Discover millions of ebooks, audiobooks, and so much more with a free trial

Only $11.99/month after trial. Cancel anytime.

Keshavankitha Rachanegalu - Tatvarajakarana
Keshavankitha Rachanegalu - Tatvarajakarana
Keshavankitha Rachanegalu - Tatvarajakarana
Ebook95 pages29 minutes

Keshavankitha Rachanegalu - Tatvarajakarana

Rating: 0 out of 5 stars

()

Read preview

About this ebook

Beguru Ramalingappa working as an associate professor in kannada at Maharani's College Bangaluru. He has written many novels and short stories.
LanguageKannada
Release dateAug 12, 2019
ISBN6580205400850
Keshavankitha Rachanegalu - Tatvarajakarana

Read more from Begur Ramalingappa

Related to Keshavankitha Rachanegalu - Tatvarajakarana

Related ebooks

Reviews for Keshavankitha Rachanegalu - Tatvarajakarana

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Keshavankitha Rachanegalu - Tatvarajakarana - Begur Ramalingappa

    http://www.pustaka.co.in

    ಕೇಶವಾಂಕಿತ ರಚನೆಗಳು  – ತತ್ವರಾಜಕಾರಣ

    Keshavankitha Rachanegalu - Tatvarajakarana

    Author:

    Begur Ramalingappa

    For more books

    http://www.pustaka.co.in/home/author/begur-ramalingappa

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಬೇಗೂರ್ ರಾಮಲಿಂಗಪ್ಪ

    ಕೇಶವಾಂಕಿತ ರಚನೆಗಳು - ತತ್ವರಾಜಕಾರಣ

    (ಕನಕದಾಸರ ಕೀರ್ತನೆಗಳ ಅಧ್ಯಯನ)

    -ಡಾ.ರಾಮಲಿಂಗಪ್ಪ. ಟಿ.ಬೇಗೂರು

    ಪರಿವಿಡಿ

    1.      ಪೀಠಿಕೆ

    2.      ಹಣೆಬರಹ, ವಿಧಿ, ಕರ್ಮಫಲ, ಪುನರ್ಜನ್ಮ, ಮಾಯೆ, ಮುಕ್ತಿ, ಆತ್ಮವಾದ, ಬ್ರಹ್ಮವಾದ ಇತ್ಯಾದಿ ತತ್ವ-ಸಿದ್ಧಾಂತಗಳು

    3.      ನಿರಾಕರಣೆಯ ತತ್ವಗಳು:

    4.      ಕುಲನಿರಾಕರಣೆ : ಪಾಂಥಿಕತೆಯ ನಿರಾಕರಣೆ, ಮೇಲು ಕೀಳಿನ ಬಿಕ್ಕಟ್ಟು

    5.      `ಕೀಳು’ ದೈವ-ಬಹುದೈವ ನಿರಾಕರಣೆ : ವಿಶ್ವಕುಟುಂಬಿ ಕಲ್ಪನೆ:

    6.      ಕುಲನಿರಾಕರಣೆ: ಚತುರ್‍ವರ್ಣ ಸ್ಥಾಪನೆ

    7.      ರಾಮಧಾನ್ಯದ ವಿಚಾರ : ಮಂತ್ರಾಕ್ಷತೆ ಹಾಕುವ-ಸೇಸೆಯನಿಕ್ಕುವ ಆಚಾರ

    8.      ವಾಯುಜೀವೋತ್ತಮ, ಮುಖ್ಯ ಪ್ರಾಣ ಹನುಮ

    9.      ಕಲಿಪುರುಷನ ಕೋಲಾಹಲ

    10.      ಪಾತಿವ್ರತ್ಯ-ಲೈಂಗಿಕ ನಿಷ್ಠೆಯ ತತ್ವ:

    11.      ಕಾಯನಿರಾಕರಣೆ-ಕಾಯಕೇಂದ್ರಿತ ಹೆಣ್ಣಿನ ಕಲ್ಪನೆ:

    12.      ಹರಿಹರ ಸಮನ್ವಯ ತತ್ವ : ಮೇಲುಕೀಳುಗಳ `ಅತಿಹಿತ’ ತತ್ವ:

    13.      ದೇವ-ದಾನವ ಕಲ್ಪನೆ

    14.      ಭಕ್ತಿ, ಮುಕ್ತಿ: ಆಚಾರಸಂಹಿತೆಯ (ಪ್ರತಿ) ರಾಜಕಾರಣ

    ಪೀಠಿಕೆ

    ಕನಕದಾಸರ ಕೀರ್ತನೆಗಳಲ್ಲಿ ಇಂಗಳಗೊಂದಿಯ ಚನ್ನಕೇಶವ (218), ಬಾಡದಾದಿಕೇಶವ (220), ಸೊಂಡೆಕೊಪ್ಪದಾದಿಕೇಶವ (185), ವೇಲಾಪುರದ ಆದಿಕೇಶವ (137), ಕದರ ಮಂಡಲಗಿ ಹನುಮಯ್ಯನೊಡೆಯ ಚೆಂದಾದಿಕೇಶವ (31), ವೇಲಾಪುರದ ಪತಿ ವೈಕುಂಠಕೇಶವ (29), ಉಡುಪಿಯಾದಿಕೇಶವ (64), ಮದ್ದೂರು ನರಸಿಂಹಯ್ಯ ಕೂಡಿದ ಕನಕನಾದಿಕೇಶವ (221), ತಿರುವ ಕೋವಲೂರಿನ ಆದಿಕೇಶವ (24) - ಹೀಗೆ ಬೇರೆ ಬೇರೆ ಊರುಗಳ ಹರಿಯನ್ನೆ ಸಂಬೋಧಿಸಿ ಅಂಕಿತ ಮಾಡಿಕೊಂಡು ಬರೆದಿದ್ದರೂ ಎಲ್ಲ ಕಡೆಯೂ ಕೇಶವ-ಆದಿಕೇಶವ ಎಂಬುದೇ ಅಂಕಿತವಾಗಿದೆ. ಅಲ್ಲದೆ ಹರಿಭಕ್ತಿಸಾರ, ರಾಮಧಾನ್ಯ ಚರಿತೆ, ಮೋಹನ ತರಂಗಿಣಿ ಕಾವ್ಯಗಳ ಅಂತ್ಯದಲ್ಲಿಯೂ ಕೇಶವಾಂಕಿತವನ್ನು ಇಟ್ಟುಕೊಂಡೆ ಕಾವ್ಯ ಬರೆಯಲಾಗಿದೆ. ಹೀಗಾಗಿ ಈ ರಚನೆಗಳೆಲ್ಲವನ್ನೂ ಕೇಶವಾಂಕಿತ ರಚನೆಗಳು ಎಂದೇ ಕರೆಯಲಾಗಿದೆ. ಕೆಲವು ಕೀರ್ತನೆಗಳು ಪುರಂದರ ವಿಠಲ ಅಂಕಿತದಲ್ಲು ದೊರೆಯುವುವಾದ್ದರಿಂದ; ಕೆಲವು ಕೀರ್ತನೆಗಳನ್ನು ಆದಿಕೇಶವ ಎಂಬ ಅಂಕಿತದಲ್ಲಿ ಭಿನ್ನ ಭಿನ್ನ ಕಾಲಗಳಲ್ಲಿ ಅನ್ಯರೂ ಬರೆದಿರುವ ಸಾಧ್ಯತೆಗಳು ಇರುವುದರಿಂದ; ಹಾಗೆಯೇ ಪ್ರತಿಕಾರರು ತಮ್ಮದೇ ಪ್ರಕ್ಷಿಪ್ತಗಳನ್ನು ಒಳನುಗ್ಗಿಸಿರುವ ಸಾಧ್ಯತೆಗಳೂ ಇರುವುದರಿಂದ ಈ ಅಂಕಿತವುಳ್ಳ ರಚನೆಗಳು ಓದುಗನಿಗೆ ಕಾಣಿಸುವ (ಅವುಗಳಲ್ಲಿ ಓದುಗನು ಕಾಣುವ) ತತ್ವರಾಜಕಾರಣಕ್ಕೆ ಕನಕ ಒಬ್ಬನನ್ನೆ ಹೊಣೆಗಾರನನ್ನಾಗಿ ಮಾಡಲು ಸಾಧ್ಯವಿಲ್ಲ ಎಂಬ ಕಾರಣದಿಂದಲು; ನುಡಿರಚನೆಗಳಿಗೆ 500-600 ವರ್ಷಗಳಿಗೂ ಹೆಚ್ಚು ಕಾಲದ ಯಾನದಲ್ಲಿ ಯಾವ ಯಾವ ರೂಪ-ಗತಿಗಳು ಒದಗಿರಬಹುದೋ ನಮಗೆ ತಿಳಿಯದಾದ ಕಾರಣದಿಂದಲೂ; ಅಂಕಿತವುಳ್ಳ ನುಡಿರಚನೆಗಳನ್ನು ಒಬ್ಬನೇ ಲೇಖಕನು ಬರೆದಿದ್ದಾನೆ ಎಂಬುದು ಒಂದು ತಪ್ಪುಗ್ರಹಿಕೆ ಎಂಬ ತಿಳುವಳಿಕೆಯಿಂದಲೂ; ಒಂದು ಅಂಕಿತವುಳ್ಳ ನುಡಿರಚನೆಗಳನ್ನು ಲೇಖಕನಿಂದ ಬಿಡುಗಡೆಗೊಳಿಸಿ, ಆ ಮೂಲಕ ಕಾಲ, ಸ್ಥಳ, ಜಾತಿ-ಪಂಥ-ವಾದ-ಸಿದ್ಧಾಂತಗಳಿಂದ ಬಿಡುಗಡೆಗೊಳಿಸಿ, ಸಾರಾಂಶವಾದಿ ಅಥವಾ ಏಕಮುಖಿ ಅರ್ಥದ ಬಂಧನದಿಂದ ಬಿಡುಗಡೆಗೊಳಿಸಿ ಸಾಂಸ್ಕøತಿಕ ಪಠ್ಯಗಳಾಗಿ ಅವುಗಳನ್ನು ಓದಬೇಕು ಎಂಬ ಕಾರಣದಿಂದಲು; ಕನಕದಾಸನು ಬರೆದಿರುವ ರಚನೆಗಳನ್ನು ಕೇಶವಾಂಕಿತ ರಚನೆಗಳು ಎಂದು ಇಲ್ಲಿ ಕರೆಯಲಾಗಿದೆ.

    ತನ್ನ ದಂಡನಾಯಕತ್ವ, ಶಿಷ್ಟಕವಿತ್ವ, ಎಲ್ಲವನ್ನು ತೊರೆದು ಕನಕ ಸ್ವತಃ ದಾಸನಾದವನು. ಆತ ತನ್ನ ಕುಲಚಹರೆಯಾದ ಕಂಬಳಿಯನ್ನೂ ಕಳಚಿ ಬಿಸಾಡಿದವನು. ಆದರೆ ಅವನಿಗೆ ಇತ್ತೀಚೆಗೆ ಕಂಬಳಿ ತೊಡಿಸಲಾಗುತ್ತಿದೆ. ಅವನ ಪ್ರತಿಮೆಗೆ ಮಾತ್ರವಲ್ಲ ಅವನ ರಚನೆಗಳಿಗೂ, ವಿಚಾರಗಳಿಗೂ ಕಂಬಳಿ ತೊಡಿಸಲಾಗುತ್ತಿದೆ. ಆತನ ವಿಚಾರಗಳಿಗೆ ಈಗಾಗಲೇ ಬಳಿದಿರುವ ತಿರುನಾಮವನ್ನು ಮರೆಮಾಚಲಾಗುತ್ತಿದೆ. ಜ್ಞಾನ ಹೇಗೆ ಶಕ್ತಿಯೋ, ಪ್ರಭುತ್ವ ಹೇಗೆ ಶಕ್ತಿಯೋ, ಸಾಹಿತ್ಯ ಹೇಗೆ ಶಕ್ತಿಯೋ ಹಾಗೆಯೇ ದೇಗುಲ-ಮಠಗಳೂ ಶಕ್ತಿಗಳೇ. ಹಾಗೇ ಅನಿಷ್ಟಗಳೇ. ಹಾಗೆಯೇ ಹುಟ್ಟಿನ ಜಾತಿಗಳು ಕೂಡ ಕೆಲವರಿಗೆ ಶಕ್ತಿ ಮತ್ತು ಕೆಲವರಿಗೆ ಅನಿಷ್ಟ. ಈ ಎಲ್ಲ ಪಂಚಮುಖಿ ಶಕ್ತಿ ಮತ್ತು ಅನಿಷ್ಟಗಳನ್ನು ಕನಕ ಬಲ್ಲವನಾಗಿದ್ದ ಮತ್ತು ಒಂದರಿಂದ ಇನ್ನೊಂದಕ್ಕೆ ಎಡತಾಕಿದ ಮತ್ತು ಎಲ್ಲದರಿಂದಲೂ ಗೇರು ಹಣ್ಣಿನ ಬೀಜದಂತೆ (115) ಇದ್ದ. ಹೀಗಿದ್ದವನಿಗೆ ಇಂದು ನಾವೇಕೆ ತಿರುನಾಮ ಬಳಿಯಬೇಕು? ಅಥವಾ ಕಂಬಳಿ ಹೊದೆಸಬೇಕು? ಆದರೆ ಕೇಶವಾಂಕಿತ ಕೀರ್ತನೆಗಳನ್ನು ಅನುಸಂಧಾನಕ್ಕೆ ಭಿನ್ನ ಭಿನ್ನ ಕಾಲಘಟ್ಟಗಳಲ್ಲಿ ಎತ್ತಿಕೊಂಡ ಭಕ್ತ-ಸಹೃದಯರು ಅವುಗಳಿಗೆ ತಿರುನಾಮ ಬಳಿಯುವ ಇಲ್ಲವೆ ಕಂಬಳಿ ಹೊದೆಸುವ ಕೆಲಸವನ್ನಂತೂ ನಿರಂತರ ಮಾಡುತ್ತ ಬಂದಿದ್ದಾರೆ. ಇದನ್ನೇ ಹಿಂಚಾಗಿ

    Enjoying the preview?
    Page 1 of 1