Discover millions of ebooks, audiobooks, and so much more with a free trial

Only $11.99/month after trial. Cancel anytime.

Naleyannu geddavanu
Naleyannu geddavanu
Naleyannu geddavanu
Ebook136 pages40 minutes

Naleyannu geddavanu

Rating: 0 out of 5 stars

()

Read preview

About this ebook

ಲೇಖಕನ ಕಿರು ಪರಿಚಯ:

ನನ್ನ ಹೆಸರು ನಾಗೇಶ್ ಕುಮಾರ್ ಸಿ ಎಸ್. ಹುಟ್ಟಾ ಬೆಂಗಳೂರಿನವನಾಗಿ, ಸಿವಿಲ್ ಎಂಜಿನಿಯರಿಂಗ್ ಸ್ನಾತಕೋತ್ತರ ಪದವೀಧರ. ಈಗ ಚೆನ್ನೈ ನಗರದಲ್ಲಿ ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಕೆಲಸದಲ್ಲಿದ್ದೇನೆ, ಕುಟುಂಬ ಸಮೇತ ತಮಿಳು ನಾಡಿನ ಕನ್ನಡ ಪರ ಸಂಸ್ಥೆಗಳ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇನೆ.

ನಾನು ಹವ್ಯಾಸಿ ಕನ್ನಡ ಮತ್ತು ಇಂಗ್ಲೀಷ್ ಬರಹಗಾರ.

ಇದುವರೆಗೂ 12 ಸಣ್ಣ ಕತೆಗಳನ್ನೂ, 4 ಕಿರು ಕಾದಂಬರಿಗಳನ್ನೂ ರಚಿಸಿ ತರಂಗ, ತುಷಾರ, ಉತ್ಥಾನ, ಸುಧಾ, ಕರ್ಮವೀರ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಿಸಿದ್ದೇನೆ.

ಅಲ್ಲದೇ ಸಖಿ ಯ ಮೇ ೧ ಸಂಚಿಕೆಯಲ್ಲಿ ದೋಹಾ ನಗರದ ಬಗ್ಗೆ ಪ್ರವಾಸಕಥನ ಬರೆದಿದ್ದೇನೆ.

ಕನ್ನಡಪ್ರಭ ಆನ್ ಲೈನ್ ಆವೃತ್ತಿಯಲ್ಲಿ ಮೂರು ಲೇಖನಗಳೂ ಪ್ರಕಟವಾಗಿವೆ

LanguageKannada
Release dateAug 12, 2019
ISBN6580216801975
Naleyannu geddavanu

Read more from Nagesh Kumar Cs

Related authors

Related to Naleyannu geddavanu

Related ebooks

Related categories

Reviews for Naleyannu geddavanu

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Naleyannu geddavanu - Nagesh Kumar CS

    http://www.pustaka.co.in

    ನಾಳೆಯನ್ನು ಗೆದ್ದವನು

    Naleyannu geddavanu

    Author:

    ನಾಗೇಶ್ ಕುಮಾರ್ ಸಿಎಸ್

    Nagesh Kumar CS

    For more books

    http://www.pustaka.co.in/home/author/nagesh-kumar-cs

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    Naleyannu geddavanu—

    Published by Nagesh Kumar CS at Chennai,

    India.

    © 2017 Nagesh Kumar CS

    ಲೇಖಕರದು

    (ಈ ಕತೆಯಲ್ಲಿ ಬರುವ ಪಾತ್ರಗಳು, ಸನ್ನಿವೇಶಗಳು, ಸ್ಥಳಗಳು ಕಾಲ್ಪನಿಕವೆಂದೂ ಯಾವುದೇ ನಿಜಜೀವನದ ವ್ಯಕ್ತಿ/ ಸ್ಥಳಗಳಿಗೆ ಸಂಬಂಧಿಸುದುದಲ್ಲಾ ಎಂದು ತಿಳಿಸಿಸಲಾಗಿದೆ)

    ನಾಳೆಯನ್ನು ಗೆದ್ದವನು

    ...ಒಂದು ವೈಜ್ಞಾನಿಕ ಥ್ರಿಲ್ಲರ್

    (c) ನಾಗೇಶ್ ಕುಮಾರ್ ಸಿಎಸ್

    ೧. ಅನ್ಯಗ್ರಹಜೀವಿಯ ಗಗನ ನೌಕೆ!

    ಜನವರಿ ೧, ೨೦೫೦

    ಬೆಳಿಗ್ಗೆ ೮ ಕ್ಕೆಲ್ಲಾ ನಂದಿಬೆಟ್ಟ ಗೆಸ್ಟ್ ಹೌಸ್ನಿಂದ ಹೊರಟ ಬಿಳಿ ಫ಼ೋರ್ಡ್ ಎಸ್ ಯು ವಿ ವ್ಯಾನನ್ನು ಸಲೀಸಾಗಿ ನಾಲ್ಕನೆ ಗೇರಿಗೆ ಬದಲಿಸಿ ಬೆಟ್ಟವಿಳಿಯುತ್ತಾ ಹೊರಟ ಅಭಿಮನ್ಯು.

    ಇವತ್ತೇಕೋ ಮೋಡ ಮುಚ್ಚಿದಂತಿದ್ದು ಆಗಾಗ ಬಿಸಿಲು ಇಣುಕಿ ಮಾಯವಾಗುತ್ತಿದೆ ಎನಿಸಿತು. ಎದುರಿನ ಡ್ಯಾಶ್ ಬೋರ್ಡಿನಲ್ಲಿ ಅವನ ಸರಕಾರಿ ಐ ಡಿ ಕಾರ್ಡ್ ಆ ಎಳೆಬಿಸಿಲಿನಲ್ಲಿ ಮಿಂಚಿತು. ಅಭಿಮನ್ಯು ಸಾಲಿಯಾನ್, ಸ್ಪೆಷಲ್ ಡೈರೆಕ್ಟರ್, ಇಂಟೆಲಿಜೆನ್ಸ್ ಬ್ಯುರೋ, ೩೩ ವರ್ಷ ಮುಂತಾದ ವಿವರಗಳು ಆ ಬ್ಯಾಡ್ಜಿನಲ್ಲಿ ನಮೂದಿಸಿದೆ. ಅದನ್ನು ಕಂಡು ಮ್ಲಾನವದನನಾಗಿ ಸಪ್ಪಗೆ ಮುಗುಳ್ನಕ್ಕ.

    ಸರಕಾರ ರಚಿಸಿದ್ದ ಈ ಭಯೋತ್ಪಾದಕರ ವಿರುದ್ದ ದಳದಲ್ಲಿ ಇಂಟೆಲಿಜೆನ್ಸ್ ಬ್ಯೂರೋದ ವರಿಷ್ಟ ಅಧಿಕಾರಿಯಾಗಿದ್ದರಿಂದ, ತಾನೇ ಅವರ ಗುರಿ ಆಗಿದ್ದರೂ ಆಗಿರಬಹುದು ಎಂಬ ಸಣ್ಣ ಶಂಕೆಯೂ ಮನದಲ್ಲಿ ಕೊರೆಯುತ್ತಲೇ ಇತ್ತು ... ಅಂದಿನಿಂದ ಈ ನ್ಯೂ ಇಯರ್ ಪಾರ್ಟಿಗಳಿಂದ ಹೊರಗುಳಿವ ನಿರ್ಧಾರ ಮಾಡಿ, ಡಿಸೆಂಬರ್ ೩೧ರಂದು ಬೆಳಗಿನಿಂದ ಒಬ್ಬನೇ ನಂದಿಬೆಟ್ಟದ ಗೆಸ್ಟ್ ಹೌಸಿನ ರೂಮಿನಲ್ಲಿ ಎಲ್ಲರಿಂದ ದೂರವಾಗಿದ್ದು, ತನ್ನ ಅನುಪಮಾಳ ನೆನೆಪಿನಲ್ಲಿ ಮುಳುಗಿ ಆ ರಾತ್ರಿ ಕಳೆಯುವುದನ್ನು ವಾಡಿಕೆ ಮಾಡಿಕೊಂಡಿದ್ದ. ಜನವರಿ ೧ನೇ ತಾರೀಕಿನ ಬೆಳಿಗ್ಗೆ ಎದ್ದು ಬೆಂಗಳೂರು ನಗರದಲ್ಲಿರುವ ತನ್ನ ಆಫೀಸಿಗೆ ತೆರಳಿ ಏನಾದರೂ ಕೆಲಸ ಹಿಡಿದು ಕೂರುತ್ತಿದ್ದ.

    ಅದೇ ಇಂದೂ ನೆಡೆಯಲಿದೆ ಅಂದುಕೊಳ್ಳುತ್ತಾ ತನ್ನ ಕಾರ್ ಸ್ಟೀರಿಯೋ ಆನ್ ಮಾಡಿ, ಅದರಲ್ಲಿ ಕನ್ನಡ ಹಾಡುಗಳನ್ನು ಆಯ್ದುಕೊಂಡಾಗ ಒಂದು ಹಳೇ ಚಿತ್ರಗೀತೆ: "ಕಾಲವನ್ನು ತಡೆಯೋರು ಯಾರೂ ಇಲ್ಲಾ..."ಎಂದು ಉಲಿಯತೊಡಗಿತು..

    ಅದೇ ಕ್ಷಣದಲ್ಲಿ ಇದ್ದಕ್ಕಿದ್ದಂತೆ ನಂದಿಬೆಟ್ಟವನ್ನು ಇಳಿವ ಆ ಸುತ್ತುದಾರಿಯಲ್ಲಿ ಅದೇಕೋ ಬಲಭಾಗದ ಆಗಸದಿಂದ ಕಣ್ಣು ಕೋರೈಸುವ ಬೆಳಕು ಮಿಂಚಿದಂತಾಯಿತು.

    ಅತ್ತ ನೋಡಿದರೆ ಒಂದು ಮೋಡದಾಕಾರದ ವಸ್ತು ತನ್ನತ್ತ ಶರವೇಗದಲ್ಲಿ ಹಾರಿಬರುತ್ತಿರುವಂತಿದೆ..

    ಅದರ ವ್ಯಾಸ ಏನಿಲ್ಲವೆಂದರೂ ೧೦೦ ಅಡಿ ಇದ್ದು ಐವತ್ತು ಅಡಿಯಷ್ಟು ಎತ್ತರದ ಥಳಥಳ ಹೊಳೆಯುವ ಅಲ್ಯುಮಿನಿಯಮ್ ತರಹದ ಲೋಹದಿಂದ ಮಾಡಿರಬಹುದಾದ ಗೋಲಾಕಾರದ ನಿಧಾನವಾಗಿ ತಿರುಗುವ ವಾಹನ...! ಕಿಟಕಿಗಳಂತೆ ಇಲ್ಲದಿದ್ದರೂ ಅಲ್ಲಲ್ಲಿ ಕಿಂಡಿಗಳಂತಿದ್ದು ಯಾವುದೋ ಹೊಂಬಣ್ಣದ ರಂಗು ಚೆಲ್ಲುತ್ತಿದೆ...

    ಅದರ ಬೃಹತ್ ಗಾತ್ರ, ಚಲಿಸಿಬಂದ ವೇಗ ಕಂಡು ದಿಗ್ಭ್ರಮೆಯಾಗಿ ಕಾಲು ಬ್ರೇಕನ್ನು ತಾನಾಗೇ ಅದುಮಲು, ಅವನ ಫೋರ್ಡ್ ವ್ಯಾನು ಬೆಟ್ಟದ ಬದಿಯಲ್ಲಿ ಕಿರ್ರೆನ್ನುತ್ತ ನಿಂತಿತು.

    ನೋಡು-ನೋಡುತ್ತಾ ಬೆಟ್ಟದ ಪಕ್ಕದ ಪ್ರಪಾತದ ಮೇಲಿನ ಆಗಸದಲ್ಲಿ ತನ್ನ ಮಗ್ಗುಲಿಗೇ ಬಂದು ನಿಶ್ಚಲವಾಗಿ ತನ್ನನ್ನೇ ಗಮನಿಸುವಂತೆ ನಿಂತಿದೆಯೆಲ್ಲಾ ಇದು, ಲೋಹದ ರಾಕ್ಷಸ ಪಕ್ಷಿ!..

    ಹಾ! ಇದೊಂದು ಗಗನ ನೌಕೆಯೆ ಇರಬೇಕು!..ಎಂದು ಅವನ ಮನದಲ್ಲೇ ಊಹಿಸಿದ.

    ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಹಾರುವ ನೌಕೆಯನ್ನು ಕಂಡು ಅಭಿಮನ್ಯುವಿಗೆ ಆಘಾತವಾಗಿ ಬಾಯಲ್ಲಿ ಪಸೆ ಆರಿದಂತಾಯಿತು..ರಕ್ತದೊತ್ತಡ ಏರಿದಂತಾಗಿ ಬೆರಗಾಗಿ ಅರಿವಿಲ್ಲದೆಯೇ ವ್ಯಾನಿಂದ ಹೊರಬಂದ..ಸುತ್ತಮುತ್ತಲೂ ರಸ್ತೆಯಲ್ಲಿ ಯಾವ ನರಪಿಳ್ಳೆಯೂ ಇಲ್ಲ..ರಜಾ ದಿನವಾದ ೧ನೆ ಜನವರಿಯ ಬೆಳಿಗ್ಗೆ ಅಷ್ಟು ಹೊತ್ತಿಗೇ ನಂದಿಬೆಟ್ಟದ ದಾರಿಯಲ್ಲಿ ಯಾರಿದ್ದಾರು?

    ಎದುರಿಗಿದ್ದ ಗಗನ ನೌಕೆಯ ಕೆಳಭಾಗದ ಬಾಯಿ ತೆರೆದಂತಾಗಿ ಬಂಗಾರದ ಬಣ್ಣದ ಹೊಂಬೆಳಕು ಹೊರಚೆಲ್ಲಿತು..ಸೂಕ್ಷ್ಮಮತಿ ಮತ್ತು ಸಮರ್ಥ ಅಧಿಕಾರಿಯಾದ ಅಭಿಮನ್ಯು ಚೇತರಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ತನ್ನ ಐ-ಫೋನ್ ತೆಗೆದುಕೊಂಡು ಇದರ ಚಿತ್ರವನ್ನಾದರೂ ಸಾಕ್ಷಿಗಾಗಿ ಇಟ್ಟುಕೊಳ್ಳಬೇಕು ಕ್ಯಾಮೆರ ಆನ್ ಮಾಡುವಾ ಎಂದು ನೋಡುತ್ತಾನೆ..ಅರೆ, ಕೈಯಲ್ಲಿದ್ದ ಐ-ಫೋನ್ ಆಫ಼್ ಆಗಿದೆ.. ಇದೇನು, ಹೊರಡುವ ಮುಂಚೆ ಬ್ಯಾಟರಿ ಸರಿಯಾಗೇ ಇತ್ತಲ್ಲ?..

    ಆಗಲೆ ಗಗನ ನೌಕೆಯ ಬಂಗಾರದ ಬಣ್ಣದ ಬೆಳಕಿನಲ್ಲಿ ತನ್ನ ಮೈ, ವ್ಯಾನು ಎಲ್ಲಾ ಆ ಎಳೆಬಿಸಿಲಿನ ಬೆಳಕಿಗೂ ಮೀರಿದ ಆ ಪ್ರಕಾಶದಿಂದ ತೋಯ್ದಂತಾಯಿತು..

    ಅವನಿಗೆ ಇನ್ನು ಮುಂದಿನ ಯೋಜನೆ ಮಾಡುವ ಅವಕಾಶವೇ ಸಿಗಲಿಲ್ಲ. ಅವನನ್ನು ಯಾರೋ ಆ ನೌಕೆಯತ್ತ ಸೆಳೆಯುತ್ತಿರುವಂತೆ ಭಾಸವಾಯಿತು...ಹೌದು, ತಾನು ಅತ್ತ ಗಾಳಿಯಲ್ಲಿ ಹಾರುತ್ತಾ ಚಲಿಸುತ್ತಿದ್ದೇನೆ! ಇದೇನಾಶ್ಚರ್ಯ!!..

    ವಿಚಿತ್ರವಾದ ಹೊಂಬೆಳಕು ಬೀರುವ ಆ ಸ್ಥಿರ ಗಗನ ನೌಕೆಯ ಆಳಕ್ಕೆ ಅಪ್ರಯತ್ನವಾಗಿ ಸೆಳೆಯಲ್ಪಡುತ್ತಿದ್ದಾನೆ. ಎಷ್ಟು ಸೆಣೆಸಿದರೂ ಆ ಪ್ರಬಲ ಶಕ್ತಿಯನ್ನು ಮೀರಿ ತಡೆದು ನಿಲ್ಲಲು ಸಾಧ್ಯವಾಗುತ್ತಿಲ್ಲ.. ಬಿರುಗಾಳಿಗೆ ಸಿಲುಕಿದ ತರಗೆಲೆಯು ಹೇಗೆ ಅಶಕ್ತವಾಗಿರುವುದೋ ಹಾಗೇ, ಪ್ರವಾಹದಲ್ಲಿ ಕೊಚ್ಚಿ ಹೋದ ಚೆಂಡಿನಂತೆ ಸರ್ರನೆ ನೆಲ ತೊರೆದು ಆಗಸದತ್ತ, ತೆರೆದ ಆ ನೌಕೆಯ ಬಾಗಿಲಿನತ್ತ ತೂರಿಹೋಗುತ್ತಿದ್ದಾನೆ..ಇದ್ಯಾವುದೋ ಅಲೌಕಿಕ ಶಕ್ತಿ, ಇಂತದನ್ನು ಊಹಿಸಲೂ ಆಗದು ಎನಿಸುತ್ತಿದೆ..

    ಆ ನೌಕೆಯ ಒಳಸೇರಿದಂತಾಗಿ ಅವನ ಚಲನೆ ನಿಂತು ಒಮ್ಮೆಲೆ ಸ್ಥಿರನಾದನು ಅಭಿಮನ್ಯು,,ಸುತ್ತಲೂ ಪ್ರಜ್ವಲಿಸುವ ದಿವ್ಯ ಪ್ರಕಾಶದಲ್ಲಿ ಮೀಯುತ್ತಿದ್ದಂತಿದೆ, ಬರೀ ಕಣ್ಣು ಕೋರೈಸುವ ಜ್ಯೊತಿಯಲ್ಲದೇ ಏನೂ ಕಾಣುತ್ತಿಲ್ಲ..ಆದರೆ ಆ ಪ್ರಕಾಶಕ್ಕೆ ತನ್ನ ಕಂಗಳು ಸುಡುತ್ತಿಲ್ಲ, ಮೈ ಉರಿದುಹೋಗುತ್ತಿಲ್ಲ..ಶಾಖವೂ ಬೆಚ್ಚಗೆ ಹಿತವಾಗೇ ಇದೆ..ಅವನ ಚಲನೆ ನಿಂತಾಗ ನೋಡಿದರೆ ಆ ನೌಕೆಯ ನೆಲದ ಮೇಲೆ ಒಬ್ಬನೇ ನಿಂತಿದ್ದಾನೆ..ಅವನು ಚುರುಕಾಗಿ ಯೋಚಿಸಿ ವಾಪಸ್ ಹೋಗಲೆಂದು ಹಿಂದೆ ತಿರುಗಿದಾಗ, ಶರವೇಗದಲ್ಲಿ ಅವನಿಗಾಗಿ ತೆರೆದಿದ್ದ ನೌಕೆಯ ಬಾಗಿಲು ಮುಚ್ಚಿಕೊಂಡಿತು. ಹೊರಗಿನ ನಂದಿಬೆಟ್ಟ, ರಸ್ತೆಯಲ್ಲಿ ನಿಂತ ತನ್ನ ವ್ಯಾನು ಎಲ್ಲವೂ ಕಣ್ಣಿಂದ ಮರೆಯಾದವು....

    ಹತಾಶನಾಗಿ ನಿಟ್ಟುಸಿರಿಟ್ಟು ಎದುರಿಗಿದ್ದ ಜ್ಯೋತಿಯನ್ನು ಉದ್ದೇಶಿಸಿ,

    ಯಾರಿದು? ಎಂದು ಕನ್ನಡದಲ್ಲಿ ಕಿರುಚಿದವನು, ಪ್ರಾಯಶಃ

    Enjoying the preview?
    Page 1 of 1