Discover millions of ebooks, audiobooks, and so much more with a free trial

Only $11.99/month after trial. Cancel anytime.

Kaarmugilu
Kaarmugilu
Kaarmugilu
Ebook343 pages1 hour

Kaarmugilu

Rating: 0 out of 5 stars

()

Read preview

About this ebook

Novelist, poet, short-story writer, essayist, playwright, educationist, linguist.... author of over 90 books in Kannada as well as English.

M. A. (English), B.Ed. from the University of Kerala; L.T.C.L. Diploma from Trinity College, London; A.C.P. Diploma from the College of Preceptors, Oxford; Taught English for 15 years in India and 9 years in Ethiopia; Published four books in the teachingof English language, grammar and Phonetics; Published in Kannada 45 novels, 3 anthologies of short stories, 4 anthologies of essays, 2 anthologies of poems, 18 plays, and a travelogue; Published in the Tulu language a novel and a collection of poems translated from English.
LanguageKannada
Release dateAug 12, 2019
ISBN6580200202518
Kaarmugilu

Read more from K.T. Gatti

Related to Kaarmugilu

Related ebooks

Reviews for Kaarmugilu

Rating: 0 out of 5 stars
0 ratings

0 ratings0 reviews

What did you think?

Tap to rate

Review must be at least 10 words

    Book preview

    Kaarmugilu - K.T. Gatti

    http://www.pustaka.co.in

    ಕಾರ್ಮುಗಿಲು

    Kaarmugilu

    Author:

    ಕೆ. ಟಿ. ಗಟ್ಟಿ

    K.T. Gatti

    For more books

    http://www.pustaka.co.in/home/author/kt-gatti-novels

    Digital/Electronic Copyright © by Pustaka Digital Media Pvt. Ltd.

    All other copyright © by Author.

    All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.

    ಮುನ್ನುಡಿ – ಕೆಲವು ಟಿಪ್ಪಣಿಗಳು

    ಕಾದಂಬರಿಯಲ್ಲಿ ಇಲ್ಲಿ ಟಿಪ್ಪಣಿಗಳ ರೂಪದಲ್ಲಿ ಇಡ ಬಯಸುತ್ತೇನೆ.  ಮುಖ್ಯವಾಗಿ, ಲೇಖಕನಾಗಿ ಮತ್ತು ಮನುಷ್ಯನಾಗಿ ನನ್ನ ಕೆಲವು ಅನುಭವ-ಅನಿಸಿಕೆಗಳನ್ನು ಓದುಗರೊಡನೆ ಹಂಚಿಕೊಳ್ಳುವುದು ಇದರ ಉದ್ದೇಶ. ನನ್ನ ಮಿತ್ರರೊಬ್ಬರಿಗೆ ತಮ್ಮ ಅನುಭವ ಅನಿಸಿಕೆಗಳನ್ನು ಅವೆಷ್ಟು ಖಾಸಗಿಯಾಗಿದ್ದರೂ ಕೂಡಾ ದಾಖಲಿಸಲು ಒಂದು ಪತ್ರಿಕೆಯಿದೆ; ಅವರದರ ಸಂಪಾದಕರು. ಆದರೆ ಲೇಖಕ ಮಾತ್ರನಾದ ನಾನು ನನ್ನ ವಿಚಾರಗಳನ್ನು ಓದುಗರೊಡನೆ ಹಂಚಿಕೊಳ್ಳಲು ಇದೊಂದೇ ವೇದಿಕೆ ಅಂದುಕೊಂಡಿದ್ದೇನೆ. ಹೆಚ್ಚೆಂದರೆ, ನನ್ನ ಒಂದು ಪುಸ್ತಕ ಆರೇಳು ಸಾವಿರ ಓದುಗರಿಗೆ ತಲುಪಬಹುದು. ಅಷ್ಟರಲ್ಲೇ ನಾನು ತೃಪ್ತಿಪಟ್ಟುಕೊಳ್ಳುತ್ತೇನೆ. ಒಂದು ಕಾದಂಬರಿ ಧಾರವಾಹಿಯಾದಾಗ ಐದಾರು ಲಕ್ಷ ಜನರಿಗೆ ತಲುಪುತ್ತದೆ. ಆದರೆ ಪತ್ರಿಕೆಗಳಿಗೆ ಮುನ್ನುಡಿ, ಲೇಖಕನ ಸುಖ ದುಃಖ ಇತ್ಯಾದಿ ಬೇಡ. ಭಾಷೆ ಸಾಹಿತ್ಯದ ಬಗ್ಗೆ ಚರ್ಚೆಯೂ ಬೇಡ. ಒಂದು ವೇಳೆ ಇಂಗ್ಲೀಷ್ ಅಥವಾ ಹಿಂದಿ ಕಲ್ಲು ಚಪ್ಪಡಿಯಂತೆ ಕನ್ನಡ ಭಾಷೆಯ ಮೇಲೆ ಬಿದ್ದು ಕನ್ನಡ ಭಾಷೆ ಅದೃಷ್ಯವಾದರೆ ಕನ್ನಡ ಪತ್ರಿಕೆಗಳಿಗೆ ಏನಾಗಬಹುದು? ಏನೂ ಆಗುವುದಿಲ್ಲ; ಕನ್ನಡ ಪತ್ರಿಕಗೆಗಳೆಲ್ಲ ಇಂಗ್ಲಿಷ್ ಅಥವಾ ಹಿಂದಿ ಪತ್ರಿಕೆಗಳಾಗುತ್ತವೆ, ಅಷ್ಟೆ.

    ಓದದವರೇ ಹೆಚ್ಚು, ಓದುವವರ ಸಂಖ್ಯೆ ತೀರಾ ಸಣ್ಣದು. ಕೆಲವರಿಗೆ ಪುಸ್ತಕವೆಂದರೆ ಅಲರ್ಜಿ. ಪುಸ್ತಕದಲ್ಲಿ ಏನಿದೆ? ಎಂದು, ಏನೂ ಇಲ್ಲವೆಂಬ ಅರ್ಥದಲ್ಲಿ, ಹೇಳುವವರಿದ್ದಾರೆ. ಓದಲು ವೇಳೆಯೆಲ್ಲಿದ್ದೆ ಎಂದು, ಓದಬೇಕಾದ್ದು ಒಂದು ಅಗತ್ಯವೇನೂ ಅಲ್ಲ ಎಂಬರ್ಥದಲ್ಲಿ, ಕೇಳುವವರಿದ್ದಾರೆ. ಒಂದೆರೆಡು ನಿಯತ ಕಾಲಿಕೆಗಳನ್ನು ಕೊಂಡುಕೊಳ್ಳುವುದನ್ನು ಅನಗತ್ಯ ವೆಚ್ಚ ಎಂದು, ಬರೀ ಒಂದು ದಿನಪತ್ರಿಕೆಗೆ ತಮ್ಮ ಓದನ್ನು ಸೀಮಿತಗೊಳಿಸುವುದಲ್ಲದೆ ಕುಟುಂಬದ ಎಲ್ಲರೂ ಓದುವ ಆಸಕ್ತಿಯನ್ನು ಕೂಡ ಆ ಒಂದು ಪತ್ರಿಕೆಗೇ ಕಟ್ಟಿ ಹಾಕುವವರಿದ್ದಾರೆ. ಶಾಲೆ ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿಗಳಿರುವ, ತಿಂಗಳಿಗೆ ಸಾವಿರಾರು ರೂಪಾಯಿ ವೆಚ್ಚ ಮಾಡುವ ಒಳ್ಳೆಯ ಅನುಕೂಲಸ್ಥರ ಮನೆಗಳಲ್ಲಿ ಕೂಡ ಪುಸ್ತಕವೆಂಬ ವಸ್ತು ಇಲ್ಲದಿರುವುದನ್ನು ಕಂಡು ಆಶ್ಚರ್ಯ ಪಟ್ಟಿದ್ದೇನೆ. ಇಂಥ ಪರಿಸ್ಥಿತಿಯಲ್ಲಿ ತಮ್ಮ ಮಕ್ಕಳು ಬುದ್ಧಿಶಾಲಿಗಳಾಗಬೇಕು, ಮೇಧಾವಿಗಳಾಗಬೇಕು, ತುಂಬಾ ಅಂಕಗಳನ್ನು ಗಳಿಸಬೇಕು, ದೊಡ್ಡ ಉದ್ಯೋಗಗಳನ್ನು ಸಂಪಾದಿಸಬೇಕು ಎಂಬ ಆಸೆಯನ್ನು ಹೆತ್ತವರು ಹೊತ್ತುಕೊಂಡಿರುತ್ತಾರಲ್ಲಾ, ಅದು ಇನ್ನಷ್ಟು ಸೋಜಿಗದ ಸಂಗತಿ. ಪಠ್ಯ ಪುಸ್ತಕದ ಹೊರತು ಬೇರೆ ಪುಸ್ತಕಗಳನ್ನು ಓದಿದರೆ ವಿದ್ಯಾರ್ಥಿಗಳಿಗೆ ಕಡಿಮೆ ಅಂಕಗಳು ಬರುತ್ತವೆ ಎಂದು ಭಾವಿಸುವವರಿದ್ದಾರೆ! ಹೀಗಿದ್ದಲ್ಲಿ ಅರಿವಿನ ಸೀಮೆ ವಿಸ್ತರಿಸುವುದು ಹೇಗೆ? ಚಿಂತನೆ ಶೀಲತೆ, ವೈಚಾರಿಕತೆ, ವೈಜ್ಞಾನಿಕ ಮನೋಭಾವ ಬೆಳೆಯುವುದು ಹೇಗೆ?

    **

    ಐದಾರು ಕಾದಂಬರಿಗಳನ್ನು ಕೆಲವು ಕವಿತಾ ಸಂಕಲನಗಳನ್ನು ಪ್ರಕಟಿಸಿದ ಅಕಾಡೆಮಿಯಿಂದ ತನ್ನ ಕಾದಂಬರಿಗೆ ಪ್ರಶಸ್ತಿಯನ್ನು ಕೂಡ ಪಡೆದ ನನ್ನ ಮಿತ್ರರೊಬ್ಬರು ತನ್ನ ಇತ್ತೀಚೆಗೆಇನ ಕಾದಂಬರಿಯನ್ನು ಪ್ರಕಟಿಸಲು ನಾಲ್ಕು ವರ್ಷಗಳಿಂದ ಪ್ರಯತ್ನ ನಡೆಸುತ್ತಿದ್ದಾರೆ. ಇನ್ನೂ ಅವರಿಗೆ ಪ್ರಕಾಶಕರು ಸಿಕ್ಕಿಲ್ಲ. ಪ್ರಕಾಶಕರು ಏನೇನೋ ನೆಪ ಹೇಳಿ ತಮ್ಮ ಅಸಹಾಯಕತೆಯನ್ನು ಪ್ರಕಟಿಸುತ್ತಿದ್ದಾರೆ. ಕನ್ನಡ ಪ್ರಕಾಶಕ ಕ್ಷೇತ್ರ ತೀರಾ ಸಂಕಟದಲ್ಲಿದೆ. ಹಿಂದೆ ಒಂದು ಕಾದಂಬರಿಯ ಎರಡು-ಮೂರು ಸಾವಿರ ಪ್ರತಿಗಳನ್ನು ಹಾಕುತ್ತಿದ್ದೆವು. ಈಗ ಒಂದು ಸಾವಿರ ಪ್ರತಿ ಮಾತ್ರ ಹಾಕುತ್ತೇವೆ ಎನ್ನುತ್ತಾರೆ ಕನ್ನಡದ ಪ್ರತಿಷ್ಠಿತ ಪ್ರಕಾಶಕರೊಬ್ಬರು. ಈ ಪರಿಸ್ಥಿತಿಯ ಬಗ್ಗೆ, ದುಃಖವಾಗುತ್ತಿದೆ. ಯಾರಲ್ಲಾದರೂ ಒಂದು ವಿವರಣೆ ಇದೆಯೆ? ಯಾಕೆ ಹೀಗಾಯ್ತು, ಅಥವಾ ಈ ಪರಿಸ್ಥಿತಿಯನ್ನು ಸುಧಾರಿಸುವುದು ಹೇಗೆ ಎಂದು ವಿಚಾರಿರುವವರು ಯಾರಾದರೂ ಇದ್ದಾರೆಯೆ? ಲೇಖಕ ಮಿತ್ರ ಡಾ|| ನಾ. ಮೊಗಸಾಲೆಯವರಿಗೆ ಹೀಗೆ ಹೇಳಬೇಕೆಂದು ಮಾಡಿದ್ದೇನೆ. ಮೊದಲು ನಿಮ್ಮ ಕಾದಂಬರಿಯನ್ನು ತೆಲುಗಿಗೆ ಭಾಷಾಂತರಿಸಿ ಆಂಧ್ರದಲ್ಲೆಲ್ಲಾದರೂ ಪ್ರಕಟಿಸಲು ಪ್ರಯತ್ನಿಸಿ. ಆಮೇಲೆ ಅದನ್ನು ಯಾರಿಂದಲಾದರೂ ಕನ್ನಡಕ್ಕೆ ಅನುವಾದ ಮಾಡಿಸಿ, ಕನ್ನಡದಲ್ಲಿ ಪ್ರಕಟಿಸಬಹುದು.

    **

    ಭಾಷಣದಿಂದ ಕನ್ನಡ ಭಾಷೆಯ ಅಥವಾ ಕನ್ನಡ ಸಾಹಿತ್ಯದ ಉದ್ದಾರ ಆಗುವುದಿದ್ದರೆ ಎಂದೋ ಆಗಬೇಕಿತ್ತು. ಅದ್ಭುತ ಭಾಷಣಕಾರರಾದ ಬಿ.ಎಂ. ಶ್ರೀಯವರ ಕಾಲದಲ್ಲಿ ಆಗಬೇಕಾಗಿತ್ತ. ಅ.ನ.ಕೃಷ್ಣರಾಯರ ಕಾಲದಲ್ಲಿ ಆಗಬೇಕಾಗಿತ್ತು. ಪಾಟೀಲ ಪುಟ್ಟಪ್ಪ, ಹಾ.ಮಾ.ನಾ, ಚಿದಾನಂದಮೂರ್ತಿ ಮುಂತಾದವರ ಜೀವಂತ ಧ್ವನಿಗಳಿಂದಾದರೂ ಆಗಬೇಕಾಗಿತ್ತು. ಆಗಿಲ್ಲ. ಈಗಲೂ ಅದೇ ಕರೆ, ಕೂಗು, ಕನ್ನಡವನ್ನು ಉಳಿಸಿ! ಸಾಹಿತ್ಯದ ವಿಚಾರವಂತಿರಲಿ, ಭಾಷೆಗೇ ಗಂಡಾಂತರ ಬಂದಿದೆ ಎಂಬ ಭಯ! ಇಂಥ ಸಂದರ್ಭದಲ್ಲಿ ಎಲ್ಲಾ ಭಾಷಣವೂ ಅಪ್ರಸ್ತುತವೆನಿಸುವುದಿಲ್ಲವೆ?

    ಸಾಕ್ಷರತಾ ಆಂದೋಲನದಂತೆ, ಕನ್ನಡದ ಭಾಷೆ ಮತ್ತು ಸಾಹಿತ್ಯದ ಆಂದೋಲನದಂತೆ, ಆಗದಿದ್ದರೆ, ಈ ನಾಡಿನ ಇತಿಹಾಸದಲ್ಲಿ ಘಟಿಸಿದ ತಪ್ಪನ್ನು ತಿದ್ದದಿದ್ದರೆ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಅಪಾಯವಿದೆ. ಬಹಳ ಬೇಗನೆ ಕನ್ನಡಿಗರೆಂದರೇ ಸ್ವಂತಿಕೆಯಿಲ್ಲದ, ಸ್ವಂತ ಭಾಷೆ, ಸಾಹಿತ್ಯ ವಿಲ್ಲದ ಜನ ಎಂದು ತಿಳಿಯಲ್ಪಡುವ ಸ್ಥಿತಿಯುಂಟಾಗುತ್ತದೆ. ಭಾಷೆ, ಸಾಹಿತ್ಯ ಇದೆ ನಿಜ. ಆದರೆ ಅದು ಮ್ಯೂಸಿಯಂನಲ್ಲಿದ್ದು ಏನು ಉಪಯೋಗ?

    **

    ಕನ್ನಡ ಭಾಷೆ ಮತ್ತು ಸಾಹಿತ್ಯದ ಬಗ್ಗೆ ಕಳಕಳಿಯಿರುವವರು ಒಂದು ವಿಷಯವನ್ನು ಗಮನಿಸಬೇಕು.

    ಅನಕೃ, ತರಾಸು, ಕಟ್ಟೀಮನಿ, ಕುವೆಂಪು, ಕಾರಂತ ಹೆಚ್ಚು ಹೆಚ್ಚು ಜನ ಕನ್ನಡ ಪುಸ್ತಕಗಳನ್ನು ಓದುವಂತೆ ಮಾಡಿದರು. ಹೆಚ್ಚು ಹೆಚ್ಚು ಜನ ಕನ್ನಡ ಪುಸ್ತಕಗಳನ್ನು ಓದಬೇಕೆಂಬ ಕಾಳಜಿಯೂ ಅವರಿಗಿತ್ತು.

    ಇಂಗ್ಲೇಂಡಿನಲ್ಲಿ ವಸ್ತು ತಂತ್ರ ಮತ್ತು ಶೈಲಿಯ ದೃಷ್ಟಿಯಿಂದ ಸುಲಭ ಗ್ರಾಹ್ಯವಲ್ಲದ ಒಂದು ಪುಸ್ತಕ ಪ್ರಕಟವಾದಾಗ ಕೂಡ ಅದು ಜನಪ್ರಿಯವಾಗುತ್ತದೆ. ಅದು ಅನುವಾದವಾಗಿದ್ದರೂ ಜನಪ್ರಿಯವಾಗುತ್ತದೆ. ಲಕ್ಷಗಟ್ಟಲೆ ಪ್ರತಿಗಳು ಮಾರಾಟವಾಗುತ್ತವೆ. ಕಾರಣ, ಅಲ್ಲಿ ಭಾಷೆ ಒಂದು ಸಮಸ್ಯೆಯಲ್ಲ.

    ಕನ್ನಡದಲ್ಲಿ ಅಂಥ ಒಂದು ಪುಸ್ತಕ ಬಂದಾಗ ಅದು ಸಾಹಿತ್ಯ ಕ್ಷೇತ್ರದ ಪ್ರತಿಷ್ಠಿತರ ವಲಯದಲ್ಲಿ ಸುದ್ದಿ ಮಾಡಿದ ಬಳಿಕ ಒಂದು ಸಂಖ್ಯೆಯ ಸಾಹಿತ್ಯಾಸಕ್ತ ಓದುಗರ ಗಮನ ಸೆಳೆಯುತ್ತದೆ. ಪುಸ್ತಕಕ್ಕೆ ಪ್ರಶಸ್ತಿ ಬಂದರೆ ಲೇಖಕನಲ್ಲೂ ಧನ್ಯತಾಭಾವ ಮೂಡುತ್ತದೆ. ಮತ್ತೆ ಕೆಲವು ಮಂದಿ ಯಾವುದೋ ಕಾರಣಕ್ಕಾಗಿ ಪುಸ್ತಕದಿಂದ ಆಕರ್ಷಿತರಾಗಬಹುದು.

    ಇಂಥ ಸಾಹಿತ್ಯ ಕೃತಿ ಜನಪ್ರಿಯ ಆಗಬೇಕು. ಭಾಷೆಯ ಸಾಹಿತ್ಯದ ಬೆಳವಣಿಗೆಗೆ ಅದು ಅಗತ್ಯ. ಆದರೆ ಜನಪ್ರಿಯ ಆಗುವುದಿಲ್ಲ. ಯಾಕೆ? ಕನ್ನಡಿಗರು ಓದುವುದಿಲ್ಲವೆ? ಓದುತ್ತಾರೆ ಕೆಲವು ಪುಸ್ತಕಗಳು ಸಾವಿರಗಟ್ಟಲೆ ಪ್ರತಿಗಳು ಖರ್ಚಾಗುತ್ತವೆ. ಅಂಥ ಪುಸ್ತಕಗಳು ವರ್ಷದೊಳಗೇ ಮರು ಮುದ್ರಣವನ್ನು ಕೂಡ ಕಾಣುತ್ತವೆ.

    ಹಾಗಾದರೆ ಈ ಓದುಗರು ಯಾರು? ಇವರು ಓದುವ ಪುಸ್ತಕಗಳು 'ಜನಪ್ರಿಯ'ವೆ?

    ಇಂಥ ಬಹಳಷ್ಟು ಪುಸ್ತಕಗಳು ಭಾಷೆಯೂ ಅಲ್ಲ, ಸಾಹಿತ್ಯವೂ ಅಲ್ಲ. ಇವುಗಳು ಪುಸ್ತಕಗಳೂ ಅಲ್ಲ. ಇವುಗಳನ್ನು ಓದುವವರ ಓದೂ ಅಲ್ಲ.

    ಹಾಗಾದರೆ, ಇಂಗ್ಲೆಂಡಿನಲ್ಲಿ ಇಂಗ್ಲೀಷ್ ಯಾವ ಸ್ಥಾನದಲ್ಲಿದೆಯೊ ಆ ಸ್ಥಾನಕ್ಕೆ ಕರ್ನಾಟಕದಲ್ಲಿ ಕನ್ನಡವನ್ನು ಏರಿಸಬೇಕಾದರೆ ಏನು ಮಾಡಬೇಕು? ಹೌದು, ಏನು ಮಾಡಬೇಕು?

    **

    ಕನ್ನಡದ ಮಹಾ ಶತ್ರುಗಳೆಂದರೆ ಶಾಲೆ ಕಾಲೇಜುಗಳ ಕನ್ನಡ ಅಧ್ಯಾಪಕರು. ಹಿಂದಿ ಮತ್ತು ಸಂಸ್ಕೃತದ ಉಪಯೋಗ ತೀರಾ ಸೀಮಿತ. ಆದರೂ ಹೆಚ್ಚಿನ ವಿದ್ಯಾರ್ಥಿಗಳು ಆರಿಸಿಕೊಳ್ಳುವುದು ಹಿಂದಿ ಮತ್ತು ಸಂಸ್ಕೃತವನ್ನು. ಕಾರಣ, ಅದರಲ್ಲಿ ಅಧ್ಯಾಪಕರು ತುಂಬ ಅಂಕಗಳನ್ನು ಹಾಕುತ್ತಾರೆ. ಯಾಕೆ ಎಂಬುದರ ಹಿಂದೆ ಎಲ್ಲರಿಗೂ ತಿಳಿದಿರುವ ಒಂದು ರಹಸ್ಯವಿದೆ. ಕನ್ನಡದ ಅಧ್ಯಾಪಕರು ಅಂಕಗಳನ್ನು ಕೊಡುವ ವಿಚಾರದಲ್ಲಿ ತುಂಬಾ ಜಿಪುಣತನ ತೋರಿಸುತ್ತಾರೆ. ಸಂಸ್ಕೃತ ಮತ್ತು ಹಿಂದಿ ಅಧ್ಯಾಪಕರು ನೂರರಲ್ಲಿ ತೊಂಬತ್ತು ಹಾಕುವಾಗ ಕನ್ನಡದಲ್ಲೂ ಕೂಡ ಅಷ್ಟೇ ಹಾಕಬೇಕು. ಯಾಕೆಂದರೆ, ಸಂಸ್ಕೃತ ಮತ್ತು ಹಿಂದಿ ಉಳಿಯಬೇಕೆಂದಾದರೆ, ಕನ್ನಡ ಕೂಡ ಉಳಿಯಬೇಡವೆ?

    **

    ಎಲ್ಲಾ ವ್ಯವಸಾಯದಂತೆ ಲೇಖನ ವ್ಯವಸಾಯದಲ್ಲಿ ಕೂಡ ಕೆಲವು ಖಾಸಗಿ ಕಷ್ಟಗಳು, ವೃತ್ತಿ ಸಂಬಂಧ ಪರಿತಾಪಗಳು ಇರುತ್ತವೆ. ಲೇಖಕ ಸರಳವಾಗಿ ಮಾತಾಡಿದರೆ ಓ ಈತ ಇಷ್ಟೇನೆ, ನಾನೇನೋ ಮಹಾ ಮೇಧಾವಿ ಅಂದುಕೊಂಡಿದ್ದೆ ಅನ್ನುವವರಿದ್ದಾರೆ. ಸ್ವಲ್ಪ ಪ್ರೌಢವಾದ ಭಾಷೆ, ಪ್ರೌಢವಾದ ವಿಚಾರಗಳನ್ನೆತ್ತಿ ಮಾತಾಡಿದರೆ, ಗರ್ವ, ಪ್ರದರ್ಶನ ಅನ್ನುವವರಿದ್ದಾರೆ ಲೇಖಕನ ಬಗ್ಗೆ ಮಾತ್ರವಲ್ಲ, ಆತನ ಕೃತಿಗಳ ಬಗ್ಗೆ ಕೂಡ ಈ ಬಗೆಯ ವಿಮರ್ಶೆಗಳನ್ನು ಬರೆದು ಪತ್ರಿಕೆಗಳಲ್ಲಿ ಮುದ್ರಿಸಿ ತಮ್ಮದು ಮಹಾ ವಿಮರ್ಶೆ ಎಂದು ಆನಂದಪಟ್ಟುಕೊಳ್ಳುವವರಿದ್ದಾರೆ. ಎಲ್ಲವೂ ವಿಮರ್ಶೆಯಾಗುತ್ತದೆಯೆ?

    ಸಾಹಿತಿಗೆ ಸಾಮಾಜಿಕ ಸನ್ನಿವೇಶಗಳಲ್ಲಿ ಎದುರಾಗುವ ಬೇರೆ ಕಷ್ಟಗಳೂ ಇವೆ. 'ಸಾಹಿತಿ' ಎಂದೊಡನೆ 'ಸರಿ, ಹಾಗಾದರೆ ಕಂಠಮಟ್ಟ ಕುಡಿಯುತ್ತಾನೆ' ಎಂಬ ಪೂರ್ವಗ್ರಹ ಕೆಲವರದು. ಹೆಣ್ಣು, ಹೆಂಡ, ಸಿಗರೇಟು ಇವುಗಳಲ್ಲಿ ಯಾವುದಾದರೂ ಒಂದಾದರೂ ಇಲ್ಲದೆ ಸಾಹಿತ್ಯ ಸೃಷ್ಟಿ ಸಾಧ್ಯವೇ ಇಲ್ಲ, ಇದರಲ್ಲಿ ತಮ್ಮದು ಯಾವುದು ಸ್ವಾಮೀ ಎಂದು ಕೇಳುವವರಿದ್ದಾರೆ. ಪತ್ರ ಬರೆದು ಕೇಳುವವರು ಕೂಡ ಇದ್ದಾರೆ. ಈಗ ಎಲ್ಲರೂ ಕುಡಿಯುತ್ತಾರೆ. ರೈಟರ‍್ ಮತ್ತು ಜರ್ನಲಿಸ್ಟ್ ಎಂದಾದರೆ ಕುಡಿದೇ ಕುಡಿಯುತ್ತಾನೆ ಎಂಬ ಲೋಕಜ್ಞಾನ ಕೆಲವರದು. ಒಂದು ವೇಳೆ ಕುಡಿಯದವನಾದರೆ 'ಸಪ್ಪೆ ಮನುಷ್ಯ' ಎಂಬ ಉಪೇಕ್ಷೆ ಬೇರೆ.

    ಲೇಖಕ ಸ್ವಲ್ಪ ವೈಚಾರಿಕ ನಿಲುವಿನವನು ಎಂದಾದರೆ ನೀವು ದೇವರನ್ನು ನಂಬುತ್ತೀರಾ, ದೇವರಿದ್ದಾನೆಯೆ ಇಲ್ಲವೆ ಇತ್ಯಾದಿ ಪ್ರಶ್ನೆ. ದೇವರೆಂದರೆ ಏನೆಂದು ಯಾರಿಗೂ ಸ್ಪಷ್ಟವಿಲ್ಲದಿರುವಾಗ ಈ ಪ್ರಶ್ನೆಯನ್ನು ಇನ್ನೊಬ್ಬರಿಗೆ ಹಾಕುವುದೆಂದರೆ ಬರೀ ಪರಪೀಡೆಯೇ ಹೊರತು ಇದರಿಂದ ಬೇರೆ ಸುಖವಿಲ್ಲ. ನಾಸ್ತಿಕನಾದ ಬುದ್ಧನನ್ನೇ ದೇವರ ಅವತಾರ ಮಾಡಿದ ಈ ಮಣ್ಣಿನಲ್ಲಿ ಆಸ್ತಿಕ ನಾಸ್ತಿಕ ಎಂಬ ಪದಗಳಿಗೆ ಯಾವ ಅರ್ಥವೂ ಇಲ್ಲ! ಸಜ್ಜನನಾಗಿ, ವಿಚಾರವಂತನಾಗಿ ಚೆನ್ನಾಗಿ ಬಾಳುವುದಕ್ಕೆ, ಒಬ್ಬರನ್ನೊಬ್ಬರನ್ನು ಅದರ ಗೌರವದಿಂದ ಕಾಣುವುದಕ್ಕೆ, ಸ್ನೇಹಕ್ಕೆ, ಯಾರನ್ನೂ ದ್ವೇಷಿಸದೆ, ಹಿಂಸಿಸದೆ, ವಂಚಿಸದೆ, ಶೋಷಿಸದೆ ಇರುವುದಕ್ಕೆ ಇರಲಿ ಬೇಕಿದ್ದರೆ ಅವರವರು ನಂಬಿರುವ ದೇವರು! ಅವರವರ ಹೃದಯದಲ್ಲಿ. ಪ್ರದರ್ಶನಕ್ಕಲ್ಲ. ಹೋಲಿಕೆಗಲ್ಲ. ಆದರೆ ನಾವು ಸಾಮಾನ್ಯವಾಗಿ ಕಾಣುವುದು, ಚರ್ಚೆಯಲ್ಲಿ ಮಾತ್ರ ದೇವರಿದ್ದಾನೆ ಎಂಬ ವಾದ. ಆಚರಣೆಯಲ್ಲಿ ದೇವರೆಂಬುವುದಿಲ್ಲ ಎಂಬ ರೀತಿ!

    **

    ಸಾಹಿತಿಯಾದವನು ಭಾಷಣ ಮಾಡಬೇಕು ಎಂಬ ಸಂಪ್ರದಾಯ ನಮ್ಮ ದೇಶದಲ್ಲಿ, ಅದರಲ್ಲೂ ಕರ್ನಾಟಕದಲ್ಲಿ ಬಹಳ ವ್ಯಾಪಕವಾಗಿ, ಅದೆಂದೋ ಬೆಳೆದು ಬಂದಿದೆ. ಆದರೆ ಸಮಾರಂಭಗಳಲ್ಲಿ ಅಧ್ಯಕ್ಷ ಮುಖ್ಯ ಅತಿಥಿ, ಸನ್ಮಾನಿತ ಇತ್ಯಾದಿ ಏನಾದರೊಂದು ಆಗುವ ಸಾಹಿತಿಯ ಸ್ವಂತ ಅನುಭವವೇನು ಎಂದು ಯಾರೂ ವಿಚಾರಿಸಿದ್ದನ್ನು, ವಿಚಾರ ಮಾಡಿದ್ದನ್ನು ನಾನು ಕಂಡಿಲ್ಲ. ಕೆಲವನ್ನು ಕೇಳಿ:

    **

    ನಿಮ್ಮ ಕಾದಂಬರಿಯನ್ನು ನಾಟಕ ಮಾಡ್ತಿದ್ದೇವೆ ಅನುಮತಿ ಕೊಡಿ ಎಂದು ಲೇಖಕನಿಗೆ ಪತ್ರ ಬಂತು. ಲೇಖಕ ಅನುಮತಿ ಕೊಟ್ಟು, ಗೌರವ ಧನದ ಬಗ್ಗೆಯೂ ಒಪ್ಪಂದವಾಯಿತು. ಇಂಥಿಂಥ ದಿನ ನಾಟಕ ಎರಡು ದಿನಕ್ಕೆ ಮೊದಲೇ ಬನ್ನಿ, ಮಾರ್ಗದರ್ಶನ ನೀಡಿ, ನಮಗೆ ನಿಮ್ಮ ಸಲಹೆ ಸಹಕಾರ ತುಂಬ ಅಗತ್ಯ, ಅಲ್ಲದೆ, ನೀವು ನೋಡಲೇಕು ಎಂಬ ಕಳಕಳಿಯ ಪತ್ರ ಬಂತು.

    ಆಮಂತ್ರಣದ ಪ್ರಕಾರ ನೂರು ರೂಪಾಯಿ ಖರ್ಚುಮಾಡಿಕೊಂಡು ಲೇಖಕ ಹೋದ. ಟಿಕೇಟು ಇರಿಸಿದ ನಾಟಕ ಪ್ರದರ್ಶನ. ಸಲಹೆ ಮಾರ್ಗದರ್ಶನ ಎಲ್ಲಾ ಆಯಿತು. ನಾಟಕ ನೋಡಿಯೂ ಆಯಿತು. ಲೇಖಕನ ಭಾಷಣವೂ ಆಯಿತು. ಲೇಖಕನಿಗೆ ಪ್ರಯಾಣಕ್ಕಾದ ನೂರಿನ್ನೂರು ರೂಪಾಯಿ ಖರ್ಚಿನ ಬಗ್ಗೆ ಮಾತೇ ಇಲ್ಲ. ಹಣದ ಬಗ್ಗೆ ಮಾತಾಡಲು ಲೇಖಕನಿಗೆ ನಾಚಿಕೆ. ಸ್ವಂತ ಖರ್ಚಿನಲ್ಲೇ ಮನೆಗೆ ಮರಳಿದ ಬಳಿಕ ನಾಟಕದ ಗೌರವ ಧನದ ಬಗ್ಗೆ ಬರೆದ ಕಾಗದಕ್ಕೆ ಉತ್ತರವೇ ಇಲ್ಲ.

    ಇದರಿಂದ ಪಾಠ: ಇಂಥ ಸಮಾಜ ಸೇವೆಗೆ ಸಾಹಿತಿ ಹೋಗಿ ತನ್ನ ಬಡತನವನ್ನು ಹೆಚ್ಚಿಸಿಕೊಳ್ಳಬಾರದು.

    ಹತ್ತು ಹಲವು ಸಮಸ್ಯೆಗಳಿಗೆ ಪರಿಹಾರ ಅಪೇಕ್ಷಿಸಿ ಅಥವಾ ಯಾವುದೋ ವಿಚಾರದಲ್ಲಿ ಅಭಿಪ್ರಾಯಕ್ಕಾಗಿ ಅಥವಾ ಹಸ್ತಾಕ್ಷರಕ್ಕಾಗಿ ಲೇಖಕನಿಗೆ ಪತ್ರಗಳು ಬರುತ್ತಾ ಇರುತ್ತವೆ. ಅವರಿಗೆಲ್ಲ ಉತ್ತರಿಸಬೇಕಾದ್ದು ಲೇಖಕನಾದವ ನೈತಿಕ ಹೊಣೆಯೆಂದು ತಿಳಿಯೋಣ. ಯಾಕೆಂದರೆ, ಸಮಾಜ ಅವನ ಪುಸ್ತಕಗಳನ್ನು ಓದುತ್ತದೆ. ಆದರೆ ಪತ್ರಗಳಿಗೆ ಉತ್ತರ ಬರೆಯಲು ಅಂಚೆ ವೆಚ್ಚ? ಸಾಹಿತ್ಯದಿಂದ ಬದುಕಿಗೆ ಬೇಕಾದಷ್ಟು ಹುಟ್ಟುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಹಾಗಿರುವಾಗ, ಲೇಖಕ ತನ್ನ ಕರ್ತವ್ಯವನ್ನು ಹೇಗೆ ಪಾಲಿಸಬೇಕು?

    ಇದರ ಪಾಠ: ಬಹುಶಃ ಸಾಹಿತ್ಯದ ಕೆಲಸ ಆರಂಭಿಸುವ ಮೊದಲು ಒಳ್ಳೆಯ ಉತ್ಪತ್ತಿಯಿರುವ ಯಾವುದಾದರೂ ದಂಧೆಯನ್ನೋ ದೊಡ್ಡ ಸಂಬಳ ಇರುವ ಉದ್ಯೋಗವನ್ನೋ ಹಿಡಿದುಕೊಳ್ಳಬೇಕು. ಅದು ಇಲ್ಲದಿದ್ದರೆ, ಸಾಹಿತಿಯಾಗಬಾರದು.

    **

    ಒಮ್ಮೆ ಒಂದು ವಿಶ್ವವಿದ್ಯಾಲಯ, ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ರಾಜ್ಯ ಸಾಹಿತ್ಯ ಅಕಾಡೆಮಿ ಇವುಗಳ ಸಹಯೋಗದಲ್ಲಿ ಒಂದು ವಿಚಾರ ಸಂಕಿರಣ ನಡೆಯುತ್ತಿತ್ತು. ಸಭೆಯಲ್ಲಿ ಸುಮಾರು ನೂರು ಮಂದಿ ಇದ್ದರು. ನಾನು ಎರಡನೇ ಸಾಲಿನಲ್ಲಿ ಕುಳಿತಿದ್ದೆ. ಬಿಡು ಸಮಯದಲ್ಲಿ, ಪಕ್ಕದ ಆಸನದಲ್ಲಿ ಕುಳಿತಿದ್ದ ಮಹಿಳೆ ನನ್ನೊಡನೆ, ನೀವು ಯಾವ ಕಾಲೇಜಿನಲ್ಲಿ ಲೆಕ್ಚರರು ಎಂದು ಕೇಳಿದರು. ನಾನು ಯಾವ ಕಾಲೇಜಿನಲ್ಲಿಯೂ ಲೆಕ್ಚರರು ಅಲ್ಲ ನಾನೆಂದೆ ಮತ್ತೆ ಹೇಗೆ ಬಂದಿರಿ? ಆಕೆಯ ಪ್ರಶ್ನೆ. ಹೀಗೆ ಬಂದೆ ಎಂದೆ. ಓ, ಹೀಗೆ ಬಂದಿರಾ? ಎಂದು ಆಕೆ ನನ್ನ ಮೇಲಿನ ಆಸಕ್ತಿಯನ್ನು ತಟ್ಟನೆ ಕಳೆದುಕೊಂಡರು. ಬೇಡಬೇಡವೆಂದರೂ ನನಗೆ ಆಕೆಯ ಬಗ್ಗೆ ಕುತೂಹಲ ಮೂಡಿತು. ನೀವು? ನಾನು ಕೇಳಿದೆ. ನಾನು.... ಕಾಲೇಜಿನಲ್ಲಿ ಪ್ರನ್ಸಿಪಾಲ್ ಎಂದರು. ಆಮೇಲೆ ತಿಳಿಯಿತು, ಆಕೆ ಲೇಖಕಿಯಲ್ಲ, ಆಕೆಯ ಪತಿ ಲೇಖಕ ಎಂದು. ನಾನು ಒಬ್ಬ ಲೇಖಕ ಎಂಬುದನ್ನು ಆಕೆಗೆ ತಿಳಿಸಬೇಕಾದ್ದು ಮುಖ್ಯವಲ್ಲವೆನಿಸಿ ಸುಮ್ಮನಿದ್ದುಬಿಟ್ಟೆ.

    ವಿಶ್ವವಿದ್ಯಾಲಯಗಳ ಬಾಗಿಲುಗಳನ್ನು ತೆರೆದಿರಿಸಬೇಕ, ಎಲ್ಲರೂ ಅಲ್ಲಿ ಇಂದು ಜ್ಞಾನಾರ್ಜನೆ ಮಾಡಲು ಮುಕ್ತ ಅವಕಾಶವಿರಬೇಕು ಎಂಬ ಮಾತನ್ನು ಕೇಳುತ್ತೇವೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಐವತ್ತು-ಅರವತ್ತು ವರ್ಷ ವಯಸ್ಸಿನವರು ಕೂಡ ಜ್ಞಾನಾರ್ಜನೆಗೆ ವಿಶ್ವವಿದ್ಯಾಲಯಕ್ಕೆ ಹೋಗಿ ತರಗತಿಗಳಲ್ಲಿ ಕುಳಿತುಕೊಳ್ಳುತ್ತಾರೆ. ನಮ್ಮ ಕಾಲೇಜುಗಳೆಂದರೆ ಹದಿಹರೆಯದ ಹುಡುಗ ಹುಡುಗಿಯರ ದೊಡ್ಡಿಗಳೆಂದೇ ಬಹಳ ಮಂದಿಯ ಭಾವನೆ. ಅದಂತಿರಲಿ, ಸಭೆಯಲ್ಲಿ ಬಂದು ಕುಳಿತುಕೊಳ್ಳಲು ಉಪನ್ಯಾಸಕನಾಗಿರಬೇಕು ಎಂಬ ಭಾವನೆ ತುಂಬಾ ಸೋಜಿಗದ್ದು. ಸಾಹಿತಿ ಅಂದರೆ ಲೆಕ್ಚರರ್ ಅಂತ ಅರ್ಥ. ಅದೂ ಒಂದು ರೀತಿಯ ಕ್ಲಾಸ್ ರೂಮ್ ವ್ಯವಹಾರವೆಂದೇ ಅರ್ಥ. ನಿಜವಾದ ಸಾಹಿತಿ ಅಂದರೆ ಅಕಾಡಮಿಕ್ ಸಾಹಿತಿ. ಅ.ನ.ಕೃ, ನಿರಂಜನ, ತ.ರಾ.ಸು., ಮಾಪನಕ್ಕೆ ಈಡಾಗುತ್ತಾರೆ ಎಂಬುದು ಕುತೂಹಲದ ಸಂಗತಿ.

    **

    ಇತ್ತೀಚೆಗೆ ಕೆಲವು ವರ್ಷಗಳಲ್ಲಿ ಕನ್ನಡ ಭಾಷೆಯ 'ಆದರೆ' ಮತ್ತು 'ಆದುದರಿಂದ' ಎಂಬ ಎರಡು ಶಬ್ದಗಳು ಬಹುತೇಕ ಅದೃಶ್ಯವಾದ ಹಾಗೆ ತೋರುತ್ತದೆ. ದೂರದರ್ಶನ, ಆಕಾಶವಾಣಿಯಲ್ಲಿ ಮಾತಾಡುವವರ ಬಾಯಲ್ಲಿ ಈ ಪದಗಳ ಬದಲು 'ಬಟ್' ಮತ್ತು 'ಸೊ!' ವಿಚಾರ ಸಂಕಿರಣಗಳಲ್ಲಿ ಸಾಹಿತಿಗಳ ಬಾಯಲ್ಲೂ ಬಟ್-ಸೊ ಹಾವಳಿ. ತಾಯಿ ತಂದೆ ಗಂಡ ಹೆಂಡತಿ ಇಂಗ್ಲೀಷಿಗೆ ಆಹುತಿಯಾಗಿ ಎಷ್ಟೋ ಕಾಲವಾಯಿತು. ಈಗ ಚಿಲ್ಲರೆ ಶಬ್ದಗಳು ಕೂಡ ಸಾಯತೊಡಗಿವೆ. 'ಈ ಯೋಜನೆಗೆ ಹಣ ಮಂಜೂರಾಗಿಲ್ಲ' ಎಂಬ ವಾಕ್ಯ ಕನ್ನಡವೆ, 'ಈ ಪ್ರಾಜೆಕ್ಟಿಗೆ ಅಮೌಂಟ್ ಸ್ಯಾಂಕ್ಷನ್ ಆಗಿಲ್ಲ' ಎಂಬ ವಾಕ್ಯ ಕನ್ನಡವೆ? ಯಾರನ್ನು ಕೇಳುವುದು ಡಾ|| ಚಿದಾನಂದ ಮೂರ್ತಿಯವರೊಡನೆ ಕೇಳಬೇಕು. ಕನ್ನಡ ಉಳಿಯುತ್ತದೊ ಅಳಿಯುತ್ತದೊ ಪಾಟೀಲ ಪುಟ್ಟಪ್ಪನವರಿಗೆ ಗೊತ್ತು, ಆದರೆ ಉಳಿಯುವ ಕನ್ನಡವಾದರೂ ಕನ್ನಡವಾಗಿರಲಿ ಎಂದುಕೊಳ್ಳಬೇಕಾಗಿದೆ.

    **

    'ಕನ್ನಡ ಪುಸ್ತಕಗಳಿಗೆ ಈಗ ವಿಪರೀತ ಬೆಲೆ' ಎಂಬುದು ಈಗ ಸಾಮಾನ್ಯವಾಗಿ ಕೇಳಿ ಬರುತ್ತಿರುವ ಮಾತು. ಅದೇ ಗಾತ್ರದ ಇಂಗ್ಲೀಷ್ ಪುಸ್ತಕಗಳಿಗೆ ಅದರ ಎರಡು ಪಟ್ಟು ಮೂರು ಪಟ್ಟು ಬೆಲೆಯಿದೆ. ಅದು 'ಇಂಗ್ಲೀಷ್' ಆದ್ದರಿಂದ ಅದು ಅದಕ್ಕೆ ಸರಿಯಾದ ಬೆಲೆ ಎಂದು ತಿಳಿಯಬೇಕೋ ಏನೊ! ಆಮದುಗೊಂಡ ಪುಸ್ತಕಗಳ ಬೆಲೆಯಂತೂ ಅದೇ ಗಾತ್ರದ ಕನ್ನಡ ಪುಸ್ತಕದ ಬೆಲೆಯ ನಾಲ್ಕೈದು ಪಟ್ಟು ಇರುತ್ತದೆ.

    ಈಗಿನ ಪರಿಸ್ಥಿತಿಯಲ್ಲಿ, ಒಂದು ಪುಸ್ತಕದ ಮುಖ ಬೆಲೆಯ ಎಷ್ಟೆಷ್ಟು ಪಾಲು ಯಾರ್ಯಾರಿಗೆ ಸಲ್ಲುತ್ತದೆ ಎಂದು ಒಂದು ಲೆಖ್ಖ ಕೊಡುತ್ತೇನೆ. 30% ಉತ್ಪಾದನಾ ವೆಚ್ಚ (ಕಾಗದ, ಕಂಪೋಸಿಂಗ್, ಪ್ರಿಂಟಿಂಗ್, ರಕ್ಷಾಪುಟದ ಕಲೆ ಮತ್ತು ಮುದ್ರಣ ಮತ್ತು ಬೈಂಡಿಂಗ್); ರಖಂ ವ್ಯಾಪಾರಿಯ ಕಮೀಷನ್ 50%; ಲೇಖಕನ ಗೌರವಧನ 12%; ಪಕ್ರಕಾಶಕನಿಗೆ ಸಿಗುವುದು 8%.

    ಹೀಗಾದರೆ, ಪ್ರಕಾಶಕ ಯಾಕೆ ಪುಸ್ತಕವನ್ನು ಮುದ್ರಿಸಬೇಕು? ಉದಾಹರಣೆಗೆ, 15 ಸಾವಿರ ರೂ. ಖರ್ಚು ಮಾಡಿ ಒಂದು ಸಾವಿರ ಪ್ರತಿ ಪ್ರಕಟಿಸಿದರೆ, ಅದರ ಪ್ರತಿಗಳು ಒಂದು ವರ್ಷದಲ್ಲಿ ಮಾರಾಟವಾಗುತ್ತವೆ ಎಂದಿಟ್ಟುಕೊಂಡರೆ, ಪ್ರಕಾಶಕನಿಗೆ 4 ಸಾವಿರ ರೂಪಾಯಿ ಸಿಗುತ್ತದೆ. ಅಂದರೆ ಅವನು ಹಾಕಿದ ಬಂಡವಾಳಕ್ಕೆ ಸುಮಾರು 25% ಲಾಭ ಬರುತ್ತದೆ. ಪರವಾಗಿಲ್ಲ, ಎಂದಿಟ್ಟುಕೊಳ್ಳೋಣ. ಆದರೆ ಉತ್ತಾದನಾ ವೆಚ್ಚ ಕೆಲವು ಬಾರಿ ಪುಸ್ತಕದ ಬೆಲೆಯ 35% ಆಗುತ್ತೆ. ಸಾಹಾಣಿಕೆ ವೆಚ್ಚ ಬೇರೆ ಇದೆ. ಬ್ಯಾಂಕಿನಿಂದ ಸಾಲ ತೆಗೆದು ಬಂಡವಾಳ ಹೂಡಿದರೆ, ಅದರ ಬಡ್ಡಿಗೇ ಎಲ್ಲವೂ ಹೋಗುತ್ತದೆ.

    ಅಂತೂ, ಏನೇನೋ ಹೊಮದಾಣಿಕೆಗಳನ್ನು ಮಾಡಿ ಪ್ರಕಾಶಕ 30% ಲಾಭ ಬರುವಂತೆ ನೋಡಿಕೊಳ್ಳುತ್ತಾನೆ ಎಂದಿಟ್ಟುಕೊಂಡರೆ, ಅದರ ಮೇಲೆಯೇ ಜೀವನ ನಿರ್ವಹಣೆ ಮಾಡಬೇಕಾದರೆ ಒಂದು ವರ್ಷದಲ್ಲಿ ಹತ್ತು ಪುಸ್ತಕಗಳನ್ನು ಮುದ್ರಿಸಿ ಮಾರಾಟ ಮಾಡಬೇಕಾಗುತ್ತದೆ. ಇದು ಸಾಧ್ಯವೆ?

    ಹಾಗಾದರೆ ಪ್ರಕಾಶನ ಕ್ಷೇತ್ರದಲ್ಲಿ ಗೆಲ್ಲುವ ವಸ್ತು ಯಾವುದು? ಗೆಲ್ಲುವ ವಸ್ತು ಸ್ವತಃ ಪುಸ್ತಕದಂಗಡಿಯನ್ನಿರಿಸಿಕೊಂಡಿರುವ ಪ್ರಕಾಶಕ. ಆಗ ಲೆಕ್ಕಾಚಾರ ಹೀಗಾಗುತ್ತದೆ. 30% ಉತ್ತಾದನಾ ವೆಚ್ಚ, ಲೇಖಕನ ಗೌರವಧನ 12%, ಪ್ರಕಾಶಕ ಮತ್ತು ಮಾರಾಟಗಾರನ ಪಾಲು 58%, ಅವನು ತನ್ನಲ್ಲಿರುವ ಪುಸ್ತಕಗಳಲ್ಲಿ ಭಾಗಶಃ 25% ನಿಂದ 40% ವರೆಗಿನ ಕಮೀಷನ್‍ಗಳಲ್ಲಿ ಬಿಡಿ ಪುಸ್ತಕ ವ್ಯಾಪಾರಿಗಳಿಗೆ ಕಳಿಸುತ್ತಾನೆ. ಭಾಗಶಃ 10% ರಿಂದ 20% ವರೆಗಿನ

    Enjoying the preview?
    Page 1 of 1