಿಕ್ಕಾಗಲಿಲ್ಲ ಅಂತ ಬೇಸರ ಮಾಡಬೇಡಿ. ಅಧ್ಯಾಪಕನಾಗಿದ್ದುಕೊಂಡೇ ನೀವು ಎಲ್ಲಾ ಪರೀಕ್ಷೆಗಳನ್ನು ಪಾಸು ಮಾಡಬಹುದು’ ಎಂದು ಹೇಳಿ, ಅದು ಹೇಗೆ ಎಂದು ವಿವರಿಸಿ ಹೇಳಿದ ನಂತರ ನಾನು ಅಲ್ಲಿ ಉಳಿಯಲು ಒಪ್ಪಿಕೊಂಡಿದ್ದೆ. ಈಗ ಡಿಇಓನ ಪರ್ಸನಲ್ ಅಸಿಸ್ಟೆಂಟ್ ಹುದ್ದೆಯಲ್ಲಿದ್ದುದು ಅದೇ ರಾಮಕೃಷ್ಣ ಶೆಟ್ಟರು. ಆದರೆ ಡಿಇಓ ನೀಡಿದ ರೂಲಿಂಗ್ ವಿರುದ್ಧ ಆತನ ಕೆಳಗಿನ ಸ್ಥಾನದಲ್ಲಿದ್ದ ವ್ಯಕ್ತಿ, ಅದೂ ಆತ ಆಚೆ ಕೋಣೆಯಲ್ಲಿ ಇರುವಾಗ ನನಗೆ ಸರ್ಟಿಫಿಕೇಟು ನೀಡುವ ಬಗ್ಗೆ ಸಂದೇಹವಿತ್ತು. ಆಗುವುದಾಗಲಿ ಎಂದು ನಾನು ಅವರ ಬಳಿ ಹೋದೆ.  ಡಿಇಓ ಹೇಳಿದ್ದನ್ನು ಹೇಳದೆ ಬೇರೆ ದಾರಿಯಿರಲಿಲ್ಲ. ಅವರು ಏನೂ ಹೇಳದೆ, ಮುಗುಳ್ನಕ್ಕು, ಸರ್ಟಿಫಿಕೇಟು ಬರೆದು, ಗುಮಾಸ್ತನನ್ನು ಕರೆದು ಟೈಪು ಮಾಡಿ ತರಲು ಹೇಳಿದರು. ನಾನು ಅವರಿಗೆ ಕೃತಜ್ಞತೆ ಸೂಚಿಸಿ, ಹೊರಬಂದು ಜಗಲಿಯಲ್ಲಿದ್ದ ಬೆಂಚಿನ ಮೇಲೆ ಕುಳಿತೆ. ಕುಳಿತಲ್ಲಿಂದ ನನಗೆ ಒಳಗಿನ ಮುಕ್ಕಾಲು ಭಾಗ ಆಫೀಸು ಕಾಣಿಸುತ್ತಿತ್ತು. ನನ್ನ ಸರ್ಟಿಫಿಕೇಟು ಟೈಪಾಗಿ ಹೆಡ್‍ಕ್ಲಾರ್ಕನ ಮೇಜಿನ ಮೇಲಕ್ಕೆ ಬಂತು. ಅವನು ಅದನ್ನೊಮ್ಮೆ ನೋಡಿ ಅತ್ತ ಇಟ್ಟ. ಗಂಟೆ ಹನ್ನೊಂದು. ಆರ್ಧ ದಿನ ಶಾಲೆಗೆ ರಜೆ ಹಾಕಿ ಬಂದಿದ್ದೆ. ಗಂಟೆ ಹನ್ನೆರಡಾದರೂ ನನ್ನ ಸರ್ಟಿಫಿಕೇಟು ಹೆಡ್‍ಕ್ಲಾರ್ಕನ ಮೇಜಿನ ಮೇಲೆಯೇ ಇತ್ತು. ಒಂದು ಗಂಟೆಗೆ ಎಲ್ಲರೂ ಎದ್ದು ಊಟಕ್ಕೆ ಹೋದರು. ನಾನು ಕಲ್ಲಾಗಿ ಕುಳಿತಿದ್ದೆ. ಊಟಕ್ಕೆ ಹೋಗಲಿಲ್ಲ. ಇನ್ನರ್ಧ ದಿನದ ರಜೆ ಹೋಯಿತು ಎಂದು ಯೋಚಿಸುತ್ತಿದ್ದೆ. ಸರ್ಟಿಫಿಕೇಟು ಕೊಡಲು ಹೆಡ್‍ಕ್ಲಾರ್ಕ್ ಸತಾಯಿಸುತ್ತಿರುವ ಬಗ್ಗೆ ರಾಮಕೃಷ್ಣ ಶೆಟ್ಟರ ಬಳಿ ದೂರಿಕೊಳ್ಳುವ ನಾಲಗೆ ನನಗೆ ಇರಲಿಲ್ಲ.

    ಇಷ್ಟು ಕತೆ ಕೇಳುವಾಗ, ಆ ಹೆಡ್‍ಕ್ಲಾರ್ಕ್ ಬಹುಶಃ ಹಣ ಅಪೇಕ್ಷಿಸುತ್ತಿದ್ದಾನೆ ಎಂದು ನಿಮಗನಿಸಬಹುದು. ಆತನ ಎದೆ ತುಂಬ ಇದ್ದುದು ಹಣದಾಸೆಯಲ್ಲ, ಅದಕ್ಕಿಂತಲೂ ಘೋರವಾದ ಮತ್ಸರ. ನನಗಿದ್ದ ಒಂದೇ ಒಂದು ಭಯವೆಂದರೆ, ಆತ ಆ ಸರ್ಟಿಫಿಕೇಟನ್ನು ಡಿಇಓ ಬಳಿ ಕೊಂಡುಹೋಗಿ, `ಕೊಡಬಹುದೆ?’ ಎಂದು ಕೇಳಿ ನನಗೆ ಸಿಗದಂತೆ ಮಾಡುತ್ತಾನೆ ಎಂದು! ಅವನ ಎದೆಯಲ್ಲಿ ಮತ್ಸರವಿದೆ ಎಂದು ನನಗೆ ತಿಳಿದುದು ಹೇಗೆ ಎಂದು ನೀವು ಕೇಳಬಹುದು. ಹೇಳುತ್ತೇನೆ. 

    ನಾನು ಮಧೂರು ಎಂಬ ಊರಲ್ಲಿ ಲೋವರ್ ಪ್ರೈಮರಿ ಶಾಲೆಯಲ್ಲಿ ಹೆಡ್‍ಮಾಸ್ಟರನಾಗಿದ್ದಾಗ ನಡೆದ ಒಂದು ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಶಾಲೆಯಲ್ಲಿನ ಒಂದು ಪೋಲಿಂಗ್ ಬೂತಿಗೆ ಈ ಮನುಷ್ಯ ರಿಟರ್ನಿಂಗ್ ಆಫೀಸರಾಗಿ ಬಂದಿದ್ದ. ನಾನು ಒಬ್ಬ ಪೋಲಿಂಗ್ ಆಫೀಸರ್ ಆಗಿದ್ದೆ. ಯಾವುದೋ ಅಗತ್ಯದ ಕಾರಣ, ಹಿಂದಿನ ರಾತ್ರಿ ಮನೆಗೆ ಹೋಗಿ ಬೆಳಿಗ್ಗೆ ಐದು ಗಂಟೆಗೆ ಶಾಲೆಗೆ ಬಂದಿದ್ದೆ. ಪೋಲಿಂಗ್ ಆಫೀಸರಾಗಿದ್ದ ನಾನು ಪೋಲಿಂಗ್ ಬೂತ್ ಆಗಿದ್ದ ನನ್ನ ಶಾಲೆಯಲ್ಲಿಯೇ ಹಿಂದಿನ ರಾತ್ರಿ ಮಲಗಬೇಕಾಗಿತ್ತು ಎಂದು ಬಾಚಿಂಡನೆಂಬ ಈ ಮನುಷ್ಯ ರಂಪ ಎಬ್ಬಿಸಿದ. ಅವನು ಹೇಳಿದ್ದು ಸರಿಯಾದುದರಿಂದ ನಾನು ಸುಮ್ಮನಿದ್ದೆ.

    ಎರಡು ವರ್ಷದ ಬಳಿಕ, ನಾನು ಬಿಏ ಪರೀಕ್ಷೆಯ ಹಾಲ್ ಟಿಕೇಟು ತೆಗೆದುಕೊಳ್ಳಲು ಕಾಸರಗೋಡು ಸರಕಾರಿ ಕಾಲೇಜಿಗೆ ಹೋದಾಗ, ಈತ ಅಲ್ಲಿ ಮ್ಯಾನೇಜರಾಗಿದ್ದ. ಇಡೀ ಆಫೀಸಿಗೆ ಅವನು ನನ್ನನ್ನು ನನ್ನ ಮಹಾಪರಾಧದ ಮೂಲಕ ವರದಿ ಮಾಡಿದ್ದ. ಅಲ್ಲದೆ, ಕೆಲವು ಉಪನ್ಯಾಸಕರಿಗೂ ಹೇಳಿದ್ದ. ಆನಂತರ ಆ ಬಗ್ಗೆ ನನ್ನ ಪರಿಚಯದ ಉಪನ್ಯಾಸಕರು ನನ್ನ ಜೊತೆ ಮಾತಾಡಿದ್ದೂ ಇತ್ತು. ಅನಂತರ ಆ ಸುದ್ದಿ ಕುಂಬಳೆಯಲ್ಲಿದ್ದ ಅಸಿಸ್ಟೆಂಟ್ ಎಜುಕೇಶನಲ್ ಆಫೀಸಿಗೂ ಹಬ್ಬಿತ್ತು. ಅದು ಅವರ್ಯಾರಿಗೂ ಸಂಬಂಧಪಡದ ವಿಚಾರವಾಗಿತ್ತು. ಅನಂತರ ಈ ಮನುಷ್ಯನ ಕೆಲಸದಲ್ಲಿ ಏನೋ ಎಡವಟ್ಟಾಗಿ ಆತನಿಗೆ ಡಿಇಓ ಆಫೀಸಿಗೆ ಎತ್ತಂಗಡಿಯಾಗಿತ್ತು. ತನ್ಮಧ್ಯೆ ಆತನ ಜೀವನೇತಿಹಾಸದ ಹಲವು ಪುಟಗಳ ಮೂಲಕ ಅವನು ಎಂಥ ವಿಷಜಂತು ಎಂಬ ಮಾಹಿತಿ ನನಗೆ ಸಿಕ್ಕಿತ್ತು. ಅದೇಕೋ ಅವನು ನನ್ನ ಜಾತಕ ಕೂಡ ಸಂಗ್ರಹಿಸಿಕೊಂಡಿದ್ದ ಎಂದು ತಿಳಿಯಿತು.

    ಊಟಕ್ಕೆ ಹೋದ ಆಫೀಸು ಮಂದಿಯೆಲ್ಲ ಊಟ ಮುಗಿಸಿ ಮರಳಿ ಬಂದರು. ನಾನು ಕುಳಿತಲ್ಲೇ ಇದ್ದೆ. ರಾಮಕೃಷ್ಣ ಶೆಟ್ಟರು ಒಮ್ಮೆ ಹೊರಬಂದು ಅವರಿಗೆ ನನ್ನ ತಲೆ ಕಾಣಿಸಲಿ ಎನ್ನುವುದು ನನ್ನ ಸತ್ಯಾಗ್ರಹದ ಉದ್ದೇಶ. ಆದರೆ ಅವರು ಹೊರಬರಲಿಲ್ಲ. ಅವರು ಬುತ್ತಿ ತಂದು ಒಳಗೇ ಉಂಡರೆಂದನಿಸಿತು. ಅವರು ಹೋಟೆಲೂಟ ಮಾಡುವವರಾಗಿರಲಿಲ್ಲ. ಇನ್ನೇನು ಮಾಡುವುದು, ಸಾಯಂಕಾಲ ರಾಮಕೃಷ್ಟ ಶೆಟ್ಟರ ಮನೆಗೆ ಹೋಗಿ ನನ್ನ ಕಷ್ಟವನ್ನು ನಿವೇದಿಸಿಕೊಳ್ಳುವುದೊಂದೇ ದಾರಿ ಎಂದು ಯೋಚಿಸುತ್ತಿದ್ದೆ. ಸುಮಾರು

    Enjoying the preview?
    Page 1 of 1