Discover millions of ebooks, audiobooks, and so much more with a free trial

Only $11.99/month after trial. Cancel anytime.

Sankole
Sankole
Sankole
Ebook271 pages2 hours

Sankole

Rating: 0 out of 5 stars

()

Read preview

About this ebook

Geetha B.U. is one of the famous authors in Kannada. She has also written in serials. She currently lives in Bangalore.
LanguageKannada
Release dateMar 10, 2016
ISBN6580202700388
Sankole

Read more from Geetha Bu

Related authors

Related to Sankole

Related ebooks

Reviews for Sankole

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Sankole - Geetha BU

    http://www.pustaka.co.in

    ಸಂಕೋಲೆ

    Sankole

    Author :

    ಗೀತಾ ಬಿ.ಯು.

    Geetha.B.U

    For more books
    http://www.pustaka.co.in/home/author/geetha-bu

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    1

    ಬೇಡಮ್ಮ ಪ್ಲೀಸ್ ಹೊಡೆಯಬೇಡಮ್ಮ

    ಮುಚ್ಚುಬಾಯಿ ಮೂತಿಯ ಮೇಲೆ ಜೋರಾಗಿ ಏಟು ಬಿತ್ತು. ಬಾಯಿಬಿಟ್ಟರೆ ಬರೆ ಹಾಕಿಬಿಡುತ್ತೇನೆ.

    "ಅಮ್ಮನ ಉಗ್ರರೂಪ ಕಾಲನ್ನು ನಡುಗಿಸಿತು. ನಿಲ್ಲಲು ತ್ರಾಣವಿಲ್ಲದೆ ನೆಕ್ಕೆ ಕುಸಿದೆ.

    ನಿಂತ್ಕೊ... ಊಂ. ನಿಂತ್ಕೋ... ನೆತ್ತಿಯ ಮೇಲಿನ ಕೂದಲನ್ನು ಹಿಡಿದು ಮೇಲೆತ್ತಿದಾಗ ನನ್ನ ಕೈಗಳಿಂದ ಅವಳ ಕೈಯನ್ನು ಹಿಡಿದುಕೊಂಡೆ.

    ಬೇಡಮ್ಮ ಬಿಡಮ್ಮ ನೋಯ್ಯುತ್ತೆ.

    ನೊಯ್ಯುತ್ತಾ? ನೊಯ್ಲಿ ಅಂತಲೇ ಹೊಡೆಯುತ್ತಿರುವುದು ಇನೊಂದ್ಸಾರಿ, ನಾನು ನಿಮ್ಮೊಪ್ಪ ಮಾತಾಡ್ತಿರೋವಾಗ ಮಧ್ಯ ಬರ್ತ್ಯಾ?

    ಉಗುಳು ನುಂಗಿದೆ. ಇಲ್ಲ. ನಾಣು ಟಾಯ್ಲೆಟ್ಟಿಗೆ ಹೋಗಬೇಕಿತ್ತು ಅದಕ್ಕೆ

    ಅದಕ್ಕೆ... ನಿನ್ನ ಬಾಜಾಭಕಂತ್ರಿ ಸಮೇತ ಕರೆದುಕೊಂಡು ಹೋಗಬೇಕೆ? ತೆಪ್ಪಗೆ ಹೋಗಬೇಕಿತ್ತು

    ನಂಗೆ, ನಂಗೆ ಸ್ವಿಚ್ ಎಟುಕಲ್ಲ ಅಮ್ಮ...

    ಅಮ್ಮ ಅನ್ನಬೇಡ. ಮಮ್ಮಿ ಅನ್ನು ಅಂತ ಹೇಳ್ತೀನಿ. ಕೇಳಲ್ಲ. ನಿನ್ನ ತಲೇಲಿ ಆ ಬ್ರಹ್ಮ ಏನು ತುಂಬಿ ಕಳಿಸಿದ್ದಾನೋ? ಏನೂ ಹೇಳಿದ್ರೂ ತಲೆ ಒಳಗೇ ಇಳಿಯಲ್ಲ... ನನ್ನ ಕರ್ಮ...

    ಸಾರಿ ಮಮ್ಮಿ... ಅಮ್ಮ ನೂಕಿದ ರಭಸಕ್ಕೆ ಕೆಳಕ್ಕೆ ಬಿದ್ದೆ.

    ಹುಂ... ಅದೊಂದು ಬೇರೆ ಕೇಡು. ಅಷ್ಟು ತಿಂತ್ಯಾ. ತಿಂದಿದ್ದೇಲ್ಲಾ ಎಲ್ಲಿ ಹೋಗುತ್ತೆ? ಸಣ್ಣಕ್ಕೆ ಹೀಗಿದ್ಯಾ ನೋಡು. ನೋಡಿದವರು ನಾನು ಹೊಟ್ಟಿಗೆ ಹಾಕಲ್ವೇನೋ ಅಂದ್ಕೊಬೇಕು. ಒಂದು ಸ್ಪೂಲ್ ಹಾಕ್ಕೊಂಡು ಹತ್ತಿ ಸ್ವಿಚ್ ಹಾಕೋದು ಕಲ್ತ್ಯೊ. ನೀನು ಟಾಯ್ಲೆಟ್ಗೆ ಹೋಗಬೇಕಾದಾಗಲಿಲ್ಲಾ ನಾನು ಬಂದು ಸ್ವಿಚ್ ಹಾಕ್ಕೊಕಾಗೋಲ್ಲ... ಗೊತ್ತಾಯ್ತಾ.

    ಹುಂ. ಮಮ್ಮಿ

    ಇಷ್ಟು ದಿವಸ ಏನು ಮಾಡ್ತಿದ್ದೆ?

    ಹೊರ ಹೋಗುತ್ತಿದ್ದವಳು ಬಾಗಿಲ ಬಳಿ ನಿಂತಳು.

    ಎತ್ನ ಇದ್ಲಲ್ಲ.. ಅವಳು ಹಾಕ್ತಾ ಇದ್ಲು.

    ಓ... ಹಾಗಾದ್ರೆ ಆ ಕೆಲಸದ ಹುಡುಗೀನ ಕಳಿಸಿದ್ದು ಒಳ್ಳೆಯದಾಯಿತು. ನಿನ್ನ ಕೆಲಸ ನೀನು ಮಾಡೋದು ಕಲಿತುಕೋಬೇಕು. ಹುಂ. ಈಗ ಕೂತ್ಕೊಂಡು ಓದ್ಕೋ... ಬಾಗಿಲ ಎಳೆದುಕೊಂಡು ಅಮ್ಮ ಆಚೆ ಹೋಗುವವರೆಗೂ ಎದೆ ಢವಢವ ಹೊಡೆದುಕೊಳ್ಳಿತ್ತಿತ್ತು. ಎಲ್ಲಿ ಹಿಂತಿರುಗಿ ಬರುವಳೋ... ಇನ್ಯಾವ ಕಾರಣ ಹುಡುಗಕುವಳೋ... ಇನ್ನೆಷ್ಟು ಏಟು ತಿನ್ನಬೇಕೋ ಎಂದು ಕಣ್ಣನ್ನು ಆಗಲಿಸಿ ನೋಡುತ್ತಾ ಕುಳಿತೆ. ನಂತರ ಎದ್ದು ನನ್ನ ಟೇಬಲ್ಲಿನ ಬಳಿ ನಿಂತೆ.

    ಬಾಯಿ ಉರಿದಿದ್ದಕ್ಕೆ ಹಿಂಗೈನಿಂದ ಬಾಯಿ ಒರೆಸಿಕೊಂಡೆ. ಹಿಂಗೈ ಕೆಂಪಾಯಿತು. ಕನ್ನಡಿಯ ಬಳಿ ಹೋಗಿ ನೋ¥ಡಿಕೊಂಡೆ. ಮೂತಿಗೆ ಬಿದ್ದ ಏಟಿನಿಂದ ತುಟಿ ಒಡೆದು ರಕ್ತ ಜಿನುಗಿತ್ತು. ಕೂದಲು ಹಿಡಿದೆಳೆದಿದ್ದರಿಂದ ನೆತ್ತಿಯ ಮೇಲೆ ಕೂಲದ ಎದ್ದು ನಿಂತಿತ್ತು. ಮೆಲ್ಲನೆ ಕೈಯಿಂದಲೇ ಕೂದಲು ಸರಿ ಮಾಡಿಕೊಂಡೆ. ನನಗಿದಿದ್ದೇ ಭುಜದವರೆಗಿನ ಕೂದಲು. ಅಷ್ಟೇ ಉದ್ದವಿರಲು ಎರಡು ತಿಂಗಳಿಗೊಮ್ಮೆ ಹೋಗಿ ಕತ್ತರಿಸಿಕೊಳ್ಳಬೇಕು. ಹಾಗೇ ಬಿಟ್ಟಿದ್ದರೆ ಆ ಶ್ವೇತಾಳಿಗಿರುವುದಕ್ಕಿಂತ ಉದ್ದಕ್ಕೆ ಮೊಳಕಾಲಿನವರೆಗೂ ಇದ್ದಿರುವುದೇನೋ ನನ್ನ ತಲೆಗೂದಲು... ಈ ಅಮ್ಮನಿಗೆ ನನಗೆ ಜತೆ ಹಾಕುವುದು ಕಷ್ಟ ನಂಗೆ ಹಾಕಿಕೊಳ್ಳಲು ಬರುವುದಿಲ್ಲ ಅದಕ್ಕೆ ಈ ಹೇರ್ ಕಟ್ ಬಾಯಾರಿಕೆಯಾಯಿತು ಠೆಬಲ್ಲಿನ ಮೇಲಿನ ಜಗ್‍ನಿಂದ ಲೋಟಕ್ಕೆ ನೀರು ಬಗ್ಗಿಸಲು ನೋಡಿದೆ. ನೀರಿನ ಜಗ್ ಖಾಲಿ. ಜಗ್ ಹಿಡಿದು ಬಾಗಿಲವರೆಗೂ ನಡೆದವಳು ಹಾಗೇ ನಿಂತೆ. ಕೆಲಗಿನಿಂದ ಅಮ್ಮನ ದನಿ ಕೇಳಿಸಿತು, ಬೇಡ ಹೋಗುವುದು ಬೇಡ ಎಂದು ನಿರ್ಧರಿಸಿ ಹಿಂತಿರುಗಿದೆ.

    ನನ್ನ ಮುಖ ನೋಡಿದರೆ ಇನ್ನೇನಾದರೂ ನೆನೆಸಿಕೊಂಡು ತಿರುಗಿ ಹೊಡೆದರೆ... ಬಚ್ಚಲಮನೆಯ ಸಂಕಿನ ನಲ್ಲಿಯ ಕೆಳಗೆ ಲೋಟ ಇಟ್ಟು ನೀರು ಹಿಡಿದು ಮನಸ್ಸಿಗೆ ತೃಪ್ತಿಯಾಗುವವರೆಗೂ ನೀರು ಕುಡಿದೆ.

    ಟೇಬಲ್ಲಿನ ಮುಂದೆ ಕುಳಿತು ಇಂಗ್ಲೀಷ್ ಪುಸ್ತಕ ತೆಗೆದೆ. ಮೊದಲನೆಯ ಪದ್ಯವೇ .ಒಥಿ ಒoಣheಡಿ. ನನ್ನ ತಾಯಿ ಎಂದು.

    ಅಬ್ಬ ಈ ತರಹ ತಾಯಿ ಇರುತ್ತಾರೆಯೇ? ಆ ಶೈಲಜಾ ಟೀಚರ್ ಈ ಪದ್ಯವನ್ನು ಇವತ್ತು ಎಷ್ಟು ಚೆನ್ನಗಿ ಹೇಳಿಕೊಟ್ಟರು. ‘ಮದರ್ ಯು ಗೇವ್ ಮಿ ಎವೆರಿಥಿಂಗ್... ಐ ಓವ್ ಮೈ ಲೈಪ್ ಟು ಯೂ.

    ಅಮ್ಮಾ ದೇವತಾ ಸ್ವರೂಪಿಣಿ ಒಂದು ಮಗುವಿಗೆ ಜೀವ ಕೊಡುವವಳು, ತಾಯಿ, ಆ ಮಗುವಿನ ಜೀವನ ನಿರೂಪಿಸುವವಳು ತಾಯಿ ಸಾಯುವವರೆಗೂ ಪ್ರತಿಯೊಬ್ಬರು ಜೀವನ ನಿರೂಪಿಸುವವಳು ತಾಯಿ. ಸಾಯುವವರೆಗೂ ಪ್ರತಿಯೊಬ್ಬರು ತಮ್ಮ ತಯಿಗೆ ಋಣಿಯಾಗಿರುತ್ತಾರೆ. ತಾಯಿಯ ಋಣದಿಂದ ಮುಕ್ತಿಯಿಲ್ಲ ಹೇಳುತ್ತಾ ಶೈಲಜಾ ಟೀಚರ್ ಎಮೋಷನಲ್ ಆಗಿಬಿಟ್ರು. ನಮ್ಮ ಕ್ಲಾಸಿನಲ್ಲೂ ಅಷ್ಟೇ... ನಮಗೆಲ್ಲರಿಗೂ ಕಣ್ಣಲ್ಲಿ ನೀರು ತುಂಬಿಬಂತು ಆ ವೈಷ್ಣವಿ ಅಳೋಕ್ಕೆ ಶುರುಮಾಡಿಬಿಟ್ಲು.

    ಎಲ್ಲಾ ಸ್ಸರಿ... ಆದರೆ ನನ್ನ ಅಮ್ಮ ಯಾಕೆ ಹೀಗೆ? ನನಗೆ ಹೊಡೆಯದಿದ್ದರೆ ಅವಳಿಗೆ ಅನ್ನ ಸೇರೋಲ್ಲ ನಿದ್ದೆ ಬರೋಲ್ಲ ಯಾಕೆ?

    ಮಕ್ಕಳು ಕೆಟ್ಟವರಿರಬಹುದು. ಆದರೆ ತಾಯಿ ಕೆಟ್ಟವಳಾಗಲೂ ಸಾಧ್ಯವಿಲ್ಲ ಬೇರೆ ಎಲ್ಲರಿಗೂ ಕೆಟ್ಟವಳಾದ ಹೆಂಗಸು, ತನ್ನ ಮಗುವಿಗೆ ಒಳ್ಳೆಯವಳಾಗಿರುತ್ತಾಳೆ ಅನ್ನುತ್ಥಾರೆ. ಹಾಗಾದರೆ ಅಮ್ಮ ಹೇಳುವ ಹಾಗೆ ನಾನು ಕೆಟ್ಟವಳೇ ಇರಬೇಕು. ನಾನು ಏನು ಮಾಡಿದರೆ ಅಮ್ಮನಿಗೆ ಖುಷಿಯಾಗಬಹುದು?

    ಕ್ಲಾಸಿಗೆ ಫಸ್ಟ್ ಬಂದರೆ ಖಂಡಿತಾ ಖುಷಿಯಾಗುತ್ತದೆ. ಈ ಬಾರಿ ಚೆನ್ನಾಗಿ ಓದಿ ಮುಂದಿನ ಟೆಸ್ಟ್‍ನಲ್ಲಿ ಆ ರಾಮಕೃಷ್ಣನ್ನ ಬೀಟ್ ಮಾಡಿ ನಾನೇ ಫಸ್ಟ್ ಬರಬೇಕು. ಆಗ ಅಮ್ಮ ಖಂಡಿತಾ ಸಂತೋಷಪಡುತ್ತಾಳೆ. ನಾಣು, ಅಮ್ಮ-ಅಪ್ಪ ಆಗ ಸಂತೋಷದಿಂದ ಇರಬಹುದು. ಅಮ್ಮ ನನ್ನ ಹೋಟೇಲ್ಲಿಗೆ ಕರೆದುಕೊಂಡು ಹೋಗಬಹುದು.

    ಪುಸ್ತಕ ತೆರೆದು ಸೀರಿಯಸ್ ಆಗಿ ಓದಲಾರಂಭಿಸಿದೆ. ಎಷ್ಟು ಹೊತ್ತು ಓದುತ್ತಿದ್ದನೋ ಗೊತ್ತಿಲ್ಲ . ದಢಾರ್ ಎಂದು ಬಾಗಿಲು ನೂಕಿಗೊಂಡು ಅಮ್ಮ ಒಳಗೆ ಬಂದಾಗ, ಗಾಬರಿಯೊಂದ ಎದ್ದು ನಿಂತು ರಭಸಕ್ಕೆ ಟೇಬಲ್ ಮೇಲಿನಿಂದ ಪೆನ್ಸಿಲ್ ಬಾಕ್ಸ್ ಕೆಳಗೆ ಬಿತ್ತು.

    ಎತ್ತಿಡು ಅದನ್ನ ನೆಟ್ಟಗೆ ಛೇರಿನಿಂದ ಇಳಿಯಲೂ ಬರುವುದಿಲ್ಲ. ಯಾವಗಲು ಏನಾದರೂ ಬೀಳಿಸುತ್ತಿರುವುದೇ... ಅಮ್ಮ ಸಿಡುಕಿದಾಗ, ಬಗ್ಗಿ ಪೆನ್ಸಿಲ್ ಎಲ್ಲಾ ತೆಗೆಯಲಾರಂಭಿಸಿದೆ.

    ಒಂದು ಬಾರಿ ಊಟಕ್ಕೆ ಬಾ ಎಂದು ಕರೆದರೆ ನಿಂಗೆ ಕಿವಿ ಕೇಳಿಸುವುದಿಲ್ಲವೇ? ಮಹಾರಾಣಿ ನೀನು. ನಿನ್ನ ರೂಮಿನ ಬಾಗಿಲಿಗೆ ಬಂದು ನಿನ್ನ ಕರೆದುಕೊಂಡು ಹೋಗಬೇಕೇ?

    ನಂಗೆ ಕೇಳಸಲಿಲ್ಲ ಮಮ್ಮಿ…

    "ಯಾಕೆ? ಮಲ್ಕೊಂಡು ನಿದ್ದೆ ಮಾಡ್ತಾ ಇದ್ಯಾ?

    ಇಲ್ಲ ಮಮ್ಮಿ... ಓದ್ತಾ ಇದ್ದೆ.

    ಅಹಹಾ ಓದ್ತಾ ಇರೋ ಮುಷುಡಿ ನೋಡು. ನಡಿ ಕೆಳಗೆ ಊಟ ಮಾಡು ನಡಿ.

    ಸರಿ ಮಮ್ಮಿ...

    ಅದಯಾಕೆ ಯಾವಾಗ್ಲೂ ಹೀಗೆ ಗೋಳೋ ಅಂತ ಮುಖ ಇಟ್ಕೊಂಡಿರ್ತ್ಯಾ? ಎಲ್ಲಾ ಮಕ್ಳು ನಕ್ಕೊಂಡು, ಕುಣ್ಕೊಂಡು ಎಷ್ಟು ಚೆನ್ನಾಗಿ ಇರ್ತಾರೆ. ನಿಂಗೇನು ಬಂದಿದೆ ದೊಡ್ಡ ರೋಗ... ಕುದಲು ತುಂಬಾ ಉದ್ದ ಬೆಳೆದುಬಿಟ್ಟಿದೆ. ಈ ಸರ್ತಿ ಹೇರ್‍ಕಟ್ಟಿಂಗ್ ಹೋದಾಗ ಬಾಯ್ ಕಟ್ ಮಾಡಿಸಿಬಿಡ್ತಿನಿ. ಸರೀಗೆ ಬಾಚಿಕೊಳ್ಳುವುದಿಲ್ಲ. ಏನಿಲ್ಲ. ಒಳ್ಳೆ ರಾಕ್ಷಸಿ ತರಹ ಇದ್ಯಾ.

    ಬೇಡ ಮಮ್ಮಿ ನಂಗೆ ಲಾಂಗ್ ಹೇರ್ ಇಷ್ಟ...

    ಹೂಂ... ಲಾಂಗ್ ಹೇರ್! ನೀರು ಹಾಕಿ ನೋಡಿಕೊಳ್ಳೋರು ಯಾರು?

    ನಾನೇ ಶಾಮಫೂ ವಾಷ್ ಮಾಡ್ಕೊಂತೀನಿ ಮಮ್ಮಿ...

    ನೋ ವೇ

    ಪ್ಲೀಸ್ ಮಮ್ಮಿ... ಬಾಯ್ ಕಟ್ ಅಂತೂ ಖಂಡಿತ ಬೇಡ ಮಮ್ಮಿ...

    ಶಟ್ ಅಪ್... ಹೇಳ್ದಷ್ಟು ಕೇಳೋದು ಕಲ್ತ್ಕೊ... ನೀನು ಹೇಗಿರಬೇಕು ಅಂತ ನಂಗೆ ಗೊತ್ತು…

    ಅಪ್ಪ ಆಗಲೇ ಊಟಕ್ಕೆ ಕುಳಿತಿದ್ದರು. ಅನ್ನ ಸಾರಿನ ಊಟವಾದರು ಅಪ್ಪನಿಗೆ ರಾತ್ರಿ ಊಟದ ಜೊತೆ ಡ್ರಿಂಕ್ಸ್ ಇರಲೇಬೇಕಿತ್ತು ಚಿಪ್ಸ್‍ನ ಪ್ಲೇಟ್ ಮುಂದಿಟ್ಟುಕೊಂಡು ಕುಡಿಯುತ್ತಿದ್ದ ಅಪ್ಪನನ್ನು ನೋಡಿ ಮುಖ ಇನ್ನಷ್ಟು ಸಿಂಡರಿಸಿಕೊಂಡಳು ಅಮ್ಮ.

    ಶುರು ಹಚ್ಚುಕೊಂಡುಬಿಟ್ರಾ? ಅಬ್ಬಬ್ಬ... ಅದ್ರಲ್ಲಿ ಏನು ಸುಖವೋ.

    ನೀನೂ ಕುಡಿದು ನೋಡು... ಗೊತ್ತಾಗುತ್ತೆ. ಏನು ಸುಖ ಆಂತ.

    ಹುಂ. ಅದೊಂದೇ ಕಮ್ಮಿಯಾಗಿರೋದು ನಂಗೆ.

    ಹಲೋ ಮೈ ಡಿಯರ್ ಡಾಟರ್... ಹೌ ಆರ್ ಯು

    ಫೈನ್ ಅಪ್ಪ... ಡ್ಯಡಿ.

    ಢನು? ಅಪ್ಪನೋ ಡ್ಯಾಡೀನೋ?

    ಡ್ಯಾಡಿ...

    ಅಪ್ಪ ಆಂತ ಕರಿ ಚಿನ್ನ...

    ಸುಮ್ನೆಕೂತ್ಕೊಳ್ಳಿ. ನಿಮಗೆ ಗೊತ್ತಾಗೊಲ್ಲ. ಡ್ಯಾಡಿ ಅಂತಲೇ ಕರೀಬೇಕು. ನೀನು ಡ್ಯಾಡಿ ಅಂತಲೇ ಕರಿ.

    ನಾನು ಅವಳ ಅಪ್ಪ. ನಾನು ಡಿಸೈಡ್ ಮಾಡ್ತೀನಿ. ಅಪ್ಪ ಆಂತಾನೇ ಕರಿ ಚಿನ್ನ...

    ನಾನು ಹೇಳೋದು ಅರ್ಥವಾಗೊಲ್ವಾ ನಿಮ್ಗೆ. ಅವಳು ನನ್ನ ಮಗಳು ನಾನು ಹೇಳಿದ ಹಾಗೆ ಕೇಳಬೇಕು. ನನ್ನ ಮಮ್ಮಿ ಅಂದ ಮೇಲೆ ನಿಮ್ಮನ್ನು ಡ್ಯಾಡಿ ಅಂತಲೇ ಅನ್ನಬೇಕು. ಏ... ಹೋಗಿ ಕೈ ತೊಳ್ಕೊಂಡು ಬಂದು ಉಟಕ್ಕೆ ಕೂತ್ಕೊ.

    ಸರಿ ಮಮ್ಮಿ ಅಮ್ಮ ತಟ್ಟೆಗೆ ಅನ್ನ ಹಾಕುವ ವೇಳೆಗೆ ಕೈ ತೊಳೆದುಕೊಂಡು ಬಂದು ಕುಳಿತೆ.

    ಊಂ... ನೀರು ಕುಡಿಬೇಡ. ಊಟ ಮಾಡು. ಮೊಣಕೈ ತೆಗಿ ಟೇಬಲ್ ಮೇಲಿಂದ ಅನ್ನದ ಸೌಟಿನಿಂದಲೇ ಮೊಣಕೈಗೆ ಏಟು ಬಿದ್ದಾಗ. ಕೈಯಲ್ಲಿ ಇದ್ದ ತುತ್ತು ಕೆಳಗೆ ಬಿತ್ತು.

    ಹ್ಹಾ... ನೋವಿನಿಂದ ಚೀರಿದೆ.

    ಛೀ.. ಸರೀಗೆ ತುತ್ತು ಕೈಯಿಂದ ಬಾಯಿಗೆ ಹೋಗಲ್ಲ. ಏಳು... ಕೆಳಗೆ ಬಿದ್ದಿರುವ ಅಗುಳು ತೆಗೆದು, ಡಸ್ಟ್‍ಬಿನ್‍ಗೆ ಹಾಕಿ, ಊಟಕ್ಕೆ ಕೂತ್ಕೊ... ಸಾವಿರ ಸಾರಿ ಹೇಳಿದ್ದೇನೆ. ಮೊಣಕೈ ಟೇಬಲ್ ಮೇಲೆ ಇಟ್ಕೊಬಾರ್ದು ಅಂತ ನನ್ನ ರೇಗಿಸೋಕ್ಕೆ ಬೇಕೂಂತ ಇಟ್ಕೊತ್ತಾಳೆ.

    ಛೇರ್ ಹಿಂದಕ್ಕೆ ನೂಕಿ, ನೆಲದ ಮೇಲೆ ಮೊಣಕಾಲೂರಿ ಕುಳಿತು ಅಗಳನ್ನೆಲ್ಲಾ ಎತ್ತಿದೆ.

    ಅಲ್ಲಿ ಟೇಬಲ್ ಕಾಲಿನ ಹತ್ತಿರ ಅಗಳಿದೆ ನೋಡು. ಕಣ್ಣು ಕಾಣಿಸೋಲ್ಲವೇ ನಿಂಗೆ. ಕ್ಲೀನಾಗಿ ತೆಗಿ ರೀ, ಊಟಕ್ಕೆ ಬನ್ನಿ ಕುಡಿದಿದ್ದು ಸಾಕು. ನಾಣು ಟೇಬಲ್ ಕ್ಲೀನ್ ಮಾಡಿ ಮಲ್ಕೋಬೇಕು. ಬೆಳಗ್ಗೆಯಿಂದ ನಿಮ್ಮ ಮಗಳ ಮುಂದೆ ನಿಂತು ಸಾಕಾಗಿದೆ. ಈ ಭಾನುವಾರ ಯಾಕಾದ್ರೂ ಇರುತ್ತೋ. ಈ ಸ್ಕೂಲುಗಳನ್ನು ಭಾನುವಾರವೂ ತೆರೆದಿದ್ರೆ ನಾನು ಹಾಯಾಗಿ ಇರಬಹುದು.

    ಅಮ್ಮ ಬೈಯ್ಯುತ್ತಲೇ ಇದ್ದಳು. ಗೊಣಗುತ್ತಲೇ ಇದ್ದಳು. ನಾಣು ಆದಷ್ಟು ಹುಷಾರಾಗಿ, ಮಾತಾಡದೆ ಊಟ ಮುಗಿಸಿದೆ.

    ಪಾಪ... ಎಷ್ಟು ಗಂಭೀರವಾಗಿ, ಮುದ್ದಾಗಿ ಇದ್ದಾಳೆ. ಅವಳನ್ನು ಅಂತೀಯಲ್ಲ.

    ನೀವು ಸುಮ್ಮನಿರಿ, ನಿಮಗೇನು ಗೊತ್ತು? ಬೆಳಿಗ್ಗೆಯೆದ್ದು ಗಾಲ್ಪ್ ಆಡಲು ಹೋದರೆ ಮಧ್ಯಾಹ್ನ ಬರುತ್ತೀರಿ. ಉಂಟು ಮಲಗಿದರೆ ಸಂಜೆಗೆ ಏಳ್ತೀರಿ. ಆಮೇಲೆ ಕುಡಿಯುತ್ತಾ ಕುಳಿತುಕೊಳ್ತೀರಿ. ನಿಮಗೇನು ಗೊತ್ತಾಗುತ್ತೆ? ಮುದ್ದಾಗಿದ್ದಾಳಾ ಇವಳು? ಒಳ್ಳೆ ಮೂಷಂಡಿ ಇದ್ದ ಹಾಗೆ ಇದ್ಧಾಳೆ.

    ಛೀ, ಅಲ್ವೇ. ಅದೇಕೆ ಅವಳ ಮೇಲೆ ಹಾಗೆ...

    ದಡ್ಡನೆ ಮೇಲೆದ್ದ ಅಮ್ಮ ಅವಳು ಊಟ ಮಾಡುತ್ತಿದ್ದ ತಟ್ಟೆಯನ್ನೆತ್ತಿ ರೂಯ್ಯನೆ ದೂರೆವೆಸೆಳು. ನನಗೆ ಕಾಲು ನಡುಕ ಶುರುವಾಯಿತು.

    ಅದೇನು ಅವಳ ಮೇಲೆ ಅಷ್ಟೊಂದು ಅನುಕಂಪ, ಅಕ್ಕರಾಸ್ತೆ! ಅವಳು ಇಷ್ಟುದ್ದ ಇದಾಳೆ. ಅವಳ ಪರ ವಹಿಸಿ ನನ್ನೇ ಅಂತೀರಲ್ಲ. ಅದೇನು ಮೋಡಿ ಮಾಡಿದ್ದಾಳೆ ಅವಳು ನಿಮಗೆ.

    ಅದೇನು ಕೆಟ್ಟ ಮನಸ್ಸೆ ನಿಂದು. ಅದೆಷ್ಟು ವಕ್ರವಾಗಿ ಓಡುತ್ತೆ ನಿನ್ನ ಬುದ್ದಿ...

    ಹೌದು ನನ್ನ ಬುದ್ದಿ ಬಕ್ರ. ನಿಮ್ಮದು ನೇರವೇ? ಈ ಅನಿಷ್ಟ ಹುಟ್ಟೋಕ್ಕೆ ಮುಂಚೆ ನಾನೇ ಇಂದ್ರ ಚಂದ್ರ ಆಗಿದ್ದೆ. ನನ್ನ ಹಿಂದೆ ಹಿಂದೆ ಸುತ್ತಾ ಇದ್ರಿ ನಾನು ಹೇಳಿದ್ದನ್ನೆಲ್ಲಾ ಒಪ್ತಾ ಇದ್ರಿ. ಇವಳು... ಈ ಗೂವೆ ಹುಟ್ಟಿದ ಮೇಲೆ ನನ್ನ ಬುದ್ದಿ ಬಕ್ರ, ನನ್ನ ಮಾತು ಅತಿರೇಕ, ನನ್ನ...

    ಮಮತಾ... ಮಮತಾ ನಿಂಗೆ ಏನು ಹೇಳಲಿ.

    ಹೇಳಿ... ಏನು ಬೇಕಾದರೂ ಹೇಳಿ. ಮಗಳ ಸ್ವಲ್ಪ ದೊಡ್ಡವಳಾದ ಮೇಲೆ ನನ್ನ ಓಡಿಸಿ...

    ಮಮತಾ... ಜೋರಾಗಿ ಕೂಗಿ, ಡ್ಯಾಡಿ ಅಮ್ಮನ ಕೆನ್ನೆಗೆ ಹೊಡೆದರು.

    "ಎಂಥಾ ಅನಾಗರೀಕ, ಅಸಭ್ಯ ಮನಸ್ಸೇ ನಿನ್ನದು. ಮಮತಾ ಮಾನಸಾ ನನ್ನ ಮಗಳು...’

    ಅಪ್ಪನ ಮುಖ ಕೋಪದಿಂದ ಕೆಂಪೇರಿತ್ತು. ಕಣ್ಣುಗಳು ಕೆಂಡದುಂಡೆಯಂತಾಗಿತ್ತು. ತುಟಿಗಳು ಅದುರುತ್ತಿದ್ದವು. ನಾನು ಅಪ್ಪನ ಈ ಉಗ್ರರೂಪವನ್ನು ನೋಡಿರಲಿಲ್ಲ. ಊಟದ ಮನೆಯಿಂದ ಓಡಿ ನನ್ನ ಕೋಣೆಯನ್ನು ಸೇರಿಕೊಳ್ಳುವ ಬಯಕೆಯಾಯಿತು.

    ಓಡಿದರೆ ಏನನ್ನಾದರೂ ಕೆಡವಿ, ನಾನೂ ಬಿದ್ದು ಅಮ್ಮನ ಕೋಪಕ್ಕೆ ಬಲಿಯಾಗಬಾರದು ಎಂಬ ವಿವೇಕ ಮೂಡಿ ಮೆಲ್ಲನೆ ಅಲ್ಲಿಂದ ನಡೆದೆ.

    ನಿಂಗ್ಕೊಳ್ಳೇ ಅಲ್ಲೇ... ಅಮ್ಮನ ದನಿಗೆ ಬೆಚ್ಚಿ ನಿಂತಲ್ಲೇ ನಿಂತೆ.

    ಅಮ್ಮ ಊಟದ ಮೇಜಿನ ಮೇಲಿದ್ದ ಹಣ್ಣಿನ ತಟ್ಟೆಯ ನಡುವಿನಲ್ಲಿದ್ದ ಚಾಕುವನ್ನು ಕೈಗೆತ್ತಿಕೊಂಡಾಗ ತಿಂದ ಅನ್ನ ಗಂಟಲಿಗೆ ಒತ್ತರಿಸಿಕೊಂಡು ಬಂತು .

    ಅಮ್ಮ... ಸಾರಿ ಸಾರಿ... ಮಮ್ಮಿ. ಪ್ಲೀಸ್.

    ಮಮತಾ...

    ಅಲ್ಲೇ ನಿಂತ್ಕೋಳಿ. ಇನ್ನೊಂದು ಬಾರಿ ನನ್ನ ನನ್ನ ಮಗಳ ಮದ್ಯೆ ಬಾಯಿ ಹಾಕಿದರೆ ನಾನು ಈ ಚಾಕುವಿನಿಂದ ಚುಚ್ಚಿಕೊಂಡು ಪ್ರಾಣ ಬಿಟ್ಟುಬಿಡ್ತೀನಿ.  ನಿಮ್ಮ ಮಗಳ ತಲೆ ಮೈಲೆ ಕೈಯಿಟ್ಟು ಪ್ರಮಾಣ ಮಾಡಿ... ಬೇಡ ಬೇಡ. ಅವಳನ್ನು ಮುಟ್ಟಬೇಡಿ ಹಾಗೇ ಪ್ರಮಾಣ ಮಾಡಿ...

    ಆವಳು ಆರು ವರ್ಷದ ಚಿಕ್ಕ ಮಗು ಕಣೇ ಮಮತಾ ಅಪ್ಪನ ದನಿಯಲ್ಲಿ ದುಃಖ ತುಂಬಿತ್ತು.

    ನೀವು ಕುರುಕರು, ಯಾವ ಹೊತ್ತಿನಲ್ಲಿ ಹೇಗೆ ಇರ್ತೀರೋ ನಂಗೆ ನಂಬಿಕೆ ಇಲ್ಲ. ನಿಮ್ಮ ಆಟಗಳೆಲ್ಲಾ ನಂಗೆ ಗೊತ್ತಿಲ್ಲ ಅಂದುಕೊಂಡಿದ್ದೀರಾ.

    ಅದು ಬೇರೆ ವಿಚಾರ, ಅದಕ್ಕೆ ನನ್ನೊಂದಿಗೆ ಜಗಳವಾಡು ಹೊಡೆದಾಡು... ಅಧರೆ ಏನೂ ತಿಳಿಯದ ಮಗುವನ್ನು ಶಿಕ್ಷಿಸಬೇಡ.

    ನಾಣು ನಿನ್ನ ವಿರುದ್ಧ ಕಾಗದ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡುಬಿಡ್ತೀನಿ. ನೀವು ಆಗ ಜೈಲಿನಲ್ಲಿ ಕಂಬಿ ಎಣಿಸಬೇಕಾಗುತ್ತದೆ. ಆಗ ನಿಮ್ಮ ಮುದ್ದುಮಗಳು ಅನಾಥಾಶ್ರಮದಲ್ಲಿ ಇರಬೇಕಾಗುತ್ತದೆ.

    ಮಮತಾ...

    "ನನ್ನ ಹೆಸರೆತ್ತಬೇರಿ. ನಂಗೆ ಗೊತ್ತು ಹೆಣ್ಣುಮಕ್ಕಳನ್ನು ಹೇಗೆ

    Enjoying the preview?
    Page 1 of 1