Discover millions of ebooks, audiobooks, and so much more with a free trial

Only $11.99/month after trial. Cancel anytime.

Parimidita
Parimidita
Parimidita
Ebook380 pages1 hour

Parimidita

Rating: 0 out of 5 stars

()

Read preview

About this ebook

Mr.B.R.Lakshmana Rao, born in Chickballapur and worked as tutor till his retirement. He has published various works across different categories like Novels, Poems, Plays and Songs, etc.

He has won various awards including the famous awards like Karnataka Sahithya Academy Prize for poetry (1981), Goruru Sahithya Prashasti (1998), Chutuku Ratna Prashasti (1998) and Visvesvarayya Sahithya Prashasti (2000), etc.

He was the president of Kolar District Sahitya Sammelana in 2006. He was also invited to participate in the AKKA Literary Convention held in New Jersy, USA, in 2010. He participated in Karnataka Rajyotsava as an invitee in Singapore and Qatar in 2013. He was invited and felicitated as a guest- poet in the `Ugadi Festival’ held in Liverpool, UK, in March, 2015. He presided over the Hanigavana Goshti in Kannada Samskruti Sammelana held in Dubai and Sharja on 19th and 20th of Navembar 2015.His poems are translated into English, Hindi, Malayalam, Tamil, Telugu, Oriya, Bengali, Kashmiri and several other Indian languages. His poems have been prescribed for study in School and University text books in Karnataka. Feature films have been made based on his stories- Ondu premade kate and Kabbekku. A TV serial was made based on his novel- Heegondu Premakate. His play, a comedy- Nanagyaako Doutu, has been successfully staged by several dramatic troupes in Karnataka and also in the USA.

LanguageKannada
Release dateAug 12, 2019
ISBN6580212201820
Parimidita

Read more from B.R.Lakshmana Rao

Related to Parimidita

Related ebooks

Reviews for Parimidita

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Parimidita - B.R.Lakshmana Rao

    http://www.pustaka.co.in

    ಪಡಿಮಿಡಿತ

    Parimidita

    Author :

    ಬಿ.ಆರ್. ಲಕ್ಷ್ಮಣರಾವ್

    B.R. Lakshmana Rao

    For more books

    http://www.pustaka.co.in/home/author/br-lakshmana-rao

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಪಡಿಮಿಡಿತ

    (ಲೇಖನಗಳ ಸಂಕಲನ)

    ಬಿ .ಆರ್ . ಲಕ್ಷ್ಮ ಣರಾವ್

    ಅರ್ಪಣೆ

    ತಮ್ಮ

    ಶಂಕರನಿಗೆ

    ಪ್ರೀತಿಯಿಂದ

    ಎರಡು ಮಾತು

    ತಮ್ಮ ಕಾವ್ಯ ರಚನೆ ಮತ್ತು ವಿವಿಧ ರೀತಿಯ ಸಾಂಸ್ಕೃತಿಕ ಚಟುವಟಿಕೆಗಳ ನಡುವೆ ಬಿ .ಆರ್ . ಲಕ್ಷ್ಮಣರಾವ್  ಸಾಂದರ್ಭಿಕವಾಗಿ ಮಾಡುತ್ತಲೇ ಬಂದಿರುವ ಲೇಖನಗಳ, ಟಿಪ್ಪಣಿಗಳ ಸಂಗ್ರಹ ಈ ‘ಪಡಿಮಿಡಿತ’.

    ಕೃತಿ, ವಿದ್ಯಮಾನ, ವ್ಯಕ್ತಿ, ವಿಚಾರ- ಯಾವುದರ ಬಗ್ಗೆಯೂ ಇದಮಿತ್ಧಂ ಧೋರಣೆ ತಳೆಯದ  ಅಥವಾ ಅಂತಹ ಧೋರಣೆ ಅವರ ಸ್ವಭಾವದಲ್ಲೇ ಇಲ್ಲದ ಕವಿ ಲಕ್ಷ್ಮ ಣರಾವ್  ಅವರ ಲೇಖನಗಳು ನಾವೆಲ್ಲ ಯಾವಾಗಲೂ ದೂಡ್ಡ ಮತ್ತು ಒರಟು ಧ್ವನಿಯಲ್ಲಿ ಸರ್ವ ಜ್ಞರಂತೆ ಮಾತಾಡುತ್ತಾ ಏನೇನನ್ನು ಕಳೆದುಕೊಂಡಿದ್ದೇವೆ ಎಂಬುದನ್ನು ಸೂಚಿಸುವುದರಿಂದ ಈವತ್ತಿನ ಸಾಂಸ್ಕೃತಿಕ ವಾತಾವರಣದಲ್ಲಿ ಮುಖ್ಯವಾಗುತ್ತವೆ.

    ಬಿ . ಆರ್. ಎಲ್.  ಅವರಿಗೆ ಯಾವುದೇ ವಿಚಾರ ಮತ್ತು ಅಭಿಪ್ರಾಯವನ್ನು ಓದುಗರ ಮೇಲೆ ಹೇರುವುದರಲ್ಲಿ ಕಿಂಚಿತ್ತೂ ಆಸಕ್ತಿಯಿಲ್ಲ. ಎಲ್ಲರೂ ಮರಿ ಚಿಂತಕರಂತೆ, ದಾರ್ಶನಿಕರಂತೆ ಪೋಸು ಕೊಡುತ್ತಿರುವ ಈ ದಿನಗಳಲ್ಲಿ ಇದೊಂದು ಅಪರೂಪದ ಗುಣವೇ ಸರಿ. ಬದಲಿಗೆ, ಓದುಗನೊಡನೆ ಪ್ರಘಲ್ಲವಾಗಿ ಸಂಭಾಷಿಸುವುದರಲ್ಲೇಹೆಚ್ಚು ಕಳಕಳಿ. ಈ ಅಂಶವೇ ಇಲ್ಲಿಯ ಲೇಖನಗಳ ಸಂವಹನಶೀಲತೆಗೆ ಮುಖ್ಯಕಾರಣ.

    ಹಾಗೆಂದು ಬಿ .ಆರ್ . ಎಲ್. ಸತ್ಯ ಮತ್ತು ನಿಷ್ಠುರತೆಯಿಂದ ಹಿಂತೆಗೆಯುತ್ತಾರೆಂದು ಭಾವಿಸಬಾರದು , ‘ದಿಗಂಬರ ಕಾವ್ಯ,’ ನಾಡಿಗರ ‘ಪಂಚಭೂತಗಳು,’ ಲಂಕೇಶರ ಕಾವ್ಯ, ಸುಬ್ರಾಯ ಚೊಕ್ಕಾಡಿಯವರ ಕಾವ್ಯಜೀವನದ ಮೊದಲ ಕಾಲಘಟ್ಟದ ನವ್ಯ ಕಾವ್ಯ ಮನೋಧರ್ಮ – ಇಂತಹ ಬರಹಗಳಲ್ಲಿ ಖಚಿತ ಮತ್ತು ನಿಷ್ಠುರ ಅಭಿಪ್ರಾಯಗಳನ್ನು ಮಂಡಿಸುತ್ತಾರೆ. ಸತ್ಯವನ್ನು ಹೇಳಬೇಕಾದಾಗ ಇನ್ನೊಬ್ಬರನ್ನು ನೋಯಿಸಿಯೇ ಹೇಳಬೇಕೆಂಬ ಧೋರಣೆಯನ್ನು ಬಿ .ಆರ್ ಎಲ್. ಮಾನ್ಯ ಮಾಡುವುದಿಲ್ಲ.

    ಹಿನೋಟದ ಜೊತೆ ಜೊತೆಗೇ ಸಮಕಾಲೀನತೆಯನ್ನೂ ಬೆರೆಸಿ, ಪ್ರಶ್ನೆಗಳನ್ನೆತ್ತುವುದು ಇಲ್ಲಿಯ ಲೇಖನಗಳ ಇನ್ನೊಂದು ಗುಣ. ಎಲಿಯಟ್ ಕಾವ್ಯದಷ್ಟೇ ಯೇಟ್ಸ್ ಕಾವ್ಯವೂ ನವ್ಯ ಕಾವ್ಯ ರಚನೆಯ ಮೇಲೆ ಪರಿಣಾಮ ಬೀರಿದ್ದರೆ ಎಂಬ ಪ್ರಶ್ನೆ ಇಂತಹ ಹಿನ್ನೆಲೆಯಲ್ಲೇಹುಟ್ಟಿರುವುದು. ನಿಸಾರ್, ಕಾಳಿಂಗರಾಯರನ್ನು ಕುರಿತ ಲೇಖನಗಳು ಈ ಸ್ವರೂಪದವೇ.

    ವೈನೋದಿಕ ಧಾಟಿಯಲ್ಲಿ ಬರೆಯುತ್ತಲೇ ಸತ್ಯವನ್ನು ಇನ್ನಷ್ಟು ಮೊನಚಾಗಿ ಕಾಣಿಸುವುದು ನನಗೆ ಈ ಬರಹಗಳಲ್ಲಿ ಇಷ್ಟವಾದ ಇನ್ನೊಂದು ಗುಣ . ತನ್ನ ಬಗ್ಗೆ ಬರೆದುಕೊಳ‍್ಳುವಾಗ ಮುಕ್ತವಾಗಿ ಬರೆಯುವ ಬಿ. ಆರ್. ಎಲ್. ಮತ್ತೊಬ್ಬರ ಬಗ್ಗೆ ಬರೆಯುವಾಗ ತೋರುವ ಸಂಯಮ ಮತ್ತು ಎಚ್ಚರ ಇಲ್ಲಿನ ವ್ಯಕ್ತಿ ಚಿತ್ರಗಳಿಗೆ ಒಂದು ಸಮತೋಲನದ ಧ್ವನಿಯನ್ನು ಕೊಟ್ಟಿದೆ.

    ವಾಸ್ತವದ ಎಲ್ಲ ಮಗ್ಗುಲುಗಳನ್ನೂ ಸ್ವೀಕರಿಸುತ್ತಲೇ, ಒಪ್ಪುತ್ತಲೇ, ತನ್ನ ಮನಸ್ಸನ್ನು ಸದಾ ಆರೋಗ್ಯವಾಗಿ, ಪ್ರಘಲ್ಲವಾಗಿ, ನಿರ್ಮತ್ಸರವಾಗಿ ಇಟ್ಟುಕೊಂಡಿರುವ  ಸಂವೇದನಾಶೀಲರೊಬ್ಬರು ಬರೆಯುವ ವೈಚಾರಿಕ , ವಿಮರ್ಶಾತ್ಮಕ ಬರಹಗಳು ಹೇಗೆ ಮೌಲಿಕವೂ, ಸಂವಹನಶೀಲವೂ ಆಗಿರಬಲ್ಲದೆಂಬುಕ್ಕೆ ಈ ಸಂಗ್ರಹ ಒಂದು ಉತ್ತಮ ನಿದರ್ಶನ.

    ತಮ್ಮ ಉತ್ಸಾಹಶೀಲ ಬದುಕಿನಲ್ಲಿ ಎದುರಾಗುವ ವ್ಯಕ್ತಿಗಳು ಮತ್ತು ವಿಚಾರಗಳನ್ನು ಕುರಿತು ಬಿ. ಆರ್. ಎಲ್. ಇನ್ನೂ ಮತ್ತು ನಿರಂತರವಾದ ಗದ್ಯ ಬರವಣಿಗೆಯನ್ನು ಕೂಡ ಮಾಡಬೇಕೆಂಬುದು ಓದುಗರ ಪರವಾಗಿ ಅವರ ಮೇಲೊಂದು ಸೂಕ್ಷ್ಮ ಮತ್ತು ಆತ್ಮೀಯ ಒತ್ತಾಯ.

    ಬೆಂಗಳೂರು

    -ಕೆ. ಸತ್ಯನಾರಾಯಣ.

    ಥ್ಯಾಂಕ್ಯೂ….

    ಇದು ಈವರೆಗಿನ ನನ್ನ ಪ್ರಕಟಿತ ಲೇಖನಗಳ ಸಮಗ್ರ ಸಂಕಲನ.

    ಇದಕ್ಕೆ ಮುನ್ನುಡಿಯಾಗಿ ಮೌಲಿಕವಾದ ‘ಎರಡು ಮಾತು’ಬರೆದುಕೊಟ್ಟ ಖ್ಯಾತ ಕತೆಗಾರ ಮಿತ್ರ ಕೆ. ಸತ್ಯನಾರಾಯಣ ಅವರಿಗೆ.

    ಪ್ರಕಾಶಕ ಮಿತ್ರ ಸಿವಿಜಿ ಚಂದ್ರು ಅವರಿಗೆ

    ಇಲ್ಲಿನ ಲೇಖನಗಳನ್ನು ಬರೆಸಿ, ಪ್ರಕಟಿಸಿದ ಎಲ್ಲ ನಿಯತಕಾಲಿಕೆ, ವಿಶೇಷಾಂಕ ಮತ್ತು ಅಭಿನಂದನ ಗ್ರಂಥಗಳ ಸಂಪಾದಕರಿಗೆ

    ಮುಖಪುಟದ ವಿನ್ಯಾಸಕ್ಕಾಗಿ ಕಲಾವಿದರಾದ ಮೋನಪ್ಪ ಅವರಿಗೆ

    ನನ್ನ ವರ್ಣಚಿತ್ರಕ್ಕಾಗಿ ಪ್ರೀತಿಯ ತಮ್ಮ, ಖ್ಯಾತ ಛಾಯಾಚಿತ್ರಗ್ರಾಹಕ ಶಂಕರ್ ಚಿಂತಾಮಣಿಗೆ

    ಅಂದವಾಗಿ ಮುದ್ರಿಸಿದ ಶಕ್ತಿ ಪ್ರಿಂಟರ್ &ಪಬ್ಲಿಷರ್ಸ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು       

    -ಬಿ. ಆರ್. ಲಕ್ಷ್ಮಣರಾವ್

    ಪರಿವಿಡಿ

    ಭಾಗ  -1 ವಿಚಾರ

    ಸತ್ಯದ ಹುಡುಕಾಟದಲ್ಲಿ

    ಗೆಲಿಲಿಯೊ ನಿರ್ಮಿಸಿದ ದೂರದರ್ಶಕದಿಂದ ಗ್ರಹ ತಾರೆಗಳನ್ನೂಳಗೊಂಡ ಬ್ರಹ್ಮಾಂಡ ಮನುಷ್ಯನ ದೃಷ್ಟಿಯಲ್ಲಿ ಹಲವು ಪಟ್ಟು ವಿಸ್ತಾರಗೊಂಡಿತು, ನಿಚ್ಚಳಗೊಂಡಿತು ಹೊಸ ವೈಜ್ಞಾನಿಕ ಸತ್ಯಗಳ ಆ ವಿಷ್ಕಾರವಾಯಿತು. ಹೀಗೆ ಜಗತ್ತಿಗೆ ಹೊಸದೃಷ್ಟಿಯನ್ನು ಕೊಟ್ಟ ಗೆಲಿಲಿಯೊ ತನ್ನ ಇಳಿವಯಸ್ಸಿನಲ್ಲಿ ಸಂಪೂರ್ಣ ಕುರುಡನಾದ, ಗೃಹಬಂದಿಯಾದ, ಅವನ ದೈಹಿಕ ಮಿತಿಗಳಿಗೆ ಒಳಪಟ್ಟು ಬ್ರಹ್ಮಾಂಡ ಅವನ ಪಾಲಿಗೆ ಕುಗ್ಗಿ ಹೋಯಿತು. ಕಗ್ಗತ್ತಲಷ್ಟೇ ಅವನ ದರ್ಶನವಾಯಿತು. ಈ ಬಗ್ಗೆ ತನ್ನ ದಿನಚರಿಯಲ್ಲಿ ಗೆಲಿಲಿಯೊ ತುಂಬ ವಿಷಾದದಿಂದ ಹೇಳಿಕೊಂಡಿದ್ದಾನೆ.

    ಇದು ಪ್ರತಿ ಸಂವೇದನಾಶೀಲ ವ್ಯಕ್ತಿಗೂ ಒಂದಲ್ಲ ಒಂದು ಹಂತದಲ್ಲಿ ಅನುಭವಕ್ಕೆ ಬರುವ ಸಂಗತಿಯೇ ಆಗಿದೆ. ವಯಸ್ಸಾದಂತೆ ದೇಹ ತನ್ನ ಪಟುತ್ವವನ್ನು ಸಹಜವಾಗಿಯೇ ಕಳೆದುಕೊಳ‍್ಳುತ್ತಾಹೋಗುತ್ತದೆ. ಇಂದ್ರಿಯಗಳು ನಿಸ್ತೇಜಗೊಳ‍್ಳುತ್ತಾ ಹೋಗುತ್ತವೆ. ಆದರೆ ಇದೇ ಪ್ರಮಾಣದಲ್ಲಿ ಮನುಷ್ಯನ ಪ್ರಜ್ಞೆ ಮತ್ತು ಬುದ್ಧಿ ತಮ್ಮ ಪಟುತ್ವವನ್ನು ಕಳೆದುಕೊಳ‍್ಳುವುದಿಲ್ಲ. ಇಂದ್ರಿಯ ಸುಖಗಳ ಬಯಕೆ, ಜ್ಞಾನ ಮತ್ತು ಅನುಭವಗಳ ಹಸಿವು ಕುಗ್ಗುವುದಿಲ್ಲ . ಇದು ಮನುಷ್ಯನ ದುರಂತ. ಪ್ರಜ್ಞಾಪೂರ್ವಕವಾಗಿ ಅವನು ತನ್ನ ದೇಹದ ಮಿತಿಗಳಿಗೆ, ಸಾಮಾಜಿಕ ರೀತಿ ನೀತಿ, ಕಟ್ಟುಪಾಡುಗಳಿಗೆ ತನ್ನನ್ನು ಯಯಾತಿಯಂತೆ ಒಗ್ಗಿಸಿಕೊಳ‍್ಳಬೇಕಾಗುತ್ತದೆ, ಬಗ್ಗಿಸಿಕೊಳ‍್ಳಬೇಕಾಗುತ್ತದೆ. ಆಗ ಅವನನೆರವಿಗೆ ಬರುವುದು ಅಧ್ಯಾತ್ಮ ಮತ್ತು ಪರಮಾರ್ಥ, ಪುರುಷಾರ್ಥಗಳ  ಹಾಗೂ ಆತ್ಮದ  ಅಮರತ್ವದ ಕಲ್ಪನೆ, ಮೋಕ್ಷದ, ನಿರ್ವಾಣದ ಹಂಬಲ – ಇದರ ಸಾಧನೆಗಾಗಿ ಸನ್ಯಾಸ, ವಾನಪ್ರಸ್ಥಾಶ‍್ರಮ, ಯಾಗ, ಯೋಗ ಇತ್ಯಾದಿ, ಇವು ಮನುಷ್ಯನಿಗೆ ಅವನ ಇಳಿ ವಯಸ್ಸಿನಲ್ಲಿ ನೆಮ್ಮದಿ ಚಿತ್ತಶಾಂತಿ ನೀಡಬಹುದಾದ ಸಿದ್ಧಸೂತ್ರಗಳ, ರೂಢಮಾರ್ಗಗಳು. ಆದರೆ ಇವುಗಳಲ್ಲಿ ನಂಬಿಕೆಯಿಲ್ಲದ ಗೆಲಿಲಿಯೊ ರೀತಿಯ ವಿಜ್ಙಾನಿ ನಾಸ್ತಿಕನಿಗೆ ಸಾವಿನ ಬಿಡುಗಡೆಯ ತನಕ ತವಕ ತಳಮಳ, ಕ್ಷೋಭೆ, ವಿಷಾದ ತಪ್ಪಿದ್ದಲ್ಲ.

    ಇದಕ್ಕೆ ಇನ್ನೊಂದು ಉದಾಹರಣೆ ಸಾಮರ್ ಸೆಟ್ ಮಾಮ್ .ಈತನು ವೈದ್ಯ ವೃತ್ತಿಯಿಂದ ಲೇಖನ ವೃತ್ತಿಗೆ ಬಂದವನು. ಜನಪ್ರಿಯ ಇಂಗ್ಲಿಷ್ ಕಾದಂಬರಿಕಾರನಾಗಿ ಕೋಟ್ಯಧಿಪತಿಯಾದವನು. ಕೊನೆ ತನಕ ನಿರೀಶ್ವರವಾದಿ ನಾಸ್ತಿಕನಾಗಿಯೇ ಉಳಿದು, ಜೀವನದ ಅರ್ಥವನ್ನು ತೆರೆದ ಮನಸ್ಸಿನಿಂದ ಶೋಧಿಸಿದವನು. ಮದುವೆಯಾಗದೆ ಒಬ್ಬಂಟಿಗನಾಗಿಯೇ ಬಾಳು ಕಳೆದವನು. ಈತ ತನ್ನೆಲ್ಲ ತಳಮಳಗಳನ್ನು, ಜಿಜ್ಞಾಸೆಗಳನ್ನು, ತಾನು ಕಂಡು ಕೊಂಡ ನಿಷ್ಠುರ ಸತ್ಯಗಳನ್ನು ತನ್ನ ಕಥೆ ಕಾದಂಬರಿಗಳಲ್ಲಿ, ಹಾಗೆಯೇ ತನ್ನ ಆತ್ಮಕಥೆಯಾದ summing upನಲ್ಲಿ ತೋಡಿಕೊಂಡಿದ್ದಾನೆ.

    ಇವನ the razor’s edge ಎಂಬ ಕಾದಂಬರಿಯಲ್ಲಿ ಒಂದು ಪ್ರಸಂಗವಿದೆ. ನಾನು ತುಂಬ ಹಿಂದೆ ಓದಿದ್ದು, ಆದರೂ ಮಸಕು ಮಸಕಾಗಿ ನೆನಪಿರುವ ಹಾಗೆ ಇದರ ಕಥನಾಯಕ ಬಾಳಿನ ಪರಮಾರ್ಥದ ಶೋಧನೆಯ ಹಾದಿಯಲ್ಲಿ ಆಧ್ಯಾತ್ಮಜ್ಞಾನಕ್ಕೆ ನೆಲೆವೀಡೆಂದು ಪ್ರಸಿದ್ಧವಾದ ನಮ್ಮ ಈ ಭಾರತಕ್ಕೆ, ಇಲ್ಲಿನ ಪರಮ ಪುಣ್ಯಕ್ಷೇತ್ರವಾದ ಕಾಶಿಗೆ ಬರುತ್ತಾನೆ. ಅಲ್ಲಿ ಒಬ್ಬ ಸನ್ಯಾಸಿ ಅವನಿಗೆ ಒಂದು ಮುದುಕಿಯನ್ನು ಪರಿಚಯಿಸುತ್ತಾನೆ. ಆಕೆ ಹಿಂದೂಧರ್ಮದಲ್ಲಿ, ಅದರ ಆಚಾರವಿಚಾರಗಳಲ್ಲಿ ಅಚಲ ಶ್ರದ್ಧೆ ಉಳ‍್ಳವಳು. ಪವಿತ್ರ ಗಂಗಾನದಿಯಲ್ಲಿ ಮಿಂದು,ವಿಶ‍್ವೇಶ್ವರ ದರ್ಶನ ಪೂಜೆ ಮಾಡಿದರೆ ಸಕಲ ಪಾಪಗಳೂ ಕಳೆದು, ಪುನರ್ಜನ್ಮವಿಲ್ಲದ ಮೋಕ್ಷ ದೊರೆಯುವುದೆಂದು ನಿಷ್ಠೆಯಿಂದ ನಂಬಿದವಳು. ಆದ್ದರಿಂದಲೇ ದೂರದ ಊರಿಂದ ತನ್ನ ಕೊನೆಗಾಲವನ್ನು ಕಳೆಯಲೆಂದು ಕಾಶಿಗೆ ಬಂದು ನೆಲೆಸಿದ್ದಾಳೆ.

    ಸನ್ಯಾಸಿ ಕಥಾನಾಯಕನಿಗೆ ಹೇಳುತ್ತಾನೆ  : ಈಕೆಯನ್ನು ನೋಡು, ಎಷ್ಟು ಪ್ರಶಾಂತಳಾಗಿದ್ದಾಳೆ, ನೆಮ್ಮದಿಯಿಂದಿದ್ದಾಳೆ. ಇಂಥ ನಿಸ್ಸಂದಿಗ್ಧ ಶ್ರದ್ಧೆಯನ್ನು ಸಾಧಿಸಿದಾಗ ಮಾತ್ರ ನೀನೂ ಸಹ ಇವಳಂತಾಗಬಹುದು. ಇಲ್ಲದಿದ್ದಲ್ಲಿ ‘ಸಂಶಯಾತ್ಮಾ ವಿನಶ್ಯತಿ’ ಎಂಬಂತೆ ಸಂಶಯಾಗ್ನಿಗಳಲ್ಲಿ ಆಜೀವ ಪರ್ಯಂತ ಬೇಯಬೇಕಾಗುತ್ತದೆ, ನೋಯಬೇಕಾಗುತ್ತದೆ.’

    ಕಥಾನಾಯಕ ಹೇಳುತ್ತಾನೆ : ‘ಆಂಧಶ್ರದ್ಧೆಯಿಂದ ದೊರೆಯುವ ಇಂಥ ನೆಮ್ಮದಿ, ಪ್ರಶಾಂತಿ ನನಗೆ ಬೇಕಾಗಿಲ್ಲ. ನನ್ನ ಸಂಶಯ ತಳಮಳಗಳೇ ನನಗಿರಲಿ’

    ಈ ವಿಶ್ವದ ಎಷ್ಟೋ ಗುಟ್ಟುಗಳ ಪಟ್ಟುಗಳು ಮನುಷ್ಯನ ಅರಿವಿಗೆ ಇನ್ನೂ ದಕ್ಕದೇ ಉಳಿದಿರುವುದು ನಿಜ. ಇವುಗಳನ್ನು ಅರಿಯಲು ಮನುಷ್ಯ ನಿರಂತರವಾಗಿ ಪ್ರಯತ್ನಿಸುತ್ತಲೇ ಬಂದಿದ್ದಾನೆ. ಈ ನಿಟ್ಟಿನಲ್ಲಿ ನಮಗೆ ಅಷ್ಟೋ ಇಷ್ಟೋ ಸತ್ಯದ ಹೊಳಹುಗಳಾದರೂ ದೊರೆತಿರುವುದು  (ನಾನು ತಿಳಿದಮಟ್ಟಿಗೆ) ಸಂಶಯಾತ್ಮರಿಂದಲೇ ಹೊರತು ಧರ್ಮ ಭೀರುಗಳಿಂದಲ್ಲ.

    ಧರ್ಮ ಭೀರುಗಳು ಕತ್ತಲೆಗೆ ಹೆದರಿ, ಸನಾತನ ದೇಗುಲಗಳಲ್ಲಿ ಅಡಗಿ, ತಮ್ಮ ಅಂಧಶ್ರದ್ಧೆಯ ದೀಪ ಹಚ್ಚಿಟ್ಟುಕೊಂಡು, ಅದರ ಅಭಯ ಪ್ರಭೆಯಲ್ಲಿ ಕೂತಲ್ಲೇ ನಿಶ್ಚಿಂತರಾಗಿ ಕೂತಿರುತ್ತಾರೆ.

    ಸಂಶಯಾತ್ಮರು ಮಿಣುಕು ಹುಳುಗಳಂತೆ ತಮ್ಮೊಳಗಿನ ಬೆಳಕಿನಿಂದ ಕತ್ತಲೆಯನ್ನು ಬಗೆದು ಹಾರುತ್ತ ಸತ್ಯದ ನಿರಂತರ ಹುಡುಕಾಟದಲ್ಲಿ ತೊಡಗಿರುತ್ತಾರೆ. ಇಂಥವರ ಸಂಖ್ಯೆ ವೃದ್ಧಿಸಲಿ.

                                                                            (ಕರ್ಮವೀರ -1993)

    ಮಾಧ್ಯಮಗಳೂ… ಜೀವನ ಮೌಲ್ಯಗಳೂ…

    ನಾನು ಚಿಕ್ಕಂದಿನಲ್ಲಿ ನೋಡಿದ ಒಂದು ಸಿನಿಮಾ ನೆನಪಾಗುತ್ತೆ. ಅದು ವಿ. ಶಾಂತಾರಾಮ್ ಅವರ ‘ದೋ ಆಂಖೇ ಬಾರಾ ಹಾಥ್,’ ಇಂದಿನ ಪೀಳಿಗೆಯ ಯುವ ಜನತೆಗೆ ಬಹುಶಃ ಅದರ ಪರಿಚಯ ಇರಲಾರದು. ಅದರಲ್ಲಿ ಕಾರಣಾಂತರಗಳಿಂದ ಘೋರ ಅಪರಾಧಗಳನ್ನು ಮಾಡಿ, ಕಾರಾಗೃಹವಾಸದ ಶಿಕ್ಷೆಗೊಳಗಾದ ಆರು ಮಂದಿ ಖೈದಿಗಳಿರುತ್ತಾರೆ. ಒಬ್ಬ ಪ್ರಾಮಾಣಿಕ, ದಕ್ಷ ಪೂಲೀಸ್ ಅಧಿಕಾರಿ ಅವರನ್ನು ತನ್ನ ಜವಾಬ್ದಾರಿಗೆ ತೆಗೆದು ಕೊಳ‍್ಳುತ್ತಾನೆ. ಅವನು ಗಾಂಧಿವಾದಿ.  ಎಂಥ ಪಾಷಂಡಿ ಸೈತಾನನ ಅಂತರಾಳದಲ್ಲೂ ಮಾನವೀಯ ಗುಣಗಳ ಸೆಲೆಗಳು ಸುಪ್ತವಾಗಿರುತ್ತವೆ ಎಂದು ನಂಬಿದವನು. ಆಸೆಲೆಗಳನ್ನು ಪ್ರೀತಿಯಿಂದ, ಅಂತಃಕರಣದಿಂದ ತಟ್ಟಿ ಎಬ್ಬಿಸಿ, ಆಖೈದಗಳನ್ನು ಮತ್ತೆ ಒಳ್ಳೆಯ ಮನುಷ್ಯರನ್ನಾಗಿ ಪರಿವರ್ತಿಸಲು ದೃಢ ವಿಶ್ವಾಸದಿಂದ ಅವನು ಪ್ರಯತ್ನಿಸುತ್ತಾನೆ, ಯಶ್ವಸ್ವಿಯೂ ಆಗುತ್ತಾನೆ. ಆದರೆ ಆಸಾಧನೆಯ ಹಾದಿಯಲ್ಲಿ ಅವನು ತನ್ನ ಪ್ರಾಣವನ್ನೇ ಬೆಲೆಯಾಗಿ ತೆರಬೇಕಾಗುತ್ತದೆ.

    ಇಂಥದೇ ಇನ್ನೊಂದು ಸಿನಿಮಾ, ಸುನಿಲ್‍ದತ್ ಅವರ ‘ಮುಜೆ ಜೀನೇ ದೋ.’ ಜಯಪ್ರಕಾಶ್ ನಾರಾಯಣರ ತತ್ವಗಳಿಂದ ಸ್ಫೂರ್ತಿ ಪಡೆದ ಚಿತ್ರ. ಇದರಲ್ಲಿ ಪರಿಸ್ಥಿತಿಗಳ ಒತ್ತಡಕ್ಕೆ ಒಳಗಾಗಿ ಡಕಾಯಿತನಾದ ಕಥಾನಾಯಕ, ಕ್ರಮೇಣ ತನ್ನ ಅಪರಾಧಗಳಿಗೆ ಮರುಗಿ, ತಾನಾಗಿ ಕಾನೂನಿಗೆ ಶರಣಾಗತನಾಗುವ ಕಥೆಯಿದೆ.

    ಇಂಥ ಸಿನಿಮಾಗಳು ಸಹಜವಾಗಿಯೇ ಅಂದಿನ ಪ್ರೇಕ್ಷಕರ ಮೇಲೆ ಒಳ್ಳೆಯ ಪರಿಣಾಮ ಬೀರುತ್ತಿದ್ದವು. ಅವರ ಶಕ್ತಿಗೆ ಇಂಬು, ಬೆಂಬಲ ಸಿಕ್ಕುತ್ತಿತ್ತು. ಮಾನವೀಯ ಮೌಲ್ಯಗಳಲ್ಲಿ ನಂಬಿಕೆ ಮೂಡುತ್ತಿತ್ತು.

    ಇದು ಅಂದಿನ ಮಾತಾಯಿತು. ಇಂದಿನ ಪರಿಸ್ಥಿತಿಯೇನು? ಇಂದಿನ ಸಿನಿಮಾಗಳು ಪ್ರತಿಪಾದಿಸುತ್ತಿರುವ ಜೀವನ ಮೌಲ್ಯಗಳು ಯಾವುವು? ಈ ಬಗ್ಗೆ ಗಮನಹರಿಸಿದರೆ ನಿಜಕ್ಕೂ ಭಯವಾಗುತ್ತದೆ.

    ಯಾವುದೇ ಸಾಮಾಜಿಕ, ನೈತಿಕ ಕಾಳಜಿ, ಜವಾಬ್ದಾರಿ ಇಲ್ಲದ, ಕೇವಲ ವ್ಯಾಪಾರೀ ದೃಷ್ಟಿಯ ಸಿನಿಮಾ ನಿರ್ಮಾಪಕ, ನಿರ್ದೇಶಕರು ಕಾಮ, ಕ್ರೌರ್ಯ, ಭ್ರಷ್ಟಾಚಾರಗಳಂಥ ವಿಷಯಗಳನ್ನು ದಾಳಗಳಂತೆ ಬಳಸಿ, ವೈಭವೀಕರಿಸಿ, ಇಂದಿನ ಪ್ರೇಕ್ಷಕರೊಂದಿಗೆ ಹಣದ ಜೂಜಿಗೆ ತೊಡಗಿದ್ದಾರೆ.

    ಇಂದಿನ ಸಿನಿಮಾಗಳಲ್ಲಿ ಹಣ-ಅಧಿಕಾರ, ಸ್ವಾರ್ಥ, ಅನಾಚಾರ, ಕ್ರೌರ್ಯ, ಹಿಂಸೆ- ಇಂತಹ ತಾಮಸ ಶಕ್ತಿಯಳದ್ದೇ ಸದಾ ಮೇಲುಗೈ. ಈ ದೈತ್ಯ ಶಕ್ತಿಗಳ ಎದುರು ನ್ಯಾಯ, ನೀತಿ ಸಾತ್ವಿಕತೆ ಸೋತು ಶರಣಾಗುತ್ತವೆ ಅಥವಾ ಬಗ್ಗು ಬಡಿಯಲ್ಪಡುತ್ತವೆ. ಇಂಥ ಆಪತ್ಕಾಲದಲ್ಲಿ ಅವತಾರ ಪುರುಷನಂತೆ ಒಬ್ಬ ಸೂಪರ್ ಹೀರೊ ಸಾಕ್ಷಾತ್ಕರಿಸಿ ಬರುತ್ತಾನೆ. ಕೇವಲ ಕಲ್ಪನಾಲೋಕದಲ್ಲಿ ಮಾತ್ರ ಸಾಧ್ಯವಾಗುವಂತಹ ತ್ರಿವಿಕ್ರಮ ಸಾಹಸಗಳನ್ನು ಏಕಾಂಗಿಯಾಗಿ ಮಾಡಿ, ದುಷ್ಟರನ್ನೆಲ್ಲ ಸದೆಬಡಿಯುತ್ತಾನೆ. ಅಳಿದುಳಿದ ಶಿಷ್ಟರನ್ನು ರಕ್ಷಿಸುತ್ತಾನೆ, ಧರ್ಮ ಸಂಸ್ಥಾಪನೆ ಮಾಡುತ್ತಾನೆ.

    ಆದರೆ ಇಂಥ ಸೂಪರ್ ಹೀರೋನೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುವುದು, ಸಮೀಕರಿಸಿಕೊಳ್ಳುವುದು ಸಾಮಾನ್ಯ ಪ್ರೇಕ್ಷಕರಿಗೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಅವರ ಮನಸ್ಸಿನ ಮೇಲೆ ಅಚ್ಚಳಿಯದ ಪರಿಣಾಮ ಬೀರಿ, ಅವರ ನೆನಪಿನಲ್ಲುಳಿಯುವುದು ಕೊನೆಗೂ ದುಷ್ಟತನದ ಅದಮ್ಮಯ ದೈತ್ಯಶಕ್ತಿ ಮತ್ತು ವಿಕಟಾಟ್ಟಹಾಸ ಮಾತ್ರ. ಹೀಗಾಗಿ ಇಂದಿನ ಜನತೆ ಅನ್ಯಾಯ ಅನೀತಿಗಳ ವಿರುದ್ಧ ಸಂಘಟಿತರಾಗಿ ಹೋರಾಡುವ ತಮ್ಮ ನೈತಿಕ ಕೆಚ್ಚನ್ನೇ ಕಳೆದುಕೊಳ್ಳುತ್ತಿರುವಂತೆ ತೋರುತ್ತಿದೆ. ಎಲ್ಲೆಲ್ಲೂ ಭೀತಿ ಹತಾಶೆಗಳೇ ತೋರುತ್ತಿವೆ.

    ಈ ಬಗ್ಗೆ ಇಂದಿನ ಸಿನಿಮಾ ನಿರ್ಮಾಪಕ, ನಿರ್ದೇಶಕರನ್ನು ನಾವು ದೂರಿದರೆ ಅವರಲ್ಲಿ ಸಿದ್ಧ ಸಮರ್ಥನೆಯಿದೆ. ಅವರನ್ನುತ್ತಾರೆ : ‘ಇಲ್ಲದ್ದನ್ನು ಕಿಂಚಿತ್ತೂ ನಾವು ತೋರಿಸುತ್ತಿಲ್ಲ. ವಾಸ್ತವಕ್ಕೆ ಕನ್ನಡಿ ಹಿಡಿಯುತ್ತಿದ್ದೇವೆ, ಅಷ್ಟೇ.’

    ಹಾಗೆಂದು ವಸ್ತುಸ್ಥಿತಿಯ ಅರಿವು ನನಗಿಲ್ಲವೆಂದಲ್ಲ. ನನಗೂ ಗೊತ್ತಿದೆ ನಮ್ಮ ಈ ಪುಣ್ಯಭೂಮಿ ಇಂದು ಎಂಥ ದುರವಸ್ಥೆಗೆ, ಭ್ರಷ್ಟಾಚಾರದ ಕೂಪಕ್ಕೆ ಕುಸಿದುಬಿದ್ದಿದೆ ಎಂಬುದು. ಮೇಷ್ಟರಾಗಿ ನಾನು ನನ್ನ ವಿದ್ಯಾರ್ಥಿಗಳಿಗೆ ರವೀಂದ್ರನಾಥ ಠಾಕೂರರ ‘Motherland’ ಪದ್ಯದ

    Blessed am I that I am born to this land and that I had the luck to love her.

    ಎಂದು ಓದಿ ವ್ಯಾಖ್ಯಾನಿಸುವಾಗ, ನನಗೇ ಅರಿವಿಲ್ಲದೆ ನನ್ನ ದನಿಯಲ್ಲಿ ವ್ಯಂಗ್ಯ ವಿಡಂಬನೆ ಇಣುಕಿ ಅಣಕಿಸುತ್ತವೆ. ದಿನ ಬೆಳಗಾದರೆ ನಮ್ಮ ವಾರ್ತಾಪತ್ರಿಕೆಗಳು ಕೊಳೆತು ನಾರುತ್ತಿರುವ ನಮ್ಮ ದೇಶದ ವ್ಯವಸ್ಥೆಯನ್ನು, ನಮ್ಮ ಮುಖಕ್ಕೆ ರಾಚುತ್ತವೆ.

    ಹಾಗೆಂದು ಇಲ್ಲಿ ಭರವಸೆಗೆ, ಆಶಾಕಿರಣಕ್ಕೆ ಎಡೆಯೇ ಇಲ್ಲವೆ? ನೀತಿ ನಿಯತ್ತಿಗೆ ಪ್ರತಿಭೆ ಪರಿಶ್ರಮಕ್ಕೆ, ಮಾನವೀಯ ಮೌಲ್ಯಗಳಿಗೆ ಬೆಲೆಯೇ ಇಲ್ಲವೆ?

    ‘ಇದೆ’ ಎಂಬುದನ್ನು, ನಮ್ಮ ನಡುವಿನ, ಕೆಲವೇ ಉದಾಹರಣೆಗಳಿಗೆ ಭೂತಕನ್ನಡಿ ಹಿಡಿದಾದರೂ ತೋರಿಸಿ, ಸಾಧಿಸಿ, ಸಾತ್ವಿಕರನ್ನು ಸಂಘಟಿಸಬಲ್ಲ ಹಾಗೂ ಸಮಾಜವನ್ನು ನೈತಿಕ ನೆಲಗಟ್ಟಿನ ಮೇಲೆ ಮತ್ತೆ ನಿಲ್ಲಿಸಬಲ್ಲ ಶಕ್ತಿ ಇರುವುದು ಸಿನಿಮಾ, ಟಿ.ವಿ. ನಾಟಕ ಮುಂತಾದ ಪರಿಣಾಮಕಾರಿ ಜನಪ್ರಿಯ ಸಮೂಹ ಮಾಧ್ಯಮಗಳಿಗೆ ಮಾತ್ರ ಏಕೆಂದರೆ ಬಹುಸಂಖ್ಯಾತ ನಿರಕ್ಷರಸ್ಥರಿರುವ ನಮ್ಮ ದೇಶದಲ್ಲಿ ಜನರನ್ನು ನೇರವಾಗಿ ಮುಟ್ಟಬಲ್ಲ ಶಕ್ತಿ ಸಾಧ್ಯತೆ ಈ ಮಾಧ್ಯಮಗಳಿಗಿವೆ. ಆದ್ದರಿಂದ ಇವು ತುರ್ತಾಗಿ ತಮ್ಮ ಈ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದೆ.

    (ಕರ್ಮವೀರ – 1993)

    ಬದುಕು ರೂಪುಗೊಳ್ಳುವ ಬಗೆ

    ಅನಾದಿಕಾಲದಿಂದಲೂ ಮನುಷ್ಯನಿಗೆ ಅದಮ್ಯವಾದ ಆಸೆ, ಮುಂದೆ ತನ್ನ ಜೀವನದಲ್ಲಿ ಏನೇನು ಸಂಭವಿಸಲಿದೆ ಎನ್ನುವ ಭವಿಷ್ಯವನ್ನು ಇಂದೇ ತಿಳಿಯಬೇಕೆಂದು, ಶುಭವಿದ್ದರೆ ಆಸೆಯಿಂದ ಕಾಯಲು, ಅನಿಷ್ಟವಿದ್ದರೆ ಅದನ್ನು ಪರಿಹರಿಸಿಕೊಳ್ಳಲು. ಆದ್ದರಿಂದಲೇ ಈ ವಿಜ್ಷಾನದ ಯುಗದಲ್ಲಿಯೂ ಜ್ಯೋತಿಷಿಗಳಿಗೆ, ಹಸ್ತ ಸಾಮುದ್ರಿಕರಿಗೆ ತೀರದ ಬೇಡಿಕೆ, ಕೈ ತುಂಬ ಕೆಲಸ, ಸಂಪಾದನೆ.

    ಗ್ರೀಕ್ ಪುರಾಣಕತೆಗಳಲ್ಲಿ ಟೈರೀಸಿಯಸ್ ಎಂಬ ಮುದುಕ ಬರುತ್ತಾನೆ. ಆತ ಕುರುಡ, ಆದರೆ ತ್ರಿಕಾಲಜ್ಞಾನಿ. ಪ್ರತಿಯೊಬ್ಬನ ಭೂತ, ವರ್ತಮಾನ, ಭವಿಷ್ಯವೂ ಅವನ ಒಳಗಣ್ಣಿಗೆ ನಿಚ್ಚಳವಾಗಿ ಕಾಣುತ್ತವೆ. ಆದರೆ ಆತ ಬಡಪೆಟ್ಟಿಗೆ ಬಾಯಿ ಬಿಡುವುದಿಲ್ಲ. ತೀರಾ ಅನಿವಾರ್ಯವಾದಾಗ ಮಾತ್ರ ಒತ್ತಾಯಿಸಿದವರ ಅಜ್ಞಾತ ಗತಕಾಲವನ್ನೋ, ಮುಂಬರಲಿರುವ ಗಂಡಾಂತರ ದುರಂತಗಳನ್ನೋ ಅವರಿಗೆ ತಿಳಿಸಿ ಹೇಳಿ ಎಚ್ಚರಿಸುತ್ತಾನೆ. ಅವನ ಮಾತು ಸತ್ಯಸ್ಯ ಸತ್ಯ. ಆದರೆ ಅವನಿಗೆ ದೇವರ ಶಾಪವಿದೆ. ‘ಅವನ ಮಾತನ್ನು ಯಾರೂ ನಂಬದೇ ಹೋಗಲಿ’ ಎಂದು. ಹೀಗಾಗಿ ಅವನ ಕಾಲಜ್ಞಾನ ನಿರರ್ಥಕವಾಗುತ್ತದೆ. ನಡೆಯಬೇಕಾದ್ದು ನಡೆದೇ ತೀರುತ್ತದೆ. ಇದೆಂಥ ವಿಪರ್ಯಾಸ! ವಿರೋಧಾಭಾಸ! ಭವಿಷ್ಯ ಎಷ್ಟು ನಿಗೂಢವಾದದ್ದು ಎಂಬುದನ್ನೇ ಇದು ಧ್ವನಿಸುತ್ತದೆ. ಅಲ್ಲವೇ?

    ಇನ್ನು ನಮ್ಮ ಕೃಷ್ಣನ ಕತೆಯನ್ನೇ ನೋಡೋಣ. ಆತ ಪರಮಾತ್ಮನ ಅವತಾರ, ತ್ರಿಕಾಲಜ್ಞಾನಿ, ಗೀತಾಚಾರ್ಯ, ಆದರೇನು? ಯಾವ ದುರಂತವನ್ನೂ ತಪ್ಪಿಸಲು ಅವನಿಂದಾಗಲಿಲ್ಲ. ಕೊನೆಗೆ ಯಾದವರೆಲ್ಲಾ ತಮ್ಮ ತಮ್ಮಲ್ಲೇ ಕಾದಾಡಿಕೊಂಡು ಸತ್ತಾಗ ಆತ ಭ್ರಮನಿರಸನಗೊಳ್ಳುತ್ತಾನೆ. ಆದರೆ ಅವನಿಗೇ ಅರಿವಿಲ್ಲದ ಅನಿರೀಕ್ಷಿತ ರೀತಿಯಲ್ಲಿ ಅವನ ಸಾವು ಸಂಭವಿಸುತ್ತದೆ. ಒಬ್ಬ ಸಾಮಾನ್ಯ ಬೇಡನ ಬಾಣದಿಂದ. ಎದೂ ಸಹ ಭವಿಷ್ಯದ ನಿಗೂಢತೆಯನ್ನೇ ಸೂಚಿಸುತ್ತದೆ, ಅಲ್ಲವೇ?

    ಬೌದ್ಧಮತವನ್ನು ಹೊರತುಪಡಿಸಿ, ಜಗತ್ತಿನ ಬಹುತೇಕ ಧರ್ಮಗಳು ಒಂದು ಸಾಮಾನ್ಯ ನಂಬಿಕೆ ಮೇಲೆ ನಿಂತಿವೆ. ಅದೇನೆಂದರೆ, ಈ ಇಡೀ ಬ್ರಹ್ಮಾಂಡದ ಆಗುಹೋಗುಗಳನ್ನು ನಿರ್ಧರಿಸುವ, ನಿಯಂತ್ರಿಸುವ ಒಂದು ದೈವೀಶಕ್ತಿ ಇದೆ ಎನ್ನುವುದು ಪ್ರತಿಯೊಂದು ಜೀವಿಯ ಜಾತಕ ಪೂರ್ವನಿಶ್ಚಿತವಾದದ್ದು, ಎನ್ನುವುದು. ಇದನ್ನು ಒಪ್ಪುವುದಾದರೆ, ಸಕಲ ಜೀವರಾಶಿಗಳೂ ಜಗನ್ನಿಯಾಮಕನ ಕೈಗೊಂಬೆಗಳು. ಅವನು ಆಡಿಸಿದಂತೆ ಆಡುವಂಥವು. ಸೃಷ್ಟಿ, ಸ್ಥಿತಿ, ಲಯಗಳೆಲ್ಲವೂ ಅವನ ಲೀಲೆ, ಯಾವ ಜೀವಿಗೂ ಸ್ವಂತಿಕೆ ಎಂಬುದಿಲ್ಲ. ಭಾವಜೀವಿಯೂ ಬುದ್ಧಿಜೀವಿಯೂ ಆದ ಮನುಷ್ಯನೂ ಸಹ ಎದಕ್ಕೆ ಹೊರತಲ್ಲ. ಅವನ ಯಾವ ಆಯ್ಕೆ, ನಿರ್ಧಾರ, ಕ್ರಿಯೆಗಳಿಗೂ ತನ್ನದೇ ಆದ ಅರ್ಥವಿಲ್ಲ. ಏಕೆಂದರೆ ಅವುಗಳಿಗೆ ಅವನು ನೇರವಾಗಿ ಜವಾಬ್ದಾರನಲ್ಲ. ಅವನೊಂದು ಸಾಧನ ಮಾತ್ರ. ಜಗನ್ನಾಟಕದಲ್ಲಿ ಒಂದು ಪಾತ್ರ ಮಾತ್ರ. ಎದು ವಿಧಿವಾದ. ಎದನ್ನು ನಂಬುವವರು ಮಾತ್ರ ಭವಿಷ್ಯ ಪೂರ್ವನಿಶ್ಚಿತವಾದದ್ದು ಎಂಬುದನ್ನು ನಂಬಬಲ್ಲರು.

    ಆದರೆ ನನಗನ್ನಿಸುತ್ತೆ, ಈ ನಂಬಿಕೆ ಹುರುಳಿಲ್ಲದ್ದು, ಮಾತ್ರವಲ್ಲ. ಮನುಷ್ಯನ ಪ್ರಗತಿಗೇ ಮಾರಕವಾದದ್ದು, ಏಕೆಂದರೆ ನನ್ನ ಆಲೋಚನೆ, ನಿರ್ಧಾರ, ಆಯ್ಕೆ, ಕ್ರಿಯೆ ಇವೆಲ್ಲವೂ ಪೂರ್ವನಿಶ್ಚಿತವಾದದ್ದು ಎನ್ನುವುದಾದರೆ ನನ್ನ ಅಸ್ತಿತ್ವಕ್ಕೆ ಅರ್ಥವೇನಿದೆ? ಬೆಲೆಯೇನಿದೆ?

    ಈ ಸಂಬಂಧದಲ್ಲಿ ನನಗೆ ಈ ಶತಮಾನದಲ್ಲಿ ಹೆಚ್ಚು ಪ್ರಚಲಿತಗೊಂಡ ‘ಅಸ್ತಿತ್ವವಾದ’ (Existentialism) ತುಂಬಾ ಅರ್ಥಪೂರ್ಣವಾದದ್ದು ಅನ್ನಿಸುತ್ತದೆ. ಇದು ಹೊಚ್ಚ ಹೊಸದೇನೂ ಅಲ್ಲ. ಎದರ ಬೇರುಗಳು ಬೌದ್ಧಮತದ ತತ್ವಗಳಿಂದಲೂ ಸಾರ ಹೀರಿವೆ.

    ಅಸ್ತಿತ್ವವಾದದ ಪ್ರಕಾರ, ಪ್ರತಿ ವ್ಯಕ್ತಿಯೂ ಈ ಜಗತ್ತಿನಲ್ಲಿ ಅನಾಥ, ಒಬ್ಬಂಟಿ, ಅವನ ಜೀವನಕ್ಕೆ ತಾನಾಗಿ ಯಾವುದೇ ಪೂರ್ವನಿರ್ಧಾರಿತ ಅರ್ಥವಿಲ್ಲ. ಉದ್ದೇಶವೂ ಇಲ್ಲ. ಅವನು ತಾನಾಗಿ ಕೊಟ್ಟುಕೊಂಡಷ್ಟೇ ಅವನ ಜೀವನಕ್ಕೆ ಅರ್ಥ, ಉದ್ದೇಶ, ಆದ್ದರಿಂದ ಪ್ರತಿ ವ್ಯಕ್ತಿಯೂ ತನ್ನ ಜೀವನದ ಪ್ರತಿಕ್ಷಣವನ್ನೂ ಪ್ರಜ್ಞಾಪೂರ್ವಕವಾಗಿ ಬದುಕಿ, ತನ್ನ ಅಸ್ತಿತ್ವವನ್ನು ಸಮರ್ಥಿಸಿಕೊಳ್ಳಬೇಕಾಗುತ್ತದೆ. ಇದನ್ನು ಸೂತ್ರೀಕರಿಸಿ, ಈ ಶತಮಾನದ ಪ್ರಸಿದ್ಧ ಫ್ರೆಂಚ್ ಅಸ್ತಿತ್ವವಾದಿ, ಚಿಂತಕ ಸಾರ್ತ್ರೆ ಹೀಗೆ ಹೇಳುತ್ತಾರೆ. Don’t just be there, do some thing, Exist.

    ಈ ವೈಚಾರಿಕ ನಿಲುವು ಮನುಷ್ಯನ ಮೇಲೆ ಸಂಪೂರ್ಣ ಜವಾಬ್ದಾರಿ ಹೊರಿಸುತ್ತದೆ. ಅವನು ತನ್ನ ಬಾಳನ್ನು ತಾನೇ ಅರ್ಥಪೂರ್ಣವಾಗಿ ರೂಪಿಸಿಕೊಳ್ಳಬೇಕಾಗುತ್ತದೆ. ತನ್ನ ಎಲ್ಲ ನಿರ್ಧಾರಗಳಿಗೂ, ಕ್ರಿಯೆಗಳಿಗೂ, ಅವುಗಳ ಪರಿಣಾಮಗಳಿಗೂ ತಾನೇ ಸಂಪೂರ್ಣ ಹೊಣೆಗಾರನಾಗಬೇಕಾಗುತ್ತದೆ. ಬೇರೆ ಯಾರದ್ದೋ ಹೆಗಲಿಗೆ

    Enjoying the preview?
    Page 1 of 1