Discover millions of ebooks, audiobooks, and so much more with a free trial

Only $11.99/month after trial. Cancel anytime.

Rushi
Rushi
Rushi
Ebook247 pages1 hour

Rushi

Rating: 0 out of 5 stars

()

Read preview

About this ebook

Yandamoori Veerendranath, is a famous Telugu novelist. He had written many social, fiction, super natural thriller stories and novels. Hailing from Andhra Pradesh state in India, he influenced younger generations with his socially relevant writings. In his writings he addresses many of the important social problems in India like poverty, prejudices, and superstitions, and encourages people to be socially responsible. He successfully bridges the idealistic and the popular styles of literature.
LanguageKannada
Release dateAug 12, 2019
ISBN9789385545665
Rushi

Read more from Yandamoori Veerendranath

Related to Rushi

Related ebooks

Reviews for Rushi

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Rushi - Yandamoori Veerendranath

    http://www.pustaka.co.in

    ಋಷಿ

    Rushi

    Author :

    ಯಂಡಮೂರಿ ವೀರೇಂದ್ರನಾಥ್

    Yandamoori Veerendranath

    For more books

    http://www.pustaka.co.in/home/author/yandamoori-veerendranath

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಯಂಡಮೂರಿ ವೀರೇಂದ್ರನಾಥ್
    ಋಷಿ
    ‘ಶಾರದಾತನಯ’
    ಪ್ರಕಾಶಕರು:
    ಸುಧಾ ಎಂಟರ್‍ಪ್ರೈಸಸ್
    ನಂ. 761, 8ನೇ ಮುಖ್ಯರಸ್ತೆ, ಕೋರಮಂಗಲ
    ಬೆಂಗಳೂರು-560034.
    1

    ಕಳೆದುಹೋದ ದಿನಗಳನ್ನು ನೆನೆದರೆ ನನಗೆ ತುಂಬಾ ಆಶ್ಚರ್ಯವಾಗುತ್ತದೆ. ನಾನು ಎಷ್ಟೋ ಕ್ಯಾಜುಯಲ್ ಆಗಿ ಬಾಳದಿನಗಳನ್ನೆಣಿಸಿದೆ ಎನಿಸುತ್ತದೆ-ಆಯಾ ಸಂದರ್ಭಕ್ಕೆ ಅನುಗುಣವಾಗಿ ಎದುರಿಸಬೇಕಾದ ತಲೆ ಬಾಗಿ-ವ್ಹಾ! ಕಳೆದುಹೋದ ದಿನಗಳೇ ಚೆನ್ನ. ಅದನ್ನು ನೆನೆಯುವುದರಲ್ಲೇ ಒಂದು ಸುಖವಿದೆ-ಆನಂದವಿದೆ-ಎನ್ನಿಸುತ್ತದೆ. ಪ್ರಕಾಶ್‍ನನ್ನು ಕೊಂದು ನಾನು ಯಾವ ಸುಖವನ್ನು ಅನುಭವಿಸಿದೆ?

    ಮನುಷ್ಯರು ಸರಿಯಾಗಿ ಅಂದರೆ ಮಾನಸಿಕವಾಗಿ ದಾಕ್ಷಿಣ್ಯಪಡುವ ಸ್ವಭಾವವೇ ಕಾರಣವೇನೋ- ಈ ದಾಕ್ಷಿಣ್ಯ ಪ್ರವೃತ್ತಿಗೆ ಕಾರಣವೆಂದರೆ-ಅವರನ್ನು ಬಲತ್ಕಾರವಾಗಿ ತನ್ನ ಹಿಡಿತದಲ್ಲಿಟ್ಟುಕೊಳ್ಳುವ ತಂದೆ ತಾಯಿಗಳ ಪ್ರಭಾವ ಎನ್ನಬಹುದು. ಅದಲ್ಲ ಎಂದರೆ ಒಳ್ಳೆಯದೋ-ಕೆಟ್ಟದ್ದೋ ಕೆಲವು ಅಭಿರುಚಿಗಳ ಬಗ್ಗೆ ಚಿಕ್ಕಂದಿನಿಂದ ತಾವು ಬೆಳೆಸಿಕೊಳ್ಳಬೇಕಾದ ಆಸಕ್ತಿಯನ್ನು ಬೆಳೆಸಿಕೊಳ್ಳದಿರುವುದು. ಹತ್ತೊಂಬತ್ತು ಇಪ್ಪತ್ತರ ವಯಸ್ಸಿಗೆ ಬರುವ ವೇಳೆಗೆ ಒಬ್ಬ ಯುವಕ-ತರುಣ-ತಾನು ತಂದೆ ತಾಯಿಗಳ ಕಟ್ಟುಪಾಡಿನಿಂದ ಹೊರ ಬಂದ ಅವನಿಗೆ ತಾನು ಬಯಸಿದ ಸ್ವಾತಂತ್ರ್ಯ-ಸ್ವೇಚ್ಛೆ-ದೊರೆತಂತಾಗುತ್ತದೆ. ಮಾನಸಿಕವಾಗಿ ಬೆಳವಣೆಗೆ ಹೊಂದಿರದ ಅವನಿಗೆ- ಆ ಹದಿಹರದಲ್ಲಿ ಅನೇಕ ಬಣ್ಣ-ಬಣ್ಣದ ಕನಸುಗಳ ಕಣ್ಣ ಮುಂದೆ ಸುಳಿದು ಅವು ನನಸುಗಳೆಂದೇ ಭಾಸವಾಗಿ ಸ್ವೇಚ್ಛೆಗೆ-ಇನ್ನೊಂದು ತೆರನಾದ ಅರ್ಥಗೋಚರವಾಗುವಂತೆ ಮಾಡುತ್ತದೆ. ಇದು ಪತನದ ಮೊದಲ ಹೆಜ್ಜೆ ಎನ್ನಬಹುದು. ಭ್ರಮೆಗೆ ಒಳಗಾದ ಮನಸ್ಸು ಅವನನ್ನು ಅನೇಕ ಸಂದರ್ಭಗಳಲ್ಲಿ ಎಡುವುವಂತೆ ಮಾಡುತ್ತದೆ-ಹಾಗಾದರೆ ತನಗೆ ಎದುರಾದ ಪರಿಸ್ಥಿತಿಗಳನ್ನು ಕೆಚ್ಚೆದೆಯಿಂದ ಎದುರಿಸಿ ಮೆಟ್ಟಿ ನಿಲ್ಲುವುದಾದರೆ ಮನಸ್ಸು ಅವನ ಆಜ್ಞೆಗೆ ಒಳಪಟ್ಟು ಅವನು ವೇದಾಂತಿಯಾಗಲು ಸಹಾಯಕವಾಗುತ್ತದೆ.

    ನನ್ನ ಇಪ್ಪತ್ನಾಲ್ಕನೆಯ ವಯಸ್ಸಿನಲ್ಲಿ-ನನ್ನ ಬಾಳಿಲ್ಲಿ ಇಂಥ ಪರಿಸ್ಥಿತಿ ಒದಗಿ ಬಂದರು. ಹತ್ತೊಂಬತ್ತರಲ್ಲಿ ನನ್ನ ಬಾಳು ತುಂಬ ಮುಗ್ಧತೆಯಿಂದ ಕೂಡಿತ್ತು. ನಾನು ತುಂಬ ಅಮಾಯಕನಾಗಿದ್ದೆ (ಅಮಾಯಕತ್ವ ಎಂದರೆ ವ್ಯಕ್ತಿತ್ವ ಇಲ್ಲದಿರುವುದು ಎಂದು ನನಗೆ ತಿಳಿಯದು.)

    2

    ಎರಡು ಕೈಗಳನ್ನೂ ಪ್ಯಾಂಟ್ ಜೇಬಿನಲ್ಲಿಟ್ಟುಕೊಂಡು ಹೆಜ್ಜೆ ಹಾಕುತ್ತಿದ್ದ ಪ್ರಕಾಶಂ, ಸಂಜೆಯ ಬಿಸಿಲು ಅವನ ಬಂಗಾರದ ಬಣ್ಣದ ಮೈಮೇಲೆ ಬಿದ್ದು ಅವನು ಶರೀರ ಮತ್ತಷ್ಟು ಕಾಂತಿಯುತವಾಗಿ ಕಾಣುತ್ತಿತ್ತು. ರಸ್ತೆ ವಾಹನಗಳಿಂದ ಓಡಾಡುವ ಜನರಿಂದ ತುಂಬು ಗರ್ಭಿಣಿಯಾಗಿತ್ತು. ಎದುರಿಗೆ ಬರುತ್ತಿದ್ದ ಒಬ್ಬ ಕಾಲೇಜ್ ಕನ್ಯೆ ಪುಸ್ತಕಗಳನ್ನು ತನ್ನ ಎದೆಯ ಮೇಲಿಟ್ಟುಕೊಂಡು, ಅವನನ್ನೇ ತೆರೆದಕಣ್ ಬಿಟ್ಟಬಾಯಾಗಿ ನೋಡುತ್ತಾ ತನ್ನನ್ನು ದಾಟಿ ಹೊರಟುಹೋದಳು. ಅಡವನು ಮತ್ತೆ ಅತ್ತಿತ್ತ ನೋಡದೆ ತಲೆ ಬಗ್ಗಿಸಿಕೊಂಡು, ಏನೋ ಆಲೋಚಿಸುತ್ತಾ ನಡೆಯುತ್ತಿದ್ದ.

    ಪ್ರಕಾಶಂ ಗ್ರಾಜುಯೇಟ್! ಅದಕ್ಕಿಂತ ಮಿಗಿಲಾದ ಅರ್ಹತೆ ಎಂದರೆ ಅವನ ಚೆಲುವು. ಅಲಂಕರಣದ ವಿಷಯದಲ್ಲಿ ಅವನು ಯಾವ ಶ್ರದ್ಧೆವಹಿಸದಿದ್ದರೂ- ಅವನ ನಿರ್ಲಕ್ಷ್ಯತೆ ಅವನ ವ್ಯಕ್ತಿತ್ವಕ್ಕೇ- ಒಂದು ಚೆಲುವನ್ನುಂಟು ಮಾಡಿತ್ತು. ಅವನ ನಿರ್ಮಲವಾದ ಹೊಳಪಿನ ಕಣ್ಣುಗಳು-ಇನ್ನೂ ಮೃದುತ್ವ ಮಾಸದ ಹಾಲುಗೆನ್ನೆಗಳು ನಸುಗೆಂಪಾದ ಕೆಳದುಟಿ ಅವನ ಆಕರ್ಷಕ-ಮೈಕಟ್ಟಿಗೆ ಇಂಬುಗೊಡುತ್ತಿತ್ತು.

    ಇನ್ನು ಮೂರು ದಿನಗಳಲ್ಲಿ ಫಸ್ಟ್ ಬರುತ್ತೆ. ಸಂಬಳ ಕೈಗೆ ಬರುತ್ತಲೇ ತಾನು ತೀರಿಸಬೇಕಾದ ಬಾಕಿಗಳನ್ನು ನಿಭಾಯಿಸುವುದು ಹೇಗೆಂದು ನೆನಪಿಸಿಕೊಳ್ಳುತ್ತಿದ್ದ. ಅಷ್ಟರಲ್ಲಿ ಅವನ ಆಲೋಚನಾಲಹರಿಯನ್ನು ತುಂಡರಿಸುವಂತೆ ಕಾರೊಂದು ಅವನ ಪಕ್ಕದಲ್ಲಿ ಬಂದು ತಟ್ಟನೆ ನಿಂತಿತು.

    ಪ್ರಕಾಶ್ ನಿನ್ನನ್ನೇ.... ಎಂದ ವೀಣೆ ಮಿಡಿದಂತೆ ಕೇಳಿ ಬಂದು ಒಂದು ಸ್ತ್ರೀಕಂಠ.

    ಪ್ರಕಾಶ್ ನಿಂತುಬಿಟ್ಟ. ಕಾರಿನಲ್ಲಿ ಸ್ಟೀರಿಂಗ್ ಮುಂದೆ ಇದ್ದ ಯುವತಿಯನ್ನು ನೋಡಿ, ಆಶ್ಚರ್ಯದಿಂದ ಅಸ್ಪಷ್ಟವಾಗಿ ಸುಜಾತ-ಎಂದ. ಅವಳು ತನ್ನ ಹಲ್ಲುಗಳೆಲ್ಲ-ಕಾಣುವಂತೆ ನಕ್ಕು ಕಾರಿನ ಡೋರ್ ತೆರೆದು ಕಮಿನ್-ಎಂದಳು. ಯಾವುದೋ ಲೋಕದಲ್ಲಿ ವಿಹರಿಸುತ್ತಿದ್ದಂತೆ ಇದ್ದ ಪ್ರಕಾಶ್ ಒಳಗೆ ಬಂದು ಕುಳಿತುಕೊಂಡ. ಪ್ರಕಾಶಂ ಸುಜಾತರನ್ನು ಹೊತ್ತ ಕಾರು ಚಲಿಸಿತು.

    ಪ್ರಕಾಶ್‍ಗೆ ತುಂಬ ಆಶ್ಚರ್ಯವಾಯಿತು. ಅವಳು ತನ್ನ ಕ್ಲಾಸ್‍ಮೇಟ್ ಅಷ್ಟೆ. ಆದರೆ ಕಾಲೇಜಿನಲ್ಲಿ ತಾನು ಎಂದೂ ಅವಳೊಡನೆ ಮಾತಾಡಿದವನಲ್ಲ. ಹುಡುಗಿಯರೊಡನೆ ಮಾತಾಡುವಷ್ಟು ಧೈರ್ಯ ತನಗಿಲ್ಲ. ಆದರೆ ಇಂದು ಸುಮಾರು ಮೂರು ವರ್ಷಗಳ ನಂತರ ಅವಳನ್ನು ಹಠಾತ್ತನೆ ನೋಡುತ್ತಿದ್ದಾನೆ. ಅಷ್ಟೇ ಅಲ್ಲ ತನ್ನನ್ನು ಹೀಗೆ ಕಾರಲ್ಲಿ ಕೂಡಿಸಿಕೊಂಡುದುದು ಅವನಿಗಿದೆಲ್ಲ ಒಂದು ಕನಸಂತಿತ್ತು.

    ಪ್ರಕಾಶಂ ತಲೆ ತಿರುಗಿಸಿ ಸುಜಾತಳನ್ನು ನೋಡಿದ. ರಸ್ತೆ ಮೇಲೆ ಬಹಳ ರಷ್ ಇದ್ದುದರಿಂದ-ಅವಳು ತುಂಬ ಎಚ್ಚರಿಕೆಯಿಂದ ಏಕಾಗ್ರತೆಯಿಂದ ಡ್ರೈವ್ ಮಾಡುತ್ತಿದ್ದಳು. ಕಾಲೇಜಿನಲ್ಲಿ ಓದುತ್ತಿದ್ದ ದಿನಗಳಿಂದ ಸುಜಾತ ಈಗ ತುಂಬ ಗಂಭೀರವಾಗಿದ್ದಾಳೆ. ತುಟಿಗಳಿಗೆ ಬಳಿದಿದ್ದ ಲಿಪ್‍ಸ್ಟಿಕ್ ತೆಳುವಾಗಿತ್ತಾಗಿ ಅವಳ ತುಟಿಗಳು ಎಳೆ ಗುಲಾಬಿ ವರ್ಣದಿಂದ ಬೆಳಗುತ್ತಿದ್ದವು. ಅವಳ ಸಹಜ ಸೌಂದರ್ಯಕ್ಕೆ ಪೂರಕವಾಗಿ ಅವಳು ಮಾಡಿಕೊಂಡಿದ್ದ ಮೇಕಪ್ ಸುಜಾತಳನ್ನು ಮತ್ತಷ್ಟು ಸುಂದರಿಯನ್ನಾಗಿ ಕಾಣುವಂತೆ ಮಾಡಿತ್ತು.

    ಕಾಲೇಜಿನಲ್ಲಿ ಓದುತ್ತಿದ್ದಾಗ-ಸುಜಾತ ಬಹಳಷ್ಟು ವಿದ್ಯಾರ್ಥಿಗಳ ಹೃದಯವನ್ನು ಸ್ಪಂದಿಸಿದ್ದಳು. ಅಂತ ವಿದ್ಯಾರ್ಥಿಗಳಲ್ಲಿ ಪ್ರಕಾಶಂ ಕೂಡ ಒಬ್ಬನಾಗಿದ್ದು ಅವಳ ನೆನಪಿನಲ್ಲಿ ನಿದ್ರೆಯಿಲ್ಲದೆ ಅನೇಕ ರಾತ್ರಿಗಳನ್ನು ಕಳೆದಿದ್ದ. ಆದರೆ ಅವನಿಂದೂ ಅವಳೊಡನೆ ಮಾತಾಡುವ ಸಾಹಸವನ್ನು ಮಾಡಿದವನಲ್ಲ.

    ಒಂದು ವಿಚಿತ್ರ ಸಂಗತಿ ಎಂದರೆ ಅವಳೊಡನೆ ಮಾತಾಡುವ ಸ್ಟೂಡೆಂಟ್ಸನ್ನು ನೋಡಿ ಅಸೂಯೆಪಟ್ಟವನೂ ಅಲ್ಲ. ಅವರಿಗಿಂತ ತಾನು ತುಂಬ ಉನ್ನತ ವ್ಯಕ್ತಿ ಎಂದು ಎತ್ತರವಾದ ಶಿಖರದ ಮೇಲೆ ಇರುವೆನೆಂದೂ ಭಾವಿಸಿಬಹುದೇನೋ! ಒಂದು ವಿಷಯ ಮಾತ್ರ ನಿಜ. ಅದೇನೆಂದರೆ ಒಬ್ಬ ಮನುಷ್ಯ ಕೆಡದಿರಲು ಅವನ ಉನ್ನತವಾದ ವ್ಯಕ್ತಿತ್ವವೇ ಕಾರಣ ಎಂದು ಹೇಳಲು ಬರುವುದಿಲ್ಲ. ಹೇಡಿತನ ಕೂಡ ಮನುಷ್ಯನನ್ನು ಅಧಃ ಪತನದಿಂದ ಕಾಪಾಡುತ್ತದೆ. ಆದರೆ ಪ್ರಕಾಶಂ ಈ ಮೂರು ವರ್ಷಗಳಲ್ಲಿ ಸುಜಾತಳೊಡನೆ ಮಾತಾಡದೆ ಇದ್ದುದ್ದಕ್ಕೆ ಕಾರನ ಅವನ ಬಲವಾದ ವ್ತಕ್ತಿತ್ವ ಎನ್ನುವುದು ತುಂಬ ಸಂದಿಗ್ಧವಾದ ಅಂಶ. ಇದು ಅಂಥ ಪ್ರಮುಖವಾದ ಅಂಶವೂ ಅಲ್ಲ. ಪ್ರಕಾಶಂ ಈ ಕಥೆಯ ನಾಯಕನಲ್ಲ. ಆದರೆ ಈ ಕಥೆ ಪ್ರಕಾಶನಿಗೆ ಸಂಬಂಧಿಸಿದುದು ಅಷ್ಟೆ!

    ಏನೋ ಆಲೋಚಿಸುತ್ತಿದ್ದೀಯಲ್ಲ?

    ಪ್ರಕಾಶಂ ಬೆಚ್ಚಿದ. ಅವಳು ತನ್ನನ್ನು ಏಕವಚನದಲ್ಲಿ ಸಂಬೋಧಿಸಿದುದನ್ನು ಗಮನಿಸಲಿಲ್ಲ.

    ಬಹಳ ದಿನಗಳಾದ ಮೇಲೆ ಭೇಟಿ ಆಗ್ತಿದೀವಿ ಅಲ್ವಾ?

    ಹೌದು

    ನಾಲ್ಕು ವರ್ಷಗಳಾದವು.

    ಹೌದು. ತಾನೀಗ ಚಳಿ ಬಿಟ್ಟು ಅವಳೊಡನೆ ಮುಕ್ತವಾಗಿ ಮಾತಾಡುತ್ತಿದ್ದಾನೆ. ಎಂಬ ಭಾವನೆಯುಂಟಾಯಿತು-ಅವನಿಗೆ.

    ಇಲ್ಲೇ ಕೆಲಸ ಮಾಡ್ತಿದೀಯಾ

    ತಾನು ಯಾವ ಆಫೀಸಿನಲ್ಲಿ ಕೆಲಸ ಮಾಡುತ್ತಿರುವೆನೆಂಬುದನ್ನು ತಿಳಿಸಿದ.

    ಅವಳು ಚಕಿತಳಾಗಿ-

    ಏನು? ನಾಲ್ಕು ವರ್ಷಗಳಿಂದ ಇದೇ ಊರಲ್ಲಿದೀಯಾ?

    ಇಲ್ಲ ಮೊನ್ನೆ-ಮೊನ್ನೆಯವರಗೆ-ಬೇರೆ ಬೇರೆ ಕಡೆ ಕೆಲಸ ಮಾಡಿದೆ. ಈಗ ನಾನು ಕೆಲಸ ಮಾಡ್ತಿರೋ ಆಫೀಸಿಗೆ ಬಂದು ಒಂದು ತಿಂಗಳಾಯಿತು. ಒಂದು ತಿಂಗಳಿಂದ ಇದೇ ಊರಲ್ಲಿದೀನಿ

    ಸುಜಾತ ನಕ್ಕು – ಸಂಸಾರ?- ಎಂದು ಕೇಳಿದಳು.

    ಪ್ರಕಾಶಂ ಸ್ವಲ್ಪ ನಾಚಿಕೆಯಿಂದ-ಇನ್ನೂ ಮದುವೆ ಆಗಿಲ್ಲ ಎಂದ.

    ರೂಮ್‍ನಲ್ಲಿದೀಯಾ?

    ಇಲ್ಲ

    ಮತ್ತೆ... ಎಂದು ಅರ್ಥವಾಗದವಳಂತೆ ಕೇಳಿದಳು.

    ಮಾವನ ಮನೇಲಿದೀನಿ-ಎಂದು ಮತ್ತೆ ಅವಳೇನೂ ಪ್ರಶ್ನಿಸದಂತೆ ತಾನು ಮುಂದುವರಿಸಿ ಹೇಳಿದ-ಚಿಕ್ಕಂದಿನಲ್ಲಿ ಅಪ್ಪ ಅಮ್ಮ ಇಬ್ಬರೂ ಹೋಗ್ಬಿಟ್ರು. ಮಾವಾನೇ ನನ್ನನ್ನು ಸಾಕಿ-ಸಲಹಿ ಬೆಳೆಸಿದ್ದು. ಅವರಿಗೂ ಮೊನ್ನೆ-ಮೊನ್ನೆ ರಿಟೈರಾಯ್ತು. ನಮ್ಮ ಮಾವನ ಹೆಂಡತಿ ಅದೇ ನಮ್ಮ ಅತ್ತೆ ಹೋಗಿ ಬಹಳ ವರ್ಷಗಳಾಯಿತು....

    ನಿಮ್ಮ ಮಾವನವರಿಗೆ ಒಬ್ಬ ಮಗಳಿರಬೇಕು ಅಲ್ವಾ?-ಎಂದು ಕೇಳಿದಳು. ಎಲ್ಲ ಅರ್ಥವಾದಂತೆ ನಕ್ಕು-

    ಪ್ರಕಾಶ್ ಬೆಚ್ಚಿದವನಾಗಿ-ಹೌದು-ಎಂದ.

    ಹೆಸರು?... ನಗುತ್ತಾ ಕೇಳಿದಳು.

    ಸೀತಾಮಹಾಲಕ್ಷ್ಮಿ-ಎಂದ.

    3

    ಬಾಗಿಲ ಬಳಿ ನಿಂತ ಸೀತೆ ರಸ್ತೆಯ ಮೇಲೆ ಹೋಗಿ ಬರುವ ಜನಗಳನ್ನೇ ನೋಡುತ್ತಿದ್ದಳು. ಮನೆ ಕೆಲಸವೆಲ್ಲ ಮುಗಿಸಿ ಮುಖ ತೊಳೆದುಕೊಂಡು ಪೌಡರ್ ಹಾಕಿಕೊಂಡು ನೀಟಾಗಿದ್ದಳು ಸೀತೆ. ಪ್ರಕಾಶ್ ತನ್ನನ್ನು ನೋಡಿ ಮೆಚ್ಚಲಿ ಎಂದಲ್ಲ. ರಿಲ್ಯಾಕ್ಸೇಷನ್‍ಗಾಗಿ ಬಂದು ಹೋಗುವ ಜನರನ್ನು ವಾಹನಗಳನ್ನು ನೋಡುತ್ತಾ ನಿಲ್ಲುವುದೇ ಅವಳ ಪಾಲಿಗೆ ಒಂದು ರಿಲ್ಯಾಕ್ಸೇಷನ್!

    ಅವಳು ಉಟ್ಟಿದ್ದ ಬಿಳೀ ಸೀರೆ ಮೇಲೆ ಧರಿಸಿದ್ದ ಕೆಂಪು ಬಣ್ಣದ ಜಾಕೆಟ್ ಸ್ವಲ್ಪವೂ ಮ್ಯಾಚ್ ಆಗಿರಲಿಲ್ಲ. ಅವಳು ಸ್ವಲ್ಪ ದಪ್ಪವಾಗಿದ್ದುದರಿಂದ ಅವಳಿಗೆ ಎರಡು ಜಡೆಗಳು ಶೋಭಿಸುತ್ತಿರಲಿಲ್ಲ. ಇಂಥ ಸಣ್ಣ ಸಣ್ಣ ವಿಷಯಗಳಿಗೆ ಅವಳು ಅಷ್ಟಾಗಿ ಗಮನವನ್ನು ಕೊಡುತ್ತಲೂ ಇರಲಿಲ್ಲ.

    ಅವಳು ಎಂದೋ ಒಂದು ದಿನ ವರ್ಷಕ್ಕೆ ಒಂದೆರಡುಸಲ ಸಡಿಲವಾಗಿ ಒಂದು ಜಡೆ ಹಾಕಿಕೊಳ್ಳುತ್ತಿದುಂಟು. ಹಾಗೆ ತಾನು ಎರಡು ಜಡೆ ಹಾಕಿಕೊಂಡು ಪ್ರಕಾಶನ ಮುಂದೆ ಓಡಾಡಿದಾಗ ಅವನ ಕಣ್ಣುಗಳಿಗೆ ತನ್ನ ಎರಡು ಜಡೆಗಳ ಅಲಂಕಾರ ಮೆಚ್ಚಿಗೆಯಾಯ್ತು. ಎಂಬ ಅವನ ಮನಸ್ಸಿನ ಭಾವನೆಯನ್ನು ಗುರ್ತಿಸಬಲ್ಲ ಶಕ್ತಿಯೂ ಅವಳಿಗಿರಲಿಲ್ಲ. ಒಂದು ವೇಳೆ ಅದು ಅವನಿಗೆ ತುಂಬ ಇಷ್ಟವೆಂದು ತಿಳಿದಿದ್ದರೂ ಅವಳು ಹಾಕಿಕೊಳ್ಳುವವಳಲ್ಲ. ಕಾರಣ ತುಂಬಾ ಸಿಂಪಲ್. ಎರಡು ಜಡೆಗಳನ್ನು ಹಾಕಿಕೊಳ್ಳುವುದು ತನಗೆ ಇಷ್ಟವಾದದ್ದು. ಇನ್ನೊಬ್ಬರಿಗಾಗಿ ತಾನು ಅದನ್ನು ಹಾಕಿಕೊಳ್ಳಲಿಲ್ಲವೆಂದರೆ. ಅದು ತನ್ನ ವ್ಯಕ್ತಿತ್ವಕ್ಕೆ ಭಂಗ ತರುತ್ತದೆ. ಅಲ್ಲಿ ತಾನು ಸೋಲೊಪ್ಪಿಕೊಂಡಂತಾಗುತ್ತದೆ. ಇನ್ನೊಬ್ಬರ ಆಸೆ ಆಕಾಂಕ್ಷೆಗಳನ್ನು ತಲ್ಲಣಿಸುವುದಕ್ಕೆ ತಾನೇಕೆ ತನ್ನ ವ್ಯಕ್ತಿಗತ ಅಪೇಕ್ಷೆಗಳನ್ನು ತ್ಯಾಗ ಮಾಡಬೇಕು-ಎಂದು ಆಲೋಚಿಸುವ ಧೋರಣೆ ಸೀತೆಯದು. ಅವಳು ಎಷ್ಟಾದರೂ ತೆಲುಗು ಸೀಮೆಯ ಹೆಣ್ಣು ಮಗಳಲ್ಲವೇ!

    ಅಷ್ಟರಲ್ಲಿ ರಸ್ತೆ ಮೇಲೆ ಷೋಕ್ ಮಾಡಿಕೊಂಡು ಬರುತ್ತಿದ್ದ ನಾರ್ಯೋ ಪ್ಯಾಂಟಿನ ಯುವಕನೊಬ್ಬ ತನ್ನನ್ನು ದುರುಗುಟ್ಟಿಕೊಂಡು ನೋಡುತ್ತಿದ್ದುದನ್ನು ಗಮನಿಸಿದಳು - ಸೀತೆ. ಬಾಗಿಲ ಪಕ್ಕಕ್ಕೆ ಸರಿದಳು. ಅವನು ತನ್ನನ್ನೇ ನೋಡುತ್ತಿರುವವನೇ ಎಂದು ಬಾಗಿಲ ಸಂದಿಯಿಂದ ಇಣಿಕಿ ನೋಡಿದಳು. ಅವನು ತನ್ನನ್ನೇ ನೋಡುತ್ತಿರುವನೇ ಇಲ್ಲವೇ ಎಂಬುದನ್ನು ಮನಗಂಡು ಒಳಗೆ ಹೋಗಬೇಕೆಂಬ ಅವಳ ಭಾವನೆಯನ್ನು ಅಪರಿಪಕ್ವವಾದ ಆಲೋಚನೆಗಳ ಇನ್‍ಸ್ವಿಂಕ್ಟ್ ಡಾಮಿನೇಟ್ ಮಾಡಿತು. ಅವನು ಮತ್ತೆ ತನ್ನನ್ನೇ ನೋಡುತ್ತಿರಬಹುದೇ- ಇಲ್ಲವೆ – ಎಂಬುದನ್ನು ಗಮನಿಸಬೇಕೆಂದು ಅವಳಿಗನ್ನಿಸಿದುದು ಅವಳ ತಪ್ಪಲ್ಲ. ಅವಳ ತಾರುಣ್ಯ ಪೂರ್ವದ ವಯೋಧರ್ಮದ ತಪ್ಪು ಅಷ್ಟೇ!

    ಅವನು ಹೊರಟುಹೋದನೆಂದು ಖಚಿತವಾದ ಮೇಲೆ ಹೊರಗೆ ಯಥಾ ಪ್ರಕಾರ ಬಾಗಿಲ ಬಳಿ ನಿಂತಳು. ಎದುರಿನಲ್ಲಿ ಒಂದು ಸುಂದರವಾದ ದೃಶ್ಯ ಅವಳ ಕಣ್ ಸೆಳೆಯಿತು. ಸ್ಕೂಟರ್ ಮೇಲೆ ಒಂದು ಜೋಡಿ ಬರುತ್ತಿತ್ತು. ಸ್ಕೂಟರಿನ ಹಿಂದೆ ಕೂತಿದ್ದ ತರುಣಿ ಅವನ ಸೊಂಟ ಬಳಸಿ ಅವನ ಕಿವಿಯಲ್ಲಿ ಏನೋ ಉಸುರುತ್ತಿದ್ದಳು.

    ಅವಳ ಮಾತಿಗೆ ಅವನು ನಗುತ್ತಿದ್ದುದು ಸ್ಪಷ್ಟವಾಗಿ ಕಾಣಿಸುತ್ತಿತ್ತು. ಸ್ಕೂಟರ್ ಆ ಬೀದಿಯ ತಿರುವಿನಲ್ಲಿ ಮರೆಯಾಗುವವರೆಗೆ ನೋಡುತ್ತಾ ನಿಂತು ಬಿಟ್ಟಳು ಸೀತೆ.

    ಸ್ಕೂಟರ್ ಹಿಂದಿನ ಸೀಟಿನಲ್ಲಿ ತಾನು – ತನ್ನ ಮುಂದೆ ಒಬ್ಬ ರಾಜಕುಮಾರ್. ಆದರ ಆ ರಾಜಕುಮಾರ ಪ್ರಕಾಶ್ ಆಗಿರಲಿಲ್ಲ. ಹೀಗೊಂದು ಸುಂದರವಾದ ಊಹಾಚಿತ್ರ-

    ಅವಳ ಮನದ ಅಂಗಳದಲ್ಲಿ ಸುಳಿಯಿತು.

    ಅಷ್ಟರಲ್ಲಿ-

    ಇನ್ನೂ ನಿಮ್ಮ ಭಾವ ಬರಲಿಲ್ವಾ ಸೀತಾ?-ಎಂದ ಪಕ್ಕದ ಮನೆ ಮೇಷ್ಟ್ರ ಮಗಳು ಸುಬ್ಬಲಕ್ಷ್ಮಮ್ಮನ ಮಾತುಗಳು ಅವಳನ್ನು ಇಹಲೋಕಕ್ಕೆ ಕರೆತಂದಿತು.

    ಇಲ್ಲ-ಬರಲಿಲ್ಲ ಸುಬ್ಬಿ-ಎಂದಳು.

    ಬಾ ಚೆನ್ನಮಣಿ ಆಡೋಣ-ಎಂದಳು ಸುಬ್ಬಿ ಅರ್ಥಾತ್ ಸುಬ್ಬಲಕ್ಷ್ಮಿ.

    ನಡಿ ಎಂದಳು.

    ಸರೀ ಸೀತಾ! ಪಾಪ! ನೀನು ನಿಮ್ಮ ಭಾವ ಬರ್ತಾನೇಂತ ಕಾಯ್ತಿದೀಯೋ ಏನೋ-ಎಂದಳು ಸುಬ್ಬಲಕ್ಷ್ಮಿ.

    ಛೇ! ನನಗೆ ಅಂಥದ್ದೆಲ್ಲಾ ಸರಿಹೋಗೋಲ್ಲ ಸುಬ್ಬಿ-

    ನಿಮ್ಮ ತಂದೆ ಮನೇಲಿದಾರಾ?

    ಒಳಗೆ ಹಿತ್ತಲಲ್ಲಿ ಇದ್ದಾರೆ ಎಂದಳು ಸೀತೆ-ಹುಣಿಸೇಬೀಜ ಎಣಿಸಿ ಗುಣಿಗಳಲ್ಲಿ ಹಾಕುತ್ತಾ.

    ನಮಗೆ ಸಿನಿಮಾಗೆ ಹೋತ್ತಾಗಿಬಿಡುತ್ತೇನೋ

    ಪರವಾಗಿಲ್ಲ ಆರೂವರೆಗೆ ತಾನೆ-

    ಮನೆಗೆ ಹೋಗಿ ನೋಡಿದೆ. ನನ್ನ ಹತ್ತಿರ ಒಂದು ರೂಪಾಯಿ ಎಪ್ಪತ್ತೈದು ಪೈಸೆ ಮಾತ್ರ ಇದೆ ಕಣೆ- ಎಂದಳು ಸುಬ್ಬಲಕ್ಷ್ಮಿ.

    ಪರವಾಗಿಲ್ಲ ಬಿಡೆ. ನನ್ನ ಹತ್ತಿರ ಐದು ರೂಪಾಯಿದೆ. ಅಡ್ಜಸ್ಟ್ ಮಾಡಿಕೊಳ್ಳೋಣ-ಎಂದಳು ಸೀತೆ.

    "ನೀನು ತುಂಬ ಅದೃಷ್ಟವಂತಳು ಸೀತಾ. ಹೇಗೋ ಏನೋ ಖರ್ಚು-ವೆಚ್ಚ ಎಲ್ಲಾ

    Enjoying the preview?
    Page 1 of 1