Discover millions of ebooks, audiobooks, and so much more with a free trial

Only $11.99/month after trial. Cancel anytime.

Nataka Dange
Nataka Dange
Nataka Dange
Ebook288 pages1 hour

Nataka Dange

Rating: 0 out of 5 stars

()

Read preview

About this ebook

Beguru Ramalingappa working as an associate professor in kannada at Maharani's College Bangaluru. He has written many novels and short stories.
LanguageKannada
Release dateAug 12, 2019
ISBN6580205400853
Nataka Dange

Read more from Begur Ramalingappa

Related to Nataka Dange

Related ebooks

Related categories

Reviews for Nataka Dange

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Nataka Dange - Begur Ramalingappa

    http://www.pustaka.co.in

    ನಾಟಕ ದಂಗೆ

    Nataka Dange

    Author:

    ಬೇಗೂರ್ ರಾಮಲಿಂಗಪ್ಪ

    Begur Ramalingappa

    For more books

    http://www.pustaka.co.in/home/author/begur-ramalingappa

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ನಾಟಕ ದಂಗೆ

    (ಕುವೆಂಪು ನಾಟಕಗಳ ಕುರಿತ ವಿಮರ್ಶೆ)

    -ಡಾ.ರಾಮಲಿಂಗಪ್ಪ. ಟಿ.ಬೇಗೂರು

    ಲೇಖಕರ ಮಾತು

    ಕುವೆಂಪು ಅವರ ನಾಟಕಗಳ ಕುರಿತು ಆಗಾಗ ಬರೆದ ವಿಮರ್ಶಾ ಲೇಖನಗಳನ್ನು ಸಂಕಲಿಸಿ ಇಲ್ಲಿ ನೀಡಲಾಗಿದೆ. ಇಲ್ಲಿನ ಬಹುತೇಕ ಲೇಖನಗಳು ಅಲ್ಲಲ್ಲಿ ಪ್ರಕಟವಾಗಿರುವ ಲೇಖನಗಳೇ ಆಗಿವೆ. ಬೇರೆ ಬೇರೆ ಸಂದರ್ಭಗಳಲ್ಲಿ ಮಾಡಿದ ಭಾಷಣಗಳನ್ನೂ ಲೇಖನ ರೂಪಕ್ಕಿಳಿಸಿ ಇಲ್ಲಿ ಸಂಕಲಿಸಿದೆ. ಹಾಗಾಗಿ ಅಲ್ಲಲ್ಲಿ ಕೆಲವೊಂದು ವಿಚಾರಗಳು ಪುನರಾವರ್ತನೆ ಆಗಿರಬಹುದು. ಇಲ್ಲಿನ ಕೆಲವು ಪ್ರಕಟಿತ ಲೇಖನಗಳನ್ನು ಓದಿದ ನನ್ನ ವಿದ್ಯಾರ್ಥಿ ಮಿತ್ರರು ಕೆಲವು ಪಾರಿಭಾಷಿಕ ಪದಗಳ ಬಗೆಗೆ ವಿವರಣೆಯನ್ನು ಕೇಳಿದರು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆನಂತರ ಇಲ್ಲಿನ ಲೇಖನಗಳಲ್ಲಿ ಬಳಸಿರುವ ಕೆಲವು ಪರಿಭಾಷೆಗಳನ್ನು ವಿವರಿಸಿ ಅಂತಹ ಪದಗಳ ಒಂದು ವಿವರಣಾ ಕೋಶವನ್ನು ತಯಾರಿಸಲಾಯಿತು. ಆ ಕೋಶವನ್ನು ಇಲ್ಲಿ ಮೊದಲನೆ ಅನುಬಂಧದಲ್ಲಿ ನೀಡಲಾಗಿದೆ. ಈ ಲೇಖನಗಳ (ಕೈ ಬರಹದ) ಕರಡನ್ನು ಓದಿ ತಮಗೆ ವಿವರಣೆ ಬೇಕಾಗಿರುವ ಪರಿಭಾಷೆಗಳನ್ನು ಗುರುತು ಮಾಡಿಕೊಟ್ಟ ನನ್ನ ವಿದ್ಯಾರ್ಥಿ ಮಿತ್ರ ವೆಂಕಟಾಚಲಪತಿಗೆ ಧನ್ಯವಾದಗಳು

    ಇಲ್ಲಿನ ಅನುಬಂಧ ಎರಡರಲ್ಲಿ ಇದುವರೆಗೆ ಕನ್ನಡದಲ್ಲಿ ಬಂದಿರುವ ಕುವೆಂಪು ನಾಟಕಗಳ ಮೇಲಿನ ವಿಮರ್ಶಾ ಲೇಖನಗಳ ಕಾಲ ಆಕಾರಾದಿಯನ್ನು ನೀಡಲಾಗಿದೆ. ಆಸಕ್ತರು ಅದನ್ನು ಗಮನಿಸಬಹುದು. ಯಾವ ಯಾವ ಕಾಲದಲ್ಲಿ ಯಾವ ಯಾವ ನೆಲೆಗಳಲ್ಲಿ ಕುವೆಂಪು ನಾಟಕಗಳನ್ನು ನಮ್ಮ ಕನ್ನಡ ವಿಮರ್ಶಾ ಲೋಕವು ಅನುಸಂಧಾನಕ್ಕೆ ಎತ್ತಿಕೊಂಡಿದೆ ಎಂಬುದನ್ನು ಇದರಿಂದ ತಿಳಿಯಬಹುದು. ಕುವೆಂಪು ಅವರ ಸಾಹಿತ್ಯದ ಮೇಲೆ ಬಂದಿರುವ ವಿಮರ್ಶೆಯನ್ನು ಕುರಿತ ಅಧ್ಯಯನಕ್ಕೆ ತೊಡಗಿದ್ದಾಗ ಅವರ ನಾಟಕಗಳ ಬಗೆಗೆ ಇದುವರೆಗೆ ಕನ್ನಡದಲ್ಲಿ ಬಂದಿರುವ ವಿಮರ್ಶೆಗಳನ್ನು ಗಮನಿಸಲು ಸಾಧ್ಯವಾಯಿತು. ಇದಕ್ಕಾಗಿ ತಮ್ಮ ಗ್ರಂಥಭಂಡಾರವನ್ನು ಅವಲೋಕಿಸಲು ಅವಕಾಶ ನೀಡಿದ ಮತ್ತು ಹಲವು ಭಾಷಾಣಗಳಿಗೆ ನನ್ನನ್ನು ಆಹ್ವಾನಿಸಿ ಇಲ್ಲಿನ ಕೆಲವು ಲೇಖನಗಳ ರಚನೆಗೆ ಕಾರಣರಾದ ಗೆಳೆಯ ಡಾ. ಕೆ. ಸಿ. ಶಿವಾರೆಡ್ಡಿ ಅವರಿಗೆ ನನ್ನ ಧನ್ಯವಾದಗಳು. ಹಾಗೆಯೆ ಪಾಂಡವಪುರದ ಅಂಕೇಗೌಡ ಅವರು ತಮ್ಮ ಗ್ರಂಥಭಂಡಾರದ ಅವಲೋಕನಕ್ಕೆ ಅವಕಾಶ ನೀಡಿದ್ದಾರೆ. ಅವರಿಗು ನನ್ನ ಧನ್ಯವಾದಗಳು.

    ಇಲ್ಲಿನ ಕೆಲವು ಲೇಖನಗಳನ್ನು ಮೊದಲಿಗೆ ಪ್ರಕಟಿಸಿದ ಹೊಸತು, ಕೆಂಬಾವುಟ, ಅನಿಕೇತನ ಪತ್ರಿಕೆಗಳ ಸಂಪಾದಕರಿಗೆ ನನ್ನ ಧನ್ಯವಾದಗಳು. ಕನ್ನಡ ರಾಜ್ಯೋತ್ಸವ ಮಾಲಿಕೆಯಲ್ಲಿ ಈ ಲೇಖನಗಳ ಕಟ್ಟು ಅವರ ಪ್ರಧಾನ ಸಂಪಾದಕತ್ವದಲ್ಲಿ ಪ್ರಕಟ ಆಗುವಂತೆ ಡಾ. ಮೀರಾಸಾಬಿಹಳ್ಳಿ ಶಿವಣ್ಣ ಅವರು ನೋಡಿಕೊಂಡಿದ್ದಾರೆ. ಅವರ ಪ್ರೀತಿಯ ಒತ್ತಾಯ ಇಲ್ಲದಿದ್ದರೆ ಬಹುಶಃ ಈ ಲೇಖನಗಳ ಕಟ್ಟು ಪ್ರಕಟವಾಗುತ್ತಿರಲಿಲ್ಲ. ಅವರಿಗೆ ಮತ್ತು ತಮ್ಮ ಪ್ರಕಟಣಾ ಸಂಸ್ಥೆಯಿಂದ ಈ ಕೃತಿಯನ್ನು ಹೊರತರುತ್ತಿರುವ ಸಿವಿಜಿ ಚಂದ್ರು ಅವರಿಗೆ ನನ್ನ ಕೃತಜ್ಞತೆಗಳು. ಇಲ್ಲಿನ ಲೇಖನಗಳನ್ನು ಸಾದ್ಯಂತವಾಗಿ ಓದಿ ಈ ಕೃತಿಗೆ ಗೆಳೆಯ ಡಾ.ಬಿಳಿಗೆರೆ ಕೃಷ್ಣಮೂರ್ತಿ ಪ್ರೀತಿಯಿಂದ ಬೆನ್ನುಡಿ ಬರೆದುಕೊಟ್ಟಿದ್ದಾರೆ; ಅವರಿಗೆ ಹಾಗೂ ಇಲ್ಲಿನ ಲೇಖನಗಳ ಕರಡುಪ್ರತಿಯನ್ನು ತಯಾರಿಸಿಕೊಟ್ಟ ಶ್ರೀಮತಿ ಎಂ. ಎಸ್. ವಸಂತಕುಮಾರಿ ಅವರಿಗು ನನ್ನ ವಂದನೆಗಳು.

    ಓದುಗರಾದ ತಮ್ಮ ಸಲಹೆ ಸೂಚನೆಗಳಿಗೆ ಸದಾ ಸ್ವಾಗತ.

    - ರಾಮಲಿಂಗಪ್ಪ ಟಿ. ಬೇಗೂರು

    ಪರಿವಿಡಿ

    1. ನಾಟಕವೆಂಬ ಸಾಹಿತ್ಯಕ ದಂಗೆ

    2. ಕುವೆಂಪು ನಾಟಕ ಭಾಷೆ

    3. ವರ್ಗ ರಾಜಕಾರಣ ಮತ್ತು ಸಾಹಿತ್ಯ ಸಾಮಗ್ರಿ

    4. ರೂಪಾಂತರಗಳು : ವಸಾಹತುಶಾಹಿ ಪ್ರತಿರೋಧ

    5. ಕುವೆಂಪು ನಾಟಕಗಳು ಮತ್ತು ಪ್ರಕ್ರಿಯಾವಾದ

    6. ಜಾತ್ಯತೀತತೆಯ ಪರಿಕಲ್ಪನೆ ಮತ್ತು ಆಚರಣೆ-ರಾಜಕೀಯ ಜಾತ್ಯತೀತತೆ

    7. ಕುವೆಂಪು ನಾಟಕಗಳಲ್ಲಿ ಗುರುಕಲ್ಪನೆ

    8. ಪುರಾಣ ಪಠ್ಯ - ಪ್ರತಿಮಾವಿಧಾನದ ಪ್ರತಿಪಠ್ಯಗಳು

    9. ಕುವೆಂಪು ರಂಗಭೂಮಿಯ ಕಲ್ಪನೆ

    10. ಪ್ರಯೋಗ ಸಾಧ್ಯತೆ ಎಂಬ ರಂಗದೃಷ್ಟಿ

    11. ನನ್ನ ಗೋಪಾಲ - ನವ ಪುರಾಣ

    12. ಮಕ್ಕಳ ನಾಟಕಗಳು ಮತ್ತು ವಿಚಾರವಂತಿಕೆ

    13. ಕೋಮು ಸಾಮರಸ್ಯ - ಜಾತ್ಯತೀತತೆ

    14. ಕುವೆಂಪು ನಾಟಕಗಳ ಸ್ತ್ರೀ ಪಾತ್ರಗಳು

    15. ಸಾಂಸ್ಕøತಿಕ ನಾಯಕತ್ವ

    ಅನುಬಂಧ -1 : ಪಾರಿಭಾಷಿಕ ಕೋಶ

    ಅನುಬಂಧ -2 : ಲೇಖನ ಆಕಾರಾದಿ

    ನಾಟಕವೆಂಬ ಸಾಹಿತ್ಯಕ ದಂಗೆ

    (ಕುವೆಂಪು ನಾಟಕಗಳ ಕುರಿತ ಕೆಲ ಪ್ರತಿಕ್ರಿಯೆಗಳು)

    1

    (ಚಂದ್ರಹಾಸ ಮತ್ತು ಕಾನೀನ ನಾಟಕಗಳೆರಡನ್ನು ಹೊರತು ಪಡಿಸಿ ಕುವೆಂಪು ನಾಟಕಗಳನ್ನು ಬರೆಯಲು ತೊಡಗಿದ ಕಾಲದ (1925-1947) ಪ್ರಜಾಪ್ರಭುತ್ವೀಯತೆಗೆ ಭಾರತವು ಹೊರಳಿಕೊಳ್ಳುತ್ತಿದ್ದ ಸ್ಥಿತ್ಯಂತರದ ಕಾಲ.) ಈ ಸಂದರ್ಭದಲ್ಲಿ ಭಾರತದಾದ್ಯಂತ ಗಾಂಧಿವಾದಿ ಮತ್ತು ಅಂಬೇಡ್ಕರ್‍ವಾದಿ ಹೋರಾಟಗಳೆರಡೂ ಆಕಾರ ಪಡೆಯುತ್ತಿದ್ದವು. ಜಾತ್ಯತೀತ, ಕೋಮುವಾದಿ, ನಾಯಕ ರಾಜಕಾರಣಗಳು ಸ್ಥಳೀಯ, ರಾಷ್ಟ್ರೀಯ ಪ್ರಜ್ಞೆಯೊಟ್ಟಿಗೆ ಕೈಜೋಡಿಸುತ್ತಿದ್ದವು. ಎನ್‍ಲೈಟನ್‍ಮೆಂಟ್ ಪ್ರಾಜೆಕ್ಟಿನ ಬಹುತೆರನ ಪ್ರಭಾವಗಳು ಅದಾಗಲೇ ತಲೆದೋರಿದ್ದವು. ಒಟ್ಟಾರೆ ಭಾರತದಾದ್ಯಂತ ಪರಕೀಯ ಮತ್ತು ದೇಶೀಯ ಎರಡೂ ನೆಲೆಯಲ್ಲಿ ನಾವು ಮತ್ತು ಅನ್ಯರು ಎಂಬ ದ್ವಿಮಾನ ವಿರೋಧಿ ಪ್ರಜ್ಞೆಯೊಂದು ಸ್ಪಷ್ಟವಾಗಿ ರೂಪುಗೊಂಡಿದ್ದ ಕಾಲವದು. ಈ ಸ್ಥಿತ್ಯಂತರ ಕಾಲದ ತಲ್ಲಣ ಮತ್ತು ಆಕಾಂಕ್ಷೆಗಳೇ ಕುವೆಂಪು ನಾಟಕಗಳಲ್ಲಿ ಸಾಕ್ಷರವಾಗಿ ಸಂಭವಿಸಿವೆ.

    ಯಾವುದೇ ಸಮಾಜವು ಕ್ರಾಂತಿಕಾರಕ ಬದಲಾವಣೆಗಳನ್ನು ಹೊಂದುವಾಗ ಅಲ್ಲಿ ಸಶಕ್ತ ಬರಹಗಾರರ ಕೊಡುಗೆ ಸಾಕಷ್ಟು ಇದ್ದೇ ಇರುತ್ತದೆ. ಹಾಗೇ ಸ್ಥಿತ್ಯಂತರ ಕಾಲೀನ ಸಮಾಜಗಳು ಸಶಕ್ತ ಬರಹಗಾರರನ್ನು ರೂಪಿಸುತ್ತವೆ ಕೂಡ. ಫ್ರಾನ್ಸಿನ ಮಹಾಕ್ರಾಂತಿ ಇದಕ್ಕೆ ಸಾಕ್ಷಿ. ಈ ದೃಷ್ಟಿಯಿಂದ ಕುವೆಂಪು ತಮ್ಮ ಬರೆಹದ ಮೂಲಕ ಸಮಾಜದ ಕ್ರಾಂತಿಕಾರಕ ಪಲ್ಲಟಗಳಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ ಮತ್ತು ತಾವು ಸ್ವತಃ ಸ್ಥಿತ್ಯಂತರ ಸಮಾಜದ ಒಂದು ಉತ್ಪನ್ನವೂ ಆಗಿದ್ದಾರೆ. ಯಾವುದೇ ಅನ್ಯದ ವಿರುದ್ಧ ಸಂಘಟಿತ ಹೋರಾಟವೊಂದು ರೂಪುಗೊಳ್ಳುವಾಗ ಸಮಾನತೆಯ ಪ್ರಶ್ನೆಗಳು ಎದ್ದೇ ಏಳುತ್ತವೆ. ಅಸಮಾನತೆ ಮತ್ತು ಸ್ವಾತಂತ್ರ್ಯಗಳು ಎಂದಿಗೂ ಒಟ್ಟಿಗೇ ಹೋಗಲಾರವು. ಭಾರತೀಯ ಸ್ವಾತಂತ್ರ್ಯ ಹೋರಾಟವೆಂದರೆ ಅದು ಬರೀ ರಾಜಕೀಯ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟವಲ್ಲ. ಅದು ಸಾಮಾಜಿಕ, ಧಾರ್ಮಿಕ, ಆ ಮೂಲಕ ಆರ್ಥಿಕ ಸಮಾನತೆಗಳಿಗಾಗಿ ನಡೆದ ಹೋರಾಟ ಕೂಡ. ಇದು ಸ್ಥಳೀಯವಾಗಿ ಜಾತಿ ತಾರತಮ್ಯದ ವಿರುದ್ಧ ನಡೆದ ಹೋರಾಟವೂ ಆಗಿದೆ. ಇಂಥ ಬಹು ಮುಖೀ ಸ್ವಾತಂತ್ರ್ಯ ಹೋರಾಟದ ಕನ್ನಡ ಪ್ರತಿನಿದೀಕರಣವೇ ಕುವೆಂಪು ನಾಟಕಗಳಲ್ಲಿ ಮೈತಾಳಿದೆ. (ನೋಡಿ ಭಾಗ - 8) ಪಾರಂಪರಿಕವಾದ ಭಾಷಿಕ, ಸಾಹಿತ್ಯಕ ರಾಜಕಾರಣದ ಛಿದ್ರೀಕರಣವನ್ನು ಪುರಾಣಗಳ ಮರು ಪ್ರತಿನಿಧೀಕರಣದ ಮೂಲಕ ಕುವೆಂಪು ಇಲ್ಲಿ ಮಾಡಿದ್ದಾರೆ. ಏಕಕಾಲಕ್ಕೆ ಸಮುದಾಯದ ಸಮಷ್ಠಿ ದನಿಯಾಗಿ ರೂಪಗೊಳ್ಳುವ ಮತ್ತು ಸಮುದಾಯದ ಅಂತಸ್ಥ ಪ್ರಜ್ಞೆಯನ್ನು ತಿದ್ದುವ ಕ್ರಿಯೆ ಇದು.

    ನಮ್ಮ ವಿಮರ್ಶಾಶಾಸ್ತ್ರದಲ್ಲಿ ನಮ್ಮ ಸಾಹಿತಿಗಳು ಸಕ್ರಿಯ ಸ್ವಾತಂತ್ರ್ಯ ಹೋರಾಟ, ಸಂಘಟನೆಗಳಲ್ಲಿ ಭಾಗವಹಿಸಲಿಲ್ಲ ಎಂಬ ಆರೊಪವಿದೆ. ಇದರ ಜೊತೆಗೆ ನಮ್ಮ ಚರಿತ್ರೆಯ ಸಂಕ್ರಮಣ ಕಾಲವೊಂದರಲ್ಲಿ ಸೃಷ್ಟಿಯಾದ ಸಾಹಿತ್ಯ ಅಂದಿನ ಸಮಕಾಲೀನ ರಾಜಕೀಯ, ಸಾಮಾಜಿಕ ವಾಸ್ತವಗಳಿಗೆ ಸ್ಪಂದಿಸಲಿಲ್ಲ ಎಂಬ ಆರೋಪವೂ ಇದೆ. ಈ ಮಾತುಗಳನ್ನು ಕುವೆಂಪುಗೆ ಅನ್ವಯಿಸಲಾಗುವುದಿಲ್ಲ. ಹಾಗೆ ಮಾಡಿದರೆ ಹೋರಾಟದ ಬಹುಮುಖಗಳನ್ನು ನಾವು ನಿರಾಕರಿಸಿದಂತೆಯೇ ಸರಿ.

    ಸಾಹಿತ್ಯ ಎಂಬುದು ಒಂದು ಭಾಷಿಕ ಘಟನೆ-ಸಂಭವ. ಕುವೆಂಪು ನಾಟಕಗಳು ಜಲಗಾರ, ಶಂಬೂಕ, ಏಕಲವ್ಯ, ಕರ್ಣ, ಭಾರತಾಂಬೆ, ಸಾವಿತ್ರಿ, ಬುದ್ಧ ಮೊದಲಾದ ಅನೇಕ ಪ್ರತಿಮೆಗಳ ಮೂಲಕ ಬಹು ವಿಧ ಸ್ವಾತಂತ್ರ್ಯಗಳ ಆಕಾಂಕ್ಷೆಯನ್ನು ಸಾಕ್ಷರಗೊಳಿಸಿದ ಸಾಹಿತ್ಯ ಘಟನೆಗಳೇ ಆಗಿವೆ. ಈಗಾಗಲೇ ಸೃಷ್ಟಿಗೊಂಡ ಪುರಾಣ ಪ್ರತಿಮೆಗಳನ್ನು ಭಂಜಿಸುವ ಮೂಲಕ ಮತ್ತು ತಾವೇ ಹೊಸ ಪ್ರತಿಮೆಗಳನ್ನು ವರ್ತಮಾನ(ಕ್ಕೆ)ದಿಂದ ಸೃಷ್ಟಿಸುವ ಮೂಲಕ ಕುವೆಂಪು ಸಕ್ರಿಯ ಹೋರಾಟಗಾರನೇ ಆಗಿ ಹೋಗಿದ್ದಾರೆ. ಕುವೆಂಪು ಅವರದ್ದು ಒಂದು ರೀತಿಯ ಸಾಹಿತ್ಯಕ ದಂಗೆ. ರಾಜಕೀಯ ಅಧಿಕಾರದ ಹಸ್ತಾಂತರಕ್ಕಾಗಿ ಸಕ್ರಿಯ ಹೋರಾಟದಲ್ಲಿ ತೊಡಗಿದ್ದರೆ ಮಾತ್ರ ಅದು ಹೋರಾಟ ಮಿಕ್ಕದ್ದು ಹೋರಾಟವಲ್ಲ ಎಂಬ ನಂಬಿಕೆಯನ್ನು ಛಿದ್ರಿಸುವ ಸಾಂಸ್ಕøತಿಕ ದಂಗೆ.

    2. ಸ್ವಾತಂತ್ರ್ಯಪೂರ್ವ ಯುಗದಲ್ಲಿ ರೆನೆಸಾನ್ಸ್ ಪ್ರಭಾವಗಳಿಗೆ ಭಾರತವೂ ಹೊರತಾಗಲಿಲ್ಲವಾಗಿ ಇಲ್ಲಿಯೂ ಅದರ ಚಾಚುವಿಕೆಗಳು ಕಾಣಿಸಿಕೊಂಡವು. ಮುದ್ರಣ ಮಾದ್ಯಮ, ಕೈಗಾರೀಕರಣ, ಇಂಗ್ಲಿಷ್ ಶಿಕ್ಷಣಗಳ ಪ್ರಭಾವಗಳು ಕೆಲ ಉಪಯುಕ್ತ ಅಡ್ಡ ಪರಿಣಾಮಗಳಿಗೆ ಕೂಡ ಕಾರಣವಾದವು. ಇದರ ಫಲಿತವೆಂಬಂತೆ ಭಾರತವು ಬ್ರಿಟಿಷ್ ವಸಾಹತುಶಾಹಿಗೆ ಎದುರಾಗುವ ಸಂದರ್ಭದಲ್ಲಿ ಮೂರು ತೆರನ ಬೆಳವಣಿಗೆಗಳಾದವು.

    ಅ) ಭಾರತೀಯ ಪರಂಪರೆಯಲ್ಲಿ ಎಲ್ಲವೂ ಇತ್ತೆಂಬ ವೈಭವೀಕರಣ ಆ) ಭಾರತೀಯ ಪರಂಪರೆಯು ಗೊಡ್ಡು ಸಂಪ್ರದಾಯದ್ದೆಂಬ ತಿರಸ್ಕಾರ. ಇ) ಇಲ್ಲಿ ಶಕ್ತಿ-ದೋಷಗಳೆರಡೂ ಉಂಟೆಂಬ ಪರಿಷ್ಕರಣವಾದ. ಕುವೆಂಪು ಮೊದಲ ಎರಡು ಅತಿಗಳಿಗೂ ಹೋಗದ ಪರಿಷ್ಕರಣವಾದಿ (ಡಿ.ಆರ್. ಈಗಾಗಲೇ ಇದನ್ನು ಹೇಳಿದ್ದಾರೆ) ಇವರ ಪರಿಷ್ಕರಣವಾದಿ ನಿಲುವನ್ನು ಇವರ ನಾಟಕಗಳಲ್ಲಿ ನಿಚ್ಚಳವಾಗಿ ಕಾಣಬಹುದು. ಹೀಗಾಗಿ ಕುವೆಂಪು ಒಂತೆರನ ಪರಂಪರೆಯನ್ನು ಶೋಧಿಸುವ (ಸೋಸುವ) ಪ್ರತಿಭೆ. ಪರಂಪರೆಯ ಕುರಿತ ರತಿ ಮತ್ತು ವಿವೇಕಗಳೆರಡೂ ಯಾವತ್ತೂ ಒಟ್ಟಿಗೇ ಹೋಗಲಾರವು. ಆದರೆ ಕುವೆಂಪು ಅವರಲ್ಲಿ ಪರಂಪರೆಯ ರೋಗಗಳನ್ನು ನಿವಾರಿಸುವ ಚಿಕಿತ್ಸಕ ವಿವೇಕ ಮತ್ತು ಅದರ ಶಕ್ತಿಗಳನ್ನು ವರ್ತಮಾನೀಕರಿಸುವ ಪೋಷಕ ಪ್ರಜ್ಞೆಗಳೆರಡೂ ಇವೆ. ಇದು ಬರೀ ಸ್ವ ಪರಂಪರೆಯ ಪ್ರಜ್ಞೆಯಷ್ಟೇ ಅಲ್ಲ, ಪಾಶ್ಚಾತ್ಯ ಪ್ರಣೀತ ವಿಚಾರವಾದ, ಉದಾರ ಮಾನವತಾವಾದ, ಮಾಕ್ರ್ಸ್‍ವಾದ, (ಸಮಾಜವಾದ) ವಿಜ್ಞಾನವಾದಗಳೆಲ್ಲದರಿಂದ ಪ್ರಭಾವಿತವಾದ ಮತ್ತು ಅರವಿಂದ, ಪರಮಹಂಸ, ವಿವೇಕಾನಂದ, ಶಾರದಾದೇವಿ ಮೊದಲಾದ ಭಾರತೀಯ ಸಂತ ವ್ಯಕ್ತಿತ್ವಗಳಿಂದ ದತ್ತವಾದ ವೈಶ್ವಿಕ ಚಿಕಿತ್ಸಕ ವಿವೇಕ ಮತ್ತು ಪೋಷಕ ಪ್ರಜ್ಞೆ ಕೂಡ. ನಾಟಕಗಳಲ್ಲಿ ಇವರು ನಂಬುವ ವಿಧಿವಾದ, ಕರ್ಮಸಿದ್ದಾಂತ ಪುನರ್ಜನ್ಮ ಸಿದ್ಧಾಂತ, ಆತ್ಮವಾದ, ಲೀಲಾನಾಟಕವಾದಗಳನ್ನು ಕುರಿತಂತೆ ನಮ್ಮದೇ ತಕರಾರುಗಳು ಏನೇ ಇರಲಿ, ಪರಂಪರೆಯನ್ನು ಸದಾ ಸೋಸುತ್ತಲೇ ಇರಬೇಕೆಂಬ ಇವರ ಕೈ ಮಾರ್ಗ ಮಾತ್ರ ಅನುಕರಣೀಯ.

    3. ಇವತ್ತಂತೂ `ನಾಗರಿಕತೆಯ ನಾಗಿನಿಯು ಪ್ರಗತಿನಾಮಕ ಫಣಿಯ ಮೇಲೆತ್ತಿ ಚುಂಬಿಸಿಯೆ ಕೊಲ್ಲಲೆಳಸುತಿದೆ, ಹಿಂದಿನ ಬುತ್ತಿ ಸಮೆಯುತಿದೆ’ (ಬಲಿದಾನ 1996. ಪು 12) ವಿಚಾರವಾದ ವಿಜ್ಞಾನವಾದಗಳ ಫಲವೆಂಬಂತೆ ಆಧುನಿಕ ನಾಗರಿಕತೆಯಲ್ಲಿ ಇಂದು ಭಾರತೀಯ ಅನುಭಾವ, ಆಧ್ಯಾತ್ಮಿಕತೆಗಳು ತಮ್ಮ ಚಲಾವಣೆಯನ್ನು ಕಳೆದುಕೊಂಡಿವೆ. ಆಧುನಿಕ ನಾಗರಿಕತೆಯ ಹಲವು ವಿಕೃತಿಗಳಲ್ಲಿ ಆಧ್ಯಾತ್ಮಿಕತೆಯ ಅಪ್ರಸ್ತುತತೆಯೂ ಒಂದು. (ಉದ್ಧಾರದ-ಪ್ರಗತಿಯ ಹೆಸರಲ್ಲಿ ಇಲ್ಲಿ ಏನೆಲ್ಲ ನಡೆದಿದೆ-ನಡೆಯುತ್ತಿದೆ) ಇಂಥಾ ಅಪ್ರಸ್ತುತತೆಗೆ ಮದ್ದನ್ನು ಕುವೆಂಪು ತಮ್ಮ ನಾಟಕಗಳಲ್ಲಿ ಕಟ್ಟಿಕೊಡುತ್ತಾರೆ. ಇವರ ನನ್ನ ಗೋಪಾಲ, ಸ್ಮಶಾನು ಕುರುಕ್ಷೇತ್ರ, ಬೆರಳ್‍ಗೆ ಕೊರಳ್, ಶೂದ್ರತಪಸ್ವಿ, ಕಾನೀನ, ಯಮನ ಸೋಲು ಮೊದಲಾದ ನಾಟಕಗಳಲ್ಲಿ ಆಧ್ಮಾತ್ಮಿಕತೆಯ ಭಿನ್ನ ಬಾಳ್ವೆಗಳು ಅಭಿನಯಗೊಂಡಿವೆ. (ಉದಾಹರಣೆಗೆ ನೋಡಿ; `ನಿನ್ನಿಂದೆ ಕಲ್ತೆನಧ್ಯಾತ್ಮಮಂ, ಪಡೆವುದೆಲ್ಲ ಕೊಡುವುದಕ್ಕಲ್ತೆ?’- `ಬೆರಳ್‍ಗೆ ಕೊರಳ್’. 1994. ಪು.39) ಎಂಬ ಏಕಲವ್ಯನ ಮಾತು. ಜೊತೆಗೆ `ಅಖಿಲರ್ಗಂ ಶ್ರೇಯಮಕ್ಕೆ, ಋತಂ ಗೆಲ್ಗೆ!’ - ಶೂದ್ರ ತಪಸ್ವಿ, 1987. ಪು. 39-ಎಂಬ ರಾಮನ ಮಾತು. ಇತ್ಯಾದಿ)

    ನನ್ನ ಗೋಪಾಲ ನಾಟಕದಲ್ಲಂತೂ ಆರ್ಥಿಕ ಶ್ರೀಮಂತಿಕೆ ಮತ್ತು ಆತ್ಮ ಶ್ರೀಮಂತಿಕೆಗಳನ್ನು ಮುಖಾಮುಖಿ ಮಾಡಲಾಗಿದೆ. ಇಲ್ಲಿ ಲೌಕಿಕ ಶ್ರೀಮಂತಿಕೆಯ ಮದಕ್ಕೆ ಪ್ರತಿಯಾಗಿ ಆಧ್ಯಾತ್ಮಿಕ ಶ್ರೀಮಂತಿಕೆಯ ಅಗತ್ಯವನ್ನು ಮತ್ತು ಬಡತನವಿದ್ದೂ ಸರಳ, ಆತ್ಮಶುದ್ಧ, ವಿಶ್ವಕುಟುಂಬಿ ಬದುಕನ್ನು ಬಾಳುವ ಅಗತ್ಯವನ್ನು ಕಟ್ಟಿಕೊಡಲಾಗಿದೆ.

    4. ಆಧುನಿಕ ವಿಚಾರವಾದ ಮತ್ತು ವಿಜ್ಞಾನವಾದಗಳು ಇಂದು ಭಾರತೀಯ ಆಧ್ಯಾತ್ಮ-ಆಗಮಿಕ-ಅನುಭಾವಿ ಚಿಂತನೆಗಳನ್ನು ಅಪ್ರಸ್ತುತಗೊಳಿಸಿರುವುದಷ್ಟೇ ಅಲ್ಲ ಈ ಲೋಕದ ಪ್ರತಿಯೊಂದನ್ನು ಮಾನವ ಪ್ರಯತ್ನದಿಂದ ಗೆಲ್ಲಬಹುದೆಂಬ, ಮಾನವನ ಶಕ್ತಿಗೆ ಅತೀತವಾದದ್ದು ಇಲ್ಲಿ ಏನೂ ಇಲ್ಲವೆಂಬ ಹುಂಬ ನಂಬಿಕೆಯನ್ನು ಹುಟ್ಟಿಸಿವೆ. ಅಲ್ಲದೆ ಪ್ರಯೋಗ, ಪರೀಕ್ಷೆ, ಈಕ್ಷಣೆಗಳ ಮೂಲಕ ಮಾನವನ ಇಂದ್ರಿಯಾನುಭವಗಳಿಗೆ ದಕ್ಕದ ಏನೊಂದೂ ಇಲ್ಲಿ ಇಲ್ಲವೆಂಬ ಪ್ರಯೋಗವಾದಿ (Empiricist) ಭ್ರಮೆಯನ್ನೂ ಹುಟ್ಟಿಸಿವೆ. ಎಲ್ಲಕ್ಕೂ ಮಾನವ ಶಕ್ತಿಯನ್ನೇ ಕೇಂದ್ರವಾಗಿರಿಸಿಕೊಂಡ ಮಾನವ ಕೇಂದ್ರವಾದ ಇದು. ಭಾರತೀಯ ಸಂದರ್ಭದಲ್ಲಿ ಈ 1. ಮಾನವಕೇಂದ್ರವಾದಕ್ಕೆ ಪ್ರತಿಯಾಗಿ ಇನ್ನೆರಡು ವಾದಗಳಿದ್ದಾವೆ. ಅವೆಂದರೆ 2. ಪರಿಸರ ಕೇಂದ್ರವಾದ ಮತ್ತು 3. ದೈವಕೇಂದ್ರವಾದಗಳು. ಕುವೆಂಪು ಎಂಪಿರಿಕಲ್ ಧೋರಣೆಯ ಮಾನಕೇಂದ್ರವಾದದಲ್ಲಿ ನಂಬಿಕೆಯುಳ್ಳವರಲ್ಲ. ಇವರು ಕೆಲವೊಮ್ಮೆ ದೈವಕೇಂದ್ರವಾದದಲ್ಲೂ, ಕೆಲವೊಮ್ಮೆ ಪರಿಸರ ಕೇಂದ್ರವಾದದಲ್ಲೂ ಜೀಕುತ್ತಾರೆ.

    ಸ್ಮಶಾನ ಕುರುಕ್ಷೇತ್ರ. ನಾಟಕದಲ್ಲಿ ದುರ್ಯೋಧನ ಕೃಷ್ಣನಿಗೆ `ಸೂತ್ರಧಾರ ನಾನೆನ್ನ ಪಾತ್ರಮಂ ನೇರಮಾಗಭಿನಯಿಸಿ ತೋರ್ದೆನೇನ್’ (ಪು. 27) ಎಂದು ಕೇಳುತ್ತಾನೆ. ಬೆರಳ್‍ಗೆ ಕೊರಳ್ ನಾಟಕದಲ್ಲಿ ದ್ರೋಣನು `ಮಾಳ್ವುದನ್ ಮಾಳ್ವೆನ್! ತಾನ್ ಅಪ್ಪುದಕ್ಕೆ! ಸರ್ವಜ್ಞಂ, ಸರ್ವಶಕ್ತಂ ಆ ದೈವಮಿರ್ಕುಂ!’ (ಪು.34) ಎಂದು ತನ್ನ ಕೃತ್ಯದ ಬಗ್ಗೆ ತಾನೇ ಅದು ತನ್ನ ಕಯ್ಯಲ್ಲಿಲ್ಲದ ಕೆಲಸವೆಂಬಂತೆ ಹೇಳಿಕೊಳ್ಳುತ್ತಾನೆ. ಏಕಲವ್ಯ ಕೂಡ ಯಾವುದೇ ಆಕ್ರೋಶ, ಪ್ರತಿಭಟನೆಗಳಿಲ್ಲದೆ `ಗೆಲ್ಗೆ ದೈವೇಚ್ಛೆ! ನಿಮ್ಮ ವಚನಂ ನಿಲ್ಗೆ! ಅರ್ಜುನನ

    Enjoying the preview?
    Page 1 of 1