Discover millions of ebooks, audiobooks, and so much more with a free trial

Only $11.99/month after trial. Cancel anytime.

Manimaale
Manimaale
Manimaale
Ebook341 pages1 hour

Manimaale

Rating: 0 out of 5 stars

()

Read preview

About this ebook

Mr.B.R.Lakshmana Rao, born in Chickballapur and worked as tutor till his retirement. He has published various works across different categories like Novels, Poems, Plays and Songs, etc.

He has won various awards including the famous awards like Karnataka Sahithya Academy Prize for poetry (1981), Goruru Sahithya Prashasti (1998), Chutuku Ratna Prashasti (1998) and Visvesvarayya Sahithya Prashasti (2000), etc.

He was the president of Kolar District Sahitya Sammelana in 2006. He was also invited to participate in the AKKA Literary Convention held in New Jersy, USA, in 2010. He participated in Karnataka Rajyotsava as an invitee in Singapore and Qatar in 2013. He was invited and felicitated as a guest- poet in the `Ugadi Festival’ held in Liverpool, UK, in March, 2015. He presided over the Hanigavana Goshti in Kannada Samskruti Sammelana held in Dubai and Sharja on 19th and 20th of Navembar 2015.His poems are translated into English, Hindi, Malayalam, Tamil, Telugu, Oriya, Bengali, Kashmiri and several other Indian languages. His poems have been prescribed for study in School and University text books in Karnataka. Feature films have been made based on his stories- Ondu premade kate and Kabbekku. A TV serial was made based on his novel- Heegondu Premakate. His play, a comedy- Nanagyaako Doutu, has been successfully staged by several dramatic troupes in Karnataka and also in the USA.

LanguageKannada
Release dateAug 12, 2019
ISBN6580212201718
Manimaale

Read more from B.R.Lakshmana Rao

Related to Manimaale

Related ebooks

Reviews for Manimaale

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Manimaale - B.R.Lakshmana Rao

    http://www.pustaka.co.in

    ಮಣಿಮಾಲೆ

    Manimaale

    Author :

    ಬಿ.ಆರ್. ಲಕ್ಷ್ಮಣರಾವ್

    B.R. Lakshmana Rao

    For more books

    http://www.pustaka.co.in/home/author/br-lakshmana-rao

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಮಣಿಮಾಲೆ

    ವ್ಯಕ್ತಿಚಿತ್ರಗಳು

    ಬಿ.ಆರ್. ಲಕ್ಷ್ಮಣರಾವ್

    ಅರ್ಪಣೆ

    ‘ಮಯೂರ’ದ ನನ್ನ ಅಂಕಣ ಬರಹಗಳಿಗೆ ಕಾರಣರಾದ

    ಸೋದರಿ ಆರ್. ಪೂರ್ಣಿಮಾ ಅವರಿಗೆ

    ಪ್ರೀತಿಯಿಂದ

    ಧನ್ಯವಾದ ನಿಮಗೆ

    ಈ ‘ಮಣಿಮಾಲೆ’ಗಾಗಿ ನಾನು ಮೊದಲು ಧನ್ಯವಾದ ಹೇಳಬೇಕಾದ್ದು ಪತ್ರಕರ್ತೆ, ಪ್ರಿಯ ಸೋದರಿ ಆರ್. ಪೂರ್ಣಿಮಾ ಅವರಿಗೆ. ಅವರು ಪ್ರೀತಿಯಿಂದ ಒತ್ತಾಯಿಸಿ, ಒಪ್ಪಿಸದೇ ಇದ್ದಿದ್ದರೆ, ‘ಮಯೂರ’ದಲ್ಲಿನ ಇಲ್ಲಿನ ಅಂಕಣ ಬರಹಗಳನ್ನು ನಾನು ಬಹುಶಃ ಬರೆಯುತ್ತಿರಲಿಲ್ಲ. ಆದ್ದರಿಂದ ಈ ಕೃತಿಯನ್ನು ಸಲ್ಲಬೇಕಾದ ಅವರಿಗೇ ಸಲ್ಲಿಸಿದ್ದೇನೆ.

    ‘ಮಯೂರ’ದಲ್ಲಿ ಪ್ರಕಟವಾದ ಲೇಖನಗಳನ್ನು ಈ ಸಂಕಲನದಲ್ಲಿ ಬಳಸಿಕೊಳ್ಳಲು ತಮ್ಮ ಅನುಮತಿಯನ್ನು ನೀಡಿ, ಸಹಹರಿಸಿರುವ ಸಂಪಾದಕರಾದ ಕೆ.ಎನ್. ಶಾಂತಕುಮಾರ್ ಅವರಿಗೆ ನನ್ನ ಧನ್ಯವಾದಗಳು.

    ನನ್ನೆಲ್ಲ ಬರಹಗಳ ಮೊದಲ ಮತ್ತು ವಿಮರ್ಶಕಿಯಷ್ಟೇ ಅಲ್ಲದೆ, ಅವುಗಳನ್ನು ನನ್ನ ಗಣಕಯಂತ್ರದಲ್ಲಿ ಬೆರಳಚ್ಚು ಮಾಡುವಲ್ಲಿ ನನಗೆ ಸದಾ ನೆರವಾಗುವ ನನ್ನ ಬಾಳಸಂಗಾತಿ ಗಿರಿಜಳಿಗೆ ‘ಥ್ಯಾಂಕ್ಯೂ ಮೇಡಂ’.

    ಸಂಕಲನಕ್ಕೆ ಪ್ರೀತಿಯಿಂದ ಮೌಲಿಕ ‘ಮುನ್ನುಡಿ’ ಬರೆದಿರುವ ಖ್ಯಾತ ಕತೆಗಾರ ಮಿತ್ರರಾದ ಕೆ. ಸತ್ಯನಾರಾಯಣ ಹಾಗೂ ‘ಬೆನ್ನುಡಿ’ ಬರೆದಿರುವ ಖ್ಯಾತ ಕತೆಗಾರ್ತಿ, ಪ್ರೀತಿಯ ಸೋದರಿ ವೈದೇಹಿ ಅವರಿಗೆ ಒಲವಿನ ವಂದನೆಗಳು.

    ನನಗಷ್ಟೇ ಅಲ್ಲದೆ, ನನ್ನ ಕುಟುಂಬದ ಎಲ್ಲರಿಗೂ ಆತ್ಮೀಯರಾಗಿ ಬಿಟ್ಟಿರುವ ‘ಅಂಕಿತ ಪುಸ್ತಕ’ದ ಪ್ರಕಾಶಕ ದಂಪತಿ ಪ್ರಕಾಶ್ ಕಂಬತ್ತಳ್ಳಿ ಮತ್ತು ಪ್ರಭಾ ಕಂಬತ್ತಳ್ಳಿ ಅವರಿಗೆ –

    ಎಂದಿನಂತೆ, ತಮ್ಮ ಕಲಾತ್ಮಕ ಚಿತ್ರವಿನ್ಯಾಸದಿಂದ ಪುಸ್ತಕದ ರಕ್ಷಾಪುಟವನ್ನು ಸಿಂಗರಿಸಿರುವ ಯುವ ಕಲಾವಿದ ಮಿತ್ರ ಅಪಾರ ಅವರಿಗೆ –

    ತಮ್ಮ ನಿರಂತರ ಪ್ರೀತಿಯಿಂದ ನನ್ನನ್ನು ಪೊರೆಯುತ್ತಿರುವ ನನ್ನ ಕುಟುಂಬದ ಎಲ್ಲ ಸದಸ್ಯರಿಗೆ, ಗೆಳೆಯ ಗೆಳತಿಯರಿಗೆ, ಸಹೃದಯ ಓದುಗ ಬಂಧುಗಳಿಗೆ –

    ನನ್ನ ಹೃತ್ಪೂರ್ವಕ ಧನ್ಯವಾದಗಳು.

    ಮುನ್ನುಡಿ

    ‘ಪ್ರೀತಿ, ಸ್ನೇಹಗಳ ವಿಷಯಕ್ಕೆ ಬಂದರೆ ನಾನು ತುಂಬ ಅದೃಷ್ಟವಂತ. ಈ ಎರಡೂ ನನಗೆ ಈವರೆಗಿನ ನನ್ನ ಬಾಳಿನಲ್ಲಿ ಧಾರಾಳವಾಗಿ ದೊರೆತಿವೆ. ತಂದೆಯ ಅಕ್ಕರೆ, ತಾಯಿಯ ವಾತ್ಸಲ್ಯ, ಒಡಹುಟ್ಟಿದವರ ಪ್ರೀತಿ, ಒಡನಾಡಿಗಳ ಸ್ನೇಹ, ಕೈಹಿಡಿದವಳ ಕಾಳಜಿ – ಇವೆಲ್ಲ ದೊರೆಯುವುದು ಬಹುಪಾಲು ಎಲ್ಲರಿಗೂ ಸಹಜವೇ. ಆದರೆ ನನಗೆ ಒದಗಿ ಬಂದಂತೆ ಅವ್ಯಾಹತವಾಗಿರುವುದು ಅಪರೂಪ’.

    ಬಿ.ಆರ್. ಲಕ್ಷ್ಮಣರಾವ್ ಬರೆದುಕೊಂಡಿರುವ ಮೇಲಿನ ಮಾತುಗಳನ್ನು ನಮಗೆ ಎಷ್ಟು ಜನಕ್ಕೆ ಪ್ರಾಮಾಣಿಕವಾಗಿ ಬರೆದುಕೊಳ್ಳಲು ಸಾಧ್ಯ? ಅದೂ ಇಪ್ಪತ್ತೊಂದನೆಯ ಶವಮಾನದ ಸರಕು-ಸಂಸ್ಕೃತಿಯ ವಾತಾವರಣದಲ್ಲಿ? ಬಿ.ಆರ್.ಎಲ್. ಈ ಮಾತುಗಳನ್ನು ಭಾವುಕ ನೆಲೆಯಲ್ಲಿ ಬರೆದಿಲ್ಲ. ಇಳಿವಯಸ್ಸಿನಲ್ಲಿ, ಮಾಗಿದ ವನಸ್ಸಿನ ಹಿನ್ನಲೆಯಲ್ಲಿ ಬರೆಯುತ್ತಿದ್ದಾರೆ. ಪ್ರೀತಿ, ಸ್ನೇಹಗಳನ್ನು ಯಾವುದೇ ರೀತಿಯ ಕೊಂಕು ನಿರೀಕ್ಷೆಯಿಲ್ಲದೆ ಪಡೆಯುವುದೂ ಕಷ್ಟ. ಕೊಡುವುದಂತೂ ಇನ್ನೂ ಕಷ್ಟ. ಪ್ರೀತಿ, ಸ್ನೇಹದ ಮಾತು ಬಂದಾಗ ನಮಗೆ ಪಡೆಯುವ ಗಮನ ಇರುತ್ತದೆಯೇ ಹೊರತು ಕೊಡುವ ಕಡೆಗಿರುವುದಿಲ್ಲ. ಪ್ರೀತಿ, ಸ್ನೇಹವನ್ನೂ ಕೂಡ ಅಂತರಂಗದ ಹಾತೊರೆಯುವಿಕೆಯಾಗಿ, ಅಭಿವ್ಯಕ್ತಿಯಾಗಿ ನೋಡುವ ಬದಲು ಭಾವುಕತೆಯ ಪ್ರತೀಕವಾಗಿ ನೋಡುವುದನ್ನು ಹೊಸಕಾಲದ ವೈಚಾರಿಕತೆ ನಮಗೆ ಕಲಿಸಿಕೊಟ್ಟಿದೆ. ಹಾಗಾಗಿ ನಮ್ಮ ಆತ್ಮೀಯ ಸಂಬಂಧಗಳನ್ನೂ ಕೂಡ ನಾವು ವ್ಯಂಗ್ಯದಲ್ಲೇ, ಸಿನಿಕತನದಲ್ಲೇ ಸ್ವೀಕರಿಸುತ್ತೇವೆ, ಒಪ್ಪುವುದಿಲ್ಲ. ನಿರ್ಮಲ ಪ್ರೀತಿ ಮತ್ತು ಸ್ನೇಹವು ಇನ್ನೊಬ್ಬರನ್ನು ಇರುವ ಹಾಗಯೇ ಸ್ವೀಕರಿಸುತ್ತದೆ. ನಾವು ಬಯಸುವ ಹಾಗೆ ಅವರು ಇರಬೇಕೆಂದು ಕೊರಗುವುದಿಲ್ಲ. Politically Correct ಆಗಿದೆಯೆಂದು ತೋರಿಸುವ ತಂತ್ರಗಾರಿಕೆ ಇರುವಿದಿಲ್ಲ.

    ಲಕ್ಷ್ಮಣರಾವ್ ಅವರ ಸಂಬಂಧ, ಸ್ನೇಹಗಳ ವ್ಯಾಪ್ತಿ, ತಿವ್ರತೆ, ಕಕ್ಕುಲಾತಿಯನ್ನು ಈ ಬರಹಗಳಲ್ಲಿ ಗಮನಿಸುವವರಿಗೆ ಮೆಲುನೋಟಕ್ಕೆ ಇವೆಲ್ಲ ಮಾನ್ಯರಾದ ಸಾಹಿತಿ ಮಿತ್ರರೊಡನೆ ಒಡನಾಟದ ದಾಖಲೆಗಳಂತೆ ಕಂಡರೂ, ಈ ಬರವಣಿಗೆಯ ಹಿಂದಿರುವ ಮನೋಧರ್ಮ, ತಾತ್ವಿಕತೆಯನ್ನು ನೋಡಹೊರಟರೆ, ಮೇಲಿನ ಪ್ಯಾರದಲ್ಲಿ ಬರೆದಿರುವ ಎಲ್ಲ ಮಾತುಗಳೂ ಈ ಬರವಣಿಗೆಯಿಂದಲೇ ಮೂಡಿವೆ ಎಂಬುದು ಯಾರಿಗಾದರೂ ಗೊತ್ತಾಗುತ್ತದೆ. ಈ ಬರಹಗಳ ಮೂಲಕ ಲಕ್ಷ್ಮಣರಾವ್ ನಮ್ಮ ಕಾಲಕ್ಕೆ ಬೇಕಾದ ಮನುಷ್ಯಸಂಬಂಧದ ಸ್ವರೂಪದ ಬಗ್ಗೆ ತಮ್ಮದೇ ಆದ ವ್ಯಾಖ್ಯಾನ ಮತ್ತು ನಿರೀಕ್ಷೆಯನ್ನು ಮಂಡಿಸುತ್ತಿದ್ದಾರೆ ಅನ್ನಿಸುತ್ತದೆ.

    ತಮ್ಮ ಮಾನಸಪುತ್ರಿ ಪೂರ್ಣಿಮಾ ಬಗ್ಗೆ ಇವರ ಬರಹವನ್ನೇ ಗಮನಿಸೋಣ: ಪೂರ್ಣಿಮಾ ಅವರಂತಹ ಒಬ್ಬ ಗೃಹಿಣಿಯನ್ನು, ಅಂತಹವರೊಡನೆ ಒಡನಾಟವನ್ನು ಎಷ್ಟು ಜನಕ್ಕೆ ಬಯಸಲು, ಬಯಸಿದರೂ ಸಿಕ್ಕಿದಾಗ ಒಪ್ಪಿಕೊಳ್ಳಲು, ಒಪ್ಪಿಕೊಂಡು ತನ್ನ ಪ್ರೀತಿಯನ್ನು, ಸ್ನೇಹವನ್ನು ಕೊಡಲು ಸಾಧ್ಯ? ವಯಸ್ಸಾದಂತೆ ನಮಗೆ ಪ್ರೀತಿಸುವ ಶಕ್ತಿ ಮಾತ್ರ ಕಡಿಮೆಯಾಗುವಿದಿಲ್ಲ; ಪ್ರೀತಿಯನ್ನು ಬಯಸುವ ಮತ್ತು ಒಪ್ಪಿಕೊಳ್ಳುವ ಶಕ್ತಿಯೂ, ಇಚ್ಛೆಯೂ ಕೂಡ ಕಡಿಮೆಯಾಗುತ್ತದೆ. ಈ ದೃಷ್ಟಿಯಿಂದ ಲಕ್ಷ್ಮಣರಾವ್ ಅವರದು ತೆರೆದ ಹೃದಯದ ನಿರಂತರ ಹಾತೊರೆಯುವಿಕೆ. ಹಳೆಯ ಸಂಬಂಧಗಳು ಹಳಸಿಕೊಂಡಾ, ಕಾವು ಕಳೆದುಕೊಂಡಾಗ, ಪರ್ಯಾಯವಾಗಿ ಈ ರೀತಿಯ ಹಾತೊರೆಯುವಿಕೆ ಜಾಗೃತವಾಗುತ್ತದೆಯೇ ಎಂದು ನನಗೆ ನಾನೇ ಸಿನಿಕ ಪ್ರಶ್ನೆ ಕೇಳಿಕೊಂಡೆ. ದೀರ್ಘಕಾಲದ ಸಂಬಂಧಗಳ ಬಗ್ಗೆಯೂ ಲಕ್ಷ್ಮಣರಾವ್ ಅವರ ಇಲ್ಲಿನ ಬರಹಗಳು ಇಷ್ಟೇ ಲವಲವಿಕೆಯಿಂದ, ಇಂತಹ ಮನೋಧರ್ಮದಿಂದಲೇ ಕೂಡಿವೆ ಎಂಬುದನ್ನು ಗಮನಿಸಿದಾಗ ನನ್ನ ಸಂದೇಹ ಹಿಂದೆ ಸರಿಯಿತು.

    ಮನುಷ್ಯಸಂಬಂಧಗಳಲ್ಲಿ ನಾವೇ ನಿರ್ಮಿಸಿಕೊಳ್ಳುವ ಒಂದು ತೊಡಕೆಂದರೆ, ಕೆಲವು ರೀತಿಯ ವ್ಯಕ್ತಿಗಳನ್ನು, ನಿರ್ದಿಷ್ಟ ಹಿನ್ನೆಲೆಯ ಮನುಷ್ಯರನ್ನು, ಮನುಷ್ಯ ಸ್ವಭಾವದಲ್ಲಿ ನಮಗೆ ಪ್ರಿಯವಾದ ಆಯಾಮವನ್ನು ಮಾತ್ರ ಮಾನದಂಡವಾಗಿ ಒಪ್ಪಿಕೊಂಡು, ಉಳಿದ ಜೀವಂತ ಮನುಷ್ಯರಿಗೆ ನಮ್ಮ ಮನಸ್ಸನ್ನು, ಹಥದಯವನ್ನು ಮುಚ್ಚಿಬಿಡುವುದು. ಇದನ್ನು ಮೀರಬೇಕು ಎಂದು ಹೇಳುವುದು ಸುಲಭ. ಆದರೆ ನಮ್ಮೆಲ್ಲರಿಗೂ ನಮಗೇ ವಿಶಿಷ್ಟವಾದ ಪೂರ್ವಗ್ರಹಗಳನ್ನು ಬಿಟ್ಟರೆ ಸ್ವಂತದ್ದು ಎನ್ನುವಂಥದ್ದು ಏನೂ ಇರುವುದಿಲ್ಲ. ಇಲ್ಲಿನ ಬರವಣಿಗೆಯಲ್ಲಿ ಯಾವುದೇ ಮಾದರಿಯ ಮಾನದಂಡಗಳ ಹೊರೆಯಿಲ್ಲ. ವಿಕ್ಷಿಪ್ತ ಸ್ವಭಾವದ ಲಂಕೇಶ್, ಸಂವೇದನಾಶೀಲ ಜಂಟಲ್ ಮ್ಯಾನ್ ಜಿಯೆಸ್ಸೆಸ್, ಗೃಹಿಣಿ ಪೂರ್ಣಿಮಾ, ಮುಕ್ತಮನಸ್ಸಿನ ಸಮಾಜಸೇವಕರಾದ ಇಬ್ರಾಹಿಂ ಸಾಹೇಬರು, ಸಾಹಿತ್ಯದ ಮೂಲಕ ಸಾಮಾಜಿಕತೆಯನ್ನೂ, ಸಾಮಾಜಿಕತೆಯ ಮೂಲಕ ಸಾಹಿತ್ಯವನ್ನೂ ಮೀರಲು ಹವಣಿಸುವ ಮೇಸ್ಟ್ರು ರಘುನಾಥ – ಈ ಎಲ್ಲರನ್ನೂ ಸಮಾನ ನೆಲೆಯಲ್ಲಿ ನೋಡಬಲ್ಲ, ಸ್ವೀಕರಿಸಬಲ್ಲ ಲಕ್ಷ್ಮಣರಾವ್ ಅವರ ಭಾವಶ್ರೀಮಂತಿಕೆ ಯಾರಿಗಾದರೂ ಇಷ್ಟವಾಗುತ್ತದೆ. ಈ ಭಾವಶ್ರೀಮಂತಿಕೆಗೆ ಇನ್ನೂ ಕೆಲವು ಸ್ತರಗಳಿವೆ. ಪ್ರಸಿದ್ಧ ಕವಿ ಎಚ್ಚೆಸ್ವಿ ಇವರಿಗೆ ಎಷ್ಟು ಆತ್ಮೀಯರೆಂಬುದು ಇಡೀ ಕರ್ನಾಟಕಕ್ಕೇ ಗೊತ್ತಿದೆ. ಈ ಸ್ನೇಹದ ಸಲಿಗೆಯೇ ಕಾರಣವಾಗಿ ಎಚ್ಚೆಸ್ವಿ ಅವರನ್ನು ಎಲ್ಲೂ ಲಘುವಾಗಿ ಕಾಣುವ, ಹಿನ್ನೆಲೆಗೆ ಸರಿಸುವ ಪ್ರಯತ್ನವಿಲ್ಲ. ಹಾಗೆಯೇ ಈ ಸಂಬಂಧದ ಆಳ, ಇವರ ಬರವಣಿಗೆಯ ಹಾಗೂ ವ್ಯಕ್ತಿತ್ವದ ಮನೋಧರ್ಮವನ್ನೇ ಮಾನದಂಡವಾಗಿ ಇಟ್ಟುಕೊಂಡು ಉಳಿದ ಸಾಹಿತಿಗಳನ್ನು, ಅವರೊಡನೆ ದಕ್ಕಿದ ಒಡನಾಟವನ್ನು ಬೆಲೆ ಕಟ್ಟುವ ಪ್ರಯತ್ನವೂ ಇಲ್ಲ. ಈ ಸಮತೋಲನ ಮತ್ತು ಹದವನ್ನು ಜೀವನದಲ್ಲೂ ಬರವಣಿಗೆಯಲ್ಲೂ ಸಾಧಿಸುವುದು ಬಲು ಕಷ್ಟ. ಇನ್ನೊಬ್ಬರನ್ನು ಮೆಚ್ಚಲೆಂದು ಈಗಾಗಲೇ ಮೆಚ್ಚಿದವರನ್ನು, ಆತ್ಮೀಯರಾದವರನ್ನು ಹಿನ್ನೆಲೆಗೆ ಸರಿಸುವುದು, ಹೀಗೆ ಸರಿಸದಿರಲೆಂದೇ ಹಿಂದಿನ ಸಂಬಂಧಗಳಿಗೆ ಆತುಕೊಳ್ಳುವುದು – ಎರಡೂ ವಿಕ್ಷಿಪ್ತ ರೀತಿಯ ತುದಿಗಳೇ. ಈ ತುದಿಗಳಿಂದ ಲಕ್ಷ್ಮಣರಾವ್ ಬರವಣಿಗೆಯೂ ವ್ಯಕ್ತಿತ್ವವೂ ನಿರಾಯಾಸವಾಗಿ ತಪ್ಪಿಸಿಕೊಂಡಿವೆ.

    ಇವು ವೈಯಕ್ತಿಕ ಚಿತ್ರಗಳೇ ಅಥವಾ ವ್ಯಕ್ತಿಚಿತ್ರಗಳೇ ಎಂಬುದು ಇನ್ನೊಂದು ಪ್ರಶ್ನೆ. ಇವರೊಡನೆ ಒಡನಾಟದಲ್ಲಿ ನನಗೆ ಸಿಕ್ಕಿದ್ದು ಇಷ್ಟು, ಹೀಗೆ ಸಿಕ್ಕಿದ್ಧೇ ಮಹತ್ವದ ನಿಧಿಯೆಂದು ಸಂಭ್ರಮಿಸಿ ಬರೆಯುವ ಲಕ್ಷ್ಮಣರಾವ್ ಇಲ್ಲಿನ ಸಾಹಿತಿಗಳ ಸಾಹಿತ್ಯಿಕ ಸಾಧನೆಯ ಬಗ್ಗೆ ಸೂಚ್ಯವಾದ ಮಾತುಗಳನ್ನಾಡುತ್ತಾರೆಯೇ ಹೊರತು ವಿವರವಾಗಿ ಪ್ರಸ್ತಾಪಿಸಲು, ಬೆಲೆಕಟ್ಟಲು ಹೋಗುವಿದಿಲ್ಲ. ಹಾಗಾಗಿ ಇವು ಪೂರ್ಣಪ್ರಮಾಣದ ವ್ಯಕ್ತಿಚಿತ್ರಗಳಾಗುವುದಿಲ್ಲ. ಅಂಥ ವ್ಯಕ್ತಿಚಿತ್ರಗಳನ್ನು ಬರೆಯುವುದು ಲಕ್ಷ್ಮಣರಾವ್ ಉದ್ದೇಶವೂ ಅಲ್ಲ. ಇನ್ನೊಂದು ಮಾತನ್ನೂ ಸಹ ಇಲ್ಲಿ ಸೇರಿಸಬೇಕು. ತನಗೆ ಸಿಕ್ಕ ಒಡನಾಟದ ಸ್ವರೂಪಕ್ಕೂ, ಈ ಸ್ವರೂಪಕ್ಕೆ ಕಾರಣರಾದವರ ವ್ಯಕ್ತಿತ್ವದ ಸ್ವಭಾವಕ್ಕೆ ಲಕ್ಷ್ಮಣರಾವ್ ತಮ್ಮ ಪರವಾಗಿಯೂ, ಕನ್ನಡಿಗರ ಪರವಾಗಿಯೂ ಇಲ್ಲಿನ ಬಹುಪಾಲು ಲೇಖನಗಳ ಕೊನೆಯಲ್ಲಿ ಕೃತಜ್ಞತೆಗಳನ್ನು ಸಲ್ಲಿಸುತ್ತಾರೆ. ನಮಗೆ ಸಿಕ್ಕುವ ಎಲ್ಲ ಸಂಬಂಧಗಳಿಗೂ ನಾವು ಕೃತಜ್ಞರಾಗಿರಬೇಕೆಂಬ ಕಲ್ಪನೆಯೇ ಸುಂದರವಾದದ್ದು.

    ಲಕ್ಷ್ಮಣರಾವ್ ಅವರ ಒಡನಾಟದ ಮಾದರಿಗಳನ್ನು ಓದುವಾಗ ಇನ್ನೆರಡು ವ್ಯಕ್ತಿಚಿತ್ರ-ಒಡನಾಟದ ಮಾದರಿಗಳು ನನ್ನ ಮನಸ್ಸಿಗೆ ಬಂದವು. ಈ ಎರಡೂ ಮಾದರಿಗಳು ಬೇರೆ ಬೇರೆ ಕಾಲಮಾನದಲ್ಲಿ, ಭಿನ್ನ ಮನೋಧರ್ಮದವರಿಂದ ರಚಿತವಾದವುಗಳು. ಬಿ.ಜಿ.ಎಲ್. ಸ್ವಾಮಿ ಅವರ ‘ಪಂಚಕಲಶ ಗೋಪುರ’ ಸೃಷ್ಟಿಸುವ ಮಾದರಿಯಲ್ಲಿ ಮನುಷ್ಯಸ್ವಭಾವ, ಅಂಗಿಕ ಚಲನೆ, ದಿನನಿತ್ಯದ ಜೀವನ ಸನ್ನಿವೇಶ – ಇವುಗಳಿಗೇ ಹೆಚ್ಚು ಆದ್ಯತೆ. ಜೊತೆಜೊತೆಗೇ ಆ ದಿನಗಳ ಸಾಹಿತ್ಯಸೃಷ್ಟಿ, ಕಲಿಕೆಯ ಕ್ರಮ, ಗ್ರಹಿಕೆಯ ಕ್ರಮಗಳನ್ನು ಕುರಿತು ಚಿಕಿತ್ಸಕ ಮಾತುಗಳೂ ಕೂಡ. ಇದನ್ನೆಲ್ಲ ನೋಡುವುದು ತೀಕ್ಷ್ಣವಾದ ಹಾಸ್ಯಪ್ರಜ್ಞೆಯಿಂದ. ಇನ್ನೊಂದು ಮಾದರಿ ಎಸ್.ಆರ್. ವಿಜಯಶಂಕರರ ‘ಒಡನಾಟ’ ಕೃತಿಯದು. ವಿಜಯಶಂಕರರದ್ದು ವೈಯಕ್ತಿಕ ಒಡನಾಟಕ್ಕಿಂತ ಸಾಹಿತಿಗಳ ಸಾಹಿತ್ಯಸೃಷ್ಟಿಯ ವಿಶಿಷ್ಟತೆಯನ್ನು ತನ್ನದು ಮಾಡಿಕೊಳ್ಳುವ ಪ್ರಯತ್ನವನ್ನು ವಿಮರ್ಶಾಪ್ರಜ್ಞೆಯ ಮೂಲಕ ಆತ್ಮೀಯ ಸಮ್ಮಿತಿಯಲ್ಲಿ ಹಿಡಿದಿಡುವ ಪ್ರಯತ್ನ. ಲಕ್ಷ್ಮಣರಾಯರ ಕ್ರಮ ಇಬ್ಬರದಕ್ಕಿಂತಲೂ ಭಿನ್ನವಾದದು. ಜೀವಂತಿಕೆ, ತುಂಟತನ, ವಿಮರ್ಶೆಯ ಸೂಚ್ಯಮಾತು, ವೈಯಕ್ತಿಕ ಅನುಭವವನ್ನು ಓದುಗರಿಗೆ ಹಿತವಾಗುವ ಸ್ವರದಲ್ಲಿ ಬಡಿಸುವಂತಹುದು. ಇಲ್ಲಿನ ಬರಹಗಳು ಜನಪ್ರಿಯ ಮಾಸಿಕ ಒಂದರಲ್ಲಿ ಪ್ರಕಟವಾದದ್ದು ಎಂಬುದನ್ನು ಮರೆಯಬಾರದಷ್ಟೇ.

    ಈ ಬರಹಗಳಲ್ಲಿ ನನಗೆ ತುಂಬ ಇಷ್ಟವಾದ ಮತ್ತೊಂದು ಸಂಗತಿ ಎಂದರೆ ಲಕ್ಷ್ಮಣರಾವ್ ವೈಯಕ್ತಿಕ ಚಿತ್ರಗಳನ್ನು ರಚಿಸುವಾಗ ಆಯ್ದುಕೊಳ್ಳುವ ವಿವರಗಳು ಮತ್ತು ಈ ವಿವರಗಳ ಮೇಲಿರುವ ಸಂಯಮದ ಹಿಡಿತದ ರೀತಿ. ಏಕಕಾಲಕ್ಕೇ ಜಾನ್ಸನ್, ಬೊದಿಲೇರ್ ಮತ್ತು ಲಂಕೇಶರಾಗಲು ಪ್ರಯತ್ನಿಸುತ್ತಿದ್ದ ಲಂಕೇಶರಂಥವರ ವಿಕ್ಷಿಪ್ತ ವರ್ತನೆಗಳ ಬಗ್ಗೆ ಎಷ್ಟು ಪುಟಗಳನ್ನಾದರೂ ಬರೆಯಬುದಿತ್ತು. ಅಥವಾ ಪ್ರಥಮಗುರುಗಳು ಎಂದು ವಿಕ್ಷಿಪ್ತತೆಯನ್ನೇ ಜೀವಂತಿಕೆಯೆಂದು ಮೆರುಗು ಕೊಟ್ಟು ಮುಚ್ಚಿಹಾಕಬಹುದಿತ್ತು. ಬಿ.ಆರ್.ಎಲ್. ಎರಡು ತುದಿಗಳಿಗೂ ಹೋಗಿಲ್ಲ. ಸ. ರಘುನಾಥರನ್ನು ಕುರಿತು ಬರಹದಲ್ಲೂ ನಾನು ಇದೇ ರೀತಿಯ ಆಯ್ಕೆ ಮತ್ತು ಸಂಯಮವನ್ನು ಕಂಡೆ. ರಘುನಾಥ ವೈಯಕ್ತಿಕ ಜೀವನದ ದುರಂತ, ಸ್ನೇಹಶೀಲತೆ, ಬರವಣಿಗೆಯ ಪ್ರಪಂಚ, ಸಮಾಜಸೇವೆ – ಎಲ್ಲವನ್ನೂ ಸೂಚಿಸಲು, ಹೀಗೆ ಸೂಚಿಸಿ, ಚಿತ್ರಕ್ಕೆ ಒಂದು ಚೌಕಟ್ಟನ್ನು ಒದಗಿಸಲು ಬೇಕಾದ ಸರಿಯಾದ ಹದಕ್ಕೆ ಪೂರಕವಾದಷ್ಟು ವಿವರಗಳು ಮಾತ್ರ ಬರಹದಲ್ಲಿ ಸೇರಿವೆ. ಇಂತಹ ವಿವರಗಳನ್ನು ನಾವು ಬರವಣಿಗೆಯಲ್ಲಿ ಆಯ್ಕೆ ಮಾಡಿಕೊಳ್ಳುವಾಗ ಪ್ರಜ್ಞಾಪೂರ್ವಕವಾಗಿಯೋ, ಅಪ್ರಜ್ಞಪೂರ್ವಕವಾಗಿಯೋ ಮೋರಲ್ ಸೆನ್ಸಾರ್ ಗಳಂತೆ ಕೆಲಸ ಮಾಡುತ್ತೇವೆ. ಲಕ್ಷ್ಮಣರಾವ್ ಅವರ ಆಯ್ಕೆ ಮತ್ತು ಸಂಯೋಜನೆ ಈ ರೀತಿಯ ಸೆನ್ಸಾರ್ ಧೋರಣಿಯಿಂದ ಬಂದದ್ದಲ್ಲ. ಬರವಣಿಗೆಯ ಹದ ಮತ್ತು ವಸ್ತುನಿಷ್ಟೆಯ ಅಗತ್ಯಕ್ಕಾಗಿ ಮೂಡಿ ಬಂದದ್ದು. ವೈಯೆನ್ಕೆ ಕುರಿತು ಬರಹವನ್ನು ಓದುವಾಗಲೂ ನನಗೆ ಇದೇ ಭಾವನೆ ಬಂತು.

    ವ್ಯಕ್ತಿಚಿತ್ರ-ವೈಯಕ್ತಿಕ ಚಿತ್ರಗಳನ್ನು ರಚಿಸುವವರ ವ್ಯಕ್ತಿತ್ವಕ್ಕೆ ಬರವಣೆಗೆಯಲ್ಲಿ ಎಷ್ಟು ಮತ್ತು ಎಂತಹ ಸ್ಥಾನವಿರಬೇಕು ಎಂಬುದು ಬಾಸ್ವೆಲ್ ಕಾಲದಿಂದಲೂ ಕೇಳಿಬರುತ್ತಿರುವ ಪ್ರಶ್ನೆ. ಈ ಪ್ರಶ್ನೆಗೆ ಉತ್ತರವಿಲ್ಲ. ಕೆಲವು ಮಾದರಿಗಳು ಮಾತ್ರ ಇವೆ. ಮಹದೇವ ದೇಸಾಯಿಯಂತಹವರು ಗಾಂಧಿಯವರನ್ನು ಕುರಿತು ಬರವಣಿಗೆಯನ್ನು ಎಷ್ಟೇ ಸಂಪಾದಿಸಿದರೂ ಮಹದೇವ ದೇಸಾಯಿಯವರ ಬರವಣೆಗೆಯ ಸ್ವಭಾವ ಮುನ್ನೆಲೆಗೆ ಬರುತ್ತದೆಯೇ ಹೊರತು, ಮಹದೇವ ದೇಸಾಯಿಯವರ ವ್ಯಕ್ತಿತ್ವವಲ್ಲ. ಸಾಹಿತಿಳು, ವಿಮರ್ಶಕರು ಬರೆಯುವ ವ್ಯಕ್ತಿಚಿತ್ರ, ಜೀವನಚರಿತ್ರೆಗಳಲ್ಲಿ ಮಾತ್ರ ಬರೆಯುವವನ ವ್ಯಕ್ತಿತ್ವ ಯಾವಾಗಲೂ ಪ್ರಖರವಾಗಿ ಹಾಜರಿರುತ್ತದೆ. ನಿಜ ಹೇಳಬೇಕೆಂದರೆ ಸಾಹಿತಿ, ವಿಮರ್ಶಕ ವ್ಯಕ್ತಿಚಿತ್ರ, ಜೀವನಚರಿತ್ರೆ ಬರೆಯುವುದೇ ತನ್ನ ವ್ಯಕ್ತಿತ್ವವನ್ನು ಸ್ಥಾಪಿಸಿಕೊಳ್ಳಲು. ಲಕ್ಷ್ಮಣರಾವ್ ಅವರ ಬರವಣಿಗೆಯಲ್ಲಿ ಬಹುಪಾಲು ಸಾಹಿತಿ, ವಿಮರ್ಶಕರ ಬರವಣಿಗೆಗಳಲ್ಲಾಗುವಂತೆ ತಾನೇ ಸದಾ ಮುನ್ನೆಲಗೆ ಬಂದು ನಿಲ್ಲುವ, ತನ್ನನ್ನು ಸ್ಥಾಪಿಸಿಕೊಳ್ಳುವ ಪ್ರಜ್ಞಾಪೂರ್ವಕ ಪ್ರಯತ್ನವಿಲ್ಲ. ಲಕ್ಷ್ಮಣರಾವ್ ಇಲ್ಲಿ ಹಾಜರಿರುವುದು, ಇಣುಕಾಡುವುದು, ತಮ್ಮನ್ನು ಸ್ಥಾಪಿಸಿಕೊಳ್ಳುವುದು ಒಬ್ಬ ಸಹೃದಯ ವೀಕ್ಷಕರಾಗಿ, ನಿರೂಪಕರಾಗಿ ಮಾತ್ರ ಒಂದು ರೀತಿಯಲ್ಲಿ ಇದು ಡಿವಿಜಿ ಅವರ ಬರವಣಿಗೆಯ ಮಾದರಿಗೆ ಹತ್ತಿರವಾದದ್ದು.

    ಇಷ್ಟೊಂದು ಸಾಹಿತಿಗಳು, ಕಲಾವಿದರ ಬಗ್ಗೆ ಬರೆಯುವ ಮೂಲಕ ಲಕ್ಷ್ಮಣರಾವ್ ಒಂದು ರೀತಿಯಲ್ಲಿ ಸಾಹಿತ್ಯ ಚರಿತ್ರೆ ಬರೆಯುವ ಕೆಲಸಕ್ಕೂ ಕೈಹಾಕಿದಂತಿದೆ. ನಮ್ಮ ಕಾಲದ ಸಾಹಿತ್ಯ ಚರಿತ್ರೆಯನ್ನು, ಸಾಹಿತಿಗಳ ಜೀವನ ವಿವರಗಳನ್ನು ಸಾಮಾಜಿಕ ದೃಷ್ಟಿಯಿಂದಲೂ, ಸಮಾಜ ಶಾಸ್ತ್ರೀಯ ದೃಷ್ಟಿಯಿಂದಲೂ ಬರೆದು, ಓದಿ ನಮಗೆಲ್ಲರಿಗೂ ಸುಸ್ತಾಗಿದೆ. ಲಕ್ಷ್ಮಣರಾವ್ ಅವರ ಸಾಹಿತ್ಯ ಚಿರಿತ್ರೆಯ ಮಾದರಿಯಲ್ಲಿ ಸಾಮಾಜಿಕ, ಸಮಾಜ ಶಾಸ್ತ್ರೀಯ ಸಂಗತಿಗಳಿಗಿಂತ ಹೆಚ್ಚಾಗಿ ಆ ದಿನಗಳ ವಾತಾವರಣ, ಸ್ಪಿರಿಟ್ ಇವೇ ಸಕಾರಣವಾಗಿ ಮುನ್ನೆಲೆಗೆ ಬರುತ್ತವೆ. ವೈಯೆನ್ಕೆ, ಜಿಯೆಸ್ಸೆಸ್ ಇಂಥವರ ಸಂಸ್ಕೃತಿ ಸೇವೆ ನಮಗೆ ಸರಿಯಾಗಿ ಮನದಟ್ಟಾಗಬೇಕಾದರೆ ಆ ಕಾಲದ ವಾತಾವರಣ, ಸ್ಪಿರಿಟ್ ಅನ್ನು ನಿರ್ಮಿಸಲು ಅವರು ಮಾಡಿದ ಪ್ರಯತ್ನಗಳ ಆತ್ಮೀಯ ವಿಶ್ಲೇಷಣೆಯಿಂದ ಮಾತ್ರ ಸಾಧ್ಯ. ಮೈಸೂರು ಅನಂತಸ್ವಾಮಿ ಮತ್ತು ಈ ಸಂಗ್ರಹದಲ್ಲಿ ಸೇರಿಲ್ಲದ ಪಾಂಡೇಶ್ವರ ಕಾಳಿಂಗರಾಯರ ಬಗ್ಗೆಯೂ ಕೂಡ ಇದೇ ಮಾತನ್ನು ಹೇಳಬಹುದು.

    ಕಳೆದುಹೋದ ಆ ದಿನದಗಳ ಬಗ್ಗೆ ಸಮಕಾಲೀನವಾಗಿ ಯಾರೂ ಬರೆಯುವುದು ಸಾಧ್ಯವಿಲ್ಲ. ಹಾಗೆಂದು ಈವತ್ತಿನ ಹಿನ್ನೋಟದ ಸವಲತ್ತಿನಿಂದ ಇಲ್ಲದ ದೂರವನ್ನು, ವಸ್ತುನಿಷ್ಠತೆಯನ್ನು ಆವಾಹಿಸಿಕೊಂಡು, ಚರಿತ್ರೆಕಾರನ ರೀತಿಯಲ್ಲಿ ಬರೆಯಲು ಹೊರಟರೆ ಆ ದಿನಗಳ, ಆ ಕ್ಷಣದ ತೀವ್ರತೆ ಮತ್ತು ತುರ್ತು, ಸದ್ಯತನ ನಮಗೆ ಸಿಗುವುದೇ ಇಲ್ಲ. ಲಕ್ಷ್ಮಣರಾವ್ ಈವತ್ತಿನ ಕ್ಷಣದಲ್ಲಿ ಬರೆಯತ್ತಿದ್ದರೂ ಆ ಕಾಲದ ಸ್ಪಿರಿಟ್ ಗೆ ಧಕ್ಕೆ ಬರದಂತೆ ಬರೆದಿದ್ದಾರೆ. ಇದು ತುಂಬ ಮುಖ್ಯವಾದ್ದು. ಏಕೆಂದರೆ ಯಾವ ಕಾಲಘಟ್ಟದ ಸೃಜನಶೀಲತೆಯೂ ತನ್ನ ಕಾಲಮಾನದ ಸೃಜನಶೀಲಲೋಕದಲ್ಲಿರುವ ಹವಾದಿಂದ, ಚೈತ್ಯದಿಂದಲೇ ಸ್ಫೂರ್ತಿ, ಪ್ರೇರಣೆ ಪಡೆದಿರುತ್ತವೆಯೇ ಹೊರತು ಸಾಮಾಜಿಕ, ಸಮಾಜ ಶಾಸ್ತ್ರೀಯ ಅಂಶಗಳಿಂದಲ್ಲ. ಲಕ್ಷ್ಮಣರಾವ್ ಅವರ ಕಾವ್ಯದಲ್ಲೂ ಸ್ಮೃತಿ ಮತ್ತು ನೆನಪುಗಳಿಗಿಂತ ಕ್ಷಣಕ್ಷಣದ ಸದ್ಯತನ ಮತ್ತು ಸಮಕಾಲೀನತೆಯೇ ಮುಖ್ಯವಾದದ್ದು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

    ಸಾಹಿತ್ಯಕ ವಲಯದ ಓದುಗರು ಈ ಬರವಣಿಗೆಗಳನ್ನು ಹೇಗೆ ನೋಡಬೇಕು? ಏಕೆಂದರೆ ಈ ಬರವಣಿಗೆಯಲ್ಲಿರುವ ಕೆಲವು ವ್ಯಕ್ತಿತ್ವ, ಘಟನೆಗಳ ಬಗ್ಗೆ ಲಕ್ಷ್ಮಣರಾವ್ ಅವರೂ ಸೇರಿದಂತೆ ಬೇರೆ ಬೇರೆಯವರು ಈಗಾಗಲೇ ಬರೆದಿದ್ದು, ಕೆಲವು ವಿವರಗಳು ಘಟನೆಗಳು ಕವಿಸಮಯವೆನ್ನುವಷ್ಟು ಜನಪ್ರಿಯವಾಗಿವೆ, ದಂತಕತೆಯಾಗಿವೆ. ಆದರೆ ಈ ಬರವಣಿಗೆಯ ಉದ್ದೇಶಿತ ಓದುಗರು ಸಾಹಿತ್ಯದ ವಲಯದ ವರಸೆಗಳನ್ನು ಬಲ್ಲ ಓದುಗರಲ್ಲ. ಮೇಲಾಗಿ, ಲಕ್ಷ್ಮಣರಾವ್ ಅವರ ಈ ಚಿತ್ರಗಳು ಓದುಗರಿಗೆ ಸಾಹಿತ್ಯದ ಬಗ್ಗೆಯೂ, ಸಾಹಿತಿಗಳ ಬಗ್ಗೆಯೂ ಇನ್ನಿಲ್ಲದ ಪ್ರೀತಿ ಮತ್ತು ಗೌರವವನ್ನು ಮೂಡಿಸಿ, ಓದುಗರನ್ನು ಸಾಹಿತ್ಯ ಮತ್ತು ಜೀವನಪ್ರೀತಿಯ ಕಡೆಗೇ ಕರೆದೊಯ್ಯುತ್ತವೆ ಎನ್ನುವುದನ್ನು ನಾವು ಮರೆಯಬಾರದು.

    ಈ ಬರವಣಿಗೆಯಲ್ಲಿರುವ ಸಲೀಸುತನ (ಫೆಲಿಸಿಟಿ ಎನ್ನುವ ಅರ್ಥದಲ್ಲಿ) ಮತ್ತು ಪಾರದರ್ಶಕತೆಯ ಮೂಲ ಯಾವುದು? ಇದು ಕೇವಲ ಅಭಿವ್ಯಕ್ತಿಯಲ್ಲಿನ ಸ್ವೋಪಜ್ಞತೆಗೆ ಸಂಬಂಧಪಟ್ಟದ್ದೇ? ಇರಲಾರದು. ಬರಹಗಾರನ ವ್ಯಕ್ತಿತ್ವದಲ್ಲಿನ ಪ್ರಾಮಾಣಿಕತೆಯಿಂದಾಗಿಯೇ ಬರವಣಿಗೆಯಲ್ಲಿ ಈ ರೀತಿಯ ಸಲೀಸುತನ ಮತ್ತು ಪಾರದರ್ಶಕತೆ ಮೂಡಿ ಬರುವಂತದ್ದು. ಇದಕ್ಕೆ ಒಂದು ಉದಾಹರಣೆ-ತನ್ನ ಕುಟುಂಬದ ಸದಸ್ಯರ, ತನ್ನ ಜೀವನದ ಖಾಸಗಿ ವಿವರಗಳನ್ನು ಲಕ್ಷ್ಮಣರಾವ್ ಬಿಚ್ಚುಮನಸ್ಸಿನಿಂದ ತೆರೆದಿಡುತ್ತಾರೆ. ಇನ್ನೊಬ್ಬರ ಜೀವನದ ಖಾಸಗಿ ವಿವರಗಳು ಗೊತ್ತಿದ್ದರೂ ಸೂಚ್ಯವಾಗಿ, ಗೌರವ ಬರುವಂತೆಯೇ ಬರೆಯುತ್ತಾರೆ. ಈವತ್ತಿನ ಮೂರ್ತಿಭಂಜಕ ವಾತಾವರಣದಲ್ಲಿ ಇದು ದೊಡ್ಡ ಸಾಧನೆ.ಇಂತಹ ಲಕ್ಷ್ಮಣರಾವ್ ತಮ್ಮ ತಂದೆಯವರ ಬಗ್ಗೆ ಬರೆಯುವಾಗ ಇನ್ನೂ ಕೊಂಚ ಔದಾರ್ಯವನ್ನೂ, ಪ್ರೀತಿಯನ್ನೂ ತೋರಬಹುದಿತ್ತೇನೋ ಎಂಬ ಭಾವನ ನನಗೆ ಮತ್ತೆ ಮತ್ತೆ ಬಂತು. ಇವರ ತಾಯಿಯ ಬಗ್ಗೆ ಇವರು ಬರೆದಿದ್ದನ್ನು ಓದುವಾಗ, ಇಲ್ಲಿ ಬರೆದಿರುವುದು ಮಗ ಲಕ್ಷ್ಮಣರಾವ್ ಎನಿಸುತ್ತದೆಯೇ ಹೊರತು ಬರಹಗಾರನ ಲಕ್ಷ್ಮಣರಾವ್ ಎಂದು ಎನಿಸುವುದಿಲ್ಲ.

    ನನ್ನ ತಿಳುವಳಿಕೆಯ ಪ್ರಕಾರ, ಲಕ್ಷ್ಮಣರಾವ್ ಅವರು ತಮ್ಮ ಕಾವ್ಯದಲ್ಲೇನೊ ಇಷ್ಟೊಂದು ವ್ಯಕ್ತಿಚಿತ್ರಗಳನ್ನು ಬರೆಯಲು ಹೋಗಿಲ್ಲ (ಗುಂಡಪ್ಪ ವಿಶ್ವನಾಥ್ ಮತ್ತು ಲಂಕೇಶರನ್ನು ಕುರಿತಾಗಿ ಬಿಟ್ಟರೆ). ಹಾಗಾಗಿ ಇಲ್ಲಿನ ಬರವಣಿಗೆ ಇವರ ಸ್ವಭಾವಕ್ಕೆ ಒಂದು ಸ್ತರದಲ್ಲಿ ಭಿನ್ನವಾದದ್ದು. ಹಾಗೆ ಹೇಳುವುದು ಕೂಡ ತಪ್ಪೇನೋ? ಇವರ ಕಾವ್ಯದಲ್ಲಿ ಕಾಣುವ ಪ್ರೀತಿ, ಸ್ನೇಹಗಳ ಒಡನಾಟದ ಬೆಚ್ಚನೆಯ ಭಾವವನ್ನು ನಾವು ಇಲ್ಲಿಯ ಚಿತ್ರಗಳಲ್ಲೂ ಅನುಭವಿಸುತ್ತೇವೆ.

    ಇನ್ನೊಂದು ಮುಖ್ಯವಾದ ದೃಷ್ಟಿಯಿಂದ ಮಾತ್ರ ಇಲ್ಲಿನ ಬರವಣಿಗೆ ಲಕ್ಷ್ಮಣರಾವ್ ಅವರ ಸ್ವಭಾವಕ್ಕೆ ವಿರುದ್ಧವಾದದ್ದು. ನಾವು ವಾಸಿಸುವ ಬಡಾವಣೆಗೆ ಇವರು ಈಚೆಗೆ ವಾಸಕ್ಕೆ ಬಂದರು. ಬಂದ ಕೆಲವೇ ದಿನಗಳಲ್ಲಿ ನೆರೆಹೊರೆಯವರ ಜೊತೆ, ಬೀದಿಯಂಗಡಿಯವರ ಜೊತೆ, ದಾರಿಹೋಕರ ಜೊತೆ ಎಷ್ಟು ಚೆನ್ನಾಗಿ ಬೆರೆತು! ನಮ್ಮ ಮನೆಯ ಗೇಟಿನ ಮುಂದೆ ಒಂದು ದಿನ ನಾನು ಪರಿಚಯ ಮಾಡಿಕೊಟ್ಟ ಒಬ್ಬ ಎಸ್ಟೇಟ್ ಏಜೆಂಟ್ ಜೊತೆ ನಿರರ್ಗಳವಾಗಿ ಇವರು ಹರಟೆ ಹೊಡೆದರು. ಪೇಪರ್ ಅಂಗಡಿಯ ಹುಡುಗನ ಹೆಸರೂ ಕೂಡ ಇವರಿಗೆ ಗೊತ್ತು. ಇನ್ನೊಮ್ಮೆ ಪೆಟ್ರೋಲ್ ಬಂಕ್ ಬಳಿ ನಮ್ಮ ಕಾರಿನ ಚಾಲಕ ತಪ್ಪು ದಾರಿಯಲ್ಲಿ ಹೋದಾಗ, ತನಿಖೆಗೆಂದು ಕಾರನ್ನು ಕಾನ್ಸ್ಟೇಬಲ್ಗಳು ನಿಲ್ಲಿಸಿದಾಗ ಲಕ್ಷ್ಮಣರಾವ್ ಅವರ ಜೊತೆ ಕೂಡ ತಮ್ಮ ಪ್ರವರ ಹೇಳಿಕೊಂಡು

    Enjoying the preview?
    Page 1 of 1