Discover millions of ebooks, audiobooks, and so much more with a free trial

Only $11.99/month after trial. Cancel anytime.

Sathsanchaya
Sathsanchaya
Sathsanchaya
Ebook112 pages33 minutes

Sathsanchaya

Rating: 0 out of 5 stars

()

Read preview

About this ebook

Born in Mangalore, Shyamala had schooling at Besant National Girls High School and college education at St Agnes College, Mangalore.

Her father, Narayana Uchil, was an educationist and reformist and mother U Vasanthi worked as PT and Guiding teacher at the Besant National Girls School.

With an inborn passion for books and reading and with a treasury of books at home, she read a lot and soon took to writing. Her first poem 'KaDalina Kare' was published in 'Rashtrabandhu, when she was just eleven.

Married life brought her to Mumbai. Memoirs of her grandmother were published in 'Amrita Varshini' in 'BeLLi' in 1971. Her other works are Kannada stories, features, translated stories and travelogues in different magazines in Karnataka and Mumbai.

She has worked for Sound and Picture Archive for Research On Women (SPARROW) in the field of transcription and translation. She has also served on the editorials of Mumbaivani special issues and Nityavani daily in Mumbai. She has presented a research paper on Mumbai-based Kannada fiction at PUKAR in Mumbai.

Besides, she was the president of Srijana, a forum of women writers in Kannada in Mumbai for two years. During her tenure, she had organized seminars, book releases and workshops in collaboration with the Anuvada Academy, Bangalore.

Her published works include 'Alamapanah', translated from the Hindi version of the Urdu novel of the same name by Rafia Manzurul Amin and it was brought out Bhagirathi Prakashana in 1994, translation of Margaret Mitchell's great Classic 'Gone With The Wind' published by Ankita Pustaka, Bangalore in 2004, translation of Mary Shelly's Classic, 'Frankenstein' published by Ankita Pustaka, Bangalore in 2007 and many others.
LanguageKannada
Release dateAug 12, 2019
ISBN6580201900290
Sathsanchaya

Read more from Shyamala Madhav

Related to Sathsanchaya

Related ebooks

Reviews for Sathsanchaya

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Sathsanchaya - Shyamala Madhav

    http://www.pustaka.co.in

    ಸತ್ಸಂಚಯ

    Satsanchaya

    Author :

    ಶ್ಯಾಮಲಾ ಮಾಧವ

    Shyamala Madhav

    For more books
    http://www.pustaka.co.in/home/author/shyamala-madhav

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ನಿವೇದನೆ

    ಸತ್ಯ, ಸುವಿಚಾರ, ಸದಾಚಾರಗಳೇ ತಮ್ಮ ಜೀವದುಸಿರೆಂಬಂತೆ ಬಾಳಿ, ತಮ್ಮ ಧ್ಯೇಯೋದಾತ್ತ ಜೀವನದಿಂದ ನಮ್ಮೆಲ್ಲರಿಗೆ ಮಾರ್ಗದರ್ಶಕರಾಗಿದ್ದ ನಮ್ಮ ಪೂಜ್ಯ, ಪ್ರಿಯ ತಂದೆಯವರಿಗೆ ನಾವು ಸಲ್ಲಿಸುತ್ತಿರುವ ನುಡಿನಮನ, ಈ ‘ಸತ್ಸಂಚಯ.’ ತಂದೆಯವರು ನಮ್ಮನ್ನಗಲಿದ ತರುಣದಲ್ಲಿ ಮನದ ದುಃಖಭಾರವನ್ನು ಹಗುರಾಗಿಸಿಕೊಳ್ಳಲು ಲೇಖನಿ ಕೈಗೆತ್ತಿಕೊಂಡಾಗ ರೂಪುತಳೆದ ಸ್ಮøತಿ ಸಂಚಯವು ತಂದೆಯವರ ಜೀವನದ ‘ಸತ್ಸಂಚಯ’ವೇ ಆಗಿದೆ.

    ಸಮಾಜದ ಅಭ್ಯುದಯಕ್ಕಾಗಿ ತಾನೆಂಬುದನ್ನು ಮರೆತು ದುಡಿದ ನಮ್ಮ ತಂದೆಯವರ ಬಗೆಗಿನ ಈ ಕಿರುಹೊತ್ತಗೆಯಲ್ಲಿ, ಅದೇ ಸಮಾಜದ ಏಳಿಗೆಯ ಮೂಲ ಕಾರಣಪುರುಷರಾದ ನಮ್ಮ ಹಿರಿಯ ಪರಂಪರೆಯನ್ನೂ ಸ್ಮರಿಸಿ, ಆ ವ್ಯಕ್ತಿಚಿತ್ರಗಳನ್ನೂ ಇಲ್ಲಿ ಯಥಾವತ್ ರೂಪಿಸಲಾಗಿದೆ.

    ನಮ್ಮ ಕೋರಿಕೆಯಂತೆ ಈ ‘ಸತ್ಸಂಚಯ’ಕ್ಕೆ ತಮ್ಮ ಅಮೂಲ್ಯ ನೆನಪಿನ ಬುತ್ತಿಯನ್ನಿತ್ತ ಹಿರಿಯ ಸಾಹಿತಿಗಳಾದ ಮಾನನೀಯ ಶ್ರೀ ರಾಮಚಂದ್ರ ಉಚ್ಚಿಲರಿಗೂ, ಶ್ರೀ ಅಮೃತ ಸೋಮೇಶ್ವರರಿಗೂ ನಮ್ಮ ಅನಂತ ಕೃತಜ್ಞತೆಗಳು ಸಲ್ಲುತ್ತವೆ.

    ‘ಸತ್ಸಂಚಯ’ವನ್ನು ಕೈಗೆತ್ತಿಕೊಂಡು ಹೃದ್ಯವಾಗಿಸಿಕೊಳ್ಳುವ ಓದುಗ ಬಾಂಧವರಿಗೆ ನಮ್ಮ ಕೃತಜ್ಞತೆಗಳು.

    ಎನ್. ಜಿ. ಮೋಹನ್                                                        ಶ್ಯಾಮಲಾ

    ಪರಿವಿಡಿ

    o      ಸತ್ಸಂಚಯ

          ಶ್ಯಾಮಲಾ

    o      ನಮ್ಮ ಆದರ್ಶ ನಮ್ಮ ತಂದೆ

          ಎನ್. ಜಿ. ಮೋಹನ್

    o      ದಾರಿದೀಪವಾದ ಹಿರಿಯ ತಲೆಮಾರು

          ಎನ್. ಜಿ. ಮೋಹನ್

    o      ನಾರಾಯಣ ಉಚ್ಚಿಲ - ಕೆಲವು ನೆನಪುಗಳು

          ಚ. ರಾ.

    o      ಸುಧಾರಣಶೀಲ ನಾರಾಯಣ ಉಚ್ಚಿಲ್

          ಅಮೃತ ಸೋಮೇಶ್ವರ

    ಸತ್ಸಂಚಯ

    ಯಾರು ಸತ್ಯ ನುಡಿಯುವುದಕ್ಕಾಗಿ ಮಿತಭಾಷಿಗಳಾಗಿದ್ದರೋ..... ಎಂದು ರಘುವಂಶಜರ ಬಗ್ಗೆ ಬರೆದಿರುವುದನ್ನು ನೆನೆದಾಗಲೆಲ್ಲ ನನ್ನ ಮನದಲ್ಲಿ ಮೂಡುವುದು ನನ್ನ ತಂದೆಯವರ ಚಿತ್ರ! ಸತ್ಯವ್ರತರಾಗಿ, ಮಿತಭಾಷಿಗಳಾಗಿ, ಸರಳ ಜೀವನವನ್ನು ಬಾಳಿದ ಆದರ್ಶಪ್ರಾಯರವರು. ಅಸತ್ಯ, ಅವಿಚಾರ, ಅನಾಚಾರಗಳನ್ನು ಮೆಚ್ಚದವರು, ಅಂತರಂಗಶುದ್ಧಿ, ಬಹಿರಂಗ ಶುದ್ಧಿಯನ್ನೇ ಆದರ್ಶವಾಗಿಟ್ಟುಕೊಂಡವರು. ಜ್ಞಾನಾರ್ಜನೆಯನ್ನು ಗೌರವಿಸಿ, ವಿದ್ಯಾಮಂದಿರಗಳನ್ನು, ವಿದ್ಯಾರ್ಥಿಗಳನ್ನು ಪ್ರೀತಿಸಿದ ಪೂಜ್ಯರು.

    ಧೈರ್ಯಸ್ಥೈರ್ಯಗಳ, ಜ್ಞಾನ ವಿವೇಕಗಳ ಉತ್ತುಂಗ ವ್ಯಕ್ತಿತ್ವದ ತಂದೆಯವರನ ನೆನಪಿನೊಡನೆ ಹಾಸುಹೊಕ್ಕಾಗಿ ಬಂದಿದೆ, ಇನ್ನೇಷ್ಟೋ ಜೀವಭಾವಗಳ, ನೋವು ನಲಿವುಗಳ, ಮಧುರಾನುಭವಗಳ ಸ್ಮøತಿಚಿತ್ರ!

    ನೆನಪಿನ ದಾರಿಯಲ್ಲಿ ಎದ್ದು ಬರುತ್ತಿದೆ, ಬಾಲ್ಯದಲ್ಲಿ ಆಗಾಗ ನನ್ನನ್ನು ಕಾಡುತ್ತಿದ್ದ ಆ ಕನಸು! ಕೆಂಪು, ಹಳದಿ ವರ್ಣದ ಗುಲಾಬಿ ಹೂಗಳಿಂದ ತುಂಬಿದ ಹಚ್ಚಹಸುರಿನ ತೋಟದ ಮಧ್ಯೆ ಧಾವಿಸುತ್ತಿರುವ ಗಾಂಧೀಜಿಯವರ ಬೆನ್ನಹಿಂದೆ ಓಡುತ್ತಿರುವ ತಂದೆಯವರೂ ಆ ತೋಟಮಧ್ಯದ ಹುಲಿಯಿರುವ ಬಾವಿಯೊಳಗೆ ಬೀಳುವರಲ್ಲಾ ಎಂಬ ಆತಂಕದಿಂದ ಕೂಗಿಕರೆವ ಯತ್ನದ ನಡುವೆ ಫಕ್ಕನೆ ಎಚ್ಚರಾಗುವಾಗ ಕೊಕ್ಕೆ ಹಿಡಿವ ಕಾಲನ್ನು ತಡವಿ ನೇರವಾಗಿಸುವ ತಂದೆಯವರ ವಾತ್ಸಲ್ಯ ಹಸ್ತ! ಮುಂದೆ ನನ್ನ ಹತ್ತನೇ ಹರೆಯದಲ್ಲಿ ಅದೇ ಕಾಲನ್ನು ಪೋಲಿಯೋ ವ್ಯಾಧಿ ಬಾಧಿಸಿದಾಗ ಕಾಡ್‍ಲಿವರ್ ಎಣ್ಣೇ ಹಚ್ಚಿ ತಿಕ್ಕಿ ಆರೈಕೆಗೈದ ಅಕ್ಕರೆಯ ಹಸ್ತ! ಅವರ ಕೊನೆಯ ದಿನಗಳಲ್ಲಿ ರಕ್ತದ ಕೊರತೆಯಿಂದ ಸದಾ ಕೊಕ್ಕೆ ಹಿಡಿಯುತ್ತಿದ್ದ ಕೈಕಾಲುಗಳಿಗೆ ಅಯೊಡೆಕ್ಸ್ ಹಚ್ಚಿ ಆ ಬಾಧೆಯಿಂದ ಬಿಡಿಸಲೆತ್ನಿಸುವಾಗ ಬಾಲ್ಯದಲ್ಲಿನ ಆ ನೆನಪು ಎದ್ದು ಬರುತ್ತಿತ್ತು.

    ಮಂಗಳೂರಿನ ಬೆಸೆಂಟ್ ರಾಷ್ಟ್ರೀಯ ಪ್ರೌಢ ಶಿಕ್ಷಣ ಶಾಲೆಯ ಆವರಣದೊಳಗಿನ ಮನೆಯಲ್ಲಿ ಕಳೆದ ಬಾಲ್ಯ ನನ್ನ ಪಾಲಿನ ಅಮೂಲ್ಯ ಆಸ್ತಿ! ರಾಷ್ಟ್ರೀಯ ಹಬ್ಬಗಳು ಗೌರವಾದರದಿಂದ ಆಚರಿಸಲ್ಪಡುತ್ತಿದ್ದ ಶಾಲಾವಾತಾರವಣದಲ್ಲಿ ಬೆಳೆದು, ಸ್ವಾತಂತ್ರ್ಯಯೋಧರ ಹೆಸರಿಗೇ ಮೈನವಿರೇಳುತ್ತಿದ್ದ ನನಗೆ, ತಂದೆಯವರು ಗಾಂಧಿ, ನೆಹರೂಗೆ ಸಮಾನರಾದ ಆದರ್ಶವ್ಯಕ್ತಿ! ಶುಭ್ರಶ್ವೇತವಸನರಾದ ಶಿಸ್ತಿನ ಮೂರ್ತಿ! ನಿಯಮಿತ ಸರಳ ಆಹಾರ, ಮಿತವಾದ ಮಾತು. ರಾತ್ರೆ ಊಟದ ಬಳಿಕ ಅಂಗಳದಲ್ಲಿ ನಡೆದಾಡುವ ಅವರೊಡನೆ ನಾವು ಮಕ್ಕಳೂ ಅಂತೆಯೇ ಕೈ ಹಿಂದೆ ಕಟ್ಟಿಕೊಂಡು ನಡೆದಾಡುವಾಗ ಆಗಸದ ತಾರಾಪುಂಜಗಳ ಪರಿಚಯ. ನಿರಂಜನರ ‘ಚಿರಸ್ಮರಣೆ’ಯನ್ನೋದಿದ ಆ ಏಳೆಂಟರ ಪ್ರಾಯದಲ್ಲಿ, ನನ್ನ ತಂದೆಯವರೂ ತೀರಿಕೊಂಡಾಗ ಹೀಗೆಯೇ ನಕ್ಷತ್ರವಾಗುವರೆಂದು ನಾನು ಕಲ್ಪಿಸಿದ್ದೆ. ನಸುಕಿನ ಚಳಿಗೆ ಏಳಲಾರದ ನಮ್ಮನ್ನು, ‘ನೋಡು ಕಂದ ಏನು ಅಂದ ಸೂರ್ಯ ಮೂಡಲಲ್ಲಿ ಬಂದ, ಹೆಚ್ಚು ಮಲಗಲೇನು ಚಂದ, ಬಾ ಕಂದ ಬಾ’ ಎಂದು ಹಾಡಿ ಅವರು ಎಬ್ಬಿಸುತ್ತಿದ್ದ ಪರಿ; ಮನೆಯೊಳಗೆ ನಡೆದಾಡುವಾಗೆಲ್ಲ ಅವರು ಹಾಡಿಕೊಳ್ಳುತ್ತಿದ್ದ ‘ವೈಷ್ಣವ ಜನತೋ...’ ‘ದೇಹವಿದು ನೀನಿರುವ ಗುಡಿಯೆಂದು ತಿಳಿದು...’, ‘ಯಾರನು ಕೇಳಲಿ ನಾ, ಎಲ್ಲಿಹೆ ನೀನೆಂದು.....’ ಹಾಡುಗಳು, ಸರ್ವಜ್ಞ ವಚನಗಳು, Breathes there the man with soul so dead..., Where the mind is without fear… ಗೀತೆಗಳು. ಅವರಿಗೆ ಬಹುಪ್ರಿಯವಾದ ‘ಸಾರೇ ಜಹಾಂ ಸೆ ಅಚ್ಛಾ...’ – ಇವನ್ನೆಲ್ಲ ಕೇಳಿಸಿಕೊಳ್ಳುತ್ತಲೇ ಬೆಳೆದ ಭಾಗ್ಯ ನನ್ನದು. ರುಗ್ಣಶಯ್ಯೆಯಲ್ಲೊರಗಿದ ಕೊನೆಯ ದಿನಗಳಲ್ಲೂ ಕಾಡುವ ನಿಶ್ಶಕ್ತಿಯ ನಡುವೆಯೂ ಅವರು ಈ ಗೀತೆಗಳನ್ನು ಹಾಡಿಕೊಳ್ಳಲು ಯತ್ನಿಸುತ್ತಿದ್ದಾಗ ಕೇಳುವ ನಮ್ಮ ಹೃದಯ ಹಿಡಿದಂತಾಗುತ್ತಿತ್ತು.

    Enjoying the preview?
    Page 1 of 1