Discover millions of ebooks, audiobooks, and so much more with a free trial

Only $11.99/month after trial. Cancel anytime.

Yashassina Rahasyagalu
Yashassina Rahasyagalu
Yashassina Rahasyagalu
Ebook423 pages1 hour

Yashassina Rahasyagalu

Rating: 3 out of 5 stars

3/5

()

Read preview

About this ebook

Yandamoori Veerendranath, is a famous Telugu novelist. He had written many social, fiction, super natural thriller stories and novels. Hailing from Andhra Pradesh state in India, he influenced younger generations with his socially relevant writings. In his writings he addresses many of the important social problems in India like poverty, prejudices, and superstitions, and encourages people to be socially responsible. He successfully bridges the idealistic and the popular styles of literature.
LanguageKannada
Release dateAug 12, 2019
ISBN6580201100663
Yashassina Rahasyagalu

Read more from Yandamoori Veerendranath

Related to Yashassina Rahasyagalu

Related ebooks

Reviews for Yashassina Rahasyagalu

Rating: 3 out of 5 stars
3/5

1 rating0 reviews

What did you think?

Tap to rate

Review must be at least 10 words

    Book preview

    Yashassina Rahasyagalu - Yandamoori Veerendranath

    http://www.pustaka.co.in

    ಯಶಸ್ಸಿನ ರಹಸ್ಯಗಳು

    Yashassina Rahasyagalu

    Author :

    ಯಂಡಮೂರಿ ವೀರೇಂದ್ರನಾಥ್

    Yandamoori Veerendranath

    For more books

    http://www.pustaka.co.in/home/author/yandamoori-veerendranath

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಯಶಸ್ಸಿನ ರಹಸ್ಯಗಳು

    ಪಾಲಕರಿಗೆ ಗೊತ್ತಿಲ್ಲ; ಶಿಕ್ಷಕರು ಹೇಳಲ್ಲ!

    ಶಿಶುವಿಹಾರದಿಂದ ಸ್ನಾತಕೋತ್ತರದ ವಿದ್ಯಾರ್ಥಿಗಳಿಗಾಗಿ

    ಯಂಡಮೂರಿ ವೀರೇಂದ್ರನಾಥ್

    ಕನ್ನಡಕ್ಕೆ:

    ಎಂ.ಎ. ಸುಬ್ರಹ್ಮಣ್ಯ

    ಒಂದು ಧ್ಯೇಯವಾಕ್ಯ

    ಓದುವ ಹಿತ

    ಸಂಸ್ಕøತದಲ್ಲೊಂದು ಸುಂದರ ಸುಭಾಷಿತವಿದೆ. ಮಳೆ ಹನಿಯ ಹಣೆಬರಹವು ಅದು ಬೀಳುವ ಸ್ಥಳದಿಂದ ನಿರ್ಧರಿಸಲ್ಪಡುತ್ತದಂತೆ. ಈ ಸುಭಾಷಿತದಲ್ಲಿ ಮೂರು ಸ್ಥಳಗಳ ವಿವರಣೆಯಿದೆ. ಆ ಮಳೆ ಹನಿಯು ಕಾದ ಕಬ್ಬಿಣದ ಮೇಲೆ ಉದುರಿದರೆ ಕ್ಷಣಾರ್ಧದಲ್ಲಿ ಆವಿಯಾಗಿ ಹೋಗುತ್ತದೆ. ತಾವರೆಯ ದಳಗಳ ಮೇಲೆ ಉರುಳಿದರೆ ಕೆಲವು ಗಂಟೆಗಳ ಕಾಲ ಘಳಘಳಿಸುತ್ತದೆ. ಅದೆ, ಸಮುದ್ರದ ನೆತ್ತಿಯ ಮೇಲೆ ಬಾಯ್ತೆರೆದು ಕಾಯ್ದಿರುವ ಚಿಪ್ಪಿನಲ್ಲಿ ಬಿದ್ದರೆ ಅದು ಶಾಶ್ವತವಾಗಿ ಹೊಳೆವ ಸ್ವಾತಿ ಮುತ್ತಾಗುತ್ತದೆ.

    ಈ ಸುಭಾಷಿತವು ವಿದ್ಯಾರ್ಥಿ ಜೀವನಕ್ಕೆ ತುಂಬ ಹೊಂದುತ್ತದೆ. ವಿದ್ಯಾರ್ಥಿಗಳಲ್ಲಿ ಮೂರು ವಿಧ. ಕೆಲವರು ಮುತ್ತುಗಳಂತೆ. ತಮ್ಮ ಶಿಕ್ಷಣ ಮುಗಿಯುತ್ತಿದ್ದಂತೆ ಉನ್ನತ ಸ್ಥಾನದಿಂದಲೇ ತಮ್ಮ ಜೀವನಯಾತ್ರೆಯನ್ನು ಆರಂಭಿಸುತ್ತಾರೆ. ಇಂತಹವರು ವಿಲಾಸೀ ಜೀವನವನ್ನು, ಆರ್ಥಿಕ ನೆಮ್ಮದಿಯನ್ನು, ಯಶಸ್ಸಿನ ಪರಿಮಳವನ್ನು ತಮ್ಮ ವೃತ್ತಿ ಜೀವನದಲ್ಲಿ ಬಲು ಬೇಗನೇ ಸವಿಯತೊಡಗುತ್ತಾರೆ. ಇದು ಹೇಗೆ ಸಾಧ್ಯವಾಯಿತೆಂದರೆ, ಅವರು ಓದುವ ವಯಸ್ಸಿನಲ್ಲಿ ತಮ್ಮ ಸಮಯವನ್ನೆಲ್ಲ ಶಿಕ್ಷಣದಲ್ಲಿ ತೊಡಗಿಸಿರುತ್ತಾರೆ. ಬೇರೆ ಆಕರ್ಷಕವೆನಿಸುವ ಚಟುವಟಿಕೆಗಳಲ್ಲಿ ಅವರು ತೊಡಗಿರುವುದಿಲ್ಲ. ಇಲ್ಲಿ ಮಳೆ ಹನಿ ನೇರವಾಗಿ ಚಿಪ್ಪಿನಲ್ಲಿ ಸೇರಿ ಮುತ್ತಾಯಿತು.

    ಮತ್ತೆ ಕೆಲವು ವಿದ್ಯಾರ್ಥಿಗಳು ಶೂರರಂತೆ ‘ಕಂಡು ಬರುತ್ತಾರೆ.’ ಕಾಪಿ ಹೊಡೆದು ಒಳ್ಳೆಯ ಮಾಕ್ರ್ಸ ಪಡೆದಿರಬಹುದು. ಅಥವಾ ಯಾರದೊ ವಶಿಲಿಯಿಂದ ಒಳ್ಳೆಯ ಕೆಲಸವನ್ನೂ ಸಂಪಾದಿಸಿರಬಹುದು. ಅಂತಹವರು ಆರಂಭದಲ್ಲಿ ಮಿಂಚುತ್ತಾರೆ. ಆದರೆ ವೃತ್ತಿಯಲ್ಲಿ ತೊಡಗುತ್ತಿದ್ದಂತೆ, ತುಂಬ ಜಾಣ ಮತ್ತು ಚತುರ ಸಹೋದ್ಯೋಗಿಗಳೊಂದಿಗೆ ಏಗಬೇಕಾಗುತ್ತದೆ. ಆಡಳಿತೆಗೆ ಅಥವಾ ಮಾಲಿಕರಿಗೆ ಇಂಥವರ ‘ಮೂಲ ಮೌಲ್ಯ’ ಗೊತ್ತಾದಾಗ ಮೂಲೆಗುಂಪು ಆಗಿರುತ್ತಾರೆ.

    ಧಾರಾಳವಾಗಿ ಖರ್ಚು ಮಾಡುತ್ತ, ಸುತ್ತಲೊಂದು ‘ಪಟಾಲಂ’ ಇಟ್ಟುಕೊಂಡು, ಕಣ್ಣು ಕೋರೈಸುವ ಹೋರೋಗಳಂತೆ, ತಮ್ಮ ಕಾಲೇಜು ದಿನಗಳಲ್ಲಿ ಬೇರೆಯವರಲ್ಲಿ ಹೊಟ್ಟೆಕಿಚ್ಚನ್ನು ಹೊತ್ತಿಸುವವರದು ಮೂರನೇ ಗುಂಪು. ಕೊನೆಯಿಂದ ರ್ಯಾಂಕ್ ಪಡೆದು ಕಾಲೇಜಿನಿಂದ ಹೊರಬೀಳುವ ಇಂತವರಿಗೆ ಯಾವ ಒಳ್ಳೆಯ ನವಕರಿ ತಾನೆ ಸಿಕ್ಕೀತು? ಒಂದು ನಿರ್ಜೀವ ಸಣ್ಣ ನೌಕರಿಯಲ್ಲೇ ತೃಪ್ತಿ ಪಡಬೇಕು. ವೇಗವಾಗಿ ಬೆಳೆಯಲು ಪೂರಕ ತಳಹದಿ ಇರದ ಈ ಸಂದರ್ಭದಲ್ಲಿ ಜೀವನದ ರುಚಿಯನ್ನೇ ಕಳೆದುಕೊಂಡು ಇಂತಹವರು, ಕಾದ ತಗಡಿನ ಛಾವಣಿಯ ಮೇಲೆ ಬಿದ್ದ ಮಳೆ ಹನಿಯಂತೆ, ತಕ್ಷಣವೇ ಉತ್ಸಾಹ ಕಳೆದುಕೊಂಡು ಆವಿಯಾಗಿ ಬಿಡುತ್ತಾರೆ.

    ನೀವೇಕೆ ಅಭ್ಯಾಸ ಮಾಡಬೇಕು?: ‘ಅಧ್ಯಯನ ಕಲೆಯ’ ಕುರಿತು ನನ್ನ ಕಾರ್ಯಾಗಾರದಲ್ಲಿ ಯಾವ ವಿದ್ಯಾರ್ಥಿಗಳಿಗೆ ನಾನು ಉಪನ್ಯಾಸ ಆರಂಭಿಸುವುದೇ ನೀವೇಕೆ ಅಭ್ಯಾಸ ಮಾಡಬೇಕು? ಎಂಬ ಪ್ರಶ್ನೆಯೊಂದಿಗೆ. ಸ್ವಲ್ಪ ತಡಕಾಡುತ್ತಾರೆ. ಮತ್ತೊಂದು ಕ್ಷಣ ಆಲೋಚಿಸುತ್ತಾರೆ. ಆಮೇಲೆ ನೋಡಿ ಉತ್ತರಗಳ ರಾಶಿ ರಾಶಿ ಬೀಳುತ್ತದೆ. ಹಣ ಸಂಪಾದಿಸಲು...ಖ್ಯಾತಿ.... ಜ್ಞಾನ.... ವರದಕ್ಷಿಣೆಗಾಗಿ (ನಗುವಿನ ಅಲೆ). ಕೆಲವು ವಿದ್ಯಾರ್ಥಿಗಳು ಬಿಚ್ಚುಮನದಿಂದಲೇ ಹೇಳುತ್ತಾರೆ. ಅಪ್ಪ ಅಮ್ಮ ತುಂಬ ಒತ್ತಾಯ ಮಾಡುತ್ತಾರಲ್ಲ, ಅದಕ್ಕಾಗಿ, ಎಂದು. ಕೇವಲ ಹಣ ಸಂಪಾದನೆಗಾಗಿ ಓದಬೇಕಾಗಿಲ್ಲ. ಎಷ್ಟೋ ಶ್ರೀಮಂತರು ಹೆಚ್ಚು ಓದಿದವರಲ್ಲ. ಇದೇ ಮಾತು ಖ್ಯಾತಿಗೂ ಅನ್ವಯ", ಎಂದು ನಾನು ಅವರಿಗೆ ಹೇಳುತ್ತೇನೆ.

    ನೀವು ಕಿಕೆಟ್ ಆಡುವುದೇತಕ್ಕೆ? ಎಂಬ ನನ್ನ ಮುಂದಿನ ಪ್ರಶ್ನೆಗೆ, ತಕ್ಷಣವೇ ಉತ್ತರ ಸಿದ್ಧ: ಅದು ನಮಗೆ ತುಂಬ ಇಷ್ಟ. ತುಂಬ ರೋಮಾಂಚನಕಾರಿ ಆಟವಲ್ಲವೋ ಅದು! ಮಳೆಯಿಂದಾಗಿ ಕ್ರಿಕೆಟ್ ಮ್ಯಾಚ್, ರದ್ದಾದರೆ ನಿಮಗೆ ತುಂಬ ಖುಷಿಯಾಗುತ್ತದೆಯೆ? ಇಲ್ಲ, ಇಲ್ಲ ಎಂಬ ಉತ್ತರ ಘೋಷಣೆಯಾಗುತ್ತದೆ. ತಕ್ಷಣವೇ ನಾನು ಇನ್ನೊಂದು ಪ್ರಶ್ನೆಯನ್ನು ಚಿಮ್ಮುತ್ತೇನೆ. ಸಿಕ್ಕಾಪಟ್ಟೆ ಮಳೆಯಿಂದಾಗಿ ನಿಮ್ಮ ಶಾಲೆಗೆ ರಜೆ ಘೋಷಣೆಯಾದರೆ... ಸಂತೋಷ? ಈ ಪ್ರಶ್ನೆಯನ್ನೂ ಪೂರ್ತಿಯಾಗಿರುವುದಿಲ್ಲ ಆಗಲೇ ಹೌದು, ಹೌದು ಎಂಬ ಉತ್ತರದಿಂದ ಇಡೀ ರೂಮೇ ಕಂಪಿಸುತ್ತದೆ. ಹಾಗಾದರೆ ನೀವು ಓದುವುದು ಯಾತಕ್ಕಾಗಿ?" ಎಂದು ಮತ್ತೆ ನಾನು ಕೇಳಿದಾಗ, ಉತ್ತರ ಮಾತ್ರ ಗಪ್‍ಚುಪ್! ಮೌನ!

    ಆ ವಯಸ್ಸಿಗೆ ಅದಕ್ಕೆ ಉತ್ತರ ಹೇಳುವುದೂ ಕಷ್ಟವೇ. ಆದರೆ ಪಾಲಕರಾದರೂ ಉತ್ತರಿಸಲು ಸಮರ್ಥರಿರಬೇಕು. ‘ಶಿಕ್ಷಣ’ ಎಂಬುದು ಮಕ್ಕಳಿಗೆ ತಿವಿತವಾಗಬಾರದು. ಅದೊಂದು ಹಿತವಾದ ಅನುಭವವೆನಿಸಬೇಕು. ಓದಿನಲ್ಲಿ ಸುಖವಾಗಿ ನೆಮ್ಮದಿಯಿಂದಿರದ ವಿದ್ಯಾರ್ಥಿಯು ತನ್ನ ಜೀವನದ ಅಮೂಲ್ಯ ಇಪ್ಪತ್ತು ವರ್ಷಗಳನ್ನು ವ್ಯರ್ಥ ಮಾಡಿದಂತೆ. ಪಾಲಕರು, ಕೇವಲ ಪಾಲಕರು-ಮಕ್ಕಳಿಗೆ ಓದೆಂಬುದನ್ನು ಹರ್ಷದ ಸಂಗತಿಯನ್ನಾಗಿಸಬಲ್ಲರು.

    ಬರ್ನಾಡ್ ಶಾ ಒಮ್ಮೆ ಪಾರ್ಟಿಯೊಂದಕ್ಕೆ ಹೋಗಿದ್ದರಂತೆ. ಎಲ್ಲರೂ ಕುಣಿಯುತ್ತಿದ್ದರೆ ಬರ್ನಾಡ್ ಶಾ ಮೌನವಾಗಿ ಕುಳಿತಿದ್ದರಂತೆ. ಹೆಂಗಸೊಬ್ಬಳು ಬಂದು ‘ನಿಮಗೆ ಕುಣಿಯುವುದು ಇಷ್ಟವಿಲ್ಲವೇ?’ ಎಂದು ಕೇಳಿದಳಂತೆ. ಆಗ ಅವರು, ‘ನನಗೆ ಕುಣಿತ ತುಂಬ ಇಷ್ಟ. ಆದರೆ, ಬರೆಯಲಿರುವ ಒಂದು ಪುಸ್ತಕದ ಬಗ್ಗೆ ಧೇನಿಸುತ್ತಿದ್ದೇನೆ’, ಎಂದರಂತೆ. ಅವಳಿಗೆ ಸಮಾಧಾನವೆನಿಸದೆ ‘ಕುಣಿಯುತ್ತಲೇ ನೀವು ಯೋಚಿಸಬಹುದಲ್ಲ?’ ಎಂದಳಂತೆ.

    ಹೌದು, ಖಂಡಿತವಾಗಿಯೂ ನಾನು ಹೇಗೆ ಮಾಡಬಲ್ಲೆ, ಆದರೆ ನನಗೆ ಹಾಗೆ ಮಾಡುವ ಮನಸ್ಸಿಲ್ಲ’, ಎಂದಾಗ ಆಕೆ, ಜೀವನದಲ್ಲಿ ಮಜ ಮಾಡುವುದೇ ನಿಮಗೆ ಗೊತ್ತಿಲ್ಲ", ಎಂದು ಹೀಗಳೆಯುತ್ತಾಳೆ.

    ಅವರು ನಸುನಗುತ್ತಲೇ ಉತ್ತರಿಸಿದ್ದು: ಕುಣಿತದ ಸವಿಗಿಂತ ಬರವಣಿಗೆಯ ಸವಿ ನನಗಿಷ್ಟ. ಕುಣಿತದಿಂದ ಖಂಡಿತವಾಗಿಯೂ ‘ಮಜ’ ಸಿಗುತ್ತೆ. ಆದರೆ ನನಗೆ ಹಾಗೆ ಮಾಡುವ ಮನಸ್ಸಿಲ್ಲ’, ಎಂದಾಗ ಆಕೆ, ಜೀವನದಲ್ಲಿ ಮಜ ಮಾಡುವುದೇ ನಿಮಗೆ ಗೊತ್ತಿಲ್ಲ", ಎಂದು ಹೀಗಳೆಯುತ್ತಾಳೆ.

    ಅವರು ನಸುನಗುತ್ತಲೇ ಉತ್ತರಿಸಿದ್ದು: ಕುಣಿತದ ಸವಿಗಿಂತ ಬರವಣಿಗೆಯ ಸವಿ ನನಗಿಷ್ಟ. ಕುಣಿತದಿಂದ ಖಂಡಿತವಾಗಿಯೂ ‘ಮಜ’ ಸಿಗುತ್ತೆ. ಆದರೆ ಬರವಣಿಗೆಯು ನನಗೆ ಹಿತ, ಹಣ, ಖ್ಯಾತಿ ಮತ್ತು ಸಂತೃಪ್ತಿಯನ್ನು ಕೊಡುತ್ತದೆ. ಒಮ್ಮೆ ಮಜ ಪಡೆಯಲು ಹೋದೆನೆಂದರೆ ಆ ಹಿತಚಕ್ರದಿಂದ ಹೊರಬಂದು ಬೇರೆಲ್ಲ ಸದ್ಗುಣಗಳನ್ನು ಪಡೆಯಲು ನಿಮಗಿರುವಂತೆ ಸಾಮಥ್ರ್ಯ ನನ್ನಲ್ಲಿವಲ್ಲವೆಂಬ ಅಳುಕು ನನಗೆ.

    ಅವರ ಈ ಮಾತು ಆಸಕ್ತಿಯ ಮತ್ತು ಉಪಯುಕ್ತ ಕೆಲಸಗಳಿಗೆ ಹೇಗೆ ಆದ್ಯತೆ ಕೊಡಬೇಕೆಂಬುದನ್ನು ಅರ್ಥಮಾಡಿಕೊಳ್ಳಲು ಮತ್ತು ಅರಿತುಕೊಳ್ಳಲು ಪ್ರತಿಯೊಬ್ಬ ವಿದ್ಯಾರ್ಥಿಗೂ ಒಂದು ಪಾಠದಂತಿದೆ.

    ವಿವೇಕ, ಉತ್ಸಾಹ ಮತ್ತು ಮಾನವ ವಿಜ್ಞಾನ: ವಿದ್ಯಾರ್ಥಿಯೊಬ್ಬನಲ್ಲಿ ವಿವೇಕವನ್ನು ತುಂಬುತ್ತ, ಸಂಸ್ಕಾರವಂತನನ್ನಾಗಿ ಮಾಡುವುದೇ ಶಿಕ್ಷಣ. ಅದು ಉತ್ಸಾಹವನ್ನು ಇಮ್ಮಡಿಗೊಳಿಸುತ್ತ ಬದುಕನ್ನು ಇನ್ನಷ್ಟು ಸುಂದರಗೊಳಿಸಲು ನೆರವಾಗುತ್ತದೆ. ಎರಡು ಮಿಲಿಯನ್ ವರ್ಷಗಳ ಹಿಂದಿನ ಮಾನವನಿಗೆ, ವಿವೇಕ, ಕುಟುಂಬ, ಸಮಾಜ, ಖ್ಯಾತಿ ಮತ್ತು ಏಳ್ಗೆ ಈ ಮುಂತಾದ ಪದಗಳ ಅರಿವೇ ಇರಲಿಲ್ಲ. ಬೇರೆ ಪ್ರಾಣಿಗಳಿಗೂ ಈ ಮಾನವನಿಗೂ ವ್ಯತ್ಯಾಸ ತೋರಿದ ಒಂದೆ ಒಂದು ಸಂಗತಿಯೇ ‘ಉತ್ಸಾಹ’ ಎಂಬುದು. ಮನುಕುಲಕ್ಕೆ ‘ಚತುರತೆ’ಯನ್ನು ನೀಡಿದ್ದೆ ‘ಹಂಬಲ’. ಬೇರೆ ಬೇರೆ ಬಗೆಯ ಮಾಂಸಾಹಾರವನ್ನು ತಿನ್ನಬೇಕೆಂಬ ಅವನ ‘ಹಂಬಲವೇ’ ‘ಬಿಲ್ಲು ಮತ್ತು ಬಾಣಗಳ’ ಶೋಧನೆಗೆ ಕಾರಣವಾಯಿತು. ತನ್ನ ಆಹಾರವನ್ನು ಹೆಚ್ಚು ಸ್ವಾದಿಷ್ಟಗೊಳಿಸುವ ಹಂಬಲ ಬೇಯಿಸುವುದನ್ನು ಕಲಿಸಿತು. ಉಪ್ಪನ್ನು ಶೋಧಿಸಿದ್ದು ಆ ಕಾಲದ ಅತ್ಯಂತ ಶ್ರೇಷ್ಠ ಸಾಧನೆ ಎನಿಸಿದ್ದಿರಬೇಕು. ರಭಸದ ಮಳೆಯ ಸಂದರ್ಭದಲ್ಲಿ, ಬೆಟ್ಟಗಳ ಮೇಲಿಂದ ದುಂಡನೆ ಕಲ್ಲು ಮಾತ್ರ ಉರುಳುವುದನ್ನು, ಮರದ ಹಲಗೆ ಅಲುಗದಿರುವುದನ್ನು ಅವನು ನೋಡಿ ಸಂದೇಹಪಟ್ಟಿದ್ದಾನು. ಆಗ ಕನಸು ಕಂಡು ‘ಚಕ್ರವನ್ನು’ ಸೃಷ್ಟಿ ಮಾಡಿದ. ಈ ‘ಚಕ್ರ ಸೃಷ್ಟಿಯೇ’ ನಮ್ಮ ನಾಗರೀಕತೆಯ ಬಹು ದೊಡ್ಡ ಮೈಲುಗಲ್ಲು. ಹೀಗೆ ಈ ಮಾನವ ಸಂತತಿಯ ನಿರಂತರ ಅನ್ವೇಷಣೆಯಲ್ಲಿ ತೊಡಗಿ, ಪರಮ ಸುಖದ ಜೀವನಕ್ಕಾಗಿ ಬೇರೆ ಬೇರೆ ಮಾರ್ಗಗಳನ್ನು ಪ್ರಕಟಿಸುತ್ತ ಶೋಧಿಸುತ್ತ ಬಂದಿದೆ. ಶಿಕ್ಷಣ ಅಂದರೆ ಇದೇ.

    ಪವಿತ್ರ ಗ್ರಂಥ: ನಮ್ಮ ಬದುಕಿನ ಶೈಲಿಯನ್ನು ಉತ್ತಮಗೊಳಿಸಲು ಇತಿಹಾಸವು ಹೇರಳ ತತ್ವಶಾಸ್ತ್ರಗಳನ್ನು ಹುಟ್ಟಿಸಿದೆ. ಆ ಪೈಕಿ ‘ಭಗವದ್ಗೀತೆ’ ಕೂಡ ಒಂದು. ಉದಾತ್ತ ಆರಾಧಕನಾಗಿ, ಒಂದಿನಿತೂ ಕರ್ತವ್ಯ ವಿಮುಖನಾಗದೆ, ತನ್ನ ಪಾಲಿನ ಕಾರ್ಯವನ್ನು ಫಲಾಪೇಕ್ಷೆಯಿಲ್ಲದೇ ನೆರವೇರಿಸುತ್ತಿರಬೇಕು, ಎಂದು ಪ್ರತಿಪಾದಿಸುತ್ತದೆ ಈ ಭಗವದ್ಗೀತೆ. ಇದು ಮೂರು ಮೆಟ್ಟಿಲುಗಳನ್ನು ವಿವರಿಸುತ್ತದೆ:

    1.ಕಾರ್ಯವನ್ನು ಮನಃಪೂರ್ವಕವಾಗಿ ಮಾಡುವುದು,

    2.ಫಲಾಫಲಗಳ ನಿರೀಕ್ಷೆ ಇರಿಸಿಕೊಳ್ಳದಿರುವುದು; ಮತ್ತು

    3.ಮಾಡುತ್ತಿರುವ ಕಾರ್ಯವನ್ನು ಸವಿಯುತ್ತಿರುವುದು.

    ಈ ತತ್ವವನ್ನು ತೋಟದ ಮಾಲಿಯ ಉದಾಹರಣೆಯೊಂದಿಗೆ ಹೆಚ್ಚು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಹುದು.

    ಆತ, ಒಣ ಭೂಮಿಗೆ ನೀರು ಹಾಕಿದಾಗ ಹೊಮ್ಮುವ ಮಣ್ಣಿನ ವಾಸನೆಯನ್ನು ಆಸ್ವಾದಿಸುತ್ತಾನೆ. ಬಳ್ಳಿಯ ತುದಿಯಲ್ಲಿ ಬಿಳಿ ಮೊಗ್ಗುಗಳು ಬಿರಿದು ಹೂವಾಗುವ ದೃಶ್ಯವನ್ನು ವೀಕ್ಷಿಸುತ್ತ ಆನಂದವನ್ನು ಅನುಭವಿಸುತ್ತಾನೆ. ಆ ಬಿರಿದ ಮೊಗ್ಗುಗಳ ಸುಗಂಧವನ್ನೂ ಅರಳುತ್ತಿರುವ ಹೂಗಳ ಪರಿಮಳವನ್ನೂ ತುಂಬ ಸವಿಯುತ್ತಾನೆ.

    ಕೊನೆಗೊಮ್ಮೆ ಆತ, ಹೂಗಳನ್ನು ಮಾರುತ್ತಾನೆ. ಅವನ ಕೆಲಸದ ಎಲ್ಲ ಹಂತಗಳಲ್ಲೂ ಅವನಿಗೆ ‘ಮಧುರ ಅನುಭವವೇ’. ಕೊನೆಗೆ ಸಿಕ್ಕಿದ್ದು ‘ಬೋನಸ್’ ಮಾತ್ರ. ಇದು ಭಗವದ್ಗೀತೆಯ ಸಾರ. ಇದು ನಿಮ್ಮ ಕ್ರೀಡೆಗೂ ಅನ್ವಯಿಸುತ್ತೀರಿ. ಕಠಿಣ ಶ್ರಮದಿಂದ ಬೆವರು ಸುರಿಸುತ್ತೀರಿ. ಆಟವನ್ನು ಗೆಲ್ಲುವುದು ಒಂದು ‘ಬೋನಸ್’ ಮಾತ್ರ. ಅದೇ ರೀತಿ ನಿಮ್ಮ ಓದನ್ನೂ ಆನಂದಿಸಿರಿ. ಅಚ್ಚುಕಟ್ಟಾಗಿ ಕೆಲಸ ಮಾಡಿ ಮತ್ತು ಏಕಾಗ್ರತೆ ಸಾಧಿಸಿ. ‘ರಿಸಲ್ಟ್’ ಒಂದು ‘ಬೋನಸ್’ ಮಾತ್ರ, ಉತ್ಸಾಹದಿಂದಿರಿ. ‘ಪ್ರತಿಭೆ’ ಎಂದರೆ ತನ್ನಿಂತಾನೇ ಬೆಳಗುವ ಉತ್ಸಾಹವೇ ಹೊರತು ಅದಕ್ಕಿಂತ ಹೆಚ್ಚೇನಲ್ಲ. ಆಶಾವಾದಕ್ಕೆ ಹಿಡಿತಗಳೇನೆಂಬುದು ಗೊತ್ತಿದ್ದರೆ, ಯಶಸ್ಸು ರಂಧ್ರಗಳೆಲ್ಲೆಲ್ಲಿವೆ ಎಂಬುದನ್ನರಿತಿರುತ್ತದೆ. ರಂಧ್ರಗಳನ್ನು ಮೊದಲು ಗುರುತಿಸಿಕೊಳ್ಳಿ. ಒಂದು ಸಣ್ಣ ಟೆಕ್ನಿಕ್‍ನೊಂದಿಗೆ ನೀವದನ್ನು ದಾಟಬಲ್ಲಿರಿ. ಪಾಲಕರಿಗೆ ಗೊತ್ತಿಲ್ಲ; ಶಿಕ್ಷಕರು ಹೇಳಿಕೊಡಲ್ಲ; ಈ ಟೆಕ್ನಿಕ್‍ಗಳನ್ನು.

    ಅದಕ್ಕಾಗಿಯೇ ಈ ಪುಸ್ತಕ.

    ಎರಡು ಹಂತಗಳು

    ‘ಮೈಂಡ್ ಪವರ್-ನಂಬರ್ ಒನ್ ಆಗುವುದು ಹೇಗೆ?’ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಒಬ್ಬರು ಕೇಳಿದರು: ನಿಮ್ಮ ದೃಷ್ಟಿಯಲ್ಲಿ ನಂಬರ್ ಒನ್ ಯಾರು? ಎಂದು. ನಾನು ಹೇಳಿದೆ: ರಾತ್ರಿ ಯಾರು ಚೆನ್ನಾಗಿ ನಿದ್ರಿಸಬಲ್ಲರೋ ಅವರೇ ನಂಬರ್ ಒನ್, ಎಂದು.

    ತುಂಬ ಸರಳವಾದ ಮಾತೆನಿಸುತ್ತದಲ್ಲವೆ ಇದು? ಆದರೆ ಅಷ್ಟೇ ಅರ್ಥಗರ್ಭಿತ ವಾಕ್ಯವಿದು. ಯಾರು ಚೆನ್ನಾಗಿ ನಿದ್ರಿಸುಬಹುದು ಹೇಳಿ? ನನ್ನ ದೃಷ್ಟಿಯಲ್ಲಿ ಯಾರಿಗೆ ಸಮಸ್ಯೆಗಳಿಲ್ಲವೋ ಅಥವಾ ಇದ್ದರೂ ಅವುಗಳನ್ನು ಬಗೆಹರಿಸಿಕೊಳ್ಳುವ ಆತ್ಮವಿಶ್ವಾಸವಿರುತ್ತದೋ ಅಂಥವರು ಮಾತ್ರ ಸುಖವಾಗಿ ನಿದ್ರಿಸಬಲ್ಲರು. ಇದನ್ನೇ ಇನ್ನೊಂದು ರೀತಿಯಲ್ಲಿ ಅರ್ಥೈಸಬಹುದು: ಯಾವನು ತನ್ನ ಸದ್ಯದ ಬದುಕಿನಲ್ಲಿ ಸಂತೋಷದಿಂದಿದ್ದು, ಭಿವಿಷ್ಯದ ಬಗ್ಗೆ ತುಂಬು ನಂಬಿಕೆಯಿಂದಿರುವನೊ ಆತ ಮಾತ್ರ ಹಿತವಾಗಿ ನಿದ್ರಿಸಬಲ್ಲ.

    ಒಬ್ಬ ಹುಡುಗನಿಗೆ ಐನೂರು ಮೀಟರ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸಬೇಕಿರುತ್ತದೆ. ಬರೀ ಭಾಗವಹಿಸುವದಲ್ಲ ಆ ಪಾರಿತೋಷಕ ಅವನಿಗೇ ಬೇಕಾಗಿದೆ. ಹಗಲು ರಾತ್ರಿ ಇದಕ್ಕಾಗಿ ಶ್ರಮಪಟ್ಟಿರುತ್ತಾನೆ. ಆ ‘ಮೆಡಲ್’ ಒಂದೇ ಅವನ ಗುರಿಯಾಗಿ ಬಿಟ್ಟಿದೆ. ಮಿತವಾದ ಆಹಾರ, ವ್ಯಾಯಾವ ಮತ್ತು ನಿರಂತರ ಅಭ್ಯಾಸಗಳಿಂದ ಅವನ ಶ್ರಮ ಸಾಗಿದೆ.

    ನಿರ್ಧಾರವಾಗುವ ಆ ದಿನ ಬಂತು. ಒಂದು... ಎರಡು... ಮೂರು...ಢಂ ಎಂಬ ಪಿಸ್ತೂಲ್ ಶಬ್ದ ಗಾಳಿಯಲ್ಲಿ ಹಾರಿದ್ದೇ ತಡ ಓಡಲಾರಂಭಿಸಿದ. ಓಡಿದ... ಓಡಿದ... ಬರೀ ಓಡಿದ. ಗುರಿಯೊಂದಲ್ಲದೆ ಬೇರೇನೂ ಅವನಿಗೆ ಕಾಣುತ್ತಿಲ್ಲ. ಐದು ಸುತ್ತು ಓಡಬೇಕಿತ್ತು. ಐದನೇ ಸುತ್ತು ಮುಗಿಸಿ ಇನ್ನೇನು ಗೆಲುವನ್ನು ದಾಟಬೇಕು, ಜನಜಂಗುಳಿಯಿಂದ ‘ಹೋ’ ಎಂದು ಉದ್ಗಾರ. ಆಗ ಅವನ ಅರಿವಿಗೆ ಬಂತು. ಈ ಮೊದಲೇ ನಾಲ್ವರು ಗೆರೆಯನ್ನು ದಾಟಿಬಿಟ್ಟಿದ್ದಾರೆ. ಅವನಿಗೆ ಭೂಮಿಯೇ ಉಡುಗಿದಂತೆ ಎನಿಸಿ, ಕಣ್ಣೀರು ಸುರಿಯಹತ್ತಿತು. ಮರುಕ್ಷಣವೇ ಪಂದ್ಯದ ಸಂಘಟಕರು ತನ್ನ ಬಳಿ ಬಂದು ಕಂಗ್ರಾಚುಲೇಶನ್ಸ್! ಎನ್ನುತ್ತಿದ್ದಾರೆ. ಆಶ್ಚರ್ಯವೆನಿಸಿ, ನನಗಿಂತ ಮೊದಲೆ ಅವರು ಗುರಿ ತಲುಪಿದ್ದಾರಲ್ಲ? ಎಂದು ಕೇಳಿದಾಗಲೇ, ಸಂಘಟಕರು ಅವನ ಗೊಂದಲವನ್ನು ಬಗೆಹರಿಸಿದ್ದು, ಅವರೆಲ್ಲ ಈಗ ತಾನೇ ನಾಲ್ಕನೇ ಸುತ್ತನ್ನು ಮುಗಿಸಿದ್ದಾರೆ. ಚಪ್ಪಾಳೆ ತಟ್ಟಿದ್ದು ನಿನಗಾಗಿಯೇ", ಎಂದು ಹೇಳಿ.

    ವಿಶ್ರಾಂತಿಧಾಮದ ನಿರ್ಮಾಣ: ಜೀವನ ದೀರ್ಘವಾದುದಲ್ಲ ಎಂದು ಜನ ಮಾತಾಡುತ್ತಾರೆ. ಆದರೆ ಅದು ಹಾಗಲ್ಲ. ದುರಂತವೆಂದರೆ ಜೀವನವನ್ನಾರಂಭಿಸಲು ನಾವು ದೀರ್ಘ ಹೊತ್ತು ಕಾಯುತ್ತೇವೆ. ಹಾಗೆಯೇ ಅಲ್ಪ ಹೊತ್ತಿನಲ್ಲೇ ಅದನ್ನು ಅಂತ್ಯಗಾಣಿಸಿ ಬಿಡುತ್ತೇವೆ. ಹಣ ಮತ್ತು ಕೀರ್ತಿಗಾಗಿ ನಾವು ವೃತ್ತಿಯನ್ನು ಆರಂಭಿಸುತ್ತೇವೆ. ಅಷ್ಟರಲ್ಲೇ ‘ವಿಶ್ರಾಂತಿಧಾಮವೊಂದನ್ನು’ ನಿರ್ಮಿಸಿಕೊಂಡು ಆ ವೃತ್ತಿ ಪಯಣವನ್ನು ಕೊನೆಗೊಳಿಸಲು ಯತ್ನಿಸುತ್ತೇವೆ. ವಿಶ್ರಾಂತಿಧಾಮದಲ್ಲಿ ಕುಳಿತುಕೊಂಡು ಆರಾಮವಾಗಿ ಕಾಲ ಕಳೆಯುತ್ತ, ನಿರ್ವಹಣೆಯ ನೋವನ್ನು ಬೇರೆಯವರ ಹೆಗಲಿಗೆ ಹಾಕಿ, ಅವರೆಲ್ಲರಿಗಿಂತ ನಾವೇ ಅದೃಷ್ಟವಂತರೆಂದು ಭಾವಿಸಿಕೊಳ್ಳುತ್ತೇವೆ. ಈ ಜೀವನವೆಂಬುದು ‘ಬೈಸಿಕಲ್’ ಇದ್ದ ಹಾಗೆ ಎಂಬ ಅರಿವೇ ನಮಗೆ ಬಾರದು. ‘ಪೆಡಲ್ ಮಾಡುವುದನ್ನು’ ನಿಲ್ಲಿಸಿಬಿಟ್ಟರೆ ಸಾಕು ನಾವು ಬೀಳುತ್ತೇವೆ. ಬೈಸಿಕಲ್ ಮೇಲಿಂದ ಬೀಳುವುದೇ ಸಂತೋಷದಿಂದ ಪಡೆಯುವ ವಿಶ್ರಾಂತಿಯಾಗಿದೆ ಬಹಳ ಜನಕ್ಕೆ.

    ಕೆಲವರು ‘ವೈಫಲ್ಯಗಳಲ್ಲೇ ವಿಶ್ರಾಂತಿಧಾಮಗಳನ್ನು ಕಟ್ಟಿಕೊಳ್ಳುತ್ತಾರೆ. ನಾಲ್ಕು ರಸ್ತೆಗಳು ಸೇರುವಲ್ಲಿ ನಿಂತುಕೊಂಡಾಗ ಯಾವ ರಸ್ತೆಯಲ್ಲಿ ಹೋಗಬೇಕೆಂಬ ಗೊಂದಲ ಹುಟ್ಟಿಬಿಟ್ಟರೆ, ಕೆಲವು ವಿದ್ಯಾರ್ಥಿಗಳು ಕದಲದೆ ಅಲ್ಲೇ ನಿಂತುಬಿಡುತ್ತಾರೆ. ಇದು ನನಗೆ ಹೊಂದುವಂಥದ್ದಲ್ಲ ಎಂಬ ನೆಪದಲ್ಲೋ, ‘ಸೋಲಿನ ಭಯದಿಂದಲೋ’ ಪಯಣವನ್ನು ಮುಂದೂಡುತ್ತಾರೆ. ಕನಸಿನ ಭಂಡಾರವನ್ನು ತಲೆದಿಂಬಿನ ಕೆಳಗಿರಿಸಿಕೊಂಡು ಜೀವನಪೂರ್ತಿ ಮಲಗಿಬಿಡುತ್ತಾರೆ.

    ಮತ್ತೆ ಕೆಲವು ವಿದ್ಯಾರ್ಥಿಗಳು ತಮ್ಮ ವಿಶ್ರಾಂತಿಧಾಮಗಳನ್ನು ವೇದನೆ, ನೋವು ಮತ್ತು ವ್ಯಥೆಗಳಲ್ಲಿ ನಿರ್ಮಿಸಿಕೊಳ್ಳುತ್ತಾರೆ. ಅವರು ತಮ್ಮ ಗುಹೆಗಳಲ್ಲಿ ಸೇರಿಕೊಂಡು ಯಶಸ್ಸಿಗಾಗಿ ಕಾರ್ಯನಿರತರಾಗುವುದರಿಂದ ಹಿಂದೆ ಸರಿಯುತ್ತಾರೆ. ಅವರ ಗುಹೆಗಳಲ್ಲಿ ಅಪಾರ ನಿರಾಶೆ ಮತ್ತು ಸಂಕಟಗಳು ತುಂಬಿರುತ್ತವೆ. ಇನ್ನೂ ಕೆಲವರಂತೂ ಎಲ್ಲವನ್ನೂ ದೇವರಿಗೋ ಕರ್ಮಕ್ಕೋ ವಹಿಸಿಬಿಡುತ್ತಾರೆ. ಉತ್ತರಾರ್ಧವನ್ನು ಪೂರ್ತಿಮಾಡಲು ದೇವರಿಗೆ ಬಿಟ್ಟರೂ, ಪೂವಾರ್ಧವನ್ನು ತಾವೇ ಆರಂಭಿಸಬೇಕೆಂಬುದನ್ನು ಕೂಡ ಅವರು ಅರಿಯಲಾರರು.

    ಹಲವರಿರುತ್ತಾರೆ! ತಮ್ಮ ವಿಶ್ರಾಂತಿಧಾಮವನ್ನು ಅವರು ತಮ್ಮ ಗಮ್ಯದಲ್ಲೇ ನಿರ್ಮಿಸಿಕೊಳ್ಳುತ್ತಾರೆ. ನಿಮಗೆ ಇದು ಗೊಂದಲವೆನಿಸಬಹುದು. ಅಲ್ಲಿ ವಿಶ್ರಾಂತಿಧಾಮ ನಿರ್ಮಿಸಿಕೊಂಡರೆ ತಪ್ಪೇನು? ಎಂಬ ಗೊಂದಲಕ್ಕೆ ನೀವು ಒಳಗಾಗಬಹುದು. ಖಂಡಿತವಾಗಿಯೂ ತಪ್ಪಲ್ಲ. ಯಶಸ್ಸಿಗೆ ಕೊನೆ ಎಂಬುದಿಲ್ಲ. ಅದೊಂದು ನಿರಂತರ ಪ್ರಕ್ರಿಯೆ. ತುಂಬ ಹತ್ತಿರಕ್ಕೆ ಹೋದರೆ ಶಿಖರವನ್ನೇರಿ ಬಿಡಬಹುದು. ಶಿಖರವನ್ನೇರಿ ನಿಂತರೆ ಶಿಖರವೇ ಇಲ್ಲ ಎಂಬ ಭಾವನೆ. ಗಾಂಧಿ, ಮಂಡೇಲಾ, ಮಾರ್ಟಿನ್ ಲೂಥರ್ ಕಿಂಗ್ ಮತ್ತು ಮದರ್ ತೆರೆಸಾ ಇವರೆಲ್ಲ ತಮ್ಮ ಮನೆಗಳಲ್ಲಿ ವಿಶ್ರಮಿಸಲೇ ಇಲ್ಲ. ಸಾವು ಅವರನ್ನು ಆವರಿಸಿಕೊಳ್ಳುವವರೆಗೂ ಕೆಲಸ ಮಾಡುತ್ತಲೇ ಇರುವಂಥವರು. ಎಂಭತ್ತರ ವಯಸ್ಸಿನಲ್ಲಿ ತರುಣರಾಗಿಯೇ ಮೃತ್ಯುವಿಗೆ ಶರಣಾಗುವಂಥವರು.

    ಎಲ್ಲರೂ ಯಶಸ್ಸಿನ ಕನಸು ಕಾಣುವವರೆ. ಆದರೆ ಕೆಲವರು ಮಾತ್ರ ಕನಸಿನಿಂದ ಹೊರಬಂದು ಕಾರ್ಯೋನ್ಮುಖರಾಗುತ್ತಾರೆ. ನೀವು ಕೇವಲ ಕನಸು ಕಾಣುತ್ತ ಇರಬೇಕೆನ್ನುವಿರೊ ಅಥವಾ ಕನಸು ಕಂಡು ಕಾರ್ಯೋನ್ಮುಖರಾಗಬಯಸುವಿರೊ ಅದು ನಿಮಗೆ ಬಿಟ್ಟದ್ದು. ಇದು ತುಂಬ ಸುಲಭದ್ದು ಕೂಡ. ಆಋಂಭಿಸುವುದು ಮಾತ್ರ ಕಷ್ಟದ ಕೆಲಸ. ಸೋಮಾರಿತನವನ್ನು ಕಳಚಿ ಕೊಳ್ಳುವುದು ಬಲು ಕಷ್ಟದ್ದು. ಒಮ್ಮೆ ನೀವು, ಮೊತ್ತ ಮೊದಲ ಸಣ್ಣ ಹೆಜ್ಜೆಯನ್ನು ಇರಿಸಿದರೆ ಸಾಕು, ಮುಂದಿನ ಪಯಣ ತುಂಬ ಆಸಕ್ತಿಯೆನಿಸುತ್ತದೆ. ಜ್ಞಾನ ಸಂಪಾದನೆ ಕೂಡ ಹೀಗೆಯೇ. ಮೌಂಟ್ ಎವರೆಸ್ಟ್ ಏರಿದಂತೆ. ಆರಂಭದಲ್ಲಿ ಮಾತ್ರ ಕಠಿಣ ಎನಿಸುತ್ತದೆ. ಆದರೆ ಯಶಸ್ಸಿನ ಸವಿಯನ್ನೊಮ್ಮೆ ನೀವು ಸವಿದಿರೂ ತುಂಬ ಉತ್ಸಾಹ, ರೋಮಾಂಚಕಾರಿ ಅನುಭವ ನಿಮಗಾಗುತ್ತದೆ.

    ಮೌಂಟ್ ಎವರೆಸ್ಟ್ ಕಲ್ಪನೆ: ತುತ್ತ ತುದಿಯನ್ನು ತಲುಪಬೇಕೆಂಬುದೇ ಪರ್ವತಾರೋಹಿಯ ಕನಸಲ್ಲವೇ? ಹಾಗೆ ತುದಿಗೇರಿ ನಿಲ್ಲುವ ಕನಸನ್ನು ಅವನು ಕಾಣುತ್ತಲೇ ಇರುತ್ತಾನೆ. ಅದು ತುಂಬ ಪ್ರಯಾಸವಾದುದೂ ದುರ್ಗಮವಾದುದಾದರೂ ಆ ಯಾತ್ರೆಯನ್ನು ಆನಂದಿಸುತ್ತಾನೆ. ಜೀವನ ಕೂಡ ಒಂದು ಯಾತ್ರೆಯೆ. ಅಂತಿಮ, ಗಮ್ಯಕ್ಕಾಗಿ ಕನಸು ಕಾಣುತ್ತಲೇ ತನ್ನ ಕಾರ್ಯವನ್ನು ತುಂಬ ಸವಿಯುತ್ತ, ಆನಂದಿಸುತ್ತ ಮಾಡುವವನೇ ತನ್ನ ಬದುಕಿನಲ್ಲಿ ನೆಮ್ಮದಿಯನ್ನು ಕಾಣಬಲ್ಲ.

    ಇದಕ್ಕೆ ತದ್ವಿರುದ್ಧವಾಗಿ, ಉನ್ನತ ಶಿಕ್ಷಣ ಪಡೆದು, ಅತ್ಯುನ್ನತ ಹುದ್ದೆಗೇರಬೇಕೆಂಬ ಯೋಚನೆಯುಳ್ಳ ವಿದ್ಯಾರ್ಥಿಯು, ತನ್ನ ವ್ಯಾಸಂಗದಲ್ಲಿ ಆನಂದದ ಅನುಭೂತಿಯನ್ನು ಪಡೆಯದೆ ಹೋದರೆ, ತಾರುಣ್ಯವನ್ನು ವ್ಯಾಕುಲತೆಯಲ್ಲಿ ಕಳೆದುಕೊಂಡುಬಿಡುತ್ತಾನೆ. ಈ ಕಾರಣದಿಂದಲೇ ಅವನಲ್ಲಿ ಏಕಾಗ್ರತೆಯ ಕೊರತೆ ಉಂಟಾಗುತ್ತದೆ. ಜ್ಞಾನ ಸಂಪಾದನಾ ಯಾತ್ರೆಯ ಇಂಚಿಂಚೂ ನೀವು ಆನಂದಿಸದೇ ಹೋದರೆ, ಓದಿನಲ್ಲಿ ನಿಮಗೆ ಏಕಾಗ್ರತೆ ಕುದುರಲಾರದು.

    ತರುಣನೊಬ್ಬ ಒಮ್ಮೆ ಗಾಂಧೀಜಿಯವರ ಬಳಿ ಹೋಗಿ ಕೇಳಿದನಂತೆ: ನಿಮ್ಮಂತ ನಾನು ಒಬ್ಬ ದೊಡ್ಡ ಮನುಷ್ಯವಾಗಬೇಕು. ಹಾಗಾಗಲು ನಾನು ಏನೇನು ಮಾಡಬೇಕು? ಹೇಳಿ’, ಎಂದು. ಮಹಾತ್ಮರು ಸರಳವಾಗಿ ಹೇಳಿದರು: ನೀನು ಮಾಡುತ್ತಿರುವ ಕೆಲಸವನ್ನು ತುಂಬ ಪ್ರೀತಿಸುತ್ತ ಮಾಡು. ದುರದೃಷ್ಟವೆಂದರೆ, ನಮ್ಮಲ್ಲಿ ಬಹಳ ಜನ ಗುರಿಯನ್ನು ಇಷ್ಟಪಡುತ್ತೇವೆಯೇ ಹೊರತು, ಪಯಣವನ್ನಲ್ಲ". ಈ ಮಾತು ವಿದ್ಯಾರ್ಥಿಗಳಿಗಂತೂ ತುಂಬ ಅನ್ವಯವಾಗುತ್ತದೆ.

    ತೂಕ ಕಡಿಮೆಮಾಡಿಕೊಳ್ಳಲು ಯೋಗಾಭ್ಯಾಸ ಕೇಂದ್ರಕ್ಕೆ ಸೇರಿದೆ. ಆದರೆ ಪ್ರತಿದಿನ ಆ ವ್ಯಾಯಾವದ ಸಮಯ ಸಮೀಪಿಸುತ್ತಿದ್ದಂತೆ ತುಂಬ ಕಿರಿಕಿರಿಯೆನಿಸುತ್ತಿತ್ತು. ನನಗೆ ತುಂಬ ಗಿಲ್ಟಿಯೆನಿಸುತ್ತಿದ್ದರೂ ತಪ್ಪಿಸಲು ಸೂಕ್ತ ಕಾರಣಗಳಿಗಾಗಿ ತಡಕಾಡುತ್ತಿದ್ದೆ. ಅದರರ್ಥ ನನಗೆ ತೆಳ್ಳಗಾಗುವುದು ಬೇಕಿತ್ತು, ಅದರೆ, ವ್ಯಾಯಾಮದ ಶ್ರಮ ಬೇಡವಾಗಿತ್ತು. ನನಗೊಮ್ಮೆ ಫಲಿತಾಂಶ ಕಾಣಿಸಿಕೊಂಡು, ದೇಹ ಹಗುರಾದಂತೆ ಅನಿಸಿದಾಗ ಅದು ಇಷ್ಟವಾಗಹತ್ತಿತು. ಈ ಅರಿವು ವಿದ್ಯಾರ್ಥಿಗಳಿಗೆ ಅವರ ಅಭ್ಯಾಸಕ್ಕೆ ಸಂಬಂಧಿಸಿದಂತೆ, ತುಂಬ ವಾಸ್ತವವೆನಿಸುತ್ತದೆ. ‘ಜ್ಞಾನ ಸಂಪಾದನೆ’ ಕೂಡ ಕ್ರೀಡೆಯಷ್ಟೇ ಉಲ್ಲಾಸಭರಿತವೆನಿಸಬೇಕು. ಗಣಿತದ ಗಂಟನ್ನು ಬಿಡಿಸುವುದು ತುಂಬ ಮೋಜಿನದೆನಿಸಬೇಕು. ಹಳಗನ್ನಡ ಕಾವ್ಯವನ್ನೋದುವುದು ಮನೋಲ್ಲಾಸ ಉಂಟು ಮಾಡುತ್ತದೆನಿಸಬೇಕು. ಸಂಕೀರ್ಣ ನ್ಯಾಯ ಕಾನೂನುಗಳ ಚರ್ಚೆಯಲ್ಲಿ ತೊಡಗುವುದು, ವೈಜ್ಞಾನಿಕ ಕಥೆಯನ್ನು ಓದುವುದು ಇವೆಲ್ಲ ಮನರಂಜಕ ಆಟಗಳೆನಿಸಬೇಕು. ಇದನ್ನೊಮ್ಮೆ ನೀವು ಚೆನ್ನಾಗಿ ಅಂತರ್ಗತ ಮಾಡಿಕೊಂಡಿರಾದರೆ, ಇತರರಿಗಿಂತ ನೀವು ಬೇರೆಯಾಗಿರುವುದು ನಿಮ್ಮ ಅರಿವಿಗೇ ಬಂದುಬಿಡುತ್ತದೆ. ಸಂತೋಷಕ್ಕಾಗಿ ಕೆಲಸ ಮಾಡಬಯಸುವಂತಾಗುತ್ತೀರಿ. ತಾನು ಸುಮ್ಮನೆ ಕುಳಿತಾಗಲೆಲ್ಲ ತುಂಬ ಆಯಾಸವೆನಿಸುತ್ತಿತ್ತು ಎಂದು ಪಿಕಾಸೋ ಹೇಳುತ್ತಿದ್ದ. ಆಂಡಿ ಹಾಲ್ ಫೋಟೋಗ್ರಫಿಯಲ್ಲಿ ಎಂಥ ಹೆಸರು ಮಾಡುದವನಲ್ಲವೇ? ಅವನಿಗೊಮ್ಮೆ, ಇಂತಹ ಅದ್ಭುತ ಫೋಟೋಗಳನ್ನು ತೆಗೆಯುವ ತಮ್ಮ ಗುಟ್ಟೇನು? ಎಂದು ಕೇಳಿದಾಗ ಅವನು ಉತ್ತರಿಸಿದ್ದ: ಒಂದು ಸಾವಿರ ಫೋಟೋಗಳನ್ನು ಕ್ಲಿಕ್ಕಿಸುತ್ತೇನೆ. ಅವುಗಳಲ್ಲಿ ಒಂಬೈನೂರ ತೊಂಬತ್ತೊಂಬತ್ತು ಫೋಟೋಗಳನ್ನು ಎಸೆದುಬಿಡುತ್ತೇನೆ.

    ವಿಜ್ಞಾನವೆಂಬುದು ವ್ಯವಸ್ಥಿತ ಜ್ಞಾನವಾದರೆ; ವಿವೇಕವೆಂಬುದು ‘ವ್ಯವಸ್ಥಿತ ಬದುಕು’. ಜ್ಞಾನ ನುಡಿಯುತ್ತದೆ: ವಿವೇಕ ಆಲಿಸುತ್ತದೆ.

    ‘ಅಧ್ಯಯನ ಕಲೆಯ ಕುರಿತಾದ’ ಕಾರ್ಯ ಗಾರದ ನನ್ನ ಆರಂಭಿಕ ಉಪನ್ಯಾಸದಲ್ಲಿ ಜೀವನವನ್ನು ಪಯಣಕ್ಕೆ

    Enjoying the preview?
    Page 1 of 1