Discover millions of ebooks, audiobooks, and so much more with a free trial

Only $11.99/month after trial. Cancel anytime.

Karmanye Vadhikaraste
Karmanye Vadhikaraste
Karmanye Vadhikaraste
Ebook335 pages1 hour

Karmanye Vadhikaraste

Rating: 0 out of 5 stars

()

Read preview

About this ebook

Novelist, poet, short-story writer, essayist, playwright, educationist, linguist.... author of over 90 books in Kannada as well as English.

M. A. (English), B.Ed. from the University of Kerala; L.T.C.L. Diploma from Trinity College, London; A.C.P. Diploma from the College of Preceptors, Oxford; Taught English for 15 years in India and 9 years in Ethiopia; Published four books in the teachingof English language, grammar and Phonetics; Published in Kannada 45 novels, 3 anthologies of short stories, 4 anthologies of essays, 2 anthologies of poems, 18 plays, and a travelogue; Published in the Tulu language a novel and a collection of poems translated from English.
LanguageKannada
Release dateAug 12, 2019
ISBN6580200202211
Karmanye Vadhikaraste

Read more from K.T. Gatti

Related to Karmanye Vadhikaraste

Related ebooks

Reviews for Karmanye Vadhikaraste

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Karmanye Vadhikaraste - K.T. Gatti

    http://www.pustaka.co.in

    ಕರ್ಮಣ್ಯೇ ವಾಧಿಕಾರಸ್ತೇ

    Karmanye Vadhikaraste

    Author:

    ಕೆ. ಟಿ. ಗಟ್ಟಿ

    K.T. Gatti

    For more books
    http://www.pustaka.co.in/home/author/kt-gatti-novels

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಕೊನೆಯ ಪುಟದ ರಕ್ಷಾ ಕವಚಕ್ಕೆ:

    ರಕ್ಷಾ ಕವಚದ ಕೊನೆಯ ಪುಟದ ಬ್ಲರ್ಬ್

    ಮನುಷ್ಯ ಗಿಡ ನೆಟ್ಟು ಅದು ನನಗಾಗಿ ಬದುಕಿ ಬೆಳೆದು ಮರವಾಗಬೇಕು ಎಂದು ಬಯಸುತ್ತಾನೆ. ಅದರ ಫಲವನ್ನು ಎದುರು ನೋಡುತ್ತಿರುತ್ತಾನೆ. ಆದರೆ ಮರ ಯಾರಿಗಾಗಿಯೂ ಬೆಳೆಯುವುದಿಲ್ಲ, ಸಾವಿನ ತನಕ ಮರ ಪ್ರಕೃತಿಯ ಒಂದು ಅಂಶವಾಗಿ ಅದರಷ್ಟಕ್ಕೆ ಇರುತ್ತದೆ ಅಷ್ಟೆ. ಮನುಷ್ಯ ದಿನದಿಂದ ದಿನಕ್ಕೆ ಬದುಕು ಇನ್ನಷ್ಟು ಮತ್ತಷ್ಟು ಉತ್ತಮವಾಗುತ್ತಾ ಹೋಗಬೇಕು ಎಂದು ಬಯಸುತ್ತಾನೆ. ಉತ್ತಮವಾಗುತ್ತಾ ಹೋಗುತ್ತದೆ ಎಂದು ನಂಬುತ್ತಾನೆ. ಆದರೆ ಆಂತರಿಕವಾಗಿ ಅರ್ಥಾತ್ ವ್ಯಕ್ತಿಯ ಒಳಗೆ, ನಿಜದ ಬದುಕಿನಲ್ಲಿ ಆ ಚಲನೆ ಇರುವುದಿಲ್ಲ. ಉಸಿರಿರುವ ತನಕ ಬದುಕು ಎಂದು ಭಾವಿಸಲಾಗುವ ಬದುಕು ಇರುತ್ತದೆ ಅಷ್ಟೆ. ಮುಮ್ಮುಖವೇ ಹಿಮ್ಮುಖವಾಗಿರುವ ಪರಿವರ್ತನೆ ‘ಚಲನೆ’ ಎಂಬ ಭ್ರಮೆಯನ್ನು ಉಂಟುಮಾಡುತ್ತದೆ. ಈ ಚಲನೆಯನ್ನು ಮನುಷ್ಯ ವಿಕಾಸ, ಪ್ರಗತಿ, ಬೆಳವಣಿಗೆ ಎಂದಿತ್ಯಾದಿಯಾಗಿ ಗುರುತಿಸಿದರೂ ಆಂತರಿಕವಾಗಿ, ನಿಸರ್ಗ, ಮನುಷ್ಯ ಇತ್ಯಾದಿ ಇದ್ದಲ್ಲೇ ಇರುತ್ತದೆ. ಆಕಾಶ, ಗ್ರಹ ನಕ್ಷತ್ರಗಳೇ ಈ ‘ಚಲನೆ’ ಮತ್ತು ‘ನಿಶ್ಚಲತೆ’ಗೆ ನಿದರ್ಶನ. ಬದುಕಿನ ನಿರಂತರ ಓಟಕ್ಕೆ ಬಂದಿಯಾಗಿರುವ ಮನುಷ್ಯನಿಗೆ ವಾಸ್ತವದ ಗ್ರಹಿಕೆ ಮತ್ತು ವಿಶ್ಲೇಷಣೆಗೆ ಅವಕಾಶವೇ ಸಿಗುವುದಿಲ್ಲ. ಸಾವಿತ್ರಿಗೆ ಕೂಡ ಆಗಿರುವುದು ಅದೇ,

    ಸಾವಿತ್ರಿಯ ಮನಸ್ಸಿನಲ್ಲಿ, ನಗುನಗುತ್ತಾ ಬದುಕಬೇಕು, ನಗುನಗುತ್ತಾ ಸಾಯಬೇಕು" ಎಂದು ಅಪರಿಚಿತ ಯುವತಿ ಆಡಿದ ಮಾತು ಆಗಾಗ ಪ್ರತಿಧ್ವನಿಸುತ್ತಾ ಇರುತ್ತದೆ. ಪುನರ್ಜನ್ಮ ಎಂದರೆ ಏನು ಎಂಬ ಅಭಯಾನಂದನ ವಿಶ್ಲೇಷಣೆ ಅವಳ ಮನಸ್ಸಿನಲ್ಲಿ ಶಿಲೆಯಲ್ಲಿ ಬರೆದಂತೆ ಇದೆ. ಆ ಪುನರ್ಜನ್ಮ ತನಗೆ ಲಭಿಸುವುದಿಲ್ಲ ಎನ್ನುವುದು ಸ್ಪಷ್ಟವಾದಾಗ ಅವಳಿಗೆ ಬದುಕು ಎಂದರೆ ಏನು ಎಂದು ಅರ್ಥವಾಗುತ್ತದೆ.

    KARMANYE VADHIKAARASTE, a novel

    by K.T. Gatti, Ujire-574240

    Ph: 08256-236416, 9481755368

    email: ktgatti@gmail.com

    Published by: Prakasha Sahitya, # 27, Cottonpet,

    Bengaluru-5600053, Ph: 22254950

    ಹಕ್ಕುಗಳು: ಶ್ರೀಮತಿ ಯಶೋದ ಗಟ್ಟಿ

    ಪ್ರಥಮ ಮುದ್ರಣ: 2003

    ಪರಿಷ್ಕøತ ದ್ವಿತೀಯ ಮುದ್ರಣ: 2017

    ಕೆ. ಟಿ. ಗಟ್ಟಿ

    ಕರ್ಮಣ್ಯೇವಾಧಿಕಾರಸ್ತೇ

    (ಕಾದಂಬರಿ)

    ಉಪೋದ್ಘಾತ

    1

    ಇದು ನಾನು 1973ರಲ್ಲಿ ಇಥಿಯೋಪಿಯದ ನೆಲದಲ್ಲಿ ಕುಳಿತು ಬರೆದ ಮೊದಲ ಕಾದಂಬರಿ. 1973ರಲ್ಲಿ ಬರೆದ ನನ್ನ ಮೊದಲ ಕಾದಂಬರಿ ‘ಶಬ್ದಗಳು’ ‘ಸುಧಾ’ ವಾರಪತ್ರಿಕೆಯ ಧಾರಾವಾಹಿ ಪೂರ್ಣಗೊಂಡ ಬೆನ್ನಲ್ಲೇ (1974ರಲ್ಲಿ) ‘ಕರ್ಮಣ್ಯೇ ವಾಧಿಕಾರಸ್ತೇ’ ‘ಸುಧಾ’ದಲ್ಲಿ

    ಧಾರಾವಾಹಿಯಾಗಿ ಪ್ರಕಟವಾಯಿತು. ಆದರೆ ಅದು ಪುಸ್ತಕವಾಗಿ ಹೊರಬಂದುದು 1982ರಲ್ಲಿ, ಇಥಿಯೋಪಿಯಾ ಬಿಟ್ಟು ಬಂದ ಬಳಿಕ. ಅನಂತರ, ಎರಡನೆಯ ಮುದ್ರಣ ಕಂಡದ್ದು 1987ರಲ್ಲಿ.

    ಈ ಕಾದಂಬರಿಯ ವಸ್ತು ಒಂದು ಚಲನಚಿತ್ರದಂತೆ ನನ್ನ ಮನದಲ್ಲಿ ಮೂಡಿದ್ದು 1971ರಲ್ಲಿ; ಹೇಗೆ ಎಲ್ಲಿ ಎನ್ನುವುದನ್ನು ಈ ಕಾದಂಬರಿಯ ಆರಂಭದ ಮೂವತ್ತು ಸಾಲುಗಳು ಹೇಳುತ್ತವೆ. ವಾಸ್ತವದಲ್ಲಿ, ಭೌತಿಕವಾಗಿ ಅಲ್ಲಿ ಇರದ ಅಭಯಾನಂದನ ಆತ್ಮದೊಳಹೊಕ್ಕು ಈ ಲೇಖಕ ನಿದ್ರೆ, ಕನಸು ಮತ್ತು ಎಚ್ಚರದಲ್ಲಿ ಇಡೀ ರಾತ್ರಿ ಮಿಸುಕಾಡುತ್ತಿದ್ದ. ಆ ಮಿಸುಕಾಟದಲ್ಲಿ ಹುಟ್ಟಿದ್ದು ಈ ಕಾಂಬರಿಯ ಮೂಲ ವಸ್ತು.

    ಈಗ ಮೊದಲ ಮುದ್ರಣದ 30 ವರ್ಷಗಳ ಬಳಿಕ ಒಬ್ಬ ಸಾಹಿತ್ಯಪ್ರಿಯ ಪ್ರಕಾಶಕರ ಪ್ರೀತಿಯಿಂದ ಮೂರನೆಯ ಮುದ್ರಣ ಕಾಣುತ್ತಿದೆ ಸಂತೋಷಪಡದಿರಲು ಸಾಧ್ಯವೆ? ಮರುಮುದ್ರಣವೆನ್ನುವುದು ಯಾವನೇ ಲೇಖಕ ಸ್ವಾಭಾವಿಕವಾಗಿ ಪಡೆಯುವ ಒಂದು ಪ್ರಶಸ್ತಿ, ಮಾತ್ರವಲ್ಲ, ನಿಜವಾದ ಶ್ರೇಷ್ಟ ಪ್ರಶಸ್ತಿ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ಒಬ್ಬ ಉತ್ತಮ ಪ್ರಕಾಶಕ ಲೇಖಕನಷ್ಟೇ ಮುಖ್ಯ ಎಂದು ನಾನು ನಂಬುತ್ತೇನೆ. ಆದ್ದರಿಂದ ಇವರಲ್ಲಿ ಯಾರಿಗೆ ಯಾರು ಕೃತಜ್ಞ ಎಂದು ಹೇಳುವುದರಲ್ಲಿ ದೊಡ್ಡ ಅರ್ಥವಿಲ್ಲ. ವಾಸ್ತವದಲ್ಲಿ, ನಿಜವಾದ ಕೃತಜ್ಞತೆ ಲೇಖಕನಿಂದಲೂ ಪ್ರಕಾಶಕನಿಂದಲೂ ಓದುಗನಿಗೆ ಸಲ್ಲಬೇಕು. ಒಂದು ಮಹಾನ್ ಮಾನವ ಚೇತನವನ್ನು ನೆನಪಿಸಿಕೊಂಡು ಈ ಕೃತಜ್ಞತಾಭಾವವನ್ನು ಪ್ರಕಟಿಸುವುದಾದರೆ ಓದುಗರನ್ನೂ ‘ಓದುಗ ದೇವರುಗಳು’ ಎಂದು ಹೇಳಬಹುದು.

    * ಕೆ. ಟಿ. ಗಟ್ಟಿ

    ಮುಂಬಯಿ ಸೆಂಟ್ರಲ್ ರೈಲ್ವೇ ಸ್ಟೇಷನ್ ಸೆಕೆಂಡ್ ಕ್ಲಾಸ್ ವೈಟಿಂಗ್ ರೂಮು. ರಾತ್ರಿ ಹನ್ನೊಂದು ಗಂಟೆಯ ಹೊತ್ತು. ಸ್ವಾಮಿ ಅಭಯಾನಂದ ಒರಗು ಕುರ್ಚಿಯೊಂದರಲ್ಲಿ ಮಲಗಿಕೊಂಡಿದ್ದಾನೆ. ನಿದ್ದೆ ಬಂದಿಲ್ಲ. ರೈಲ್ವೇ ಪರಿಚಾರಕ ಟ್ಯೂಬ್‍ಲೈಟುಗಳನ್ನು ಆಗಷ್ಟೇ ಆರಿಸಿಬಿಟ್ಟಿದ್ದಾನೆ. ಕೋಣೆಯ ಒಂದು ಮೂಲೆಯಲ್ಲಿ ಮಾಡಿನೆತ್ತರದಿಂದ ತೂಗಾಡುವ ಒಂದು ಅರುವತ್ತು ವಾಟ್ ಬಲ್ಬು ಮಾತ್ರ ಉರಿಯುತ್ತಿದೆ. ಬಲ್ಬಿನ ಮೇಲೆ ಎಷ್ಟೋ ಕಾಲದ ಧೂಳು ದಪ್ಪಗೆ ಅಂಟಿಕೊಂಡಿದೆ. ಅದರ ಸರಿಗೆಯಲ್ಲಿ ಜೇಡನ ಬಲೆ ತೂಗಾಡುತ್ತಿದೆ. ಧೂಳಿನ ಲೇಪ ಬೆಳಕಿನ ಪ್ರಖರತೆಯನ್ನು ಕುಂದಿಸಿರುವುದರಿಂದ ಸ್ವಲ್ಪ ಮಬ್ಬಾದ ಪ್ರಭೆ ಕೋಣೆಯಲ್ಲಿ ಹರಡಿದೆ. ಹತ್ತಿಪ್ಪತ್ತು ಮಂದಿ ಪ್ರಯಾಣಿಕರು ಆ ಕಡೆ ಈ ಕಡೆ ಸೋಫಾಗಳಲ್ಲಿ, ಒರಗು ಕುರ್ಚಿಗಳಲ್ಲಿ ಅನುಕೂಲ ಕಂಡಂತೆ ಮಲಗಿದ್ದಾರೆ. ಒಬ್ಬಿಬ್ಬರು ನೆಲದಲ್ಲಿ ಬಟ್ಟೆ ಹಾಸಿ ಮಲಗಿಕೊಂಡಿದ್ದಾರೆ. ಕೆಲವರು ತಮ್ಮ ಸೂಟ್‍ಕೇಸು, ಬ್ಯಾಗುಗಳ ಮೇಲೆ ತಲೆಯಿರಿಸಿ ಮಲಗಿದ್ದಾರೆ. ಕೆಲವರು ಕಾಲು ಅಥವಾ ಕೈಗಳನ್ನು ಅವುಗಳ ಮೇಲಿರಿಸಿಕೊಂಡು ನಿದ್ದೆಹೋಗಿದ್ದಾರೆ. ಅಥವಾ ಅರೆನಿದ್ದೆಯಲ್ಲಿದ್ದಾರೆ.

    ಒಂದೆಡೆ ಒಂದು ಗಂಡು ಮತ್ತು ಒಂದು ಹೆಣ್ಣು ಅಮೆರಿಕನ್ ಹಿಪ್ಪಿಗಳು, ಅಕ್ಕಪಕ್ಕದಲ್ಲಿ ನೆಲದ ಮೇಲೆ ಮಲಗಿದ್ದಾರೆ. ಅವರ ಧೂಳು ಅಂಟಿದ `ರಕ್‍ಸ್ಯಾಕ್’ಗಳು ಅವರ ತಲೆಯ ಮೇಲ್ಗಡೆ ಅನಾಥವಾಗಿ ಬಿದ್ದುಕೊಂಡಿವೆ. ಅವುಗಳ ಬಗ್ಗೆ ಅವರಿಗೇನೂ ಗಮನ, ಕಾಳಜಿ ಇದ್ದಂತಿಲ್ಲ. ಚೀಲಗಳ ಪಕ್ಕದಲ್ಲೇ ಒಂದು ಇಂಡಿಯದ ಭೂಪಟ ಬಿದ್ದಿದೆ. ಇಬ್ಬರೂ ಅಂಗಾತವಾಗಿ ಮಲಗಿ ಗಾಢ ನಿದ್ದೆ ಹೋಗಿದ್ದಾರೆ. ಹೆಣ್ಣು ಹಿಪ್ಪಿಯ ದಂತದ ಬಣ್ಣದ ಕೆನ್ನೆಗಳಲ್ಲಿ ಯೌವನದ ಗುಲಾಬಿರಂಗು. ಸುಮಾರು ಇಪ್ಪತ್ತರ ತರುಣಿ. ಅವಳಿಗೆ ನಾಲ್ಕೈದು ವರ್ಷ ಹಿರಿಯನಿರಬಹುದಾದ ತರುಣ. ಅವರ ನಿರ್ಭೀತಿ ಮತ್ತು ತಮ್ಮ ವಸ್ತುಗಳ ಬಗೆಗಿನ ನಿರ್ಮಮಮಕಾರವನ್ನು ಅಭಯಾನಂದ ಮೆಚ್ಚಿಕೊಂಡ. ಇಡೀ ಕೋಣೆಯಲ್ಲಿ ಅವಳೊಬ್ಬಳೇ ಹೆಣ್ಣು. ಅವಳಿಗೆ ತನ್ನ ಹೆಣ್ತನದ ಬಗ್ಗೆ ಯಾವ ಲಕ್ಷ್ಯವೂ ಇದ್ದಂತಿಲ್ಲ. ಆ ಗಂಡು ಹಿಪ್ಪಿ ಕೂಡ ಅವಳಿಗೆ ವಿಶೇಷವಾದ ರಕ್ಷಣೆ ಬೇಕೆಂದು ಭಾವಿಸಿಲ್ಲ. ಗಂಡು ಹೆಣ್ಣು ಎಂಬ ಭೇದವಿಲ್ಲದೆ ಎಲ್ಲೆಲ್ಲೂ ಸಂಚರಿಸುವವರೆಂದರೆ ಇವರೇ ಎಂದನಿಸಿ ಅಭಯಾನಂದನ ಮುಖದಲ್ಲಿ ಮುಗುಳುನಗೆ ಮೂಡಿತು. ತಮ್ಮ ಸುತ್ತಲಿನ ಪ್ರಪಂಚದ ಕಡೆಗಾಗಲಿ, ಅದರಲ್ಲಿರುವ ಇತರ ಮನುಷ್ಯರ ಕಡೆಗಾಗಲಿ ಅವರಿಗೆ ಗಮನ ಇರಲಿಲ್ಲ. ಆ ನಿರಾಸಕ್ತಿ ಒಂದು ಬಗೆಯ ಯೋಗವೇ ಎಂದನಿಸಿತು ಅಭಯಾನಂದನಿಗೆ. ಸಡಿಲಾದ ಕೊಳೆಹಿಡಿದ, ದಪ್ಪಗಿನ ಹತ್ತಿಬಟ್ಟೆಯ ಅಂಗಿ ಮತ್ತು ಪ್ಯಾಂಟುಗಳನ್ನು ತೊಟ್ಟುಕೊಂಡಿದ್ದಾರೆ. ಅವುಗಳ ಹಲವಾರು ಕಿಸೆಗಳಲ್ಲಿ ಏನೆಲ್ಲಾ ತುರುಕಿ ಇರಿಸಿಕೊಂಡಿದ್ದಾರೆ. ಅನಾಥ ಬದುಕಾಗಿರಲಿ, ಅರ್ಥರಹಿತ ಬದುಕಾಗಿರಲಿ, ಬದುಕಿರುವ ವರೆಗೆ ಭವರೋಗ ತಪ್ಪಿದ್ದಲ್ಲ. ಅದರ ನಿವಾರಣೆಗಾಗಿ ಹೋರಾಡಲೇಬೇಕು ಎಂದುಕೊಂಡು ಅಭಯಾನಂದ ಕಣ್ಮುಚ್ಚಿ ಧ್ಯಾನಾಸಕ್ತನಾದ. ಎಪ್ರಿಲ್ ತಿಂಗಳ ಸೆಖೆ. ಮೇಲ್ಗಡೆ ಎರಡು ದೊಡ್ಡ ಫ್ಯಾನುಗಳು ಅವ್ಯಾಹತವಾಗಿ ತಿರುಗುತ್ತಿದ್ದುವು. ಅಭಯಾನಂದ ತನ್ನ ನಿಲುವಂಗಿಯ ಗುಂಡಿಗಳನ್ನು ಕಳಚಿ ಮತ್ತಷ್ಟು ಒರಗಿಕೊಂಡ. ಸ್ವಲ್ಪ ಹೊತ್ತಿನಲ್ಲಿ ಹಾಗೇ ಒಂದು ಅಸ್ಪಷ್ಟ ಕನಸು ಅವನ ಕಣ್ಣಿನ ಪರೆಗಳೊಳಗೆ ರೂಪುಗೊಳ್ಳತೊಡಗಿತು.

    ಹೃಷಿಕೇಶದಿಂದ ಸ್ವಾಮಿಅಭಯಾನಂದ ಬಂದಿದ್ದಾನೆ. ಲೊಕೊಮೋಟಿವ್ ಇಂಜಿನ್ ಕೆಲಸಗಾರರು ಹೂಡಿದ ಸತ್ಯಾಗ್ರಹದಿಂದಾಗಿ ಇಡೀ ದೇಶದಲ್ಲಿ ರೈಲು ಸಂಚಾರ ಸ್ಥಗಿತವಾಗಿದೆ. ಆದು ಭಾರತದ ರೈಲ್ವೇ ಇತಿಹಾಸದಲ್ಲಿ ಮೊಟ್ಟಮೊದಲ ಸತ್ಯಾಗ್ರಹ. ಅಲ್ಲಿ ಇಲ್ಲಿ ಅತ್ಯಗತ್ಯಕ್ಕೆ ಒಂದೆರಡು ‘ವಿಶೇಷ’ ಸಾಮಾನ್ಯ ರೈಲುಗಳು ಸಂಚಾರದಲ್ಲಿ ಇವೆ. ಅಂಥ ಒಂದು ರೈಲಿನಲ್ಲಿ ನಿಂತು ಕುಳಿತು, ಕುಳಿತು ನಿಂತು ಅಭಯಾನಂದ ದೆಹಲಿಯಿಂದ ಹೊರಟು ಮುಂಬಯಿ ತಲಪಿದ್ದಾನೆ. ಟ್ರೈನು ಮುಂಬಯಿ ತಲಪಿದಾಗ ರಾತ್ರಿ ಗಂಟೆ ಒಂಭತ್ತು ದಾಟಿತ್ತು. ರೈಲ್ವೇ ಕ್ಯಾಂಟೀನಿನಲ್ಲಿ ಒಂದು ಗ್ಲಾಸು ಹಾಲು ಕುಡಿದು ತನ್ನೊಡನಿದ್ದ ನಾಲ್ಕೈದು ಬಾಳೆಹಣ್ಣುಗಳನ್ನು ತಿಂದು ಹಸಿವನ್ನು ಶಮನ ಮಾಡಿಕೊಂಡಿದ್ದಾನೆ ಅಭಯಾನಂದ. ಬೆಳಿಗ್ಗೆ ಆರು ಗಂಟೆಗೆ ಇನ್ನೊಂದು ಕಡೆಗೆ ಇನ್ನೊಂದು ರೈಲಿಗೇರಬೇಕು. ‘ಅದರಲ್ಲಿ ಆಸನ ಪಡೆಯಲು ಕನಿಷ್ಟ ಮೂರು ಗಂಟೆ ಸರತಿ ಸಾಲಿನಲ್ಲಿ ಉಪವಾಸ ನಿಲ್ಲಬೇಕಾಗುತ್ತದೆ’ ಎಂದು ಯಾರೋ ಹೇಳಿದ್ದನ್ನು ಕೇಳಿಸಿಕೊಂಡ ಅಭಯಾನಂದ ‘ಹೌದು, ಅದು ಕೂಡ ಒಂದು ಯೋಗವೇ’ ಎಂದುಕೊಂಡಿದ್ದಾನೆ. ಆ ವರೆಗಿನ ಉಳಿದ ನಾಲ್ಕೈದು ಗಂಟೆಗಳನ್ನು ಇಲ್ಲೇ ದೂಡುವುದೆಂದು ತೀರ್ಮಾನಿಸಿ ತನ್ನ ದೆಹಲಿ-ಮುಂಬಯಿ ಟಿಕೇಟು ತೋರಿಸಿ ಸ್ಟೇಶನ್‍ಮಾಸ್ಟರರ ಅನುಮತಿ ಪಡೆದು ಸೆಕೆಂಡ್ ಕ್ಲಾಸ್ ವೈಟಿಂಗ್ ರೂಮಿನಲ್ಲಿ ಸ್ಥಳ ದೊರಕಿಸಿಕೊಂಡಿದ್ದಾನೆ. ಅವನೊಡನಿರುವುದು ಮೂರನೇ ದರ್ಜೆಯ ಟಿಕೇಟು. ಅವನ ದಿರಿಸು ಮತ್ತು ಇಂಗ್ಲಿಷ್ ನುಡಿಯಿಂದ ಪ್ರಭಾವಿತನಾಗಿ ಸ್ಟೇಶನ್‍ಮಾಸ್ಟರ್ ಟಿಕೆಟಿನ ಕ್ಲಾಸ್ ಬಗ್ಗೆ ತಗಾದೆ ಎಬ್ಬಿಸದೆ ಒಪ್ಪಿಗೆ ಕೊಟ್ಟಿದ್ದಾನೆ. ಮರುದಿನ ಅವನ ಪ್ರಯಾಣ ದ್ವಾರಕೆಗೆ ಆರಂಭವಾಗುತ್ತದೆ.

    ಸ್ವಾಮಿಅಭಯಾನಂದ ಅರೆನಿದ್ದೆಯಲ್ಲಿ ಕನಸು ಕಾಣುತ್ತಿದ್ದಾನೆ. ಹೃಷಿಕೇಶ, ಪಂಡರಾಪುರ, ಕಾಶಿ, ಪ್ರಯಾಗ, ಉಡುಪಿ, ತಿರುಪತಿ ಒಂದೊಂದಾಗಿ ಅವನ ಕಣ್ಮುಂದೆ ಹಾದುಹೋಗುತ್ತಿದೆ. ದ್ವಾರಕೆಯ ಅಸ್ಪಷ್ಟ ಕಲ್ಪನೆಗಳು, ಕೊಳಲು ಹಿಡಿದ ಶ್ರೀಕೃಷ್ಣನ ಮೂರ್ತಿ, ಮೀರಾಬಾಯಿಯ ಮಧುರಕಂಠ ಅವನ ಕಲ್ಪನೆ ಕನಸುಗಳಲ್ಲಿ ಮೂಡುತ್ತಿದೆ.

    ಅಷ್ಟರಲ್ಲಿ ಏನೋ ಅಸ್ಪಷ್ಟ ಗಲಭೆ ಮಾತುಕತೆ ಕೇಳಿ ಅಭಯಾನಂದನಿಗೆ ಎಚ್ಚರವಾಯಿತು. ಕಣ್ತೆರೆದು ನೋಡಿದ. ನಿಮ್ಮ ನಿಮ್ಮ ವಸ್ತುಗಳ ಬಗ್ಗೆ ಜಾಗ್ರತೆ ವಹಿಸಿ, ಬಾಗಿಲು ತೆರೆಯಬೇಡಿ ಎಂದು ಹೇಳಿ ಸ್ಟೇಷನ್ ಮಾಸ್ಟರ್ ಮುಚ್ಚಿ ಹೋಗಿದ್ದ ವೈಟಿಂಗ್ ರೂಮಿನ ಬಾಗಿಲು ತೆರೆದಿದೆ. ನಿದ್ರಾಲೋಕದಲ್ಲಿದ್ದ ಪ್ರಯಾಣಿಕರು ಏನು ಗಲಾಟೆ ಎನ್ನುತ್ತಾ ಎದ್ದು ಕುಳಿತಿದ್ದಾರೆ.

    ಕೋಣೆಯೊಳಕ್ಕೆ ಒಂದೊಂದಾಗಿ ಶ್ವೇತಾಂಬರಧಾರಿಯರಾದ ಹೆಣ್ಣುಗಳು ಬರುತ್ತಿದ್ದಾರೆ. ಒಬ್ಬ ರೈಲ್ವೇ ಸಮವಸ್ತ್ರಧಾರಿ ಅವರನ್ನು ಒಳಕ್ಕೆ ಬಿಡುತ್ತಿದ್ದಾನೆ. ಒಂದರ ಹಿಂದೆ ಒಂದು. ಒಂದರ ಹಿಂದೆ ಒಂದು, ನಲ್ವತ್ತು-ಐವತ್ತು ಮಂದಿ ಒಳಕ್ಕೆ ಬಂದರು. ಅವರ ಗುಜುಗುಜು ಮಾತು ಗದ್ದಲ ಕೇಳಿ ಸೋಫಾಗಳಲ್ಲಿ, ಕುರ್ಚಿಗಳಲ್ಲಿ, ನೆಲದಲ್ಲಿ ಅರೆನಿದ್ದೆಯಲ್ಲಿದ್ದವರು ಕೂಡ ಎಚ್ಚರಗೊಂಡು ಕಣ್ತೆರೆದು ನೋಡಿದರು. ಎಲ್ಲರೂ ಒಳಗಡೆ ಬಂದು ಸೇರಿಯಾದ ಮೇಲೆ ಮಾತು ಗದ್ದಲ ಕಡಿಮೆಯಾಗಿ ಐದಾರು ಶ್ವೇತಾಂಬರಧಾರಿ ಹೆಣ್ಣುಗಳು ಒಂದೊಂದು ಕಡೆ ಒಂದೊಂದು ಗುಂಪುಗಳಾಗಿ ಕುಳಿತುಕೊಂಡರು. ಕೆಲವರು ನೆಲದಲ್ಲಿ ಬಟ್ಟೆ ಹಾಸಿ ಮಲಗಿಕೊಳ್ಳತೊಡಗಿದರು. ಅವರಿಗೆ ಸಲಹೆ ಸೂಚನೆಗಳನ್ನು ಕೊಡುತ್ತಿದ್ದ ಮೂವರು ಗಂಡಸರನ್ನು ಕಂಡ ಅಭಯಾನಂದ. ಐವತ್ತರ ಹರೆಯದ, ಕಚ್ಚೆ ಬಿಗಿದು ಉದ್ದತೋಳಿನ ಅಂಗಿಯನ್ನು ಹಾಕಿ ಕೈಯಲ್ಲಿ ಬ್ರೀಫ್‍ಕೇಸನ್ನು ಹಿಡಿದು ನಿಂತಿದ್ದ ಒಬ್ಬ ವ್ಯಕ್ತಿ. ಪಂಚೆ ಉಟ್ಟು ಸಿಲ್ಕಿನ ಬುಶ್‍ಶರ್ಟ್ ತೊಟ್ಟ ದುಂಡಗೆ ಬೆಳ್ಳಗಿನ ಸುಂದರ ದೇಹದ ಸುಮಾರು ಇಪ್ಪತ್ತೈದರ ಹರೆಯದ ತರುಣನೊಬ್ಬ. ತೆಳ್ಳಗಿನ ದೇಹದ ಸುಮಾರು ಇಪ್ಪತ್ತರ ಪ್ರಾಯದ ಮಾಸಲು ಬಣ್ಣದ ಪಂಚೆ ಮತ್ತು ಅರ್ಧತೋಳಿನ ಅಂಗಿ ತೊಟ್ಟ ಮತ್ತೊಬ್ಬ.

    ಎಲ್ಲಿಗೋ ಹೊರಟ ಯಾತ್ರಾರ್ಥಿಗಳ ತಂಡವೆಂದು ಸ್ವಾಮಿಅಭಯಾನಂದ ಊಹಿಸಿದ. ಹೆಣ್ಣುಗಳಲ್ಲಿ ಎಲ್ಲರೂ ಸಾಮಾನ್ಯ ನಲ್ವತ್ತು ನಲ್ವತ್ತೈದು ದಾಟಿದವರೇ. ಅರುವತ್ತರ ಅಂಚಿನಲ್ಲಿದ್ದವರೂ ಕೆಲವರಿದ್ದರು. ನಾಲ್ಕೈದು ಮಂದಿ ಮೂವತ್ತೈದವರ ಹರೆಯದವರಂತೆ ತೋರಿದರು.

    ಸ್ವಲ್ಪ ಹೊತ್ತಿನಲ್ಲಿ ಎಲ್ಲರೂ ತಮಗೆ ಇಷ್ಟಬಂದಲ್ಲಿ, ಕೆಲವರು ಮಲಗಿಕೊಂಡು, ಕೆಲವರು ಕುಳಿತುಕೊಂಡು, ಕೆಲವರು ಗೋಡೆಗೊರಗಿಕೊಂಡು ತಂಗಿದರು. ಕೆಲವು ಗುಂಪುಗಳೊಳಗೆ ಗುಜುಗುಜು ಮಾತುಕತೆ ಮುಂದುವರಿಯಿತು. ಆ ಮೂವರು ಗಂಡಸರು ಎಲ್ಲೋ ಹೊರಗಡೆ ಹೊರಟು ಹೋದರು. ರೈಲ್ವೆ ಜವಾನ ಬಾಗಿಲನ್ನು ಭದ್ರಪಡಿಸಿದ. ಅಭಯಾನಂದ ಕುಳಿತಿದ್ದ ಕುರ್ಚಿಯ ಅಕ್ಕಪಕ್ಕದಲ್ಲಿ, ಅಲ್ಲಿ ಇಲ್ಲಿ ಸ್ಥಳವಿದ್ದಲ್ಲೆಲ್ಲಾ ಎಲ್ಲೆಲ್ಲೂ ಹೆಂಗಳೆಯರು ನುಸುಳಿ ತುಂಬಿಕೊಂಡರು. ಒಬ್ಬಿಬ್ಬರು ಕೈಯಲ್ಲಿ ರುದ್ರಾಕ್ಷಿ ಮಾಲೆಯನ್ನು ಹಿಡಿದುಕೊಂಡು ಜಪ-ಧ್ಯಾನದಲ್ಲಿ ಮುಳುಗಿದರು.

    ಅಭಯಾನಂದನ ಎದುರುಗಡೆಯ ಚೌಕಾಕಾರದ ಕಂಬದ ಬುಡದಲ್ಲಿ ಒಬ್ಬಳು ಮುದುಕಿ ಮುಸುಕು ಹಾಕಿ ಹೊದ್ದು ಮಲಗಿದ್ದಳು. ಸುರುಟಿಕೊಂಡು ಮಲಗಿದ್ದ ಅವಳ ದೇಹದ ಆಕೃತಿ ಬಹಳ ಚಿಕ್ಕದಾಗಿ ನಿಶ್ಚಲವಾಗಿ ತೋರಿ, ಅವಳು ಜೀವಂತವಾಗಿರುವಳೇ ಇಲ್ಲವೆ ಎಂಬ ಸಂದೇಹ ಹುಟ್ಟಿಸುವಂತಿತ್ತು. ಅವಳ ಪಕ್ಕದಲ್ಲಿ ಸುಮಾರು ನಲವತ್ತೈದರ ಹರೆಯದ ಹೆಂಗಸೊಬ್ಬಳು ಕುಳಿತುಕೊಂಡು ತನ್ನನ್ನೇ ದಿಟ್ಟಿಸಿನೋಡುತ್ತಿದ್ದುದನ್ನು ಅಭಯಾನಂದ ಕಂಡ. ಬೆಳಕು ಅವಳ ಮುಖದ ನೇರಕ್ಕೆ ಬೀಳುತ್ತಿತ್ತು. ಆ ಮುಖ ಅಥವಾ ಆ ಮುಖವನ್ನೇ ಹೋಲುವ ಮುಖವನ್ನು ಎಲ್ಲೋ ಕಂಡಿದ್ದಂತೆ ಅಭಯಾನಂದನಿಗೆ ತೋರಿತು. ಅವಳ ಕಣ್ಣುಗಳು ಸುಂದರವಾಗಿದ್ದುವು. ಬಂಗಾರದ ಚೌಕಟ್ಟಿನ ಅವಳ ಕನ್ನಡಕದ ಹಿಂದೆ ಕಣ್ಣುಗಳಲ್ಲಿ ಒಂದು ಆಕರ್ಷಣೆ, ಒಂದು ಹೊಳಪು ಹುದುಗಿಯೂ ಹುದುಗದೆ ಇತ್ತು. ಅವಳ ತೆಳ್ಳಗಿನ ದೇಹ ಮತ್ತು ನಿರ್ಮಲವಾದ ಮುಖದಲ್ಲಿ ಒಂದು ಸೌಮ್ಯತೆ, ಸೌಂದರ್ಯ ಇದ್ದಂತೆ ತೋರಿತು. ಅವಳು ಯುವತಿಯಲ್ಲದಿದ್ದರೂ ಅವಳಲ್ಲಿ ಯೌವನದ ಸೊಬಗಿನ ಛಾಯೆಯೊಂದು ಉಳಿದುಹೋಗಿರುವಂತೆ ತೋರಿತು ಅಭಯಾನಂದನಿಗೆ.

    ಅಭಯಾನಂದನನ್ನು ಕಂಡು ಅವಳು ಇಂಗ್ಲಿಷಿನಲ್ಲಿ ಕೇಳಿದಳು;

    `ಸ್ವಾಮೀಜಿಗೆ ಎಲ್ಲಿಗೆ ಹೋಗಬೇಕು?’

    ಅವಳ ಧೈರ್ಯ ಅಭಯಾನಂದನಿಗೆ ಹಿಡಿಸಿತು. ಅವಳ ಶಬ್ದಗಳಲ್ಲಿ ಶಿಕ್ಷಣದ ಪ್ರಭಾವವಿತ್ತು. ಅವಳ ಉಚ್ಚಾರ ಸ್ಪಷ್ಟವಾಗಿತ್ತು. ಅವಳ ಧ್ವನಿಯಲ್ಲಿ ಯೌವನವಿತ್ತು. ಒಳ್ಳೆಯ ಶ್ರುತಿ ಮಾಡಿದ ವೀಣೆಯಂತೆ ದೃಢವಾದ ಆ ಧ್ವನಿಯಲ್ಲಿ ಮೃದುವಿತ್ತು. ಮಧುರತೆಯಿತ್ತು.

    `ನಾನು ದ್ವಾರಕೆಗೆ ಹೋಗುತ್ತಿದ್ದೇನೆ’ ಎಂದ ಅಭಯಾನಂದ.

    `ಹೌದೆ? ನಾವು ಕೂಡ ದ್ವಾರಕೆಗೇ ಹೋಗುತ್ತಿದ್ದೇವೆ. ನಾವು ಮಥುರಾದಿಂದ ಈ ದಿನ ಬಂದೆವು’ ಆ ಹೆಂಗಸು ಹೇಳಿದಳು.

    ಈ ಹೆಂಗಸು ಸ್ವಲ್ಪ ವಾಚಾಳಿಯಾಗಿರಬೇಕು ಎಂದುಕೊಂಡ ಅಭಯಾನಂದ ಸ್ವಲ್ಪ ತಡೆದು ಅವನು ಕೇಳಿದ, `ನೀವೆಲ್ಲಾ ಎಲ್ಲಿಂದ ಹೊರಟವರು?’

    `ಉಡುಪಿಯಿಂದ’ ಎಂದು ಸ್ವಲ್ಪ ತಡೆದು, ಅವಳು ಕೇಳಿದಳು.

    `ನೀವು ಉಡುಪಿ ನೋಡಿದ್ದೀರಾ?’

    ಅಭಯಾನಂದ ತುಸು ಆಲೋಚಿಸಿ ಹೇಳಿದ: `ನೋಡಿದ್ದೇನೆ, ಬಹಳ ವರ್ಷಗಳ ಹಿಂದೆ’

    ಅವಳು ಆಮೇಲೆ ಮಾತು ಮುಂದುವರಿಸುವಂತೆ ತೋರಲಿಲ್ಲ. ಸ್ವಲ್ಪ ಹೊತ್ತಿನ ನಂತರ ಅವಳು ಕೇಳಿದಳು: `ಗಾಡಿ ಎಷ್ಟು ಗಂಟೆಗೆ ಬರುತ್ತದೆ?’

    `ನಾಲ್ಕೂವರೆಗೆ’ ಎಂದ, ಅಭಯಾನಂದ. ಅಷ್ಟರಲ್ಲಿ ಆ ಕಂಬದ ಬಳಿ ಸುರುಟಿ ಮಲಗಿದ್ದ ಮುದುಕಿ `ಸಾವಿತ್ರಿ’ ಎಂದು ಆಕೆಯನ್ನು ಕರೆದಳು. ಆಕೆ ಅವಳ ಬಳಿ ಹೋಗಿ `ಏನು?’ ಎಂದು ಕೇಳಿದಳು ಮುದುಕಿ `ಕುಡಿಯಲು ಸ್ವಲ್ಪ ನೀರು ತಂದುಕೊಡ್ತೀಯಾ?’ ಎಂದು ಕೇಳಿದಳು. ಸಾವಿತ್ರಿ ಎದ್ದು ಹೋಗಿ ಕೋಣೆಯ ಮೂಲೆಯಲ್ಲಿ ಕುಳಿತಿದ್ದವರ ಬಳಿಯಲ್ಲಿದ್ದ ನೀರಿನ ಪಾತ್ರೆಯಿಂದ ನೀರು ತಂದುಕೊಟ್ಟಳು. ಮುದುಕಿ ಅದನ್ನು ಕುಡಿದು ಮೊದಲಿನಂತೆಯೇ ಮಲಗಿಕೊಂಡಳು.

    ಸಾವಿತ್ರಿ ಆ ಸುರುಟಿ ಮಲಗಿದ ಮುದುಕಿಯ ಪಕ್ಕದಲ್ಲಿ ಕಂಬಕ್ಕೊರಗಿ ಕುಳಿತುಕೊಂಡಳು. ಅಷ್ಟರಲ್ಲಿ ಸುಮಾರು ಮೂವತ್ತರ ಹರೆಯದ ಹೆಣ್ಣೊಬ್ಬಳು ಅವಳ ಬಳಿ ಬಂದು ಏನೋ ಮಾತಾಡಿ ಮರಳಿ ಹೋಗಿ ತನ್ನ ಗುಂಪಿನೊಂದಿಗೆ ಸೇರಿಕೊಂಡು, ಒಂದಷ್ಟು ಹೊತ್ತು ಅಲ್ಲೇ ಕುಳಿತಿದ್ದಳು. ಅಲ್ಲಿಂದ ಅದೇಕೋ ಸಾವಿತ್ರಿಯನ್ನೇ ನೋಡುತ್ತಿದ್ದಳು. ಇವಳೇಕೆ ಈ ರೀತಿ ನನ್ನನ್ನೇ ನೋಡುತ್ತಿದ್ದಾಳೆ ಎಂದು ಸಾವಿತ್ರಿ ಯೋಚಿಸುತ್ತಿರುವಾಗ ಆ ಯುವತಿ ಎದ್ದು ಬಂದು, ಮುಗುಳ್ನಗುತ್ತಾ ಸಾವಿತ್ರಿಯ ಬಳಿ ಕುಳಿತುಕೊಂಡು, ನೀವು ನನ್ನ ಅಮ್ಮನನ್ನೇ ಹೋಲುತ್ತೀರಿ. ಕಳೆದ ವರ್ಷ ನಾನು ಅಮ್ಮನನ್ನು ಕಳೆದುಕೊಂಡೆ. ಹೆಚ್ಚು ಕಡಿಮೆ ನಿಮ್ಮದೇ ವಯಸ್ಸು

    ಯುವತಿ ಬಹುಮಟ್ಟಿಗೆ ನಿರ್ಲಿಪ್ತಳಾಗಿಯೇ ಮಾತಾಡುತ್ತಿದ್ದಳು. ನಿಮಗೆ ಏನೋ ದುಃಖ, ಏನೋ ವೇದನೆ ಇರುವಂತೆ ತೋರುತ್ತದೆ ಎಂದಳು. ಕ್ಷಣ ತಡೆದು ಸಾವಿತ್ರಿ, ನಿಜ. ನನಗೆ ಒಂದು ಬಗೆ ಹೊಟ್ಟೆನೋವಿನ ಬಾಧೆ ಇದೆ ಎಂದು ಹೇಳಿ, ಅದನ್ನು ಪರಿಹರಿಸಿಕೊಳ್ಳಲು ನಡೆಸಿದ ಪ್ರಯತ್ನಗಳ ಬಗ್ಗೆ ಹೇಳಿದಳು. ಅವಳ ಮಾತನ್ನು ಶಾಂತವಾಗಿ ಆಲಿಸಿದ ಆ ಯುವತಿ, ಏನೇ ಇರಲಮ್ಮ, ಆ ಪ್ರಯತ್ನಗಳು ನಡೆಯಲಿ, ಆದರೆ ನಾವು ಸದಾ ನಗುನಗುತ್ತಾ ಇರಬೇಕು. ನಗುನಗುತ್ತಾ ಬದುಕಬೇಕು, ನಗುನಗುತ್ತಾ ಸಾಯಬೇಕು ಎಂದಳು.

    Enjoying the preview?
    Page 1 of 1