Discover millions of ebooks, audiobooks, and so much more with a free trial

Only $11.99/month after trial. Cancel anytime.

Ramanakathe
Ramanakathe
Ramanakathe
Ebook245 pages5 hours

Ramanakathe

Rating: 3 out of 5 stars

3/5

()

Read preview

About this ebook

Born and educated in erstwhile Madras, Smt.Vijayalakshmi has to her credit many stories and articles published in Tamil magazines. Her illustrated retelling of Valmiki Ramayana titled “ Raman Kadai” published by the prestigious Kalaimagal Kaariyaalayam, with a foreword by Sri Chandrasekara Saraswathi , Shankaracharya of Kanchi , was well received not only in Tamil Nadu but in Srilanka and other places as well. This was later published as ‘Ramana Kathe ‘in Kannada as well. Her travelogue covering South India , in Tamil received encouragement from Sri.Rajaji and other eminent Tamil writers. Moving to Mysore upon marriage, she taught herself Kannada and started translating her Tamil works. “ Aa Rahasya Haagoo Itara Kathegalu” a compendium of delightful short stories with moral lessons for children , was written in Kannada and it received the Karnataka Rajyotsava award for children’s literature in 1970 at Mysore. Being a trained artist ,Smt .Vijayalakshmi has illustrated all her stories herself. ‘ Keliri Nanna Katheya’ a story providing infotainment is another Kannada creation that brought her popularity. Vijayalakshmi , now an octogenarian currently lives with her sons at Mysore.
LanguageKannada
Release dateAug 12, 2019
ISBN6580203500844
Ramanakathe

Related to Ramanakathe

Related ebooks

Reviews for Ramanakathe

Rating: 3 out of 5 stars
3/5

1 rating0 reviews

What did you think?

Tap to rate

Review must be at least 10 words

    Book preview

    Ramanakathe - C.S.Vijayalakshmi

    http://www.pustaka.co.in

    ರಾಮನಕಥೆ

    RamanaKathe

    Author :

    ಸಿ.ಎಸ್. ವಿಜಯಲಕ್ಷ್ಮಿ

    C.S.Vijayalakshmi

    For more books

    http://www.pustaka.co.in/home/author/cs-vijayalakshmi

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ರಾಮನಕಥೆ

    ಸಿ.ಎಸ್. ವಿಜಯಲಕ್ಷ್ಮಿ

    ರಾಮನ ಕಥೆ

    ವಾಲ್ಮೀಕಿ ಮಹರ್ಷಿಗಳಿಂದ ರಚಿಸಲ್ಪಟ್ಟ ಶ್ರೀರಾಮನ ಕಥೆಯನ್ನು ಪುಟ್ಟ ಮಕ್ಕಳಿಗೆ ತಿಳಿಯುವಂತೆ ಸಂಕ್ಷಿಪ್ತವಾಗಿಯೂ ಸರಳವಾಗಿಯೂ ಹೇಳಬೇಕೆಂಬ ಅಪೇಕ್ಷೆ ಬಹುದಿನದಿಂದಲೂ ನನ್ನಲ್ಲಿತ್ತು. ರಾಮ ಹುಟ್ಟಿದ, ಸೀತೆಯನ್ನು ಮದುವೆಯಾದ, ಕಾಡಿಗೆ ಹೋದ, ರಾವಣನನ್ನು ಸಂಹಾರ ಮಾಡಿದ ಅಂತ, ಎಲ್ಲರಿಗೂ ತಿಳಿದ ವಿಷಯವೇ.

    ವಾಲ್ಮೀಕಿಯವರ ರಾಮಾಯಣ ಮಹಾಕಾವ್ಯದಲ್ಲಿ ಎಷ್ಟೋ ವಿಷಯಗಳು ಅಡಗಿವೆ. ‘ರಾಮಾಯಣ’-ಅಂದರೆ, ರಾಮನ ಜೀವನ ಮಾರ್ಗ, ರಾಮನ ಜೀವನ ಮಾರ್ಗ ಯಾವುದು?

    ರಾಮ ಸತ್ಯಪುರುಷ. ಮನುಷ್ಯನಾಗಿ ಹುಟ್ಟಿದ ಪ್ರತಿಯೊಬ್ಬನೂ ಸಹ ಸತ್ಯವನ್ನು ಆಚರಿಸಿದರೆ, ಅವನು ಮಹಪುರುಷನಾಗಬಹುದೆಂಬುದು ನಿಶ್ಚಯ. ಅಂತಹದೊಂದು ಜೀವನವನ್ನು ಬಾಳಿ ತೋರಿಸಿದ ಮಹಾಪುರುಷ ಶ್ರೀರಾಮ.

    ರಾಮಾಯಣ ಮಹಾಕಾವ್ಯದಲ್ಲಿ, ಸಂದರ್ಭಕ್ಕೆ ತಕ್ಕಂತೆ ಅನೇಕ ವಿಷಯಗಳನ್ನು ವಿವರಿಸಲಾಗಿದೆ. ನವರಸಗಳು, ವಿಜ್ಞಾನ, ಭೂಗೋಳ, ಲಲಿತ, ಚಿತ್ರ, ಶಿಲ್ಪ, ಕಟ್ಟಡ ಕಲೆಗಳು, ಸ್ನೇಹ, ವಿರೋಧ, ಗುರುಹಿರಯರಲ್ಲಿ ಭಕ್ತಿ, ಋತುಗಳ ವರ್ಣನೆ, ಪ್ರಕೃತಿಯ ಸೌಂದರ್ಯ, ಬದಲಾವಣೆಗಳು. ದೇಶ ವಿದೇಶಗಳೊಡನೆ ಸಂಬಂಧ, ರಾಜನೀತಿ, ಪಾಕಶಾಸ್ತ್ರ, ಮಾನಸಶಾಸ್ತ್ರ, ಇತ್ಯಾದಿ ಇನ್ನು ಅನೇಕ ವಿಷಯಗಳಿವೆ. ಇವು ಎಲ್ಲವನ್ನೂ ಸಂಪೂರ್ಣವಾಗಿ ಗ್ರಹಿಸುವ ಶಕ್ತಿ ಚಿಕ್ಕ ಮಕ್ಕಳಿಗೆ ಇರಲಾರದು. ಆದ್ದರಿಂದ, ಸಪ್ತಕಾಂಡಗಳಲ್ಲಿ ಅಡಗಿರುವ ವಿಷಯಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ಗುರುತಿಸಿದ್ದೇನೆ.

    ಬಾಲಕಾಂಡದಲ್ಲಿ ಶ್ರೀರಾಮನ ಗುಣಾತಿಶಯಗಳನ್ನು ವಿವರಿಸಲಾಗಿದೆ. ಇಂತಹ ಗುಣಗಳನ್ನು ಪಡೆದಿರುವ ಮಾನವನು ಮಹಾಪುರುಷನಾಗುವೆನೆಂದು ತಿಳಿದುಬರುತ್ತದೆ. ಅಯೋಧ್ಯೆ ಮತ್ತು ಅದನ್ನು ಆಳಿದ ದಶರಥ ಚಕ್ರವರ್ತಿಯ ವಿಚಾರಗಳನ್ನು ಓದಿದರೆ, ಒಂದು ದೇಶದ ಸುಭಿಕ್ಷ, ಪ್ರಶಸ್ತಿ ಇವು ರಾಜ್ಯವನ್ನಾಳುವವರು ಮತ್ತು ಪ್ರಜೆಗಳು ಇವರಿಂದ ಹೆಮ್ಮೆಗೊಳಿಸುತ್ತದೆಂದು ತಿಳಿದುಬರುತ್ತದೆ.

    ವಿಶ್ವಾಮಿತ್ರ ಋಷಿಯು, ಶ್ರೀರಾಮಲಕ್ಷ್ಮಣರನ್ನು ಕರೆದುಕೊಂಡು ಹೋಗುವಾಗ, ಒಂದೊಂದು ಸ್ಥಳದ ವೈಶಿಷ್ಟ್ಯವನ್ನೂ ವಿವರಿಸುವುದು, ಭಾರತದಲ್ಲಿ ಒಂದೊಂದು ಅಂಗುಲ ಭೂಮಿಯೂ ಪವಿತ್ರವಾದದ್ದು ಎಂಬುದನ್ನು ವ್ಯಕ್ತಪಡಿಸುತ್ತದೆ. ಶ್ರೀರಾಮಲಕ್ಷ್ಮಣನಿಗೆ ಮಂತ್ರೋಪದೇಶ ಮಾಡಿ, ಅಸ್ತ್ರ ಶಸ್ತ್ರಗಳ ಪ್ರಯೋಗವನ್ನು ತಿಳಿಸಿ, ಅವುಗಳನ್ನು ಅವರಿಗೆ ಕೊಡುವುದು, ಅಸ್ತ್ರ ಶಸ್ತ್ರ ವಿಚಾರದಲ್ಲಿ ಅವರಿಗಿದ್ದ ಜ್ಞಾನವನ್ನು ವ್ಯಕ್ತಪಡಿಸುತ್ತದೆ. ತಪಶ್ಯಕ್ತಿಯಿಂದ ವಿಶ್ವಾಮಿತ್ರರು ಮಾಡಿದ ಅನೇಕ ಅದ್ಭುತಗಳನ್ನು ವಿವರಿಸಲಾಗಿದೆ.’

    ಅಯೋಧ್ಯಾಕಾಂಡದಲ್ಲಿ, ತಂದೆಯ ವಚನ ಪಾಲಿಸಲು ಶ್ರೀರಾಮ ಸಂತೋಷದಿಂದ ಅರಣ್ಯವಾಸಕ್ಕೆ ಹೊರಟಿದ್ದು, ಅವನೊಡನೆ ಸೀತಾ ಲಕ್ಷ್ಮಣರು ಹೊರಟಿದ್ದು ಇವೆಲ್ಲ ಮಾನವನ ಕರ್ತವ್ಯಗಳನ್ನು ಸೂಚಿಸುತ್ತವೆ. ಭರತನ ಗುಣಾತಿಶಯಗಳನ್ನು ನೋಡಿದರೆ, ನೀತಿಯನ್ನು ಅನುಸರಿಸಿ ನಡೆಯುವ ಅವನ ವಿಶ್ವಾಸ ಮಹತ್ತರವಾದದ್ದೆಂದು ತಿಳಿಯುವುದು. ರಾಮಾಯಣದಲ್ಲಿ ಭರತನ ಪಾತ್ರ ಬಹಳ ಗಮನಾರ್ಹವಾದದ್ದು.

    ಅರಣ್ಯದಲ್ಲಿ, ಆಶ್ರಮ ನಿರ್ಮಾಣ, ವಿವಿಧ ವೃಕ್ಷಗಳ ವಿವರಣೆ, ಮೃಗಪಕ್ಷಿಗಳ ಮತ್ತು ಪುಷ್ಪಗಳ ವರ್ಣನೆ, ಪ್ರಕೃತಿಯ ಸೌಂದರ್ಯ ಮತ್ತು ಋತುಗಳ ವಿವರಣೆ ಎಲ್ಲವೂ ಇದೆ. ಅರಣ್ಯದಲ್ಲಿ ಶ್ರೀರಾಮ ರಾಕ್ಷಸರೊಡನೆ ಯುದ್ಧ ಮಾಡಿದ ಸಾಹಸಗಳನ್ನು ವಿವರಿಸಲಾಗಿದೆ.

    ದೇಶ ಕಾಲಗಳಿಗೆ ತಕ್ಕಂತೆ ಋತುಗಳ ವರ್ಣನೆ, ಪ್ರಕೃತಿಯ ಸೌಂದರ್ಯ ಎಲ್ಲವೂ ವಿವರಿಸಲಾಗಿದೆ.

    ಕಿಷ್ಕಿಂದ ಕಾಂಡದಲ್ಲಿ ಸ್ನೇಹದ ಮಹತ್ವವನ್ನು ಶ್ರೀರಾಮ ಸುಗ್ರೀವರ ಮಿಲನದಲ್ಲಿ ಕಾಣಬಹುದು. ಸುಗ್ರೀವನ ಆಜ್ಞೆಯನ್ನು ಶಿರಸಾವಹಿಸಿ ವಾನರರು ದೇಶಾದ್ಯಂತ ತೆರಳಿ ಸೀತೆಯನ್ನು ಹುಡುಕುವಾಗ, ಭೂಗೋಳಶಾಸ್ತ್ರದಲ್ಲಿ ಅವನ ಜ್ಞಾನ, ರಾಜ ವಿಶ್ವಾಸ ಎಲ್ಲವೂ ಕಂಡುಬರುವುದು.

    ಸುಂದರ ಕಾಂಡದಲ್ಲಿ, ಶ್ರೀರಾಮ ದೂತನಾಗಿ ಲಂಕೆಗೆ ಹೋದ ಆಚಿಜನೇಯನ ವೀರ ಸಾಹಸಗಳು, ಬುದ್ಧಿ ಚಾತುರ್ಯ ಎಲ್ಲವನ್ನೂ ಓದುವಾಗ, ಒಬ್ಬ ದೂರ ವರ್ತಿಸಬೇಕಾದ ರೀತಿ, ಅವನಿಗಿರಬೇಕಾದ ಗುಣಗಳು ಎಲ್ಲವೂ ಸ್ಪಷ್ಟವಾಗಿ ತಿಳಿದುಬರುತ್ತದೆ.

    ರಾವಣನ ಹಠ ‘ವಿನಾಶ ಕಾಲದಲ್ಲಿ ವಿಪರೀತ ಬುದ್ಧಿ’ಯನ್ನು ಸೂಚಿಸುವುದಲ್ಲದೆ, ಎಷ್ಟೇ ಪ್ರಭಾವಶಾಲಿಯಾದರೂ, ಸತ್ಯಮಾರ್ಗದಿಂದ ಅಗಲಿದರೆ, ಎಲ್ಲವೂ ವ್ಯರ್ಥ ಎಂದು ತಿಳಿದುಬರುತ್ತದೆ.

    ವಿಭೀಷಣ ಶ್ರೀರಾಮನಿಗೆ ಶರಣುಹೋದದ್ದು, "ಅಣ್ಣನೇ ಆದರೂ ದುರ್ಮಾರ್ಗದಲ್ಲಿ ವರ್ತಿಸಿ, ಹಿತವಚನವನ್ನು ನಿರಾಕರಿಸಿದರೆ, ಅವನನ್ನು ಬಿಟ್ಟು ಸತ್ಯಕ್ಕೆ ಶರಣುಹೋಗುವುದು ಉತ್ತಮವೆಂಬುದನ್ನು ಸೂಚಿಸುತ್ತದೆ.

    ಯುದ್ಧ ಕಾಂಡದಲ್ಲಿ ಅನೇಕ ಯುದ್ಧ ತಂತ್ರಗಳನ್ನು ಕಾಣಬಹುದು. ಅಸ್ತ್ರ, ಶಸ್ತ್ರ ಪ್ರಯೋಗಗಳು, ಜ್ಯೋತಿಷ್ಯ, ಮಾಯಾಜಾಲ, ಔಷಧಿ ಮೂಲಿಕೆಗಳ ವಿವರಣೆಗಳಿವೆ.

    ಉತ್ತರ ಕಾಂಡದಲ್ಲಿ ರಾಮಾಯಣ ಸಂಭವಿಸಿದ ಕಾರಣ, ರಾವಣನಿಗೆ ದೊರಕಿದ ಅನೇಕ ವರಗಳು, ಶಾಪಗಳು, ಈ ಕಾವ್ಯದಲ್ಲಿ ಬರುವ ಅನೇಕ ಪಾತ್ರಗಳ ಜನನ ಕಾರಣ, ರಾಜ್ಯಭಾರದಲ್ಲಿ ಅನುಸರಿಸಬೇಕಾದ ನೀತಿ ಧರ್ಮಗಳು ಎಲ್ಲವೂ ಇವೆ. ಮಕ್ಕಳು ಬೆಳೆದ ಮೇಲೆ, ಸಂಪೂರ್ಣ ರಾಮಾಯಣವನ್ನು ಓದಿ ಈ ವಿಷಯಗಳನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬಹುದು. ಮಕ್ಕಳ ಪಠನಕ್ಕಾಗಿ ನಾಮರಾಮಾಯಣವನ್ನೂ ಅಳವಡಿಸಲಾಗಿದೆ.

    ನಾರದ ವಾಲ್ಮೀಕಿಯವರ ಸಂವಾದ

    ಬಾಲಕಾಂಡ

    ನಾರದನ ಬರುವಿಕೆ: ನಾರದ ಪುರುಷ. ಎಲ್ಲ ಲೋಕಗಳಲ್ಲೂ ಸಂಚರ ಮಾಡಬಲ್ಲ. ಒಮ್ಮೆ ಭೂಲೋಕದಲ್ಲಿ, ವಾಲ್ಮೀಕಿ ಎಂಬ ಮಹರ್ಷಿಯನ್ನು ಕಂಡು, ಮಾತನಾಡುತ್ತಿದ್ದ. ಮುನಿಶ್ರೇಷ್ಠರೇ, ವೀರತನ, ಧರ್ಮಿಷ್ಠ, ಸತ್ಯವಂತ, ಆದರ್ಶಪುರುಷ, ಶುದ್ಧತೆ, ಜೀವಕಾರುಣ್ಯ, ಬುದ್ಧಿಚಾತುರ್ಯ, ಶಾಂತತೆ, ಸೌಂದರ್ಯ ಮುಂತಾದ ಅಷ್ಟು ಗುಣಗಳೂ ಲಕ್ಷಣಗಳೂ ಸಂಪೂರ್ಣವಾಗಿ ಪಡೆದಿರುವ ನರ ಶ್ರೇಷ್ಠ ಯಾರಾದರೂ ಇರುವರೇ ಎಂದು ಕೇಳಿದರು ವಾಲ್ಮೀಕಿ.

    ನಾರದ ಹುಸಿನಗುತ್ತ ‘ಇದ್ದಾನೆ’ ಎಂದು ಹೇಳಿ ಶ್ರೀರಾಮನ ಚರಿತ್ರೆಯನ್ನು ಸಂಕ್ಷಿಪ್ತವಾಗಿ ಹೇಳಿದ ಋಷಿಗೆ ಇದನ್ನು ಕೇಳಿ ಮಹತ್ತರವಾದ ಆನಂದ ಉಂಟಾಯಿತು. ನಾರದ ಹೊರಟು ಹೋದಮೇಲೆ, ಸ್ನಾನ ಮಾಡಲು ತಮಸಾ ನದಿಗೆ ಹೋದರು. ಸಮೀಪದಲ್ಲೇ ಒಂದು ಮರದಲ್ಲಿ ಎರಡು ಕ್ರೌಂಚ ಪಕ್ಷಿಗಳು ಆಡುತ್ತಿದ್ದವು. ಋಷಿಯು ಅವುಗಳ ಆಟವನ್ನು ಕಂಡು ಅನುಭವಿಸುತ್ತಿದ್ದಾಗ, ಒಬ್ಬ ಬೇಡ ಆ ಹಕ್ಕಿಗಳಲ್ಲಿ ಒಂದನ್ನು ಅಂಬಿನಿಂದ ಹೊಡೆದುಬಿಟ್ಟ. ಗಾಯಗೊಂಡು ಬಿದ್ದ ತನ್ನ ಸಂಗಾತಿಯನ್ನು ಕಂಡು ಇನ್ನೊಂದು ಹಕ್ಕಿ ಅಳತೊಡಗಿತು. ಈ ದೃಶ್ಯವನ್ನು ಕಂಡು ದುಃಖಿಸಿದ ಋಷಿಯು, ಆ ಬೇಡನನ್ನು ಶಪಿಸಿದರು. ಅನಂತರ, ತನ್ನ ಸ್ನಾನವನ್ನು ಮುಗಿಸಿ ಆಶ್ರಮಕ್ಕೆ ಹಿಂತಿರುಗಿದರು. ದಾರಿಯ ಉದ್ದಕ್ಕೂ ಅವರಿಗೆ, ಬೇಡನನ್ನು ಶಪಿಸಿದ ಆ ಪದಗಳೇ ಮನಸ್ಸನ್ನು ಸೆಳೆದವು. ಆ ಪದಗಳನ್ನು ಅನ್ವಯಮಾಡಿದ್ದರಲ್ಲಿ, ಅವು ವಿಶೇಷ ಅರ್ಥಭರಿತವಾದ ಒಂದು ಶ್ಲೋಕವಾಗಿ ಪರಿಣಮಿಸಿತು! ಅದನ್ನೇ ಸ್ಮರಿಸುತ್ತ ಆಶ್ರಮವನ್ನು ಸೇರಿದರು. ಆಶ್ರಮದಲ್ಲಿ ಬ್ರಹ್ಮದೇವನು ಅವರಿಗೆ ಪ್ರಸನ್ನನಾಗಿ, ವಾಲ್ಮೀಕಿಯ ಸತ್ಕಾರವನ್ನು ಸ್ವೀಕರಿಸಿ, ನಾನೀಗ ಸ್ಮರಿಸುವ ಶ್ಲೋಕವನ್ನೇ ಮೊದಲಾಗಿಟ್ಟು, ರಾಮಾಯಣ ಮಹಾ ಕಾವ್ಯವನ್ನು ರಚಿಸು. ಶ್ರೀರಾಮ ಚರಿತೆ, ನಡೆದದ್ದು ನಡೆದಂತೆ ನಿನಗೆ ಕಾಣಿಸುವಂತೆ ಅನುಗ್ರಹ ಮಾಡುತ್ತೇನೆ. ಸರಸ್ವತಿ ನಿನ್ನಲ್ಲಿ ಪ್ರಸನ್ನಳಾಗಿದ್ದಾಳೆ. ಪ್ರಪಂಚ ಇರುವ ತನಕ, ಈ ನಿನ್ನ ಮಹಾಕಾವ್ಯವೂ, ಅದನ್ನು ರಚಿಸಿದ ನಿನ್ನ ಕೀರ್ತಿಯೂ ಶಾಶ್ವತವಾಗಿರುವುದು ಎಂದು ಆಶೀರ್ವಾದ ಮಾಡಿ, ಅದೃಶ್ಯವಾದರು.

    ಬ್ರಹ್ಮನ ಅನುಗ್ರಹದಿಂದ ವಾಲ್ಮೀಕಿ ಋಷಿಯು ರಾಮಾಯಣ ಮಹಾ ಕಾವ್ಯವನ್ನು ರಚಿಸಿದರು. ಬಲಕಾಂಡ, ಅಯೋಧ್ಯಾಕಾಂಡ, ಅರಣ್ಯಕಾಂಡ, ಕಿಷ್ಕಿಂಧಾಕಾಂಡ, ಸುಂದರ ಕಾಂಡ, ಯುದ್ಧಕಾಂಡ, ಮತ್ತು ಉತ್ತರ ಕಾಂಡ ಎಂಬ ಏಳು ಕಾಂಡಗಳನ್ನು ರಚಿಸಿದರು. ಈ ಕಾವ್ಯವು ಒಟ್ಟು ಇಪ್ಪತ್ತನಾಲ್ಕು ಸಾವಿರ ಶ್ಲೋಕಗಳಿಂದ ಕೂಡಿದೆ.

    ಈ ಕಾವ್ಯವನ್ನು ರಚಿಸಿ ತಮ್ಮ ಶಿಷ್ಯಂದಿರಾದ ಲವ ಮತ್ತು ಕುಶನಿಗೆ, ಸುಸ್ವರವಾಗಿ, ಭಾವದಿಂದ ಅದನ್ನು ಹಾಡಲು ಕಲಿಸಿಕೊಟ್ಟರು ವಾಲ್ಮೀಕಿ. ವೀಣೆಯನ್ನು ನುಡಿಸುತ್ತಾ ಹಾಡುವ ಆ ಬಾಲಕರನ್ನು ಕಂಡವರೆಲ್ಲ ಮೆಚ್ಚಿ ಆಶೀರ್ವಾದ ಮಾಡಿದರು.

    ಒಮ್ಮೆ ಈ ಬಾಲಕರು ಅಯೋಧ್ಯಾ ನಗರದ ಬೀದಿಗಳಲ್ಲಿ ರಾಮಾಯಣ ಕಾವ್ಯವನ್ನು ಹಾಡುತ್ತ ನಡೆಯುತ್ತಿದ್ದರು. ಅದನ್ನು ಕೇಳಿದ ಶ್ರೀರಾಮ, ಆ ಬಾಲಕರನ್ನು ಕರೆಸಿ, ತನ್ನ ಅರಮನೆಯಲ್ಲಿ ಹಾಡುವಂತೆ ಕೇಳಿದನು. ಬಾಲಕರು ಉತ್ಸಾಹದಿಂದ ಹಾಡತೊಡಗಿದರು.

    ರಾಮಾವತಾರ: ಬಹುಕಾಲದ ಹಿಂದೆ ವೈವಸ್ವತಮನೆಂಬ ಎಂಬ ರಾಜನಿದ್ದ. ರಾಜವಂಶಗಳ ಪತಾಮಹ ಅವನೇ. ಅವನ ವಂಶದಲ್ಲಿ ಹುಟ್ಟಿದ ಅನೇಕ ರಾಜರು ಪ್ರಖ್ಯಾತರು. ಸಗರನೆಂಬ ಅರಸ ಲೋಕದಲ್ಲಿ ಸಮುದ್ರವನ್ನು ಅಗೆಸಿದನು. ಆದ್ದರಿಂದಲೇ ಸಮುದ್ರಕ್ಕೆ ಸಾಗರವೆಂಬ ಹೆಸರು ಬಂದಿತು. ಇಕ್ಷ್ವಾಕು ಎಂಬ ಪ್ರಭಾವಶಾಲಿಯಾದ ಅರಸನೂ ಈ ವಂಶಕ್ಕೆ ಸೇರಿದವನೇ, ಈ ವಂಶದಲ್ಲಿ ಹುಟ್ಟದವನೇ ಶ್ರೀರಾಮ.

    ಅಯೋಧ್ಯಾ ನಗರವನ್ನು ಮನು ಚಕ್ರವರ್ತಿ ನಿರ್ಮಿಸಿದ. ಸರಯೂ ನದಿ ತೀರದಲ್ಲಿ ಇದೆ ಈ ನಗರ. ಇದು ಕೋಸಲ ದೇಶದ ರಾಜಧಾನಿಯಾಗಿತ್ತು. ಈ ಪ್ರದೇಶ ಧನ ಧಾನ್ಯಗಳಿಂದ ನೆರದಿತ್ತು. ಭಾರಿಕೋಟೆಗಳಿದ್ದವು. ಇದರ ಸುತ್ತಮುತ್ತ ಅಗಲವಾದ ಕಾಲುವೆಗಳಿದ್ದವು. ಅಸ್ತ್ರ ಶಸ್ತ್ರಗಳು, ಯಂತ್ರಗಳು, ಅಂಗಡಿಗಳು, ಶಿಲ್ಪಿಗಳು ನಟನಾಚಾರ್ಯರು, ನೃತ್ಯಮಾಡುವವರು, ಗಾಯಕರು, ರಾಜನಿಗೆ ಸುಪ್ರಭಾತ ಹಾಡುವ ಬಾಣರು, ಸೂದರು, ಉಪವನಗಳು, ಹೀಗೆ ಎಲ್ಲವುಗಳಿಂದಲೂ ತುಂಬಿತ್ತು. ಇಲ್ಲಿಯ ಪ್ರಜೆಗಳು ಸುಖಜೀವಿಗಳಾಗಿದ್ದರು. ನೀತಿ ಧರ್ಮಗಳನ್ನು ಅನುಸರಿಸುತ್ತಿದ್ದರು. ಬಲಿಷ್ಠರಾಗಿಯೂ ಧೈರ್ಯಶಾಲಿಗಳಾಗಿಯೂ ಇದ್ದರು. ಇಂತಹ ಶ್ರೇಷ್ಠವಾದ ಅಯೋಧ್ಯೆಯನ್ನು ಮನು ವಂಶದಲ್ಲಿ ಬಂದ ದಶರಥ ಚಕ್ರವರ್ತಿ ಪರಿಪಾಲಿಸುತ್ತಿದ್ದ.

    ದಶರಥ ಎಲ್ಲ ಶಾಸ್ತ್ರಗಳನ್ನೂ ಕಲಿತು ಪ್ರವೀಣನಾಗಿದ್ದ. ಈ ವೀರನಿಗೆ ವಿದೇಶಗಳ ಪರಿಚಯವೂ ಇತ್ತು. ಬಾಹ್ಲೀಕ, ಕಾಂಭೋಜ, ಮುಂತಾದ ದೇಶಗಳಿಂದಲೂ ಸಿಂಧು ಪ್ರದೇಶದಿಂದಲೂ ಒಳ್ಳೆ ಜಾತಿಯ ಕುದುರೆಗಳನ್ನು ತರಿಸಿದ್ದ. ಹಿಮಾಚಲ ಪ್ರದೇಶದಿಂದ ಆನೆಗಳನ್ನು ತಂದುಕೊಂಡಿದ್ದ. ಇವನಿಗೆ ಬುದ್ಧಿವಂತರು ಮತ್ತು ಗುಣಶೀಲರಾದ ಎಂಟು ಮಂದಿ ಮಂತ್ರಿಗಳಿದ್ದರು. ಈ ಮಂತ್ರಿಗಳು ತಮ್ಮ ದೇಶಕ್ಕಾಗಿಯೂ, ರಾಜನಿಗಾಗಿಯೂ ತಮ್ಮ ಪ್ರಾಣವನ್ನೇ ಅರ್ಪಿಸಲು ಸಿದ್ಧವಾಗಿದ್ದರು. ಸ್ವಾರ್ಥವಿಲ್ಲದೆ, ಸಮಯಕ್ಕೆ ತಕ್ಕಂತೆ ವರ್ತಿಸಿ, ತಮ್ಮ ದೇಶಕ್ಕೂ, ರಾಜನಿಗೂ ಕೀರ್ತಿಯನ್ನು ಸಂಪಾದಿಸಿಕೊಟ್ಟರು ಇವರ ಹೆಸರು: ದೃಷ್ಟಿ; ಜಯಂತ, ವಿಜಯ, ಸಿದ್ಧಾರ್ಥ, ಅರ್ಥಸಾಧಕ, ಅಶೋಕ, ಮಂತ್ರಪಾಲ ಮತ್ತು ಸುಮಂತ್ರ.

    ರಾಜಪುರೋಹಿತರುಗಳಾದ ವಶಿಷ್ಠ ಮುಂತಾದ ತಪಶ್ರೇಷ್ಠರು ರಾಜನಿಗೆ ನೀತಿ, ಧರ್ಮಗಳನ್ನು ಉಪದೇಶ ಮಾಡಿ, ರಾಜ್ಯಭಾರದಲ್ಲಿ ಸಹಾಯಕರಾಗಿದ್ದರು. ಇವರೆಲ್ಲರೊಡನೆ ಒಂದುಗೂಡಿ ದಶರಥ ಅಯೋಧ್ಯೆಯನ್ನು ಯಶಸ್ವಿಯಾಗಿ ಆಳುತ್ತಿದ್ದ. ಆದರೆ, ಇಷ್ಟೆಲ್ಲ ಇದ್ದರೂ ಕೂಡ ದಶರಥನಿಗೆ ಒಂದು ಭಾರಿ ಕೊರತೆ ಇತ್ತು. ಮಕ್ಕಳಿಲ್ಲವೆಂಭ ದುಃಖ ಅವನನ್ನು ಬಹುಮಟ್ಟಿಗೆ ಪೀಡಿಸಿತು. ಗುರುಗಳು ಮತ್ತು ಮಂತ್ರಿಗಳೊಡನೆ ಮಂತ್ರಾಲೋಚನೆ ನಡೆಸಿ, ಪುತ್ರಕಾಮೇಷ್ಠಿ ಯಾಗವನ್ನು ಮಾಡಲು ತೀರ್ಮಾನಿಸಿದ. ಈ ಯಾಗವನ್ನು ಮಾಡಿದರೆ, ಮಕ್ಕಳಾಗುವರೆಂಬ ನಂಬಿಕೆಯಿಂದ ಯಾಗದ ಕೆಲಸಗಳನ್ನು ಪ್ರಾರಂಭಮಾಡಿದ.

    ಸರಯು ನಡಿಯ ಉತ್ತರ ತೀರದಲ್ಲಿ ಯಾಗಶಾಲೆಯನ್ನು ನಿರ್ಮಿಸಲಾಯಿತು. ಯಾಗದಲ್ಲಿ ಭಾಗವಹಿಸುವವರಿಗೆ, ಅತಿಥಿಗಳಿಗೆ, ಹೀಗೆ ಎಲ್ಲರಿಗೂ ಅವರವರಿಗೆ ಬೇಕಾದಂತಹ ಸೌಕರ್ಯಗಳು ಕೂಡಿದ ವಸತಿ ಗೃಹಗಳನ್ನು ಕಟ್ಟಿದರು. ಅವರವರ ಊಟ ಉಪಚಾರಗಳಿಗೂ ತಕ್ಕ ವಸತಿಗಳು ಏರ್ಪಟ್ಟವು. ಇವೆಲ್ಲ ನಡೆಯುತ್ತಿರುವಾಗ ಮಂತ್ರಿಯಾದ ಸುಮಂತ್ರ, ದಶರತನಿಗೆ ಒಂದು ವಿಷಯ ಹೇಳಿದ. "ಪ್ರಭು-ತಾವು ಮಾಡಲಿರುವ ಈ ಪುತ್ರ ಕಾಮೇಷ್ಠಿ ಯಾಗವನ್ನು ಕುರಿತು, ಹಿಂದೆ ಸಮತ್ಯುಮಾರ ಗುರುಗಳು ಹೇಳಿರುವುದನ್ನು ಅರಿತಿದ್ದೇನೆ. ಭೂತ ಭವಿಷ್ಯಗಳನ್ನು ಅರಿತಿರುವ ಅವರು, ಋಷ್ಯಶೃಂಗರನ್ನು ಕರೆಸಿ, ಈ ಯಾಗವನ್ನು ನಡೆಸಬೇಕೆಂದು ಹೇಳಿದ್ದರು.

    ಋಷ್ಯಶೃಂಗರು ವಿಭಂಡಕ ಋಷಿಯ ಪುತ್ರ. ತಂದೆಯ ಸೇವೆಯಲ್ಲೂ, ಧ್ಯಾನದಲ್ಲೂ ಕಾಲಕಳೆಯುತ್ತಿದ್ದ ಮಹಾ ತಪಸ್ವಿ. ಒಮ್ಮೆ, ಅಂಗ ದೇಶದಲ್ಲಿ

    Enjoying the preview?
    Page 1 of 1