Discover millions of ebooks, audiobooks, and so much more with a free trial

Only $11.99/month after trial. Cancel anytime.

Dhuddu Maaduvudu Hege?
Dhuddu Maaduvudu Hege?
Dhuddu Maaduvudu Hege?
Ebook105 pages1 hour

Dhuddu Maaduvudu Hege?

Rating: 0 out of 5 stars

()

Read preview

About this ebook

Yandamoori Veerendranath, is a famous Telugu novelist. He had written many social, fiction, super natural thriller stories and novels. Hailing from Andhra Pradesh state in India, he influenced younger generations with his socially relevant writings. In his writings he addresses many of the important social problems in India like poverty, prejudices, and superstitions, and encourages people to be socially responsible. He successfully bridges the idealistic and the popular styles of literature.
LanguageKannada
Release dateAug 12, 2019
ISBN9789385545634
Dhuddu Maaduvudu Hege?

Read more from Yandamoori Veerendranath

Related to Dhuddu Maaduvudu Hege?

Related ebooks

Reviews for Dhuddu Maaduvudu Hege?

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Dhuddu Maaduvudu Hege? - Yandamoori Veerendranath

    http://www.pustaka.co.in

    ದುಡ್ಡು ಮಾಡುವುದು ಹೇಗೆ?

    Dhuddu Maaduvudu Hege?

    Author :

    ಯಂಡಮೂರಿ ವೀರೇಂದ್ರನಾಥ್

    Yandamoori Veerendranath

    For more books

    http://www.pustaka.co.in/home/author/yandamoori-veerendranath

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ದುಡ್ಡು ಮಾಡುವುದು ಹೇಗೆ?

    ಒಂದು ಚಿಂತನೆ

    ಯಂಡಮೂರಿ ವೀರೆಂದ್ರನಾಥ್

    ಕನ್ನಡಕ್ಕೆ:

    ಆರ್.ವಿ. ಕಟ್ಟೀಮನಿ

    ಯಂಡಮೂರಿ ವೀರೇಂದ್ರನಾಥರೊಂದಿಗೆ ಸಂದರ್ಶನ

    ಕಾದಂಬರಿಗಳೆಂದರೆ ಸಾಕು ಮೈಮರೆತು ಓದಲು ಕೂಡುವವರು; ಅದರಲ್ಲೂ ತೆಲುಗಿನ ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥರ ಕಾದಂಬರಿ ಕೈಗೆ ಸಿಕ್ಕರೆ ‘ಟ್ರಾನ್ಸ್’ಗೊಳಗಾಗುವ ಓದುಗರು ಸಾವಿರಾರು ಜನ. ಇಂಥ ಕುತೂಹಲ ಕುದಿಯುವ ಕಾದಂಬರಿಗಳನ್ನು ಸೃಷ್ಟಿಸುವ ಯಂಡಮೂರಿ ವೀರೇಂದ್ರನಾಥ್‍ರ ಖಾಸಗಿ ಬದುಕು ಹೇಗಿದೆ? ಅವರ ಅಭಿರುವಿಗಳೇನು? ತೆಲುಗು ಸಾಹಹಿತ್ಯದಲ್ಲವರ ಸ್ಥಾನಮಾನ ಏನು? ಇತ್ಯಾದಿಗಳನ್ನೆಲ್ಲ ತಿಳಿದುಕೊಳ್ಳುವ ಆಸೆ ಕನ್ನಡದ ಓದುಗರಿಗೆ ಇದ್ದರೆ ಅದು ಸಹಜ. ಅದಕ್ಕೆಂದೇ ಯಂಡಮೂರಿಯವರೊಂದಿಗೆ ಕರ್ಮವೀರ ಪತ್ರಿಕೆಯ ಮರು ಜನ್ಮ ಪಡೆದು, ದುಡ್ಡು ಮೈನಸ್ ದುಡ್ಡು ಧಾರಾವಾಹಿ ಆರಂಭಿಸಿದ ಸಂದರ್ಭದಲ್ಲಿ ಅಂದರೆ 22-11-1992ರ ಸಂಚಿಕೆಗಾಗಿ ಪಡೆದ ಸಂದರ್ಶನ.

    ಸಂದರ್ಶನ ಪಡೆದವರು: ಶ್ರೀ ಎಂ.ಎ.ಸುಬ್ರಹ್ಮಣ್ಯ

    •      ಯಂಡಮೂರಿ, ನಿಮ್ಮ ಖಾಸಗಿ ಬದುಕಿನ ಬಗ್ಗೆ ಒಂದಿಷ್ಟು ಹೇಳಿ?

    ಸದ್ಯದ ದಿನಚರಿ ಮಾತ್ರ ಹೇಳಬಲ್ಲೆ ಸಾಕಲ್ಲ? ಬೆಳಿಗ್ಗೆ ಆರೂವರೆಗೆ ಏಳ್ತೀನಿ. ಹಾಳು ತರೋ ಜವಾಬ್ದಾರಿ ನಂದು. ಏಳರಿಂದ ಎಂಟೂವರೆ ತನಕ ಕೂತು ಬರೀತೇನೆ. ಹತ್ತು ಗಂಡೆಗೆ ಲೇಖಕರ ವರ್ಕ್‍ಶಾಪಿಗೆ ಬಂದು ಸಂಜೆ ತನಕ ಕಾದಂಬರಿ ಲೇಖಕರ ಕಮ್ಮಟದ ವಿದ್ಯಾರ್ಥಿಗಳೊಂದಿಗೆ ಕಾಲ ಕಳೀತೇನೆ. ಮಧ್ಯಾಹ್ನ, ಸಂಜೆ ಓದ್ತೇನೆ. ಪಾಯಜಮಾ, ಜುಬ್ಬಾ, ನನ್ನ ಪ್ರೀತಿಯದಿರಿಸು.

    •      ನಿಮ್ಮ ಬಾಲ್ಯ ಹೇಗಿತ್ತು ವೀರೇಂದ್ರನಾಥ್?

    ತುಂಬ ಕಷ್ಟಮಯವಾಗಿತ್ತು. ಚಿಕ್ಕಂದಿನಲ್ಲೇ ಅಪ್ಪ-ಅಮ್ಮ ಹೋದರು. ನನ್ನಷ್ಟಕ್ಕೆ ನಾನೇ ಬೆಳೆದೆ. ಈ ಎಲ್ಲ ಏಳಿಗೆಗೆ ನಾನೇ ಕಾರಣ.

    •      ನಿಮ್ಮ ಕಾದಂಬರಿಯ ಪಾತ್ರಗಳಲ್ಲಿ ನೀವಿದ್ದೀರಾ?

    ಸಹಜವಾಗೇ! ನನ್ನೆಲ್ಲ ಕಾದಂಬರಿಗಳ ನಾಯಕರು ನನ್ನನ್ನೇ ಹೋಲುತ್ತಾರೆ. ‘ಆನಂದೋಬ್ರಹ್ಮ’ ಮತ್ತು ‘ಋಷಿ’ ಕಾದಂಬರಿಗಳಲ್ಲಿ ನನ್ನ ಆತ್ಮಚರಿತೆಯ ಅಂಶಗಳಿವೆ.

    •      ಲೇಖಕರಾಗಿ ಇಪ್ಪತ್ತೈದು ವರ್ಷ ಮುಗಿಸಿದೀರಿ. ಆತ್ಮವಿಮರ್ಶೆ ಮಾಡಿಕೊಂಡಾಗ ಏನನ್ನಿಸುತ್ತೆ?

    ಏನೋ ಒಂದು ಕೊರತೆಯ ಭಾವ ಕಾಡುತ್ತೆ. ಇಪ್ಪತ್ತೈದು ವರ್ಷಗಳಲ್ಲಿ ಬರೆದಿದ್ದರ ಪೈಕಿ ನಂಗೆ ತೃಪ್ತಿಕೊಟ್ಟಿರೋ ಕೃತಿಗಳು ಕೆಲವೇ ಕೆಲವು. ಆದರೆ ಟ್ರಾಜಿಡಿ ನೋಡಿ, ಅಂಥ ಕೃತಿಗಳೇ ಓದುಗರನ್ನು ತಲುಪಲಿಲ್ಲ. ಪತ್ರಿಕೆಗಳಲ್ಲಿ ಧಾರಾವಾಹಿ ಬರೆಯೋ ಕೆಲಸಕ್ಕೆ ಬಿದ್ದಿರೋದರಿಂದ ನನಗಿಷ್ಟವಿಲ್ಲದ್ದನ್ನು ಬರೆಯೋ ಪರಿಸ್ಥಿತಿ ನಂದು, ಓದುಗನ ಕುತೂಹಲ ಕೆರಳಬೇಕು; ಪ್ರತೀವಾರ ಸಸ್ಪೆನ್ಸ್ ಇರಬೇಕು, ನಾನು ನಮೂನೆಯ ಗಿಮಿಕ್‍ಗಳನ್ನು ಮಾಡ್ತಾ ಮಾಡ್ತಾ ಸಾಹಿತ್ಯ ರಚನೆಯ ಮೂಲೋದ್ಧೇಶವನ್ನೇ ಮರೆತು ಬಿಡ್ತಿನೇನೋ ಹೆದರಿಕೆಯಾಗುತ್ತೆ.

    •      ವಿವರಿಸಿ ಹೇಳ್ತೀರಾ?

    ನೋಡಿ, ಫಾರ್ ಎಕ್ಸಾಂಪಲ್-ಬಂಗಾಲಿ ಲೇಖಕ ಶರಶ್ಚಂದ್ರರು ಒಂದು ಪಾತ್ರ ಚಿತ್ರಿಸೋಕೆ ನಲವತ್ತು ಪುಟ ತಗೋತಾರೆ. ಒಂದು ಘಟನೆ ಬರೆಯೋಕೆ ಮೂವತ್ತು ಪುಟ ಬಳಸ್ತಾರೆ. ನಾನೇನಾದ್ರೂ ಹಾಗೆ ಮಡಿದ್ರೆ ಸೀರಿಯಲ್‍ಗಳ ಓದುಗ ಆಸಕ್ತಿ ಕಳಕೋತಾನೆ!

    •      ಮಂತ್ರ-ತಂತ್ರ-ಕ್ಷುದ್ರ ಶಕ್ತಿಗಳ ಕುರಿತಾದ ಬರವಣಿಗೆ ಪ್ರಾರಂಭಿಸಿದ ನೀವು ಬರಬರುತ್ತಾ, ಫಿಲಾಸಫಿಕಲ್ ಆಗಿ ಬರೆಯೋಕೆ ಶುರು ಮಾಡಿದ್ದೀರಲ್ಲಾ?

    ಹೌದು, ಹಿಂದೇನೇ ಈ ಥರದ ಕೃತಿ ‘ಆನಂದೋಬ್ರಹ್ಮ’ ಬರೆದೆ. ಅದು ನನ್ನ ಅತ್ಯುತ್ತಮ ಕಾದಂಬರಿ. ಆದರೆ ಪ್ರತಿಗಳು ಖರ್ಚಾಗಲಿಲ್ಲ. ಮೊನ್ನೆ ‘ಬೆಂಕಿ ಕೋಳಿ’ ಮತ್ತು ‘ಅಂತರ್ಮುಖಿ’ ಬರೆದೆ. ಅವೂ ಸೋತವು. ತೆಲುಗು ಓದುಗರಿಗೆ ಇನ್ಯಾವೂ ಹಿಡಿಸೋದಿಲ್ಲ. ಆತ ಜನಪ್ರಿಯ ಜಾಡಿನಿಂದ ಊಚೆಗೆ ಬರಲಾರ. ನಾನೂ ಆತನಂತೆಯೇ ಹಳೇ ಜಾಡಿಗೇ ಶರಣಾಗಿದ್ದೀನಿ.

    •      ವಿಮರ್ಶೆಗಳನ್ನು ಹ್ಯಾಗೆ ಸ್ವೀಕರಿಸ್ತೀರಿ?

    ನನ್ನ ಮಟ್ಟಿಗೆ ವಿಮರ್ಶೆ ಅನ್ನೋದೇ ವ್ಯರ್ಥ. ಸಹೃದಯ-ವಸುನಿಷ್ಠ ವಿಮರ್ಶೆಯಾದರೆ ಸ್ವೀಕರಿಸಬಹುದು. ಆದರೆ ತಪ್ಪು ಕಂಡು ಹಿಡಿಯೋದೇ ಕಸುಬು ಮಾಡಿಕೋತಾರೆ ವಿಮರ್ಶಕರು. ಹೀಗೆ ಬರೆದಾಗ ‘ಹಾಗೆ ಬರೀಬೇಕಿತ್ತೆಂದೂ’ ಹಾಗೆ ಬರೆದಾಗ ‘ಹೀಗೆ ಬರೀಬಹುದಿತ್ತೆಂದೂ’ ವಾದಿಸುತ್ತಾರೆ. ಶುದ್ಧ ಯೂಸ್‍ಲಸ್!

    •      ನಿಮ್ಮ ಮೆಚ್ಚಿನ ಲೇಖಕರ್ಯಾರು?

    ತೆಲುಗು ಲೇಖಕ ಕೆಮ್ಮೂರಿ ವೇಣುಗೋಪಾಲರಾವ್, ಇಂಗ್ಲಿಷಿನಲ್ಲಿ ಅಯನ್‍ರಾಂಡ್!

    •      ನೀವು

    Enjoying the preview?
    Page 1 of 1