Discover millions of ebooks, audiobooks, and so much more with a free trial

Only $11.99/month after trial. Cancel anytime.

Duddu Duddu
Duddu Duddu
Duddu Duddu
Ebook682 pages7 hours

Duddu Duddu

Rating: 4.5 out of 5 stars

4.5/5

()

Read preview

About this ebook

Yandamoori Veerendranath, is a famous Telugu novelist. He had written many social, fiction, super natural thriller stories and novels. Hailing from Andhra Pradesh state in India, he influenced younger generations with his socially relevant writings. In his writings he addresses many of the important social problems in India like poverty, prejudices, and superstitions, and encourages people to be socially responsible. He successfully bridges the idealistic and the popular styles of literature.
LanguageKannada
Release dateAug 12, 2019
ISBN6580201100160
Duddu Duddu

Read more from Yandamoori Veerendranath

Related to Duddu Duddu

Related ebooks

Reviews for Duddu Duddu

Rating: 4.5 out of 5 stars
4.5/5

2 ratings0 reviews

What did you think?

Tap to rate

Review must be at least 10 words

    Book preview

    Duddu Duddu - Yandamoori Veerendranath

    http://www.pustaka.co.in

    ದುಡ್ಡು ದುಡ್ಡು

    Dhuddu Dhuddu

    Author :

    ಯಂಡಮೂರಿ ವೀರೇಂದ್ರನಾಥ್

    Yandamoori Veerendranath

    For more books

    http://www.pustaka.co.in/home/author/yandamoori-veerendranath

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ದುಡ್ಡು ದುಡ್ಡು

    ಸ್ವಾಮಿ! ನಮ್ಮನ್ನು ಹಿಡಿದು ಝೂಡಿಸಿದರೆ ನಮ್ಮ ಹತ್ತಿರ ಸಿಗೋದು ನಾಲ್ಕೇ ವರಹ. ಆ ರಾಮಪುರದಲ್ಲಿ ಒಂದೂಟಕ್ಕೆ ಒಂದು ವರಹ. ಆ ಲಡಝ್ಝದಲ್ಲಿ ನಮಗೆ ಎರಡು ಹೊತ್ತಿಗೆ ಕೊಳಿಗೆ ಮಾತ್ರ ಆಧಾರವಿರೋದು. ಆಮೇಲೆ ಉಪವಾಸವೇ ಗತಿ.

    ಎಂದು ಹೇಳಿ ಪೆಚ್ಚು ಮುಖ ಮಾಡಿಕೊಂಡ ಶಿಷ್ಯ.

    ಗುರು ಶಿಷ್ಟರಿಬ್ಬರು ದಾಟಿ ರಾಮಾಪುರದ ಊರಿನ ಗಡಿಯನ್ನು ಪ್ರವೇಶಿಸುತ್ತಿದ್ದರು.

    ಬುದ್ದೀ ಅನ್ನೋ ದುಡ್ಡು ಸಂಪಾದಿಸೋ ಯಂತ್ರನಮ್ಮ ಹತ್ತಿರ ಇರೋವರ್ಗ ಹೆದರೋ ಅಗತ್ಯವಿಲ್ಲ ಕಣೋ ಶುಷ್ಯಾ!

    ಲಕ್ಷ್ಮೀಪುರದಲ್ಲೂ ಹಾಗೇ ಹೇಳಿದ್ರಿ ಸ್ವಾಮೀ! ಆದರೆ ಅಲ್ಲಿನ ಜನ ನಮ್ಮ ಹೆಣ ಬೀಳೋ ಹಾಗೆ ಬಡಿಯೋಕೆ ಬಂದ್ರು-ಸಾವು ತಪ್ಪಿತು. ಕಣ್ಣು ಹೋಯ್ತು ಅಂಸ ಹಾಗಾಯ್ತು.

    ಅಲ್ಲಿನ ಜನರು ಮೂರ್ಖರೋಪ್ಪ! ರಾಜಭಟರು ಬರೋವರ್ಗೂ ತಡೀಲಾರ್ದೆ ಕಾನೂನನ್ನು ತಮ್ಮ ಕೈಗೆತ್ತಿಕೊಂಡರು. ನಮ್ಮ ಮೇಲೆ ಗುಂಪು ಧಾಳಿ ಮಾಡಿದರು."

    ಆದರೆ ನಾವು ಮಾಡಿದ್ದೂ ಅನ್ಯಾಯ ಸ್ವಾಮಿ!

    ಅನ್ಯಾಯ ಬೇರೆ, ಕಾನೂನು ಬೇರೆಶಿಷ್ಯಾ! ನ್ಯಾಯಾಲಯದವರೆಗೂ ಹೋಗಿದ್ದಿದ್ದರೆ ನಾವು ಮಾಡಿದ ಅನ್ಯಾಯವೆಂದು ನಿರೂಪಿಸುತ್ತಿದ್ದೆ. ಅಷ್ಟರಲ್ಲಿ ಜನರು ನಮ್ಮ ಕೈಕಾಲು ಮುರಿತೀವಿ ಅಂದಿದ್ದು ಅವರ ದುಡುಕನ್ನು ತೋರಿಸುತ್ತದೆ.

    ಅವರು ಮಾತನಾಡುತ್ತಿರುವಂತೆಯೃ ರಾಮಪುರ ಸಿಕ್ಕಿತು. ಈ ಊರಿಗೆಲ್ಲಾ ಇಬ್ಬರೇ ವ್ಯಾಪಾರಿಗಳು...ಲಿಂಗಶೆಟ್ಟಿ.....ಸುಬ್ಬಯ್ಯ. ಅಮಾಯಕ ಜನರಿಗೆ ಸಾಲ ಕೊಡುವದಾತರು.

    ಗುರುಶಿಷ್ಯರಿಬ್ಬರೂ ಮೊದಲು ಲಿಂಗಶೆಟ್ಟಿಯ ಹತ್ತಿರ ಹೋದರು.

    ಶೆಟ್ರೇ! ನಾವು ಈ ಊರಿಗೆ ಹೊಸದಾಗಿ ಬಂದಿದ್ದೇವೆ. ಪುರ ಪ್ರಮುಖರಾದ ನಿಮ್ಮ ಪರಿಚಯವಾಗುತ್ತಿರುವುದು ನಮ್ಮ ಅದೃಷ್ಟ. ಈ ಪರಿವಯಾನ ಮತ್ತಷ್ಟು ವೃದ್ಧಿಪಡಿಸಿಕೊಳ್ಳೋಣ ಅಂತ ಈವತ್ತು ನಿಮ್ಮನ್ನು ನಮ್ಮ ಜೊತೆಗೆ ಈಗ ಊಟಕ್ಕೆ ಕರೀತಿದ್ದೇವೆ-ಎಂದ ಗುರು. ಗುರುವಿನ ಮಾತು ಕೇಳಿ ಶಿಷ್ಯ ಅವಾಕ್ಕಾದ. ‘ಹನುಮಂತನೇ ಹಗ್ಗ ತಿನ್ನುವಾಗ ಪೂಜಾರಿಗೆ ಶಾವಿಗೆ ಬೇಕಂತೆ’ – ಎಂಬ ಗಾದೆ ನೆನಪಿಗೆ ಬಂತು.

    ಲಿಂಗಶೆಟ್ಟಿ ತಡವರಿಸುತ್ತಿರುವುದನ್ನು ಕಂಡು,

    ಬೋಜನ ಕೂಟಕ್ಕೆ ಸುಬ್ಬಯ್ಯನೋರು ಬರ್ತಾರೆ-ಎಂದ ಗುರು. ಲಿಂಗಶೆಟ್ಟಿ ನಗುನಗುತ್ತಾ ಒಪ್ಪಿಕೊಂಡ.

    ಊರಿಗೆ ಬಂದವರು ಸುಬ್ಬಯ್ಯನ ಪಾರ್ಟಿಗೆ ಸೇರುವುದು ಲಿಂಗಶೆಟ್ಟಿಗೆ ಇಷ್ಟವಿಲ್ಲ. ಆ ಬಂದಿರುವವರು ಎಂಥವರೆಂದು ತಿಳಿಯದೇ ಏಕೆ ಅನುಮಾನಿಸಬೇಕು ಎಂದು ತರ್ಕಿಸಿ, ‘ಆಗಲಿ’- ಎಂದ.

    ಪಂಚತಾರಾ ಹೋಟಲಿನಲ್ಲಿ ಬೋಜನಕೂಟ ಪೂರ್ತಿಯಾಯ್ತು. ಮನಸ್ಸಿನಲ್ಲೇ ಅತ್ತುಕೊಂಡು ಜೇಬಿನಲ್ಲಿದ್ದ ನಾಲ್ಕು ವರಹಗಳನ್ನು ಹೋಟೆಲಿನವನಿಗೆ ತೆತ್ತ ಶಿಷ್ಯ.

    ************

    ಅಂದು ಸಂಜೆ ಗುರುಶಿಷ್ಯರಿಬ್ಬರೂ ಪುನಃ ಲಿಂಗಶೆಟ್ಟಿ ಮುಂದೆ ಪ್ರತ್ಯಕ್ಷರಾದರು. ಲೋಕಾಭಿರಾಮದ ನಂತರ,

    ಒಂದು ನಾಲ್ಕು ವರಹ ಸಾಲ ಕೊಟ್ಟಿರು-ಎಂದು ಗುರು. ಲಿಂಗಶೆಟ್ಟಿ ಹಿಂದು ಮುಂದುನೋಡಿದ, ಅದನ್ನು ಗಮನಿಸಿದ ಗುರು, ಹೋಗ್ಲಿಬಿಡು ಸಾವಾಕಾರ್ರೇ-ನಾವು ಆ ಸುಬ್ಬಯ್ಯನ ಹತ್ತಿರಾನೇ ತೋಗೋತೀವಿ. ಅವನಾದ್ರೆ ಏನು ದಾಖಲೇನೂ ಕೇಳೋಲ್ಲ. ಹಾಗಂತ ನಿನ್ನ ಸಹವಾಸ ಹಾಳು ಮಾಡಕೋಳ್ಳೋದೂ ಇಷ್ಟವಿಲ್ಲ. ಈವತ್ತು ಸಂಜೇನೂ ನೀನು ಖಂಡಿತಾ ಬೋಜನ ಕೂಟಕ್ಕೆ ಬರಲೇಬೇಕು...ತಪ್ಪಿಸಬೇಡ-ಎಂದ ಗುರು.

    ಲಿಂಗಶೆಟ್ಟಿ ವ್ಯಾಪಾರಸ್ಥ......ಹಾಗೇ ಯೋಚಿಸಿದ. ಇವರು ಕೇಳ್ತಿರೋದು ಹೆಚ್ಚಿಗೆ ಏನಲ್ಲ...ನಾಲ್ಕು ವರಹಗಳೇ ಮಾತ್ರ. ಆ ನಾಲ್ಕೂ ವರಹಗಳನ್ನೂ ಬೆಳೆಗ್ಗೆ ನಮ್ಮೆದುರಿಗೇ ಖರ್ಚು ಮಾಡಿದ್ದು . ಪುನಃ ಬೋಜನ ಕೂಟಕ್ಕೆ ಕರೀತಿದಾರೆ...ಇದರಲ್ಲಿ ಏನಾದ್ರೂ ಮೋಸ ಇದೆಯೋ ಏನೋ-ನಂಗೇ ಮೋಸ ಮಾಡಿದ್ರೆ ಸುಮ್ನೆ ಬಿಟ್ಟುಬಿಡ್ತೇನ್ಯೇ? ಆಗ ಒಂದಕೈ ನೋಡ್ಕೋಳ್ಳೋಣ. ಎಂಟು ಬರಹ ಖರ್ಚು ಮಾಡಿರೋನಿಗೆ ನಾಲ್ಕು ವರಹ ಕೊಟ್ರೆ ಏನೂ ನಷ್ಟಾನೂ ಆಗೋಲ್ಲ.

    ************

    ಅಂದು ಸಂಜೆ ಪುನಃ ಪಂಚತಾರಾ ಹೋಟೆಲಿನಲ್ಲಿ ಬ್ರಹ್ಮಾಂಡ ಭೋಜನಕೂಡವಾಯಿತು.

    ಮರುದಿನ ಬೆಳಿಗ್ಗೆ ಗುರುಶಿಷ್ಯರಿಬ್ಬರೂ ಸುಬ್ಬಯ್ಯನ ಹತ್ತಿರ ಹೋದರು. ಎಂಟು ವರಹ ಸಾಲ ಕೇಳಿ ಪುನಃ ‘ಪಾರ್ಟಿ’ಗೆ ಆಹ್ವಾನಿಸಿದರು. ಮೂರು ಹೊತ್ತು ಪಾರ್ಟಿ ಕೊಡುವವರಿಗೆ ಸಾಲ ಕೊಡಲು ಸುಬ್ಬಯ್ಯ ಹಿಂದರಿಯಲಿಲ್ಲ.

    ಪುನಃ ನಾಲ್ಕು ಜನರೂ ಸೇರಿ ಪಂಚತಾರಾ ಹೋಟೆಲಿನಲ್ಲಿ ಭರ್ಜರಿ ‘ಪಾರ್ಟಿ’ ಮಾಡಿದರು. ಶಿಷ್ಯನೇ ಹಣ ಕೊಟ್ಟ. ಪಾರ್ಟಿ ಮಾಡಿದ ಒಂದು ಗಂಟೆಗೆ ಗುರು ಶಿಷ್ಯರಿಬ್ಬರು ರಾಮಾಪುರದಿಂದ ತಿಮ್ಮಾಪುರಕ್ಕೆ ಹೋಗುವ ರಸ್ತೆಯಲ್ಲಿ ಹೋಗುತ್ತಿದ್ದರು.

    ಪಾರ್ಟಿ ಊಟ ಹ್ಯಾಗಿತ್ತು ಶಿಷ್ಯ?

    ಬೊಂಬಾಟಾಗಿತ್ತು ಸ್ವಾಮಿ......

    "ಹೂಂ! ಮೂರು ಹೊತ್ತು ಮೂಗಿನವರೆಗೂ ಊಟ ಸಿಕ್ತೋ ಇಲ್ವೋ?’

    ಸಿಕ್ತೂ ಸ್ವಾಮಿ

    ನಿನ್ನ ನಾಲ್ಕು ವರಹ ನಿನ್ನ ಹತ್ರಾನೇ ಇದೆಯೇ ಇಲ್ವೋ?

    ಇದೆ ಸ್ವಾ... ಎಂದು ಏನೋ ಹೇಳಲಿದ್ದವನು ನಿಲ್ಲಿಸಿ ಏನೋ ಅರ್ಥವಾದವನಂತೆ ಸುಮ್ಮನಾದ. ಗುರುಗಳು ನಕ್ಕರು. ಆ ಒಂದು ನಗೆಯಲ್ಲಿ ಶಿಷ್ಯನಿಗೆ ಇಡೀ ಲೋಕಸಾರವನ್ನೇ ಬೋಧಿಸಿದ್ದರು.

    "ಅವರ ಹಣವನ್ನು ಅವರಿಗೆ ವಾಪಸ್ಸು ಕೊಡಬೇಕು ಅನ್ನುತ್ತದೆ ನ್ಯಾಯ ಪತ್ರ. ದಾಖಲೆ ಸಾಕ್ಷಿ ಏನೂ ಇಲ್ಲವಾದ್ದರಿಂದ ವಾಪಸ್ಸು, ಮಾಡುವ ಅಗತ್ಯವಿಲ್ಲವೆನ್ನುತ್ತದೆ ಕಾನೂನು. ಹೀಗೆ ನ್ಯಯ-ಕಾನೂನುಗಳ ನಡುವಣ ಲೋಪದೋಷಗಳ ಸಂದಿಯಲ್ಲಿ ಬುದ್ದಿವಂತನಾದವನು ಕಣ್ಣ ಮುಚ್ಚಾಲೆಯಾಡುತ್ತಾ ಕಾಸು ಮಾಡಿಕೊಳ್ಳುತ್ತಾನೆ.’

    ಆದರೆ ಲಕ್ಷ್ಮಿಪುರದ ಜನರು ನಮ್ಮನ್ನು… ಎನ್ನುತ್ತಿದ್ದ ಶಿಷ್ಯನ ಮಾತನ್ನು ಮಧ್ಯೆ ತಡೆದರು ಗುರುಗಳು.

    ಬುದ್ಧಿ ವಂತನಾದವನು ತನ್ನ ಭದ್ರತೆಗೋಸ್ಕರ ಸೃಷ್ಟಿಸಿಕೊಂಡಿರುವ ಈ ವ್ಯವಸ್ಥೆಯಲ್ಲಿ ತಾವು ಯಾವ ಬಗೆಯಲ್ಲಿ ಮೋಸ ಹೋಗುತ್ತಿದ್ದೇವೆಂದು ತಿಳಿದೂ ಜನರೂ ಒಮ್ಮೆಲೇ ಪ್ರವಾಹದಂತೆ ಉಕ್ಕಿ ಎದಿರಾಗುತ್ತಾರೆ. ಅದನ್ನೇ ‘ದಂಗೆ’ ಎನ್ನುತ್ತಾರೆ. ಆದರೆ ನಮಗೇನೂ ಪರವಾಗಿಲ್ಲ. ನಮ್ಮ ಜನರು ಸಹನೆಯ ಪ್ರತೀಕ. ಈ ವ್ಯವಸ್ಥೆಯನ್ನೇ ಗೌರವಿಸುತ್ತಾರೆ.

    ಈ ವ್ಯವಸ್ಥೇಲಿ ಹಣ ಸಂಪಾದನೆ ಅಷ್ಟೊಂದು ಸುಲಭವೇ ಸ್ವಾಮಿ?

    "ಇದರಲ್ಲಿ ಎರಡು ಬಗೆಯಿವೆ, ಮರ್ಡರ್ಸ್ ಮಾಡಿ, ಹೆಣ್ಣಿನ ವ್ಯಪಾರ ಮಾಡಿ, ಸ್ಮಗ್ಲಿಂಗ್ ಮಾಡಿ-ಹೀಗೆ ಕಾನೂನಿಗೆ ವಿರುದ್ಧವಾಗಿ ಹಣ ಸಂಪಾದಿಸೋದು ಒಂದು ರೀತಿ. ಪ್ರತಿ ಕ್ಷಣವೂ ಪೋಲೀಸರಿಗೆ, ಕಾನೂನಿಗೆ ಹೆದರುತ್ತಲೇ ಬದುಕುವುದು. ಹಾಗಿಲ್ಲದೆ ಕಾನೂನಿನ ಲೋಪದೋಷಗಳನ್ನೂ ಇತರರ ದೌರ್ಬಲ್ಯವನ್ನೂ ಆಧಾರವಾಗಿಟ್ಟುಕೊಂಡು ಕಾಸು ಕಮಾಯಿಸುವುದು ಇನ್ನೊಂದು ರೀತಿ.’

    ಶಿಷ್ಯ ಇಷ್ಟು ಹೊತ್ತೂ ಮೊದಲ ಬಗೆಯ ಕಥೆಗಳೇ ಬಂದಿವೆ. ತಿಮ್ಮಾ ಪುರವನ್ನು ತಲುಪುವವರೆಗೂ ಮಾರ್ಗಾಯಾಸವಾಗಲೀಂತ ನಿನಗೆ ಎರಡನೇ ಬಗೆಯ ಕಥೆಯನ್ನು ಹೇಳುತ್ತೇನೆ. ಈ ಕಥೆಯ ನಾಯಕ ಗಾಂಧಿ ಕೊನೆಯಲ್ಲಿ ಗೆದ್ದನೋ ಸೋತನೋ ಎಂಬುದನ್ನು ನೀನು ಸರಿಯಾಗಿ ಹೇಳಿದೆಯಾದರೆ, ನಿನ್ನ ಶಿಷ್ಯತ್ವ ಪೂರ್ತಿಯಾದ ಹಾಗೇನೇ. ಈ ಪ್ರಪಂಚದಲ್ಲಿ ನೀನು ಎಲ್ಲಿ ಹೋದರೂ ಗೆದ್ದುಕೊಂಡು ಬರುತ್ತೀ! ಒಂದು ಸ್ಥಿತಿಯನ್ನು ದಾಟಿಯ ಮೇಲೆ ದುಡ್ಡೇ ದುಡ್ಡನ್ನು ಸಂಪಾದಿಸುತ್ತದೆ ಎಂಬ ವಿಷಯವನ್ನು ಪ್ರತಿಪಾದಿಸುವ ಕಥೆಯಾದ್ದರಿಂದ ಈ ಕಥೆಯ ಶೀರ್ಷಿಕೆ...

    ದುಡ್ಡು ಟು ದಿ ಪವರ್ ಆಫ್ ದುಡ್ಡು

    1

    ರಾತ್ರಿಯ ಹನ್ನೊಂದು ಗಂಟೆಯಾಗುತ್ತಿತ್ತು!

    ಬೀಡಾ ಅಂಗಡೀಲಿ ಮುಸಕು ದೀಪ ಮಿಣಕು-ಮಿಣಕು ಎಂದು ಬೆಳಗುತ್ತಿತ್ತು. ಬೀದಿಯ ದೀಪವಿರಲಿಲ್ಲ.

    ಗಾಂಧಿ ಆಯಾಸದಿಂದ ಏದುಸಿರು ಬಿಡುತ್ತಿದ್ದ. ಉಸಿರು ಬಿಡಲು ಒಂದರೆಘಳಿಗೆ ಸುತ್ತಲು ನೋಡಿದ. ರಸ್ತೆಯಲ್ಲಿ ಜನಸಂಚಾರವಿರಲಿಲ್ಲ. ದೂರದಲ್ಲಿ ರೈಲ್ವೆ ಸ್ಟೇಷನ್ನಿನ ಟವರ್ ಕಂಡುಬರುತ್ತಿತ್ತು. ಅದನ್ನು ನೋಡುತ್ತಿರುವಂತೆಯೇ ಅವನ ಮುಖವರಳಿತು. ತಕ್ಷಣ ಅತ್ತ ಓಡಿದ.

    ಎರಡು ನಿಮಿಷದಲ್ಲಿ ಅಲ್ಲಿಗೆ ತಲುಪಿದ.

    ಒಂದೇ ಒಂದು ಆಟೋ ಇತ್ತು.

    ಆದರೆ ರಾಡ್ ಹಿಡಿದುಕೊಂಡು ಆಯಾಸದಿಮದ ಉಸಿರಾಡುತ್ತಾ ಬರ್ತಿಯಾ? ಕೇಳಿದ.

    ಡ್ರೈವರ್ ನಿದ್ದೆಯ ಮತ್ತಿನಿಂದ ತಲೆ ಎತ್ತಿ ಎಲ್ಲಿಗೆ? ಬೇಸರದಿಂದ ಕೇಳಿದ.

    ಮೆಡಿಕಲ್ ಷಾಪ್ ಹುಡುಕಬೇಕು.

    ಗಾಂಧಿ ಕುಳಿತುಕೊಂಡ ನಂತರ ಆಟೋ ಓಡಿತು. ಕ್ಷಣಕ್ಷಣಗಳು ಉರುಳುತ್ತಿರುವಂತೆ ಅವನು ಭಯ, ಅಂದೋಳನೆಗಳಿಂದ ಕುಗ್ಗುತ್ತಿದ್ದ, ತೆರದಿದ್ದ ಮೆಡಿಕಲ್ ಷಾಪ್ ಕಂಡುಬರುತ್ತಲೇ ಹಗುರವಾದ ಉಸಿರೆಳೆದ.

    ಆಟೋ ನಿಂತಿತು.

    ಒಂದರೆಘಳಿಗೆ ಯೋಚಿಸಿದ. ಇರುವ ದುಡ್ಡಿನಲ್ಲಿ ಔಷಧಿ ತೆಗೆದುಕೊಂಡು ಮತ್ತೆ ಆಟೋದಲ್ಲಿಯೇ ಹೋಗಬೇಕೆಂದರೆ ಕಷ್ಟವಾಗಬಹುದು, ಔಷಶಿಗೆ ಎಷ್ಟಾಗುತ್ತದೋ ಏನೋ ಗೊತ್ತಿಲ್ಲ.

    ಅವನು ಬಾಗಿ ಮೀಟರ್ ನೋಡಿದ.

    ಮೂರು ರೂಪಾಯಿ ತೋರಿಸುತ್ತಿತ್ತು.

    ಮುದುಡಿದ್ದ ನೋಡುಗಳು-ಬೆವರಿನಿಂದ ತೋಯ್ದಿದ್ದವು. ಮೂರು ರೂ. ತೆಗೆದು ಕೊಟ್ಟ ಉಳಿದ ದುಡ್ಡು ಔಷಧಿಗೆ ಸರಿಹೋಗುತ್ತದೆಯೋ ಎಂದು ಯೋಚಿಸಿದ.

    ಆಟೋದವನು ಅವನನ್ನು ಹಳ್ಳಿಯವನನ್ನು ನೋಡುವಂತೆ ನೋಡಿದ.

    ಹನ್ನೊಂದು ಗಂಟೆ ಆದ ಮೇಲೆ ಒಂದೂವರೆಯಷ್ಟು ಛಾರ್ಜು-ಅಲ್ಲಿ ಬರೆದಿರೋದನ್ನ ಓದಲಿಲ್ಲೇ ಆಕ್ಷೇಪಣೆಯ ಧ್ವನಿಯಲ್ಲಿ ಹೇಳಿದ.

    ಗಾಂಧಿ ಅವನತ್ತ ಇಕ್ಕಟ್ಟಿನ ನೋಟ ಬೀರಿ ಮತ್ತೆ ಒಂದೂವರೆ ರೂಪಾಯಿ ಕೊಟ್ಟ. ಆಗ ಚರ್ಚೆನ ಗಂಟೆ ಹನ್ನೊಂದು ಬಡಿಯತು.

    ವಾವಿದ್ದ ಕೈ ಹಾಗೇ ನಿಲ್ಲಿಸಿದ ಗಾಂಧಿ.

    ಅವನ ಸಂಶಯವನ್ನು ಗಮನಿಸಿದ ಡ್ರೈವರ್,

    ಆ ಗಡಿಯಾರ ತುಂಬಾ ಸ್ಟೋ ದಾರ್ ಎಂದ.

    ಹೆಣದ ಪರಿಸ್ಥಿತಿಯಲ್ಲಿ. ತಾನೆಷ್ಟು ಮಿತವಾಗಿ ಖರ್ಚು ಮಾಡುತ್ತಿದ್ದನೋ ಪ್ರತಿ ಪೈಸೆಗೂ ತಾನೆಷ್ಟು ಒದ್ದಾಡುತ್ತಿದ್ದಾನೆಂದು ಹೇಳಬೇಕೆಂದು ಕೊಂಡ. ಆದರೆ-ಅದರಿಂದ ಉಪಯೋಗವಿಲ್ಲವೆಂದು ಗೊತ್ತು ಮೇಲಾಗಿ ಹೊತ್ತು !

    ಗಾಂಧಿ ಕೊಟ್ಟ ಹಣದ ಲೆಖ್ಖವನ್ನು ನೋಡಿಕೊಂಡು ಮತ್ತೆ ಕೈಚಾಚಿ,

    ಇನ್ನೂ ಒಂದೂವರೆ ರೂಪಾಯಿ ಎಂದ.

    ಏಕೇ? ವಿಸ್ಮಿತನಾಗಿ ಕೇಳಿದ ಗಾಂಧಿ.

    ಸ್ಟೇಷನ್‍ನಲ್ಲಿ ಪಾರ್ಕಿಂಗ್ ಟ್ಯಾಕ್ಸ್ ಒಂದ್ರೂಪಾಯಿ...

    ಆ ಮಾತು ಕೇಳಿ ಗಾಂಧಿಯ ಮುಖ ಕ್ರೋಧ, ರೋಷಗಳಿಂದ ಕೆಂಪಾಯ್ತು.

    ನೀನು...ನೀನು.....ಪಾರ್ಕಿಂಗ್ ಪ್ಲೇಸ್‍ನಲ್ಲಿಲ್ಲ ಆವೇಶದಿಂದ ಹೇಳಿದ.

    ಇದ್ದೀನಿ.

    "ಇಲ್ಲ.’

    ಇದ್ದೀನ್ರೀ !

    ಅಸಹಾಯಕನಂತೆ ಸುತ್ತಲೂ ಮೋಡಿದ ಗಾಂಧಿ. ಈ ಸಮಸ್ಯೆಗೆ ಪರಿಹಾರವೇನು? ಒಂದು ಕಡೆ ಹೋತ್ತು ಹರಿದುಹೋಗುತ್ತಿತ್ತು. ಅವನು ಒಂದು ರೂಪಾಯಿ ಕೊಡ ಬಂದಾಗ,

    ಒಂದ್ರೂಪಾಯಲ್ಲ, ಒಂದೂವರೆ ರೂಪಾಯಿ ಎಂದ.

    ಗಾಂಧಿ ಹಲ್ಲು ಕಚ್ಚಿಕೊಂಡು,

    ಅದೇಕೇ ಎಂದ.

    "ರಾತ್ರಿ ಹನ್ನೊಂದಾದ ಮೇಲೆ ಅರ್ಧ ಛಾಜ್...’

    ಅವನು ಮುಷ್ಠಿ ಹಿಡಿದು ಬಿಗಿದ ಹೊಡೆತ ಡ್ರೈವರ್‍ಗೆ ತಗುಲಿದ್ದಿದ್ದರೆ ಎರಡು ಮೂರು ಉರುಳು ಉರುಳುತ್ತಿದ್ದ. ಆದರೆ ಅರ್ಧ ಮೇಲೆತ್ತಿದ್ದ ಕೈಯನ್ನು ಬಲವಂತದಿಂದ ಕೆಳಗೆ ಬಿಟ್ಟ ಗಾಂಧಿ. ಆ ಹೊತ್ತಿನಲ್ಲಿ ಘರ್ಷಣೆ ಉಪಯೋಗವಿಲ್ಲವೆಂದುಕೊಂಡ.

    ಅವನು ತಕ್ಷಣ ಆಟೋ ಹತ್ತಿ ಹೂಂ, ನಡಿ ಎಂದ. ಡ್ರೈವರ್ ವಿಸ್ಮಿತನಾಗಿ

    ಎಲ್ಲಿಗೆ? ಎಂದ.

    ಸ್ಟೇಷನ್ ಪಾರ್ಕಿಂಗ್‍ಗೆ ಒಂದ್ರೂಪಾಯಲ್ಲ, ಆ ವಿಷಯಾದ ಪೋಲೀಸ್ ಸ್ಟೇಷನ್‍ಗೆ ತಿಳಿಸೋಕ್ಕೋಸ್ಕರ,

    ಅರ್ಧ ರೂಪಾಯಿಗೋಸ್ಕರ ಸ್ಟೇಷನ್ನಿಗೇಕೆ ಸಾರ್...ಇಳೀರಿ....ಇಳೀರಿ ಎಂದು ಅವನನ್ನು ಇಳಿಸಿ ಆಟೋದವನು ಹೊರಟು ಹೋದ.

    ವಿಷಯ ತುಂಬಾ ಬೇಸರ ತರುವಂಥವಾದರೂ ಆಟೋದವನ ಬುದ್ದಿವಂತಿಕೆಗೆ, ಸಮಯ ಸ್ಪೂರ್ತಿಗೆ ಅವನನ್ನು ಅಭಿನಂದಿಸಬೇಕಾದ್ದ, ಮೆಡಿಕಲ್ ಷಾಪಿಗೆ ಆ ಅರ್ಧ ರಾತ್ರಿಯಲ್ಲಿ ಬರಬೇಕಾದರೆ ಯಾರಿಗೋ ತುಂಬಾ ಸೀರಿಯಸ್ಸಾಗೇ ಇರಬೇಕು. ಅಂಥವನವಾದ. ಮಧ್ಯಸ್ತಿಕೆಯನ್ನು ಗಮನಿದುವ ಸ್ಥಿತಿಯಲ್ಲಿರಲಿಲ್ಲ. ಆ ವಿಷಯವನ್ನು ಗ್ರಹಿಸಿದ ಆಟೋದವನು ತನ್ನ ದೌರ್ಬಲ್ಯದ ಮೇಲೆ ಉಪಯೋಗ ಪಡೆದುಕೊಂಡ. ಟೈಮಂ ಹನ್ನೊಂದಾಗಿಲ್ಲವೆಂಬ ವಿಷಯದಲ್ಲಿಯೇ ಪೋಲೀಸರ ಹೆಸರು ಹೆಳಿದ್ದಿದ್ದರೆ, ಎರಡೂವರೆ ರೂಪಾಯಿ ಉಳಿತಾಯವಾಗುತ್ತಿತ್ತು. ವ್ಯಕ್ತಿ-ವ್ಯಕ್ತಿಯ ನಡುವೆ ನಡೆಯುವ ಈ ಟ್ರಾನ್ಸಾಕ್ಷನ್‍ನಲ್ಲಿನ ಅಜಾಗರೂಕತೆಯಿಂದ ಎರಡೂವರೆ ರೂಪಾಯಿ ನಷ್ಟ.

    ಷಟರ್ಸ್ ಎಳೆಯಲ್ಲಿದ್ದ ಷಾಪಿನವನು. ದಢದಢನೆ ಒಳಗೆ ಬಂದ ಗಾಂಧಿಯನ್ನು ನೋಡಿ.

    ಏನು ಬೇಕು? ಎಂದ ಕೇಳಿದ.

    ಚೀಟಿ ಕೈಗಿತ್ತ ಗಾಂಧಿ, ಒಂದು ಕ್ಯಾಪ್ಯುಲ್, ಅರ್ಧ ಡಜನ್ ಮಾತ್ರೆಗಳು, ಎರಡು ಇಂಜಕ್ಷನ್.

    ಷಾಪಿನವನು ಒಂದೊಂದಾಗಿ ಮೇಜಿನ ಮೇಲಿರಿಸಿದಾಗ, ಅವುಗಳ ಮೇಲಿದ್ದ ಬೆಲೆಯನ್ನು ಲೆಖ್ಖ ಹಾಕಿಕೊಂಡ.

    ಇಪ್ಪತ್ತೆಂಟು ರೂಪಾಯಿಗಳು.

    ತನ್ನ ಹತ್ತಿರವಿರುವುದು ಇಪ್ಪತ್ತಾರೇ ರೂಪಾಯಿ. ಮೂರು ರೂಪಾಯಿ ವಾಪಸ್ಸು ಮಾಡಿದರೆ ಸರಿಹೋಗುತ್ತದೆ.

    ಅವನು ಏನೋ ಹೇಳಬೇಕೆಂದುಕೊಳ್ಳುವಷ್ಟರಲ್ಲಿ ಷಾಪಿನವನು ಕಾಗದದ ಮೇಲೆ ಏನೇನೋ ಲೇಖ್ಖ ಹಾಕಿ, ಮೂವತ್ತಾರು ರೂಪಾಯಿ ಎಂದ. ಅವನು ತಪ್ಪು ಲೆಖ್ಖ ಹಾಕಿರಬಹುದೆಂದು ಯೊಚಿಸಿ.

    ಹೇಗೆ? ಎಂದು ಕೇಳಿದ.

    ಷಾಪಿನವನು ಅಲ್ಷ್ಯದಿಂದ ಕಾಗದ ಮುಂದೆ ತಳ್ಳಿದ. ಅಲ್ಲಿ ಔಷಧಿಯ ಬೆಲೆಯ ಮೇಲೆ, ‘ಲೋಕಲ್ ಟ್ಯಾಕ್ಸ್ ಎಕ್‍ಸ್ಟ್ರ’ ಎಂಬ ಕೆಲವು ಅಕ್ಷರಗಳನ್ನು ತೋರಿಸಿದ ಷಾಪಿನವನು. ಮಾತನಾಡುವ ಅಗತ್ಯವಿಲ್ಲ ಎಂಬ ಭಾವವಿತ್ತು.

    "ಇಪ್ಪತ್ತೆಂಟು ರೂಪಾಯಿಗೆ ಐದು ರೂಪಾಯಿ ಎಕ್‍ಸ್ಟ್ರಾನೇ ಎಂದು ಕೇಳಿದ.

    ಮತ್ತಿನ್ನೇನು ಎನ್ನುವಂತೆ ತಲೆಯಾಡಿಸಿದ ಷಾಪ್‍ನವನು.

    ಸೆಂಡ್ರಲ್ ಸೇಲ್ಸ್‍ಟ್ಯಾಕ್ಸ್, ಸ್ಟೇಟ್ ಟ್ಮಾಕ್ಸ್, ಸರ್‍ಛಾರ್ಜು ಎಲ್ಲಾ ಸೇರಿ ಶೇಕಡಾ ಹನ್ನೆರೆರಂತೆ ಹಕಿಕೊಂಡು ಅಷ್ಟಾಗೋಲ್ಲವೆಲ್ಲಾ! ಅಷ್ಟಾಗೋಲ್ಲವಲ್ಲಾ! ನಿಮ್ಮ ಇನ್‍ಕಂಟ್ಯಾಕ್ಸ್. ವೆಲ್ತ್ ಟ್ಯಾಕ್ಯೂ ಸೇರಿಸಿದ್ದೀರಾ? ದೋಷ ತಿರಸ್ಕಾರಗಳನ್ನು ಬೆರೆಸಿ ಹೇಳಿದ ಗಾಂಧಿ.

    ಬೇಕಾದ್ರೆ ತೊಗೊಳ್ರಿ, ಇಲ್ಲದ್ರೆ ಬಿಡ್ರಿ ಎನ್ನುತ್ತಾ ಔಷಧಿಗಳನ್ನು ವಾಪಸ್ಸು ಅನಿವಾರ್ಯ, ತೆಗೆದುಕೊಳ್ಳಲೇಬೇಕು.

    ಇಲ್ಲಿ ವಾದ-ವಿವಾದಕ್ಕೆ ತಾವೇ ಇಲ್ಲ, ಬಿಲ್ಲು ಕೇಳಿದರೂ ಕೊಡುವುದಿಲ್ಲ- ಏಕೆಂದರೆ ಆದಾ ಡಾಕ್ಯುಮೆಂಟರಿ ಪ್ರೋಪ್ ಆಗುತ್ತದೆ ಕಾನೂನು ಷಾಪಿನವನನ್ನು ಏನೂ ಮಾಡದು. ಈ ಅರ್ಧ ರಾತ್ರಿಯಲ್ಲಿ ಈ ಷಾಪಿನವನು ದಾರುಣವಾದ ಮೋಸ ಮಾಡುತ್ತಿದ್ದಾನೆ. ತಮ್ಮ ಪಕ್ಕದಲ್ಲಿಯೇ ಮೋಸವಾಗುತ್ತಿದ್ದರೂ ಯಾರೂ ಗಮನಿಸುವುದಿಲ್ಲ. ಬಹುತೇಕ ಮಂದಿ ಬಹಳ ವಿಷಯಗಳನ್ನು ಮನಸ್ಸಿಗೆ ತೆಗೆದುಕೊಳ್ಳುವುದಿಲ್ಲ. ಒಂಜರು ಭೂಮಿಯನ್ನು ರಾತ್ರೋ ರಾತ್ರಿಯಲ್ಲಿ ಬೇರೆ ಯಾರಾದರೂ ಆಕ್ರಮಿಸಿಕೊಂಡರೆ ಸಿನಿಮಾ ಟಿಕೆಟ್ಟನ್ನು ಎದುರಿಗೇ ಬ್ಲಾಕ್‍ನಲ್ಲಿ ಮಾರುತ್ತಿದ್ದರೂ ತಮಗೆ ಸಮಬಂಧಿಸಿಲ್ಲವೆಂದು ಸುಮ್ಮನಿರುತ್ತಾರೆ.

    ಅಗತ್ಯವನ್ನು ಗಮನಿಸಿ ಬಿಸಿನೆಸ್ ಮಾಡಿದ ಆಟೋದವನು.

    ಯಾರೂ ಗಮನಿಸದಿರುವುದರಿಂದಲೇ ಬಿಸಿನೆಸ್ ಮಾಡುತ್ತಿದ್ದಾನೆ ಮೆಡಿಕಲ್ ಷಾಪಿನವನು.

    ಗಾಂಧಿ ತಲೆಯಾಡಿಸಿ ಮಾತ್ರೆಗಳನ್ನು ವಾಪಸ್ಸು ಕೊಟ್ಟು.

    ಇಷ್ಟು ಸಾಕು ಎಂದು ಹೇಳಿ ಇಂಜಕ್ಷನ್, ಕ್ಯಾಪ್‍ಸೂಲುಗಳನ್ನು ಮಾತ್ರ ತೆಗೆದುಕೊಂಡ, ಐವತ್ತು ಪೈಸೆ ಉಳಿಯಿತು.

    ಅದರಿಂದ ಹಿಂದುರುಗಿ ಹೋಗಲು ರಿಕ್ಷಾಕ್ಕೂ ಸಾಲದು.

    ಓಡಲಾರಂಭಿಸಿದ.

    ಹಾಗೂ ಆಸ್ಪತ್ರೆಯನ್ನು ತಲುಪಲು ಕಾಲು ಗಂಟೆಯೇ ಹಿಡಿಯಿತು. ಎತ್ತೆತ್ತರವಾದ ಗಿಡಗಳು, ಕತ್ತಲೆಯಲ್ಲಿ ತಲೆ ಬಿರಿಹುಯ್ದು ಕೊಂಡದಯ್ಯಗಳಂತಿದ್ದುವು. ಅವುಗಳ ನಡುವೆ ಬೆಳ್ಳಗಿನ ಕಟ್ಟಡ ದೊಡ್ಡ ಸಮಾಧಿಯಂತಿತ್ತು. ಸ್ಮಶಾನದಂತೆ ಕೆಲಸಕ್ಕೆ ಬಾರದ ಗಿಡಗಳೂ ಆ ಆವರಣದ ತುಂಬಾ ಬೆಳೆದುಕೊಂಡಿದ್ದುವು.

    ಗಾಂಧಿ ಆಸ್ಪತ್ರೆಯಲ್ಲಿ ಪ್ರವೇಶಿಸಿದ.

    ಆಗ ಗಂಟೆ ಹನ್ನೆರಡಾಗಿತ್ತು.

    2

    ರೆಪ್ಪೆಯಾಡಿಸುವುದನ್ನೂ ಮರೆತು ಶವವನ್ನೇ ನೋಡುತ್ತಾ ನಿಂತಿದ್ದ. ಎಲ್ಲಕ್ಕೂ ಮಿಗಿಲಾದಮಥ ಮಹಾನ್ ಸ್ಥಿತಿ, ನಿರ್ಲಿಪ್ತತೆ ಅದು ಅನಿರ್ವಾಚನೀಯವಾದುದು.

    "ಸಾರಿ’ ಹತ್ತಿರ ಬಂದು ಹೇಳಿ ಹೋದಳು ನರ್ಸ್.

    ವಾರ್ಡಿನಲ್ಲಿನ ರೋಗಿಗಳೆಲ್ಲಾ ನಿದ್ರಿಸುತ್ತಿದ್ದರು. ಒಂದು ಪ್ರಾಣ ತಮ್ಮ ಕೋಣೆಯಲ್ಲಿ ಅದೇ ತಾನೇ ಹೊರಗೆ ಹೋಗಿದೆ ಎಂಬುದು ಅವರ್ಯಾರಿಗೂ ಗೊತ್ತಿಲ್ಲ. ಎಚ್ಚರ ಗೊಂಡಿದ್ದ ಒಬ್ಬ ರೋಗಿ ಅಡ್ಡವಾಗಿದ್ದ ತೆರೆಯುತ್ತ ಹೆದರುತ್ತಲೇ ನೋಡುತ್ತಿದ್ದ. ಆ ತೆರೆಯ ಹಿಂದೆಯೇ ತರೆರೆಯನ್ನು ತೊರೆದ ವ್ಯಕ್ತಿಯ ಶವವಿತ್ತು.

    ನೆಂಟರಿಷ್ಟರಿಲ್ಲ. ಅಳುಕರೆಗಳೂ ಇಲ್ಲ.

    ಗಾಂಧಿ ಬಂದು ಹೊರಗಿನ ವರಾಂಡಾದಲ್ಲಿ ನಿಂತ.

    ಸುತ್ತೂ ಮೂತ್ತಿದ್ದ ಕಪ್ಪು ಕತ್ತಲು ಅವನನ್ನು ಅಪ್ಯಾಯತೆಯಿಂದ ಮಾತನಾಡಿಸಿತು. ತಮ್ಮೊಂದಿಗೆ ಗೆಳೆತನ ಬೆಳೆದು ಎಂಬಂತಹ ಒಂದು ಆಹ್ವಾನ. ಎಲ್ಲ ಬದುಕಿದ್ದಾಗಲೂ ಎಲ್ಲರೂ ಹೋದಾಗಲೂ ಯಾವಾಗಲೂ ಅವನು ಒಂಟಿಯೇ ಅವನ ಯೋಚನೆಯ ಮಬ್ಬು ಹರಿಸುವಂತಹ ಶಬ್ದ ಕೇಳಿಸಿತು. ಹೆಡ್ ನರ್ಸ್ ಬಂದು.

    ಇಗೋ ರಿಪೋರ್ಟು ಶವವನ್ನು ತೆಗೆದುಕೊಂಡು ಹೋಗಬಹುದು ಎಂದಳು.

    ಅವನು ಆ ರಿಪೋರ್ಟು ತೆಗೆದುಕೊಳ್ಳಲಿಲ್ಲ.

    ಶವವನ್ನು ತೆಗೆದುಕೊಂಡು ಹೋಗುವಾಗ ಎಲ್ಲರಿಗೂ ದುಡ್ಡು ಕೊಡಬೇಕೇ?"

    ಈ ನೇರವಾದ ಪ್ರಶ್ನೆಗೆ ನರ್ಸ್ ತಕ್ಷನ ಉತ್ತರಿಸದಾದಳು.

    ......ಸಾಧಾರಣವಾಗಿ ರೋಗಿ ಚೇತರಿಸಿಕೊಂಡು ಹೋಗುವಾದ ಕೊಡುತ್ತಾರೆ. ಸತ್ತು ಹೋದರೆ ಅವರವರ ದುಃಖದಲ್ಲಿ ಆವರಿರುತ್ತಾರೆ- ಆದ್ದರಿಂದ ಏನೂ ಕೊಡೊಲ್ಲ...

    ನರ್ಸ್ ಅವನತ್ತ ಇಕ್ಕಟ್ಟಿನ ನೋಡ ಬೀರಿದಳು.

    ಶವವನ್ನು ನಾಳೆ ಬೆಳಿಗ್ಗೆ ಬಂದು ತೆಗೆದುಕೊಂಡು ಹೋಗುತ್ತೇನೆ ಎಂದ.

    ನರ್ಸ್ ಧರ್ಮಸಂಕಟದಲ್ಲಿ ಸಿಕ್ಕಿದಂತಿತ್ತು. ಅವಳಿಗೆ ಸುಮಾರು ಐವತ್ತು ವರ್ಷ ವಯಸ್ಸು. ಅಷ್ಟು ದಿನಗಳ ತನ್ನ ಅನುಭವದಲ್ಲಿ ಹಾಗೆ ನೇರವಾಗಿ ಮಾತನಾಡಿದ ಮೊದಲನೆ ವ್ಯಕ್ತಿ ಅವನೊಬ್ಬನೇ. ಶವವನ್ನು ನಿಧಾನವಾಗಿ ತೆಗೆದುಕೊಂಡು ಹೋಗುತ್ತೇನೆಂದವನೂ ಅವನೊಬ್ಬನೇ.

    ಅವಳ ಒಳತೋಟಿಯನ್ನು ಅವನು ಗ್ರಹಿಸಿದ್ದ. ‘ರಿಕ್ಷಾದಲ್ಲಿ ತೆಗೆದುಕೊಂಡು ಹೋಗೋಣವೆಂದರೆ ದುಡ್ಡಿಲ್ಲ" ಎಂದು ಹೇಳಬೇಕೇಂದುಕೊಂಡ, ಆದರೆ ಹೇಳಲಿಲ್ಲ. ನರ್ಸ್ ಕೈಲಿದ್ದ ಕಾಗದವನ್ನು ಮಡಿಸುತ್ತಾ.

    ಸರಿ ಹಾಗಾದರೆ ನಾಳೆ ಬೆಳಿಗ್ಗೆ ಮಾರ್ಚುರಿಗೆ ಬಂದು ಶವವನ್ನು ತೆಗೆದುಕೊಂಡು ಹೋಗಿ-ಆಗ ಮಾತ್ರ ಕೆಲವು ಫಾರ್ಮಾಲಿಟೀಸ್ ಅಬ್ಸರ್ವ್ ಮಾಡಬೇಕಾಗುತ್ತದೆ. ನೀವೇನಾದ್ರೂ ಬರದಿದ್ರೆ. ‘ಅನಾಥ ಶವ’ ಎಂದು ಡಿಕ್ಲೇರ್ ಮಾಡಿ, ಸಂಸ್ಕಾರಕ್ಕೆ ಮುನಿಸಿಪಾಲಿಟಿಯವರಿಗೆ ಕೊಡಬೇಕಾಗುತ್ತದೆ ಎಂದಳು.

    ಅವನು ಮುಖ ಕೆಂಪಾಯ್ತು. ತನ್ನ ಮುಖ ಕಳವಳಿಕೆಯನ್ನು ಕತ್ತಲಲ್ಲಿ ಗೊತ್ತಾಗದಂತೆ ಅಣಗಿಸಿ.

    ನಾಳೆ ಬೆಳಿಗ್ಗೆನೆ ಬರ್ತಿನಿ ಎಂದ. ಆ ನರ್ಸ್ ಹೊರಡಲಿದ್ದವಳು. ಹಾಗೇ ನಿಂತು.

    "ಆಕೆ ನಿಮಗೇನಾಗಬೇಕು? ಎಂದು ಕೇಳಿದಳು.

    ನಮ್ಮಮ್ಮ ಎಂದ.

    ನರ್ಸ್ ಷಾಕ್ ಹೊಡೆಸಿಕೊಂಡವಳಂತೆ ಅವಕ್ಕಾಗಿ ಅವನ ಮುಖ ನೋಡಿದಳು. ಕಾಠಿಣವಾಗಿ ಬದಲಾಗುತ್ತಿದ್ದ ಹಾಲ್ಗೆನೆಯಂಥ ಅವನ ಮುಖದಲ್ಲಿ ಯಾವ ಭಾವವೂ ಇರಲಿಲ್ಲ. ಅವಳು ಏನೋ ಹೇಳಬೇಕೆಂದುಕೊಂಡವಳು. ಸುಮ್ಮನಾಗಿ ನಿಷ್ಕ್ರಮಿಸಿದಳು.

    ಗಾಂಧಿ ಮೆಟ್ಟಿಲಿಳಿಯುವುದರಲ್ಲಿದ್ದಾಗ ಹಿಂದಿನಿಮದ ಬಂದ ವಾರ್ಡ್ ಬಾಯ್.

    ಶವಾನ ನಾಳೆ ಬೆಳಿಗ್ಗೆ ತೊಗೊಂಡ್ಹೋಗ್ತೀರಾ?

    ಹೂಂ.

    ಶವ ಯಾರದು?

    ನಮ್ಮಮ್ಮನದು.

    ಮಾರ್ಚುರಿ ಹ್ಮಾಗಿರತ್ತೇಂತ ಯಾವಾಗ್ಲಾದ್ರೂ ನೋಡಿದೀರಾ?

    ಇಲ್ಲ ಇನ್ನೂ ಬದುಕೇ ಇದ್ದೇನೆ.

    ಇಲ್ಲಿಯ ಮಾರ್ಚುರಿಯು ವಿಷಯ ನಿಮಗೆ ಗೊತ್ತಿಲ್ಲ. ಶವವನ್ನು ಅವರಿಷ್ಟ ಬಂದಂತೆ ಬಿಸಾಡಿರುತ್ತಾರೆ. ಇಲಿಗಳು ವೀರವಿಹಾರ ಮಾಡುತ್ತಿರುತ್ತವೆ. ಬೆಳಗಾಗುವ ಹೊತ್ತಿಗೆ ಒಂದು ಕಿವಿಯೋ, ಕಿರುಬೆರಖೋ ಇಲ್ಲವಾಗಿದ್ದರೂ ಅಚ್ಚರಿಪಡಬೇಕಾಗಿಲ್ಲ. ಇವುಗಳ ಬಗ್ಗೆ ಕಾಳಜಿ ವಹಿಸುವ ನಾಥನೇ ಇಲ್ಲ. ಕೋಲ್ಡ್ ಸ್ಟೋರೆಜ್ ಕೆಲಸ ಮಾಡುತ್ತಿಲ್ಲ. ಹೆಸರಿಗೆ ಮಾತ್ರ ಮಾರ್ಚುರಿ.

    "ಗಾಂಧಿ ಮಾತನಾಡಲಿಲ್ಲ.

    ಶವಾನ ಎತ್ತರದಲ್ಲಿಡ್ತೀನಿ, ಜಿರಳೆ ಬಂದು ಹೊಡೀದಿರೋ ಹಾಗೆ ಎತ್ತರದಲ್ಲಿಡ್ತೀನಿ. ಬಾಕಿ ಶವಗಳಿಂದ ದೂರ ಇಡ್ತೀನಿ.

    ಗಾಂಧೀ ಅವನತ್ತ ಕಣ್ಣು ಮಿಸುಕದೇ ನೋಡಿದ. ಸೂಟು, ಬೂಟು ಹಾಕಿಕೊಳ್ಳುವವನಾಗಿದ್ರೆ. ಟಾಟಾ ಆಗುತ್ತಿದ್ದ. ಕೋಟೊಂದೇ ಹಾಕಿ ಕೊಂಡ್ರೆ ‘ಬಿರ್ಲಾ’ ಆಗುತ್ತಿದ್ದ. ಈಗವನು ಎರಡೂ ಇಲ್ದೆ ವಾರ್ಡ್‍ಬಾಯ್ ಆಗುಳಿದ.

    ಖಂಡಿತಾ ನಾನು ಹೇಳಿದ್ದೆಲ್ಲಾ ಮಾಡ್ತೀನಿ ಸಾರ್.

    ಎಷ್ಟು ಕೊಡಬೇಕು?

    ನಿಮಿಷ್ಟ ಸಾರ್...ಹತ್ತೋ...ಹದಿನೈದೋ...

    ವಾರ್ಡ್‍ಬಾಯ್ ಹಿಂದು ಮುಂದು ನೋಡಿ.

    ನಾಳೆ ನೀವು ಬರ್ದಿದ್ರೆ? ಎಂದ.

    ‘ಅಯ್ಯೋ ಮೂರ್ಖ ಮಂಡೇದೇ! ಆ ಶವ ನಮ್ಮಮ್ಮೆಂದೋ ‘ ಅನ್ನಬೇಕೆಂದು ಕೊಂಡು ತಡೆದ ಗಾಂಧಿ. ಟಾಟಾ. ಬಿರ್ಲಾಗಳು ಇತರರ ಸೆಂಟಿಮೆಂಟನ್ನು ಮೌಲ್ಯವನ್ನು ಬಿಸಿನೆಸ್‍ನಲ್ಲಿ ಹಣನೆಗೆ ತೆಗೆದುಕೊಳ್ಳುವುದಿಲ್ಲ. ಹಾಗೆ ತಂದುಕೊಂಡಂದು ವಾರ್ಡ್ ಬಾಂಯ್‍ಗಳಾಗುತ್ತಾರೆ.

    ಅವನು ಹೇಳಬೇಕೆಂದು ಹವಣಿಸುವಷ್ಟರಲ್ಲಿ ಯಾವುದೇ ವಾಹನ ಬರುತ್ತಿರುವಂತಹ ಸದ್ದಾಯ್ತು.

    ಮೊದಲು ಒಂದು ಷೆವಲರ್ರ ಕಾರು ಬಂದಿತು. ಹಿಮದೊಂದು ಪ್ಲೀಮತ್ತ ಅವರೆಡರ ಹಿಂದೆರಡು ಅಂಬಾಸಿಡರ್‍ಗಳೂ ಬಂದುವು.

    ಷೆವರ್ಲೆಯಲ್ಲಿ ಬಾಗಿಲು ತೆರೆದುಕೊಂಡು ರಾಜಾರಾಂ ಮೋಹನ್‍ರಾವ್ ಕೆಳಗಿಳಿದರು. ಅವರು ವಯಸ್ಸು ಐವತ್ತರ ಗಡಿ ದಾಟಿತ್ತು. ವೆಲ್ಟೈಟ್ ಕೋಟು ಧರಿಸಿದ್ದ. ಸಿಲ್ಹೌಟಿನಲ್ಲಿ ಅವರ ಆಕಾರ ಗಂಭೀರವಾಗಿ ಕಾಣುತ್ತಿತ್ತು.

    ಹಿಂದೆ ಫ್ಲೀಮತ್ ನಿಲ್ಲುತ್ತಲೇ ಡೋರ್ ತೆರೆದುಕೊಂಡು ಒಬ್ಬ ಯುವತಿ ಕೆಳಗಿಳಿದಳು. ಓಡುತ್ತಾ ಬಂದು ಮುಂದಿನ ಕಾರಿನ ಬಾಗಿಲು ತೆರೆಯ ಬಂದಳು. ರಾಜಾರಾಂ ಮೋಹನ ರಾವ್ ಅವಳನ್ನು ತಡೆಯುತ್ತಾ.

    ಪರವಾಗಿಲ್ಲಮ್ಮಾ ಹರಿನೀ...ಮಮ್ಮಿಗೇನೋ.....ಪರವಾಗಿಲ್ಲ ಎಂದರು.

    ಅಷ್ಟರಲ್ಲಿ ಹಿಂದೆ ನಿಲ್ಲಿಸಿದ ಅಂಬಾಸಿಡರ್ ಕಾರಿನಿಂದ, ಡಾಕ್ಟರ್ ಶ್ರೀಪತಿ ಎಫ್ಫಾರ್ ಸಿಎಸ್ ಇಳಿದರು.

    ಆಸ್ಪತ್ರೆ ನಿದ್ರೆ ತಿಳಿದೆದ್ದಂತಾಗಿತ್ತು.

    ಹೆಂಡತಿ ಸ್ವಲ್ಪ ಎದೆನೋವು ಎನ್ನುತ್ತಿರುವಂತೆಯೇ ರಾತ್ರಿ ಒಂದು ಗಂಡೆಯಲ್ಲಿ ಊರಿಗೇ ಖ್ಯಾತರಾದ ಕಾಡಿಧಯಾಜಿಸ್ಟ್ ಅನ್ನೂ, ಅನೇಕ ಪ್ರಮುಖ ವೈದ್ಯರುಗಳನ್ನೂ ತನ್ನೊಂದಿಗೆ ಆಸ್ಪತ್ರೆಗೆ ಕರೆದು ತಂದ ರಾಜಾರಾಂ ಮೋಹನ್‍ರಾವ್‍ನನ್ನು ನೋಡಿ ಆಸ್ಪತ್ರೆ ಎಚ್ಚೆತ್ತುಕೊಳ್ಳದೆ ಬಿದ್ದಿರುತ್ತದೆಯೇ.

    ಪೇಷಂಟನ್ನು ಒಳಕ್ಕೆ ಕರೆದುಕೊಂಡು ಹೋಗಲು ಏರ್ಪಾಡುಗಳಾಗುತ್ತಿದ್ದುವು. ಹೌಸ್ ಸಂರ್ಜನ್‍ಗಳು ಗಡಿಬಿಡಿಯಿಂದ ತಿರುಗಾಡುತ್ತಿದ್ದರು.

    ಷವರ್ಲೆಯ ಪಕ್ಕದಲ್ಲಿ ಒಂಟಿಯಾಗು ನಿಂತಿದ್ದಳು ಹರಿಣಿ.

    ಗಾಂಧಿಯ ತಲೆಯಲ್ಲಿ ಏನೋ ಹೊಳೆಯಿತು.

    ತನ್ನ ತಾಯಿಯ ಶವವನ್ನು ಭದ್ರಪಡಿಸುವ ಸಲುವಾಗಿ ಹದಿನೈದು ರೂಪಾಯಿ ಸಮಪಾದಿಸುವುದು ಅಷ್ಟು ಕಷ್ಟವೇ...?

    ತಾಯಿಯ ಸೆಂಟಿಮೆಮಟಿನಿಂದ ಸಿನಿಮಾ ತೆಗೆದು ಲಕ್ಷಾಂತರಗಳಿಸುತ್ತಾನೆ ಒಬ್ಬ ನಿರ್ಮಾಪಕ. ತಾಯಿ-ಮಗುವಿನ ಚಿತ್ರವೊಂದನ್ನು ಸಾವಿರಕ್ಕೆ ಮಾರುತ್ತಾನೆ ಒಬ್ಬ ಚಿತ್ರ ಕಲಾವಿದ.

    ಸೆಂಟಿಮೆಂಟಿನ ಮೌಲ್ಯ. ಮೌಲ್ಯವುಳ್ಳವರಿಗೇ ಗೊತ್ತಾಗುತ್ತದೆ.ಅವನು ಅವಳತ್ತ ನೋಡಿದ.

    ಆ ಹೊಸ ಹರೆಯದ ಹುಡುಗಿಯ ತಾಯಿಯನ್ನು ಆಸ್ಪತ್ರೆಯೊಳಗೆ ತೆಗೆದುಕೊಂಡು ಹೋಗುತ್ತಿದ್ದುದನ್ನು ಅಸಹಾಯಕ ದೃಷ್ಟಿಯಿಂದ ನೋಡುತ್ತಿದ್ದಳು. ಆ ಯುವತಿ.

    ಗಾಂಧಿ ವಾರ್ಡಬಾಯ್‍ನತ್ತ ನೋಡಿ ‘ಬಾ ಇಲ್ಲಿ’ ಎಂದ. ಅವರು ಹತ್ತಿರ ಬರುತ್ತಲೇ

    ನಿನಗೆ ಬೇಕಾಗಿರೋದು ಹದಿನೈದು ರೂಪಾಯಿ ತಾನೇ!, ಎನ್ನುತ್ತಾ ಷೆವರ್ಲೆಯತ್ತ ನೋಡಿದ.

    ಅರೆ ತೆರೆದಿದ್ದ ಬಾಗಿಲ ಮೇಲೆ ತಲೆಯಾನಿಸಿ, ಕಣ್ಣುಚ್ಚಿಕೊಂಡಿದ್ದಳು ಹರಿಣಿ.

    ಏನು ಮಾಡಬೇಕೆಂಬುದನ್ನು ವಾರ್ಡ್ ಬಾಯ್‍ಗೆ ಹೇಳಿದ ಗಾಂಧಿ.

    ಬದುಕಿನಲ್ಲಿ ಮೊತ್ತ ಮೊದಲ ಬಾರಿಗೆ ತಾಯಿಯ ಶವವನ್ನು ಬಿರಳೆಗಳ ಕಾಟದಿಂದ ಕಾಪಾಡುವ ಸಲುವಾಗಿ ಹದಿನೈದು ರೂಪಾಯಿ ಸಂಪಾದಿಸುವುದಕ್ಕಾಗಿ ಕಾನೂನಿನ ಪರಿಧಿಯಲ್ಲಿ ಅವನು ತನ್ನ ಬುದ್ದಿಶಕ್ತಿಯನ್ನು ಉಪಯೋಗಿಸಿಕೊಳ್ಳುತ್ತಿದ್ದ.

    ವಾರ್ಡ್‍ಬಾಯ್ ಗಾಂಧಿಯ ಮಾತುಗಳನ್ನು ಶ್ರದ್ಧೆಯಿಂದ ಕೇಳಿದ ನಂತರ ಕಾರಿನ ಹತ್ತಿರ ನಿಂತಿದ್ದ ಹರಿಣಿಯ ಹತ್ತಿರ ಹೊದ.

    ಗುಡ್ ಈವ್‍ನಿಂಗ್ ಮೇಡಂ

    ಹರಿಣಿ ತಾಯಿಯವರಿಗೆ ಗುಣವಾಗುತ್ತದೆ ಏನೂ ಪರವಾಗಿಲ್ಲ."

    ಅಂತಹ ಸಮಯದಲ್ಲಿ ಅಷ್ಟು ಮಾತ್ರ ಸಾಂತ್ವನದ ಮಾತುಗಳು ಅಗತ್ಯವೆನ್ನುವಂತೆ ಅವಳು ‘ಥ್ಯಾಂಕ್ಸ್’ ಎಂದಳು ಅದೂ ಅಸ್ಪಷ್ಟವಾಗಿ.

    ನಿಮ್ಮ ತಾಯಿಯವರ ಆರೋಗ್ಯ ಬೇಗ ಸರಿಹೋಗುವ ಸಲುವಾಗಿ ಅವರು ದೇವರನ್ನು ಪ್ರಾರ್ಥಿಸುತ್ತಾರೆ ಎಂದ ವಾರ್ಡ್‍ಬಾಯ್. ಆ ಮಾತು ಕೇಳಿ ಅವಳು ಆಶ್ವಯ್ದಿಂದ ತಲೆ ಹೊರಳಿಸಿ ನೋಡಿದಳು. ಕತ್ತಲಿನಲ್ಲಿ ಗಾಂಧಿ ತಲೆ ತಗ್ಗಿಸಿ ನಿಂತಿದ್ದ. ಅವನನ್ನು ನೋಡಿದರೆ ಪಾಪಿಗಳನ್ನು ರಕ್ಷಿಸುವವನಂತೆ ಕಾಂಡುಬರುವ ಕ್ರಿಶ್ಚಿಯನ್ ಫಾದರ್‍ನಂತೆ ಕಂಡುಬಂದ.

    ದೇವರೊಂದಿಗೆ ಡೈರೆಕ್ಟಾಗಿ ಮಾತನಾಡುವಂತಹ ‘ದಿವ್ಯವಾಣಿ.....ಈ ಸಮಯದಲ್ಲಿ ಅವರಲ್ಲಿ ಇರುವುದು ನಮ್ಮ ಅದೃಷ್ಟ ಎಂದ ವಾರ್ಡ್ ಬಾಯ್.

    ಇಟ್ಟು ಬಾ ಅಂದರೆ ಸುಟ್ಟು ಬರುವಂಥ ದೂತರು ಹೇಗಿರುತ್ತಾರೆಂದು ಗಾಂಧಿಗೆ ಗೊತ್ತು. ಈ ವಾರ್ಡ್‍ಬಾಯ್ ತನ್ನ ಪೋರ್ಷನ್ ಬಹಳ ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾನೆ.

    ತಡಮಾಡಬೇಡಿ, ಅವರನ್ನು ಕೋರಿಕೊಳ್ಳಿ. ನಿಮ್ಮ ತಆಯಿಯವರ ಸಲುವಾಗಿ ದೇವರೊಂದಿಗೆ ಮಾತನಾಡಿ ಎಂದು ಅವರನ್ನು ಕೋರಿಕೊಳ್ಳಿ, ಪೀಜೂ ಜಾಸ್ತಿ ಇಲ್ಲ. ಕೇವಲ ಇಪ್ಪತ್ತೈದು ರೂಪಾಯಿ ಮಾತ್ರ...

    ‘ಅಯ್ಯೋ ಪಾಪೀ...ದುಡುಕಿಬಿಟ್ಟೆಯೋಲ್ಲೋ’.......ಎಂದುಕೊಂಡ ಗಾಂಧಿ. ಹಣದ ಪೈಸಕ್ತಿ ಬರುತ್ತಲೇ ಹರಿನಿ ಎಲ್ಲಾ ಅರ್ಥಮಾಡಿಕೊಂಡವಳಂತೆ, ತಲೆ ಅಡ್ಡಲಾಗಿ ತಿರುಗಿಸಿ. ಸಾರಿ ಎಂದು ಹೇಳಿ ಒಳಗೆ ಹೋಗಲನುವಾದಳು. ಒಮ್ಮೆಲೇ ಗಾಂಧಿಯನ್ನು ನಿರಾಸೆಯಾವರಿಸಿತು. ಬಾಯ್ ಈಗಲೇ ಹಣದ ಪ್ರಸಕ್ತಿಯನ್ನು ತರಬಾರದಾಗಿತ್ತು. ಯೋಜನೆ ಹಾಳಾಗಿ ಹೋಯ್ತು. ಅವಳು ಹೊರಟು ಹೋಗುತ್ತಿದ್ದಳು.

    ಅವಳು ಆಸ್ಪತ್ರೆಯನ್ನು ಪ್ರವೇಶಿಸುತ್ತಿದ್ದಾಗ ಬಾಯ್ ಹಿಂದಿನಿಂದ ಮೆಲ್ಲಗೆ.

    .......ಅವರು ದಿವ್ಯವಾನಿ ಸಹಾಯದಿಂದ ದೇವರೊಂದಿಗೆ ಮಾತನಾಡಿ ನೀವು ಹುಟ್ಟಿದ ತಾರೀಖನ್ನು ಹೇಳುತ್ತಾರೆ ಎಂದ. ಮಂತ್ರಮುಗ್ಧಳಂತೆ ನಿಂತುಬಿಟ್ಟಳು. ವಾರ್ಡ್ ಬಾಯ್ ನಕ್ಕು.

    ಬೇಕಾದರೆ ಪರೀಕ್ಷಿಸಿಕೊಳ್ಳಿ ಎಂದು ಹೇಳಿ ಪುನಃ ಸಾಧಾರಣವಾಗಿ ಒಂದು ತಿಂಗಳಿಗೆಷ್ಟು ದಿನ? ಎಂದು ಗಾಂಧಿಯ ಪ್ರತಿನಿಧಿಯಾಗಿ ಕೇಳಿದ.

    ಮೊವತ್ತೊಂದು ಎಂದಳು ಹರಿಣಿ.

    ಒಂದು ವರ್ಷಕ್ಕೆ ಷ್ಟು ತಿಂಗಳು?

    ‘ಹನ್ನೆರಡು’

    ನೀವು ಹುಟ್ಟಿದ ದಿನವನ್ನು ಹನ್ನೆರಡರಿಂದಲು, ನೀವು ಹುಟ್ಟುದ ತಿಂಗಳನ್ನು ಮೂವತ್ತೊಂದರಿಂದಲೂ ಗುಣಿಸಿ ಎರಡೂ ಕೂಡಿ ಹೇಳಿ ಎಷ್ಟು? ಎಂದ.

    ನೂರಪ್ಪತ್ತು ಮನಸ್ಸಿನಲ್ಲಿಯೇ ಲೆಖ್ಖ. ಹಾಕಿಕೊಂಡು ಹೇಳಿದಳು ಹರಿಣಿ.

    ಗಾಂಧಿ ಮೊಣಕಾಲ ಮೇಲಿನಿಂದ ಮೆಲ್ಲಗೆ ತಲೆ ಎತ್ತಿದ. ಇಬ್ಬರೂ ಪ್ರೇಕ್ಷಕರಂತೆ ಅವನನ್ನು ನೋಡುತ್ತಿದ್ದರು.

    ಅಮ್ಮಾವು ಯಾವ ತಾರೀಖು ಹುಟ್ಟಿದ್ದರೇಂತ ದಿವ್ಯವಾಣಿಯ ಸಹಾಯದಿಂದ ಹೇಳಿ.

    ಫೆಬ್ರವತಿ ಒಂಭತ್ತು ಎಂದ ಗಾಂಧಿ.

    ವಾರ್ಡ್ ಬಾಯ್‍ನ ಮುಖದ ಮೇಲಿನ ಮುಗುಳುನಗೆ ಮಾಯವಾಯ್ತು. ಯಾವುದೊ ಒಂಸು ಅದ್ಬುತವನ್ನು ನೋಡುತ್ತಿರುವವನಂತೆ ವಿಸ್ಮತನಾಗಿ ಗಾಂಧಿಯನ್ನೇ ನೋಡಿದ, ಮುಸುಕು ಬೆಳಕಿನಲ್ಲಿ ಹರಿಣಿಯ ಮೂಖದ ಮೇಲೆ ಒಂದರೆಘಳಿಗೆ ವಿಸ್ಮಯ ಸುಳಿದಾಡಿತು. ಇವನಲ್ಲಿ ನಿಒಜವಾಗಿಯು ದಿವ್ಯವಾಣಿ ಇದೆಯೋ ಏನೋ ಎಂಬ ಅನುಮಾನದಿಂದ ಆಶ್ಚರ್ಯಗೊಂಡಿದ್ದ ವಾರ್ಡ್‍ಬಾಯ್ ಕರ್ತವ್ಯದ ನೆನಪು ಬಂದು ಎಚ್ಚೆತ್ತು.

    ನೋಡಿದ್ರಾ ಮೇಡಂ...ಈಗಲಾದ್ರೂ ನಿಮಗೆ ನಂಬಿಕೆ ಬಂತೇ! ಸರ್ವ ಶಕ್ತಿ ಸಂಪನ್ನರಾದ ಈ ಗಾಂಧಿಬಾಬ ನಿಮ್ಮ ತಾಯಿಯವರ ಆರೋಗ್ಯಕ್ಕಾಗಿ ದೇವರನ್ನು ಪ್ರಾರ್ಥಿಸುತ್ತಾರೆ ಎಂದ.

    ಅವಳು ಮುಂದಡಿಯಿರಿಸಲಿದಾಗ ಹಿಂಬಾಲಿಸಿದ ವಾರ್ಡ್‍ಬಾಯ್.

    ಅವರ ಹೆಂಸರು ಏನೂಂದೆ?

    ಗಾಂಧಿ

    ಇಷ್ಟು ಹೊತ್ತಿನಲ್ಲಿ ಇಲ್ಲೇಕೆ ಕೂತ್ಕೊಂಡಿದ್ದಾರೆ?

    ಅವರ ತಾಯಿಯ ಶವಾನ ಮಾರ್ಚುರಿಯಲ್ಲಿ ರಿಸಬೇಕು. ಹಾಗೆ ನಿಂತಳು ಆ ಹುಡುಗಿ, ಆ ಮಾತು ಕೇಳಿ ಅವಳ ಮುಖ ಬಿಳಿಚಿಕೊಂಡಿತು.

    ವಾರ್ಡ್‍ಬಾಯ್ ಆ ಅವಕಾಶವನ್ನು ಬಿಡಲಿಲ್ಲ. ಕಂಠಸ್ವರವನ್ನು ಬದಲಿಸಿಕೊಂಡು.

    ಅವರ ತಾಯಿ ತೀರಿಕೊಂಡಿದ್ದಾರೆ ನಿಮ್ಮ ತಾಯಿಗಾಗಿ ದೇವರನ್ನ ಪ್ರಾರ್ಥಿಸುತ್ತಾರೆ... ತಮ್ಮ ಅದ್ಬುತ ಶಕ್ತಿಯನ್ನುಪಯೋಗಿಸಿ...ಅವನ ಮಾತು ಮಧ್ಯೆ ನಿಂತಿತು. ಹರಿಣಿ ಒಳಗೆ ಹೋದಳು. ಹಿಂದೆಯೇ ಸ್ಟ್ರಿಂಗ್ ಡೋರು ಮುಚ್ಚಿಕೊಂಡಿತು. ವಾರ್ಡ್‍ಬಾಯ್ ಮುಖದ ತುಂಬಾನಿರಾಶೆ ತುಂಬಿಕೊಂಡಿತು. ಗಾಂಧಿಯ ಹತ್ತಿರ ಬಂದ.

    ಏನಾಯ್ತು? ಕೇಳಿದ ಗಾಂಧಿ.

    ಈ ಸುಡುಗಾಡು ಧನವಂತರು ಪ್ರಾಣ ಹೋದ್ರೂ ಪೈಸಾ ಬಿಚ್ಚೋಲ್ಲ ಸಾರ್!

    ಗಾಂಧಿ ಏನೂ ಮಾತನಾಡಿಲಿಲ್ಲ.

    ನಿಮ್ಮ ತಾಯಿ ವಿಚಾರ ನನಗೆ ಬಿಡಿ ಸಾರ್! ನಾನು ನೋಡ್ಕೋತೀನಿ ಎಂದ ಬಾಯ್.

    ನಂಬಲಾರದನಂತೆ ತಲೆ ಎತ್ತಿದ ಗಾಂಧಿ.

    ಹೌದು ಸಾರ್ ! ಆ ಹುಡುಗಿ ಎಷ್ಟು ಕೊಟ್ರೆ ಅಷ್ಟು ತೊಗೊಂಎಉ ನಿಮಗೆ ಸಹಾಯ ಮಾಡೋಣವೆಂದುಕೊಂಡೆ. ಆ ಹುಡುಗಿ ಏನೂ ಕೊಡಲಿಲ್ಲ. ಆದ್ದರಿಂದ ನಿಮ್ಮ ಕೆಲಸ ಹಾಗೇ ಮಾಡಿಬರತ್ತೇನೆ...ಒಂದ್ವಿಷ್ಯ ಹೇಳಿ ಸಾರ್! ನಿಮಗೆ ನಿಜವಾಗಿಯೂ ದಿವ್ಯವಾಣಿ ಇದ್ಯೇ?

    ಅಂತಹ ವಿಷಾದದಲ್ಲೂ ವಿಲಾಸದ ನಗೆ ನಕ್ಕ ಗಾಂಧಿ.

    -ಇಲ್ಲಿ ಇವರಿಬ್ಬರ ಸಂಭಾಷಣೆ ನಡೆಯುತ್ತಿರುವಂತೆ...ಆಸ್ಪತ್ರೆಯಲ್ಲಿ ಹರಿಣಿ.

    ಅಮ್ಮನಿಗೆ ಹೇಗಿದೆ ಡಾಕ್ಟ್ರೇ?ಕೇಳಿದಳು.

    ಡಾಕ್ಟರ್ ಶ್ರೀಪತಿ ನಕ್ಕು,

    ನಿಮ್ಮ ತಂದೆಯವರಿಗೆ ಗಾಬರಿ ಜಾಸ್ತೀಮ್ಮ. ರಾತ್ರಿ ಡಿನ್ನರ್‍ಸ್ವಲ್ಪ ಜಾಸ್ತಿಯಾಗಿರುವಂತಿದೆ. ಆದರಿಮದ ನಮ್ಮನ್ನೆಲ್ಲಾ ಎಬ್ಬಿಸಿ ಡೈರೆಕ್ಟಾಗಿ ಆಸ್ಪತ್ರೆಗೆ ಬನ್ನಿ ಎಂದರು. ಒಳಗೆ ಹೋಗಲಿದ್ದು, ಹಾಗೇ ನಿಂತು. ಒಂದರ್ಧ ಗಂಟೆಯಾದ್ರೆ ಎಲ್ಲರೂ ಹೊರಟು ಹೋಗಬಹುದು... ಎಂದ.

    ಹರಿಣಿ ಹಗುರವಾಗಿ ಉಸಿರೆಳೆದಳು. ತಾಯಿಗೆ ಏನೂ ಆಗಿಲ್ಲ. ಆತಂಕ ಬೇಕಿಲ್ಲ ಎಂಬ ವಿಷಯ ತಿಳಿದು ಅವಳಿಗೆ ಬಹಳವೇ ಸಮಾಧನವಾಗಿತ್ತು.

    ಅಷ್ಟರಲ್ಲಿ ಅವಳ ತಂದೆ ಬಂದು,

    ಒಂದು ಇಂಜಕ್ಷನ್ಕೊಡುತ್ತೇರಂತೆ, ಕೊಟ್ಟ ಕೂಡಲೇ ಹೊರಟು ಹೋಗೋಣ ಎಂದರು. ಬಂದ ಗಡಿಬಿಡಿಯ್ಲಿಯೇ ಒಳಗೆ ಹೊರಟು ಹೋದರು. ಕೋಟ್ಯಾಂತರ ರೂಪಾಯಿನ ವ್ಯವಹಾರವನ್ನು ಅನಾಯಸವಾಗಿ ಮಾಡುವ ತಂದೆ ಇಷ್ಟೊಂದು ಸಣ್ಣ ವಿಷಯದಲ್ಲಿ ವಿಪರೀತವಾಗಿ ಕಂಗಾಲಾಗುತ್ತಾರೆ.

    ಯೋಚಿಸುತ್ತಲೇ ಅವಳು ಮೇಜಿನ ಹತ್ತಿರ ಕುಳಿತುಕೊಂಡಳು. ಮೇಜಿನ ಮೇಲೆಸಣ್ಣ, ಪ್ಯಾಡ್, ಪೆನ್ ಇದ್ದು ಅವಳಿಗೆ ಗಾಂಧಿಯನ್ನು ದಿವ್ಯವಾನಿ ನೆನಪಿಗೆ ಬಂದು ಮತ್ತೊಮ್ಮೆ ತನ್ನಲ್ಲೇ ನಕ್ಕಳು. ಅಪ್ರಯತ್ನಳಾಗಿ ಕಾಗದದ ಮೇಲೆ,

    12x+31y=170 ಎಂದು ಬರೆದಳು.

    ಕೇವಲ ಒಂದು ಈಕ್ಷೇಷನ್‍ನಿಂ ಎಕ್ಸ್-ವೈಗಳನ್ನು ಸಾಧಿಸುವುದು ಹೇಗೆ? ಅವಳಿಗೊಮದು ಕ್ಷನ ಅರ್ಥವಾಗಲಿಲ್ಲ, ಸುಮಾರು ಹದಿನೈದು ನಿಮಿಷಗಳ ನಂತರ ತಂದೆ ಬಂದು ಹೋಗೋಣವೇನಮ್ಮ ಎಂದಿದ್ದರಿಂದ ಕಾಗವನ್ನು ಮಡಿಸಿ. ಎದ್ದಳು ಹಿಂದೆಯೇ ತಾಯಿ ಉಸ್, ಬುಸ್ ಎಂದು ಬರುವುದನ್ನು ನೋಡಿ ಅವಳಿಗೆ ನಗು ಬಂತು. ‘ಸ್ವಲ್ಪ ಊಟ ಕಡಿಮೆ ಮಾಡಬಾರದೇನಮ್ಮ?’ ಎಂದು ಹೇಳಬೇಕೆಂದುಕೊಂಡವಳು ಹೇಳಲಿಲ್ಲ.

    ಹರಿಣಿಯ ವಯಸ್ಸು ಹದಿನಾರು, ಆ ವಯಸ್ಸಿನಲ್ಲಿಯೇ ಅವಳು ತುಂಬಾ ಸಮತೋಲನದಲ್ಲಿದ್ದಳು. ಮನೆಯ ಒಳಗೆ, ಹೊರಗೆ...ಮಿತವಾಗಿ ಮಾತನಾಡುವುದು ಮನಸ್ಸಿನಲ್ಲಿನ ಭಾವನೆಗಳನ್ನು ಬಹಿರ್ಗತ ಮಾಡದಿರುವುದು ಅವಳ ಸ್ವಭಾವಹಣ ಅವಳನ್ನು ಕೊಂಚವೂ ಬದಲಾಯಿಸಿರಲಿಲ್ಲ.

    ಅವಳು ಸುತ್ತಲು ತುಂಬಾ ಆರಿಸ್ಟ್ರೋಕ್ರೆಡಿಕ್, ಹಿಪೋಕ್ರೆಟಿಕ್ ಪ್ರಪಂಚವಿತ್ತು. ಆದರೆ ಅವಳ ನಡವಳಿಕೆಯಲ್ಲಿ ನಮ್ರತೆ, ವರ್ತನೆಯಲ್ಲಿ ಮೇದುತ್ವ ಎದ್ದು ಕಾಣುತ್ತಿದ್ದವು ವಿಚಿತ್ರವೆಂದರೆ ಅವಳ ನಮ್ರತೆಯಲ್ಲಿ ಒಂದು ಬಗೆಯ ಗಾಂಭೀರ್ಯವಿತ್ತು. ಅದು ಆ ಮನೆಯ ಕೆಲಸದವರನ್ನು ಅಳುತ್ತದೆ. ತಂದೆಯ ಹತ್ತಿರ ತುಂಟುತನದಿಂದ ವರ್ತಿಸುತ್ತದೆ. ಯಾರನ್ನೂ ಲಕ್ಷಿಸದ ತಾಯಿಗೂ ಮಗಳ ಹತ್ತಿರ ಕೂಂಚ ಸಂಕೋಚ, ಹೆದರಿಕಡಗಳಿದ್ದವು.

    ತಾಯಿಗೆ ಸೀರಿಯಸ್ ಎಂದಾಗ ಅವಳು ಕೊಂಚವೂ ಚಲಿಸಲಿಲ್ಲ. ಮುಖದಲ್ಲಿ ಸ್ವಲ್ಪ ವ್ಯಥೆ ಹಣಕಿ ಹಾಕಿತ್ತು ಅಷ್ಟೇ! ಈಗ ತಾಯಿಗೆ ಏನೂ ಆಗಲ್ಲವೆಂದು ತಿಳಿದಾಗಲೂ ಅವಳು ಮಾಮೂಲಾಗಿದ್ದಳು. ಹಿಗೆ ಭಾವಗಳನ್ನು ಹೊರಗೆ ಪ್ರದರ್ಶಿಸದಿರುವುದು, ತಮ್ಮ ಯೋಚನೆಯತ್ತ ಬಹುವಾಗೇ ಕಮ್ಯಾಂಡ್ ಇರುವವರಿಗೆ ಮಾತ್ರ ಸಾಧ್ಯ.

    ತಂದೆಯೊಂದಿಗೆ ಹೊರಗೆ ಬಂದಳು.  ತಾಯಿ ಹೋಗಿ ಕಾರಿನಲ್ಲಿ ಕುಳಿತುಕೊಂಡಳು. ತಂದೆ ದೂರದಲ್ಲಿ ಡಾಕ್ಟರೊಂದಿಗೆ ಮಾತನಾಡುತ್ತಿದ್ದ, ಅವಳೊಮ್ಮೆ ಸುತ್ತಲೂ ನೋಡಿದಳು. ತನ್ನನ್ನೇ ನೋಡುತ್ತಿದ್ದ ವಾರ್ಡ್ ಬಾಯ್, ಗಾಂಧಿ ದೃಷ್ಟಿಗೆ ಬಿದ್ದರು.

    ಶತ್ರು, ಸೈನಿಕರು ತಮ್ಮ ಪರಿಹಾರದವರನ್ನೆಲ್ಲಾ ಕೊಂದು, ಇಬ್ಬರನ್ನೇ ಉಳಿಸಿದರೆ ತಮ್ಮ ರಾಜ್ಯವನ್ನು ಅವರು ಆಕ್ರಮಿಸಿಕೊಳ್ಳುವುದನ್ನು ಅದಹಾಯಕರಾಗಿ ನೋಡುತ್ತಾ ನಿಂತಿರುವವರಂತೆ ಕಂಡುಬಂದರು. ಒಬ್ಬ ಕ್ರೋಧದಿಂದ ಮತ್ತೊಬ್ಬ ರೋಷದಿಂದ ನೋಡುತ್ತಿದ್ದ.

    ಹರಿಣಿಗೆ ನಗು ಬಂತು.

    ‘ಇಲ್ಲಿ ಬಾ’ ಎನ್ನವಂತೆ ತಲೆಯಾಡಿಸಿದಳು. ಅದಕ್ಕೇ ನಿರೀಕ್ಷಿಸುತ್ತಿದ್ದಂತೆ ವಾರ್ಡ್‍ಬಾಯ್ ಓಡೋಡಿ ಬಂದ. ಅವನ ಕೈಯಲ್ಲಿ ತಾವು ಬರೆದಿದ್ದ ಕಾಗದವನ್ನು ಕೊಟ್ಟು ಬ್ಯಾಗಿನಿಂದ ಒಂದು ಲಕೋಟೆಯನ್ನು ಹೊರತೆಗೆದು ಅವನಿಗೆ ಕೊಟ್ಟು ಕಾರಿನಲ್ಲಿ ಹೋಗಿ ಕುಳಿತುಕೊಂಡಳು.

    ಒಂದರ ಹಿಂದೊಂದು ಎಲ್ಲ ಕಾರುಗಳೂ ಹೊರಟು ಹೋದವು.

    ಗಾಂಧಿ ವಾರ್ಡ್‍ವಾಯ್‍ನ ಹತ್ತಿರ ಬಂದ. ಹರಿಣಿ ತಮಗೆ ಕೊಟ್ಟಿದ್ದ ಕಾಗದವನ್ನು ಗಾಂಧಿಯ ಕೈಲಿರಿಸಿದ, ಗಾಂಧಿ ಕಾತರವಾಗಿ ಅದನ್ನು ಬಿಡಿಸಿ ಓದಿದ, ಆ ಕಾಗದಲ್ಲಿ ಹೀಗೆ ಬರೆದಿತ್ತು.

    12x + 31y =170

    x = 170-31y = 14-3y + 2+5y

                12                            12

    =14-3y+1, 2+5y-12l

    y=-2+12t = 2t-2 1-t =2t-2t

    5                      5

    1-1=5t          t=1-5t

    y=2(1-5t)-2t-2-12t

    x=14-3(2-12t)+1-5t=9+31t

    31>+>0:12>y>0

    -9/31 <1> 1/9

    t1=0, x = 9, y = 2

    ಆದುದರಿಂದ ಹುಟ್ಟಿದ ತಾರೀಕು ಒಂಬತ್ತನೆಯ ತಾರೀಖು ಫ್ರಬ್ರವರಿ (2) ತಿಂಗಳು.

    ಕಾಗದದ ಮೇಲಿನ ಲೆಖ್ಖವನ್ನು ನೋಡುತ್ತಿರುವಂತೆಯೇ ಗಾಂಧಿಯ ಮುಖ ಸಪ್ಪಗಾಯ್ತು. ಅವನತ್ತಲೇ ನೋಡುತ್ತಿದ್ದ ವಾರ್ಡ್‍ಬಾಯ್,

    ಏಸ್ಸಾರ್ ಏನಾಯ್ತು? ಎಂದು ಕೇಳಿದ.

    ಆ ಹುಡುಗೀಗೂ ದಿವ್ಯವಾನಿ ಇದೆಯಂತೆ, ನಮ್ಮ ಯುಕ್ತಿಯನ್ನೆಲ್ಲಾ ಆ ವಾಣಿ ಅವಳಿಗೆ ಹೇಲಿಬಿಟ್ಟಿದೆ ಎಂದ. ಅಷ್ಟು ಕಷ್ಟವಾದ ಲೆಖ್ಖವನ್ನು ಆ ಹುಡುಗಿ ಅಷ್ಟು ಸುಲಭವಾಗಿ ಮಾಡುತ್ತಳೆಂದು ಅವನು ಎಣಿಸಿರಲಿಲ್ಲ.

    ದುರದೃಷ್ಟ ಸಾರ್, ನಮ್ಮದು ದುರದೃಷ್ಟ...ಎನ್ನುತ್ತಾ ಎರಡನೆಯ ಕವರ್ ಬಿಡಿಸಿ ಬೆಚ್ಚಿಬಿದ್ದು. ಕಿಟಾರನೆ ಕಿರುಚಿದ. ಆ ಕವರಿನಲ್ಲಿ ಐದು ನೂರು ರೂಪಾಯಿಗಳ ನೋಟಿತ್ತು. ಒಂದು ರೂಪಾಯಿನ ನೋಟೂ ಇತ್ತು. ಸಣ್ಣ ಕಾಗದಲ್ಲಿ ನಾಲ್ಕೇ ಸಾಲು ಬರೆದಿದ್ದಳು. ಗಾಂಧಿ ಆ ಕಾಗದವನ್ನೊಂದಿದ.

    ನಮಸ್ತೆ!

    ಕಾಗದ ಪೆನ್ನುಗಳ ಸಹಾಯದಿಂದ ಹತ್ತು ನಿಮಷ ಹಿಡಿದ ಲೆಕ್ಕವನ್ನು ನೀವು ಏನೂ ಇಲ್ಲದೆ ಅರ್ಧ ನಿಮಿಷದಲ್ಲಿ ಹೇಳಿದ್ದಕ್ಕೆ, ನಿಮ್ಮ ದಿವ್ಯವಾಣಿಗೆ ಈ ರೂಪಾಯಿಯ ಬಹುಮಾನ, ಬಾಳಿನಲ್ಲಿ ಕಳೆದುಕೊಂಡರೆ ಜನ್ಮ ಕಾಲದಲ್ಲಿ ಸಿಗದಂತಹ ಅಪೂರ್ವ ವಸ್ತು ತಾಯಿ, ನಿಮ್ಮ ತಾಯಿಯವರ ಅಂತ್ಯಕ್ರಿಯರಗಾಗಿ ಈ ಐದು ನೂರು ರೂಪಾಯಿ."

    ಇಬ್ಬರೂ

    Enjoying the preview?
    Page 1 of 1