Discover millions of ebooks, audiobooks, and so much more with a free trial

Only $11.99/month after trial. Cancel anytime.

Parimala
Parimala
Parimala
Ebook484 pages5 hours

Parimala

Rating: 2 out of 5 stars

2/5

()

Read preview

About this ebook

Yandamoori Veerendranath, is a famous Telugu novelist. He had written many social, fiction, super natural thriller stories and novels. Hailing from Andhra Pradesh state in India, he influenced younger generations with his socially relevant writings. In his writings he addresses many of the important social problems in India like poverty, prejudices, and superstitions, and encourages people to be socially responsible. He successfully bridges the idealistic and the popular styles of literature.
LanguageKannada
Release dateAug 12, 2019
ISBN9789385545689
Parimala

Read more from Yandamoori Veerendranath

Related to Parimala

Related ebooks

Reviews for Parimala

Rating: 2 out of 5 stars
2/5

1 rating0 reviews

What did you think?

Tap to rate

Review must be at least 10 words

    Book preview

    Parimala - Yandamoori Veerendranath

    http://www.pustaka.co.in

    ಪರಿಮಳ

    Parimala

    Author :

    ಯಂಡಮೂರಿ ವೀರೇಂದ್ರನಾಥ್

    Yandamoori Veerendranath

    For more books

    http://www.pustaka.co.in/home/author/yandamoori-veerendranath

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಯಂಡಮೂರಿ ವೀರೇಂದ್ರನಾಥ್

    ಪರಿಮಳ

    ಕಾದಂಬರಿ

    ಅನುವಾದ

    ಆರ್.ವಿ. ಕಟ್ಟೀಮನಿ

    1

    ಟೈಮ್ ಎಷ್ಟಾಯ್ತು, ಡಾಕ್ಟರ್ ರೂಥ್ ಕೇಳಿದ.

    ವಾಚ್ ನೋಡಿದ ಮೋಹನ್, ಇನ್ನೂ ಅರ್ಧಗಂಟೆ ಟೈಮಿದೆ, ಎಂದು ಹೇಳಿದ.

    ಆ ನಂತರ ಡಾಕ್ಟರ್ ರೂಥ್ ಏನೂ ಕೇಳಲಿಲ್ಲ. ಮೋಹನನೂ ಏನೂ ಹೇಳಲಿಲ್ಲ. ಇಬ್ಬರ ನಡುವೆ ಆದ್ರ್ರತೆಯಿಂದಾಗಿ ಸ್ತಬ್ಧತೆ ಏರ್ಪಟ್ಟಿತ್ತು. ಸ್ತಬ್ಧತೆಗೆ ಆದ್ರ್ರತೆ ಕಾರಣವಾಗಿದ್ದರೆ, ಆ ಆದ್ರ್ರತೆಗೆ ಕಾರಣ ಬೀಳ್ಕೊಡುಗೆಯಾಗಿತ್ತು. ಅರ್ಧಗಂಟೆಯಲ್ಲಿ ಡಾಕ್ಟರ್ ರೂಥ್ ಬ್ರಾಡ್‍ಫೋರ್ಡ್ ಅಮೇರಿಕಾಗೆ ಹೋಗಲು ವಿಮಾನ ಹತ್ತಲಿದ್ದ. ರೂಥ್‍ನ ಕೈಯಲ್ಲಿದ್ದ ಸಿಗರೇಟು ಹೊಗೆಯುಗುಳುತ್ತಿತ್ತು. ಮೋಹನ್ ಕೈಯಲ್ಲಿ ಹಿಡಿದಿದ್ದ ಕಾರಿನ ಕೀ ಚೈನನ್ನು ಗಿರ್ರನೆ ತಿರುಗಿಸುತ್ತಾ ಮೌನವಾಗಿ ಕುಳಿತಿದ್ದ. ಇಬ್ಬರಿಗೆ ಕೊಂಚ ದೂರದಲ್ಲಿ ನಾಲ್ಕು ಸೂಟ್‍ಕೇಸ್‍ಗಳು-ಎರಡು ದೊಡ್ಡವು ಎರಡು ಸಣ್ಣವು ಇದ್ದವು.

    ಇಬ್ಬರ ಕೈಗಳಲ್ಲೂ ಕೆಲವು ಫೋಟೋಗಳಿದ್ದವು. ಅವರ ದೃಷ್ಟಿ ಆ ಫೋಟೋಗಳ ಮೇಲಿದ್ದರೆ, ಮನಸ್ಸುಗಳು ಆ ಫೋಟೋಗಳಲ್ಲಿನ ಸನ್ನಿವೇಶವನ್ನು ಮತ್ತೆ ಮತ್ತೆ ಕಣ್ಮುಂದೆ ಮೂಡಿಸಿಕೊಳ್ಳುತ್ತಿದ್ದವು.

    ಡಾಕ್ಟರ್ ರೂಥ್ ಬ್ರಾಡ್‍ಬೋಡ್ ಅಮೇರಿಕನ್, ಕ್ರಿಮಿನಾಲಜಿಯಲ್ಲಿ ನಿಪುಣನಾದ ಆತನನ್ನು ಸಿ.ಬಿ.ಐ.ಗೆ ಹೊಸ ಹೊಸ ವಿಧಾನಗಳನ್ನು ಕಲಿಸುವುದಕ್ಕೋಸ್ಕರ ಸರಕಾರ ಕರೆಸಿತ್ತು. ಭಾರತವೆಂದರೆ ಅಪರಿಮಿತವಾದ ಅಭಿಮಾನವಿದ್ದ ಆತ ತಕ್ಷಣವೇ ಅದಕ್ಕೊಪ್ಪಿಕೊಂಡು, ಭಾರತಕ್ಕೆ ಬಂದು ದೆಹಲಿಯಲ್ಲಿದ್ದು ಎರಡು ತಿಂಗಳು ಸಿ.ಬಿ.ಐ.ಗೆ ತರಬೇತಿ ಕೊಟ್ಟಿದ್ದ. ‘ನಿಮ್ಮ ತರಬೇತಿಯ ಅನುಭವಗಳೇನು?’ ಎಂದು ಯಾರಾದರೂ ಪ್ರಶ್ನಿಸಿದರೆ ನನ್ನಿಂದ ಸಿ.ಬಿ.ಐ. ಅಧಿಕಾರಿಗಳು ಏನಾದ್ರೂ ಕಲಿತರೋ, ಇಲ್ವೋ ನಂಗೆ ತಿಳಿಯದು. ಆದರೆ ಅವರ ಸೋಮಾರಿತನ, ನಿರ್ಲಿಪ್ರತೆಯ ಗುಣ ನನಗಂಟಿಕೊಂಡಿವೆ ಏನೋ ಅಂತ ಹೆದರಿಕೆಯಾಗ್ತಿದೆ, ಎಂದು ನಗುತ್ತಾ ನುಡಿಯುತ್ತಿದ್ದ.

    ದೆಹಲಿಯಲ್ಲಿ ಜರುಗಿದ ಸಮಾವೇಶವೊಂದಕ್ಕೆ ಹಾಜರಾಗಲೆಂದು ಹೋಗಿದ್ದ ಮೋಹನ್‍ಗೆ ಹೋಟೆಲ್‍ನಲ್ಲಿ ಡಾಕ್ಟರ್ ರೂಥ್ ಪರಿಚಯವಾಗಿದ್ದ. ಇಬ್ಬರವು ಪಕ್ಕಪಕ್ಕದ ರೂಮುಗಳು. ಇಬ್ಬರೂ ಬೆಳಗಿನ ಜಾವ ನಾಲ್ಕು ಗಂಟೆಗೆದ್ದು ಜಾಗಿಂಗ್‍ಗೆ ಹೋಗುತ್ತಿದ್ದರು. ನಾಲ್ಕು ದಿನ ಪರಸ್ಪರ ಒಬ್ಬರನ್ನೊಬ್ಬರು ನೋಡಿಕೊಂಡರು. ‘ಪಕ್ಕದ ರೂಮಿನಲ್ಲಿರೋ ವ್ಯಕ್ತಿ’ ಎಂದುಕೊಂಡರಾದರೂ ಮಾತಾಡಿಸಿರಲಿಲ್ಲ. ಐದನೇ ದಿನ ಇಬ್ಬರೂ ಹಠಾತ್ತನೆ ಒಂದೇ ಬಾರಿಗೆ ಕೋಣೆಗಳೊಳಗಿಂದ ಹೊರಬಂದರು. ‘ಹಾಯ್’ ಎಂದರೆ ‘ಹಾಯ್’ ಎಂದು ನುಡಿದಿದ್ದರು. ‘ಗುಡ್ ಮಾರ್ನಿಂಗ್’ ಎಂದ ರೂಥ್ ವಿಶ್‍ಗೆ ಪ್ರತಿಯಾಗಿ ಮೋಹನ್ ‘ವೆರಿಗುಡ್ ಮಾರ್ನಿಂಗ್’ ಎಂದಿದ್ದ.

    ನಾನು ರೂಥ್... ರೂಥ್ ಬ್ರಾಡ್‍ಫೋಡ್.

    ನಾನು ಮೋಹನ್, ಶಶಿಮೋಹನ್, ಎಂದು ಒಬ್ಬರನ್ನೊಬ್ಬರು ಪರಸ್ಪರ ಪರಿಚಯಿಸಿಕೊಂಡಿದ್ದರು. ಇಬ್ಬರೂ ಕೂಡಿ ಏಳು ಕಿಲೋಮೀಟರ್ (ಹೋಗ-ಬರ ಮುರೂವರೆ ಕಿಲೋ ಮೀಟರ್‍ಗಳಂತೆ) ಜಾಗಿಂಗ್ ಮಾಡಿದ್ದರು.

    ಇಬ್ಬರೂ ಯೋಗಾಸನ ಹಾಕಿದ್ದರು. ಅಮೇರಿಕನ್ನನೊಬ್ಬ ಯೋಗ ಪ್ರಾಕ್ಟೀಸ್ ಮಾಡುವುದು ಮೋಹನ್‍ನಿಗೆ ಆಶ್ಚರ್ಯವುಂಟು ಮಾಡಿದ್ದರೆ, ಸಿ.ಬಿ.ಐ. ಅಧಿಕಾರಿಗಳು ಮಾಡದ ಜಾಗಿಂಗ್, ಯೋಗಾ ಪ್ರಾಕ್ಟೀಸ್‍ನ್ನು ಸೇಲ್ಸ್ ಮ್ಯಾನೇಜರ್‍ನೊಬ್ಬ ಮಾಡುತ್ತಿರುವುದು ರೂಥ್‍ನನ್ನು ಚಕಿತಗೊಳಿಸಿತ್ತು. ಯೋಗಾನುಯೋಗವೇನೋ ಎನ್ನುವಂತೆ ಆ ದಿನ ರವಿವಾರವಾಗಿತ್ತು. ಇಬ್ಬರೂ ತಮಗೆ ಬೇಕಾದವರಿಂದ ದೂರವಿದ್ದುದರಿಂದ ಆ ದಿನವೆಲ್ಲ ಒಟ್ಟಾಗಿಯೇ ಕಳೆದರು. ಎದುರಿನ ವ್ಯಕ್ತಿಯ ಬಗೆಗೆ ಗೌರವ, ಆಸಕ್ತಿ ತೋರಿಸಬಲ್ಲ ವ್ಯಕ್ತಿಗಳಿಗೆ ಆತ್ಮೀಯತೆ ಬೆಳೆಸಿಕೊಳ್ಳಲು ಅಷ್ಟು ಮಾತ್ರದ ಸಮಯ ಸಾಕಿತ್ತು. ಅದರಂತೆ ಡಾಕ್ಟರ್ ರೂಥ್ ಮತ್ತು ಮೋಹನ್ ತುಂಬಾ ಒಳ್ಳೇ ಸ್ನೇಹಿತರಾಗಿ ಬಿಟ್ಟಿದ್ದರು.

    ಮರುದಿನ ಜಾಗಿಂಗ್ ಮಾಡುತ್ತಿರುವಾಗ ಮೋಹನ್, ಈ ದಿನ ಸಾಯಂಕಾಲದ ಫ್ಲೈಟ್‍ಗೆ ಹೈದರಾಬಾದ್‍ಗೆ ಹೋಗ್ತಿದೀನಿ, ಎಂದ.

    ಐ ಸೀ. ಐ. ಲೈಕ್ ಆಂಧ್ರಾ, ಈ ಮಾತನ್ನು ರೂಥ್ ಅಲ್ಲಿಗೆ ಬಹಳಷ್ಟು ಸಲ ಹೇಳಿದ್ದ. ಅದಕ್ಕೇ ಈ ಸಲ ಮೋಹನ್, ಥ್ಯಾಂಕ್ಸ್ ಎನ್ನದೆ ಬರೀ ಮುಗುಳ್ನಕ್ಕ. ಬೆಳಗಿನ ದೆಹಲಿಯ ವಾತಾವರಣ ಮೋಹನ್‍ಗೆ ತುಂಬಾ ಹಿಡಿಸಿತ್ತು. ಮುಖ್ಯವಾಗಿ ಬಣ್ಣ ಬಣ್ಣದ, ದೊಡ್ಡ ದೊಡ್ಡ ರುಮಾಲುಗಳನ್ನು ಸುತ್ತಿಕೊಂಡು ಸೈಕಲ್ ಮೇಲೆ ಹಾಲಿನ ಬಿಂದಿಗೆಗಳನ್ನು ಸಾಗಿಸುತ್ತಿದ್ದ ರೈತನನ್ನು ನೋಡುವುದು ತುಂಬಾ ಇಷ್ಟ ದೃಶ್ಯವಾಗಿತ್ತು.

    ನನ್ನ ತರಬೇತಿ ಇನ್ನೂ ಹತ್ತು ದಿನಗಳಿರುತ್ತೆ. ಎಂದ ರೂಥ್.

    ಜಾಗಿಂಗ್‍ನಿಂದ ಉಂಟಾದ ಆಯಾಸದಿಂದ ಮೋಹನ್‍ಗೆ ಬಾಯಿ ತೆರೆಯುವುದೇ ಕಷ್ಟವಾಗಿತ್ತು. ‘ಹಾಗಾ’ ಎನ್ನುವಂತೆ ಮುಗುಳ್ನಗುತ್ತಾ ರೂಥ್‍ನತ್ತ ನೋಡಿದ. ಮೂಗಿನಿಂದ ಹೊರಬರುತ್ತಿದ್ದ ಬಿಸಿಯುಸಿರು ಹೊರ ಬರುತ್ತಿರುವಂತೆಯೇ ಹೊಗೆಯ ರೂಪ ತಾಳುತ್ತಿರುವುದು ನೋಡಲು ಅವನಿಗೆ ಚೆನ್ನೆನಿಸುತ್ತಿತ್ತು.

    ರೂಥ್ ದೂರದಲ್ಲಿ ಎತ್ತಲೋ ನೋಡುತ್ತಾ ಹೋಗುತ್ತಿದ್ದವನು, ನೀವೇನೂ ಅಂದ್ಕೊಳ್ಳದಿದ್ದಲ್ಲಿ ನಾನು ನನ್ನ ತರಬೇತಿ ಮುಗಿದ ನಂತರ ಹೈದರಬಾದ್‍ಗೆ ಬರ್ತೀನಿ. ಎಂದ.

    ಓಡಿತ್ತಿದ್ದ ಮೋಹನ್ ನಿಂತು, ಮೂಗಿನಿಂದ ಉಸಿರಾಡುವುದು ಕಷ್ಟವಾದಂತೆನಿಸಿ ಬಾಯಿಂದ ಜೋರಾಗಿ ಉಸಿರೆಳುದುಕೊಂಡ. ರೂಥ್ ಕೂಡ ನಿಂತುಕೊಂಡು ಮೋಹನನ್ನು ಕಣ್ಣು ಸಂಕುಚಿಸಿ ನೋಡಿದ. ಚಳಿಗೋ, ಮತ್ಯಾವುದಕ್ಕೋ ಮೋಹನನ ಕಣ್ಣುಗಳಲ್ಲಿ ನೀರು ಮೂಡಿತು.

    ಐ ಆಮ್ ಸಾರಿ ಫ್ರೆಂಡ್ ಎಂದ, ಕ್ಷಮಾಪಣೆ ಕೇಳಿಕೊಳ್ಳತ್ತಿರುವವನಂತೆ.

    ಡಾಕ್ಟರ್ ರೂಥ್‍ಗೆ ಕೊಂಚ ಕಸಿವಿಸಿಯಾಯ್ತು. ಇನ್ನೊಬ್ಬರನ್ನು ನೋಯಿಸುವುದು ಒಬ್ಬ ಅಮೇರಿಕನ್ ಮಾಡುವ ಕೆಲಸವಾಗಿರಲಿಲ್ಲ. ಅದಕ್ಕೇ ಮೋಹನ್‍ನ ಕಣ್ಣುಗಳಲ್ಲಿ ನೀರು ಮೂಡಿದ್ದನ್ನು ಕಂಡು ಕೊಂಚ ಗಾಬರಿಗೊಂಡ.

    ಮೊದಲು ನಾನೇ ಆಹ್ವಾನಿಸಬೇಕಿತ್ತು. ಆದರೆ ಈ ರೀತಿ ಮಾಡದಿರುವುದಕ್ಕೆ ನನಗೆ ತುಂಬಾ ನಾಚಿಕೆಯಾಗ್ತಿದೆ, ಎಂದು ಮತ್ತೆ ಮೋಹನನೇ ನುಡಿದ. ಆ ವಿಶಾಲವಾದ ರಸ್ತೆಯ ಮೇಲೆ ಅವರಿಬ್ಬರೇ ಇದ್ದರು. ಅವನು ಎಷ್ಟು ನಾಚಿಕೊಂಡಿದ್ದನೆಂಬುದನ್ನು ಅವನ ಮುಖ, ಅದಕ್ಕಿಂತಲೂ ಹೆಚ್ಚಾಗಿ ಅವನು ನಿಂತಿರುವ ರೀತಿಯೇ ಹೇಳುತ್ತಿದ್ದವು.

    ಕೆಂಪಗಿದ್ದ ಆ ಅಮೇರಿಕನ್ ಮುಖ ಮತ್ತಷ್ಟು ಕೆಂಪೇರಿತು. ‘ಕ್ರಿಮಿನಾಲಜಿ’ಯನ್ನು ಪರಿಪೂರ್ಣವಾಗಿ ಅರ್ಥೈಸಿಕೊಂಡಿದ್ದ ಡಾಕ್ಟರ್ ರೂಥ್ ನಾನು... ನಿಮ್ಮನ್ನ... ಏನೋ... ಇಬ್ಬಂದಿ ಎನ್ನುತ್ತಿರುವಂತೆಯೇ, ಇಲ್ಲ ಇಲ್ಲ. ಡಾಕ್ಟರ್ ರೂಥ್... ಇಲ್ಲಿಯವರೆಗೂ ನಾವು ಕೇವಲ ಪರಿಚಯಸ್ತರೇ. ಆದರೆ ಇವತ್ತಿನಿಂದ ನಾವು ಸ್ನೇಹಿತರು, ಎಂದು ಹೃತ್ಪೂರ್ವಕವಾಗಿ ನುಡಿದ ಮೋಹನ್.

    ಡಾಕ್ಟರ್ ರೂಥ್ ಹೃದಯದ ಮಾತನ್ನು ಗ್ರಹಿಸದವನೇನಾಗಿರಲಿಲ್ಲ. ಮೃದು ಧ್ವನಿಯಲ್ಲಿ ಥ್ಯಾಂಕ್ಸ್ ಎಂದ.

    ನಂತರ... ಇಬ್ಬರ ಬೂಟುಗಳ ಸದ್ದು ದೆಹಲಿಯ ರಸ್ತೆಯ ಮೇಲೆ ಲಯಬದ್ಧವಾಗಿ ಕೇಳಿಬರತೊಡಗಿತು.

    *    *    *

    ಹೈದರಾಬಾದ್‍ಗೆ ಬಂದ ಮೇಲೆ ಕೂಡ ಮೋಹನನ್ನು ರೂಥ್ ಉಂಟು ಮಾಡಿದ ಸ್ನೇಹಸ್ಪಂದನದ ಗುಂಗಿನಲ್ಲೇ ಇದ್ದ. ಎಂದಿನಂತೆಯೇ ಅವ ಹೆಂಡತಿ ಪರಿಮಳ ವಿಮಾನ ನಿಲ್ದಾಣಕ್ಕೆ ಅವನನ್ನು ಬರಮಾಡಿಕೊಳ್ಳಲು ಬಂದಿದ್ದಳು.

    ವಿಮಾನದಿಂದ ಹೊರಬಿದ್ದ ಮೋಹನನ ಕಣ್ಣುಗಳು ಪರಿಮಳಳಿಗೋಸ್ಕರ ಹುಡುಕಾಡಿದವು. ಅವನಿಗೆ ಪರಿಮಳ ಕಂಡು ಬರಲಿಲ್ಲ. ತೀರಾ ಹತ್ತಿರ ಬಂದ ನಂತರ ಅವಳನ್ನು ಗುರುತು ಹಿಡಿದು ಪರಿಮಳಾನಾ! ಎಂದು ಆಶ್ಚರ್ಯಪಟ್ಟ.

    ಪರಿಮಳ ಆ ರೀತಿ ಆಶ್ಚರ್ಯಪಡುವಂತಾಗಿದ್ದಳು. ಪರಿಮಳಳಿಗೆ ಉದ್ದವಾದ ಕೂದಲಿತ್ತು. ಆದರೆ ಅವಳನ್ನು ಬಾಬ್ಡ್ ಹೇರ್‍ನಲ್ಲಿ ನೋಡಬೇಕೆಂಬುದು ಅವನ ಬಹು ದಿನದ ಕೋರಿಕೆಯಾಗಿತ್ತು. ‘ಅದೇನು ಆಸೆ ನಂಗಿಷ್ಟವಿಲ್ಲ’ ಎಂದು ಆಗ ಹೇಳಿ ನಿರಾಕರಿಸಿದ್ದಳು.

    ನಿನ್ನ ಮುಖಕ್ಕೆ ಬಾಬ್ ಕಟ್ ಚೆನ್ನಾಗಿರುತ್ತೆ ಪರೀ, ಎಂದು ಅವಳ ಉದ್ದನೆಯ ಕೂದಲು ನೇವರಿಸುತ್ತಾ ಹೇಳಿದ್ದ. ಪರಿಮಳ ನಕ್ಕು ಸುಮ್ಮನಾಗಿದ್ದಳು. ಮೋಹನ್ ಮಾತ್ರ ಆ ವಿಷಯವನ್ನು ಮರೆತುಬಿಟ್ಟಿದ್ದ. ಈಗ ಹತ್ತು ದಿನಗಳ ವಿರಹದ ನಂತರ ಗಂಡನನ್ನು ಭೇಟಿಯಾಗಲಿದ್ದ ಅವಳು ಬಾಬ್ಡ್ ಹೇರ್‍ನಲ್ಲಿದ್ದಳು. ಅದಕ್ಕೇ ಮೋಹನ್‍ಗೆ ಅವಳನ್ನು ದೂರದಿಂದ ಗುರುತಿಸಲಾಗಿರಲಿಲ್ಲ.

    ಎಷ್ಟು ನಾಚಿಕೆಪಡಕೂಡದೆಂದುಕೊಂಡರೂ ಪರಿಮಳಳಿಗೆ ನಾಚಿಕೆಯನ್ನು ಗೆಲ್ಲಲಾಗಲಿಲ್ಲ. ‘ಹಾಯ್...’ ಎಂದಳು, ಕೊಂಚ ನಾಚುತ್ತಲೇ.

    ಮೋಹನ್ ಮಾತ್ರ ಕೊಂಚ ಹೊತ್ತು ಮಿನುಗುಗಂಗಳಿಂದ ಅವಳನ್ನೇ ನೋಡಿದ. ನಂತರ ಅಭಿಮಾನದಿಂದ ಕೈ ಹಿಡಿದು ಒತ್ತಿದ. ಹತ್ತು ದಿನಗಳ ನಂತರ ಹತ್ತು ಜನರಲ್ಲಿ ಗಂಡನ ಸ್ಪರ್ಶ ಯಾವ ಸ್ತ್ರೀಗಾದರೂ ಪುಳಕವನ್ನುಂಟು ಮಾಡುತ್ತದೆ. ಪರಿಮಳ ತಟಕ್ಕನೆ ಕೈ ಬಿಡಿಸಿಕೊಂಡಳು. ಅವನು ಅವಳ ಭುಜದ ಸುತ್ತಲೂ ಜರ್ಕಿನ್ ಹೊದಿಸಿ ತಲೆ ಜಾಡಿಸಿ ಮೈ ಮುರಿದುಕೊಂಡ.

    ತನ್ನ ಗಂಡ ತನ್ನ ಮೇಲೆ ತೋರಿಸಿದ ಆದರಾಭಿಮಾನಕ್ಕೆ ಪರಿಮಳ ಆನಂದಿಸಿದ್ದು ಅಲ್ಲಿಯವರೆಗಷ್ಟೇ. ಆ ನಂತರ ಮೋಹನನ ಪ್ರತಿ ಮಾತೂ ಅವಳಿಗೆ ಬೇಸರವೆಂದು ತೋಚಿತು. ಅವನಾಡಿದ ಪ್ರತಿ ಮಾತೂ ರೂಥ್‍ನ ಬಗೆಗೇ...

    ಮೋಹನನನ್ನು ಅಷ್ಟು ಆಕರ್ಷಿಸಿದ ರೂಥ್‍ನ ಬಗೆಗೆ ಅವಳಿಗೆ ಮೊದಲು ಬೇಸರದೊಂದಿಗೆ ಕೊಂಚ ಅಸೂಯೆಯೆನಿಸಿದರೂ, ಮೋಹನನ ಬಾಯಿಂದ ರೂಥ್‍ನ ಸದ್ವರ್ತನೆ, ಆತನ ಅಭಿಪ್ರಾಯಗಳನ್ನು ಕೇಳಿದ ಮೇಲೆ, ಅವು ಬೇಸರವನ್ನು ಕಡಿಮೆ ಮಾಡಿದವು.

    ರೂಥ್ ಹೈದರಾಬಾದ್‍ನಲ್ಲಿ ಮೊಟ್ಟ ಮೊದಲ ಬಾರಿಗೆ ಬಂದಿಳಿಯುವ ಕಾಲಕ್ಕೆ ಪರಿಮಳಳಿಗೆ ಆತನ ಮೇಲೆ ಬಹಳಷ್ಟು ಸದಭಿಪ್ರಾಯ, ಅದಕ್ಕೂ ಮಿಗಿಲಾದ ಅಭಿಮಾನ ಏರ್ಪಟ್ಟಿದ್ದವು. ಮೋಹನ್ ಹೆಂಡತಿಗೆ ಆತನ ಬಗ್ಗೆ ಅಷ್ಟರ ಮಟ್ಟಿಗೆ ಹೇಳಿದ್ದ. ಅಷ್ಟರ ಮಟ್ಟಿಗೆ ಅವನು ಆತನಿಂದ ಪ್ರಭಾವಿತನಾಗಿದ್ದ. ರೂಥ್ ಬರುವ ದಿನ ಇಬ್ಬರೂ ತುಂಬಾ ಉತ್ಸಾಹದಲ್ಲಿದ್ದರು. ಮೋಹನ್ ದಿನವೂ ಫೋನ್‍ನಲ್ಲಿ ಆತನೊಂದಿಗೆ ಮಾತನಾಡುತ್ತಲೇ ಇದ್ದ. ಎರಡನೇ ದಿನವೇ ರೂಥ್‍ನೊಂದಿಗೆ, ನಿನ್ನ ಬಗ್ಗೆ ನನ್ನ ಹೆಂಡತಿಗೆ ಹೇಳಿದೀನಿ, ಎಂದು ಹೇಳಿ ಫೋನ್ ಪರಿಮಳಳ ಕೈಗೆ ಕೊಡಹೋಗುತ್ತಾ ಅವಳನ್ನು ಆತನೊಂದಿಗೆ ಮಾತಾಡೆನ್ನುವಂತೆ ಸೂಚಿಸಿದ.

    ಪರಿಮಳ ಯಾಕೋ ಮಾತಾಡದೆಂಬ ನಿರ್ಣಯ ತೆಗೆದುಕೊಂಡು, ತಟಕ್ಕನೆ, ನಾನು ಮಾತಾಡೋದಿಲ್ಲ" ಎಂದುಬಿಟ್ಟಳು.

    ಯಾಕೆ?

    ಆತ ಬಂದ್ಮೇಲೆಯೇ ಮಾತಾಡ್ತೀನಿ...

    *    *    *

    ವಿಮಾನದ ಬಾಗಿಲ ಬಳಿ ಡಾಕ್ಟರ್ ರೂಥ್ ಕಾಣಿಸಿದೊಡನೆಯೇ ಮೋಹನ್, ‘ಹಾಯ್’ ಎನ್ನುತ್ತಾ ಜೋರಾಗಿ ಕೈ ಬೀಸಿದ. ಮೋಹನ್ ರೂಥ್‍ನ ಬಗೆಗೆ ಎಷ್ಟರ ಮಟ್ಟಿಗೆ ಸ್ಪಂದಿಸುತ್ತಿರುವನೋ ರೂಥ್ ಕೂಡ ಮೋಹನ್‍ನ ಬಗೆಗೆ ಅಷ್ಟೇ ಸ್ಪಂದಿಸುತ್ತಿರುವನೆಂಬುದನ್ನು ಪರಿಮಳ ಆ ಕ್ಷಣವೇ ಗುರುತಿಸಿದಳು.

    ರೂಥ್ ಬಲಗಾಲು ಹೊರಗಿಟ್ಟು ಅಲ್ಲಿಯೇ ನಿಂತುಕೊಂಡು, ಕಣ್ಣರಳಿಸಿ ದೂರದಲ್ಲಿದ್ದ ಜನಗಳ ಕಡೆ ನೋಡುತ್ತಿದ್ದ. ಗಗನ ಸಖಿಯರ ವಿನಂತಿಯಾಗಲಿ, ಹಿಂದಿದ್ದ ಪ್ರಯಾಣಿಕರ ಅಸಹನೆಯಾಗಲಿ ಆತನಿಗೆ ಕೇಳಿಸುತ್ತಿರಲಿಲ್ಲ. ಮೋಹನ್‍ನನ್ನು ನೋಡಿ ಕೈಬೀಸಿದ ನಂತರ ಆತ ಅಲ್ಲಿಂದ ಚಲಿಸಿದ.

    ಮೋಹನ್ ಹೇಳಿದ್ದಕ್ಕಿಂತಲೂ ತಾನು ಊಹಿಸಿದ್ದಕ್ಕಿಂತಲೂ ಉನ್ನತವಾಗಿ ರೂಥ್ ಪರಿಮಳಳಿಗೆ ಗೋಚರವಾದ. ಆತನದು ಸಾಧಾರನ ಅಮೇರಿಕನ್ ಆಕೃತಿ... ಚಿಕ್ಕ ನೀಲಿ ಕಣ್ಣುಗಳು, ಯಾವಾಗಲೂ ನಗುವನ್ನು ಸೂಸುತ್ತಿರುವಂತಹ ತುಟಿಗಳು, ಹೇಳುತ್ತಿರುವುದನ್ನು ವಿನಯವಾಗಿ ಕೇಳುತ್ತಿರುವಂತೆ ತಲೆಯಾಡಿಸುವ ವಿಧಾನ, ಇವೆಲ್ಲವನ್ನೂ ಒಂದು ಸಲ ನೋಡುತ್ತಿರುವಂತೆಯೇ ಆತ ಆತ್ಮೀಯನೆನ್ನುವಂತೆ ಭಾಸವಾಗಿದ್ದ, ಎದುರಿಗಿರುವ ವ್ಯಕ್ತಿ ತುಂಬಾ ಗೌರವಾನ್ವಿತ ಎನ್ನುವ ಧೋರಣೆಯನ್ನು ತೋರ್ಪಡಿಸಿಕೊಳ್ಳುತ್ತಿದ್ದ.

    ರೂಥ್ ದೂರದಿಂದಲೇ ಪರಿಮಳಳನ್ನು ನೋಡುತ್ತಾ ಬಂದ. ಆತ ಹತ್ತಿರ ಬಂದಾಗ ಶೇಕ್‍ಹ್ಯಾಂಡ್ ಕೊಡುವುದೋ, ಇಲ್ಲವೆ ಕೈ ಮುಗಿಯುವುದೋ ಎನ್ನುವ ಸಂದಿಗ್ಧತೆ ಪರಿಮಳಳಿಗುಂಟಾಯ್ತು. ಆದರೆ ರೂಥ್ ಅವಳಿಗೆ ಆ ಶ್ರಮ ತಪ್ಪಿಸಿದ. ಮೂರು ತಿಂಗಳಿಂದ ಭಾರತದಲ್ಲಿದ್ದ ಡಾಕ್ಟರ್ ರೂಥ್ ಎರಡೂ ಕೈ ಜೋಡಿಸಿ, ತುಂಬಾ ಸ್ಪಷ್ಟವಾಗಿ ಅಮೇರಿಕನ್ ಉಚ್ಚಾರದಲ್ಲಿ ನಮಸ್ತೇ ಎಂದ.

    ಪ್ರತಿಯಾಗಿ ಪರಿಮಳಳೂ ಕೈಜೋಡಿಸಿ, ‘ನಮಸ್ತೆ’, ಎಂದಳು.

    ಮೋಹನ್ ರೂಥ್‍ನ ಕೈ ಕುಲುಕಿ ಅಪ್ಪಿಕೊಂಡ. ಅವರು ಆತನನ್ನು ಹೋಟೆಲ್‍ನಲ್ಲಿಳಿದುಕೊಳ್ಳಲು ಬಿಡದೆ ನೇರವಾಗಿ ಮನೆಗೆ ಕರೆದೊಯ್ದರು. ಮನೆಯನ್ನು ನೋಡಿ, ರೂಥ್ ‘ಸಿಂಪಲ್ ಅಂಡ್ ಬ್ಯೂಟಿ’ ಎಂದು ಮೆಚ್ಚಿಕೊಂಡ. ಆ ಮನೆಗೆ ‘ಮೋಹನ ಪರಿಮಳವೆಂದು ಹೆಸರಿಟ್ಟುದುದನ್ನು ಗಮನಿಸಿ ಅದರ ಅರ್ಥವೇನೆಂದು ಕೇಳಿದ. ಅದರ ಅರ್ಥ, ಅಂತರಾರ್ಥ ವಿವರಿಸಲು ಮೋಹನ್, ಪರಿಮಳ ಬಹಳ ಕಷ್ಟಪಟ್ಟರು. ನಂತರ ಕೊಂಚ ನಾಚಿಕೊಂಡರು.

    ಮನೆ ಹಿಡಿಸದಿದ್ದರೆ, ಹೋಟಲ್‍ನಲ್ಲಿ..., ಎನ್ನುತ್ತಿರುವ ಮೋಹನನ ಮಾತನ್ನು ಅಷ್ಟಕ್ಕೇ ತುಂಡರಿಸಿದ ರೂಥ್, ಇಲ್ಲ... ಇಲ್ಲ... ನಾನಿಲ್ಲೇ ಇರ್ತೀನಿ. ನೀನು ತಳ್ಳಿದ್ರೂ ಕೂಡ, ಎಂದ ನಗುತ್ತಾ. ಮರುದಿನಕ್ಕೆಲ್ಲಾ ಆತ ಪರಿಮಳಳಿಗೆ ಕೂಡ ತುಂಬಾ ಆತ್ಮೀಯನಾಗಿಬಿಟ್ಟ. ಆತ ಅವಳು ಮಾಡುವ ಪ್ರತಿ ಕೆಲಸ, ಪ್ರತಿ ಅಡಿಗೆಯನ್ನು ತುಂಬಾ ಮೆಚ್ಚಿಗೆ, ಕುತೂಹಲದಿಂದ ಗಮನಿಸುತ್ತಿದ್ದ.

    ಕಾಫಿ ಚೆನ್ನಾಗಿದ್ಯಾ? ಸಕ್ರೆ ಸರಿಯಾಗಿದ್ಯಾ? ಎಂದು ಅವಳು ಕೇಳಿದರೆ ಓ... ಎಲ್ಲಾ ಸರಿಯಾಗಿದೆ ಎನ್ನುತ್ತಿದ್ದ. ಬೇಕೆಂದೇ ಸಕ್ಕರೆ ಹೆಚ್ಚು ಹಾಕಿ, ಈಗ ಹ್ಯಾಗಿದೆ? ಎಂದು ಕೇಳಿದಾಗ ಕೂಡ, ಫೈನ್, ತುಂಬಾ ಚೆನ್ನಾಗಿದೆ, ಎಂದ.

    ಸಕ್ಕರೆ ನಿಮಗೆ ಜಾಸ್ತಿಯಾಗಿಲ್ವಾ?

    ಆಗ ಡಾಕ್ಟರ್ ರೂಥ್ ನಕ್ಕು ಹೇಳಿದ, ನೀನು ಮಾಡಿದ ‘ಕ್ರೈಂ’ ಅರ್ಥ ಮಾಡಿಕೊಳ್ಳದವನೇನೂ ಅಲ್ಲ. ಆದರೆ... ಇಲ್ಲಿ ಹೀಗೆ ಕೂಡ ಕಾಫಿ ಮಾಡ್ತಾರೇನೋ ಅಂದ್ಕೊಂಡೆ.

    ಆತನ ಅಭಿರುಚಿಯಲ್ಲೂ ಅಮೇರಿಕನ್ ಮೂರ್ಖತನ ಅವಳಿಗೆ ನಗು ತರಿಸಿತ್ತು.

    ಮರುದಿನ ಬೆಳಿಗ್ಗೆ ಅವರಿಬ್ಬರೊಂದಿಗೆ ಟ್ರ್ಯಾಕ್ ಸೂಟ್‍ನಲ್ಲಿ ಜಾಗಿಂಗ್‍ಗೆಂದು ಹೊರಟ ಪರಿಮಳಳನ್ನು ನೋಡಿ ರೂಥ್ ಆಶ್ಚರ್ಯಪಟ್ಟ. ಮೂವರೂ ಆ ಮಾತು ಈ ಮಾತು ಆಡುತ್ತಾ, ಉಲ್ಲಾಸದಿಂದ ಜಾಗಿಂಗ್ ಮಾಡಿದರು. ಪರಿಮಳ ಸ್ವಿಮ್ಮಿಂಗ್‍ಗೆ ಬಂದಾಗ ಇನ್ನೂ ಆಶ್ಚರ್ಯಗೊಂಡ. ಅದಕ್ಕಿಂತಲೂ ಬಾರ್‍ನಲ್ಲಿ ಬಿಯರ್‍ನ ಗ್ಲಾಸ್ ಕೈಗೆತ್ತಿಕೊಂಡಾಗ ಮತ್ತೂ ಆಶ್ಚರ್ಯದಿಂದ ಬಾಯಿ ತೆರೆದ.

    ಪರಿಮಳ ನಕ್ಕು ಕೇಳಿದಳು: ಭಾರತೀಯ ಮಹಿಳೆ ಯಾವಾಗ ಇಷ್ಟು ಮುಂದುವರಿದ್ರು ಅಂತ ಆಶ್ಚರ್ಯನಾ ಡಾಕ್ಟರ್ ರೂಥ್?

    ಹೌದು. ಪರಪುರುಷರ ಮುಂದೆ ಬಂದು ಮಾತಾಡೋದಿಲ್ಲವೆಂದೂ, ಸೆರಗು ಹೊದ್ದುಕೊಂಡು ತಲೆ ಬಗ್ಗಿಸಿಕೊಂಡು ಉತ್ತರ ಹೇಳುತ್ತಾರೆಂದೂ, ಮನೆ ದಾಟಿ ಹೊರಗೆ ಬರುವುದಿಲ್ಲವೆಂದೂ... ಇನ್ನೂ ಹೀಗೇ ಏನೆಲ್ಲಾ..

    ಹೌದು ನೀವು ಹೇಳಿದ್ದು ಸರಿ. ಅದು ತುಂಬಾ ಅತಿಯಲ್ವೆ ಡಾಕ್ಟರ್ ರೂಥ್? ಆಫ್‍ಕೋರ್ಸ್ ಇದು ಕೂಡ ತುಂಬಾ ಅತಿಯಾಗುತ್ತೆ... ಎನ್ನುತ್ತಾ ಎತ್ತಕೊಂಡಿದ್ದ ಬಿಯರ್ ಗ್ಲಾಸನ್ನು ಮತ್ತೆ ಕೆಳಗಿಟ್ಟಳು. ಒಂದು ಕ್ಷಣ ಮೌನದ ನಂತರ ಮುಂದುವರೆಸಿದಳು, ಭಾರತೀಯ ಮಹಿಳೆ ಈಗೀಗಲಷ್ಟೇ ಅಜ್ಞಾನದ ಮುಸುಕನ್ನು ತೊಲಗಿಸಿಕೊಳ್ಳುತ್ತಿದ್ದಾಳೆ. ಈಗ ಭಾರತದ ಮಹಿಳೆಯರು ಬಹಳಷ್ಟು ಸ್ವೇಚ್ಛೆಯಿಂದ, ಹಾಯಾಗಿ ಗಂಡಸರೊಂದಿಗೆ ಕೂಡಿ ಬೆರೆತು ತಿರುಗುತ್ತಿದ್ದಾರೆ. ಪುರುಷ ಪ್ರಪಂಚವೆನ್ನುವುದು ಸ್ತ್ರೀ ಪುರುಷ ಪ್ರಪಂಚ ಆಗಿದೆ ಆಗುತ್ತಿದೆ. ಆದರೆ ಸಿಗರೇಟ್, ಕುಡಿತದಂತಹ ಹೆಸರಿನಲ್ಲಿರುವ ಚಟಗಳು ಭಾರತೀಯ ಮಹಿಳೆಯರನ್ನು ಇನ್ನೂ ಸೋಕಿಲ್ಲ-ಸೋಕಿದ್ದರೂ ಅದರ ಪ್ರಮಾಣ ಅತ್ಯಲ್ಪವೆನ್ನಬಹುದು.

    ರೂಥ್ ಆಶ್ಚರ್ಯದಿಂದ ನೋಡಿದ. ಇನ್ನು ರಹಸ್ಯವನ್ನು ಅಡಗಿಸಲು ತನ್ನಿಂದಾಗದೆನ್ನುವಂತೆ ಮೋಹನ್ ಹೇಳಿಬಿಟ್ಟ: ನೀನು ಕ್ರಿಮಿನಾಲಜಿ ಎಕ್ಸ್‍ಪರ್ಟ್ ಅಲ್ವೆ? ನಿನ್ನನ್ನ ಟೆಸ್ಟ್ ಮಾಡಿದ್ಲು. ಅವಳು ಕುಡಿಯೋದಿಲ್ಲ. ನೀನು ಹಿಡೀತಿಯೋ ಇಲ್ವೋ ನೋಡೋಣಾಂತ ಚಿಕ್ಕದೊಂದು ಆಟ ಆಡಿದ್ಲು, ಎನ್ನುತ್ತಾ ನಕ್ಕ.

    ಥ್ಯಾಂಕ್ ಗಾಡ್. ನನ್ನ ಅಭಿಪ್ರಾಯ ತಪ್ಪಾಗಲಿಲ್ಲ, ಎಂದು ಕುರ್ಚಿಯಲ್ಲಿ ರಿಲ್ಯಾಕ್ಸ್ ಆಗಿ ಹಿಂದಕ್ಕೊರಗುತ್ತಾ ಹೇಳಿದ ಡಾಕ್ಟರ್ ರೂಥ್.

    ಮರುದಿನ ಮೋಹನ್ ಆಫೀಸಿನಿಂದ ಬರುವಷ್ಟರಲ್ಲಿ ಪರಿಮಳ ಆನಂದದಿಂದ ಅವನನ್ನು ಎದುರುಗೊಂಡು, ಮೋಹನ್... ನನಗೆ ರೂಥ್ ಒಳ್ಳೊಳ್ಳೇ ಕ್ರಿಮಿನಲ್ಸ್ ಟ್ರಿಕ್ಸ್ ಹೇಳ್ಕೊಟ್ಟಿದ್ದಾನೆ, ಎಂದಳು.

    ಮಾಡುವಂತಹವೆ, ಹಿಡಿಯುವಂತಹವುಗಳಾ?

    ಮೋಹನ್ ಹೇಳತೊಡಗಿದ. ಪರಿಮಳ ನಡುನಡುವೆ ಅವನು ಮರೆತ ವಿಷಯಗಳನ್ನು ಎತ್ತಿ ಮಾತಾಡುತ್ತಿದ್ದಳು. ಡಾಕ್ಟರ್ ರೂಥ್ ಆನಂದಾಸಕ್ತಿಯಿಂದ ಅವರು ಹೇಳುತ್ತಿರುವುದನ್ನೆಲ್ಲಾ ಕೇಳುತ್ತಿದ್ದ. ಅವರು ಮಲಗುವಷ್ಟರಲ್ಲಿ ಕೋಳಿ ಕೂಗು ಕೊಂಚ ಸಮಯವಷ್ಟೆ ಉಳಿದಿತ್ತು.

    ಬೆಳಿಗ್ಗೆ ಏಳುತ್ತಿರುವಂತೆಯೇ ಪರಿಮಳಳಿಗೆ ಅಳು ಬಂದು ಬಿಟ್ಟಿತ್ತು. ಮೋಹನ್‍ನಿಗೂ ಆ ಬೆಳಗು ಕೊಂಚ ಬಾಧೆಯುಂಟು ಮಾಡುತ್ತಲೇ ಮೂಡಿತ್ತು. ಆ ಬೀಳ್ಕೊಡುಗೆ ಉಂಟು ಮಾಡುವ ನೋವು ರೂಥ್ ಏರ್‍ಪೋರ್ಟಿಗೆ ಹೋಗುವವರೆಗೆ ಕಡಿಮೆಯಾಗುವಂತಿರಲಿಲ್ಲ...

    ಟೈಮ್ ಎಷ್ಟು?, ರೂಥ್ ಮತ್ತೆ ಕೇಳಿದ.

    ವಾಚ್ ನೋಡಿದ ಮೋಹನ್ ನಿಧಾನವಾಗಿ ಹೇಳಿದ, ಟೈಮ್ ಆಗ್ತಾ ಬಂತು.

    ಪರಿಮಳ... ಪರಿಮಳ ಎಲ್ಲಿ? ರೂಥ್ ಕೇಳಿದ.

    ಮೋಹನ್ ತಮ್ಮ ಕೋಣೆಯತ್ತ ನೋಡಿ ಮೆಲ್ಲಗೆ ನಕ್ಕ. ಒಳಗೇ ಇದ್ದಾಳೆ ಎನ್ನುತ್ತಾ ಎದ್ದು ಬಾಗಿಲು ತಟ್ಟಿದ. ಇನ್ನು ಸಾಕು ಪರಿಮಳ ಟೈಮಾಗ್ತಾ ಇದೆ. ಬಾ.

    ರೂಥ್ ಕಣ್ಣರಳಿಸಿ ಆಶ್ಚರ್ಯದಿಂದ ನೋಡುತ್ತಿದ್ದ. ಬಾಗಿಲು ತೆರೆದುಕೊಂಡು ಹೊರಬಂದ ಪರಿಮಳಳ ಕಣ್ಣುಗಳು ಅತ್ತೂ ಅತ್ತೂ ಉಬ್ಬಿದ್ದವು.

    ಏನೀ ಸೆಂಟಿಮೆಂಟ್? .... ಎನ್ನುತ್ತಾ ಎದ್ದನಾದರೂ ಆತನ ಕಣ್ಣುಗಳೂ ಒದ್ದೆಯಾಗಿಬಿಟ್ಟವು.

    ಮನೆಯಿಂದ ಏರ್‍ಪೋರ್ಟಿಗೆ ಹತ್ತು ನಿಮಿಷಗಳ ದೂರವಿತ್ತು. ಏರ್‍ಪೋರ್ಟ್ ತಲುಪಿದ ಕಾಲುಗಂಟೆಯಲ್ಲಿ ‘ಚೆಕ್‍ಇನ್’ ಮುಗಿದು ಹೋಯ್ತು. ಮೂವರೂ ಲಾಂಜ್‍ನಲ್ಲಿದ್ದ ಕುರ್ಚಿಗಳಲ್ಲಿ ಕುಳಿತುಕೊಂಡರು. ಪರಿಮಳ ಸಾಧ್ಯವಾದಷ್ಟು ಗಂಭೀರತೆಯಿಂದ ಇರಲು ಪ್ರಯತ್ನಿಸುತ್ತಾ ಕರ್ಚೀಫನ್ನು ಬಾಯಿಗಡ್ಡವಾಗಿ ಹಿಡಿದುಕೊಂಡಿದ್ದಳು. ಮೂವರ ನಡುವೆ ಮಾತಿಗಿಂತಲೂ ಮೌನದ್ದೇ ಪ್ರಾಧ್ಯಾನ್ಯತೆಯಿತ್ತು.

    ರೂಥ್ ಸಿಗರೇಟ್ ಒಂದನ್ನು ಹೊತ್ತಿಸಿ ನುಡಿದ, ಪ್ಚ್... ಭಾರತದ ಮೇಲೆ ನನಗಿರೋ ಗೌರವ ಕಡಿಮೆಯಗಿದೆ ಮೋಹನ್.

    ಮೋಹನ್ ಪೆಟ್ಟು ತಿಂದವನಂತೆ ನೋಡಿಸ. ಅದನ್ನು ಗಮನಿಸಿದ ರೂಥ್ ಮುಂದುವರಿಸಿದ, ಸಾರಿ, ಸಾರಿ... ಯಾವ ವ್ಯಕ್ತಿಯ ಬಗೆಗೂ ನಾನು ಹೇಳ್ತಾ ಇಲ್ಲ. ಸಂಸ್ಕøತಿಯ ಬಗೆಗೆ, ಪ್ರವರ್ತನೆಯಲ್ಲಿನ ಮಾರ್ಪಾಡಿನ ಬಗೆಗಷ್ಟೇ ನನ್ನ ನಿರಾಶೇನ ತೋಡಿಕೊಳ್ತಿದೀನಿ. ಆಫ್‍ಕೋರ್ಸ್, ನಾನು ಹೆಚ್ಚಿಗೆ ಊಹಿಸಿಕೊಂಡಿದ್ದು ನನ್ನ ನಿರಾಶೆಗೆ ಕಾರಣವಾಗಿರಬಹುದು. ನಾನು ಹೆಚ್ಚಿಗೆ ಊಹಿಸಿಕೊಳ್ಳಲು ಕಾರಣ ಮಾತ್ರ-ಸೀತೆ.

    ಮೋಹನ್, ಪರಿಮಳ ಆತನತ್ತ ಹೊಸದಾಗಿ ನೋಡುತ್ತಿರುವಂತಿದೆ ನೋಡುತ್ತಿದ್ದರು. ಆತನ ಆಸಕ್ತಿಯನ್ನು ಪೂರ್ತಿಗೊಳಿಸುವಲ್ಲಿ ತಾವು ಮಾಡಿದ್ದೇನೂ ಇಲ್ಲವೆಂಬ ವಿಷಯ ಅವರಿಗೀಗ ತಿಳಿಯುತ್ತಿತ್ತು. ಸೀತೆ ಯಾರೆಂಬುದನ್ನು ಕೇಳಬೇಕೆಂದುಕೊಳ್ಳುವುದರೊಳಗೆಯೇ ರೂಥ್‍ನೇ, ಮತ್ತೊಂದು ಮುಖ್ಯ ವಿಷಯ ಮೋಹನ್, ಸೀತೆ... ಸೀತೆ, ಇಲ್ಲಿಯವಳೇ. ಅವಳು ನನ್ನ ಹೆಂಡತಿ. ಈಗಲ್ಲ ವಿಚ್ಛೇದನ ಪಡ್ಕೊಂಡಿದೀವಿ. ಅದಕ್ಕೆ ಕಾರಣ ನಾನು ಭಾರತೀಯ ಸ್ತ್ರೀಯನ್ನು ಅವಮಾನಿಸಿದ್ದು, ಎಂದ. ಇಬ್ಬರೂ ಮೌನವಾಗಿ ಕೇಳುತ್ತಿದ್ದರು. ರೂಥ್ ಮುಂದುವರಿಸಿದ, ಸೀತೆಯ ಸೌಂದರ್ಯ, ಸೌಜನ್ಯ, ನಯ, ನೋಡಿ ಸ್ನೇಹ ಬೆಳೆಸಿ, ಪ್ರೇಮಿಸಿ, ಮದುವೆ ಮಾಡ್ಕೊಂಡೆ. ಸ್ವಲ್ಪ ಕಾಲ ನಾವಿಬ್ರೂ ತುಂಬಾ ಆನಂದದಿಂದ ಕಾಲ ಕಳೆದ್ವು. ಆದರೆ ನನ್ನ ಅಮೇರಿಕನ್ ದೃಷ್ಟಿ ನನ್ನ ಜೀವನವನ್ನು ನಾಶಗೊಳಿಸಿತು. ಸೀತೆ ಪರಪುರುಷರೊಂದಿಗೆ ಮಾತನಾಡಿದರೇನೇ, ಯಾಕೋ ನನಗೆ ಅನುಮಾನ ಉಂಟಾಗುತ್ತಿತ್ತು. ಅದು ಬರುಬರುತ್ತಾ ನನ್ನ ನಡುವಿನ ದೂರವನ್ನು ಬೆಳೆಸಿತು. ನನ್ನ ದುರ್ಮಾರ್ಗದ ಬುದ್ಧಿ ಹೊರಬೀಳಲು ಬಹಳ ಕಾಲವೇನೂ ಹಿಡಿಯಲಿಲ್ಲ. ಸೀತೆ ಅಸಹ್ಯ ಪಟ್ಟುಕೊಂಡು ನನ್ನಿಂದ ದೂರವಾದಳು.

    ಮೋಹನ್, ಪರಿಮಳ ಇಬ್ಬರೂ ಕಿವಿಗೊಟ್ಟು ಕೇಳುತ್ತಿದ್ದರು. ಸುತ್ತಲಿನ ರಣಗೋಣ ಧ್ವನಿ ಅವರಿಗೆ ಕೇಳಿಸುತ್ತಿದ್ದಿಲ್ಲ. ರೂಥ್‍ನನ್ನು ಅಸಹ್ಯಪಟ್ಟುಕೊಂಡು ದೂರ ಮಾಡಿದ ಸೀತೆಯ ಅಸ್ಪಷ್ಟ ರೂಪವನ್ನು ಊಹಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಫ್ಲೈಟ್ ಅನೌನ್ಸ್‍ಮೆಂಟ್ ಕೇಳಿ ಬಂತು. ರೂಥ್ ಎದ್ದು ನಿಂತ. ಸೂಟ್‍ಕೇಸ್‍ಗಳು ಆಗಲೇ ಹೊರಟು ಹೋಗಿದ್ದವು. ಪ್ರಯಾಣಿಕರು ಒಬ್ಬೊಬ್ಬರಾಗಿ ತಮ್ಮವರಿಂದ ಬೀಳ್ಕೊಂಡು ಹೊರಡತೊಡಗಿದರು.

    ನಾನು ಇನ್ನೂ ಸೀತೆಗೋಸ್ಕರ ಹುಡುಕ್ತಿದೀನಿ. ಪ್ಚ್... ಸಿಗೋದಿಲ್ಲಾಂತ ಗೊತ್ತು. ಆದರೂ ಅನ್ವೇಷಣೆ ಮಾಡ್ತಿದೀನಿ. ಅದಕ್ಕೇ ನಿನ್ನನ್ನು ಕೇಳಿ ಇಲ್ಲಿಗೆ ಬಂದೆ. ಥ್ಯಾಂಕ್ಸ್ ಮೋಹನ್, ಥ್ಯಾಂಕ್ಸ್ ಪರಿಮಳ... ಆದರೆ ಒಂದ್ವಿಷಯ. ಸೀತೆ ತೋರಿಸಿದ ಭಾರತ ಈಗಿಲ್ವೇನೋ ಎನ್ನಿಸ್ತಿದೆ. ಕಾಲ ಉರುಳಿದಂತೆಲ್ಲಾ ಭಾರತೀಯರು ಕೂಡ ಪಾಶ್ಚಿಮಾತ್ಯ ಸಂಸ್ಕøತಿಯಲ್ಲಿ ಬೆರೆತು ಹೋಗುತ್ತಾರೇನೋ? ಲೆಟಸ್ ಸೀ ಬೈ..., ಎನ್ನುತ್ತಾ ಕೈಗಳನ್ನು ಚಾಚಿದ.

    ಮೋಹನ್ ಆತ್ಮೀಯವಾಗಿ ಆತನನ್ನು ತಬ್ಬಿಕೊಂಡ. ಪರಿಮಳಳ ಕರವಸ್ತ್ರ ಒದ್ದೆಯಾಗಿ ಬಿಟ್ಟಿತ್ತು. ಮೋಹನನ ಅಪ್ಪುಗೆಯಿಂದ ಬಿಡಿಸಿಕೊಂಡ ರೂಥ್ ಪರಿಮಳಳ ಕಡೆ ಪ್ರೀತಿಯಿಂದ ನೋಡಿದ. ಅವಳ ಅಳು ಜಾಸ್ತಿಯಾಯ್ತು. ಆತ ಕೈಗಳನ್ನು ಚಾಚಿದ. ಅವಳು ಮೃದುವಾಗಿ ತಬ್ಬಿಕೊಂಡಳು. ಕೆನ್ನೆಯ ಮೇಲೆ ಮುತ್ತಿಡಬೇಕೆಂದುಕೊಂಡರೂ ರೂಥ್‍ನ ಮಾತುಗಳು ನೆನಪಾಗಿ ಆ ಪ್ರಯತ್ನ ಕೈಬಿಟ್ಟಳು. 

    ಮತ್ತೊಂದ್ಸಲ ಥ್ಯಾಂಕ್ಸ್. ಕೂಡಿ ಇದ್ದ ಸಮಯ ಸ್ವಲ್ಪವೇ ಆದರೂ ಶೋಧಿಸಿ ನೋಡಿದ ಅಂತರಂಗದ ಆಳ ಜಾಸ್ತಿಯೇ. ಏನು ನೋಡಿದೆವು ಅನ್ನೋದು ಮುಖ್ಯವಲ್ಲ. ಮನಸ್ಸು ಬಿಚ್ಚಿ ಏನೇನು ಹೇಳಿಕೊಂಡೆವು ಅನ್ನೋದು ಮುಖ್ಯ. ಅರ್ಥಮಾಡಿಕೊಂಡಿರುವುದನ್ನು ಎಷ್ಟರ ಮಟ್ಟಿಗೆ ಆಚರಿಸುತ್ತೇವೆ ಎನ್ನೋದು ಮುಖ್ಯಾತಿಮುಖ್ಯ. ನಿಮ್ಮಿಬ್ಬರನ್ನೂ ನಾನು ಮರೆಯಲಾರೆ. ನೀವಿಬ್ಬರು ನನ್ನನ್ನು ಮರೆಯೋದಿಲ್ಲಾಂತ ನನ್ನ ನಂಬಿಕೆ, ಎಂದು ಒಂದು ಕ್ಷಣ ಕಣ್ಣು ಮುಚ್ಚಿಕೊಂಡ. ಮುಖದಲ್ಲಿ ಅನುಕಂಪ ಮೂಡಿತ್ತು.

    ಕೊನೆಯದಾಗಿ ಅವರಿಂದ ಬೀಳ್ಕೊಂಡು ಅವರ ಕಡೆಯೇ ನೋಡುತ್ತಾ ವಿಮಾನದತ್ತ ಹೆಜ್ಜೆ ಹಾಕಿದ ಡಾಕ್ಟರ್ ರೂಥ್. ನಂತರದ ಹತ್ತು ನಿಮಿಷಗಳಿಗೆ ವಿಮಾನ ಮೆಲ್ಲಗೆ ಚಲಿಸತೊಡಗಿ ನಿಧಾನವಾಗಿ ಆಕಾಶಕ್ಕೆ ಹಾರಿ ಅಲ್ಲಿಂದ ಕಣ್ಮರೆಯಾಯ್ತು.

    ಮೋಹನ್ ವಿಮಾನ ಕಣ್ಮರೆಯಾಗುವವರೆಗೆ ಅತ್ತಲೇ ನೋಡುತ್ತಿದ್ದು, ಒಂದು ಸಲ ಗಾಢವಾಗಿ ನಿಟ್ಟುಸಿರಿಟ್ಟು, ಹಿಂದಿರುಗಲು ಸಿದ್ಧನಾಗುತ್ತಾ ಪರಿಮಳಳತ್ತ ನೋಡದೆಯೇ, ಪರಿಮಳ ಎಂದು ಕರೆದ. ಅವಳು ಮಾತನಾಡಲಿಲ್ಲ. ಮಾತಾಡುವುದಿಲ್ಲವೆಂದು ಗೊತ್ತಿದೇ ಅವನು ಕರೆದಿದ್ದ. ಒಂದು ಸಲ ಅವರು ತಮ್ಮ ತಾತನನ್ನು ಬೀಳ್ಕೊಡಲು ಬಸ್‍ಸ್ಟ್ಯಾಂಡಿಗೆ ಹೋಗಿದ್ದರು. ತುಂಬಾ ಆತ್ಮೀಯನಾದ ಆತನನ್ನು ಬೀಳ್ಕೊಂಡ ನಂತರ ಅದು ಬಸ್‍ಸ್ಟ್ಯಾಂಡ್ ಎನ್ನುವ ಪರಿವೆ ಇಲ್ಲದೆ ಪರಿಮಳ ಬಿಕ್ಕಿ ಬಿಕ್ಕಿ ಅತ್ತಿದ್ದಳು. ಅವಳು ಅಳುವುದನ್ನು ಮೋಹನನಿಂದ ನೋಡಲಾಗುತ್ತಿರಲಿಲ್ಲ. ಅದಕ್ಕೇ ಅವಳ ಕಡೆ ನೋಡದೆ ಕರೆದ.

    ಪರಿಮಳಳ ಬಿಕ್ಕಳಿಕೆ ಕೇಳಿಬರಲಿಲ್ಲ. ತಲೆ ತಿರುಗಿಸಿ ಅವಳತ್ತ ನೋಡಿದ. ಅವಳು ಅಳುತ್ತಿರಲಿಲ್ಲ. ಆದರೆ ಅವಳ ಮುಖದಲ್ಲಿ ಯಾವುದೋ ತೃಪ್ತಿ ಇತ್ತು. ಪರದೆಯ ಮೇಲೆ ‘ಶುಭಂ’ ಎನ್ನುವ ಅಕ್ಷರಗಳನ್ನು ನೋಡಿ ಆನಂದಿಸುವ ಪ್ರೇಕ್ಷಕಳ ಮುಖಭಾವ ಹೀಗೆಯೇ ಇರುತ್ತದೆ ಎಂದುಕೊಂಡ ಮೋಹನ್. ಅವನು ಗಂಭೀರವಾಗಿ ಹೋಗೋಣ್ವಾ?, ಎಂದು ಕೇಳಿದ. ಅವಳು ಏನೂ ಮಾತಾಡದೆ ‘ಬಾಬ್ಡ್ ಹೇರ್’ ಅನ್ನು ಒಂದು ಸಲ ನೇವರಿಸಿಕೊಂಡು ಹಿಂದಿರುಗಿದಳು. ವಿಮಾನ ನಿಲ್ದಾಣ ಖಾಲಿಯಾಗತೊಡಗಿತ್ತು. ಬೀಳ್ಕೊಡಲು ಬಂದ ಬಂಧು ಮಿತ್ರ ಪರಿವಾರವೆಲ್ಲಾ ಗಡಿಬಿಡಿಯಿಂದ ಹೊರಟು ಹೋಗತೊಡಗಿದ್ದರು. ಕೊಂಚ ಕಣ್ಣೀರು ತಂದುಕೊಂಡಂತಹವರು ಮಾತ್ರ ನಿಧಾನವಾಗಿ ನಡೆಯತೊಡಗಿದ್ದರು. ಅವರಲ್ಲಿ ಪರಿಮಳ, ಮೋಹನ್ ಕೂಡ ಇದ್ದರು. ಕಾರಿನಲ್ಲಿ ಮನೆ ತಲುಪುವವರೆಗೆ ಇಬ್ಬರೂ ಏನೂ ಮಾತಾಡಲಿಲ್ಲ. ಪರಿಮಳ ಕಾರಿನಿಂದ ಹೊರಗೆ ದೂರಕ್ಕೆ ನೋಡುತ್ತಾ ಮೌನವಾಗಿದ್ದಳಾದರೂ, ಅವಳ ಆಲೋಚನೆಗಳಲ್ಲಿ ರೂಥ್‍ನೇ ಬಹುಪಾಲು ಆಕ್ರಮಿಸಿಕೊಂಡು, ಎದುರಿಗೆ ಬರುವ ಸಿಟಿಬಸ್‍ಗಳಲ್ಲಿ, ಸೈಕಲ್‍ಗಳ ನಡುವೆ, ಸ್ಕೂಟರ್‍ಗಳ ಹಿಂದೆ ರಸ್ತೆಯ ಪಕ್ಕದಲ್ಲಿ ಅತ್ತಿತ್ತ ಹೋಗುತ್ತಿರುವವರಲ್ಲಿ, ಅಲ್ಲಲ್ಲಿ ರೂಥ್‍ನ ರೂಪವೇ ಆಗಾಗ ಕಾಣಿಸಿದಂತಾಗುತ್ತಿತ್ತು.

    ಮನೆಗೆ ಬಂದ ನಂತರ ಕೂಡ ತಕ್ಷಣವೇ ಮಾತಾಡಲಿಲ್ಲ. ಪರಿಮಳ ಒಳಗಿನ ಕೋಣೆಯೊಳಗೆ ಹೋದರೆ, ಮೋಹನ್ ಸೋಫಾದಲ್ಲಿ ಕುಳಿತುಕೊಂಡು ‘ಶೂ’ ಬಿಚ್ಚತೊಡಗಿದ. ಅವನ ದೃಷ್ಟಿ ಟೀಪಾಯ್ ಮೇಲಿನ ಗಾಜಿನ ಕೆಳಗಿದ್ದ ಫೋಟೋಗಳ ಮೇಲೆ ಬಿತ್ತು. ರೂಥ್... ತಮ್ಮೊಂದಿಗೆ ನಗುತ್ತಿದ್ದ ಫೋಟೋ! ಯಾರೀ ರೂಥ್? ಎಲ್ಲಿಯ ರೂಥ್, ಅಲ್ಲಿಯ ಮೋಹನ್... ಪರಿಮಳ... ಇದೆಲ್ಲಿಯ ಅನುಬಂಧ, ಎಲ್ಲಿಯ ಸಲಿಗೆ, ಆತ ಹೊರಟು ಹೋಗುತ್ತಿರುವುದಕ್ಕೆ ಮನಸ್ಸಿನಲ್ಲಿಂಟಾದ ಬಾಧೆ ಎಲ್ಲಿಂದ ಬಂತು; ಅದಕ್ಕೇನು ಕಾರಣ, ಎಂದೆಲ್ಲಾ ಮೋಹನ್ ಆಲೋಚನೆಗೆ ತೊಡಗಿದ. ಮನುಷ್ಯರ ನಡುವೆ ಏರ್ಪಡುವ ಬಾಂಧವ್ಯಕ್ಕೆ ಕಾರಣವೇನೆಂಬುದು ವಿವರಿಸಲು ಆಗದೇನೋ ಎಂದುಕೊಂಡ. ರೂಥ್ ಹೊರಡುತ್ತಿರುವುದಕ್ಕೆ ಪರಿಮಳ ಪಟ್ಟ ಬಾಧೆ ಅವನಿಗೆ ಕೊಂಚ ನಗು ತರಿಸಿದ್ದು ನಿಜ. ಆದರೆ ತಾನು ಅಷ್ಟು ಮೆಚ್ಚಿಕೊಂಡ ರೂಥ್‍ನನ್ನು ತನ್ನ ಸಹಧರ್ಮಿಣಿ ಕೂಡ ಅಭಿಮಾನಿಸಿ, ಆತನ ಅಭಿಪ್ರಾಯಗಳೊಂದಿಗೆ ಸ್ಪಂದಿಸಿದ್ದು ಅವನಿಗೆ ಬಹಳ ಹಿಡಿಸಿತು.

    ರೂಥ್ ಹೊರಡುವ ಮೊದಲು ‘ಆತ್ಮೀಯತೆ ಸೌಜನ್ಯತೆ ಇವೆಲ್ಲ ಕಡಿಮೆ ಮಾಡಿಕೊಳ್ಳುತ್ತಿರುವ ಭಾರತೀಯ ಸಮಾಜ ಕೂಡ ಹಿಪೋಕ್ರಸಿಯನ್ನು ಆಶ್ರಯಿಸುತ್ತಿರುವ, ಪಾಶ್ಚಿಮಾತ್ಯ ಸಂಸ್ಕøತಿಯತ್ತವಾಲುತ್ತಿರುವುದರ ಲಕ್ಷಣಗಳೇ?’ ಎಂದು ವ್ಯಕ್ತಪಡಿಸಿದ ಬಾಧೆ ಮೋಹನನನ್ನು ಕಲಕಿಬಿಟ್ಟಿತು.

    ರಾತ್ರಿ ಮಲಗುವ ತನಕವೂ ಅವನು ಅದರ ಬಗೆಗೇ ಆಲೋಚಿಸುತ್ತಾ ಹಾಗೆಯೇ

    Enjoying the preview?
    Page 1 of 1