Discover millions of ebooks, audiobooks, and so much more with a free trial

Only $11.99/month after trial. Cancel anytime.

Nanna Premada Hudugi
Nanna Premada Hudugi
Nanna Premada Hudugi
Ebook238 pages1 hour

Nanna Premada Hudugi

Rating: 4.5 out of 5 stars

4.5/5

()

Read preview

About this ebook

Novelist, poet, short-story writer, essayist, playwright, educationist, linguist.... author of over 90 books in Kannada as well as English.

M. A. (English), B.Ed. from the University of Kerala; L.T.C.L. Diploma from Trinity College, London; A.C.P. Diploma from the College of Preceptors, Oxford; Taught English for 15 years in India and 9 years in Ethiopia; Published four books in the teachingof English language, grammar and Phonetics; Published in Kannada 45 novels, 3 anthologies of short stories, 4 anthologies of essays, 2 anthologies of poems, 18 plays, and a travelogue; Published in the Tulu language a novel and a collection of poems translated from English.
LanguageKannada
Release dateAug 12, 2019
ISBN6580200202267
Nanna Premada Hudugi

Read more from K.T. Gatti

Related to Nanna Premada Hudugi

Related ebooks

Reviews for Nanna Premada Hudugi

Rating: 4.333333333333333 out of 5 stars
4.5/5

3 ratings0 reviews

What did you think?

Tap to rate

Review must be at least 10 words

    Book preview

    Nanna Premada Hudugi - K.T. Gatti

    http://www.pustaka.co.in

    ನನ್ನ ಪ್ರೇಮದ ಹುಡುಗಿ

    Nanna Premada Hudugi

    Author:

    ಕೆ. ಟಿ. ಗಟ್ಟಿ

    K.T. Gatti

    For more books

    http://www.pustaka.co.in/home/author/kt-gatti-novels

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ನನ್ನ ಪ್ರೇಮದ ಹುಡುಗಿ

    Nanna Premada Hudugi,

    an anthology of poems in Kannada

    translated from English

    ನನ್ನ ಪ್ರೇಮದ ಹುಡುಗಿ

    (ಕನ್ನಡದಲ್ಲಿ 72 ಇಂಗ್ಲಿಷ್ ಪ್ರೇಮ ಕವನಗಳು)

    ಪ್ರಾಸ್ತಾವಿಕ

    ಈ ಸಂಕಲನದಲ್ಲಿ ಹದಿನಾರನೇ ಶತಮಾನದ ಕೊನೆಯಿಂದ ಹತ್ತೊಂಬತ್ತನೇ ಶತಮಾನದ ಕೊನೆಯ ವರೆಗೆ, ಸುಮಾರು ಮುನ್ನೂರು ವರ್ಷ, ಇಂಗ್ಲಷ್ ಕಾವ್ಯದಲ್ಲಿ ಬಂದಿರುವ ಬೇರೆ ಬೇರೆ ಕವಿಗಳ ಒಟ್ಟು 72 ಪ್ರೇಮ ಕವನಗಳಿವೆ. ಮೂರು ಶತಮಾನಗಳಲ್ಲಿ ಇಂಗ್ಲಿಷ್ ಕಾವ್ಯದ ಉದ್ಯಾನದಲ್ಲಿ ಅರಳಿದ ಅಸಂಖ್ಯ ಕವನ ಕುಸುಮಗಳಿಂದ ಇಷ್ಟು ಪ್ರೇಮ ಕವನಗಳನ್ನು ಆರಿಸಲು ಬಹಳ ಸಮಯ ಬೇಕಾಯಿತು ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಪ್ರೇಮ ಕವನಗಳನ್ನು ಬರೆದ ಇಂಗ್ಲಿಷ್ ಕವಿಗಳ ಸಂಖ್ಯೆ ಬಹಳ ಸಣ್ಣದೆಂದೇ ತೋರುತ್ತದೆ. ಕನ್ನಡಕ್ಕೆ ಹೋಲಿಸುವುದಾದರೆ, ಇಂಗ್ಲಿಷ್ ಕವಿಗಳ ಸಂಖ್ಯೆ ತುಂಬಾ ಸಣ್ಣದು. ಇಂಗ್ಲಿಷಿನಲ್ಲಿ, ಒಂದಷ್ಟು ಪ್ರೇಮ ಕವನಗಳನ್ನು ಬರೆದ ನಾಲ್ಕೈದು ಕವಿಗಳಿದ್ದಾರೆ. ಅವುಗಳನ್ನೇ ಒಟ್ಟುಗೂಡಿಸಿ ಒಂದು ಸಂಕಲನವನ್ನು ಮಾಡಬಹುದು. ಆದರೆ ಮುನ್ನೂರು ವರ್ಷಗಳ ಇಂಗ್ಲಿಷ್ ಕಾವ್ಯದಲ್ಲಿ ಪ್ರೇಮಾಭಿವ್ಯಕ್ತಿ-ಪ್ರೇಮ ಕಾವ್ಯದ ಬೆಳವಣಿಗೆಯ ರೀತಿಯನ್ನು ತಿಳಿಯಲು ಎಲ್ಲ ಕಾಲದ ಕವಿಗಳ ಕವನಗಳನ್ನು ನೋಡಬೇಕಾಗುತ್ತದೆ. ಕನ್ನಡ ಪ್ರೇಮ ಕವನಗಳ ಒಳ್ಳೆಯ ಪರಿಚಯ ಇರುವ ಓದುಗರಿಗೆ ಇದು ಇನ್ನಷ್ಟು ಆಸಕ್ತಿಯ ವಿಷಯವಾಗಬಹುದು.

    ಒಂದಷ್ಟು ಸಣ್ಣ ದೊಡ್ಡ ಸಂಕಲನಗಳಲ್ಲಿ ಹುಡುಕಿಯೂ ನನಗೆ ಬೇಕಾದಷ್ಟು ಕವಿಗಳು-ಕವಿತೆಗಳು ಸಿಗಲು ಕಷ್ಟವಾಯಿತು. ವಿಶ್ವ ವಿದ್ಯಾಲಯದ ಪಠ್ಯ ಪುಸ್ತಕಗಳಲ್ಲಿ ಕೆಲವು ಸಿಗಬಹುದೆಂದು, ನಾಲ್ಕೈದು ವಿಶ್ವ ವಿದ್ಯಾಲಯಗಳ ನಾಲ್ಕೈದು ವರ್ಷಗಳ ಪದವಿ ತರಗತಿಯ ಪಠ್ಯ ಪುಸ್ತಗಳಲ್ಲಿ ಹುಡುಕಿದಾಗ ಸಿಕ್ಕಿದ್ದು ಕೀಟ್ಸ್ ಮಹಾಕವಿಯ `ಲಾ ಬೆಲಾ ಡೇಮ್ ಸಾನ್ಸ್ ಡ ಮರ್ಸಿ’ ಎಂಬ ಒಂದು ಕವನ ಮಾತ್ರ! ಇದೊಂದು ಕವನ ಬೇರೆ ಬೇರೆ ಕಾಲದಲ್ಲಿಯೂ ಇಂಗ್ಲಿಷ್ ಪಠ್ಯಗಳಲ್ಲಿ ಕಾಣಿಸಿಕೊಂಡಿದೆ ಎಂದು ಗಮನಿಸಿದಾಗ, ಪಠ್ಯ ಪುಸ್ತಕಗಳಿಗೆ ಕವನವನ್ನು ಆಯ್ಕೆ ಮಾಡುವವರು ಹೊಸ ಕವನವನ್ನು ಹುಡುಕುವುದಿಲ್ಲ, ಮೊದಲೇ ಇರುವುದನ್ನೇ ಮತ್ತೆ ಮತ್ತೆ ಹಾಕುವುದು ಅವರಿಗೆ ಸುಲಭವಾಗುತ್ತದೆ ಎಂದು ಅರ್ಥವಾಯಿತು.

    ಕನ್ನಡ ಪಠ್ಯ ಪುಸ್ತಕಗಳಲ್ಲಿ ಪ್ರೇಮ ಕವಿತೆಗಳಿಗೆ ಸ್ಥಾನವಿಲ್ಲವೆಂದು ತೋರುತ್ತದೆ! ಹೈಸ್ಕೂಲು ತರಗತಿಗಳಲ್ಲಿ ಬೇಡವೆಂದಾದರೆ, ಬೇಡ; ಸ್ನಾತಕ, ಸ್ನಾತಕ ಪೂರ್ವ ತರಗತಿಗಳಲ್ಲಿ ಕೊಡಬಹುದಲ್ಲ? ಪಠ್ಯ ಪುಸ್ತಕ ಸಮಿತಿಯಲ್ಲಿ ಪ್ರೀತಿ ಮಾಡುವ ವಯಸ್ಸು ಮೀರಿದವರೇ ಇರುತ್ತಾರೋ ಏನೊ. ಕನ್ನಡದಲ್ಲಂತೂ ಪ್ರೇಮ ಕವಿತೆಗಳ ಸಂಖ್ಯೆ ಅಪರಿಮಿತ. ಇಂಗ್ಲಿಷಿನಲ್ಲಿ ಬೇರೆ ಕವಿಗಳ ಪ್ರೀತಿ-ಕವಿತೆ ಸಿಗಲಿಲ್ಲವೆಂದಾದರೂ ಶೇಕ್ಸ್‍ಪಿಯರನ ಸುಮಾರು ಇನ್ನೂರು ಪ್ರೀತಿ-ಪ್ರೇಮದ ವಾಸನೆಯ ಸಾನೆಟುಗಳಿವೆ. ಅವೆಲ್ಲವನ್ನೂ ಪ್ರೇಮಕವಿತೆಗಳು ಎಂದು ಪರಿಗಣಿಸಲಿಕ್ಕಾಗಲಿಕ್ಕಿಲ್ಲ. ಆದರೆ ಅವುಗಳಲ್ಲಿ ಕೆಲವು ಅದ್ಭುತವಾದ ಪ್ರೇಮ ಕವನಗಳು.

    ಮುಖ್ಯವಾಗಿ, ಕನ್ನಡದಲ್ಲಿ, ಬೇರೆ ಬೇರೆ ಕವಿಗಳ ಪ್ರೇಮ ಕವನಗಳ ಸಂಕಲನವೊಂದನ್ನು ತಯಾರಿಸಿ ಪದವಿ ತರಗತಿಗೆ ಕನ್ನಡ ಪಠ್ಯವಾಗಿಡುವುದರಲ್ಲಿ ಏನಾದರೂ ಅಪಚಾರವಿದೆಯೆ? ಇದು ತೀರಾ ಅಗತ್ಯ ಎಂದು ನನಗನಿಸಿತ್ತದೆ. ಸಾಹಿತ್ಯವೇ ಪ್ರಧಾನ ವಿಷಯವಾಗಿರುವ ಪದವಿ ಪಠ್ಯಗಳ ವಿಚಾರ ಬೇರೆ. ಅದರಲ್ಲಿ ಎಲ್ಲ ಬಗೆಯ ಕಾವ್ಯವೂ ಇರಬೇಕು, ಇರುತ್ತದೆ. ಇತರ ಪ್ರೀತಿ ಮಾಡುವ ಪ್ರಾಯದ ಯುವಕ ಯುವತಿಯರಿಗೆ ಕೆಲವು ಒಳ್ಳೆಯ ಪ್ರೇಮ ಕವಿತೆಗಳು ಸಿಗುವಂತಾದರೆ ಏನೂ ಅಪಾಯ ಆಗಲಿಕ್ಕಿಲ್ಲ. ಪ್ರೀತಿ ಎಂಬುದು ವ್ಯಾಲಂಟೈನ್ಸ್ ಡೇಯ ಆಚರಣೆ-ಅನಾಚರಣೆಗೆ ಸೀಮಿತವಾಗುವುದು ತಪ್ಪಬಹುದು.

    ಅನುವಾದವು ಸಾಧ್ಯವಿದ್ದಷ್ಟೂ ಮೂಲಕ್ಕೆ ಹತ್ತಿರವಿರಬೇಕೆನ್ನುವುದು ನನ್ನ ಅಭಿಪ್ರಾಯ. ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದ ಮಾಡುವಾಗ `ಗುಲಾಬಿ’ಯನ್ನು `ತಾವರೆ’ ಮಾಡಬೇಕಾದ ಅಗತ್ಯವಿಲ್ಲ. `ನನ್ನ ಪ್ರೇಮದ ಹುಡುಗಿ ಮೊದಲ ಮಳೆ ಹನಿಗೆ ಮೂಡಿ ಬಂದ ಗುಲಾಬಿಯಂತೆ’ ಎಂದು ಕವಿ ಹೇಳಿದ್ದನ್ನು, `ನನ್ನ ಪ್ರೇಮದ ಹುಡುಗಿ ಅರಳಿದ ಹೊಸ ತಾವರೆಯಂತೆ’ ಎಂದರೆ ಅಷ್ಟೊಂದು ಸಮಂಜಸವಲ್ಲ ಎಂದು ನನ್ನ ಅಭಿಪ್ರಾಯ. ಗುಲಾಬಿ ಜಗತ್ತಿನ ಬಹಳ ಭಾಷೆಗಳಲ್ಲಿ ಪ್ರೇಮಕ್ಕೆ ಹತ್ತಿರ, ತಾವರೆ ಭಾರತದಲ್ಲಿ ಧರ್ಮಕ್ಕೆ ಹತ್ತಿರ ಎನ್ನುವುದನ್ನು ಸಹ ಗಮನಿಸಬೇಕು. ರಾಬರ್ಟ್ ಬನ್ರ್ಸನ ಇಡೀ ಕವಿತೆಯೇ ಗುಲಾಬಿಯಂತಿರುವ ಹುಡುಗಿಯ ಕುರಿತಾಗಿರುವಾಗ, ಇಷ್ಟೊಂದು ದೊಡ್ಡ ಬದಲಾವಣೆಯನ್ನು ಸ್ವೀಕರಿಸಲು ಮನಸ್ಸು ಒಪ್ಪುವುದಿಲ್ಲ.

    ಒಂದು ಕವಿತೆಯಲ್ಲಿ ಎಲ್ಲೋ ಒಂದೆಡೆ ಬರುವ ಹೂವಿನ ಹೆಸರು ಇಲ್ಲವೆ ಮರದ ಅಥವಾ ಊರಿನ ಹೆಸರು ಬದಲಾದರೆ ಕವಿತೆಯ ಭಾವಕ್ಕೆ ಭಂಗವುಂಟಾಗಲಾರದು. ಸರಿಯೆನಿಸಿದರೆ, `ಲಿಲ್ಲಿ’ ಯನ್ನು ಲಿಲ್ಲಿಯೆಂದೇ ಬರೆಯಬಹುದು; ಅಗತ್ಯವಿದ್ದರೆ `ಮಲ್ಲಿಗೆ’ ಎನ್ನಬಹುದು. ಕವಿತೆಗೆ ಅಪಚಾರವಂಟಾಗುವುದಿಲ್ಲವೆಂದಾದಲ್ಲಿ, `ಓಕ್’ ಬದಲು `ಆಲ’ ಎಂದು ಬರೆಯಬಹುದು. ಆದರೆ ಕವಿತೆಯ ಸಂದರ್ಭದ ಪ್ರಕಾರ, `ಲಿಲ್ಲಿ’ ಅಥವಾ `ಓಕ್’ಗೆ ಸಾಂಸ್ಕøತಿಕ, ಸಾಮಾಜಿಕ ಅಥವಾ ನಿಸರ್ಗಕ್ಕೆ ಸಂಬಂಧಿಸಿದ ಏನಾದರೂ ಮಹತ್ವವಿದ್ದಲ್ಲಿ, ಹೆಸರುಗಳನ್ನು ಬದಲಾಯಿಸುವುದು ತಪ್ಪಾಗುತ್ತದೆ. ಆ ಕಾರಣದಿಂದಲೇ `ಡೋವರ್ ಬೀಚ್’ನ್ನು `ಕಾರವಾರ ತೀರ’ ಎಂದು ಬದಲಾಯಿಸಲು ಆಗುವುದಿಲ್ಲ. ಮ್ಯಾಥ್ಯೂ ಅರ್ನಾಲ್ಡನ

    `ಡೋವರ್ ಬೀಚ್’ ಕವಿತೆಯಲ್ಲಿ ಬ್ರಿಟನಿಗೆ ಹತ್ತಿರದ ಫ್ರೆಂಚ್ ಕಡಲ್ಕರೆಯ ಬೆಳಕು-ಸಾಲಿನ ಪ್ರಸ್ತಾಪವಿದೆ. `ಡೋವರ್ ಬೀಚ್’ನ್ನು ಕಾರವಾರ ತೀರ ಎಂದು ಮಾಡಿದರೆ, ಅದು ಬೇರೆಯೇ ಒಂದು ಕವಿತೆ ಆಗುತ್ತದೆ.

    ಅನುವಾದಗಳಲ್ಲಿ ನಮಗೆ ಕೆಲವೊಮ್ಮೆ, ಮೂಲದ ಕವಿತೆಯೇ ಬೇರೆ, ಅನುವಾದಿತ ಕವಿತೆಯೇ ಬೇರೆ ಎಂದನಿಸುವಂಥ ಕವಿತೆಗಳು ಸಿಗುತ್ತವೆ. ಅನುವಾದದಲ್ಲಿ ಮೂಲದ ಅರ್ಥವು ಇದ್ದರೆ ಸಾಕು ಎನ್ನುವುದು ಒಂದು ವಾದ. ಭಾವ ಇದ್ದರೆ ಸಾಕು ಎನ್ನುವುದು ಇನ್ನೊಂದು ವಾದ. ಭಾಷಾಂತರ ಭಾವಾಂತರವಾದುದಕ್ಕೂ ನಮಗೆ ಉದಾಹರಣೆಗಳು ಸಿಗುತ್ತವೆ. ಇಂಗ್ಲಿಷ್ ಕವಿತೆಗಳ ಭಾವಾನುವಾದ ವಿಲಕ್ಷಣವಾದ ಭಾಷಾ ತೇಪೆಯಂತಿರುವುದು ಅಥವಾ ಮೂಲದಷ್ಟೇ ಕ್ಲಿಷ್ಟವಾದ ಸಂಸ್ಕøತ ಪದಗಳ ಗೊಂಚಲಾಗುವುದೂ ಇದೆ. ಅನುವಾದದಲ್ಲಿ ಮೂಲ ಕಾಣಿಸುತ್ತಿಲ್ಲವಲ್ಲ ಎನ್ನುವಂತಾಗಬಾರದು ಎನ್ನುವುದು ಮುಖ್ಯ.

    ಕಾವ್ಯವು ಅರ್ಥ ಮಾಡಿಕೊಳ್ಳಲಿಕ್ಕಿರುವಂಥದಲ್ಲ; ಕಾವ್ಯ ನಮ್ಮಲ್ಲಿ ಉಂಟು ಮಾಡಬೇಕಾದ್ದು ಅನುಭೂತಿ. ಈ ಅನುಭೂತಿ ವ್ಯಕ್ತಿಯಿಂದ ವ್ಯಕ್ತಿಗೆ, ಒಂದೇ ವ್ಯಕ್ತಿಯ ಒಂದು ಪ್ರಾಯದಿಂದ ಇನ್ನೊಂದು ಪ್ರಾಯಕ್ಕೆ ಭಿನ್ನವಾಗಿರುವ ಸಾಧ್ಯತೆ ಇರುವಂಥದು. ಎಲ್ಲಾ ಪ್ರಾಯದಲ್ಲಿಯೂ, ಎಲ್ಲಾ ಮಾನಸಿಕ ಸ್ಥಿತಿಯಲ್ಲೂ ಒಂದೇ ಅರ್ಥವನ್ನು ಕೊಡುವಂಥದು ಕವಿತೆಯಲ್ಲಿರುವ ಕೆಲವು ಶಬ್ದಗಳು ಮಾತ್ರ. ಕವಿತೆಯ ಶಬ್ದಗಳ ಅರ್ಥ ಮತ್ತು ಕವಿತೆ ನಮ್ಮ ಒಳಗೆ ಉಂಟು ಮಾಡುವ ಅರ್ಥ ಒಂದೇ ಅಲ್ಲ; ಸಂಪೂರ್ಣ ಬೇರೆ ಬೇರೆಯೂ ಅಲ್ಲ. ಅರ್ಥ ಮತ್ತು ಭಾವ ಒಂದನ್ನೊಂದು ಬೆಸೆದುಕೊಂಡಿರುವ ಸಂಗತಿ ಅದು. ಅದೇ ಕಾವ್ಯ. ಕಾವ್ಯ ಅರ್ಥವಾಗುವುದು ಎಂದರೆ, ಅದು ನಮ್ಮ ಆತ್ಮದೊಳಗೆ ಇಳಿಯುವುದು ಅಂತ ಅರ್ಥ, ಬಹಳ ಸಲ ಒಂದು ಉಂಡೆಯಾಗಿ ಅಲ್ಲ, ಹನಿ ಹನಿಯಾಗಿ. ಒಂದೇ ಉಂಡೆಯಾಗಿ ನುಂಗಹೋದರೆ ಕಾವ್ಯ ಅಜೀರ್ಣವುಂಟುಮಾಡಬಹುದು.

    ಜಗತ್ತಿನ ಪ್ರತಿಯೊಂದು ಭಾಷೆಯಲ್ಲಿರುವ ಕಾವ್ಯದಲ್ಲಿ ಆ ಭಾಷೆಯನ್ನಾಡುವ ಜನರ ಸಮಾಜ ಮತ್ತು ಸಂಸ್ಕøತಿಗೆ ಸಂಬಂಧಿಸಿದ ಭಾವ ಇರುತ್ತದೆ. ಕಾಮವನ್ನು, ಪ್ರೇಮವನ್ನು, ಹುಟ್ಟನ್ನು, ಸಾವನ್ನು ಪರಿಭಾವಿಸುವ ರೀತಿಯಲ್ಲಿ ಸಮಾಜದಿಂದ ಸಮಾಜಕ್ಕೆ ವ್ಯತ್ಯಾಸವಿದೆ. ಅದೇ ರೀತಿ, ಪ್ರಾಣಿ ಪಕ್ಷಿಗಳ ಕುರಿತು, ಮಳೆ ಬೆಳೆಯ ಕುರಿತು, ಕ್ಷಾಮ ಡಾಮರಗಳ ಕುರಿತು-ಬದುಕಿನ ಎಲ್ಲದರ ಕುರಿತು ಜನ ತಾಳುವ ಅಭಿಪ್ರಾಯದಲ್ಲಿ ವ್ಯತ್ಯಾಸ ಇರುತ್ತದೆ. ಭಾವನೆಗಳನ್ನು ಅಭಿವ್ಯಕ್ತಿಸುವ ರೀತಿಯಲ್ಲಿಯೂ ವ್ಯತ್ಯಾಸವಿರುತ್ತದೆ. `ಅಭಿವ್ಯಕ್ತಿಸುವ ರೀತಿಯಲ್ಲಿಯೂ ವ್ಯತ್ಯಾಸವಿರುತ್ತದೆ’ ಎಂದರೆ, ಯೋಚಿಸುವ ರೀತಿಯಲ್ಲಿಯೂ ವ್ಯತ್ಯಾಸ ಇರುತ್ತದೆ ಎಂದು ಅರ್ಥ. ಇದನ್ನೆಲ್ಲ ಕಂಡುಕೊಂಡು ಒಂದು ದೇಶದ ಭಾಷೆಯಲ್ಲಿರುವ ಕಾವ್ಯವನ್ನು ಇನ್ನೊಂದು ಭಾಷೆಯ ಕಾವ್ಯಕ್ಕೆ ಅನುವಾದ ಮಾಡುವುದು ಕಷ್ಟ ಸಾಧ್ಯ. `ಅದನ್ನೆಲ್ಲ ತಲೆಗೆ ಹಚ್ಚಿಕೊಳ್ಳಬೇಕಾಗಿಲ್ಲ. ಮೂಲದಲ್ಲಿರುವ ಕವಿತೆಯ ಭಾವವು ಅನುವಾದದಲ್ಲಿ ಬಂದರೆ ಸಾಕು’ ಎಂಬೊಂದು ವಾದವಿದೆ. ಇರಲಿ, ಅದೂ ಒಂದು ವಿಧ ಅನುವಾದವಾಗಿರಬಹುದು. ಆದರೆ ಹಾಗೆ ಮಾಡುವಾಗ ಶಬ್ದಗಳ ಅರ್ಥಾಂತರವಾಗದಂತೆ, ಭಾವಗಳು ಭಾವಾಂತರಗೊಳ್ಳದಂತೆ ನೋಡಿಕೊಳ್ಳುವುದು ಹೇಗೆ?

    ಅನುವಾದದಲ್ಲಿ ನಮಗೆ ಸಿಕ್ಕಿದ ಕವಿತೆ ನಮ್ಮ ಭಾಷೆಯ ಕವಿತೆಯಂತೆಯೇ ಇದ್ದರೆ ಅದರಲ್ಲಿ ಬೇರೆ ಕಾರಣಕ್ಕೆ ಸ್ವಾರಸ್ಯ ಇರಬಹುದು. ಆದರೆ ಇದು ಇಂಥ ಭಾಷೆಯಿಂದ ಬಂದ ಕವಿತೆ ಎಂಬ ಬಗ್ಗೆ ಏನಾದರೊಂದು ಕುರುಹು ಇಲ್ಲದೇ ಹೋದರೆ, ಅದನ್ನು ಬಹು ಮಟ್ಟಿಗೆ ಸ್ವತಂತ್ರ ರಚನೆ ಎಂದೇ ಪರಿಗಣಿಸಬೇಕಾದೀತು.

    ಅನುವಾದಿತ ಕಾವ್ಯದಲ್ಲಿ ನಮಗೆ ಸಿಗಬೇಕಾದ್ದೇನು ಎಂಬ ಪ್ರಶ್ನೆಯನ್ನು ಎತ್ತುವುದಾದರೆ: ಬೇರೆ ಭಾಷೆಯ ಕವಿತೆಗಳು ನಮ್ಮ ಭಾಷೆಗೆ ಬರುವಾಗ, ಮೂಲದಲ್ಲಿನ ಕೆಲವು ಅಂಶಗಳು ನಮಗೆ ಸಿಗಲೇ ಬೇಕು. ಕೆಲವು ಭಾವನೆಗಳನ್ನು ನಮ್ಮ ಭಾಷೆಯಲ್ಲಿ ನಮ್ಮದೇ ಆದ ರೀತಿಯಲ್ಲಿ ವ್ಯಕ್ತಪಡಿಸುತ್ತೇವೆ. ಬೇರೆ ಭಾಷೆಯಲ್ಲಿ ಹೇಗೆ ಹೇಳುತ್ತಾರೆ ಎಂದು ನಮಗೆ ತಿಳಿಯಬೇಕು. ಬೇರೆ ಭಾಷೆಯಲ್ಲಿನ ನುಡಿಗಟ್ಟುಗಳು ಬೇರೆ; ಅವು ಸಾಧ್ಯವಿದ್ದಷ್ಟೂ ಅನುವಾದದಲ್ಲಿ ಮೂಡಿಬರಬೇಕು. ಇನ್ನೊಂದು ಸಂಸ್ಕøತಿಯಲ್ಲಿ, ಇನ್ನೊಂದು ಜನಪದದಲ್ಲಿ, ಯೋಚನೆ ಮಾಡುವ ರೀತಿಯಲ್ಲಿ, ಚಿಂತಿಸುವ ರೀತಿಯಲ್ಲಿ, ಅದನ್ನು ಹೇಳುವ ಪರಿಚಯ ಆಗುವಾಗ ಆ ಕಾವ್ಯದ ಮೂಲಕ ಆ ಸಂಸ್ಕ್ರತಿಯ ಪರಿಚಯ ನಮಗೆ ಆಗುತ್ತದೆ. ನಮ್ಮ ಸಾಹಿತ್ಯದ ಬೆಳವಣಿಗೆಗೆ ಕೂಡ ಇದು ಅಗತ್ಯ.

    `ಅನುವಾದ ಮೂಲಕ್ಕೆ ಹತ್ತಿರವಾಗಿರಬೇಕು’ ಎನ್ನುವುದು ಭಾವ ಮತ್ತು ಅರ್ಥಕ್ಕೆ ಸಂಬಂಧಪಟ್ಟ ವಿಚಾರವೇ ಹೊರತು, ಛಂದಸ್ಸಿಗೆ ಸಂಬಂಧಪಟ್ಟ ವಿಚಾರವಲ್ಲ. ಕಾವ್ಯವಿರುವುದು ಅದು ನಮ್ಮ ಒಳಗೆ ಹೇಗೆ ಹೋಗುತ್ತದೆ ಮತ್ತು ಏನು ಮಾಡುತ್ತದೆ ಎನ್ನವುದರಲ್ಲಿಯೇ ವಿನಾ, ಕವನದ ಸಾಲುಗಳು ಯಾವ ರೀತಿ ರಚಿತವಾಗಿವೆ ಎನ್ನವುದರಲ್ಲಿ ಅಲ್ಲ. ಒಂದು ಕಾಲದಲ್ಲಿ ಇಂಗ್ಲಿಷಿನಲ್ಲಿ ಕವನಗಳನ್ನು ಎಲೆ, ಖಡ್ಗ ಮುಂತಾದ ವಿನ್ಯಾಸದಲ್ಲಿ ಬರೆಯುವ ಕ್ರಮವೂ ಇತ್ತು! ಇಂಗ್ಲಿಷಿನಲ್ಲಿರುವ ಪ್ರಾಸ ಕ್ರಮ, ಪಂಕ್ತಿ ರಚನೆ ಮುಂತಾದವನ್ನು ಕನ್ನಡಕ್ಕೆ ತಂದರೆ ಅದು ಕಾವ್ಯವೂ ಅಲ್ಲದ, ಅನುವಾದವೂ ಅಲ್ಲದ ಲಿಂಗ್ವಿಸ್ಟಿಕ್ ಸರ್ಕಸ್ ಆಗಬಹುದು. ಸಂಸ್ಕøತದ ವೃತ್ತಗಳಿಗೆ ಹೇಗೆ ಕನ್ನಡಕ್ಕೆ ಬರಲು ಸಾಧ್ಯವಾಯಿತು ಎಂದರೆ ಎರಡೂ ಫೊನೆಟಿಕ್ ಭಾಷೆಗಳಾದುದರಿಂದ ಮತ್ತು ಎರಡೂ ಭಾಷೆಗಳ ನಡುವೆಯಿದ್ದ ನಿಕಟ ಸಂಬಂಧದಿಂದ. ಇಂಗ್ಲಿಷ್ ಮತ್ತು ಕನ್ನಡ ಹಾಗೆ ಅಲ್ಲ. ಇಂಗ್ಲಿಷ್ ಇಪ್ಪತ್ತಾರು ಅಕ್ಷರಗಳ ಅನ್‍ಫೊನೆಟೊಕ್ ಭಾಷೆ; ಕನ್ನಡ ಐವತ್ತೆರಡು ಅಕ್ಷರಗಳಿರುವ ಫೊನೆಟಿಕ್ ಭಾಷೆ. ಇಂಗ್ಲಿಷ್ ಶಬ್ದಗಳ `ಸ್ವರ ಬಂಧ’ ಸವರೂಪ ಬೇರೆ, ಕನ್ನಡ ಶಬ್ದಗಳ `ಸ್ವರ ಬಂಧ’ ಸ್ವರೂಪ ಬೇರೆ.

    ಕನ್ನಡದಿಂದ ಇಂಗ್ಲಿಷಿಗೆ ಕಾವ್ಯವನ್ನು ಅನುವಾದ ಮಾಡಿದ ಕವಿಗಳು ಯಾರೂ ಇಂಗ್ಲಿಷಿನಲ್ಲಿ ವೃತ್ತ, ಕಂದ, ಷಟ್ಪದಿಗಳನ್ನು ಬಳಸಿಕೊಳ್ಳುವ ಪ್ರಯತ್ನ ಮಾಡಿಲ್ಲ; ಅದು ಸಾಧ್ಯವೂ ಅಲ್ಲ. ವೃತ್ತ, ಷಟ್ಪದಿ, ತ್ರಿಪದಿ ಮುಂತಾದ್ದು ಕನ್ನಡದಿಂದ ಕೂಡ ಮಾಯವಾಗಿ ಬಹಳ ಕಾಲವಾಯಿತು. ಕನ್ನಡದಿಂದ ಇಂಗ್ಲಿಷಿಗೆ ಅನುವಾದ ಮಾಡಹೊರಟವರಿಗೆ ಇತರೆಲ್ಲ ಕಾವ್ಯಕ್ಕಿಂತ ಮಿಗಿಲಾಗಿ, ವಚನ ರೂಪದ ಕಾವ್ಯ ಯಾಕೆ ಇಷ್ಟವಾಯಿತು ಎನ್ನುವುದನ್ನು ಗಮನಿಸಬೇಕು. ಕನ್ನಡದಲ್ಲಿ ಮಹಾ ಕಾವ್ಯ ಬರೆದ

    ಕುವೆಂಪು ಮತ್ತು ಗೋಕಾಕರಿಗೆ ಬ್ಲಾಂಕ್ ವರ್ಸ್ ಅರ್ಥಾತ್ ಮುಕ್ತ ಛಂದಸ್ಸು ಯಾಕೆ ಪ್ರಿಯವಾಯಿತು ಎನ್ನುವುದು ಗಮನಿಸಬೇಕಾದ ವಿಚಾರ.

    ಇಂಗ್ಲಿಷಿನ `ಸಾನೆಟ್’ ಕನ್ನಡದ `ಸುನೀತ’ವಾಗಿ ಬಂದಿರುವುದು ನಿಜ. ಒಬ್ಬ ಕವಿಯಿಂದಾದ ಪ್ರಯೋಗ ಅದು. ಕೆಲವು ಕವಿಗಳು ಅದನ್ನು ಅನುಸರಿಸಿರಬಹುದು. ಆದರೆ ಅನಂತರ ತಮ್ಮ ಕಾವ್ಯದಲ್ಲಿ `ಸುನೀತ’ವನ್ನು ತರುವ ಗೋಜಿಗೆ ಯಾರೂ ಹೋಗಲಿಲ್ಲ. (ಸುನೀತ ಎಂಬ ಶಬ್ದ ಒಂದೊಳ್ಳೆಯ `ಹೆಣ್ಣು ಹೆಸರಾ’ಗಿ ಜನಪ್ರಿಯವಾದದ್ದು ಹೆಚ್ಚು ಗಮನೀಯ). ಇಂಗ್ಲಿಷಿನಲ್ಲಿ ಸಾನೆಟು ರೂಪದಲ್ಲಿರುವುದನ್ನು ಕನ್ನಡಕ್ಕೆ ಅನುವಾದ ಮಾಡುವಾಗ ಅದು ಸುನೀತ ರೂಪದಲ್ಲೇ ಇರಬೇಕೆನ್ನವುದು ಅಸಾಧುವಾದ ವಿಚಾರ. ಸುನೀತರೂಪಕ್ಕೆ ಒಗ್ಗುವಂತಿದ್ದರೆ ಸುನೀತದಲ್ಲಿ ಮಾಡಬಹುದು. ಆದರೆ ಅದು ಅರ್ಥಕ್ಕೆ ಮತ್ತು ಭಾವಕ್ಕೆ ಅಗತ್ಯವೇನೂ ಅಲ್ಲ.

    ಈ ಸಂಕಲನಕ್ಕೆ ಇರಿಸಿರುವ ಹೆಸರು ಹದಿನೆಂಟನೇ ಶತಮಾನದ ಸ್ಕಾಟ್ಲಂಡಿನ ಕವಿ ರಾಬರ್ಟ್ ಬನ್ರ್ಸ್‍ನಮೈ ಲವ್ ಈಸ್ ಲೈಕ್ ಎ ರೆಡ್ ರೆಡ್ ರೋಸ್’ ಎಂಬ ಕವಿತೆಯಿಂದ. ರಾಬರ್ಟ್ ಬನ್ರ್ಸ್ ಬಹಳ ಮುಖ್ಯ ಕವಿ. ಆತ ಪ್ರೇಮ ಕವಿ ಮಾತ್ರವಲ್ಲ, ಸ್ಕಾಟ್ಲೆಂಡಿನ ವಿಖ್ಯಾತ ಜಾನಪದ ಕವಿ. ಅಷ್ಟೇ ಅಲ್ಲ, ಸ್ಕಾಟ್ಲಂಡಿನ ಜನಕ್ಕೆ ಕವಿತೆಯ ಹುಚ್ಚು ಹಿಡಿಸಿದವನು ರಾಬರ್ಟ್ ಬನ್ರ್ಸ್.

    `ನನ್ನ ಪ್ರೇಮದ ಹುಡುಗಿ’ ಸಂಕಲನದಲ್ಲಿ ಕವಿತೆಗಳನ್ನು ಕವಿಗಳ ಆಯುಷ್ಕಾಲಕ್ಕನುಸಾರ, ಕಾಲಕ್ರಮದಲ್ಲಿ (ಕ್ರಾನಾಲಜಿಕಲ್ ಆರ್ಡರ್) ಕೊಡಲಾಗಿದೆ. ಇಂಗ್ಲಿಷ್ ಕಾವ್ಯಾರಾಮದಲ್ಲಿ ಆಧುನಿಕ ಕಾವ್ಯ ಹುಟ್ಟಿದ ನಂತರದ ಐದು ನೂರು ವರ್ಷ (1500-1950) ಸುದೀರ್ಘ ಅವಧಿಯಲ್ಲಿ ಕಾವ್ಯದಲ್ಲಿ ಪ್ರೇಮ ಭಾವನೆ ಹೇಗೆ ಸಂಚಲಿಸಿತು ಎಂದು ಮಾತ್ರವಲ್ಲ, ಅದು ಹೇಗೆ ಬೆಳೆಯುತ್ತಾ ಬಲಿಯುತ್ತಾ ಆರಂಭದ ಸರಳತೆಯನ್ನು ನಿಧಾನವಾಗಿ ಕಳಚಿಕೊಂಡು, ಎಲ್ಲಾ ಭಾವನೆಗಳನ್ನು ಮತ್ತು ಬದುಕಿನ ಸತ್ಯಗಳನ್ನು ತನ್ನೊಳಗೆ ಸೆಳೆದುಕೊಂಡು ಹೇಗೆ ಸಂಕೀರ್ಣವಾಗುತ್ತಾ ಸಾಗಿತು ಎನ್ನುವುದು ನಿಜಕ್ಕೂ ಆಸಕ್ತಿಯ ವಿಷಯ. ಆರಂಭದಲ್ಲಿ ಸರಳವಾಗಿದ್ದ ಪ್ರೇಮ ಕವನ ನಂತರದ ಕಾಲದಲ್ಲಿ ಬಹು ಮಟ್ಟಿಗೆ ತತ್ವಶಾಸ್ತ್ರೀಯ ಕವನವೆಂಬಂತೆ ಕಾಣಿಸತೊಡಗಿತು. ಎಷ್ಟೋ ಕವನಗಳಲ್ಲಿ `ಪ್ರೀತಿ’ ಅಥವಾ `ಪ್ರೇಮ’ ಎನ್ನುವುದು, ಕವಿಗೆ ಏನೆಲ್ಲ ಹೇಳಬೇಕೆಂದು ಅನಿಸಿದೆಯೋ ಅದನ್ನು ಹೇಳಲು ಒಂದು ನೆಪವೆಂಬಂತೆ ತೋರಿದರೆ ಆಶ್ಚರ್ಯವಿಲ್ಲ.

    ಪ್ಯಾರಡೈಸ್ ಲಾಸ್ಟ್ ಮಹಾಕಾವ್ಯ ರಚಯಿತ ಮಹಾಕವಿ ಮಿಲ್ಟನ್‍ನ ಕವಿಯ ಕವನವೊಂದಿಲ್ಲದೆ ಈ ಸಂಕಲನ ಅಪೂರ್ಣ ಎನಿಸಿ, ಬಹಳ ಹುಡುಕಾಟ ನಡೆಸಿದಾಗ ಮೊದಲು ಸಿಕ್ಕಿದ ಕವನ ತನ್ನ ಪತ್ನಿ ಮರಣಹೊಂದಿದ ಬಳಿಕ ಮಿಲ್ಟನ್ ಬರೆದದ್ದು. ಅದು ಈ ಸಂಕಲನದಲ್ಲಿದೆ. ಅದು ಬರೀ ಒಂದು ಪ್ರೇಮ ಕವನವಲ್ಲ, ಪ್ರೇಮ ಕವನ ಹೀಗಿರಲೂ ಸಾಧ್ಯ ಎನಿಸುವಂಥ ಒಂದು ಅದ್ಭುತ ಪ್ರೇಮ ಕವನ! ಪ್ರೇಮ ಮತ್ತು ಕಾವ್ಯ ಎರಡಕ್ಕೂ ಸಾವಿಲ್ಲ. ಅದೆರಡೂ ಇರುವುದು ಅತ್ಯಂತ ಸುರಕ್ಷಿತವಾದ ತಾಣದಲ್ಲಿ, ಮನುಷ್ಯನ ಹೃದಯದಲ್ಲಿ. ಯಾರ ಹೃದಯದಲ್ಲಿ ಕಾವ್ಯ (soಟಿg) ಇಲ್ಲವೋ ಅವನು ಮನುಷ್ಯನಲ್ಲ ಎಂದಿದ್ದಾನೆ ಷೇಕ್ಸ್‍ಪಿಯರ್. ಅಂಧನಾದ ಕವಿ ಮಿಲ್ಟನ್ ಅಂಧನಾಗಿರುವಾಗಲೇ `ಪ್ಯಾರಡೈಸ್ ಲಾಸ್ಟ್’ ಬರೆದ. ಸತ್ತು ಹೋದ ತನ್ನ ಪತ್ನಿಯನ್ನು ಕಂಡ ಬಗ್ಗೆ ಬರೆಯುತ್ತಾನೆ ಮಿಲ್ಟನ್ ತನ್ನ ಕವನದಲ್ಲಿ!

    ಪ್ರೇಮ ಕವನ ಎಂದರೆ ಸ್ವಾನುಭವ ವೇದವೇ ಆಗಿರಬೇಕೆಂದು ತೋರುತ್ತದೆ. ಯಾವುದೋ ಒಂದು ವಸ್ತುವನ್ನು ಆಯ್ದುಕೊಂಡು ಒಬ್ಬ ಕವಿ ಕವನ ರಚಿಸಬಹುದು. ಅದು ಬಹು ಮಟ್ಟಿಗೆ ಅಬ್ಜೆಕ್ಟಿವ್ ಥಾಟ್ ಆಗಿರುತ್ತದೆ. ಆದರೆ ಪ್ರೇಮ ಹಾಗಲ್ಲ; ಅದು ಸಬ್ಜೆಕ್ಟಿವ್ ಥಾಟ್ ಅರ್ಥಾತ್ ಕವಿಯ ಸ್ವಾನುಭವವೇ ಆಗಿರಬೇಕಾಗುತ್ತದೆ. ಇದಕ್ಕೆ ಅಪವಾದವೆನ್ನುವಂಥ ಕವನಗಳು ನೂರರಲ್ಲಿ ಒಂದು ಎನ್ನಬಹುದು. ಅದಕ್ಕೆ ಉದಾಹರಣೆಯಾಗಿ, `ಇದು ಪ್ರೇಮ ಕವನ ಅಲ್ಲ’ ಎಂದು ಯಾರೂ ಹೇಳಬಹುದಾದಂಥ ಒಂದು ಕವನ ಈ ಸಂಕಲನದಲ್ಲಿದೆ. ಅದು ವ್ಯಾಲಂಟೈನ್ ಡೇಯೊಂದಿಗೆ ಹೆಸರಾಗಿ ಜೋಡಿಕೊಂಡಿದ್ದು, ವಾಸ್ತವದಲ್ಲಿ, ವ್ಯಾಲಂಟೈನ್ ಡೇ ಎಂದು ಲೋಕದಲ್ಲಿ ಆಚರಿಸುತ್ತಿರುವ ಪ್ರೇಮಾಚರಣೆಗೆ ಸಂಬಂಧವಿಲ್ಲದ ಸೈಂಟ್ ವ್ಯಾಲಂಟೀನನ ಕುರಿತು, `ಜಯವಾಗಲಿ ಸೈಂಟ್ ವ್ಯಾಲಂಟೀನಿಗೆ’ ಎಂಬ ಜಾನ್ ಡನ್ ಬರೆದ ಕವಿತೆ.

    ಸೈಂಟ್ ವ್ಯಾಲಂಟೀನ್ಸ್ ಡೇ ಫೆಬ್ರವರಿ 14ರಂದು ಬರುತ್ತದೆ. ಅದೇ ದಿನ ವ್ಯಾಲಂಟೀನ್

    Enjoying the preview?
    Page 1 of 1